ವಿಷಯಕ್ಕೆ ಹೋಗು

ಪ್ರವೀಣ್ ಗೋಡ್ಖಿಂಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


Pravin Godkhindi
ಪ್ರವೀಣ್ ಗೋಡಖಿಂಡಿ
Pravin Godkhindi performing for Laya Lavanya
ಹಿನ್ನೆಲೆ ಮಾಹಿತಿ
ಜನ್ಮನಾಮಪ್ರವೀನ ಗೋಡಖಿಂಡಿ
ಮೂಲಸ್ಥಳಧಾರವಾಡ, ಕರ್ನಾಟಕ
ಸಂಗೀತ ಶೈಲಿHindustani Classical Music & Light forms, Modern & Film Music
ವೃತ್ತಿಕೊಳಲು ವಾದಕ, Music Composer/Director
ಅಧೀಕೃತ ಜಾಲತಾಣhttp://www.pravingodkhindi.com
ಚಿತ್ರ:Praveen one.jpg
'ಪ್ರವೀಣ್ ಗೋಡ್ಖಿಂಡಿ'

ಟಿ.ವಿ.ಧಾರಾವಾಹಿ ಗಳಿಗೆ, ಬ್ಯಾಲೆ, ಚಲನಚಿತ್ರ, ಮತ್ತು ನಾಟಕಗಳಿಗೆ 'ಪ್ರವೀಣ್ ಗೋಡ್ಖಿಂಡಿ' ಯವರು ಸಂಗೀತ ಸಂಯೋಜನೆ,ಮಾಡುತ್ತಿದ್ದಾರೆ. ಅವರ 'ಫ್ಯೂಶನ್ ಆಲ್ಬಮ್‌ಗಳು ಪ್ರಸಿದ್ಧಿಗೆಬಂದಿವೆ. ರಾಗರಂಜಿನಿಯೆಂಬ ರಾಗದ ಆಧಾರದಮೇಲೆ ಪ್ರಾಯೋಜಿಸಿದ 'ಟೆಲೆವಿಶನ್ ಶೋ' ಎಲ್ಲರ ಗಮನ ಸೆಳೆಯಿತು. "ರಾಗ ರಂಗ್" ಕಾರ್ಯಕ್ರಮದಲ್ಲಿ ಸೆಕ್ಸೋಫೋನ್ ಕಲಾವಿದ ಕದ್ರಿ ಗೋಪಲನಾಥ್‌ರವರ ಜೊತೆಗೆ ನಡೆಸಿಕೊಟ್ಟ ಕಾರ್ಯಕ್ರಮ ೧೦ ವರ್ಷಗಳ ನಂತರವೂ ಅಷ್ಟೇ ಪ್ರಸಿದ್ಧವಾಗಿದೆ.

ಚಿತ್ರ:Praveen two.jpg
'ಪಂ.ಪ್ರವೀಣ್ ಗೋಡ್ಖಿಂಡಿ'

ಕಿರಾಣ ಘರಾನದ ಪದ್ಧತಿಯಲ್ಲಿ, ಹಿಂದೂಸ್ತಾನೀ ಪದ್ಧತಿಯಲ್ಲಿ 'ಸಂಗೀತ ಸರಸ್ವತಿಯ ಪದತಲದಲ್ಲಿ ಕೊಳಲನ್ನು ನುಡಿಸುವ ಅಪ್ರತಿಮ ಕನ್ನಡ ಕಲಾವಿದ ಪ್ರವೀಣ್ ಗೋಡ್ಖಿಂಡಿಯವರು. ಈಗಿನ ಕಾಲದ ಅತ್ಯಂತ ಬೇಡಿಕೆಯ 'ಫ್ಯೂಶನ್ ಮಿಶ್ರಿತ ಸಂಗೀತದಲ್ಲೂ' ಮಾಹಿರರಾಗಿದ್ದಾರೆ. ವೇಣುವಾದನವನ್ನು ಅಂತಾರಾಷ್ಟ್ರೀಯಮಟ್ಟದಲ್ಲಿ ಒಯ್ದು ಭಾರತವನ್ನು ಪ್ರತಿನಿಧಿಸುವ ಕೆಲವೇ ಎಳೆಯ ಕಲಾವಿದರಲ್ಲಿ ಅವರು ಮುಗಿಲೆತ್ತರದಲ್ಲಿ ನಿಲ್ಲುತ್ತಾರೆ. ಹಿಂದೂಸ್ತಾನಿ ಸಂಪ್ರದಾಯದ ಜೊತೆಗೆ ಇಂದಿನ ಯುಗದ ಫ್ಯೂಶನ್ ಸಂಗೀತವನ್ನು ಪ್ರಯೋಗದಲ್ಲಿ ತಂದಿದ್ದಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಸೋಲೊ ಕಾರ್ಯಕ್ರಮಗಳನ್ನು ಕೊಡುತ್ತಾ ಬಂದಿದ್ದಾರೆ. ಭಾರತೀಯ ಶಾಸ್ತ್ರೀಯ ಸಂಗೀತವನ್ನು ಜನಪ್ರಿಯಮಾಡುವ ನಿಟ್ಟಿನಲ್ಲಿ ಬಹಳವಾಗಿ ಶ್ರಮಿಸುತ್ತಿದ್ದಾರೆ.

