ಸೃಷ್ಟಿ ಮತ್ತು ಮಹಾಭಾರತ
ಎಲ್ಲಾ ಪುರಾಣಗಳಿಗಿಂತಲೂ ಪ್ರಾಚೀನ ವೆಂದು ಪರಿಗಣಿಸಲ್ಪಟ್ಟ ಮಹಾ ಭಾರತದಲ್ಲಿ ಸೃಷ್ಟಿಯ ವಿವರ
[ಬದಲಾಯಿಸಿ]ಪೀಠಿಕೆ :
[ಬದಲಾಯಿಸಿ]- ಮಹಾಭಾರತದ ಈಗಿನ ಕಾವ್ಯವು ಸುಮಾರು ಕ್ರಿಪೂ 4000 ವರ್ಷಗಳ ಹಿಂದೆ ಬರಹರೂಪಕ್ಕೆ ಬಂದಿರಬೇಕೆಂದು ಇತಿಹಾಸಕಾರರು ತೀರ್ಮಾನಿಸಿದ್ದಾರೆ. ಮೂಲಮಹಾಭಾರತ ಪಾಠವು ಸುಮಾರು ಕ್ರಿ ಪೂ. ೮ /೯ ನೇ ಶತಮಾನದಲ್ಲಿ ರಚನೆಯಾಗಿರಬೇಕೆಂದು ಅಭಿಪ್ರಾಯ ಪಡುತ್ತಾರೆ. ಕ್ರಿಶ. ೩೦೦/೪೦೦ ರ ಗುಪ್ತರಕಾಲದಲ್ಲಿ ಈಗಿನ ತಿದ್ದಿದ ಗ್ರಂಥ ರಚನೆ ಯಾಗಿರಬಹುದೆಂಬುದು ಭಾಷಾತಜ್ಞರ ಅಭಿಪ್ರಾಯ. ಖಗೋಲ ವಿಜ್ಞಾನಿ ಆರ್ಯಭಟ್ಟರು (ಕ್ರಿ ಶ.೬ ನೇ ಶತಮಾನ) ಕಲಿಯುಗಾದಿಯನ್ನು ಕ್ರಿ.ಪೂ. ೩೧೦೨ ಫೆಬ್ರವರಿ ೧೮ ಎಂದು ನಿರ್ಧರಿಸಿದ್ದಾರೆ ಮಹಾಭಾರತಯುದ್ಧವು ಅದಕ್ಕಿಂತ ೫೦/೬೦ವರ್ಷಹಿಂದೆ ಆಗಿರಬೇಕು. ೨ನೇ ಪುಲಕೇಶಿಯ ಕಾಲದ ಐಹೊಳೆ ಶಾಸನದಲ್ಲಿ ಶಕ ೫೫೬= ಕಿಪೂ.೬೩೪ ಎಂದರೆ ಭಾರತ (ಕುರುಕ್ಷೇತ್ರ ಯುದ್ಧವು) ನಡೆದು ೩೭೩೫ ವರ್ಷಗಳಾದವೆಂದು ಹೇಳಿದೆ. ಖಗೋಲ ಶಾಸ್ರಜ್ಞರ ವೃದ್ಧ ವರ್ಗ, ವರಾಹಮಿಹಿರರು ಮತ್ತು ಹಿಂದಿನ ಇತಿಹಾಸ ಕಾರ ಕಲ್ಹಣ ರು ಆ ಯುದ್ಧವು ಕ್ರಿ ಪೂ ೨೪೪೯ ವರ್ಷದಲ್ಲಿ (೨೪೪೯+೨೦೧೨ = ೪೪೬೧ ವರ್ಷದ ಹಿಂದೆ) ಆಯಿತೆಂದು ಹೇಳುತ್ತಾರೆ. ಆದರೆ ಈಗಿನ ಇತಿಹಾಸ ಕಾರರು ಮಹಾಭಾರತ ಯುದ್ಧವು ಕ್ರಿ ಪೂ.೧೨ ನೇ ಶತಮಾನ ದಿಂದ ಕ್ರಿ ಪೂ. ೮ ನೇ ಶತಮಾನದ ನಡುವೆ ಕಬ್ಬಿಣ ಯುಗದ ಆರಂಭದಲ್ಲಿ ನಡೆದಿರಬೇಕೆಂದು ಅಭಿಪ್ರಾಯ ಪಡುತ್ತಾರೆ. (ವಿಕಿಪೀಡಿಯಾ ಇಂಗ್ಲಿಷ್- ಮಹಾಭಾರತ) ಹಿಂದೂ ಪಂಚಾಂಗಗಳ ಪ್ರಕಾರ ಕಲಿಯುಗ ಆರಂಭವಾಗಿ ೫೧೦೦ ವರ್ಷ ವಾಗಿದೆ
- ಪ್ರಸಿದ್ಧವಾದ ೧೮ ಪುರಾಣಗಳು ಮಹಾಭಾರತ ಕಾವ್ಯ ಅಥವಾ ಇತಿಹಾಸಕ್ಕಿಂತ ಈಚೆಗೆ ರಚನೆಯಾದದ್ದೆಂದು ಇತಿಹಾಸಕಾರರ ಅಭಿಪ್ರಾಯ.
ಕಾಲ ಗಣನೆ
[ಬದಲಾಯಿಸಿ]- ಕಾಲ ೧೯೭,೨೬,೪೯,೧೧೦ ವರ್ಷಗಳ ಹಿಂದೆ
- (೨೦೦೯ ಕ್ಕೆ) ೧ ನೇ ಸ್ವಾಯಂಭೂ ಮನುವಿನ ಕಾಲ ? ದೇವಗಣ ಸೃಷ್ಟಿ (ಮಹಾಭಾರತ ಆದಿಪರ್ವ ಅದ್ಯಾಯ ೬೫ ಶ್ಲೋಕ ೨೫೭೪/೧೦) ರಿಂದ)
- ಕಲ್ಪ ಆದಿ ಗತ:೧೯೭,೨೬,೪೯,೧೧೦ (ವರ್ಷಗಳ ಹಿಂದೆ)ಕಲಿ ಗತ ೫೧೧೦ವರ್ಷ (೨೦೦೯ಕ್ಕೆ) ಸೃಷ್ಟಿಯ ಆದಿ ಗತ:೧೯೫,೫೮,೮೫೨೧೦,; ವವಸ್ವತ ಮನು ಗತ : ೧,೮೬,೧೮,೮೫೦ (ಮೈಸೂರು ಪಂಚಾಂಗ ರೀತ್ಯಾ). ಇದು ಬ್ರಹ್ಮನ ದ್ವಿತೀಯ ಪರಾರ್ಧ (ಮಧ್ಯಾಹ್ನ ) ಶ್ವೇತ ವರಾಹ ಕಲ್ಪ ( ಅನೇಕ ಯುಗಗಳು ಮತ್ತು ಮನ್ವಂತರಗಳು) ಈಗ ವೈವಸ್ವತ ಮನ್ವಂತರ.
*ಧರ್ಮದ ಸುಧೀರ್ಗ ಕಾಲ ಗಣನೆ
[ಬದಲಾಯಿಸಿ]- ೩೦ ಅಲ್ಪ ಕಲ್ಪ = ೧ ತ್ರುಟಿ,
- ೩೦ ತ್ರುಟಿ, = ೧ಕಾಲ
- ೩೦ ಕಾಲ = ೧ಕಾಷ್ಠ
- ೩೦ ಕಾಷ್ಠ = ೧ನಿಮಿಷ (ಮಾತ್ರೆ)
- ೪ ನಿಮಿಷ = ೧ ಗಣಿತ
- ೧೦ ಗಣಿತ = ೧ ನೇತ್ರವಿರ್ಪು (೧ ನಿಟ್ಟುಸಿರು ಬಿಡುವ ಕಾಲ)
- ೬ ನೇತ್ರವಿರ್ಪು = ೧ ವಿನಾಳಿಕ
- ೬ ವಿನಾಳಿಕ = ೧ ಘಟಿಕಾ.
- ೬೦ ಘಟಿಕ = ೧ ಹಗಲು ಮತ್ತು ರಾತ್ರಿ
- ೧೫ಹಗಲು ಮತ್ತು ರಾತ್ರಿ =೧ ಪಕ್ಷ
- ೨ ಪಕ್ಷ = ೧ ಮಾಸ ( ೧ ಪಿತೃಗಳ ದಿನ )
- ೨ ಮಸ = ೧ ಋತು
- ೩ ಋತು ( ವಸಂತ , ಗ್ರೀಷ್ಮ, ವರ್ಷ / ಸರದ್, ಹೇಮಂತ , ಶಿಶಿರ) = ೧ ಅಯನ
- ೨ ಅಯನ (ಉತ್ತರಯನ , ದಕ್ಷಿಣಾಯನ) = ೧ ಸಂವತ್ಸರ/ ವರ್ಷ( ದೆವತೆಗಳ ೧ ದಿನ)
- ೩೬೦ ವರ್ಷ = ೧ದಿವ್ಯ್ದವರುಷ ( ದೆವತೆಗಳ ೧ ವರ್ಷ)
- ೪೩೨೦೦೦ (ಮನ್ಯುಷ್ಯ ವರ್ಷ) ವರ್ಷ (೧೨೦೦ ದಿವ್ಯ್ದವರುಷ ) = ೧ ಕಲಿಯುಗ
- ೨ ಕಲಿಯುಗ (೮,೬೪,೦೦೦ ಮನ್ಯುಷ್ಯ ವರ್ಷ)(೨೪೦೦ ದಿವ್ಯ್ದವರುಷ) = ೧ ದ್ವಾ ಪರಯುಗ.
- ೩ ಕಲಿಯುಗ (೧೨,೯೬,೦೦೦ ಮನ್ಯುಷ್ಯ ವರ್ಷ)(೩೬೦೦ ದಿವ್ಯ್ದವರುಷ) = ೧ ತ್ರೇತಾಯುಗ
- ೪ ಕಲಿಯುಗ (೧೭,೨೮,,೦೦೦ ಮನ್ಯುಷ್ಯ ವರ್ಷ)(೪೮೦೦ ದಿವ್ಯ್ದವರುಷ) = ೧ ಕೃತಯುಗ.
- ೧ ಚತುಯುಗ =(೧ ಕಲಿಯುಗ +೧ ದ್ವಾ ಪರಯುಗ.+ ೧ ತ್ರೇತಾಯುಗ + ೧ ಕೃತಯುಗ.) (೧೨,೦೦೦ ದಿವ್ಯ್ದವರುಷ ) ೪೩,೨೦,೦೦೦ಮನ್ಯುಷ್ಯ ವರ್ಷ
- ೭೧ ಚತುಯುಗ = ೧ ಮನ್ವಂತರ
- ೧೪ ಮನ್ವಂತರಗಳು = ಬ್ರಹ್ಮನ ೧ ದಿನ ( ಹಗಲು ೭, ರಾತ್ರಿ ೭,)
- ನಮ್ಮ ಬ್ರಹ್ಮನಿಗೆ ೫೧ ಕಲ್ಪವಾದ ಶ್ವೇತವರಾಹ ಕಲ್ಪ ೭ನೇ ಮನ್ವಂತರವಾದ ವೈವಸ್ವತಮನ್ವಂತರ ೨೮ನೇ ಕಲಿಯುಗ ಕಲಿಯ ಪ್ರಥಮ ಚರಣ ೫೧೧೩ (೨೦೧೩ ನೇ ಇಸವಿಯ ಎಪ್ರಿಲ್ ೧೧ಕ್ಕೆ)
- ಮನು ಪುರುಷರ ಅವದಿ ಸೃಷ್ಟಿ ದಿನದಿಂದ ಕ್ರಿ.ಶಕ ೨೦೦೬ವರೆಗೆ
- ಶ್ವೇತ ವರಾಹ ಕಲ್ಪ ಪ್ರಾರಂಭ - ೧,೯೭,೨೯,೪೯,೧೦೮ ಇಲ್ಲಿಂದ ೧,೭೦,೬೪,೦೦೦ ನಂತರ ಜೀವಿಗಳ ಸಂತತಿ ಆರಂಭ
- ೧,೯೫,೫೮,೮೫,೧೦೮ನೇ ವರ್ಷ ದಿಂದ ಸ್ವಾಯಂಭುವ ಮನುವಿನ ಅವದಿ ಆರಂಭ (೩೦,೬೭,೨೦,೦೦೦ವರ್ಷ ಇದರಲ್ಲಿ ೧೭,೨೮,೦೦೦ =೧ ಕೃತಯುಗ ಸೇರಿಸಿಲ್ಲ.)
