ಅಮೆಥಿಸ್ಟ್ (ಪದ್ಮರಾಗ)
Amethyst | |
---|---|
General | |
ವರ್ಗ | Mineral variety |
ರಾಸಾಯನಿಕ ಸೂತ್ರ | Silica (silicon dioxide, SiO2) |
Identification | |
ಬಣ್ಣ | Purple, violet |
ಸ್ಫಟಿಕ ಗುಣಲಕ್ಷಣ | 6-sided prism ending in 6-sided pyramid (typical) |
ಸ್ಫಟಿಕ ಪದ್ಧತಿ | rhombohedral class 32 |
ಅವಳಿ ಸಂಯೋಜನೆ | Dauphine law, Brazil law, and Japan law |
ಸೀಳು | None |
ಬಿರಿತ | Conchoidal |
ಮೋಸ್ ಮಾಪಕ ಗಡಸುತನ | 7–lower in impure varieties |
ಹೊಳಪು | Vitreous/glossy |
ಪುಡಿಗೆರೆ | White |
ಪಾರದರ್ಶಕತೆ | Transparent to translucent |
ವಿಶಿಷ್ಟ ಗುರುತ್ವ | 2.65 constant; variable in impure varieties |
ದ್ಯುತಿ ಗುಣಗಳು | Uniaxial (+) (Positive) |
ವಕ್ರೀಕರಣ ಸೂಚಿ | nω = 1.543–1.553 nε = 1.552–1.554 |
ದ್ವಿವಕ್ರೀಭವನ | +0.009 (B-G interval) |
ಬಹುವರ್ಣಕತೆ | None |
ಕರಗುವ ಬಿಂದು | 1650±75 °C |
ಕರಗುವಿಕೆ | H2O insoluble |
ಇತರ ಗುಣಲಕ್ಷಣಗಳು | Piezoelectric |
ಅಮೆಥಿಸ್ಟ್ (ಪದ್ಮರಾಗ) ಎನ್ನುವುದು ಆಭರಣಗಳಲ್ಲಿ ಸಾಮಾನ್ಯವಾಗಿ ಬಳಸಲಾಗುವ ವಯೊಲೆಟ್ ಮಾದರಿಯ ಕ್ವಾರ್ಟ್ಸ್. (ಪದ್ಮರಾಗ: ಕನ್ನೇರಿಳೆ ಬಣ್ಣದ ರತ್ನ; ಕ್ವಾರ್ಟ್ಸ್: ಷಡ್ಭುಜಕಾರದ ದೊಡ್ಡ ದೊಡ್ಡ ಹರಳುಗಳಾಗಿ ರೂಪಗೊಂಡ ಸ್ಫಟಿಕ ಶಿಲೆ). ಅಮೆಥಿಸ್ಟ್ ಎನ್ನುವ ಈ ಪದವನ್ನು ಪ್ರಾಚೀನ ಗ್ರೀಕ್ ಭಾಷೆಯ ἀ a- ("ರಹಿತ") ಮತ್ತು d μέθυστος ಮೆತುಸ್ಟೊಸ್ ("ಮೈಮರೆಸುವ/ಅಮಲೆರುವ") ಪದಗಳಿಂದ ಬಂದಿದೆ, ಇದು ರತ್ನವನ್ನು ಧರಿಸಿರುವವರನ್ನು ಅಮೇಲಿರುವುದರಿಂದ ಕಾಪಾಡುತ್ತದೆ, ಎನ್ನುವ ನಂಬಿಕೆಯೊಂದಿಗೆ ಸಂಬಂಧಹೊಂದಿದೆ; ಪ್ರಾಚೀನ ಗ್ರೀಕರು ಮತ್ತು ರೋಮನ್‌ರು ಅಮೆಥಿಸ್ಟ್ ಅಮೇಲಿರುವುದನ್ನು ತಡೆಗಟ್ಟುತ್ತದೆ, ಎನ್ನುವ ಕಾರಣದಿಂದ ಅಮೆಥಿಸ್ಟ್ ಧರಿಸುತ್ತಿದ್ದರು; ಅಲ್ಲದೇ ಕುಡಿಯುವ ಪಾತ್ರೆಗಳನ್ನು ಕೂಡ ಅದರಿಂದಲೇ ತಯಾರಿಸುತ್ತಿದ್ದರು.