ಬಾಲ್ಯ ಹಾಗೂ ಮನೆಯ ಪರಿಸರ

[ಬದಲಾಯಿಸಿ]

ತಂದೆ ಪಂಡಿತ ವೆಂಕಟೇಶ್ ಗೋಡ್ಖಿಂಡಿಯವರು ಧಾರವಾಡದ ಅಕಾಶವಾಣಿಯ ಎ-ಗ್ರೇಡ್ ಕಲಾವಿದರು. ಪ್ರವೀಣರಿಗೆ ಅವರೇ ಮೊದಲ ಗುರು. ಸಂಗೀತದ ರುಚಿ ಮತ್ತು ಸಂಗೀತದಲ್ಲಿ ಆಸಕ್ತಿಗಳು ತಂದೆಯವರ ಕಡೆಯಿಂದ ಬಂದ ಬಳುವಳಿಗಳು. ೩ ವರ್ಷದ ಬಾಲಕನಾಗಿರುವಾಗಲೇ ತಂದೆಯವರ ಮುಂದೆ ಕುಳಿತು ಸಂಗೀತವನ್ನು ಆಲಿಸುತ್ತಿದ್ದ ಅವರಿಗೆ ತಮ್ಮ ಅರಿವಿಲ್ಲದೆಯೇ ಸಂಗೀತದ ಮಾಧುರ್ಯಕ್ಕೆ ಮಾರುಹೋದರು. ಮುಂದೆ ಒಂದು ದಿನ ಅದೇ ವಲಯದಲ್ಲಿ ಹೆಸರಾದರು. ತಂದೆಯವರ ಸತತ ಪ್ರೋತ್ಸಾಹ ಮತ್ತು ತರಬೇತಿಗಳು ಅವರ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರಿ ನೆಲೆನಿಲ್ಲಲು ಸಹಾಯಮಾಡಿದವು. 'ಪ್ರವೀಣ್' ಆರಿಸಿಕೊಂಡ ವಿಷಯ ಎಲೆಕ್ಟ್ರಾನಿಕ್ಸ್. ಧಾರವಾಡದ ಎಸ್.ಡಿ.ಎಮ್ ಅಂಡ್ ಟೆಕ್ನೊಲೊಜಿ ಕಾಲೇಜ್‌ನ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ 'ಬಿ.ಇ. ಪದವಿ' ಗಳಿಸಿದರು .ಆದರೆ ಸಂಗೀತ ಅವರ ಜೀವನಾಡಿಯಾಗಿತ್ತು. ಕಲಿತ ಎಲೆಕ್ಟ್ರಾನಿಕ್ಸ್ ವಿಷಯ ಸಂಗೀತವಲಯವನ್ನು ವಿಸ್ತರಿಸಲು ಮತ್ತು ಅಂತಾರಾಷ್ಟ್ರೀಯಮಟ್ಟದಲ್ಲಿ ಸಾಗಲು ನೆರವಾಯಿತು.

