ಹೈಡ್ರೊಕ್ಲೋರಿಕ್ ಆಮ್ಲ
| |||
| |||
ಹೆಸರುಗಳು | |||
---|---|---|---|
ಐಯುಪಿಎಸಿ ಹೆಸರು
Chlorane[೩]
| |||
Other names | |||
Identifiers | |||
ChemSpider | |||
ECHA InfoCard | 100.210.665 | ||
EC Number | 231-595-7 | ||
E number | E507 (acidity regulators, ...) | ||
PubChem CID
|
|||
UNII | |||
UN number | 1789 | ||
ಗುಣಗಳು | |||
ಅಣು ಸೂತ್ರ | HCl(aq) | ||
Appearance | Colorless, transparent liquid, fumes in air if concentrated | ||
Odor | Pungent characteristic | ||
ಕರಗು ಬಿಂದು |
Concentration-dependent – see table | ||
ಕುದಿ ಬಿಂದು |
Concentration-dependent – see table | ||
log P | 0.00[೪] | ||
ಅಮ್ಲತೆ (pKa) | −5.9 (HCl gas)[೫] | ||
Pharmacology | |||
Hazards | |||
GHS pictograms | ಟೆಂಪ್ಲೇಟು:GHS07 | ||
GHS Signal word | |||
H290, H314, H335[೬] | |||
P260, P280, P303+361+353, P305+351+338[೬] | |||
NFPA 704 | |||
Except where otherwise noted, data are given for materials in their standard state (at 25 °C [77 °F], 100 kPa). > | |||
Infobox references | |||
ಹೈಡ್ರೊಕ್ಲೋರಿಕ್ ಆಮ್ಲವು[೭] ಪ್ರಬಲ ಖನಿಜ ಆಮ್ಲ. ಇದು ಹೈಡ್ರೊಜನ್ ಕ್ಲೋರೈಡ್ನ ಘಾಟು ದ್ರಾವಣ ಮತ್ತು ಇದಕ್ಕೆ ಸಂಕ್ಷಾರಕತ್ವ ಗುಣ ಇದೆ. ಹೈಡ್ರೊಜನ್ ಕ್ಲೋರೈಡ್ನಂತೆ ಇದರ ಅಣುಸೂತ್ರವೂ ಸಹ HCl. ಒಂದು ಅಣು ಹೈಡ್ರೊಕ್ಲೋರಿಕ್ ಆಮ್ಲದಲ್ಲಿ ಒಂದು ಜಲಜನಕ ಮತ್ತು ಒಂದು ಕ್ಲೋರಿನ್ ಪರಮಾಣುಗಳು ಇರುತ್ತವೆ. ಇದು ಸಾವಯವ ಅಥವಾ ಕಾರ್ಬನಿಕ ಪ್ರತ್ಯಾಮ್ಲಗಳೊಂದಿಗೆ ರಾಸಾಯನಿಕ ಕ್ರಿಯೆಗೆ ಒಳಗಾಗಿ ಹೈಡ್ರೊಕ್ಲೋರೈಡ್ ಲವಣವಾಗುತ್ತದೆ. ಹೈಡ್ರೊಜನ್ ಕ್ಲೋರೈಡ್ ಅನಿಲವನ್ನೂ ಸಹ ಹೊಡ್ರೊಕ್ಲೋರಿಕ್ ಆಮ್ಲದ ಹೊಗೆ ಎಂದು ಕೆಲವೊಮ್ಮೆ ಕರೆಯಲಾಗುತ್ತದೆ.[೮]
ಇದರ ನೈಟ್ರಿಕ್ ಆಮ್ಲದೊಂದಿಗಿನ ಮಿಶ್ರಣವಾದ ಆಕ್ವಾರೆಜಿಯಾ 13ನೇ ಶತಮಾನದಲ್ಲಿ ವಿವರಿಸಲ್ಪಟ್ಟಿದೆ. ಇದು ಚಿನ್ನವನ್ನು ಕರಗಿಸಬಲ್ಲ ಗುಣ ಹೊಂದಿದೆ. ಪ್ರೀಸ್ಟ್ಲೀ ಇದನ್ನು ಶುದ್ಧರೂಪದಲ್ಲಿ ತಯಾರಿಸಿದ. ಇದನ್ನು ಕಬ್ಬಿಣದಂತಹ ಹಲವು ಕೈಗಾರಿಕೆಗಳಲ್ಲಿ ಉಪಯೋಗಿಸಲಾಗುತ್ತದೆ. ಜೀವಿಯ ಹೊಟ್ಟೆಯಲ್ಲಿನ ಜಠರರಸವು ಪ್ರಮುಖವಾಗಿ ಈ ಆಮ್ಲವನ್ನು ಹೊಂದಿರುತ್ತದೆ.
ಇತಿಹಾಸ
[ಬದಲಾಯಿಸಿ]ಹೈಡ್ರೊಕ್ಲೋರಿಕ್ ಆಮ್ಲ ಮತ್ತು ನೈಟ್ರಿಕ್ ಆಮ್ಲಗಳ ಮಿಶ್ರಣವಾದ ಆಕ್ವಾರೆಜಿಯಾವನ್ನು (ರಾಜೋದಕ) ಸಾಲ್ ಅಮೊನಿಯಾಕ್ನ್ನು (ಒಂದು ವಿರಳ ಅಮೊನಿಯಮ್ ಕ್ಲೋರೈಡ್ ಇರುವ ಖನಿಜ) ನೈಟ್ರಿಕ್ ಆಮ್ಲದಲ್ಲಿ ಕರಗಿಸಿ ಪಡೆಯಲಾಗುತ್ತಿತ್ತು ಮತ್ತು ಆಕ್ವಾರೆಜಿಯಾವನ್ನು 13ನೇ ಶತಮಾನದ ರಸವಿದ್ಯೆ ವಿದ್ವಾಂಸ "ಸುಳ್ಳು-ಗೆಬರ್" ವಿವರಿಸಿದ್ದಾನೆ.[೯][೧೦][೧೧][೧೨][೧೩] 13ನೆಯ ಶತಮಾನದ ಕೊನೆಯಲ್ಲಿನ ಬೈಜಂಟೈನ್ ಸಾಮ್ರಾಜ್ಯದಲ್ಲಿನ ಹಸ್ತಪ್ರತಿಗಳಲ್ಲಿಯೂ ಇದು ಮೊದಲು ಉಲ್ಲೇಖಿತವಾಗಿದೆ ಎಂದು ಕೆಲವು ಮೂಲಗಳು ಹೇಳುತ್ತವೆ.[೧೪][೧೫][೧೬][೧೭] ಹೈಡ್ರೊಕ್ಲೊರಿಕ್ ಆಮ್ಲವನ್ನು ಬಿಡಿಯಾಗಿ 16ನೆಯಶತಮಾದಲ್ಲಿ ಲಿಬವಿಯಸ್ ಉಪ್ಪುನ್ನು ಕಾಯಿಸಿ ಪಡೆದ.[೧೮]