- ೧,೬೬,೨೭,೭೩,೧೦೮ ನೇ ವರ್ಷ ದಿಂದ ಸ್ವಾರೋಚಿಷ ಮನುವಿನ ಅವದಿ ಆರಂಭ (೩೦,೮೪,೪೮,೦೦೦ವರ್ಷ)
- ೧,೩೫,೪೩,೨೫,೧೦೮ ನೇ ವರ್ಷ ದಿಂದ ಉತ್ತಮ ಮನುವಿನ ಅವದಿ ಆರಂಭ (೩೦,೮೪,೪೮,೦೦೦ವರ್ಷ)
- ೧,೦೪,೫೮,೭೭,೧೦೮ ನೇ ವರ್ಷ ದಿಂದ ತಾಮಸ ಮನುವಿನ ಅವದಿ ಆರಂಭ (೩೦,೮೪,೪೮,೦೦೦ವರ್ಷ)
- ೭೩,೭೪,೨೯,೧೦೮ ನೇ ವರ್ಷ ದಿಂದ ರೈವತ ( ೨೮ ದ್ವಾ ಪರಯುಗ. ಬಲರಾಮನ ಮಾವ ಅಂದರೆ ರೈವತಿಯ ತಂದೆ )ಮನುವಿನ ಅವದಿ ಆರಂಭ (೩೦,೮೪,೪೮,೦೦೦ವರ್ಷ)
- ೪೨,೮೯,೮೧,೧೦೮,ನೇ ವರ್ಷ ದಿಂದ ಚಾಕ್ಷಸ ಮನುವಿನ ಅವದಿ ಆರಂಭ (೩೦,೮೪,೪೮,೦೦೦ವರ್ಷ)
- ೧೨,೦೫,೩೩,೧೦೮,ನೇ ವರ್ಷ ದಿಂದ ವೈವಸ್ವ ತ ಮನುವಿನ ಅವದಿ ಆರಂಭ (೨೮ನೇ ಕಲಿಯುಗ ಕಲಿಯ ಪ್ರಥಮ ಚರಣ ೫೧೧೩ (೨೦೧೩ ನೇ ಇಸವಿಯ ಎಪ್ರಿಲ್ ೧೧ಕ್ಕೆ))
- ಇದು ನನ್ನ ದರ್ಮದ ಸುಧೀರ್ಗ ಇತಿಹಾಸ ಅಧಾರ ಮಹಭಾರತ , ರಾಮಯಣ, ಮತ್ತು ಭಾರತ ಜೀವನತರಂಗಿಣಿ (ಕೃಷ್ಣಮೂರ್ತಿ ಅರ್, )
ಹೆಚ್ಚಿನ ಮಹಿತಿಗಾಗಿ ಭಾರತ ಜೀವನತರಂಗಿಣಿ (ಕೃಷ್ಣಮೂರ್ತಿ ಅರ್, )
೧ನೇ ಹಂತ ಮೂಲ ಚೇತನದ ಬಯಕೆ.
[ಬದಲಾಯಿಸಿ]ಸೃಷ್ಟಿಯ ಆದಿಯಲ್ಲಿ ಹುಟ್ಟಿದವರು
- ಕಾಲ ೧೯೭,೨೬,೪೯,೧೧೦ ವರ್ಷಗಳ ಹಿಂದೆ
- (೨೦೦೯ ಕ್ಕೆ) ೧ ನೇ ಸ್ವಾಯಂಭೂ ಮನುವಿನ ಕಾಲ ? ದೇವಗಣ ಸೃಷ್ಟಿ (ಮಹಾಭಾರತ ಆದಿಪರ್ವ ಅದ್ಯಾಯ ೬೫ ಶ್ಲೋಕ ೨೫೭೪/೧೦) ರಿಂದ)
ಕಲ್ಪ ಆದಿ ಗತ:೧೯೭,೨೬,೪೯,೧೧೦ (ವರ್ಷಗಳ ಹಿಂದೆ)ಕಲಿ ಗತ ೫೧೧೦ವರ್ಷ (೨೦೦೯ಕ್ಕೆ) ಸೃಷ್ಟಿಯ ಆದಿ ಗತ:೧೯೫,೫೮,೮೫೨೧೦,; ವವಸ್ವತ ಮನು ಗತ : ೧,೮೬,೧೮,೮೫೦ (ಮೈಸೂರು ಪಂಚಾಂಗ ರೀತ್ಯಾ). ಇದು ಬ್ರಹ್ಮನ ದ್ವಿತೀಯ ಪರಾರ್ಧ (ಮಧ್ಯಾಹ್ನ ) ಶ್ವೇತ ವರಾಹ ಕಲ್ಪ ( ಅನೇಕ ಯುಗಗಳು ಮತ್ತು ಮನ್ವಂತರಗಳು) ಈಗ ವೈವಸ್ವತ ಮನ್ವಂತರ. -
- ಮೂಲ ಚೇತನ : ಪರ ಬ್ರಹ್ಮ (ಇದು ತಾನು ಅನೇಕವಾಗಬೇಕು ಎಂದು ಬಯಸಿದ್ದು (ಅದರಿಂದ ಅದು ಕಾರ್ಯ ಬ್ರಹ್ಮ (ಅದೇ ಕಾರ್ಯಬ್ರಹ್ಮವಾಯಿತು)- ಜಗತ್ತಿನ ಆತ್ಮ -ಹಿರಣ್ಯ ಗರ್ಭ)
೧ ಬ್ರಹ್ಮ ನಿಂದ :-( ಬ್ರಹ್ಮನ ಮಾನಸ ಪುತ್ರರು) ಮಕ್ಕಳು ೬ ೧ ಮರೀಚಿ; ೨.ಅಂಗಿರಾ ; ೩.ಅತ್ರಿ; ೪.ಪುಲಸ್ತ್ಯಃ ; ೫.ಪುಲಹಃ ೬ ಕ್ರತುಃ; -.ಮರೀಚಿರಂಗಿರಾ ಅತ್ರಿ ಪುಲಸ್ತ್ಯಃ ಪುಲಹಃ ಕ್ರತುಃ | ಷಡೇತೇ ಬ್ರಹ್ಮಣಃ ಪುತ್ರಾ ವೀರ್ಯವಂತೋ ಮಹರ್ಷಯಃ || ೭.ಅಗಸ್ತ್ಯ* ೮.ಭೃಗು ; ೯,ವಸಿಷ್ಟ . (?) ಬ್ರಹ್ಮನಿಂದ ೧೦ ಮಕ್ಕಳು
- ೧. ಕಾರ್ಯ ಬ್ರಹ್ಮನಿಂದ - ೬ ಮಹರ್ಷಿಗಳು ಮತ್ತು ಇತರೆ ದೇವತೆಗಳು
- ೨. ದಕ್ಷ-ಅದೇ ಬ್ರಹ್ಮನ ಮಗ; ಬ್ರಹ್ಮನ ಬಲ ಹೆಬ್ಬೆರಳಿಂದ ಹುಟ್ಟಿದವನು, ದಕ್ಷ ಬ್ರಹ್ಮ ; ಅವನ ಪತ್ನಿಯು ಬ್ರಹ್ಮನ ಎಡ ಕೈ ಹೆಬ್ಬರಳಿಂದ ಹುಟ್ಟಿದವಳು; ಇವರಿಗೆ ೫೦ಕನ್ಯೆಯರು ಮಕ್ಕಳು .( ದಕ್ಷ ಪ್ರಜಾಪತಿಗೆ ೫೦ ಹೆಂಣು ಮಕ್ಕಳು; ೧೩-ಕಶ್ಯಪನಿಗೆ,; ೧೦ ಮಕ್ಕಳು ಧರ್ಮಮುನಿಗೆ,; ೨೭ ಚಂದ್ರನಿಗೆ. (ಇವು ೨೭ ಜ್ಯೋತಿಷ್ಯಶಾಸ್ತ್ರದ ನಕ್ಷತ್ರಗಳು ಜ್ಯೋತಿಶಾಸ್ತ್ರದ ನಕ್ಷತ್ರಗಳು -ಅಶ್ವಿನಿ, ಭರಣಿ ಮೊದಲಾದವು) ಇವನಿಗೆ ಗಂಡು ಮಕ್ಕಳು ನಷ್ಟವಾದ್ದರಿಂದ ಹೆಣ್ನು ಮಕ್ಕಳಿಗೆ ಗಂಡು ಸಂತಾನವಾಗುವ ವರೆಗೆ ಪುತ್ರಿಕಾ ಧರ್ಮದಂತೆ ದಕ್ಷನು ಅವರನ್ನು ಮನೆಯಲ್ಲೇ ಇಟ್ಟುಕೊಂಡಿದ್ದನೆಂದಿದೆ )
- ೩. ೧. ಮನು (ಸ್ವಾಯಂಭೂ ೯. ವಿಶ್ವಾಳ ಮಗನೇ ? )
- ೪. ೨. ಧಾತಾ ಜಗತ್ತಿನ ಧಾರಣ ಪೋಷಣ ಮಾಡುವವರು. ಯಾವಾಗಲೂ ಮನುವಿನ ಜೊತೆ ಇರುವವರು
- ೫. ೩. ವಿಧಾತಾ
- ೬. ೪. ಲಕ್ಷ್ಮಿ ಆಕಾಶದಲ್ಲಿ ಸಂಚರಿಸುವ ಕುದುರೆಗಳು ಇವಳ ಮಕ್ಕಳು
- ೭. ೫. ( ೮ ?) ಭೃಗು ** ಟಿಪ್ಪಣಿ ನೋಡಿ --27.0.56.154 ೦೮:೨೦, ೨೫ ಮಾರ್ಚ್ ೨೦೧೩ (UTC) (* * ಟಿಪ್ಪಣಿ : ಭೃಗುವು ಬ್ರಹ್ಮನ ಎದೆಯನ್ನು ಸೀಳಿ ಹೊರಗೆ ಬಂದವನು ;ಅವನ ಮಗ ಕವಿ ; ಅವನ ಮಗ ಶುಕ್ರ (ಯೋಗಾಚಾರ್ಯ) ದೈತ್ಯ ಮತ್ತು ದಾನವರ ಪುರೋಹಿತ : ಭೃಗು ಮಹರ್ಷಿಯ ಮಗ ಶುಕ್ರಾಚಾರ್ಯ ಅಥವಾ ಉಷನಸ್ಸು ; ಶುಕ್ರನು ಯೋಗ ಬಲದಿಂದ ಬೃಹಸ್ಪತಿಯೂ ಆಗಿ ಕೆಲಸ ಮಾಡುತ್ತಾನೆ ; ಬ್ರಹ್ಮನು ಶುಕ್ರನನ್ನು ಜಗತ್ತಿನ ಯೋಗ ಕ್ಷೇಮ ನೋಡಿ ಕೊಳ್ಳಲು ನಿಯಮಿಸಿದನು : ಮಳೆ ;ಆನಾವೃಷ್ಟಿ ; ಧರ್ಮ; ಅಧರ್ಮ; (ಅವು ಅವನ ಕಾರ್ಯ ಕ್ಷೇತ್ರ -ಬಿಡುವಿಲ್ಲ ತಂದೆಯ ಕರೆಗೆ ಹೋಗಲು); ಅದರಿಂದ ಬೃಗುವು , ಚ್ಯವನ ನೆಂಬ ೨ ನೇ ಮಗನನ್ನು ಪಡೆದನು . . ಸಿಟ್ಟಿನಿಂದ ಗರ್ಭದಿಂದ ಜಾರಿಬಂದಿದ್ದರಿಂದ ಚ್ಯವನ . ಚವನನ ಪತ್ನಿ ಅರುಷಿ ಮನುವಿನ ಮಗಳು. ಇವರ ಮಗ ತಾಯಿಯ ತೊಡೆಯನ್ನು ಸೀಳಿಕೊಂಡು ಬಂದ ಔರ್ವ ಮುನಿ. ಅವನಿಗೆ ೧೦೦ಮಕ್ಕಳು.. ಋಚೀಕ ಅವರ ಮಗ. ಅವನ ಮಗ ಜಮದಗ್ನಿ-ಅವನಿಗೆ ೪ ಮಕ್ಕಳು, ಕಿರಿಯವನು ಪರಷುರಾಮ (ಆದ್ದರಿಂದ ಅವನು ಭಾರ್ಗವ ರಾಮ ಭೃಗು ವಂಶದವನು.)