ರಸಾಯನ ಶಾಸ್ತ್ರ
[ಬದಲಾಯಿಸಿ]ಅಮೆಥಿಸ್ಟ್ ಕ್ವಾರ್ಟ್ಸ್ ನ ವಯೊಲೆಟ್ ಮಾದರಿಯಾಗಿದ್ದು; ಇದರ ರಸಾಯಿನಕ ಸಂಯೋಜನೆ(ಫಾರ್ಮುಲಾ): SiO2. ಹತ್ತೊಂಬತ್ತನೇ ಶತಮಾನದಲ್ಲಿ, ಅಮೆಥಿಸ್ಟ್‌ನ ಬಣ್ಣಕ್ಕೆ ಅದರಲ್ಲಿರುವ ಮ್ಯಾಂಗನೀಸ್ ಕಾರಣ ಎನ್ನಲಾಗಿತ್ತು. ಅದರೆ, ಇದು ಶಾಖದಿಂದಾಗಿ ವ್ಯತ್ಯಾಸವಾಗುವ ಹಾಗು ವಿಸರ್ಜನೆಗೊಳ್ಳುವ ಗುಣಹೊಂದಿರುವ ಕಾರಣ, ಕೆಲವು ತಜ್ಞರು ಇದರ ಬಣ್ಣಕ್ಕೆ ಕಾರಣ ಕಾರ್ಬನಿಕ ಮೂಲದಾಗಿದ್ದಿರಬಹುದೆಂದು ಉಹಿಸಿದ್ದಾರೆ. ಇದಕ್ಕೆ ಫೆರಿಕ್ ಥಿಯೊಸೈಯನೈಟ್ ಅನ್ನು ಸೂಚಿಸಲಾಯಿತು; ಈ ಖನಿಜದಲ್ಲಿ ಸಲ್ಫರ್(ಗಂಧಕ) ಕೂಡ ಇದೆ ಎಂದು ಪತ್ತೆ ಮಾಡಲಾಯಿತು. ಇತ್ತೀಚಿನ ಸಂಶೋಧನೆಗಳು ಅಮೆಥಿಸ್ಟ್‌ನ ಬಣ್ಣಕ್ಕೆ ಕಾರಣ ಫೆರಿಕ್ ಐರನ್ ನ್ನಿನ ಇಂಪ್ಯೂರಿಟಿಗಳು(ಕಶ್ಮಲ) ಕಾರಣವೆಂದು ತೋರಿಸಿದೆ.[೧] ಇಷ್ಟಲ್ಲದೆ ಅಧ್ಯಯನಗಳು ಈ ಬಣ್ಣಕ್ಕೆ ಐರನ್ ಮತ್ತು ಅಲ್ಯೂಮಿನಿಯಮ್‌ನ ಜೊತೆಯಲ್ಲಿ ಆಗುವ ಸಂಕೀರ್ಣವಾದ ಇಂಟರ್‌ಪ್ಲೇ ಕೂಡ ಕಾರಣವೆಂದು ತೋರಿಸಿವೆ.[೨] ಶಾಖಕ್ಕೆ ಒಡ್ಡಿದಾಗ, ಅಮೆಥಿಸ್ಟ್ ಸಾಮಾನ್ಯವಾಗಿ ಹಳದಿ ಬಣ್ಣಕ್ಕೆ (ಯೆಲ್ಲೋ) ತಿರುಗುತ್ತದೆ. ಆಭರಣಗಳಲ್ಲಿ ಬಳಸಲಾಗುವ ಬಹಳಷ್ಟು ಸಿಟ್ರೈನ್, ಕ್ರೈನ್‌ಗಾರ್ಮ್ ಅಥವಾ ಯೆಲ್ಲೊ ಕ್ವಾರ್ಟ್ಸ್‌ಗಳು ಕೇವಲ "ಬರ್ನ್‌ಟ್ ಅಮೆಥಿಸ್ಟ್" (ಹುರಿದ/ಸುಟ್ಟ ಅಮೆಥಿಸ್ಟ್) ಎಂದು ಕರೆಯಲಾಗುತ್ತದೆ. ಹೊರಚಾಚುಕೊಂಡಿರುವ ಕಲ್ಲುಪದರದಲ್ಲಿರುವ (ಶಿಲಾ ಸ್ತರ/ಔಟ್‌ಕ್ರಾಪ್) ಅಮೆಥಿಸ್ಟ್ ಕ್ವಾರ್ಟ್ಸ್ ತನ್ನ ಬಣ್ಣವನ್ನು ಕಳೆದುಕೊಳ್ಳುವ ಸಾಧ್ಯತೆ ಜಾಸ್ತಿಯಿದೆ[ಸೂಕ್ತ ಉಲ್ಲೇಖನ ಬೇಕು]. ಕೃತಕ ಅಮೆಥಿಸ್ಟ್‌ಗಳನ್ನು ಶ್ರೇಷ್ಟ ಗುಣಮಟ್ಟದ ಅಮೆಥಿಸ್ಟ್‌ಗಳನ್ನು ಅನುಕರಿಸುವ ಮಾದರಿಯಲ್ಲಿಯೇ ತಯಾರಿಸಲಾಗುತ್ತದೆ. ಇದರ ರಸಾಯಿನಕ ಮತ್ತು ಭೌತಿಕ ಗುಣಗಳು ಸಹಜವಾಗಿ ಸಿಗುವ ಅಮೆಥಿಸ್ಟ್‌ಗಳ ಮಾದರಿಯಲ್ಲಿಯೇ ಇರುತ್ತವೆ. ಅಲ್ಲದೇ ಇದನ್ನು ರತ್ನಗಳನ್ನು ಪರೀಕ್ಷಿಸುವ ಅಧುನಿಕ ವಿಧಾನಗಳಾದ ಜೆಮೊಲಾಜಿಕಲ್ ಟೆಸ್ಟ್‌ಗಳ (ಇದರ ವೆಚ್ಚವು ಬಹಳ ದುಬಾರಿ.) ಮೂಲಕ ಮಾತ್ರ ನಿರ್ದಿಷ್ಟವಾಗಿ ಪತ್ತೆಮಾಡಬಹುದಾಗಿದೆ. "ಬ್ರೆಜಿಲ್ ಲಾ ಟ್ವಿನ್ನಿಂಗ್" ಎನ್ನುವ ವಿಧಾನವನ್ನು ಆಧರಿಸಿ ಒಂದು ಪರೀಕ್ಷಾ ಕ್ರಮವಿದೆ. (ಕ್ವಾರ್ಟ್ಸ್ ಟ್ವೈನ್ನಿಂಗ್ ಎನ್ನುವ ಸುರಳಿ ಸುತ್ತಿಕೊಳ್ಳುವ ವಿಧಾನ, ಇಲ್ಲಿ ಕ್ವಾರ್ಟ್ಸ್‌ನ ಅನೇಕ ಚಿಕ್ಕ ಹರಳುಗಳು ಬಲಕ್ಕೆ ಹಾಗು ಎಡಕ್ಕೆ ಸುತ್ತಿಕೊಂಡು ಏಕ ಹರಳಾಗಿ ರೂಪಗೊಳ್ಳುತ್ತವೆ.[೩]) ಇದನ್ನು ಬಳಸಿ ಕೃತಕ ಅಮೆಥಿಸ್ಟ್‌ಗಳನ್ನು ಬಹಳ ಸುಲಭವಾಗಿ ಪತ್ತೆ ಮಾಡಬಹುದಾಗಿದೆ.