ಜರ್ಮನಿಯ ಜೊಹಾನನ್ ರುಡಾಲ್ಫ್ ಗ್ಲಾಬರ್ 17ನೆಯ ಶತಮಾನದಲ್ಲಿ ಸೋಡಿಯಮ್ ಸಲ್ಫೇಟ್ ತಯಾರುಮಾಡಲು ಗಂಧಕಾಮ್ಲ ಮತ್ತು ಸೋಡಿಯಮ್ ಕ್ಲೋರೈಡ್ ಬಳಸಿದ ಮತ್ತು ಹೈಡ್ರೊಜನ್ ಕ್ಲೋರೈಡ್ ಇದರ ಒಂದು ಉತ್ಪನ್ನವಾಗಿತ್ತು. ಜೋಸೆಫ್ ಪ್ರೀಸ್ಟ್ಲೀ 1772ರಲ್ಲಿ ಶುದ್ಧ ಹೈಡ್ರೊಜನ್ ಕ್ಲೋರೈಡ್ ತಯಾರಿಸಿದ.[೧೯] ಇಶವಿ 1808ರಲ್ಲಿ ಇಂಗ್ಲೆಂಡ್ ಹಂಫ್ರಿ ಡೇವಿ ಇದು ಹೈಡ್ರೊಜನ್ ಮತ್ತು ಕ್ಲೋರಿನ್ಗಳನ್ನು ಒಳಗೊಂಡಿದೆ ಎಂದು ತೋರಿಸಿಕೊಟ್ಟ.[೨೦]
ಫ್ರಾನ್ಸ್ನ ನಿಕೊಲಾಸ್ ಲೆಬ್ಲಾಂಕ್ ಸೋಡಿಯಮ್ ಕಾರ್ಬೊನೇಟ್ನ ಅಗ್ಗದ ತಯಾರಿ ವಿಧಾನದಲ್ಲಿ ಉಪ್ಪಿನೊಂದಿಗೆ (ಸೋಡಿಯಮ್ ಕ್ಲೋರೈಡ್) ಗಂಧಕಾಮ್ಲ, ಸುಣ್ಣದ ಕಲ್ಲು ಮತ್ತು ಇದ್ದಲು ಸೇರಿಸಿ ಸೋಡಿಯಮ್ ಕಾರ್ಬೊನೇಟ್ ತಯಾರಿಸಿದ. ಹೈಡ್ರೊಜನ್ ಕ್ಲೋರೈಡ್ ಇದರ ಉಪಉತ್ಪನ್ನವಾಗಿತ್ತು ಮತ್ತು ಇದನ್ನು ಮೊದಲು ಗಾಳಿಯಲ್ಲಿ ಬಿಡಲಾಗುತ್ತಿತ್ತು. ಬ್ರಿಟನ್ನಿನ 1863ರ ಆಲ್ಕಲಿ ಕಾನೂನು ಮತ್ತು ಇತರ ದೇಶಗಳಲ್ಲಿನ ಅಂತಹುದೇ ಕಾನೂನುಗಳಾದ ನಂತರ ಈ ಹೆಚ್ಚುವರಿ ಪೋಲು ಹೈಡ್ರೊಜನ್ ಕ್ಲೋರೈಡ್ ಅನಿಲವನ್ನು ನೀರಿನಲ್ಲಿ ಹಿಂಗಿಸಿ ದೊಡ್ಡ ಮಟ್ಟದಲ್ಲಿ ಹೈಡ್ರೊಕ್ಲೋರಿಕ್ ಆಮ್ಲ ತಯಾರಿಸಲಾಗುತ್ತಿತ್ತು.[೧೧][೨೧] 20ನೇಯ ಶತಮಾನದ ವೇಳೆಗೆ ಲೆಬ್ಲಾಂಕ್ ಉತ್ಪಾದನೆಯ ವಿಧಾನವನ್ನು ಕೈಬಿಡಲಾಯಿತು. ಆದರೆ ಈ ಸಮಯಕ್ಕಾಗಲೇ ಹೈಡ್ರೊಕ್ಲೋರಿಕ್ ಆಮ್ಲ ಮಹತ್ವದ ಕೈಗಾರಿಕಾ ರಾಸಾಯನಿಕವಾಗಿತ್ತು. ಕ್ರಿ ಶ 2000 ವರುಷದ ನಂತರ ಇದನ್ನು ಕೈಗಾರಿಕಾ ಕಾರ್ಬನಿಕ ಸಂಯುಕ್ತಗಳ ಉತ್ಪಾದನೆಯ ಉಪಉತ್ಪನ್ನವಾದ ಹೈಡ್ರೊಜನ್ ಕ್ಲೋರೈಡ್ನ್ನು ನೀರಿನಲ್ಲಿ ಹಿಂಗಿಸಿ ತಯಾರಿಸಲಾಗುತ್ತಿದೆ.[೧೧][೨೧][೨೨]
ರಾಸಾಯನಿಕ ಕ್ರಿಯೆಗಳು
[ಬದಲಾಯಿಸಿ]ಈ ಆಮ್ಲ ಕಬ್ಬಿಣ, ತವರ, ಸತು, ನಿಕ್ಕಲ್ ಮುಂತಾದ ಸಾಮಾನ್ಯ ಲೋಹಗಳನ್ನೆಲ್ಲ ಬಲು ಸುಲಭವಾಗಿ ತಿಂದು ಹಾಕುತ್ತದೆ. ಜೇಡಿಮಣ್ಣು ಮರಳು, ಸುಣ್ಣಕಲ್ಲು ಸಂಬಂಧಿತ ವಸ್ತುಗಳನ್ನು ರಾಸಾಯನಿಕವಾಗಿ ವಿಭಜಿಸಬಲ್ಲದು. ಆದರೆ ಶುಷ್ಕ ಹೈಡ್ರೊಜನ್ ಕ್ಲೋರೈಡ್ ಅನಿಲ ರಾಸಾಯನಿಕವಾಗಿ ಅಷ್ಟು ಕ್ರಿಯಾಶೀಲವಲ್ಲ.
ಬಲಹೀನ ಹೈಡ್ರೊಕ್ಲೋರಿಕ್ ಆಮ್ಲ ಮತ್ತು ಫೆರ್ರಸ್ ಆಕ್ಸೈಡ್ಗಳ ನಡುವೆ ಕ್ರಿಯೆ ಜರುಗಿ ಫೆರ್ರಸ್ ಕ್ಲೋರೈಡ್ ಕೊಡುತ್ತದೆ.
- FeO + 2 HCl → FeCl2 + H2O[೮]
ಹೈಡ್ರೊಕ್ಲೋರಿಕ್ ಆಮ್ಲವು ಹೈಡ್ರೊನಿಯಮ್ ಅಯಾನಿನ ಲವಣ (H3O+) ಮತ್ತು ಕ್ಲೋರೈಡ್ನ್ನು ಒಳಗೊಂಡಿರುತ್ತದೆ. ಇದನ್ನು ಹೈಡ್ರೊಜನ್ ಕ್ಲೋರೈಡ್ ಅನಿಲವನ್ನು ನೀರಿನಲ್ಲಿ ಕರಗಿಸುವ ಮೂಲಕ ಪಡೆಯಬಹುದು.[೨೩][೨೪]
ಆರು ಸಾಮಾನ್ಯ ಪ್ರಬಲ ಖನಿಜ ಆಮ್ಲಗಳಲ್ಲಿ[೨೫] ಒಂದು ಅಣುವಿಗೆ ಒಂದು ಹೈಡ್ರೊಜನ್ ಪರಮಾಣು ಕೊಡುವ ಆದರೆ ಆಕ್ಸಿಡೀಕರಣ ಮತ್ತು ರಿಡಕ್ಶೀಕರಣದ ಸಾಧ್ಯತೆ ಕಡಿಮೆ ಇರುವ ಆಮ್ಲ ಹೈಡ್ರೊಕ್ಲೋರಿಕ್ ಆಮ್ಲ. ಅಲ್ಲದೆ ಇದು ಕಡಿಮೆ ಅಪಾಯವಿರುವ ಪ್ರಬಲ ಆಮ್ಲ ಮತ್ತು ವಿಷಕಾರಿ ಅಲ್ಲದ ಹೆಚ್ಚು ಕ್ರಿಯೆಯಲ್ಲಿ ಭಾಗಿಯಾಗದ ಕ್ಲೋರೈಡ್ ಅಯಾನು ಹೊಂದಿದೆ. ಈ ಗುಣಗಳು ಮತ್ತು ಅದು ಶುದ್ಧ ಆಮ್ಲೀಕರಣಕ್ಕೆ ಕಾರಣಾಗಬಲ್ಲ ಸಾಮರ್ಥ್ಯಗಳಿಂದಾಗಿ ಅದು ಒಳ್ಳೆಯ ಆಮ್ಲೀಕರಣ ಕಾರಕ ಸಹ.
