ಧನಂಜಯ ಹೆಗಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಧನಂಜಯರ, ತಂದೆ ಜಿ.ಎಸ್.ಹೆಗಡೆ, ತಾಯಿ ಗೀತಾ ಹೆಗಡೆ. ಸಂಗೀತ ಬೋಧಕಿ, ಅತ್ಯುತ್ತಮ ಗಾಯಕಿ. ತಂದೆಯವರು ಕಾಲೇಜಿನ ದಿನಗಳಲ್ಲಿ 'ತಬಲಾ ವಾದ್ಯ'ಕ್ಕೆ ಮನಸೋತಿದ್ದರು. ಕೆರೆಮನೆ ಕುಟುಂಬದಿಂದ ಬಾಲ್ಯದಲ್ಲೇ ಸ್ವರ ತಾಳ, ನಾಟ್ಯ,ಮತ್ತು ಅಭಿನಯದ ನಂಟು. ಹೀಗೆ, ಧನಂಜಯ, ನಾದಲೋಕದಲ್ಲಿ ಅರಳಿದ ಪ್ರತಿಭೆ. ೧೨ ವರ್ಷದ ಪ್ರಾಯದಲ್ಲೇ 'ಕಲ್ಕತ್ತಾ ನಗರದಲ್ಲಿ ಜರುಗಿದ ಸಂಗೀತ ಸಂಶೋಧನಾ ಸಂಸ್ಥೆ'ಯಲ್ಲಿ, ಪಂ. ಉಲ್ಲಾಸ್ ಕಶಾಲ್ಕರ್,ಅಜಯ್ ಚಕ್ರವರ್ತಿ, ಪಂ. ವಿ.ಜಿ.ಜೋಗ್, ಮಷ್ಕುರ್ ಆಲಿ ಖಾನ್, ವಿದುಷಿ.ಗಿರಿಜಾದೇವಿ ಮೊದಲಾದ ಶಾಸ್ತ್ರೀಯ ಸಂಗೀತ ಶಾಸ್ತ್ರದ ದಿಗ್ಗಜರ ಸಹವಾಸದಲ್ಲಿ ಹಾಡಲು ಅವಕಾಶ ದೊರೆಯಿತು.

ಜನನ[ಬದಲಾಯಿಸಿ]

ಉತ್ತರ ಕರ್ನಾಟಕ ಜಿಲ್ಲೆಯ ಹೊನ್ನಾವರದ ಗುಣವಂತೆಯಲ್ಲಿ ಜನಿಸಿದರು. ತಂದೆ ಬ್ಯಾಂಕ್ ಅಧಿಕಾರಿ. ವರ್ಗವಾದಾಗಲ್ಲೆಲ್ಲಾ ಚಾಚೂ ತಪ್ಪದೆ ಸಂಗೀತ ಪಾಠವನ್ನು ನಡೆಸಿಕೊಂಡು ಬಂದರು. ಶಾಲಾ ದಿನಗಳಲ್ಲಿ ಅನೇಕ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಬಹುಮಾನ ಗಳಿಸಿದ್ದರು. ಮನೆಯಲ್ಲಿ ತಾಯಿಯಿಂದ ಶುರುವಾದ ಸಂಗೀತ ಕಲಿಕೆ ಪಂಡಿತ್ ವಿನಾಯಕ್ ತೊರವಿ ಯವರ ಮಾರ್ಗದರ್ಶನದಲ್ಲಿ ಮುಂದುವರೆಯಿತು. ಸಂಗೀತ, ಹಾಡುಗಾರಿಕೆ, ಕಲಿಕೆ ಮೊದಲಾದ ವಿಚಾರಗಳ ಬಗ್ಗೆ ಇದ್ದ ನಿಲುವುಗಳು ತೊರವೆಯವರ ಶಿಕ್ಷಣಪದ್ಧತಿಯಲ್ಲಿ ಹಲವು ಬದಲಾವಣೆಗಳನ್ನು ಕಂಡವು.

ಬೆಂಗಳೂರಿನಲ್ಲಿ[ಬದಲಾಯಿಸಿ]