- ೬ ಮಹರ್ಷಿಗಳು
- ೮. ೧ ಮರೀಚಿ ಮರೀಚಿಯಿ೦ದ ಕಶ್ಯಪ (ಟಿಪ್ಪಣಿ:- ಕಶ್ಯಪನಿಗೆ ೧೩ ಪತ್ನಿಯರು- ದಕ್ಷನ ಮ್ಕ್ಕಳು ಕೆಳಗೆ ಅವರ ಪಟ್ಟಿ ಮಕ್ಕಳ ವಿವರ ಇದೆ. ಶಾಂತಿ.ಪರ್ವದಲಿ, ಅಗಸ್ತ್ಯನು ಮಿತ್ರಾವರುಣ ಮತ್ತು ಊರ್ವಶಿಯ ಮಗ ಎಂದಿದೆ. ಪತ್ನಿ ಲೋಪಾಮುದ್ರೆ. ಇವನು ಮಿತ್ರಾವರುಣನ ವೀರ್ಯದಿಂದ ಕುಂಭದಿಂದ ಹುಟ್ಟಿದವ. ಇವನು ಈಗಿನ ವೈವಸ್ವತ ಮನ್ವಂತರದವ)
- ೯. ೨ ಅತ್ರಿ - ಪತ್ನಿ ಕರ್ದಮನ ಪುತ್ರಿ -ಅನಸೂಯಾ ಮಕ್ಕಳು : ೧.ದೂರ್ವಾಸ, ೨.ದತ್ತಾತ್ರೇಯ ೩. ಚಂದ್ರ
- ೧೦. ೩. ಅಂಗಿರಾ ೩ ಪುತ್ರರು ೧. ಬೃಹಸ್ಪತಿ ೨. ಉತಥ್ಯ ೩. ಸಂವರ್ತ * ಅಂಗಿರಸನ ಪತ್ನಿ ವಸುಧಾ/ಸುಭಾ ಆಥವಾಕರ್ದಮ ಪ್ರಜಾಪತಿಯ ಪುತ್ರಿ ಶ್ರದ್ಧೆ
- ೧೧. ೪. ಪುಲಸ್ತ್ಯ ಪತ್ನಿ;ಕರ್ದಮನ ಮಗಳು * ಹವಿರ್ಭುಕ್ ; ಇವನಿಗೆ ರಾಕ್ಷಸರೂ, ವಾನರರೂ, ಕಿನ್ನರರೂ, ಯಕ್ಷರೂ ಮಕ್ಕಳು ಇಲಬಿಲೆಯಲ್ಲಿ ಹುಟ್ಟದವ ೧.ಕುಬೇರ; ೨.*ವಿಶ್ರವಸ್ಸು ಮಗ ; ವಿಶ್ರವಸ್ಸುವಿನ ಮಕ್ಕಳು ರಾವಣಾದಿಗಳು
- ೧೨. ೫. ಪುಲಹ ಇವನಿಗೆ ಶರಭ, ಸಿಂಹ, ಕಿಂಪರುಷ, ವ್ಯಾಘ್ರ, ಕರಡಿ, ಈಹಾಮೃಗ ಮಕ್ಕಳು.
- ೧೩. ೬. ಕ್ರತು ಇವನ ಮಕ್ಕಳು ಪವಿತ್ರರಾದ ಸತ್ಯವಾದಿಗಳಾದ ಸೂರ್ಯನ ಹಿಂದೆ ಮುಂದೆ ಸಂಚರಿಸುವ ೬೦ ಸಾವಿರ ವಾಲಿಖಿಲ್ಯ ಋಷಿಗಳು ಇವರು ಮನುಷ್ಯನ ಹೆಬ್ಬೆಟ್ಟಿನಷ್ಟು ಚಿಕ್ಕ ರೂಪಿಗಳೆಂದು ಹೇಳಿದೆ
- ೧೪. (ಟಿಪ್ಪಣಿ:- ಅಗಸ್ತ್ಯ ಪುಲಸ್ತ್ಯನ ಮಗ. -(ಟಿಪ್ಪಣಿ: ಆದಿ ಪರ್ವದಲ್ಲಿ ೬ ಋಷಿಗಳ ಹೆಸರು ಮಾತ್ರ ಇದೆ. ಈ ಹೆಸರಿಲ್ಲ. * (ಶಾಂತಿಪರ್ವದಲ್ಲಿದೆ ಶಾಂತಿ.ಪರ್ವದಲ್ಲಿ ಮಿತ್ರಾವರುಣ ಮತ್ತು ಊರ್ವಶಿಯ ಮಗ ಎಂದಿದೆ. ಪತ್ನಿ ಲೋಪಾಮುದ್ರೆ. ಮಿತ್ರಾವರುಣನ ವೀರ್ಯದಿಂದ ಕುಂಭದಿಂದ ಹುಟ್ಟಿದವ. ಇವನು (ಅಗಸ್ತ್ಯ) ಈಗಿನ ವೈವಸ್ವತ ಮನ್ವಂತರದವ) ವಿಶ್ವ ಸೃಷ್ಠಿ ವಾದದಲ್ಲಿ ಪ್ರಾಚೀನರು ಮೂಲ ಶಕ್ತಿಯನ್ನು ’ಸತ್’ ನ್ನು ’ಜ್ಞಾತೃ’ವಾಗಿ ಪರಿಗಣಿಸಿ, ಅದರಿಂದ ’ಜ್ಞಾನಶಕ್ತಿ’ ಇಚ್ಛಾ ಶಕ್ತಿ’, ’ಕ್ರಿಯಾ ಶಕ್ತಿ’ ಗಳ ಉಗಮವಾಗಿ, ’ಜ್ಞೇಯ’ವಾದ ಈ ’ವಿಶ್ವ’ವು ತೋರಿಕೊಂಡಿತೆಂಬುದು ವೇದಾಂತದ ತಾತ್ಪರ್ಯ. ಪುರಾಣದಲ್ಲಿ ’ಜ್ಞಾತೃ’ ವಾದ ಬ್ರಹ್ಮನ ಆ ಮೂರು ’ಶಕ್ತಿ’ ಗಳು ನಾನಾ ರೂಪವನ್ನು ಪಡೆದು . ’ಅವ್ಯಕ್ತ’ ರೂಪದಿಂದ ’ವ್ಯಕ್ತ’ ರೂಪ ಪಡೆದು ’ವಿಶ್ವ’ ವಾಗಿ ’ಜೀವಿ’ಗಳಾಗಿ ಕಾಣಿಸಿಕೊಂಡಿದೆ. ಅದಕ್ಕೆ ನಾನಾ ಹೆಸರು.) (ಸ್ವಂತ))
- ೧೫. ೭. ಸ್ಥಾಣು ಇವನಿಗೆ ೧೧ ರುದ್ರರು ಮಕ್ಕಳು.
- ೧೬. ೮. ದಕ್ಷ ಪ್ರಜಾಪತಿ ೫೦ ಹೆಂಣು ಮಕ್ಕಳು;ಅವರನ್ನು ಈ ರೀತಿ ವಿವಾಹ ಮಾಡಿ ಕೊಟ್ಟನು-
- ೧೩ ಮಕ್ಕಳು-ಕಶ್ಯಪನಿಗೆ,; ೧೦ ಮಕ್ಕಳು ಧರ್ಮಮುನಿಗೆ, ೨೭ ಮಕ್ಕಳು ಚಂದ್ರನಿಗೆ. ಇವನಿಗೆ ಗಂಡು ಮಕ್ಕಳು ನಷ್ಟವಾದ್ದರಿಂದ ಹೆಣ್ನು ಮಕ್ಕಳಿಗೆ ಗಂಡು ಸಂತಾನವಾಗುವ ವರೆಗೆ ಪುತ್ರಿಕಾ ಧರ್ಮದಂತೆ ದಕ್ಷನು ಅವರನ್ನು ಮನೆಯಲ್ಲೇ ಇಟ್ಟುಕೊಂಡಿದ್ದನೆಂದಿದೆ
- ೧೮.೧೭. ೯.ವೀರಿಣಿ (ಪ್ರಸೂತಿ ? ) ದಕ್ಷನ ಪತ್ನಿ (ಬ್ರಹ್ಮನ ಎಡ ಹೆಬ್ಬರಳಿನಿಂದ ಹುಟ್ಟಿದವಳು) ( ದಕ್ಷ ಪತ್ನಿ ಪ್ರಸೂತಿ , ಸ್ವಾಯಂಭು ಮನುವಿನ ಮಗಳು,?)