ತಾರ್ಕಿಕವಾಗಿ ಇದನ್ನು ಕೃತಕವಾಗಿ ತಯಾರಿಸಲು ಸಾಧ್ಯವಿದ್ದರೂ ಕೂಡ ಇದರ ವಿಧಗಳು ಮಾರುಕಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಗುವುದಿಲ್ಲ.[೪]
ಸಂಯೋಜನೆ/ಪ್ರಬಂಧ
[ಬದಲಾಯಿಸಿ]ಅಮೆಥಿಸ್ಟ್ ಬಲಕ್ಕೆ-ತಿರುಗಿದ ಮತ್ತು ಎಡಕ್ಕೆ-ತಿರುಗಿದ ಕ್ವಾರ್ಟ್ಸ್‌ನ ಒಂದರ ನಂತರ ಇನ್ನೊಂದರ ಮಡಿಕೆಗಳ (ಲಮೆಲೀ) ರೀತಿಯ ಅನಿಯಮಿತವಾದ ರಚನೆಯಾಗಿದೆ. ಅನೇಕ ಕ್ರಿಯೆಗಳಿಂದಾಗಿ ಉಂಟಾಗುವ ಒತ್ತಡದ (ಮೆಕಾನಿಕಲ್ ಸ್ಟ್ರೆಸ್) ಕಾರಣದಿಂದಾಗಿ ಈ ರಚನೆಯುಂಟಾಗುತ್ತದೆ ಎಂದು ತೋರಿಸಲಾಗಿದೆ. ಅಮೆಥಿಸ್ಟ್ ಮೊಹ್ಸ್ ಸ್ಕೇಲ್ ನಲ್ಲಿ ಏಳರ ಪರಿಮಾಣದ ದೃಢತೆಯನ್ನು ಹೊಂದಿದೆ, ಹೀಗಾಗಿ ಇದನ್ನು ಆಭರಣಗಳಲ್ಲಿ ಬಳಸಬಹುದಾಗಿದೆ.
ಬಣ್ಣ ಮತ್ತು ಛಾಯೆ
[ಬದಲಾಯಿಸಿ]ಅಮೆಥಿಸ್ಟ್ ಸಾಮಾನ್ಯವಾಗಿ ತಿಳಿ ನಸುಕೆಂಪಿನ (ಪಿಂಕಿಶ್) ವಯೊಲೆಟ್‌ನಿಂದ ಹಿಡಿದು ಕನ್ನೇರಿಳೆ ಬಣ್ಣಗಳಲ್ಲಿ ಸಿಗುತ್ತದೆ. ಅಮೆಥಿಸ್ಟ್ ಕೆಲವೊಮ್ಮೆ ಕೆಂಪು ಅಥವಾ ನೀಲಿಯನ್ನು, ಒಂದು ಅಥವಾ ಎರಡನ್ನೂ ಅಪ್ರಧಾನವಾದ ಬಣ್ಣಗಳ ಛಾಯೆಯನ್ನು ಪ್ರದರ್ಶಿಸಬಹುದು. ಉತ್ಕೃಷ್ಟ ಶ್ರೇಣಿ ಮಾದರಿಯನ್ನು "ಡೀಪ್ ಸೈಬೇರಿಯನ್" ಎಂದು ಕರೆಯಲಾಗುತ್ತದೆ; ಇದರಲ್ಲಿ ಪ್ರಮುಖ ಬಣ್ಣವಾಗಿ ನೇರಿಳೆ ಬಣ್ಣವು ಶೇ. 75 ರಿಂದ 80 ಪ್ರಮಾಣ, ನೀಲಿ ಶೇ 15 ರಿಂದ 20 ರಷ್ಟು ಪ್ರಮಾಣವಿದ್ದು ಮತ್ತು (ಬೆಳಕಿನ ಮೂಲದ ಮೇಲೆ ಅವಲಂಬಿತವಾಗಿರುತ್ತದೆ) ಅಪ್ರಧಾನವಾಗಿ ಕೆಂಪು ಬಣ್ಣದ ಛಾಯೆಯನ್ನು ಹೊಂದಿರುತ್ತದೆ.[೪] ಹಸಿರು ಕ್ವಾರ್ಟ್ಸ್ ಅನ್ನು ಕೆಲವೊಮ್ಮೆ ಹಸಿರು ಅಮೆಥಿಸ್ಟ್ (ಗ್ರೀನ್ ಅಮೆಥಿಸ್ಟ್) ಎಂದು ಕರೆಯಲಾಗುತ್ತದೆ. ಹಸಿರು ಕ್ವಾರ್ಟ್ಸ್‌ನ ಇತರ ಹೆಸರುಗಳು: ಪ್ರಸಿಒಲೈಟ್, ವೆರ್ಮರಿನ್ ಅಥವಾ ಲೈಮ್ ಸಿಟ್ರೈನ್.