ಟೈಟ್ರೀಕರಣ ಪ್ರಕ್ರಿಯೆಯಲ್ಲಿ ಪ್ರತ್ಯಾಮ್ಲಗಳ ಸಾಮರ್ಥ್ಯ ಪತ್ತೆ ಮಾಡಲು ಇದನ್ನು ಬಳಸುವಲ್ಲಿ ಒಲವು ತೋರಲಾಗುತ್ತದೆ. ಪ್ರಬಲ ಆಮ್ಲಗಳ ಟೈಟ್ರೆಂಟ್ಗಳು (ಟೈಟ್ರೆಂಟ್ ಪ್ರಕ್ರಿಯೆಗೆ ಬಳಸುವ ರಾಸಾಯನಿಕಗಳು) ಕೊನೆಯ ಪಾಯಿಂಟನ್ನು ಸರಿಯಾಗಿ ಗುರುತಿಸಬಲ್ಲವು. ಒಂದೇ ಕುದಿಬಿಂದು ಇರುವ ಹೈಡ್ರೊಕ್ಲೋರಿಕ್ ಆಮ್ಲ (ಸುಮಾರು 20.2 ಶೇ.) ಪ್ರಾಥಮಿಕ ಮಾನಕವಾಗಿ ಪ್ರಮಾಣಾತ್ಮಕ ವಿಶ್ಲೇಷಣೆಯಲ್ಲಿ ಬಳಸಬಹುದು ಮತ್ತು ವಾಸ್ತವದ ಸಾಂದ್ರತೆಯು ತಯಾರು ಮಾಡುತ್ತಿರುವಾಗ ಇರುವ ವಾತಾವರಣದ ಒತ್ತಡದ ಮೇಲೆ ಅವಲಂಭಿತವಾಗುತ್ತದೆ.[೨೬] ಇದನ್ನು ರಾಸಾಯನಿಕ ವಿಶ್ಲೇಷಣೆಗಳಲ್ಲಿ ವಿಶ್ಲೇಷಿಸಲು ಸ್ಯಾಂಪಲ್ಗಳನ್ನು ತಯಾರಿಸಲು ಬಳಸಲಾಗುತ್ತದೆ. ಪ್ರಬಲ ಹೈಡ್ರೊಕ್ಲೋರಿಕ್ ಆಮ್ಲ ಹಲವು ಲೋಹಗಳನ್ನು ಕರಗಿಸುತ್ತದೆ ಮತ್ತು ಈ ಕ್ರಿಯೆಯಲ್ಲಿ ಆಕ್ಸಿಡೀಕರಣಗೊಂಡ ಲೋಹದ ಕ್ಲೋರೈಡ್ ಮತ್ತು ಹೈಡ್ರೊಜನ್ ಅನಿಲ ಉಂಟಾಗುತ್ತವೆ. ಅಲ್ಲದೆ ಕ್ಯಾಲ್ಸಿಯಮ್ ಕಾರ್ಬೊನೇಟ್ ಅಥವಾ ತಾಮ್ರ (II) ಆಕ್ಸೈಡ್ಗಳಂತಹ ಪ್ರತ್ಯಾಮ್ಲ ಸಂಯುಕ್ತಗಳೊಂದಿಗೆ ವಿಶ್ಲೇಷಿಸ ಬಹುದಾದ ಕರಗುವ ಕ್ಲೋರೈಡ್ಗಳು ಉಂಟಾಗುತ್ತವೆ.[೨೩][೨೪]
ಭೌತಿಕ ಗುಣಗಳು
[ಬದಲಾಯಿಸಿ]ಶುದ್ಧ ಆಮ್ಲ ಬಣ್ಣವಿಲ್ಲದ ತಿಳಿ ದ್ರಾವಣ. ಆದರೆ ಬಹಳ ಘಾಟು ವಾಸನೆ. ಪ್ರಬಲ ದ್ರಾವಣವಂತೂ ಗಾಳಿಯಲ್ಲಿ ಹೊಗೆಯಾಡುತ್ತದೆ. ಚರ್ಮದ ಮೇಲೆ ಬಿದ್ದರೆ ವೇದನೆಯುಂಟಾಗುತ್ತದೆ.
ಹೈಡ್ರೊಕ್ಲೋರಿಕ್ ಆಮ್ಲದ ಕುದಿಬಿಂದು, ಕರಗುಬಿಂದು, ಸಾಂದ್ರತೆ ಮತ್ತು ಪಿಹೆಚ್ನಂತಹ (pH) ಗುಣಗಳು ಜಲೀಯ ದ್ರಾವಣದ ಸಾಂದ್ರತೆಯ ಮೇಲೆ ಆಧಾರ ಪಟ್ಟಿರುತ್ತವೆ. ಸಾಮಾನ್ಯವಾಗಿ ಶೇ. 38 ಅತಿಹೆಚ್ಚು ಸಾಂದ್ರತೆಯ ಜಲೀಯ ದ್ರಾವಣವಾಗಿದೆ ಅದಕ್ಕೂ ಹೆಚ್ಚು ಶೇ. 40ರ ಸಾಂದ್ರತೆ ತಯಾರಿಸ ಬಹುದಾದರೂ ಹೊಗೆ ಏಳುವುದು ಹೆಚ್ಚು ಇರುತ್ತದೆ.
ಪ್ರಾಬಲ್ಯ | ಸಾಂದ್ರತೆ | ಪಿಹೆಚ್ (pH) | ವಿಸ್ಕೊಸಿಟಿ (ಸ್ನಿಗ್ಧತೆ) |
ಸ್ಪೆಸಿಫಿಕ್ ಉಷ್ಣ | ಆವಿಯ ಒತ್ತಡ | ಕುದಿಬಿಂದು | ಕರಗುಬಿಂದು |
---|---|---|---|---|---|---|---|
Kg HCl/Kg | Kg/L | kPa | kJ/(kg•K) | mPa.s | °C | °C | |
10% | 1.048 | −0.5 | 1.16 | 3.47 | 1.95 | 103 | −18 |
20% | 1.098 | −0.8 | 1.37 | 2.99 | 1.40 | 108 | −59 |
30% | 1.149 | −1.0 | 1.70 | 2.60 | 2.13 | 90 | −52 |
38% | 1.189 | −1.1 | 2.10 | 2.43 | 28.3 | 48 | −26 |
ತಯಾರಿಕೆ
[ಬದಲಾಯಿಸಿ]ಹೈಡ್ರೊಜನ್ ಕ್ಲೋರೈಡ್ ಅನಿಲ ನೀರಿನಲ್ಲಿ ಸುಲಭವಾಗಿ ಲೀನವಾಗಿ ಆಮ್ಲವನ್ನು ಉತ್ಪಾದಿಸುವದು. ಬೃಹತ್ ಮಟ್ಟದ ಹೈಡ್ರೊಕ್ಲೋರಿಕ್ ಆಮ್ಲದ ತಯಾರಿಕೆಯನ್ನು ಕೈಗಾರಿಕಾ ಗಾತ್ರದಲ್ಲಿ ಇತರ ರಾಸಾಯನಿಕಗಳ ತಯಾರಿಯೊಂದಿಗೆ ಬೆಸಯಲಾಗಿದೆ. ಈ ಕ್ರಿಯೆಯಲ್ಲಿ ಆಧಿಕ ಉಷ್ಣೋತ್ಪತ್ತಿಯಾಗುವದು. ಹೈಡ್ರೊಕ್ಲೋರಿಕ್ ಆಮ್ಲದ ತಯಾರಿಕೆಗೆ ನಾಲ್ಕು ಮುಖ್ಯ ವಿಧಾನಗಳು ಆಚರಣೆಯಲ್ಲಿವೆ : ೧ ಸೋಡಿಯಂ ಕ್ಲೋರೈಡ್ (ಉಪ್ಪು) ಸಲ್ಫ್ಯೂರಿಕ್ ಆಮ್ಲ ವಿಧಾನ; ೨ ಹಾರ್ಗ್ರೀವನ್ ವಿಧಾನ; ೩ ಮೂಲವಸ್ತುಗಳಿಂದ ನೇರಸೃಷ್ಟಿ; ೪ ಸಾವಯವ ಸಂಯುಕ್ತಗಳನ್ನು ಕ್ಲೋರಿನ್ನಿನೊಡನೆ ಕ್ರಿಯೆಗೊಳಪಡಿಸುವ ವಿಧಾನ.