ಕಿರಾಣ ಘರಾನದ ಗಾಯಕಿ

[ಬದಲಾಯಿಸಿ]

ತಂದೆಯವರ ಕಿರಾಣ ಘರಾನ ಪದ್ಧತಿಯ, ಸಂಗೀತದ ತಾಲೀಮಿನಲ್ಲಿ, ಬಾನ್ಸುರಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ನುಡಿಸಿಕೊಂಡು ಮುನ್ನುಗ್ಗಲು ಸಹಾಯವಾಯಿತು. ಸ್ವಂತ ಪರಿಶ್ರಮ ಹಾಗೂ ಸಾಧನೆಯಿಂದ ಸಂಗೀತದ ಹಲವು ಮಜಲುಗಳನ್ನು ಏರಿ, ಅವೆಲ್ಲವನ್ನೂ ತಮ್ಮದಾಗಿರಿಸಿಕೊಂಡರು. ’ಘಟಕಾರಿ’ ಮತ್ತು ’ತಂತ್ರಕಾರಿ’ ಎನ್ನುವ ಶೈಲಿಗಳನ್ನು ಅವರೇ ರೂಢಿಸಿಕೊಂಡು ಸರಾಗವಾಗಿ ಮುನ್ನುಗ್ಗಿದರು. 'ಬಾಸುರಿವಾದನದ' ಎಂದರೆ, ಉಸಿರನ್ನು ಪೂರ್ತಿಯಾಗಿ ತಮ್ಮ ಸುಪರ್ದಿನಲ್ಲಿಟ್ಟುಕೊಂಡು ರಾಗಗಳನ್ನು ವಿಸ್ತರಿಸುತ್ತಾ, ಲಯವನ್ನು ಕ್ರಮಬದ್ಧವಾಗಿ ಪ್ರಸ್ತುತಿಮಾಡಿ, 'ಲಯಕಾರಿ'ಯಲ್ಲಿ ನುಡಿಸುವ ಚಾಕಚಕ್ಯತೆಗಳೆನ್ನವನ್ನೂ ಚಾಚೂತಪ್ಪದೆ, ತಮ್ಮ ಕೈವಾಡವಾಗಿ ಮಾಡಿಕೊಂಡರು.

ಸಿನಿಮಾ ಹಾಗು ದಾರವಾಹಿಗಳಿಗೆ ಸಂಗೀತ ನಿರ್ದೇಶನ

[ಬದಲಾಯಿಸಿ]

ಭಾರತೀಯ ಸಿನೆಮಾಗಳು ಸಂಗೀತವಿಲ್ಲದೆ ಹೆಚ್ಚಾಗಿ ಓಡಲಾರವು. 'ಕ್ರಿಷ್ಣಾ ನೀ ಲೇಟಾಗಿ ಬಾರೋ' ಎನ್ನುವ ಅತ್ಯಂತ ಸುಪ್ರಸಿದ್ಧ 'ಪುರುಂದರದಾಸರ ದೇವರನಾಮದ ಶೀರ್ಶಿಕೆಯ ಸಿನಿಮಾ' ಕ್ಕೆ, ಅವರೇ ಸಂಗೀತ ನಿರ್ದೇಶನ ಮಾಡಿದ್ದಾರೆ. 'ಕೆ.ಎಸ್.ಎಲ್ ಸ್ವಾಮಿ' ನಿರ್ದೇಶನದ ಸಂಸ್ಕೃತ ಸಿನೆಮಾ, ’ಪ್ರಬೋಧ ಚಂದ್ರೋದಯ’, ಕ್ಕೂ ಪ್ರವೀಣರೇ ಸಂಗೀತ ನಿರ್ದೇಶನ ಮಾಡಿದರು. ಈ ಚಲನ ಚಿತ್ರದಲ್ಲಿ, ಒಟ್ಟು, ೧೦೮ ಶ್ಲೋಕಗಳಿವೆ. ಸನ್, ೨೦೧೧ ರ ಫೆಬ್ರುವರಿಯಲ್ಲಿ ಇದು ಬಿಡುಗಡೆಯಾಗಿದೆ. ಖ್ಯಾತ ನಿರ್ದೇಶಕರಾದ ಟಿ.ಎನ್.ಸೀತಾರಾಂರವರ ಮಹಾಪರ್ವಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗ ಕಾಲ ಬದಲಾಗಿದೆ. 'ಆನ್ ಲೈನ್' ನಲ್ಲಿ ಸಹಿತ, ಸಂಗೀತಾಸಕ್ತರು ಸಂಗೀತವನ್ನೂ ಕಲಿಯಲೂಬಹುದು, ಮುಂದೆಯೂ ಶಾಸ್ತ್ರೀಯ ಸಂಗೀತಕ್ಕೆ ಉಜ್ವಲ ಭವಿಷ್ಯವಿದೆ, ಎನ್ನುವ ನಿಲವು, 'ಗೋಡ್ಖಿಂಡಿ'ಯವರದು. ಸಂಗೀತ, ಹಿಂದೂಸ್ತಾನಿ ಸಂಗೀತ, ಬಾನ್ಸುರಿ ಮೊದಲಾದ ಸಂಗೀತ ಪ್ರಕಾರಗಳಿಗೆ ಅವರ, ವೆಬ್ ಸೈಟ್ ನ್ನು ಲಿಂಕಿಸಿ :

ವಿಶ್ವದ ಕೊಳಲು ವಾದಕರ ಸಮ್ಮೇಳನ

[ಬದಲಾಯಿಸಿ]

'ದಕ್ಷಿಣ ಅಮೆರಿಕದ ಕೊಳಲು ವಾದಕರ ಸಂಘ' ಸಂಘಟಿಸಿದ ೫ ದಿನಗಳ ಕೊಳಲು ಸಮ್ಮೇಳನದಲ್ಲಿ ವಿಶ್ವದ ವಿವಿಧ ದೇಶಗಳ ಒಟ್ಟು, '೧೨೫ ಬಾನ್ಸುರಿ ವಾದಕರು,' ತಮ್ಮ ಕಲೆಯ ಅನಾವರಣ ಮಾಡಿದರು, ಕೊನೆಯದಿನ ನಡೆದ 'ಗ್ರಾಂಡ್ ಫೈನಲ್' ನಲ್ಲಿದ್ದ ಬೆರಳೆಣೆಕೆಯ ಕಲಾವಿದರಲ್ಲಿ ಭಾರತವನ್ನು ಪ್ರತಿನಿಧಿಸಿದ, 'ಪ್ರವೀಣ್' ಸಹ ಒಬ್ಬರು. ೧೨೫ ವೇಣುವಾದಕರು, ಭಾಗವಹಿಸಿ ಕೊಟ್ಟ ಕಾರ್ಯಕ್ರಮ, ದಾಖಲೆಯನ್ನು ಸೃಷ್ಟಿಸಿತು. 'ಮೆಡಿಟೇಶನ್ ಮೂಡಿ' ನಲ್ಲಿ ಸುಮಾರು ೪೫ ನಿಮಿಷಗಳ ಕಾಲ 'ಯಮನ್ ರಾಗ'ದಲ್ಲಿ ನುಡಿಸಿ, ಪಾಶ್ಚಾತ್ಯ ಸಂಗೀತ ರಸಿಕರನ್ನು ಮಂತ್ರ ಮುಘ್ದರನ್ನಾಗಿಸಿದ 'ಹಿಂದೂಸ್ತಾನಿ ಶೈಲಿಯ ಗೀತೆಗಳನ್ನು ಬಾನ್ಸುರಿಯಲ್ಲಿ ನುಡಿಸಿದ ಶೈಲಿ, ಅಮೋಘವಾಗಿತ್ತು. ಅದನ್ನು ಮುಗಿಸುತ್ತಿದ್ದಂತೆಯೇ 'ಪಹಾಡಿರಾಗ ದ ಧುನ್.' ಡ್ರಮ್ಸ್, ಬೇಸ್ ಗಿಟಾರ್, ಪಿಯಾನೊ ನುಡಿಸಿದ ಜೊತೆ ಕಲಾಕಾರರು ಸೇರಿದಂತೆ, ಅಲ್ಲಿ ನೆರೆದಿದ್ದ ಎಲ್ಲರೂ ಭಾವುಕರಾದ ಸಂಗತಿ ಅನನ್ಯ. ಅದೊಂದು ಅವಿಸ್ಮರಣೀಯ ಭಾವನೆ. ಕೇವಲ ೨-೩ ನಿಮಿಷಗಳಲ್ಲಿ ಕೊನೆಗೊಳ್ಳುವ 'ಜಾಝ್' ಸಂಗೀತ ಕೇಳಿದ್ದ ಕೊಳಲು ವಾದಕರಿಗೆ ಅಪ್ಪಟ ಶುದ್ಧ-ಭಾರತೀಯ ಸಂಗೀತ ಬಹಳ ಮುದಕೊಟ್ಟಿತು. ಅರ್ಜೆಂಟೀನಾದಲ್ಲಿ,. ಬಾನ್ಸುರಿಯಲ್ಲಿ 'ಮೀಂಡ್ಸ್ ಗಮಕಗಳ ಪ್ರಯೋಗ', ರಾಗ ವೈವಿಧ್ಯತೆ, ಲಯವಾದ್ಯಗಳಲ್ಲಿ ನಿಖರತೆ, ಸ್ವರಶುದ್ಧಿ . ಪಾಶ್ಚಾತ್ಯರ ಕೊಳಲು,ಸೇರಿದಂತೆ, ಬೇರೆ ಯಾವುದೆ 'ಸುಷಿರ ವಾದ್ಯ'ಗಳಲ್ಲಿ ಇಲ್ಲದೇ ಇರುವ ಕಾರಣಕ್ಕಾಗಿ ಹಿಂದುಸ್ತಾನಿ ಶೈಲಿಯ ವೇಣುವಾದನ ವಿಶೇಷವಾಗಿ ಅಲ್ಲಿನ ಜನರನ್ನು ಅಕರ್ಷಿಸುತ್ತದೆ.