- ೧೦. ಧರ್ಮದೇವ ಮುನಿ (ಧರ್ಮ ಪ್ರಜಾಪತಿ) ; ಬ್ರಹ್ಮನ ಬಲ ಸ್ಥನದಿಂದ ಬಂದವನು .ದಕ್ಷನ ೧೦ ಹೆಣ್ಣು ಮಕ್ಕಳು ಇವನ ಪತ್ನಿಯರು
- ೧೯. ( ಟಿಪ್ಪಣಿ:- ವಶಿಷ್ಟ ; ಪತ್ನಿ: ಅರುಂಧತಿ (ವಸಿಷ್ಟನು ಮಿತ್ರಾವರುಣ ಮತ್ತು ಊರ್ವಸಿಯ ಮಗ ಎಂದಿದೆ. ( ಭಾಗ; ) (ಟಿಪ್ಪಣಿ: ಆದಿ ಪರ್ವದಲ್ಲಿ ೬ ಋಷಿಗಳ ಹೆಸರು ಮಾತ್ರ ಇದೆ. ವಸಿಷ್ಠರ ಹೆಸರಿಲ್ಲ. ಬೇರೆ ಬೇರೆ ಮನ್ವಂತರದಲ್ಲಿ ಬೇರೆ ಬೇರೆ ಸಪ್ತರ್ಷಿಗಳು-ವಸಿಷ್ಠರ ಮಗ - ಶಕ್ತಿ ಮೊಮ್ಮಗ ಪರಾಶರ ಅವನ ಮಗ ವ್ಯಾಸ; ಅರುಂಧತಿ ನಾರದನ ಸೋದರಿ) (?*)
- ೨೦.(೧) ಮರೀಚಿ -ಅವನ ಮಗ ಕಶ್ಯಪ - ಮುಂದೆ ಕಶ್ಯಪನ ವಂಶ
ಮುಂದೆ ಕಶ್ಯಪನ ವಂಶ
[ಬದಲಾಯಿಸಿ]- ಮರೀಚಿಯಿ೦ದ ಕಶ್ಯಪ + ೧೩ ಪತ್ನಿಯರು- ದಕ್ಷನ ಮಕ್ಕಳು
- ೧.ಅದಿತಿ- ಅದಿತಿಯಿಂದ ೧೨ ದೇವತೆಗಳು ಆದಿತ್ಯರು . ಅದಿತಿಗೆ ಇಂದ್ರಾದಿ ೧೨ ಮಕ್ಕಳು. ೧. ಧಾತಾ ೨. ಮಿತ್ರ ೩. ಅರ್ಯಮಾ ೪. ಇಂದ್ರ ೫. ವರುಣ ೬. ಅಂಶ ? ೭. ಭಗ ೮. ವಿವಸ್ವಾ ೯. ಪೂಷಾ ೧೦. ಸವಿತಾ ೧೧. ತ್ವಷ್ಟಾ ೧೨. ವಿಷ್ಣು
(ತ್ವಾಷ್ಟ್ರನ ಮಗಳು ತ್ವಾಷ್ಟ್ರಿ (ಸಂಜ್ಞೆ) ಸೂರ್ಯನ ಪತ್ನಿ ಅವಳು ಅಶ್ವಿನೀ (ಹೆಣ್ಣುಕುದುರೆ) ರೂಪವನ್ನು ಧರಿಸಿ ಅಶ್ವಿಕುಮಾರರನ್ನು ಆಕಾಶದಲ್ಲಿ ಪಡೆದಳು ೫. ವರಣ +ಪತ್ನಿ-ಜ್ಯೇಷ್ಠ ಮಕ್ಕಳು-ಬಲ ಮತ್ತು ಸುರೆ ಅಧರ್ಮನ ಜನನ - ಅಧರ್ಮನ ಪತ್ನಿ ನಿರ್ಯತಿ ಇವರ ಮಕ್ಕಳು - ೩ ನೈಋತರು - ಭಯ, ಮಹಾಭಯ, ಮೃತ್ಯು ಅದಿತಿಯ ಮಗ ೧೨ನೆಯ ವಿಷ್ಣುವೇ ಮುಂದೆ ಮಹಾ ವಿಷ್ಣುವಾಗಿ ಕಾಣಿಸಿಕೊಳ್ಳು ತ್ತಾನೆ .ಮಹಾ ಭಾರತದ ಈ ಅಧ್ಯಾಯ ದಲ್ಲಿ ಚತುರ‍್ಮುಖ ಬ್ರಹ್ಮ, ಮಹಾವಿಷ್ಣು, ಮಹಾ ಶಿವ ಅಥವಾ ಮಹೇಶ್ವರ (ತ್ರಿ ಮೂರ್ತಿಗಳು) ಕಾಣುವುದಿಲ್ಲ.)
- ೨. ದಿತಿ ಮಕ್ಕಳು - ದೈತ್ಯರು- ದಿತಿಗೆ ಒಬ್ಬನೇ ಮಗ (ಹಿರಣ್ಯಾಕ್ಷ್ಯನ-ಹೆಸರಿಲ್ಲ) ೧.ಹಿರಣ್ಯ ಕಶಿಪು - ಇವನ ಮಕ್ಕಳು ೧. ಪ್ರಹ್ಲಾದ ೨. ಸಂಹ್ರಾದ ೩. ಅನುಹ್ರಾದ ೫. ವಾಷ್ಕಲ ; ಪ್ರಹ್ಲಾದನ ಮಕ್ಕಳು ೧. ವಿರೋಚನ೨. ಕುಂಭ ೩. ನಿಕುಂಭ ವಿರೋಚನನ ಮಗ -> ೧. ಬಲಿ ಅವನ ಮಗ ೧. ಬಾಣ ಆವನೇ ಮಹಾಕಾಲ, ರುದ್ರನ ಭಕ್ತ
* ೩.ದನು ಇವಳಿಂದ ೩೪ ಮಕ್ಕಳು ಮತ್ತು ೧೦ ದಾನವ ವಂಶಜರು ೧. ಏಕಾಕ್ಷ ೨. ಮೃತಪಾ ೩. ಪ್ರಲಂಬ ೪. ನರಕ ೫. ವಾತಾಪಿ ೬. ಶತ್ರುತಪನ ೭. ಶಠ ೮. ಗವಿಷ್ಠ ೯. ವನಾಯು ೧೦. ದೀರ್ಘಜಿಹ್ವ * ೪. ಕಾಲಾ ಇವಳ ಮಕ್ಕಳೂ ಭಯಂಕರ ದಾನವರು ೧. ವಿನಾಶನ ೨. ಕ್ರೋಧ ೩. ಕ್ರೋಧಹಂತಾ ೪. ಕ್ರೋಧಶತ್ರು ೫. ಕಾಲಕೇಯರು
- ೫. ದನಾಯು ಅಸುರರು ಇವಳ ಮಕ್ಕಳು ೧. ವಿಕ್ಷರ ೨. ಬಲ ೩. ವೀರ ೪. ವೃತ್ರ
- ೬. ಸಿಂಹಿಕಾ ಇವಳ ಮಕ್ಕ ಳು ೧. ರಾಹು ೨. ಸುಚಂದ ೩. ಚಂದ್ರಹರ್ತೃ ೪. ಚಂದ್ರಪ್ರವರ್ದನ
- ೭. ತಾಮ್ರಾದೇವಿ ? ಇವಳಿಗೆ : ೧ಕಾಕೀ ೨ ಶ್ಯೇನೀ ೩.ಭಾಸೀ . ೪.ಧೃತರಾಷ್ಟ್ರೀ ೫.ಶುಕೀ (೧.ಶ್ಯೇನೀ ಗೆ ಗಿಡಗ ಭಾಸಿಗೆ ಕೋಳಿ ಮತ್ತು ಹದ್ದು ಮಕ್ಕಳು ಧೃತರಾಷ್‌ಟ್ರಿ ಗೆ ಹಂಸ ಇತ್ಯಾದಿ ಸುಂದರ ಪಕ್ಷಿಗಳು. ಶುಕಿಗೆ ಶುಕಗಳು ಮಕ್ಕಳು)
- (೭) ಕ್ರೋಧಾ(ಕ್ರೂರಾ) ಇವಳಿಗೆ ೯ ಜನ ಕನ್ಯೆಯರು ೧. ಮೃಗೀ ೨. ಮೃಗಮಂದಾ ೩. ಹರೀ ೪. ಭದ್ರಮನಾ ೫. ಮಾತಂಗೀ ೬. ಶಾರ್ದೂಲೀ ೭. ಶ್ವೇತಾ ೮. ಸುರಭಿ ೯. ಸರಸಾ (೧. ಮೃಗಿಯಿಂದ ಮೃಗಗಳು (ಜಿಂಕೆ) ೨. ಮೃಗಮಂದಾ ಳಿಂದ ಕರಡಿ, ಸೃಮರ ೪.ಭದ್ರಮನೆಯಿಂದ ಐರಾವತ. ೩.ಹರೀಯಿಂದ ಕುದುರೆ, ವಾನರರು). (೧. ೬ ಶಾರ್ದೂಲಿಯಿದ ಸಿಂಹ,ಹುಲಿ,ಚಿರ್ಚು. ೫. ಮಾತಂಗಿಯಿಂದ ಆನೆಗಳು. ೭.ಶ್ವೇತೆಯಿಂದ ದಿಗ್ಗಜ ಬಿಳಿ ಆನೆ. ೮. ಸುರಭಿಯಿಂದ ರೋಹಿಣಿ,ಗಂಧರ್ವಿ ರೋಹಿಣಿಯಿಂದ ವಿಮಲೆ ಅನಲೆ,; ರೋಹಿಣಿಯಿಂದ ದನಗಳು, ಗಂಧರ್ವಿಯಿಂದ ಗಂಡು ಕುದುರೆಗಳು ಅನಲೆಯಿಂದ ಗುಂಡಾದ ಕಾಯಿಯ ೭ ಬಗೆಯ ಮರಗಳು. ಮತ್ತು ಶುಕಿ.ಸುರಸೆಗೆ ?(ದಕ್ಷ ಪತ್ನಿ) ಕಂಕ ಪಕ್ಷಿ . ಸುರಸೆಯ ಮಕ್ಕಳು ನಾಗಗಳು; ಕದ್ರುವನ ಮಕ್ಕಳು ಪನ್ನಗಗಳು (ಸರ್ಪ)ಸುರಸೆಯು ೧೦೦ ತಲೆಯ ಸರ್ಪಗಳನ್ನೂ ಹಡೆದಳು ಮತ್ತು ೩ ಕನ್ಯೆಯರು, ಇವರಿಂದ ಸಸ್ಯಗಳ ಜನನ ೧. ಅನಲಾ: ಹೂವಿಲ್ಲದೆ ಫಲಬಿಡುವ ಸಸ್ಯ ಇವೇ ವನಸ್ಪತಿಗಳು; ೨. ರುಹಾ :ಇವಳಿಂದ ಹೂವಿನಿಂದ ಹಣ್ಣು ಬಿಡುವ ಗಿಡ ಮರ ; ೩. ವೀರಧೆಯಿಂದ ಲತೆಗಳು,ಗುಲ್ಮಗಳು, ಬಿದಿರು-ಹುಲ್ಲುಜಾತಿಯ ಸಸ್ಯಗಳು )
* ೮. ಪ್ರಾಧಾ ಇವಳಿಂದ :- ೯ ಕನ್ಯೆಯರು, ೧೦ ದೇವ ಗಂಧರ್ವರು ಮತ್ತೂ ೪ ಗಂಧರ್ವರು ಮತ್ತು ಅಪ್ಸರೆಯರನ್ನು ಪಡೆದಳು ದೇವ ಗಂಧರ್ವರು ೧. ಸಿದ್ದ ೨. ಪೂರ್ಣ ೩. ಬರ್ಹಿ ೪. ಪೂರ್ಣಾಯು ೫. ಬ್ರಹ್ಮ ಚಾರಿ ೬. ರತಿಗುಣ೭. ಸುಪರ್ಣ ೮. ವಿಶ್ವಾವಸು೯. ಭಾನು ೧೦.ಸುಚಂದ್ರ ೧.ಅನವದ್ಯಾ ೨. ಮನು (ಕನ್ಯೆ) ೩. ವಂಶಾ ೪. ಅಸುರಾ ೫. ಮಾರ್ಗಣಪ್ರಿಯಾ ೬. ಅರೂಪಾ ೭. ಸುಭಗಾ. ೮. ಭಾಸೀ ೯
- ? ೮.. ಪ್ರಾಧಾಳ ಮತ್ತೊಂದು ವರ್ಗ ೧. ಅತಿಬಾಹು ೨. ಹಾಹಾ ೩. ಹೂಹೂ ೪. ತುಂಬುರು