ಬೆಂಗಳೂರಿನಲ್ಲಿ ತೊರವೆಯರ ಸಂಗಡ ಸುಮಾರು ೧೪ ವರ್ಷಗಳ ಕಾಲ, ಗುರುಕುಲ (೧೯೮೯ ರಿಂದ) ಪದ್ಧತಿಯ ವ್ಯಾಸಂಗ, ಗುರುಗಳ ಜೊತೆ ಒಡನಾಟ, ದೇಶವಿದೇಶಗಳಲ್ಲಿ ಪ್ರವಾಸ, ಸಹಗಾಯನಗಳು 'ಧನಂಜಯ'ರ ವ್ಯಕ್ತಿತ್ವವನ್ನು ನಿಖಾರಿಸಿದವು. ಗುರುಗಳ ಅಣತಿಯಂತೆ, ೧೦ ವರ್ಷ ಸಾರ್ವಜನಿಕ ಕಾರ್ಯಕ್ರಮ ಕೊಟ್ಟಿರಲಿಲ್ಲ. ಕಿರಾಣ ಘರಾನೆಯ ಪಂ.ಭೀಮಸೇನ ಜೋಶಿ, ಗ್ವಾಲಿಯರ್ ಘರಾನೆಯ ಪಂ. ಉಲ್ಲಾಸ್ ಕಶಾಲ್ಕರ್ ವ್ಯಕ್ತಿತ್ವಕ್ಕೆ ಮಾರುಹೋಗಿದ್ದರು. ಲಯ ಹಾಗೂ ತಾಳದ ಮೇಲಿನ ಹಿಡಿತ. ಯಾವಾಗಲೂ ಅಪ್ಪಟ ಸ್ವಂತಿಕೆಯ ಪ್ರಯತ್ನ. ಎರಡುಘರಾನಗಳ ಮಿಶ್ರಣಮಾಡಿ, ಅದರಲ್ಲಿ ಸಾಧನೆಯನ್ನು ಮಾಡಲು ಸದಾ ಪ್ರಯತ್ನಿಸುತ್ತಿದ್ದಾರೆ. ಧನಂಜಯರವರ ಪ್ರೀತಿಯ ರಾಗಗಳು, ಯಮನ್, ಪೂರಿಯಾ, ಮಿಯಾ ಕಿ ತೋಡಿ, ಮಿಯಾ ಕಿ ಮಲ್ಹಾರ್, ಭಾಗೇಶ್ರೀ ಇತ್ಯಾದಿ ಪಾರಂಪರಿಕ ರಾಗಗಳು.

ಮುಂಬೈನಗರದಲ್ಲಿ[ಬದಲಾಯಿಸಿ]

ಕಳೆದ ೮ ವರ್ಷಗಳಿಂದ ಮುಂಬೈನಲ್ಲಿ ನೆಲಸಿ, ಕರ್ನಾಟಕ ಬ್ಯಾಂಕ್ ಶಾಖಾ ವ್ಯವಸ್ಥಾಪಕರಾಗಿರುವ ಧನಂಜಯ್ ದೇಶ ವಿದೇಶಗಳಲ್ಲಿ ಹಲವಾರು 'ಸಂಗೀತ ಕಚೇರಿ'ಗಳನ್ನು ಕೊಟ್ಟಿದ್ದಾರೆ. ಪತ್ನಿ, ಪ್ರತಿಮಾ ಹೆಗಡೆ, ಸಂಗೀತಾರಾಧಕಿ. ೪ ವರ್ಷ ವಯಸ್ಸಿನ ಮಗ, ಸುಯೋಗ್ ತಂದೆಯವರಂತೆ ಸಂಗೀತದಲ್ಲಿ ಆಸಕ್ತ.

ಹೆಗಡೆ ಕುಟುಂಬಕ್ಕೆ ಸಂಗೀತವೇ ಉಸಿರು[ಬದಲಾಯಿಸಿ]

ತಮ್ಮ ಮನೆಗಳಿಗೆ ಸುಶ್ರಾವ್ಯ, ಹಾಗೂ ಸುಸ್ವರ ವೆಂದು ನಾಮಕರಣ ಮಾಡಿದ್ದಾರೆ. ಸಂಗೀತ ಶಾಸ್ತ್ರಕ್ಕೆ ಮುಡಿಪಾಗಿಟ್ಟಿರುವ ಸಂಸ್ಥೆಗೆ ಸಪ್ತಕ ವೆಂದು ಹೆಸರಿಟ್ಟಿದ್ದಾರೆ. 'ತಬಲಾವಾದಕ,ಜಿ.ಎಸ್.ಹೆಗಡೆ' ಸ್ಥಾಪಿಸಿರುವ ಸಪ್ತಕ, 'ಹಿಂದೂಸ್ಥಾನಿ ಸಂಗೀತ'ವನ್ನು ಬೆಳೆಸುತ್ತಿರುವ ಮತ್ತು ಅನೇಕಾನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿರುವ ಬಹುಮೂಲ್ಯ ಸಂಸ್ಥೆಯಾಗಿ ದುಡಿಯುತ್ತಿದೆ.

'ಸಪ್ತಕ', ೫೮,'ಸುಶ್ರಾವ್ಯ',೩ ನೆಯ ಮುಖ್ಯ ರಸ್ತೆ,ಮಿಲ್ಕ್ ಕಾಲೋನಿ,ಮಲ್ಲೇಶ್ವರಂ(ಪ),ಬೆಂಗಳೂರು-೫೬೦ ೦೫೫, ದೂರವಾಣಿ :೨೩೫೭೭೮೨೯

ಹೊರ ಸಂಪರ್ಕ[ಬದಲಾಯಿಸಿ]