(i) ಸೋಡಿಯಂ ಕ್ಲೋರೈಡ್ ಸಲ್ಫ್ಯೂರಿಕ್ ಆಮ್ಲವಿಧಾನ: ಇದೇ ಎಲ್ಲಕ್ಕಿಂತ ಮೊದಲು ಆಚರಣೆಗೆ ಬಂದ ಕೈಗಾರಿಕಾ ವಿಧಾನ. ಸೋಡಿಯಂ ಕ್ಲೋರೈಡ್ಗೆ ಪ್ರಬಲ ಸಲ್ಫ್ಯೂರಿಕ್ ಆಮ್ಲವನ್ನು ಲೆಕ್ಕಾಚಾರ ಮಾಡಿ ನಿಯಂತ್ರಿತ ಪ್ರಮಾಣದಲ್ಲಿ ಹಾಕಿ ಮಿಶ್ರಣವನ್ನು ಕಾಯಿಸಿ ಬಟ್ಟಿ ಇಳಿಸಿದರೆ ಹೈಡ್ರೊಕ್ಲೋರಿಕ್ ಆಮ್ಲ ಹೊಗೆಯಂತೆ ಹೊರ ಬೀಳುವುದು. ಇದನ್ನು ನೀರಿನಲ್ಲಿ ಹಾಯಿಸಿದರೆ ಹೈಡ್ರೊಕ್ಲೋರಿಕ್ ಆಮ್ಲದ ದ್ರಾವಣವುಂಟಾಗುವುದು.
NaCI + H2SO4 → NaHSO4 + HCI
NaHSO4 + NaCI → Na2SO4 + HCI
ಭಟ್ಟಿಯಲ್ಲಿ ಉಳಿದುಕೊಳ್ಳುವ ಸೋಡಿಯಂ ಸಲ್ಫೇಟ್ಅನ್ನು ಕಾಗದ ಮತ್ತು ಗಾಜಿನ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಮೊದ ಮೊದಲು ಈ ವಿಧಾನ ಹೈಡ್ರೊಕ್ಲೋರಿಕ್ ಆಮ್ಲದ ತಯಾರಿಕೆಗಿಂತ ಸೋಡಾಕ್ಷಾರ (ಸೋಡ ಆ್ಯಷ್, Na2CO3) ತಯಾರಿಕೆಯ ಮೊದಲ ಹಂತವಾಗಿ ಆಚರಣೆಯಲ್ಲಿತ್ತು. ಆದರೆ ವಾತಾವರಣವನ್ನು ಬಹುವಾಗಿ ಕಲುಷಿತಗೊಳಿಸುವ ಹೈಡ್ರೊಕ್ಲೋರಿಕ್ ಆಮ್ಲವನ್ನು ಕಾರ್ಖಾನೆಗಳಿಂದ ನೇರವಾಗಿ ಗಾಳಿಗೆ ಬಿಡುವುದನ್ನು ಸರ್ಕಾರ ಶಾಸನಬಾಹಿರವನ್ನಾಗಿ ಮಾಡಿದಂದಿನಿಂದ ಹೈಡ್ರೊಕ್ಲೋರಿಕ್ ಆಮ್ಲ ತಯಾರಿಕೆ ಪ್ರಾರಂಭವಾಯಿತು.
(ii) ಹಾರ್ಗ್ರೀವನ ವಿಧಾನ: ಮೇಲಿನ ವಿಧಾನದಲ್ಲಿ ದೊರೆಯುವ ಉತ್ಪನ್ನಗಳನ್ನು ಇಲ್ಲೂ ಪಡೆಯಬಹುದು. ಸಲ್ಫರ್ ಡೈಆಕ್ಸೈಡ್ ಆಮ್ಲ, ನೀರಿನ ಹಬೆ ಮತ್ತು ಗಾಳಿಗಳ ಮಿಶ್ರಣವೊಂದನ್ನು ಕ್ರಿಯಾಗಾರಗಳಲ್ಲಿ ಜೋಡಿಸಿ ಉಪ್ಪಿನ ಪದರಗಳ ಮೂಲಕ ಹಾಯಿಸುವುದೇ ಹಾರ್ಗ್ರೀವನ ವಿಧಾನ.
2SO2 + O2 + 2H2O + 4NaCI → 2Na2SO4 + 4HCI
ಈ ವಿಧಾನದಲ್ಲಿ ದೊರೆಯುವ ಆಮ್ಲ ದುರ್ಬಲವಾದುದು. ಈ ವಿಧಾನ ಅಷ್ಟು ಜನಪ್ರಿಯವಾಗಿಲ್ಲ.