'ಜಾಝ್' 'ಸಂಗೀತ ಪದ್ಧತಿ'

[ಬದಲಾಯಿಸಿ]

ಪಾಶ್ಚಾತ್ಯರ 'ಜಾಝ್ ಪದ್ಧತಿ'ಯಲ್ಲಿ ಸಂಗೀತದ ಕಟ್ಟುಪಡುಗಳು ಇಲ್ಲ. ಕಲಾವಿದನಿಗೆ, ಸಾಕಷ್ಟು ಸ್ವಾತಂತ್ರ್ಯ ವಿದೆ. ಅಲ್ಲಿನ ಕಲಾವಿದರು, ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ನುಡಿಸುವ ಗೋಜಿಗೆ ಅವರು ಹೋಗದೆ, ತಮಗಿಷ್ಟ ಬಂದ ರೀತಿಯಲ್ಲಿ ಇಂಪಾಗಿ ನುಡಿಸುತ್ತಾರೆ. ಈ ಮಧ್ಯೆ, ಸ್ಥಳೀಯ ಪಿಯಾನೊ, ಬೇಸ್ ಗಿಟಾರ್, ಡ್ರಮ್ಸ್ ಮತ್ತು 'ತಬಲಾ ಸಾಥಿ' ಯೊಂದಿಗೆ, ಕೊಳಲನ್ನು ಅವರದೇ ಶೈಲಿಗೆ ಸರಿಹೊಂದುವಂತೆ ನುಡಿಸುವುದು ಒಂದು ಸವಾಲಾಗಿತ್ತು ; ಹಾಗೂ ಎಲ್ಲರ ಮನಸ್ಸನ್ನು ಗೆದ್ದಿತು. ಅದೊಂದು, ಥ್ರಿಲ್ಲಿಂಗ್ ಅನುಭವ. ೧೦೦ ಕ್ಕೂ ಹೆಚ್ಚು ವಿಧದ ಕೊಳಲುಗಳ ಪ್ರದರ್ಶನ, ಮಾರಾಟ ಸಮ್ಮೇಳನದ ಆಕರ್ಷಣೆಯಾಗಿತ್ತು. ಒಂದು ವಿಶೇಷವೆಂದರೆ, ಕೊಳಲುಗಳು ಮೂಳೆ, ಮೆಟಲ್, ಸೆರಾಮಿಕ್, ಬಿದಿರು, ಸ್ಟೀಲ್ ಮಿಂತಾದ ಪರಿಕರಗಳನ್ನು ಬಳಸಿ ತಯಾರಿಸಲಾಗಿತ್ತು. ಅವನ್ನೆಲ್ಲಾ ಪ್ರಸ್ತುತಪಡಿಸಿದ ಕಲಾವಿದರು, ವಂದನಾರ್ಹರು. ಇದೊಂದು ಅಪೂರ್ವ ಅನುಭವ. ಸಮ್ಮೇಳನದಲಿ ಭಾಗವಹಿಸಿ, ಅನುಭಗಳನ್ನು 'ಸುಧಾ ಕನ್ನಡ ವಾರ ಪತ್ರಿಕೆ' ಯ ಜೊತೆಗೆ, ಹಂಚಿಕೊಂಡರು. ರಾಗಗಳ ವಿತರಣೆ, ಗಮಕ ಸ್ವರ ಶುದ್ಧತೆ, ತಾನ್ ಗಳ ಮೂಲಕ ರಾಗ ವಿಸ್ತರಣೆಯ ಸೊಬಗು ಸೇರಿದಂತೆ ಸಂಗೀತ ಶಾಸ್ತ್ರಗಳ ಬಗೆಗೆ ಪ್ರಾತ್ಯಕ್ಷಿಕೆಗಳ ಉಪಯೋಗದಿಂದ ಕೊಟ್ಟ ಉಪನ್ಯಾಸ, ಮತ್ತು ಅಲ್ಲಿನ ಜನರಿಗೆ ನಮ್ಮ ಶಾಸ್ತ್ರೀಯ ಸಂಗೀತದ ಪರಂಪರೆಯನ್ನು ಅರಿಯಲು ಹಾಗೂ ಅದರ ಸವಿಯನ್ನು ಅನುಭವಿಸಲು ಸಹಕಾರಿಯಾಯಿತೆಂದು ಸಂತಸ ವ್ಯಕ್ತಪಡಿಸುತ್ತಾರೆ, 'ಪ್ರವೀಣ್'.

ಪ್ರವೀಣ್ ಗೋಡ್ಖಿಂಡಿಯವರ ವಿಚಾರಗಳು

[ಬದಲಾಯಿಸಿ]