೧. ೮. ಪ್ರಾಧಾಳಿಂದ ಅಪ್ಸರ ವಂಶ ೧. ಅಲಂಬುಷಾ ೨. ಮಿಶ್ರಕೇಶೀ ೩. ವಿದ್ವತ್ ಪರ್ಣಾ ೪. ತಿಲೋತ್ತಮಾ೫. ಅರುಣಾ ೬. ರಕ್ಷಿತಾ ೭. ರಂಭಾ ೮. ಮನೋರಮಾ ೯. ಕೇಶಿನೀ ೧೦. ಸುಬಾಹು ೧೧. ಸುರತಾ ೧೨. ಸುರಜಾ ೧೩. ಸುಪ್ರಿಯಾ '
- ೯. ವಿಶ್ವಾ ಇವಳಿಗೆ ವಿಶ್ವಾದೇವತೆಗಳ ಒಂದು ವರ್ಗವೇ ಇದೆ ಅವರ ಹೆಸರು ಅಥವಾ ಅವರ ತಾಯಿಯ ಹೆಸರು ಇಲ್ಲಿ ಬಂದಿಲ್ಲ. ೧೦ ಮಕ್ಕಳು ೧. ಕ್ರತು ೨. ದಕ್ಷ ೩. ವಸು ೪. ಸತ್ಯ ೫.ಕಾಲಕಾಮ ೬. ಮುನಿ ೭. ಕುರಜ ೮. ಮನುಜ ೯. ವಿಜ .೧೦. ರೋಚಮಾನ
- ೧೦ . ವಿನುತಾ ಇವಳ ಮಕ್ಕಳು ೧. ತಾಕ್ಷ ೨. ಅರಿಷ್ಟನೇಮಿ ೩. ಗರುಡ ೪. ಅರುಣ. ೫. ಅರುಣಿ ೬. ವಾರುಣಿ ಅರುಣ ಪತ್ನಿಶ್ಯೇನಿ ಗೆ ೨ ಪುತ್ರರು ೧. ಸಂಪಾತಿ ೨. ಜಟಾಯು
* ೧೧ . ಕಪಿಲಾ ಇವಳ ಮಕ್ಕಳು ೧. ಅಮೃತ ೨. ಬ್ರಾಹ್ಮಣರು ೩. ಗೋವುಗಳು ೪. ಗಂಧರ್ವರು ೫. ಅಪ್ಸರೆಯರು ಪುರಾಣಗಳಲ್ಲಿ ಇವರನ್ನೂ ಅಪ್ಸರೆಯರನ್ನೂ ಕಪಿಲೆಯ ಮಕ್ಕಳೆಂದು ಹೇಳಿದೆ
- ೧೨. ಮುನಿ (ಮುನಿಯ ಮಕ್ಕಳು ೧೬ ದೇವ ಗಂಧರ್ವರು ೧. ಭೀಮಸೇನ ೨. ಉಗ್ರಸೇನ ೩. ಸುಪರ್ಣ ೪. ವರುಣ ೫. ಗೋಪತಿ ೬. ಧೃತರಾಷ್ಟ್ರ ೭. ಸೂರ್ಯವರ್ಚಾ ೮. ಸತ್ಯವಾಕ್ ೯. ಅರ್ಕಪರ್ಣ ೧೦. ಪ್ರಯತ ೧೧. ಭೀಮ ೧೨. ಚಿತ್ರರಥ ೧೩. ಶಾಲಿಶಿರಾ ೧೪. ಪರ್ಜನ್ಯ ೧೫.. ಕಲಿ ೧೬. ನಾರದ.
- ೧೩. ಕದ್ರೂ ಇವಳ ಮಕ್ಕಳು ನಾಗಗಳು ಮತ್ತುಸರ್ಪಗಳು ೧. ಶೇಷ ೨. ವಾಸುಕಿ ೩. ಅನಂತ ೪. ತಕ್ಷಕ ೫. ಕೂರ್ಮ ೬. ಕುಲಿಕ ಇತ್ಯಾದಿ. ( ೧೩ ನೇ ಕದ್ರುವಿ ಗೆ ಸುರಸಾ ಎoಬ ಹೆಸರೂ ಇದೆಯೇ ? ಯಕ್ಷರು ಮತ್ತು ನಾಗರ ತಾಯಿ)
ಧರ್ಮದೇವನ ವಂಶ
[ಬದಲಾಯಿಸಿ]- ಅವನ ಪತ್ನಿಯರು ೧೦- ದಕ್ಷನ ಹೆಣ್ಣುಮಕ್ಕಳು ಧರ್ಮದೇವನ ಇತರ ಪತ್ನಿಯರು ಮತ್ತು ವಸುಗಳ ತಾಯಂದಿರು ಧರ್ಮದೇವನ ಮಕ್ಕಳು ಅಷ್ಟ ವಸುಗಳು ಮತ್ತು ಅವರ ಪತ್ನಿಯರು ವಸುಗಳ ಮಕ್ಕಳು
- ೧. ಕೀರ್ತಿ ಧೂಮ್ರೆ ೧. ಧರ, ದ್ರವಿಣ, ಹುತಹವ್ಯ
- ೨. ಲಕ್ಷಿ ಧೂಮ್ರೆ ೨. ಧ್ರುವ ಭಗವಾನ್ ಕಾಲ
- ೩. ಧೃತಿ ಮನಸ್ವಿನಿ ೩. ಸೋಮ +ಮನೋಹರೆ ವರ್ಚಸ್ಸು, ಶಿಶಿರ, ಪ್ರಾಣ, ರಮಣ:
- ೪.. ಮೇಧಾ ರತೆ ೪. ಅಹ ಜ್ಯೋತಿ, ಶಮ, ಶಾಂತ,ಮುನಿ
- ೫. ಪುಷ್ಟಿ ಶ್ವಾಸೆ ೫. ಅನಿಲ +ಶಿವೆ ಮನೋಜನ,ಅವಿಜ್ಞಾತಗತಿ, :ತಾಯಿ ಶಿವೆ
- ೬. ಶ್ರಧ್ಧಾ ಶಾಂಡಿಲ್ಯೆ ೬. ಅನಲ ಸ್ಕಂದ ಕುಮಾರ, ಶಾಖ, ವಿಶಾಖ,ನೈಗಮೇಯ.
- ೭. ಕ್ರಿಯಾ ಪ್ರಭಾತೆ ೭. ಪ್ರತ್ಯೂಷ ದೇವಲ
- ೮. ಬುದ್ಧಿ ಪ್ರಭಾತೆ ೮. ಪ್ರಭಾಸ ವಿಶ್ವಕರ್ಮ : ತಾಯಿ ಬೃಹಸ್ಪತಿಯ ತಂಗಿ
- ೯. ಲಜ್ಜಾ ಇತರೆ ಮಕ್ಕಳು+ಪತ್ನಿಯರು
- ೧೦. ಮತಿ ಶಮ + ಪ್ರಾಪ್ತಿ (+ಕಾಮ + ರತಿ)
ಭಿನ್ನ ಪಕ್ಷ ಅಥವಾ ದೇವತೆಗಳ ವಿಂಗಡಣೆ
[ಬದಲಾಯಿಸಿ]- ೧. ಆದಿತ್ಯ ಗಣ ಗರುಡ ಅರುಣ ಬೃಹಸ್ಪತಿ ಆದಿತ್ಯರು ೨. ರುದ್ರ ಗಣ ೩. ಸಾಧ್ಯ ಗಣ ೪. ಮರುತ್ತು ಗಣ ೫. ವಸು ಗಣ ೬. ಭಾರ್ಗವ ಗಣ ೭. ವಿಶ್ವೇದೇವಗಣ ೮. ಗುಹ್ಯಕ ಗ ಣ ಅಶ್ವಿನಿ ಕುಮಾರರು ಸರ್ವೌಷಧಿಗಳು ಪಶುಗಳು (ಕಪಿಲೆಯ ಮಕ್ಕಳು)
- ಏಕಾದಶ ರುದ್ರರು ; ರುದ್ರ ಗಣ : .ವೀರಭದ್ರ, ೨.ಶಂಭು, ೩.ಗಿರೀಶ, ೪.ಅಜೈಕಪಾತ, ೫.ಅಂಬುಗದ್ನ್ಯ ? (ಅಹಿರ್ಬದ್ಧ್ಯ) ೬.ಪಿನಾಕಿ, ೭.ಸ್ಥಾಣು, ೮.ಪಶುಪತಿ, ೯.ಭವ, ೧೦.ಉಗ್ರ, ೧೧. ನಿಋತಿ (ತ್ವಿ ಟ್ಪ ತಿ?) ; ೧.ಮೃಗವ್ಯಾಧ, ೨.ಸರ್ಪ, ೩.ನಿಋತಿ, ೪.ಅಜೈಕಪಾತ್, ೫.ಅಹಿರ್ಬುದ್ಧ್ಯ ೬.ಪಿನಾಕಿ, ೭.ದಹನ, ೮.ಈಶ್ವರ, ೯.ಕಪಾಲಿ, ೧೦.ಸ್ಥಾಣು, ೧೧.ಭಗ. (ಮ.ಆಪ.): ೧.ಅಜೈಕಪಾತ್, ೨.ಅಹಿರ್ಬುದ್ಧ್ಯ, ೩.ವಿರೂಪಾಕ್ಷ, ೪.ರೈವತ, ೫.ಹರ, ೬.ಬಹುರೂಪ, ೭. ತ್ರ್ಯಂಬಕ, ೮.ಸುರೇಶ್ವರ, ೯.ಸಾವಿತ್ರ, ೧೦.ಜಯಂತ, ೧೧.ಪಿನಾಕಿ. (ಮ.ಶಾಂ.) : ೧.ಅಜೈಕಪಾತ್, ೨.ಅಹಿರ್ಬದ್ಧ್ಯ, ೩.ಪಿನಾಕಿ, ೪.ಋತ, ೫.ಪಿತೃರೂಪ, ೬.ತ್ರ್ಯಂಬಕ, ೭.ಮಹೇಶ್ವರ, ೮.ವೃಷಾಕಪಿ, ೯.ಶಂಭು, ೧೦.ಹವನ, ೧೧.ಈಶ್ವರ. (ವಿ. ಪು.; ಭಾಗ,;ಹರಿ)**
- ( ಟಿಪ್ಪಣಿ ೧ :- ೧. ಜ್ಞಾತೃ - ಅರಿಯುವವನು, ನೋಡುವವನು, ಜ್ಞಾನದ ಮೂಲ "ಚೇತನ".(ಬ್ರಹ್ಮ) (ಕೇವಲ ಜಡ ’ಎನರ್ಜಿ’ ಅಲ್ಲ) ೨. ಜ್ಞಾನ ಶಕ್ತಿ - ಜ್ಞಾತೃವಿನ ಅಥವಾ ನೋಡುವವನ ಅರಿಯುವ ಶಕ್ತಿ, ಅರಿವು.;(ಶಾರದೆ);. ೩.ಇಚ್ಛಾಶಕ್ತಿ - ಬಯಕೆ; ಆಗಬೇಕೆಂಬ, ಮಾಡಬೇಕೆಂಬ ಬಯಕೆ. (ಲಕ್ಷ್ಮಿ) ೪. ಕ್ರಿಯಾಶಕ್ತಿ - ಬಯಸಿದ್ದನ್ನು ಕಾರ್ಯ ರೂಪಕ್ಕೆ ತರುವ ಶಕ್ತಿ.( ಪಾರ್ವತಿ) ೫. ಜ್ಞೇಯ : ನೋಡಲ್ಪಡುವ ವಸ್ತು, ಜಗತ್ತು, (ನೋಡಲು ವಸ್ತುವೇ ಇಲ್ಲದಿದ್ದರೆ ಜ್ಞಾತೃವು ಸುಪ್ತವಾಗಿಬಿಡುವುದು)
- ( ಟಿಪ್ಪಣಿ ೨: - ೨ ವಿಜ್ಞಾನ ಮತ್ತು ಋಷಿಗಳು : ೧. ಪ್ರಾಚೀನ ಋಷಿಗಳಿಗೆ- ವಿಶ್ವ ರಚನೆ ಒಂದು ಮನಸ್ಸಿನ ಬಯಕೆಯಿಂದ ಆದದ್ದು. ಪ್ರಾಚೀನ ಋಷಿಗಳು ’ಮೂಲವಸ್ತು’ವನ್ನು ಒಂದು ’ಸಜೀವ’-’ಜ್ಞಾತೃ ಶಕ್ತಿ’ಯಾಗಿ ಪರಿಗಣಿಸಿ, ಈ ವಿಶ್ವವನ್ನು ’ಸತ್’ನಿಂದ ಹುಟ್ಟಿದ ಪಂಚ ಭೂತಗಳಿಂದ ಆದದ್ದು, ಎಂದು ಪರಿಗಣಿಸಿದರು, ಅವರು, ವಿಶ್ವದ ಅಣು -ಬ್ರಹ್ಮಾಂಡದ ಒಳ-ಹೊರ ರಚನೆಯ ವಿಚಾರಕ್ಕೆ ಹೋಗಿಲ್ಲ.
