ವಿಷಯಕ್ಕೆ ಹೋಗು

ಆಸ್ತೀಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಸ್ತೀಕ ಹೆಸರಿನವರು ಭಾರತದ ಪುರಾಣ ಪರಂಪರೆಯಲ್ಲಿ ಇಬ್ಬರು.

  1. ಸರ್ಪರಾಜನಾದ ವಾಸುಕಿಯ ತಂಗಿ ಜರತ್ಕಾರು ಎಂಬುವಳ ಮಗ. ಸರ್ಪಯಾಗವನ್ನು ಕೈಗೊಂಡ ಜನಮೇಜಯನಿಂದ ಸರ್ಪಗಳಿಗೆ ಅಭಯಪ್ರದಾನ ಮಾಡಿಸಿದ ನೆಂದು ಮಹಾಭಾರತ ಹಾಗೂ ದೇವೀಭಾಗವತದಲ್ಲಿ ಉಲ್ಲೇಖವಿದೆ.
  2. ಒಬ್ಬ ಗಂಧರ್ವ. ನಂದನವನದಲ್ಲಿ ತನ್ನ ಪತ್ನಿಯರೊಂದಿಗೆ ವಿಹಾರಗೈಯುತ್ತಿರುವಾಗ ಹತ್ತಿರದಲ್ಲೇ ತಪಸ್ಸು ಮಾಡುತ್ತಿದ್ದ ರೋಮಶ ಮುನಿಯ ಮೇಲೆ ಮುತ್ತಿನ ಸರಗಳನ್ನೂ ಮಲ್ಲಿಗೆ ಹೂಗಳನ್ನೂ ಎರಚುತ್ತಾನೆ. ಇದರಿಂದ ತಪಸ್ಸಿನಿಂದ ಎಚ್ಚೆತ್ತ ಮುನಿ ಉದ್ವಿಗ್ನನಾಗಿ ಗಂಧರ್ವನನ್ನು ಉದ್ದೇಶಿಸಿ ಬ್ರಹ್ಮರಾಕ್ಷಸನಾಗಿ ಆಲದ ಮರದ ಕೆಳಗೆ ಜನಿಸೆಂದು ಶಾಪವೀಯುತ್ತಾನೆ. ಶಾಪದಿಂದ ಖಿನ್ನನಾದ ಆಸ್ತೀಕ ಅಭಯವನ್ನು ಬೇಡಿದಾಗ ಮುನಿ ಶಾಪವಿಮೋಚನಾ ಮಾರ್ಗವನ್ನೂ ಸೂಚಿಸುತ್ತಾನೆ. ಅದರಂತೆ ಮುಂದೆ ವಿಷ್ಣುಭಕ್ತನಾದ ಸುಮೇಧನೆಂಬ ಬ್ರಾಹ್ಮಣನಿಂದ ತುಲಸೀ ಮಹಿಮೆಯನ್ನು ಕೇಳಿ ಗಂಧರ್ವ ಶಾಪವಿಮೋಚನೆ ಪಡೆಯುತ್ತಾನೆಂದು ಸ್ಕಾಂದ ಪುರಾಣದಲ್ಲಿ ಹೇಳಿದೆ.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಆಸ್ತೀಕ&oldid=1182867" ಇಂದ ಪಡೆಯಲ್ಪಟ್ಟಿದೆ