ವಿಷಯಕ್ಕೆ ಹೋಗು

ದೇವಿ ಭಾಗವತಪುರಾಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀಮದ್ ದೇವಿ ಭಾಗವತಮ್ ಮತ್ತು ದೇವಿ ಭಾಗವತಮ್ ಎಂದೂ ಪರಿಚಿತವಿರುವ ದೇವಿ ಭಾಗವತಪುರಾಣ ಹಿಂದೂ ಸಾಹಿತ್ಯದ ಪುರಾಣ ಪ್ರಕಾರಕ್ಕೆ ಸೇರಿದ ಒಂದು ಸಂಸ್ಕೃತ ಪಠ್ಯ.[೧] ಈ ಪಠ್ಯವನ್ನು ಭಾರತದ ಕೆಲವು ಭಾಗಗಳಲ್ಲಿ ಮಹಾಪುರಾಣ ಎಂದು ಪರಿಗಣಿಸಲಾದರೆ, ಇತರರು ಅದನ್ನು ಉಪಪುರಾಣಗಳಲ್ಲಿ ಒಂದು ಎಂದು ಸೇರಿಸುತ್ತಾರೆ, ಆದರೆ ಎಲ್ಲ ಸಂಪ್ರದಾಯಗಳು ಅದನ್ನು ಒಂದು ಪ್ರಮುಖ ಪುರಾಣ ಎಂದು ಪರಿಗಣಿಸುತ್ತಾರೆ.

ಈ ಪಠ್ಯವು ೩೧೮ ಅಧ್ಯಾಯಗಳಿರುವ ಹನ್ನೆರಡು ಸ್ಕಂಧಗಳನ್ನು (ವಿಭಾಗಗಳು) ಹೊಂದಿದೆ.[೨] ದೇವಿ ಮಾಹಾತ್ಮ್ಯದ ಜೊತೆಗೆ, ಅದು ಶಾಕ್ತ ಪಂಥದಲ್ಲಿನ ಅತ್ಯಂತ ಪ್ರಮುಖ ಕೃತಿಗಳಲ್ಲಿ ಒಂದು. ಶಾಕ್ತ ಪಂಥವು ದೇವಿ ಅಥವಾ ಶಕ್ತಿಯನ್ನು ಬ್ರಹ್ಮಾಂಡದ ಆದಿಸ್ವರೂಪದ ಸೃಷ್ಟಿಕರ್ತೆ ಮತ್ತು ಬ್ರಹ್ಮನ್ ಆಗಿ ಪೂಜಿಸುವ ಹಿಂದೂ ಧರ್ಮದಲ್ಲಿನ ಒಂದು ಸಂಪ್ರದಾಯ. ಇದು ದೈವಿಕ ಸ್ತ್ರೀರೂಪವನ್ನು ಎಲ್ಲ ಅಸ್ತಿತ್ವದ ಮೂಲ, ಸೃಷ್ಟಿಕರ್ತೆ, ಸಂರಕ್ಷಕಿ ಮತ್ತು ಎಲ್ಲದರ ವಿನಾಶಕಿ, ಜೊತೆಗೆ ಅಧ್ಯಾತ್ಮಿಕ ವಿಮೋಚನೆಯನ್ನು ಸಬಲೀಕರಿಸುವವಳು ಎಂದು ಕೊಂಡಾಡುತ್ತದೆ. ಹಿಂದೂ ಧರ್ಮದ ಎಲ್ಲ ಮುಖ್ಯ ಪುರಾಣಗಳು ದೇವಿಯನ್ನು ಹೆಸರಿಸಿ ಪೂಜಿಸುತ್ತಾವಾದರೂ, ಈ ಪಠ್ಯ ಪ್ರಧಾನ ದೈವಿಕತೆಯಾಗಿ ಅವಳ ಸುತ್ತ ಕೇಂದ್ರಿತವಾಗಿದೆ. ಅದ್ವೈತ ವೇದಾಂತ ಶೈಲಿಯ ಏಕತತ್ವವಾದದ ಜೊತೆಗೆ ಸೇರಿರುವ ಶಕ್ತಿಯ ಭಕ್ತಿ ಆರಾಧನೆ ಈ ಪಠ್ಯದ ಆಧಾರವಾಗಿರುವ ತತ್ತ್ವಶಾಸ್ತ್ರ.