- .೩. ಆ ಕಾಲದಲ್ಲಿ ಅದಕ್ಕೆ ಅನುಕೂಲವೂ ಇರಲಿಲ್ಲ. ಹಾಗೆಯೇ ಇಂದಿನ ವಿಜ್ಞಾನವು ಸೃಷ್ಟಿಕರ್ತನನ್ನಾಗಲಿ ವಿಶ್ವದ ಸೃಷ್ಟಿಗೆ ಕಾರಣವಾದ ’ಆ ಮೂಲ ವಸ್ತು’ ವಿಗೆ ಜ್ಞಾನ ಶಕ್ತಿಯಾಗಲಿ, ಕ್ರಿಯಾ ಶಕ್ತಿಯಾಗಲಿ ಇದೆ ಎಂದು ಒಪ್ಪುವುದಿಲ್ಲ; ಇಲ್ಲ ಎಂದೂ ಹೇಳಲಾರದು. ವಿಜ್ಞಾನಕ್ಕೆ ಆಧಾರ ಬೇಕು. ೩. ’ಸೋSಕಾಮಯತ| ಬಹು ಸ್ಯಾಂಪ್ರಜಾಯೇ ಯೇತಿ|’ ಅದು (ಬ್ರಹ್ಮವು) ನಾನು ದೊಡ್ಡದಾಗುತ್ತೇನೆ ಬಹುವಾಗುತ್ತೇನೆ’ ಎಂದು ಬಯಸಿತು. (ಕಾರಣವಿಲ್ಲದೆ !) ’ಬಯಸಿದ,’ ಆ ಉಪನಿಷತ್ತಿನ ವಾಕ್ಯವನ್ನು ವಿಜ್ಞಾನ ಒಪ್ಪಲು ಬಹುಶಃ ಕಾಲ ಬೇಕು. (ಆಧಾರ ೭)
ವಿಶೇಷ ಟಿಪ್ಪಣಿ (ದೇವಾಸುರರ ಕಥೆ )
[ಬದಲಾಯಿಸಿ]- ಬ್ರಹ್ಮನಿಂದ ಪ್ರಾರಂಭದಲ್ಲಿ ಹುಟ್ಟಿದ ದೇವತೆಗಳೆಲ್ಲಾ ಮೂಲ ಸೃಷ್ಠಿಕರ್ತನ ಶಕ್ತಿ ಕೇಂದ್ರಗಳು. ಹಾಗೆಯೇ ಅವರ ಮಕ್ಕಳು ಮರಿಮಕ್ಕಳೆಲ್ಲಾ ಜಗತ್ತನಲ್ಲಿ ಕಾಣಬರುವ ಗುಣಧರ್ಮಗಳು. ದೇವ, ದಾನವ, ದೈತ್ಯ, ಅಸುರರೆಂಬುವವರು ಬ್ರಹ್ಮನ ಮೊಮ್ಮಗ ಕಶ್ಯಪರೆಂಬ ಒಂದೇ ತಂದೆಯ ಹದಿಮೂರು ಅಕ್ಕ ತಂಗಿಯರ ಮಕ್ಕಳು.
- ೨. ಇವರೆಲ್ಲಾ "ಶಕ್ತಿ- ಪ್ರತಿಶಕ್ತಿ" ಯೆಂಬ ದ್ವಂದದ ಗಂಪುಗಳು. ಇವುಗಳಲ್ಲಿ "ಪ್ರಬಲ ಶಕ್ತಿ" ಮತ್ತು "ದುರ್ಬಲ ಶಕ್ತಿ" ಗಳೆಂಬ ಎರಡು ವಿಭಾಗಮಾಡಿದೆ. ಅವನ್ನು ಗಂಡು ಮತ್ತು ಹೆಣ್ಣೆಂದು ಕರೆದಿದೆ ಎಂದು ಭಾವಿಸಬಹುದು
- ೩. ಈ ಶಕ್ತಿಗಳೆಲ್ಲಾ ಪ್ರತ್ಯೇಕ ಪ್ರತ್ಯೇಕವಾಗಿ, ಮೂಲ ಸೃಷ್ಠಿ ಕರ್ತನೆಂಬ ಶಕ್ತಿಯಲ್ಲಿ ಅಂತರ್ಗತವಾಗಿ ಸರ್ವಾಂತರ‍್ಯಾಮಿಯಾಗಿ ಇರತಕ್ಕವು. ಇವೆಲ್ಲಾ ಸಾವಿಲ್ಲದವು . ಸದಾ ಪರಸ್ಪರ ಘರ್ಷಣೆಯಲ್ಲಿರುವವು. ಸಾವಿಲ್ಲದ ಇವು ಅಮೃತಕ್ಕಾಗಿ ಸಮುದ್ರ ಮಂಥನ ಮಾಡಿ, ಅದನ್ನೇ ನೆವ ಮಾಡಿಕೊಂಡು ಘರ್ಷಣೆಗೆ ಕಾರಣ ಮಾಡಿಕೊಂಡವು ಎಂಬುದು ಕಥೆ.
- ೪. ವ್ಯಕ್ತಿಯ ಅಂತರಂಗದಲ್ಲಿ ಒಳಿತು ಕೆಡುಕುಗಳ ಘರ್ಷಣೆಯ ಮಂಥನ ಮಾಡಿಕೊಂಡು ಒಳಿತಿನಲ್ಲಿ ಆಮೃತವನ್ನು (ಕಾಣ)ಇಡಬೇಕೆಂಬುದು ತಾತ್ಪರ್ಯವಿರಬಹುದು. ರಾಜಯೋಗ ಸಾಧನೆಯಲ್ಲಿ ಅಮೃತ ಮಂಥನದ ಹಂತಗಳೂ ಅದರ ಕ್ರಿಯೆಗಳೂ ಇರುವವೆಂದು ’ಅಧ್ಯಾತ್ಮ ಪ್ರಕಾಶ’ದವರು ಒಂದು ಪುಸ್ತಕ ಬರೆದಿದ್ದಾರೆ.
- ೫. ಈ ಸೃಷ್ಠಿಯ ಕಥೆ ಮಹಾಭಾರತದ ಆದಿ ಪರ್ವದಲ್ಲಿ ಬಂದಿದೆ. ನಂತರ ಅಂಶಾವತರಣವಾಗಿ ಈ ಶಕ್ತಿಗಳ ಅಂಶಗಳು ಬೂಮಿಯಲ್ಲಿ ಅವತರಿಸಿದ ಕಥೆ ಇದೆ.
- ೬. ಮಹಾಭಾರತದ ಕಥೆಯ ಪೀಠಿಕೆ-ಆದರ ಬೀಜರೂಪ ಸ್ವರ್ಗಲೋಕದಲ್ಲಿ ಆಗುತ್ತದೆ. ಒಂದು ರೀತಿಯಲ್ಲಿ ಸೃಷ್ಠಿಯ ಆದಿಯಲ್ಲಿಯೇ ಅದರ ಬೀಜ ಇದೆ.
- ೭. ಕಶ್ಯಪನಿಂದ ಕದ್ರುವಿನಲ್ಲಿ ನಾಗಗಳು ಹುಟ್ಟಿ, ಅವು ಮಲತಾಯಿ ದೊಡ್ಡಮ್ಮ ವಿನುತೆಗೆ ತಾಯಿಯ ಆಜ್ಞೆಯಂತೆ, ಮೋಸ ಮಾಡಲು ನಿರಾಕರಿಸಿದಾಗ "ನೀವೆಲ್ಲಾ ಮುಂದೆ ಆಗುವ ಜನಮೇಜಯನ ಸರ್ಪಯಾಗದಲ್ಲಿ ಸುಟ್ಟು ಸಾಯಿರಿ,"(ಜನಮೇಜಯಸ್ಯ...ಸರ್ಪಸತ್ರೇ ಪಾವಕೋ ವಃ ಪ್ರಧಕ್ಷ್ಯತಿ) ಎಂದು ಶಾಪ ಹಾಕಿದ್ದಾಳೆ." ಅದಕ್ಕಾಗಿ ವಾಸುಕಿ ತನ್ನ ತಂಗಿ ಜರತ್ಕಾರುವಿನಿಂದ ಹುಟ್ಟುವ ಮಗ ಆಸ್ತೀಕನಿಂದ ಯಜ್ಞ ನಿಂತು ತನ್ನ ವಂಶ ಉಳಿಯುವ ಭರವಸೆಯನ್ನು ಬ್ರಹ್ಮನಿಂದ ಪಡೆಯುತ್ತಾನೆ. ಇದು ಮಹಾಭಾರತದ ಕಥೆಯ ಕಾಲಕ್ಕಿಂತ ಕೋಟಿ ಕೋಟಿ ಯುಗ ಯುಗಾಂತರಗಳ ಹಿಂದಿನ ದೇವಲೋಕದ ಕಥೆ.
- ೮. ನಂತರ ಈ ದೇವ ದಾನವರೆಲ್ಲಾ ದ್ವಾಪರಾಂತ್ಯದಲ್ಲಿ ಈ ಭೂಮಿಯಲ್ಲಿ ಹುಟ್ಟಿ ಬಂದು ಇಲ್ಲಿ ಮಹಾ ಸಂಘರ್ಷ-ಯುದ್ಧ ವಾಗಿ ಪುನಹ ಅವರೆಲ್ಲಾ ಸ್ವರ್ಗ ಲೋಕಕ್ಕೆ ಹೋಗಿ ಸೇರಿಕೊಳ್ಳುವಲ್ಲಿ ಮಹಾಭಾರತದ ಕಥೆ ಪರ್ಯವಸಾನ ವಾಗುತ್ತದೆ. ಇದು ಸೃಷ್ಠಿಯ ಸಹಜ ಕ್ರಿಯೆ ಎಂಬುದು ತಾತ್ಪರ್ಯವಿರಬಹುದು. (ದಿತಿಯ ಮಕ್ಕಳಾದ ದಾನವರು, ದನುವಿನ ಮಕ್ಕಳಾದ ದೈತ್ಯರು, ದನಾಯುವಿನ ಮಕ್ಕಳಾದ ಅಸುರರು ಇವರಿಗೆಲ್ಲಾ ಪಾತಾಳ ಲೋಕ ವಾಸವೆಂದು ಕಳಿಸಿದ ವಿಷಯ ಅಲ್ಲಿ ಆದಿಪರ್ವದಲ್ಲಿ ಕಾಣುವುದಿಲ್ಲ).