(iii) ಮೂಲವಸ್ತುಗಳಿಂದ ನೇರ ಉತ್ಪಾದನೆ: ಇದೇ ಈಗ ಆಚರಣೆಯಲ್ಲಿರುವ ಬಹು ಜನಪ್ರಿಯ ವಿಧಾನ. ಹೈಡ್ರೊಜನ್ ಮತ್ತು ಕ್ಲೋರಿನ್ ಅನಿಲವನ್ನು ಜೊತೆಯಾಗಿ ಉರಿಸುವುದರಿಂದ ಹೈಡ್ರೊಕ್ಲೋರಿಕ್ ಆಮ್ಲ ಉತ್ಪನ್ನವಾಗುವದು.[೨೭][೨೮]
H2 + CI2 → 2HCI
ಈ ವಿಧಾನದಲ್ಲಿ ಉತ್ಪನ್ನವಾಗುವ ಆಮ್ಲ ಹೆಚ್ಚು ಶುದ್ಧವೂ ಹೆಚ್ಚು ಪ್ರಬಲವೂ ಆಗಿರುತ್ತದೆ. ಭಾರಿಪ್ರಮಾಣದ ಮೂಲಭೂತ ರಾಸಾಯನಿಕ ಕೈಗಾರಿಕೆಗಳಲ್ಲೊಂದಾದ ಕ್ಷಾರ ತಯಾರಿಕೆಯಲ್ಲಿ ಹೈಡ್ರೊಜನ್ ಮತ್ತು ಕ್ಲೋರಿನ್ಗಳೆರಡೂ ಉಪಉತ್ಪನ್ನಗಳಾಗಿ ದೊರೆಯುವುವು. ಉಪ್ಪಿನ ವಿದ್ಯುದ್ವಿಭಜನೆಯಿಂದ ಸೋಡಿಯಂ ಲೋಹ ಮತ್ತು ಕ್ಲೋರಿನ್ಗಳು ಉತ್ಪನ್ನವಾಗುವುವು. ಉಪ್ಪುನೀರಿನ ವಿದ್ಯುದ್ವಿಭಜನೆಯಿಂದ ಸೋಡಿಯಂ ಹೈಡ್ರಾಕ್ಸೈಡ್ ಕ್ಷಾರ, ಹೈಡ್ರೊಜನ್ ಮತ್ತು ಕ್ಲೋರಿನ್ಗಳು ಉತ್ಪನ್ನವಾಗುವುವು. ಹೈಡ್ರೊಜನ್ ಕ್ಲೋರಿನ್ ಮಿಶ್ರಣಗಳ ದಹನ ಅಸ್ಫೋಟನಕಾರಕ. ಅಗಾಧ ಪ್ರಮಾಣದ ಉಷ್ಣವೂ ಉತ್ಪತ್ತಿಯಾಗುವುದು. ಹೈಡ್ರೊಜನ್ ಕ್ಲೋರೈಡ್ ಅನಿಲ ನೀರಿನೊಳಗೆ ಲೀನವಾದಾಗ ಅಧಿಕ ಉಷ್ಣೋತ್ಪತ್ತಿಯಾಗುವುದು. ಈ ಕಾರಣಗಳಿಂದ ದಹನಕಾರ್ಯ ಮತ್ತು ಆಮ್ಲದ ದ್ರಾವಣ ತಯಾರಿಕೆಯ ಎರಡು ಹಂತಗಳಲ್ಲೂ ಬಹಳ ಎಚ್ಚರಿಕೆ ವಹಿಸಬೇಕು. ದಹನಗೋಪುರ ಆಮ್ಲರೋಧಕ ಇಟ್ಟಿಗೆ ಹೊದಿಸಿ ಒಳಮೈನ ಉಕ್ಕಿನಿಂದಾಗಲಿ ತಣ್ಣೀರಿನ ಕೊಳವೆಗಳಿಂದ ಆವೃತವಾದ ಉಕ್ಕಿನ ಫಲಕ ಅಥವಾ ಗ್ರಾಫೈಟ್ ಇದ್ದಲಿನ ರಚನಾ ಸಾಮಗ್ರಿಯಿಂದಾಗಲಿ ನಿರ್ಮಿತವಾಗಿರುವುದು. ನಿಯಂತ್ರಿತ ರೀತಿಯಲ್ಲಿ ಹೈಡ್ರೊಜನ್, ಕ್ಲೋರಿನ್ ಅನಿಲಗಳನ್ನು ದಹನ ಮಂದಿರದೊಳಕ್ಕೆ ಬಿಟ್ಟು ಮಿಶ್ರಣಕ್ಕೆ ಅಗ್ನಿ ಸ್ಪರ್ಶಿಸಿದರೆ ಮಿಶ್ರಣ ಉಗ್ರವಾಗಿ ಉರಿಯಲಾರಂಭಿಸುವುದು. ಉತ್ಪಾದಿತ ಉಷ್ಣವನ್ನು ಆವೃತ ತಣ್ಣೀರು ಸತತವಾಗಿ ಹೀರಿಕೊಳ್ಳುತ್ತಿರುವುದು.
ರಾಸಾಯನಿಕ ಸಂಯೋಗದಿಂದ ಉತ್ಪಾದನೆಯಾದ ಹೈಡ್ರೊಜನ್ಕ್ಲೋರೈಡ್ ಅನಿಲ ಹೊರಬಿದ್ದು ಮುಂದೆ ಇನ್ನೊಂದು ಗೋಪುರದಲ್ಲಿ ತುಂತುರು ನೀರಿನೋಡನೆ ಸಂಪರ್ಕ ಹೊಂದುವಂತೆ ಮಾಡಲಾಗುವುದು. ಈ ಗೋಪುರದಿಂದ ಹೈಡ್ರೊಕ್ಲೋರಿಕ್ ಆಮ್ಲ ದ್ರಾವಣ ಉಂಟಾಗಿ ಅಂತಿಮವಾಗಿ ಹೊರಬೀಳುವುದು. ಉತ್ಪನ್ನ ಹೈಡ್ರೊಜನ್ ಕ್ಲೋರೈಡ್ ಅನಿಲ ರೂಪದಲ್ಲಿಯೇ ಬೇಕಾದಾಗ, ಎರಡನೆಯ ಗೋಪುರದೊಳಗೆ ನೀರಿನ ಪೂರೈಕೆಯನ್ನು ಕಡಿದು ಹಾಕಬೇಕು. ತಣ್ಣೀರಿನಿಂದ ಸುತ್ತುವರಿಸಿ ಅನಿಲವನ್ನು ತಣ್ಣಗೆ ಮಾತ್ರ ಮಾಡಿ, ಆರಿದ ಅನಿಲವನ್ನು ನೇರವಾಗಿ ಉಕ್ಕಿನ ಸಿಲಿಂಡರುಗಳಲ್ಲಿ ಒತ್ತಡಭರಿತವಾಗಿ ಶೇಖರಿಸಬಹುದು ಅಥವಾ ದ್ರವೀಕರಿಸಬಹುದು.
(iv) ನಾಲ್ಕನೆಯ ವಿಧಾನ: ಮಿಥೇನ್, ಬೆಂಜೀನ್ ಮುಂತಾದ ಹೈಡ್ರೊಜನ್, ಇಂಗಾಲ ಸಂಯುಕ್ತಗಳನ್ನು ಕ್ಲೋರಿನ್ನೊಡನೆ ಕ್ರಿಯೆಗೊಳಪಡಿಸುವಿಕೆ. ಇತ್ತೀಚೆಗೆ ಅನೇಕ ಸಾವಯವ ಸಂಬಂಧಿತ ರಾಸಾಯನಿಕ ಕೈಗಾರಿಕೆಯಲ್ಲಿ ಹೆಚ್ಚಾಗಿ, ಹೈಡ್ರೊಜನ್ ಕ್ಲೋರೈಡ್ ಹೇರಳವಾಗಿ ಉಪ ಉತ್ಪನ್ನವಾಗಿ ದೊರೆಯಲಾರಂಭಿಸಿದೆ. ಆದರಿಂದ ಹೈಡ್ರೊಕ್ಲೋರಿಕ್ ಆಮ್ಲ ತಯಾರಿಕೆ ಒಂದು ನೂತನ ಪ್ರಮುಖ ಮೂಲ ದೊರೆತಿದೆ. ವೀನೈಲ್ ಕ್ಲೋರೈಡ್ ಆಧಾರಿತ ಕೃತಕ ರಬ್ಬರ್ ತಯಾರಿಕೆಯಲ್ಲಿ ಎಥಿಲೀನ್ ಕ್ಲೋರೈಡ್ ಅನ್ನು ಕಾಯಿಸಿದರೆ ಉಷ್ಣವಿಭಜನೆಯಿಂದ ವೀನೈಲ್ ಕ್ಲೋರೈಡ್ ಮತ್ತು ಹೈಡ್ರೊಜನ್ ಕ್ಲೋರೈಡ್ ದೊರೆಯುವುವು. ಈ ವಿಧಾನಗಳಲ್ಲಿ ಹೊರಬೀಳುವ ಹೈಡ್ರೊಜನ್ ಕ್ಲೋರೈಡ್ ಮಾತ್ರ ಅಶುದ್ಧವಾಗಿದ್ದು ಅದನ್ನು ಸ್ವಚ್ಛ ಮಾಡಬೇಕಾಗುವುದು. ದುರ್ಬಲ ಆಮ್ಲ ದ್ರಾವಣ ಕೂಡ ಎಲ್ಲ ಸಾಮಾನ್ಯ ಲೋಹಗಳ ಮೇಲೂ ರಾಸಾಯನಿಕವಾಗಿ ತೀಕ್ಷ್ಣಕ್ರಿಯೆ ಹೊಂದಿರುವುದರಿಂದ ಆಮ್ಲದ ತಯಾರಿಕೆ ಮತ್ತು ಶೇಖರಣೆಗಳಲ್ಲಿ ಗಾಜು, ಗಾಜಿನ ಒಳಮೈನ ಲೋಹಗಳು, ಟ್ಯಾಂಟಲಮ್ ಮತ್ತು ಗ್ರಾಫೈಟ್ ಇದ್ದಲು- ಈ ಮೂರೇ ಹೆಚ್ಚು ಬಳಕೆಯಲ್ಲಿರುವ ವಸ್ತುಗಳು. ಸುಟ್ಟ ಜೇಡಿಮಣ್ಣು ಅಥವಾ ಪಿಂಗಾಣಿ ಮತ್ತು ರಬ್ಬರ್ಗಳೂ ಆಮ್ಲ ಸಹಿಷ್ಣುಗಳು.