'ಅರ್ಜೆಂಟೀನಾ'ದಲ್ಲಿ 'ವಿಶ್ವ ಕೊಳಲುವಾದಕರ, ಅಂತಾರಾಷ್ಟ್ರೀಯ ಸಮ್ಮೆಳನ' ದಲ್ಲಿ ಪಾಲ್ಗೊಂಡು ಭಾರತಕ್ಕೆ ವಾಪಸ್ಸಾದ ಬಳಿಕ, ಶಾಸ್ತ್ರೀಯ ಸಂಗೀತದ ಬೆಳವಣಿಗೆ ಆಗುಹೋಗುಗಳು, ಪ್ರಸಕ್ತ ಸ್ಥಾನಮಾನ, ಕಲಾವಿದರ ಸಾಮರ್ಥ್ಯಗಳು ಮುಂತಾದ ವಿಷಯಗಳ ಬಗ್ಗೆ ಪ್ರವೀಣ್ ಗೋಡ್ಖಿಂಡಿಯವರ ವಿಚಾರಗಳು ನಿಜಕ್ಕೂ ಅನುಕರಣೀಯವಾಗಿದ್ದವು. ನಮ್ಮ ಭಾರತದಲ್ಲಿ ಶಾಸ್ತ್ರೀಯ ಸಂಗೀತವನ್ನು ಕೇಳುವ ಅಭಿರುಚಿ ಹೊಂದಿದವರು, ಅಪಾರ. ಹಾಗೆ ನೋಡಿದರೆ, ೭೦ ರ ದಶಕದಲ್ಲಿ ಸಂಗೀತ ಹೇಗಿತ್ತೋ ಅದೇ ಪರಿಸ್ಥಿತಿ ಇಂದಿಗೂ ಇದೆ. ಮುಂದೆಯೂ ಶಾಸ್ತ್ರೀಯ ಸಂಗೀತಕ್ಕೆ ಯಾವ ಚ್ಯುತಿಯೂ ಬರುವುದಿಲ್ಲ. ಜನರ ಅಭಿರುಚಿ ಬದಲಾದಂತೆಲ್ಲಾ ಅವರಿಗೆ ಬೇಕಾದ ಸಂಗೀತವನ್ನು ಒದಗಿಸಲು ನಾವು ಸಿದ್ಧರಾಗಿರಬೇಕು.ಅದಕ್ಕಾಗಿ, ನಾನು ನನ್ನ ಸಂಗೀತದಲ್ಲಿ ಶೇ. ೭೦ ರಷ್ಟು ಹಿಂದೂಸ್ತಾನಿ ಶೈಲಿಯ ಜೊತೆಗೆ ಉಳಿದ ಶೇ. ೩೦ ನ್ನು ಸುಗಮ ಮತ್ತು ಫ್ಯೂಷನ್ ಸೇರಿಸಿ ಮೂರರ ಸಮ್ಮಿಶ್ರಣಮಾಡಿ ಪ್ರಸ್ತುತಪಡಿಸುತ್ತೇನೆ. ಸಮಕಾಲೀನ ಸಂಗೀತದಲ್ಲಿ ಪ್ರಯೋಗಗಳನ್ನು ಮಾಡುವ ಅಗತ್ಯ ಬಹಳವಿದೆ. ಶಾಸ್ತ್ರೀಯ ಚೌಕಟ್ಟನ್ನು ಭದ್ರವಾಗಿ ಇಟ್ಟುಕೊಂಡು ಅದರೊಳಗೆ ಸುಗಮ ಸಂಗೀತ, ಫ್ಯೂಷನ್ ಗಳ ಮಿಶ್ರಣವನ್ನು ಉಣಬಡಿಸಿದರೆ, ಯುವ ಮತ್ತು ಹಿರಿಯ ತಲೆಮಾರಿನ ಜನರ ಮನಸ್ಸನ್ನು ಗೆಲ್ಲಬಹುದು ಎಂದು ಹೇಳುತ್ತಾರೆ, ಪ್ರವೀಣ್. ಇಲ್ಲಿ ದೇಸಿ ಹಾಗೂ ಪಾಶ್ಚಾತ್ಯ ಎರಡೂ ಸಂಸ್ಕೃತಿಗಳ ಸಂಗೀತವನ್ನು ಒಟ್ಟು ಸೇರಿಸುವ ಪ್ರಯತ್ನ ಇರುವುದರಿಂದ ವಿದೇಶೀಯರಿಗೂ ಇದು ಇಷ್ಟವಾಗುತ್ತದೆ. ಸುಪ್ರಸಿದ್ಧ ರಾಗಗಳಾದ ಬಿಲಾವಲ್, ಸಿಂಧು ಭೈರವಿ, ಭೀಮ್ ಪಲಾಸ್, ಭೈರವಿ ರಾಗದ ರಚನೆಗಳು ಹಿಂದೂಸ್ತಾನಿ ರಾಗ ಮತ್ತು ಫ್ಯೂಷನ್ ಸಂಗೀತದ ಮಿಶ್ರಣ. ಇವೆಲ್ಲದಕ್ಕೂ ನಾನೇ ರಾಗಗಳ ಸಂಯೋಜನೆ ಮಾಡುವುದರಿಂದ ನಿರಂತರ ನುಡಿಸಾಣಿಕೆ ಸಾಧ್ಯವಾಗುತ್ತದೆ, ಎನ್ನುತ್ತಾರೆ, ಪ್ರವೀಣ್ ಘೋಡ್ಕಿಂಡಿ.

ಪ್ರಶಸ್ತಿ, ಗೌರವಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ಗೋಡ್ಖಿಂಡಿಗೆ ಚೌಡಯ್ಯ ಪ್ರಶಸ್ತಿ, ಪ್ರಜಾವಾಣಿ ವಾರ್ತೆ, ೨೫ ಅಕ್ಟೋಬರ್ ೨೦೧೭