ದೇವಿ ಭಾಗವತ ಪುರಾಣದ ಕಾಲಮಾನವನ್ನು ವೈವಿಧ್ಯಮಯವಾಗಿ ನಿರ್ಧರಿಸಲಾಗಿದೆ. ಕೆಲವು ವಿದ್ವಾಂಸರು ಒಂದು ಮುಂಚಿನ ಕಾಲಮಾನವನ್ನು ಸೂಚಿಸಿದ್ದಾರೆ, ಅಂದರೆ ಕ್ರಿ.ಶ. ೬ನೇ ಶತಮಾನಕ್ಕಿಂತ ಮೊದಲು. ಆದರೆ, ಇದಕ್ಕೆ ಅಷ್ಟು ವ್ಯಾಪಕ ಬೆಂಬಲ ಸಿಕ್ಕಿಲ್ಲ, ಮತ್ತು ಬಹುತೇಕ ವಿದ್ವಾಂಸರು ಇದರ ಕಾಲಮಾನ ೯ ರಿಂದ ೧೪ ನೇ ಶತಮಾನದ ನಡುವೆ ಎಂದು ನಿರ್ಧರಿಸಿದ್ದಾರೆ.

ದೇವಿ ಭಾಗವತಪುರಾಣವು ದೈವಿಕ ಸ್ತ್ರೀರೂಪವನ್ನು ಕೊಂಡಾಡುವ ಅತ್ಯಂತ ಮುಂಚಿನ ಭಾರತೀಯ ಪಠ್ಯವಲ್ಲ, ೬ನೇ ಶತಮಾನದ ದೇವಿ ಮಾಹಾತ್ಮ್ಯ ದೇವಿಯನ್ನು ಪರಮೋನ್ನತವೆಂದು ಪ್ರತಿಪಾದಿಸುತ್ತದೆ, ಮತ್ತು ದೈವಿಕ ಸ್ತ್ರೀರೂಪದ ಪರಿಕಲ್ಪನೆ ಕ್ರಿ.ಶ. ೨ನೇ ಶತಮಾನದ ವೇಳೆಗೆ ಅಸ್ತಿತ್ವದಲ್ಲಿತ್ತೆಂದು ಭಾರತದ ವಿಭಿನ್ನ ಭಾಗಗಳಲ್ಲಿನ ಹಲವು ಪುರಾತತ್ವ ಸಾಕ್ಷ್ಯಾಧಾರಗಳು ಸೂಚಿಸುತ್ತವೆ.

ಈ ಪಠ್ಯದಲ್ಲಿನ ಬ್ರಹ್ಮವಿದ್ಯೆಯು ಪೌರಾಣಿಕ ಕಥೆಗಳು, ತತ್ವಮೀಮಾಂಸೆ ಮತ್ತು ಭಕ್ತಿಯ ವಿಸ್ತಾರವಾದ ಮಿಶ್ರಣ. ಕಥೆಗಳು ಇತರ ಪುರಾಣಗಳಲ್ಲಿ ಕಂಡುಬರುವ ಪ್ರಕಾರದ್ದೇ ಆಗಿವೆ, ಒಳ್ಳೇದು ಮತ್ತು ಕೆಟ್ಟದ್ದರ ನಡುವಿನ ಸಂಘರ್ಷದ ನಿರಂತರ ಚಕ್ರದ ಬಗ್ಗೆ, ದೇವತೆಗಳು ಮತ್ತು ರಾಕ್ಷಸರ ಬಗ್ಗೆ.

ಉಲ್ಲೇಖಗಳು

[ಬದಲಾಯಿಸಿ]
  1. Dalal 2014, p. 117.
  2. Rocher 1986, p. 168.