ಉಪಯೋಗಗಳು
[ಬದಲಾಯಿಸಿ]ಹೈಡ್ರೊಕ್ಲೋರಿಕ್ ಆಮ್ಲದ ಅತಿ ಮುಖ್ಯ ಬಳಕೆ ಉಕ್ಕಿನ ಕೈಗಾರಿಕೆಗಳಲ್ಲಿ ಇದೆ. ಇಲ್ಲಿ ಈ ಆಮ್ಲವನ್ನು ಉಕ್ಕು ಅಥವಾ ಕಬ್ಬಿಣದ ತುಕ್ಕು ಅಥವಾ ಕಬ್ಬಿಣದ ಆಕ್ಸೈಡ್ಗಳ ಕಲೆಗಳನ್ನು ತೆಗೆಯಲು ಬಳಸಲಾಗುತ್ತದೆ. ಸಾಮಾನ್ಯವಾಗಿ ಇದಕ್ಕೆ ಬಳಸುವ ಸಾಂದ್ರತೆ 18% ಇರುತ್ತದೆ. ಈ ಬಗೆಗಿನ ಸಮೀಕರಣ:
- Fe2O3 + Fe + 6HCl → 3FeCl2 + 3H2O
ಹೀಗೆ ಬಳಸಿದ ಆಮ್ಲವನ್ನು ಕಬ್ಬಿಣ (II) ಕ್ಲೋರೈಡ್ (ಫೆರ್ರಸ್ ಕ್ಲೋರೈಡ್) ದ್ರಾವಣವಾಗಿ ಮರು ಬಳಸಲಾಗುತ್ತದೆಯಾದರೂ ಅದರಲ್ಲಿನ ಭಾರ ಲೋಹಗಳು ಈ ಆಚರಣೆಯನ್ನು ಕಡಿಮೆ ಮಾಡಿವೆ. ಊರಿಡುವಿಕೆ (ಪಿಕ್ಲಿಂಗ್) ಕೈಗಾರಿಕೆಯು ಹೈಡ್ರೊಕ್ಲೋರಿಕ್ ಆಮ್ಲವನ್ನು ಮರುಪಡೆಯುವ ಪ್ರಕ್ರಿಯೆ ಅಭಿವೃದ್ಧಿಪಡಿಸಿದೆ. ಸಾಮಾನ್ಯ ಮರುಪಡೆಯುವ ಪ್ರಕ್ರಿಯೆಯಾದ ಪೈರೊಹೈಡ್ರೊಲೈಸಿಸ್ ಪ್ರಕ್ರಿಯೆಗೆ ಈ ಕೆಳಗಿನ ಸಮೀಕರಣ ಅನ್ವಯಿಸುತ್ತದೆ:[೧೧]
- 4FeCl2 4H2O + O2 → 8 HCl + 2Fe2O3
ಈ ಪ್ರಕ್ರಿಯೆಯ ಮೂಲಕ ಹೈಡ್ರೊಕ್ಲೋರಿಕ್ ಆಮ್ಲ ಮರಳಿ ಪಡೆಯುವುದಲ್ಲದೆ ಇಲ್ಲಿಯ ಇನ್ನೊಂದು ಉತ್ಪನ್ನ ಕಬ್ಬಿಣ (III) ಆಕ್ಸೈಡ್ನ್ನು ಬೇರೆಯ ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ.[೧೧]
ಇನ್ನೊಂದು ಹೈಡ್ರೊಕ್ಲೋರಿಕ್ ಆಮ್ಲದ ಪ್ರಮುಖ ಬಳಕೆ ಜೈವಿಕ ಸಂಯುಕ್ತಗಳ ತಯಾರಿಕೆಯಲ್ಲಿ ಇದೆ. ಇದನ್ನು ಪಿವಿಸಿ (ಪಾಲಿ ವಿನೈಲ್ ಕ್ಲೋರೈಡ್- ಪ್ಲಾಸ್ಟಿಕ್ ತಯಾರಿಕೆ) ತಯಾರಿಕೆಗೆ ಬಳಸುವ ವಿನೈಲ್ ಕ್ಲೋರೈಡ್ ಮತ್ತು ಡೈಕ್ಲೋರೋಈಥೇನ್ ತಯಾರಿಸಲು ಬಳಸಲಾಗುತ್ತದೆ. ಇಂತಹ ಇತರ ತಯಾರಿಕೆಗಳು ಬಿಸ್ಪೆನಾಲ್, ಆಕ್ಟಿವೇಟೆಡ್ ಕಾರ್ಬನ್, ಅಸ್ಕಾರ್ಬಿಕ್ ಆಮ್ಲ ಮತ್ತು ಹಲವು ಔಷದ ತಯಾರಿಕೆಗಳನ್ನು ಒಳಗೊಂಡಿದೆ.[೨೨]
ಹೈಡ್ರೋಕ್ಲೋರಿಕ್ ಆಮ್ಲವನ್ನು ಹಲವು ಅಕಾರ್ಬನಿಕ ಸಂಯುಕ್ತಗಳನ್ನು ತಯಾರಿಸಲೂ ಬಳಸಲಾಗುತ್ತದೆ. ಇದು ನೀರಿನ ಶುದ್ಧೀಕರಣದಲ್ಲಿ ಬಳಸುವ ಕಬ್ಬಿಣ (III) ಕ್ಲೋರೈಡ್ ಹಾಗೂ ಪಾಲಿಅಲ್ಯೂಮಿನಿಯಮ್ ಕ್ಲೋರೈಡ್, ಎಲೆಕ್ಟ್ರೋಪ್ಲೇಟಿಂಗ್ಗೆ ಬಳಸುವ ನಿಕ್ಕಲ್ (II) ಕ್ಲೋರೈಡ್, ಗ್ಯಾಲ್ವನೀಕರಿಸುವ ಕೈಗಾರಿಕೆ (ತುಕ್ಕು ನಿಯಂತ್ರಣಕ್ಕಾಗಿ ಸತುವು ಲೇಪಿಸುವ ಕೈಗಾರಿಕೆ) ಮತ್ತು ಬ್ಯಾಟರಿಯಲ್ಲಿ ಬಳಸುವ ಸತುವಿನ ಕ್ಲೋರೈಡ್ ಉತ್ಪಾದನೆಯನ್ನು ಒಳಗೊಂಡಿದೆ.
