ವಿದ್ಯಾರ್ಥಿ
ಗೋಚರ
ವಿದ್ಯಾರ್ಥಿಯು ಮುಖ್ಯವಾಗಿ ಶಾಲೆ ಅಥವಾ ಇತರ ಶೈಕ್ಷಣಿಕ ಸಂಸ್ಥೆಯಲ್ಲಿ ದಾಖಲಾಗಿರುವ ವ್ಯಕ್ತಿ. ಇವನು ಒಬ್ಬ ಶಿಕ್ಷಕನ ಮಾರ್ಗದರ್ಶನದಲ್ಲಿ ಒಂದು ವಿಷಯದಲ್ಲಿ ಸೂಕ್ತ ಮಟ್ಟದ ಪರಿಣಿತಿಯನ್ನು ಹೊಂದಲು ಒಂದು ಪಾಠಸರಣಿಯಲ್ಲಿನ ತರಗತಿಗಳಿಗೆ ಹಾಜರಾಗುತ್ತಾನೆ.[೧] ಇವನು ತರಗತಿಯ ಹೊರಗೆ, ತರಗತಿಯ ತಯಾರಿಗೆ ಅಗತ್ಯವಿರುವ ಅಥವಾ ಆ ಪರಿಣಿತಿಯೆಡೆಗೆ ಪ್ರಗತಿಯ ಸಾಕ್ಷ್ಯವನ್ನು ಒಪ್ಪಿಸಲು, ಶಿಕ್ಷಕನು ನಿಗದಿಮಾಡುವ ಚಟುವಟಿಕೆಗಳಿಗೆ ಸಮಯವನ್ನು ಮೀಸಲಿಡುತ್ತಾನೆ. ವಿಶಾಲವಾದ ಅರ್ಥದಲ್ಲಿ, ವಿದ್ಯಾರ್ಥಿ ಎಂದರೆ ತನ್ನನ್ನು ಒಂದು ವಿಷಯದಲ್ಲಿ ಪರಿಣಿತಿ ಪಡೆಯಲು ಅಗತ್ಯವಾದ ಯಾವುದೇ ವಿಷಯದ ತೀವ್ರ ಬೌದ್ಧಿಕ ಏರ್ಪಾಟಿಗೆ ಸಮರ್ಪಿಸಿಕೊಳ್ಳುವ ಯಾರಾದರೂ ಆಗಿರಬಹುದು. ಇದು ಯಾವುದೋ ಕಾರ್ಯರೂಪದ ವ್ಯವಹಾರದ ಭಾಗವಾಗಿರುತ್ತದೆ ಮತ್ತು ಅಂತಹದರಲ್ಲಿ ಪರಿಣಿತಿಯು ಮೂಲಭೂತ ಅಥವಾ ನಿರ್ಣಾಯಕವಾಗಿರುತ್ತದೆ.