-
ಕತ್ತರಿಸಿ ಬೇರ್ಪಡಿಸಿದ ಅಮೆಥಿಸ್ಟ್‌ನ(ಪದ್ಮ ರಾಗದ) ಒಂದು ಪಾರ್ಶ್ವ
-
ಅಮೆಥಿಸ್ಟ್ ಜಿಯೋಡ್ನ ಒಳಭಾಗ
-
ಕತ್ತರಿಸಿ ಬೇರ್ಪಡಿಸಿದ ಭಾಗದ ಪಚ್ಚೆ/ಹಸಿರು ಅಮೆಥಿಸ್ಟ್‌ನ ಒಂದು ಪಾರ್ಶ್ವ
ಇತಿಹಾಸ
[ಬದಲಾಯಿಸಿ]ಅಮೆಥಿಸ್ಟ್ ಅನ್ನು ರತ್ನವನ್ನಾಗಿ ಪ್ರಾಚೀನ ಈಜಿಪ್ಟಿನವರು (ಇಜಿಪ್‌ಷನ್) ಬಳಸುತ್ತಿದ್ದರು. ಇದನ್ನು ಹಿಂದಿನ ಕಾಲದಲ್ಲಿ ರತ್ನಗಳನ್ನು ಕೊರೆದು ಚಿತ್ರಗಳನ್ನು ಕೆತ್ತಲು ಹೆಚ್ಚಾಗಿ ಬಳಸುತ್ತಿದ್ದರು.[೫] ಗ್ರೀಕರು ಅಮೆಥಿಸ್ಟ್ ರತ್ನಗಳು ಅಮಲೇರುವುದನ್ನು ತಡೆಯುತ್ತದೆ ಎಂದು ನಂಬಿದ್ದರು.[೬] ಆದರೆ, ಮಧ್ಯಯುಗಕ್ಕೆ ಸೇರಿದ ಯೂರೋಪಿನ ಸೈನಿಕರು ಅಮೆಥಿಸ್ಟ್‌ನ ಅಮುಲೆಟ್‌ಗಳನ್ನು(ತಾಯಿತ) ಯುದ್ಧಗಳಲ್ಲಿ ರಕ್ಷಣೆಗಾಗಿ ಬಳಸುತ್ತಿದ್ದರು. ಇದಕ್ಕೆ ಕಾರಣ ಅಮೆಥಿಸ್ಟ್ ಮನುಷ್ಯರ ಕಾಯಿಲೆಗಳ ಗುಣಪಡಿಸುತ್ತದೆ. ಅಲ್ಲದೇ ಅವರನ್ನು ಸಮಾಧಾನ ಚಿತ್ತರನ್ನಾಗಿಸುತ್ತದೆ ಎನ್ನುವ ನಂಬಿಕೆಯಿದೆ. [ಸೂಕ್ತ ಉಲ್ಲೇಖನ ಬೇಕು] ಇಂಗ್ಲೆಂಡಿನ ಅಂಗ್ಲೋ-ಸಾಕ್ಸನ್ ಸಮಾಧಿಗಳಲ್ಲಿ ಅಮೆಥಿಸ್ಟ್‌ನ ಮಣಿಗಳು ಸಿಕ್ಕಿವೆ.[ಸೂಕ್ತ ಉಲ್ಲೇಖನ ಬೇಕು] ದಕ್ಷಿಣ ಬ್ರೆಜಿಲ್‌ನ ಸಾಂಟಾ ಕ್ರಸ್ ಬಳಿಯಲ್ಲಿ ಸಿಕ್ಕ ಭಾರೀ ಜಿಯೋಡು ಅಥವಾ "ಅಮೆಥಿಸ್ಟ್ ಗ್ರೊಟ್ಟೊ" ಅನ್ನು ಡಸಲ್‌ಡಾರ್ಫ್, ಜರ್ಮನಿ ಯಲ್ಲಿ (ಅಪರೂಪದ ಹರಳು)1902ರಲ್ಲಿ ನಡೆದ ಪ್ರದರ್ಶನದಲ್ಲಿ ಪ್ರದರ್ಶಿಸಲಾಯಿತು. ಅಮೆಥಿಸ್ಟ್ ಫೆಬ್ರವರಿ ತಿಂಗಳಿನ ಸಂಪ್ರದಾಯಿಕವಾದ ಬರ್ತ್‌ಸ್ಟೋನ್.
ಪುರಾಣ/ಮೈಥಾಲಜಿ
[ಬದಲಾಯಿಸಿ]ಗ್ರೀಕ್ ಭಾಷೆಯ "ಅಮೆಥಿಸ್ಟೊಸ್" ಎನ್ನುವ ಪದವನ್ನು "ಅಮಲೇರದ" ಎಂದು ಅನುವಾದಿಸಬಹುದು; ಈ ಪದವನ್ನು ಗ್ರೀಕ್ ಭಾಷೆಯ a- , ರಹಿತ + ಮೆತುಸ್ಟೊಸ್ , ಅಮಲು ಎನ್ನುವ ಪದದಿಂದ ಪಡೆಯಲಾಗಿದೆ.[೭] ಅಮೆಥಿಸ್ಟ್ ಅಮಲೇರುವುದನ್ನು ತಡೆಯುವ ಪ್ರಮುಖವಾದ ಪ್ರತಿರೋಧಕವೆಂದು ಪರಿಗಣಿಸಲಾಗುತ್ತಿತ್ತು. ಹೀಗಾಗಿಯೇ ಮದ್ಯದ ಬಟ್ಟಲುಗಳನ್ನು ಇದರಿಂದ ತಯಾರಿಸಲಾಗುತ್ತಿತ್ತು. ಗ್ರೀಕ್ ಪುರಾಣಗಳ ಪ್ರಕಾರ, ಪರವಶತೆ(ಅಮಲಿನ) ಮತ್ತು ಮದ್ಯದ ದೇವತೆಯಾದ ಡಯೊನೈಸಸ್, ಅಮೆಥಿಸ್ಟೊಸ್ ಎನ್ನುವ ಕನ್ಯೆಯನ್ನು ಓಲೈಸಿಕೊಳ್ಳಲು ಪ್ರಯತ್ನಿಸಿದ, ಆದರೆ ಆಕೆ ಇವನ ಒಲೈಕೆಗಳನ್ನು ತಿರಸ್ಕಿರಿಸದಳು. ಅಮೆಥಿಸ್ಟೊಸ್ ದೇವರಲ್ಲಿ ತಾನು ಪರಿಶುದ್ಧವಾಗಿರಬೇಕೆಂಬ ಪ್ರಾರ್ಥನೆಯನ್ನು ಸಲ್ಲಿಸಿದಳು; ಇದಕ್ಕೆ ಅರ್ಟೆಮಿಸ್ ಎನ್ನುವ ದೇವತೆ ಸ್ಪಂದಿಸಿ ಅಮೆಥಿಸ್ಟೊಸ್ ಅನ್ನು ಬಿಳಿಯ ಕಲ್ಲಾನ್ನಾಗಿಸಿದರು. ಅಮೆಥಿಸ್ಟೊಸ್‌ಳ ಪರಿಶುದ್ಧವಾಗಿರಬೇಕೆಂಬ ಹಂಬಲದಿಂದ ವೀನಿತನಾದ (ಗರ್ವಭಂಗನಾದ) ಡಯೊನೈಸಸ್, ಆ ಕಲ್ಲಿನ ಮೇಲೆ ಮದ್ಯವನ್ನು ಅರ್ಪಸಿದ ಆಗ ಆ ಕಲ್ಲು ನೇರಿಳೆ ಬಣ್ಣಕ್ಕೆ ತಿರುಗಿದವು. ಈ ಕಥೆಗೆ ಅಲ್ಪಸ್ವಲ್ಪ ಬದಲಾವಣೆಗೊಂಡ ರೂಪಗಳು ಕೂಡ ಇದೆ, ಅವುಗಳಲ್ಲಿ ಡಯೊನೈಸಸ್(ದೇವತೆ) ಅನ್ನು ಒಬ್ಬ ಸಾಮಾನ್ಯ ಮನುಷ್ಯ ಅವಮಾನಿಸುತ್ತಾನೆ, ಆಗ ಅವನು ತನ್ನ ದಾರಿಯಲ್ಲಿ ಹಾದು ಹೋಗುವ ಮನುಷ್ಯನನ್ನು ಸಾಯಿಸುವುದಾಗಿ ಪ್ರತಿಜ್ಞೆ ಮಾಡುತ್ತಾನೆ; ಹಾಗು ಈ ಪ್ರತಿಜ್ಞೆಯನ್ನು ಉಳಿಸಿಕೊಳ್ಳುವ ಸಲುವಾಗಿ ಅವನು ಕ್ರೂರವಾದ ಹುಲಿಗಳನ್ನು ಸೃಷ್ಟಿಸುತ್ತಾನೆ. ಆತನ ಹಾದಿಯಲ್ಲಿ ಬಂದ ಸಾಧಾರಣ ಮನುಷ್ಯ- ಸುಂದರ ಯುವತಿ, ಅಮೆಥಿಸ್ಟೊಸ್ ಆಗಿರುತ್ತಾಳೆ. ಈಕೆಯಾದರೂ ಅರ್ಟೆಮಿಸ್‌ಗೆ ಗೌರವವನ್ನು ಅರ್ಪಿಸುವ ಸಲುವಾಗಿ ಹೋಗುತ್ತಿರುತ್ತಾಳೆ. ಅರ್ಟೆಮಿಸ್ ಈಕೆಗೆ ಜೀವದಾನ ನೀಡಿ, ಈ ಸುಂದರಿಯನ್ನು ಕ್ರೂರವಾದ ಉಗರುಗಳಿಂದ ರಕ್ಷಿಸುವ ಸಲುವಾಗಿ ಈಕೆಯನ್ನು ಶುಭ್ರವಾದ ಸ್ಫಟಿಕದಂತಹ ಕ್ವಾರ್ಟ್ಸ್‌ನ(ಕ್ರಿಸ್ಟಲೈನ್ ಕ್ವಾರ್ಟ್ಸ್) ಪ್ರತಿಮೆಯ ರೂಪಕ್ಕೆ ಮಾರ್ಪಾಡು ಮಾಡುತ್ತಾರೆ. ಸುಂದರವಾದ ಪ್ರತಿಮೆಯನ್ನು ಕಂಡ ಡಯೊನೈಸಸ್‌ಗೆ ತಾನು ಮಾಡಿದ್ದ ತಪ್ಪಿನ ಅರಿವಾಗಿ ತೀವ್ರ ಪಶ್ಚಾತ್ತಾಪ ಪಟ್ಟು ಕಣ್ಣಿರಿನ ಕೋಡಿ ಹರಿಸುತ್ತಾನೆ. ದೇವರ ಕಣ್ಣಿರು ಈ ರತ್ನಕ್ಕೆ (ಕ್ವಾರ್ಟ್ಸ್‌ಗೆ) ನೇರಿಳೆ ಬಣ್ಣವನ್ನು ಕೊಟ್ಟಿತ್ತು.[೮] ಇನ್ನೊಂದು ರೂಪದ ಪ್ರಕಾರ, ಟೈಟಾನ್ ರಹಿಯ ಡಯೊನೈಸಸ್‌ಗೆ ಅಮೆಥಿಸ್ಟ್ ರತ್ನವನ್ನು ಮದ್ಯಸಾರ ಕುಡಿಯುವವರ ಬುದ್ಧಿಸ್ವಾಸ್ಥ್ಯವನ್ನು ಉಳಿಸಿಕೊಳ್ಳವುದಕ್ಕಾಗಿ ಕೊಡುತ್ತಾನೆ.[೯] ಇದನ್ನು ಶಾಖಕ್ಕೆ ಒಡ್ಡಿದಾಗ ಇದು ಹಳದಿಗೆ ತಿರುಗುತ್ತದೆ.