- ೯. ಮೇಲಿನ ವಿವರಗಳನ್ನು ಹೆಚ್ಚಾಗಿ ಮಹಾಭಾರತದ ಆದಿಪರ್ವದಿಂದ ತೆಗೆದುಕೊಂಡಿದೆ. "ಈ ಮಹಾಭಾರತದ ಕಥೆ ಸ್ವರ್ಗಲೋಕಕ್ಕೂ ಭೂಮಿಗೂ ಇರುವ ’ಅವಿನಾ-ಸಂಬಂಧ ಮತ್ತು ಸಂವಾದ’ ವನ್ನು ನಿರೂಪಿಸುವ ಕಥಾವಸ್ತು ವಾಗಿದೆ."
ಮನ್ವಂತರ - ಮನುಗಳ ವಿವರ
[ಬದಲಾಯಿಸಿ]- ಈಗ ೭ನೇ ವೈವಸ್ವತ ಮನು. ವೈವಸ್ವತ ಮನ್ವಂತರ ದಲ್ಲಿ ೧೨,೦೫,೨೯,೯೩೧ ಸಂದ ವರ್ಷಗಳು ಕ್ರಿ.ಶ.೨೦೦೯ಕ್ಕೆ
- ಪುರಾಣಗಳು ಮತ್ತು ವಿಶ್ವ ಸೃಷ್ಟಿ
- ಸೃಷ್ಟಿ ಮತ್ತು ಮಹಾಭಾರತ.
ಆರಂಭ
[ಬದಲಾಯಿಸಿ]- ಸೃಷ್ಟಿಯ ಆರಂಭ :ಬ್ರಹ್ಮ ನ ಸೃಷ್ಟಿ ಮೊದಲ ಕ್ಷಣ, ಆದಿತ್ಯವಾರ ಚೈತ್ರ ಶುದ್ಧ ಪ್ರತಿಪದೆ ಲಂಕಾನಗರದ ಸೂರ್ಯೋದಯದಿಂದ, ಆರಂಭವಾಗಿ ದಿನ, ಮಾಸ, ವರುಷ, ಯುಗ, ಕಲ್ಪ, ಮನ್ವಂತರಗಳಲ್ಲಿ ಕಾಲವನ್ನು ಅಳೆದಿದೆ.
- ಸೃಷ್ಟಿ ಆರಂಭವನ್ನು ಕಂಡು ಹಿಡಿಯಲು ಭಾರತದ ಪ್ರಾಚೀನ ಜ್ಯೋತಿಷ್ಯ ಶಾಸ್ತ್ರಜ್ಞರು ಒಂದು ಸುಲಭ ಮಾರ್ಗವನ್ನ ಅನುಸರಿಸಿದ್ದಾರೆ. ಅದು ಹೇಗೆಂದರೆ ಮೊದಲಿನ ನಕ್ಷತ್ರ ಆಶ್ವಿನಿಯ ಆದಿ ಬಿಂದು ಆಥವಾ ಕೊನಯ ನಕ್ಷತ್ರ ರೇವತಿಯ ಅಂತ್ಯ ಬಿಂದುವಿನಲ್ಲಿ ಚಂದ್ರನೂಸೇರಿ ಏಳೂ ಗ್ರಹಗಳು ಒಂದೇ ರೇಖೆಯಲ್ಲಿ ಬರುವ ದಿನವನ್ನು ಕಂಡುಹಿಡಿದು ,ಅದನ್ನೇ ಸೃಷ್ಟಿಯ ಆದಿ ದಿನವೆಂದು ನಿರ್ಧರಿಸಿದ್ದಾರೆ. (ಅದು ಈಗಿನ ವಿಜ್ಞಾನಿಗಳು ಹೇಳುವ ೧೫೦ ರಿಂದ ೨೦೦ಕೋಟಿ ವರ್ಷಕ್ಕೂ ಹಿಂದೆ ಸೃಷ್ಟಿ ಪ್ರಾರಂಭ ಎನ್ನುವ ಸಿದ್ಧಾಂತಕ್ಕೆ ಸ್ವಲ್ಪ ಮಟ್ಟಿಗೆ ಹೊಂದಾಣಿಕೆ ಯಾಗುತ್ತದೆ. ಈ ಜಗತ್ತು ; ಡಾ. ಶಿವರಾಮ ಕಾರಂತ) ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ೪೩೨ಕೋಟಿ ವರ್ಷಗಳ ನಂತರ ಪುನಃ ಅದೇ ಸನ್ನಿವೇಶ ಬರುವುದು .ಆದ್ದರಿಂದ ಅದು ಬ್ರಹ್ಮನ ೧೦೦ವರ್ಷ, ಅಥವಾ ಆಯುಸ್ಸು
ಯುಗಗಳು :
- ಕಲಿxx×೪=೧. ಕೃತ ಯುಗ ---೧೭,೨೮,೦೦೦ ವರ್ಷ
- ಕಲಿx×೩=೨. ತ್ರೇತಾಯುಗ --೧೨,೯೬,೦೦೦ ವರ್ಷ.
- ಕಲಿ×೨=೩. ದ್ವಾಪರ ಯುಗ- ೮,೬೪,೦೦೦ ವರ್ಷ
- ೪. ಕಲಿಯುಗ ---೪.೩೨,೦೦೦ ವರ್ಷ.
- ಒಟ್ಟು ೪೩,೨೩,೦೦೦ ವರ್ಷ.
ಕಲ್ಪ
[ಬದಲಾಯಿಸಿ]- ೪ ಯುಗ-ಒಂದು ಮಹಾಯುಗ; ೪ಮಹಾಯುಗ ೧ ಕಲ್ಪ -ಬ್ರಹ್ಮನ ೧ ಹಗಲು ? ೭೧ ಚತುರ್ಯುಗ ೧ ಮನು, ೧೪ಮನು ಬ್ರಹ್ಮನ ೧ದಿನ
(೪ ಕಲ್ಪಗಳಿಂದ ೧ ಚತುರ್ಯುಗ?) ಇನ್ನಂದು ಪಾಠ ; ೪ ಯುಗ =೪೩,೨೦,೦೦೦ವರ್ಷ ೭೧ ಮನು-ಮಹಾಯುಗ, ೧೪ ಮನು ಅಥವಾ ೯೯೪ಮಹಾಯುಗ -ಬ್ರಹ್ಮನ ೧ದಿನ ; ೧೪ ಮನುಗಳ ಆರಂಭ,ಸೇರಿ ಸಂದಿ ಕಾಲ- ಯುಗ ೧೫,
- ೬ ಮಹಾಯುಗದ ವರುಷ ಸಂಖ್ಯೆ. ಈ ೬ ಮಹಾಯುಗಗಳನ್ನು (ಸಂಧಿಯುಗ)sಕೂಡಿಸಿದರೆ ೧೦೦೦ಮಹಾಯುಗ ಆಗುವುದು.; ಇದಕ್ಕೆ ಕಲ್ಪ ವೆಂದು ಸಂಜ್ಞೆ.
ಕಲಿಯುಗ
[ಬದಲಾಯಿಸಿ]- ೨೮ ನೇ ಮಹಾಯುಗದಲ್ಲಿ ೩ ಯುಗ ಮುಗಿದಿದೆ, ಕಲಿಯುಗದಲ್ಲಿ ೩೧೭೯ ವರ್ಷ ಶಕೆಯ ಪ್ರಾರಂಭ ಕಾಲಕ್ಕೆ ಮುಗಿದಿದೆ (?)(ಕ್ರಿ.ಶ. ೨೦೦೯)
- ೬ ಮನ್ವಂತರದ ಕಾಲ = ೧೮೪,೦೩,೨೦,೦೦೦ ವರ್ಷ.
- ೬ ಮನ್ವಂತರದ ಸಂಧಿಯಿಂದ ಬರುವ
- ೭ಕೃತಯುಗದ ವರ್ಷಗಳು = ೧,೨೦,೯೬,೦೦೦ ,,
- ೭ ನೇ ಮನು ಗತ ೨೭ಮಹಾಯುಗಗಳ ವರ್ಷ =೧೧,೬೪೪೦.,೦೦೦ ,, *
- ೨೮ ನೆ ಮಹಾಯುಗದ ೩ ಚರಣ = ೩೮,೮೮,೦೦೦ ,,*
- ಕಲಿಯುಗದ ಶಾಲಿವಾಹನ ಶತಾಬ್ದಿಗೆ ಸಂದ ವರ್ಷ = ೩,೧೭೯ ,,
- ೨೦
೦೯ಮಾರ್ಚಿ೩೧ (ಯುಗಾದಿಗೆ) ಕ್ಕೆ ಶಾಲಿವಾಹನ ಶಕ ಗತ = ೧೯೩೧
- ( ಸಪ್ತರ್ಷಿ ಮಂಡಲವು ಮಖಾನಕ್ಷತ್ರದಲ್ಲಿ ಇರುವಾಗ ಕಲಿಯುಗ ಪ್ರಾರಂಭ
- ಈ ಶ್ವೇತ ವರಾಹ ಕಲ್ಪ ದಲ್ಲಿ ಗತಿಸಿದ ವರ್ಷ ಶಕಾರಂಭಕ್ಕೆ = ೧೯೭,೨೯,೪೭,೧೭೯ ವರ್ಷ
- ೨೦೦೯ ಮಾರ್ಚಿ ೨೮ಕ್ಕೆ + ೧೯೩೧ಗತ ಶಕ=೧೯೭,೨೯,೪೯,೧೧ ೦ ವರ್ಷ
- ೨೦೦೯ ಮಾರ್ಚಿ ೨೮ ಕ್ಕೆ + ೬೨ = ೧೯೭,೨೬,೪೯,೧೧೦ ವರ್ಷಗಳು
- ಸಂದುಹೋದ ಮನುಗಳು:
- ೧. ನೇ ಮನು ಸ್ವಾಯಂಭುವ ೭೧ಮಹಾಯುಗ: ೩೦,೬೭,೨೦,೦೦೦ ವರ್ಷ
- ೨. ನೇ ಮನು ಸ್ವಾರೋಚಷ, ,, : ,,
- ೩. ನೇ ಮನು ಉತ್ತಮ, ,, : ,,
- ೪. ನೇ ಮನು ತಾಮಸ ,, : ,,
- ೫. ನೇ ಮನು ರೈವತ ,, : ,,
- ೬. ನೇ ಮನು ಚಾಕ್ಷುಷ ,, : ,,
- ೭. ನೇ ಮನು ವೈವಸ್ವತ ಗತ ೨೭ಮಹಾಯುಗ,೩ಯುಗ, * ಗತ ವರ್ಷ
- ಇವನ ನಂತರ ಸಾವರ್ಣಿ, ಭೌತ್ಯ, ರೌಚ, ಬ್ರಹ್ಮ ಸಾವರ್ಣಿ, ರುದ್ರ ಸಾವರ್ಣಿ, ಮೇರು ಸಾವರ್ಣಿ, ದಕ್ಷ ಸಾವರ್ಣಿ ಏಳು ಮನ್ವಂತರಗಳು ಬರಲಿವೆ.