ಅಯಾನು ವಿನಿಮಯ ರಾಳ (ಇವನ್ನು ಅಯಾನು ತೆಗೆಯಲು ಬಳಸಲಾಗುತ್ತದೆ) ಗಳ ಪುನರುತ್ಪತ್ತಿಗೆ ಈ ಆಮ್ಲವನ್ನು ಬಳಸಲಾಗುತ್ತದೆ. ಜಲೀಯ ದ್ರಾವಣದಿಂದ ಧನಾವೇಶದ ಅಯಾನುಗಳು ಉದಾಹರಣೆಗೆ Na+ ಮತ್ತು Ca+2 ತೆಗೆಯಲು ಬಳಸಲಾಗುತ್ತದೆ. ಇಲ್ಲಿ ದ್ರಾವಣದಲ್ಲಿನ Na+ ಬದಲು H+ಮತ್ತು Ca+2 ಬದಲು H+2 ಬರುವ ಮೂಲಕ ತೆಗೆಯಲ್ಪಡುತ್ತವೆ ಮತ್ತು ಖನಿಜರಹಿತ ನೀರು ಉಂಟಾಗುತ್ತದೆ. ಇದನ್ನು ದ್ರಾವಣದ ಆಮ್ಲೀಯತೆಯನ್ನು ನಿಯಂತ್ರಿಸಲು ಸಹ ಬಳಸಬಹುದು.
ಹೈಡ್ರೊಕ್ಲೋರಿಕ್ ಆಮ್ಲವನ್ನು ಚರ್ಮ ಹದಮಾಡಲು, ಮನೆ ಚೊಕ್ಕಟವಾಗಿಡಲು,[೨೯] [30] ಕಟ್ಟಡ ಕಟ್ಟುವಿಕೆಯಲ್ಲಿ[೨೨] ಬಳಸಲಾಗುತ್ತದೆ. ಎಣ್ಣೆ (ಪೆಟ್ರೋಲಿಯಂ) ಬಾವಿಗಳ ರಂದ್ರ ದೊಡ್ಡದು ಮಾಡುವುದಕ್ಕಾಗಿ ಕಲ್ಲಿನ ಒಂದು ಭಾಗ ಕರಗಿಸಲು ಇದನ್ನು ಬಳಸಲಾಗುತ್ತದೆ. ಅಸ್ಪರ್ಟಮೆ, ಫ್ರುಕ್ಟೋಸ್, ಸಿಟ್ರಿಕ್ ಆಮ್ಲ, ಲೈಸಿನ್ ಮುಂತಾದ ಹಲವು ಆಹಾರ ಕೈಗಾರಿಕೆಯ ಅಗತ್ಯ ಪದಾರ್ಥಗಳನ್ನು ತಯಾರಿಸಲು ಬಳಸುತ್ತಾರೆ.
ಜೀವಿಗಳಲ್ಲಿ ಇರುವಿಕೆ
[ಬದಲಾಯಿಸಿ]ಹೊಟ್ಟೆಯಲ್ಲಿನ ದ್ರವಿಸುವಿಕೆ ಗ್ಯಾಸ್ಟ್ರಿಕ್ ಆಮ್ಲವು ಪ್ರಮುಖವಾಗಿ ಹೈಡ್ರೊಕ್ಲೋರಿಕ್ ಆಮ್ಲವನ್ನು ಒಳಗೊಂಡಿರುತ್ತದೆ. ಇದು ಹೊಟ್ಟೆಯೊಳಗಿನ ಪದಾರ್ಥಗಳ pHನ್ನು 1 ರಿಂದ 2 ಮಾಡುತ್ತದೆ.[೩೦][೩೧] ಹೊಟ್ಟೆಯ ಮೇಲ್ಭಾಗದ ತಳದಲ್ಲಿರುವ ಜಠರ ಲೋಳೆಪೊರೆಯಲ್ಲಿನ (ಗ್ಯಾಸ್ಟ್ರಿಕ್ ಮ್ಯುಕೋಸ) ದೇಹಭಿತ್ತಿಕ (ಪರೈಟಲ್) ಜೀವಕೋಶಗಳು ಹೈಡ್ರೊಜನ್ ಅಯಾನು (H+) ಮತ್ತು ಕ್ಲೋರೈಡ್ ಅಯಾನುಗಳನ್ನು (Cl-) ಬಿಡಿಬಿಡಿಯಾಗಿ ಶ್ರವಿಸುತ್ತದೆ.[೩೨] ಗ್ಯಾಸ್ಟ್ರಿಕ್ ಆಮ್ಲಗಳು ಸೂಕ್ಷ್ಮಜೀವಿಗಳನ್ನು ತಡೆಯುವ ಮೂಲಕ ಸೋಂಕು ತಡೆಯುತ್ತವೆ ಮತ್ತು ಅಲ್ಲಿನ ಕಡಿಮೆ pH ಪ್ರೋಟೀನ್ಗಳ ಮೂಲ ಗುಣವನ್ನು ಕಳೆದು ಪೆಪ್ಸಿನ್ನಂತಹ ಕಿಣ್ವ (ಎಂಜೈಮು) ಅದನ್ನು ಮುರಿಯುವಂತೆ ಮಾಡುತ್ತದೆ. ಡಿಯೊಡಿನಮ್ಗೆ (ಸಣ್ಣಕರಳಿನ ಮೊದಲ ಭಾಗ) ಜಠರರಸ ಬಂದಾಗ ಅದು ಸೋಡಿಯಮ್ ಬೈಕಾರ್ಬೊನೇಟ್ನಿಂದ ತಟಸ್ಥವಾಗುತ್ತದೆ.[೩೦]
ಹೊಟ್ಟೆಯಲ್ಲಿನ ಲೊಳೆಯ ದಪ್ಪ ಪದರ ಮತ್ತು ಸೊಡಿಯಮ್ ಬೈಕಾರ್ಬೊನೇಟ್ನ ಪ್ರತಿರೋಧಕವು ಅದನ್ನು ಪ್ರಬಲ ಆಮ್ಲದಿಂದ ರಕ್ಷಿಸುತ್ತವೆ. ಹೊಟ್ಟೆಯುರಿ ಅಥವಾ ಜಠರವ್ರಣ (ಗ್ಯಾಸ್ಟ್ರಿಕ್ ಅಲ್ಸರ್) ಮುಂತಾದವುಗಳು ಈ ವ್ಯವಸ್ಥೆ ವಿಫಲವಾದಾಗ ಉಂಟಾಗುತ್ತವೆ. ಕೆಲವು ಔಷದಿಗಳು ಹೈಡ್ರೊಕ್ಲೋರಿಕ್ ಆಮ್ಲ ಉತ್ಪಾದನೆಯನ್ನು ತಡೆಯಬಲ್ಲವು. ಯಾಂಟಿಆಸಿಡ್ಗಳನ್ನು ಹೊಟ್ಟೆಯಲ್ಲಿ ಇರುವ ಆಸಿಡ್ಗಳನ್ನು ತಟಸ್ಥಗೊಳಿಸಲು ಬಳಸಲಾಗುತ್ತದೆ.[೩೦][೩೩]
ಸುರಕ್ಷೆ
[ಬದಲಾಯಿಸಿ]10% ನಿಂದ 25% ಸಾಂದ್ರೀಕರಿಸಿದ (ತೂಕದ ಆಧಾರದ ಮೇಲೆ) ಈ ಆಮ್ಲದ ದ್ರಾವಣ ಕಿರಿಕಿರಿ ಉಂಟುಮಾಡುತ್ತದೆ; 25%ಕ್ಕೂ ಹೆಚ್ಚು ಸಾಂದ್ರೀಕರಿಸಿದ ಆಮ್ಲ ತಿಂದುಹಾಕುವ ಅಥವಾ ಸಾಂಕ್ಷಾರಕತ್ವ ಗುಣ ಹೊಂದಿದೆ.[೩೪] ಸಾಂದ್ರೀಕರಿಸಿದ ಆಮ್ಲದ ಹೊಗೆ ಮತ್ತು ದ್ರಾವಣ ಮಾನವನ ಅಂಗಾಶಗಳನ್ನು ತಿಂದುಹಾಕಬಲ್ಲದು. ಹೀಗಾಗಿ ಇದು ಮತ್ತೆ ರಿಪೇರಿ ಮಾಡದ ರೀತಿಯಲ್ಲಿ ಉಸಿರಾಟದ ಅಂಗಾಗಗಳು, ಕಣ್ಣು, ಚರ್ಮ ಮತ್ತು ಕರುಳಗಳನ್ನು ಹಾಳುಮಾಡಬಲ್ಲದು. ಹೈಡ್ರೊಕ್ಲೋರಿಕ್ ಆಮ್ಲವನ್ನು ಸೋಡಿಯಮ್ ಹೈಪೊಕ್ಲೋರೈಟ್ (NaClO ಅಥವಾ ಚಲುವೆಪುಡಿ -ಬ್ಲೀಚ್) ಅಥವಾ ಪೊಟಾಸಿಯಮ್ ಪರಮಾಂಗನೇಟ್ (KmnO4) ನಂತಹ ಆಕ್ಸಿಡೀಕರಿಸುವ ರಾಸಾಯನಿಕ ಗಳೊಂದಿಗೆ ಮಿಶ್ರಣ ಮಾಡಿದಾಗ ವಿಷಕಾರಿ ಕ್ಲೋರಿನ್ ಅನಿಲ ಬಿಡುಗಡೆಯಾಗುತ್ತದೆ.