ಭೌಗೋಳಿಕ ಹಂಚಿಕೆ
[ಬದಲಾಯಿಸಿ]ಅಮೆಥಿಸ್ಟ್ ಬ್ರೆಜಿಲ್ ನ ಮಿನಾಸ್ ಗೆರಾಯಿಸ್ ರಾಜ್ಯದಲ್ಲಿ ಸಮೃದ್ಧವಾಗಿದೆ; ಇಲ್ಲಿ ಇದು ವಾಲ್ಕ್ಯಾನಿಕ್ ರಾಕ್ ಗಳಲ್ಲಿ (ವಾಲ್ಕೇನೊಗಳಿಂದ(ಜ್ವಾಲಾಮುಖಿ) ಉಂಟಾದ ಕಲ್ಲುಗಳು) ದೊಡ್ಡ ಜಿಯೋಡ್‌ಗಳ ರೂಪದಲ್ಲಿ ಇದೆ. ಇದಲ್ಲದೆ ಇದನ್ನು ದಕ್ಷಿಣ ಕೋರಿಯ ದಲ್ಲಿರುವ ಗಣಿಗಳಲ್ಲಿ ಕೂಡ ತೆಗೆಯಲಾಗುತ್ತದೆ. ಭೂಮಿಯ ಮೇಲ್ಮೆಯಲ್ಲಿ ಸಿಗುವ ಅಮೆಥಿಸ್ಟ್‌ನ ಅತೀದೊಡ್ಡ ನಿಕ್ಷೇಪವು, ಲೋಯರ್ ಆಸ್ಟ್ರಿಯದ ಮೈಸಾವ್ ನಲ್ಲಿದೆ. ಬ್ರೆಜಿಲ್ ಮತ್ತು ಉರುಗ್ವೆಯಲ್ಲಿ ಸಿಗುವ ಅಗೇಟ್‌ಗಳಲ್ಲಿ ಒಳಗಡೆಯ ಪದರದಲ್ಲಿ ಅಮೆಥಿಸ್ಟ್ ಹರಳುಗಳು ಇರುತ್ತದೆ. ಅಪ್ಪಟವಾಗಿರುವ ಅಮೆಥಿಸ್ಟ್ ರಷ್ಯ ದಲ್ಲಿ ಸಿಗುತ್ತದೆ, ಅದರಲ್ಲೂ ವಿಶೇಷವಾಗಿ ಇಕಾಟೆರಿನಬರ್ಗ ಜಿಲ್ಲೆಯ ಮುರ್ಸಿಂಕದಲ್ಲಿ ಸಿಗುತ್ತದೆ, ಇಲ್ಲಿ ಇದು ಗ್ರಾನೈಟ್ ಕಲ್ಲುಗಳ ಹರಳುಹೆಪ್ಪುಗಟ್ಟಿರುವ ಗವಿಗಳಲ್ಲಿ ಸಿಗುತ್ತದೆ. ಭಾರತದ ಅನೇಕ ಪ್ರದೇಶಗಳಲ್ಲಿ ಅಮೆಥಿಸ್ಟ್ ಸಿಗುತ್ತದೆ. ಅಮೆಥಿಸ್ಟ್‌ನ ಅನ್ನು ಉತ್ಪಾದಿಸುವ ರಾಷ್ಟ್ರಗಳಲ್ಲಿ ಜಗತ್ತಿನಲ್ಲಿ ಉತ್ಪಾದಿಸುವ ರಾಷ್ಟ್ರಗಳಲ್ಲಿ ಜಾಂಬಿಯ ಪ್ರಮುಖವಾಗಿದೆ, ಇಲ್ಲಿ ಒಂದು ವರ್ಷಕ್ಕೆ ಸುಮಾರು 1,000 t ಅಷ್ಟು ಅಮೆಥಿಸ್ಟ್ ಅನ್ನು ಉತ್ಪಾದಿಸಲಾಗುತ್ತದೆ. ಅಮೆಥಿಸ್ಟ್ ಯುನೈಟೆಡ್ ಸ್ಟೇಟ್ಸ್ ನ ಅನೇಕ ಪ್ರದೇಶಗಳಲ್ಲಿ ಸಿಗುತ್ತದೆ. ಈ ಪ್ರದೇಶಗಳ ಪೈಕಿ ಹೆಸರಿಸಬಹುದಾದ ಕೆಲವು: ಗಿಲದ ಮಸಟಲ್ ಬೆಟ್ಟ ಪ್ರದೇಶ, ಮಾರಿಕೊಪ ಕೌಂಟಿಗಳು, ಅರಿಜೋನ, ಅಮೆಥಿಸ್ಟ್ ಬೆಟ್ಟ, ಟೆಕ್ಸಾಸ್, ಯೆಲ್ಲೊಸ್ಟೋನ್ ನಾಷಿನಲ್ ಪಾರ್ಕ್; ಡೆಲಾವೇರ್ ಕೌಂಟಿ, ಪೆನ್ನಸಿಲ್ವೇನಿಯ, ಹೇವುಡ್ ಕೌಂಟಿ, ನಾರ್ಥ್ ಕ್ಯಾರಿಲೋನ; ಡೀರ್ ಹಿಲ್ ಮತ್ತು ಸ್ಟೌ, ಮೈನ್ ಮತ್ತು ಲೇಕ್ ಸುಪಿರಿಯರ್ ಪ್ರದೇಶ. ಅಮೆಥಿಸ್ಟ್ ಒಂಟಾರಿಯೊ ಹಾಗು ನೋವಾ ಸ್ಕಾಟಿಯಾ ದ ಅನೇಕ ಪ್ರದೇಶದಲ್ಲಿ ಸರ್ವೆಸಾಧಾರಣವಾಗಿ ಸಿಗುತ್ತದೆ. ಅಮೆಥಿಸ್ಟ್ ಅತ್ಯಂತ ದೊಡ್ಡ ಗಣಿ (ಉತ್ತರ) ನಾರ್ಥ್ ಅಮೆರಿಕಾದಲ್ಲಿ ಥಂಡರ್ ಬೇ ಒಂಟಾರಿಯೋವಿನ್ನಲ್ಲಿ ಇದೆ.[೧೦]