ಒಟ್ಟು ೧೪ ಮನುಗಳಿಗೆ ೪೩೨,೦೦,೦೦,೦೦೦ ವರ್ಷ, ಇದು ಬ್ರಹ್ಮನ ೧೦೦ ವರ್ಷ ಆಯುಷ್ಯ .. (ಎಲ್ಲಾ ಗ್ರ ಹಗಳೂ ಅಶ್ವಿನಿಯ ಆದಿ ಬಿಂದುವಿನಲ್ಲಿ ದ್ದಾಗ ಕಲ್ಪ ಆರಂಭ.)
- ಇನ್ನೊಂದು ಪಾಠ
- ೧ ಕಲ್ಪ = ೪ಯುಗ :
- ಬ್ರಹ್ಮನ ೧ ಹಗಲು ; ಬ್ರಹ್ಮನ ೧ರಾತ್ರಿ ಯೂ ೪ ಯುಗ-ಪ್ರಳಯಕಾಲ. ಮಾನವನ ೧ ಸೌರ ವರ್ಷ, ದೇವತೆಗಳ ೧ದಿನ- ೧ಹಗಲು ಮತ್ತು ೧ರಾತ್ರಿ,ಇಂತಹ ೧೨ಸಾವರ ವರ್ಷಗಳಿಗೆ ೧ದೇವಯುಗ, ಮನುಷ್ಯರ ಚತುರ್ಯುಗ. (ಭಾಗವತ)
೭೧ ಚತುರ್ ಯುಗಗಳು =೧ ಮನ್ವಂತರ ೪೩,೨೩ಸಾವಿರಘಿ೭೧ =೩೦,೯೩,೩೩,೦೦೦ವರ್ಷಗಳು (ಮನ್ವಂತರ : ೩೦,೬೭,೨೦,೦೦೦ ವರ್ಷ ? )
ಏಳನೆಯ ಮನು ವೈವಸ್ವತ ಮನು.
[ಬದಲಾಯಿಸಿ]- ಏಳನೆಯ ಮನು ವೈವಸ್ವತ ಮನು.
- ಹಿಂದಿನ ಆರು ಮನುಗಳ ಕಾಲ : ೩೦,೬೯,೩೩,೦೦೦ ಘಿ೬ = ೧೮೪,೧೫,,೯೮,೦೦೦ ವರ್ಷಗಳು
- ೨೭ ಗತ ಮಹಾಯುಗ =೧೧,೬೬,೪೦,೦೦೦ ವರ್ಷ
- ಸಂಧಿ ಕಾಲದ ಯುಗಗಳನ್ನು ಬಿಟ್ಟಿದೆ *
- ೩ಯುಗಗಳು = + ೩೮,೮೮,೦೦೦
- ಕಲಿಯುಗ ಗತ = ೫೧೧೨ (ಕ್ರಿ. ಶ.೨೦೧೧-೨೦೧೨)
- ಒಟ್ಟು * = ೧೯೬,೨೧,೩೧,೧೦೯ ವರ್ಷ
- ಪಂಚಾಂಗ (ಧಾರ್ಮಿಕ) = ೧೯೫,೫೮,೮೫,೧೧೨ ,,
- ಜ್ಯೋತಿರ್ಗನ್ನಡಿ ಲೆಕ್ಕ = ೧೯೭,೨೯,೪೯,೧೧೦ ,,(ಕ್ರಿ. ಶ.೧೯೫೫)
- ವಿಜ್ಞಾನಿಗಳ ಲೆಕ್ಕ = ವಿಶ್ವ ಸೃಷ್ಟಿ ಯಾಗಿ ಸುಮಾರು (ಹಬಲ್) ೧೩೭೦-೨೦೦೦ ಕೋಟಿ ವರ್ಷ; ಸೂರ್ಯ ಮಂಡಲ ಸೃಷ್ಟಿ ಅಥವಾ ಭೂಮಿಯ ವಯಸ್ಸು -೪೬೫ಕೋಟಿ ವರ್ಷ (ಭೂಮಿಕಲ್ಲಿನ ರೇಡಿಯೇಶನ್ ಲೆಕ್ಕ - ಸೃಷ್ಟಿ ಮತ್ತು ವಿಜ್ಞಾನ)
ಮಾರ್ಕಾಂಡೇಯ ಮುನಿಗಳ ಲೆಕ್ಕ
[ಬದಲಾಯಿಸಿ]- ಮಹಾಭಾರತದಲ್ಲಿ ಅರಣ್ಯಪರ್ವ ೧೮೮ನೇ ಅಧ್ಯಾಯ ಮಾರ್ಕಾಂಡೇಯ ಸಮಸ್ಯಾಪರ್ವ (ಭಾರತ ಪ್ರಕಾಶನ ಪುಟ ೩೧೬೮)
- ಮಾರ್ಕಾಂಡೇಯ ಮುನಿಗಳು ಧರ್ಮರಾಯನಿಗೆ ಹೇಳಿದ್ದು :
- ೧. ಕೃತಯುಗ ೪೦೦೦ ವರ್ಷಗಳು.
- ೪೦೦ ವರ್ಷಗಳು ಆದಿ ಸಂಧಿ ಕಾಲ
- ೪೦೦ ವರ್ಷಗಳು ಅಂತ್ಯ ಸಂಧಿ ಕಾಲ
- ಒಟ್ಟು ೪೮೦೦ ವರ್ಷಗಳು
- ೨. ತ್ರೇತಾ ಯುಗ ೩೦೦೦ ವರ್ಷಗಳು
- ೩೦೦ ವರ್ಷಗಳು ಆದಿ ಸಂಧಿ ಕಾಲ
- ೩೦೦ ವರ್ಷಗಳು ಆದಿ ಸಂಧಿ ಕಾಲ.
- ೩. ದ್ವಾಪರ ಯುಗ ೨೦೦೦ ವರ್ಷಗಳು
- ೨೦೦ ವರ್ಷಗಳು ಆದಿ ಸಂಧಿ ಕಾಲ
- ೨೦೦ ವರ್ಷಗಳು ಆದಿ ಸಂಧಿ ಕಾಲ
- ಒಟ್ಟು ೨೪೦೦ ವರ್ಷಗಳು
- ೪.ಕಲಿಯುಗ ೧೦೦೦ ವರ್ಷಗಳು
- ೧೦೦ ವರ್ಷಗಳು ಆದಿ ಸಂಧಿ ಕಾಲ
- ೧೦೦ ವರ್ಷಗಳು ಆದಿ ಸಂಧಿ ಕಾಲ
- ಒಟ್ಟು ೧೨೦೦ ವರ್ಷಗಳು
- ಒಟ್ಟು ನಾಲ್ಕು ಯುಗಗಳಿಂದ ೧೨೦೦೦ ವರ್ಷಗಳು.
- ೧೦೦೦ ಯುಗಚಕ್ರ ಗಳಿಗೆ ಬ್ರಹ್ಮನ ೧ ಹಗಲು =೧,೨೦,೦೦,೦೦೦ವರ್ಷ
- ಆಗ ಅಖಂಡ ಬ್ರಹ್ಮಾಂಡವು ಬ್ರಹ್ಮನಲ್ಲಿ ಐಕ್ಯ ವಾಗುವುದು. ಸಂವರ್ತಕ ವೆಂಬ ಅಗ್ನಿಯು ಎಲ್ಲವನ್ನೂ ಭಸ್ಮ ಮಾಡುವುದು. ಪುನಃ
ಬ್ರಹ್ಮನ ಹಗಲು ಪ್ರಾರಂಭವಾದಾಗ ಮೊದಲಿನಂತೆ ಎಲ್ಲಾ ಸೃಷ್ಟಿ ಯಾಗುವುದು.
ಮೈಸೂರು ಪಂಚಾಂಗ ರೀತಿ :
[ಬದಲಾಯಿಸಿ]- 2009 ಮಾರ್ಚಿ ಗೆ,
- ಕಲ್ಪಾದಿಗತ 197,29,49,110 ವರ್ಷಗಳು.
- ಜಗತ್ ಸೃಷ್ಟ್ಯಾದಿ ಗತ 195,58,85,210 ,,
- ಸ್ವಾಯಂಭು ಮನು ಗತಾಬ್ದ 166,45,01,110 ,,
- ವೈವಸ್ವತ ಮನು ಗತಾಬ್ದ 186,18,850 ,,
- ಕಲಿಯುಗ ಗತ 5110 ,,
- ಶಾಲಿವಾಹನ ಗತ 1931
ಸೃಷ್ಟಿ.ಯ ಹಂತಗಳು
[ಬದಲಾಯಿಸಿ]- ೧ನೇ ಹಂತ ಮೂಲ ಚೇತನದ ಬಯಕೆ.
- ೨ನೇ ಹಂತ ಋಷಿಗಳು ಮತ್ತುದೇವತೆಗಳ ಸೃಷ್ಟಿ.
- ೩ನೇ ಹಂತ ಕಶ್ಯಪ ಮತ್ತು ದಕ್ಷನ ಪುತ್ರಿಯರಿಂದ ಇತರದೇವತೆಗಳ ಸೃಷ್ಟಿ.
- ೪ನೇ ಹಂತ ಕಶ್ಯಪನ ಪತ್ನಿಯರಿಂದ ಮಾನವರು ಮತ್ತು ಪಶು ಪಕ್ಷಿಗಳ ಸೃಷ್ಟಿ.
- ೫. ಕಲ್ಪ ಯುಗಗಳು ಮನ್ವಂತರಗಳು
- ೬.ಪ್ರಳಯ ಪನರ್ ಸೃಷ್ಟಿ.
- ೭.ಕಾಲ ಗಣನೆ
ನೋಡಿ
[ಬದಲಾಯಿಸಿ]- ವಿಕಿಪೀಡಿಯಾ 'ಬಿಗ್ ಬ್ಯಾಂಗ್' 'ಆರಿಜನ್ ಆಫ್ ಯೂನಿವರ್ಸ್' ಇಂಗ್ಲಿಷ್.
ಸೃಷ್ಟಿ ಸೆಮೆಟಿಕ್ ಪುರಾಣ; ಸೃಷ್ಟಿ ಮತ್ತು ಗ್ರೀಕ್ ಪುರಾಣ; ಸೃಷ್ಟಿ ಮತ್ತು ಮಹಾಭಾರತ; ಸೃಷ್ಟಿ ಮತ್ತು ಬೈಬಲ್; ಸೃಷ್ಟಿ ಮತ್ತು ಕುರಾನ್; ಸೃಷ್ಟಿ ಸಾಂಖ್ಯ ಮತ್ತು ಯೋಗ ಮಹಾಭಾರತದಲ್ಲಿ; ಸೃಷ್ಟಿ ಮತ್ತು ವೇದ- ಪುರುಷ ಸೂಕ್ತ ಋಗ್ವೇದ ಯಜುರ್ವೇದ; ಸೃಷ್ಟಿ ಮತ್ತು ಯೋಗ ದರ್ಶನ; ಸೃಷ್ಟಿ ಮತ್ತು ಸಾಂಖ್ಯ ದರ್ಶನ; ಸೃಷ್ಟಿ ಮತ್ತು ವೇದಾಂತ ಅದ್ವೈತ; ಸೃಷ್ಟಿ ಮತ್ತು ಉಪನಿಷತ್; ಸೃಷ್ಟಿ ಮತ್ತು ವಿಜ್ಞಾನ; ಗ್ರೀಕ್ ಪುರಾಣ;ಗ್ರೀಕ್ ಪುರಾಣ ಕಥೆ