ಮೌಲ್ಯ
[ಬದಲಾಯಿಸಿ]ಹದಿನೆಂಟನೇ ಶತಮಾನದವರೆಗೂ ಅಮೆಥಿಸ್ಟ್ ಅನ್ನು ಅನೇಕ ಬೆಲೆಬಾಲುವ ರತ್ನಗಳ[[[ಡೈಮಂಡ್(ವಜ್ರ)]], ಸ್ಯಾಫೈಯರ್(ನೀಲಿಮಣಿ), ರೂಬಿ(ಮಾಣಿಕ್ಯ) ಮತ್ತು ಎಲೆರಾಲ್ಡ್(ಪಚ್ಚೆ ಕಲ್ಲು)] ಜೊತೆಯಲ್ಲಿ ಸೇರಿಸಲಾಗುತ್ತಿತ್ತು. ಅದರೆ ಇದರ ನಿಕ್ಷೇಪಗಳು ಬ್ರೆಜಿಲ್ ಒಳಗೊಂಡಂತೆ ಅನೇಕ ಸ್ಥಳಗಳಲ್ಲಿ ಪತ್ತೆಯಾದ ಮೇಲೆ ಇದರ ಮೌಲ್ಯ ಸ್ವಲ್ಪ ಕಡಿಮೆಯಾಗಿದೆ. ಸಂಗ್ರಹಕಾರರು ಇದರ ಬಣ್ಣಗಳ ಛಾಯೆಗೆ ಹೆಚ್ಚು ಗಮನ ಕೊಡುತ್ತಾರೆ. ಸಂಪ್ರದಾಯಬದ್ಧವಾಗಿ ಇದನ್ನು ಕತ್ತರಿಸಿದರೆ ಕೆಂಪು ಬಣ್ಣದ ಛಾಯೆಯಿರುತ್ತದೆ.[೧೧] ಅಮೆಥಿಸ್ಟ್‌ನ ಅತಿ ಉತ್ತಮ ಶ್ರೇಣಿ; ("ಡೀಪ್ ರಷಿಯನ್" ಎಂದು ಕರೆಯಲಾಗುತ್ತದೆ.) ಇದು ಸಿಗುವುದು ಬಹಳ ಅಪರೂಪವಾಗಿದ್ದು ಇದರ ಮೌಲ್ಯವು ಅದು ಸಿಕ್ಕಾಗ ಸಂಗ್ರಹಕಾರರಿಂದ ಇರುವ ಬೇಡಿಕೆಯ ಮೇಲೆ ಅವಲಂಬಿತವಾಗಿದೆ. ಹೀಗಿದ್ದರೂ ಇದು, ಸ್ಯಾಪೈರ್(ನೀಲಿಮಣಿ) ಅಥವಾ ರೂಬಿಗಳ (ಮಾಣಿಕ್ಯ)(ಪದಪರದಶ ಸ್ಪಾಪೈರ್ ಅಥವಾ ಪಿಜನ್ ಬ್ಲಡ್ ರೂಬಿ) ಉತ್ತಮ ಶ್ರೇಣಿಗಿಂತ ಕಡಿಮೆಯಾಗಿರುತ್ತದೆ.[೪]
ಇವನ್ನೂ ನೋಡಿ
[ಬದಲಾಯಿಸಿ]ಟಿಪ್ಪಣಿಗಳು
[ಬದಲಾಯಿಸಿ]- ↑ ಕ್ಲೇನ್, ಕಾರ್ನೆಲಿಸ್ ಮತ್ತು ಹರ್ಲ್‌ಬುಟ್, ಕಾರ್ನಿಲಿಯಸ್ ಎಸ್., 1985 ಮಾನ್ಯುಯಲ್ ಆಫ್ ಮಿನರಾಲಜಿ (ಅಫ್ಟರ್ ಜೆಡಿ ಡಾನ) 20ನೇ ಅವೃತ್ತಿ, p. 441, ಜಾನ್ ವೈಲಿ & ಸನ್ಸ್, ನ್ಯೂ ಯಾರ್ಕ್
- ↑ ಕೊಹೆನ್, ಅಲ್ವಿನ್ ಜೆ., 1985, ಅಮೆಥಿಸ್ಟ್ ಕಲರ್ ಇನ್ ಕ್ವಾರ್ಟ್ಸ್, ದ ರಿಸಲ್ಟ್ ಆಫ್ ರೇಡಿಯೆಷನ್ ಪ್ರೊಟೆಕ್ಷನ್ ಇನ್ವಾಲ್ವಿಂಗ್ ಐರನ್', ಅಮೆರಿಕನ್ ಮಿನೆರಾಲಜಿಸ್ಟ್, V. 70, pp 1180-1185
- ↑ "Quartz Page Twinning Crystals". Retrieved 2007-05-28.
- ↑ ೪.೦ ೪.೧ ೪.೨ ಸೀಕ್ರೆಟ್ಸ್ ಆಫ್ ದ ಜೆಮ್ ಟ್ರೇಡ್; ದ ಕೊನೊಸಿಯರ್ ಗೈಡ್ ಟು ಪ್ರೆಶಿಯಸ್ ಜೆಮ್‌ಸ್ಟೋನ್ಸ್ ರಿಚರ್ಡ್ ಡಬ್ಲೂ ವೈಸ್, ಬ್ರನ್ಸ್‌ವಿಕ್ ಹೌಸ್ ಪ್ರೆಸ್, ಲೆನೆಕ್ಸಾ, ಮಾಸ್ಚುಟಸ್., 2003
- ↑ ಜೆಮ್ಸ್, ನೋಟ್ಸ್ ಅಂಡ್ ಎಕ್ಸ್‌ಟ್ರಾಕ್ಟ್ಸ್ ಅಗುಸ್ಟೊ ಕಸ್ಟೆಲನ್ನಿ (19ನೇ ಶತಮಾನದ ಜನಪ್ರಿಯ ಇಟಲಿಯ ಆಭರಣ ತಯಾರಕ), page 34, ಲಂಡನ್, ಬೆಲ್&ಡಾಲ್ಡಿ, 1871
- ↑ ಡೈಯಮಂಡ್ಸ್, ಪರ್ಲಸ್ ಅಂಡ್ ಪ್ರೆಷಿಯಸ್ ಸ್ಟೋನ್ಸ್ ಮಾರ್ಸೆಲ್ ಎನ್ ಸ್ಮಿತ್, ಗ್ರಿಫಿತ್ ಸ್ಟಿಲ್ಲಿಂಗ್ಸ್ ಪ್ರೆಸ್, ಬೋಸ್ಟನ್, Massachutes., 1913, page 74
- ↑ ದ ಅಮೆರಿಕನ್ ಹೆರಿಟೇಜ್ ಡಿಕ್ಷಿನರಿ
- ↑ http://gemstone.org/gem-by-gem/english/amethyst.html source
- ↑ (ನೊನಸ್, ಡಯೊನೈಸಿಯಕ, XII.380)
- ↑ ಅಮೆಥಿಸ್ಟ್ ಮೈನ್ http://amethystmine.com/history.html Archived 2010-06-18 ವೇಬ್ಯಾಕ್ ಮೆಷಿನ್ ನಲ್ಲಿ.
- ↑ CIBJO ನಿಯಮಗಳು (ಗೈಡ್ ಲೈನ್‌ಗಳು),
ಅಕರಗಳು
[ಬದಲಾಯಿಸಿ]- "Amethyst". part of a poster by the Juneau – John Rishel Mineral Information Center. Alaska office of the United States Bureau of Land Management. Archived from the original on 2007-03-14. Retrieved 2006-09-11.
- Ure, Andrew (1827). A Dictionary of Chemistry. Printed for Thomas Tegg, (et al.). p. 141. Retrieved 2006-09-11.
The amethyst is a gem of a violet colour, and great brilliancy, said to be as hard as the ruby or sapphire, from which it only differs in colour. This is called the oriental amethyst, and is very rare. When it inclines to the purple or rosy colour, it is more esteemed than when it is nearer to the blue. These amethysts have the same figure, hardness, specific gravity, and other qualities, as the best sapphires or rubies, and come from the same places, particularly from Persia, Arabia, Armenia and the West Indies. The occidental amethysts are merely coloured crystal or quartz.
ಬಾಹ್ಯಕೊಂಡಿಗಳು
[ಬದಲಾಯಿಸಿ]- ICA (Intern. Color(ವರ್ಣ) Stone.(ಕಲ್ಲು) Ass): ಜೆಮೊಲಾಜಿಕಲ್ ಇನ್ಫರ್ಮೆಷನ್ ಅಂಡ್ ಜೆನೆರಲ್ ಪೋಲ್ಕ್ಲೋರ್
- ಫಾರಲಾಂಗ್: ಕನ್ಸೂಮರ್ ಇನ್ಪರ್ಮೇಷನ್ (CIBJO) ಅಂಡ್ ಹಿಸ್ಟಾರಿಕಲ್ ರೆಫರೆನ್ಸೆಸ್ Archived 2010-04-18 ವೇಬ್ಯಾಕ್ ಮೆಷಿನ್ ನಲ್ಲಿ.
- Mindat: ಮಿನೆರಲಾಜಿಕಲ್ ಇನ್ಫರ್ಮೇಷನ್, ಕ್ರಿಸ್ಟಲ್ಲೊಗ್ರಾಫಿ ಅಂಡ್ ನಾಮನ್ಕ್ಲೇಚರ್
This article incorporates text from a publication now in the public domain: Chisholm, Hugh, ed. (1911). Encyclopædia Britannica (11th ed.). Cambridge University Press. {{cite encyclopedia}}
: Cite has empty unknown parameters: |separator=
and |HIDE_PARAMETER=
(help); Invalid |ref=harv
(help); Missing or empty |title=
(help)
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Pages using duplicate arguments in template calls
- Articles with hatnote templates targeting a nonexistent page
- Articles with unsourced statements from March 2007
- Articles with invalid date parameter in template
- Articles with unsourced statements from May 2010
- Articles with unsourced statements from June 2008
- Commons link is on Wikidata
- CS1 errors: empty unknown parameters
- CS1 errors: missing title
- CS1 errors: invalid parameter value
- Wikipedia articles incorporating a citation from the 1911 Encyclopaedia Britannica with no article parameter
- Wikipedia articles incorporating text from the 1911 Encyclopædia Britannica
- ಜೆಮ್ಸ್ಟೋನ್ (ರತ್ನಗಳು)
- ಕ್ವಾರ್ಟ್ಸ್ ಮಾದರಿಗಳು
- ಒಂಟಾರಿಯೊ ವಿನ ಪ್ರಾದೇಶಿಕ ಚಿನ್ಹೆಗಳು