ರಕ್ಷಣೆಗೆ ಗ್ಲೋವ್ಸ್, ಗಾಗಲ್ಸ್, ರಾಸಾಯನಿಕ ನಿರೋಧ ಉಡುಪುಗಳನ್ನು ತೊಡುವ ಮೂಲಕ ಆಮ್ಲದ ಪ್ರಭಾವ ಕಡಿಮೆ ಮಾಡಬಹುದು.
ಉಲ್ಲೇಖ ಮತ್ತು ಟಿಪ್ಪಣಿಗಳು
[ಬದಲಾಯಿಸಿ]- ↑ ಉಲ್ಲೇಖ ದೋಷ: Invalid
<ref>
tag; no text was provided for refs namedmuriatic_acid
- ↑ "spirits of salt". Retrieved 29 May 2012.
- ↑ Favre HA, Powell WH, eds. (2014). Nomenclature of Organic Chemistry: IUPAC Recommendations and Preferred Names 2013. Cambridge: The Royal Society of Chemistry. p. 131.
- ↑ "Hydrochloric acid". www.chemsrc.com.
- ↑ Trummal A, Lipping L, Kaljurand I, Koppel IA, Leito I (May 2016). "Acidity of Strong Acids in Water and Dimethyl Sulfoxide". The Journal of Physical Chemistry A (in ಇಂಗ್ಲಿಷ್). 120 (20): 3663–9. Bibcode:2016JPCA..120.3663T. doi:10.1021/acs.jpca.6b02253. PMID 27115918. S2CID 29697201.
- ↑ ೬.೦ ೬.೧ ೬.೨ Sigma-Aldrich Co., Hydrochloric acid.
- ↑ ಇಂಗ್ಲೀಶ್ ವಿಕಿಪೀಡಿಯದ Hydrochloric acidನ ಭಾಗಶಹ ಅನುವಾದ, ಪಡೆದ ದಿನಾಂಕ 2016-12-13
- ↑ ೮.೦ ೮.೧ Hydrogen Chloride Archived 2016-11-22 ವೇಬ್ಯಾಕ್ ಮೆಷಿನ್ ನಲ್ಲಿ. retrived on 2012-12-12
- ↑ Bauer, Hugo (2009). A history of chemistry. BiblioBazaar, LLC. p. 31. ISBN 978-1-103-35786-4.
- ↑ Karpenko, V.; Norris, J.A. (2001). "Vitriol in the history of chemistry" (PDF). Chem. Listy. 96: 997.
- ↑ ೧೧.೦ ೧೧.೧ ೧೧.೨ ೧೧.೩ ೧೧.೪ "Hydrochloric Acid". Chemicals Economics Handbook. SRI International. 2001. pp. 733.4000A–733.3003F.
- ↑ Norton, S (2008). "A Brief History of Potable Gold" (PDF). Molecular Interventions. 8 (3): 120–3. doi:10.1124/mi.8.3.1. PMID 18693188.
- ↑ Thompson, C.J.S. (2002). "Alchemy and Alchemists" (Reprint of the edition published by George G. Harrap and Co., London, 1932 ed.). Dover Publications, Inc., Mineola, NY: 61, 18.
- ↑ Forbes, Robert James (1970). A short history of the art of distillation: from the beginnings up to the death of Cellier Blumenthal. BRILL. ISBN 978-90-04-00617-1.
- ↑ Myers, R.L. (2007).[ https://books.google.co.in/books?id=a4DuGVwyN6cC&lpg=PA141&dq=geber+hydrochloric+acid&pg=PA141&redir_esc=y&hl=en#v=onepage&q=geber%20hydrochloric%20acid&f=false The 100 most important chemical compounds: a reference guide]. Greenwood Publishing Group. p. 141. ISBN 978-0-313-33758-1.
- ↑ Datta, N.C. (2005).[ https://books.google.co.in/books?id=IIZkAvdFJhMC&lpg=PA40&dq=geber+hydrochloric+acid&pg=PA40&redir_esc=y&hl=en#v=onepage&q=geber%20hydrochloric%20acid&f=false The story of chemistry]. Universities Press. p. 40. ISBN 978-81-7371-530-3.
- ↑ Pereira, Jonathan (1854). The elements of materia medica and therapeutics, Volume 1. Longman, Brown, Green, and Longmans. p. 387.
- ↑ Leicester, Henry Marshall (1971). The historical background of chemistry. Courier Dover Publications. p. 99. ISBN 978-0-486-61053-5. Retrieved 19 August 2010.
- ↑ Priestley, Joseph (1772). "Observations on different kinds of air [i.e., gases]". Philosophical Transactions of the Royal Society of London. 62: 147–264 (234–244). doi:10.1098/rstl.1772.0021.
- ↑ Davy, Humphry (1808). "Electro-chemical researches, on the decomposition of the earths; with observations on the metals obtained from the alkaline earths, and on the amalgam procured from ammonia". Philosophical Transactions of the Royal Society of London'. 98: 333–370. doi:10.1098/rstl.1808.0023. p. 343: When potassium was heated in muriatic acid gas [i.e., gaseous hydrogen chloride], as dry as it could be obtained by common chemical means, there was a violent chemical action with ignition; and when the potassium was in sufficient quantity, the muriatic acid gas wholly disappeared, and from one-third to one-fourth of its volume of hydrogene was evolved, and muriate of potash [i.e., potassium chloride] was formed. (The reaction was: 2HCl + 2K → 2KCl + H2)
- ↑ ೨೧.೦ ೨೧.೧ Aftalion, Fred (1991). A History of the International Chemical Industry. Philadelphia: University of Pennsylvania Press. ISBN 0-8122-1297-5.
- ↑ ೨೨.೦ ೨೨.೧ ೨೨.೨ Greenwood, Norman N.; Earnshaw, Alan (1997). Chemistry of the Elements (2nd ed.). Butterworth-Heinemann. pp. 946–48. ISBN 0-08-037941-9.
- ↑ ೨೩.೦ ೨೩.೧ Lide, David (2000). CRC Handbook of Chemistry and Physics (81st ed.). CRC Press. ISBN 0-8493-0481-4.
- ↑ ೨೪.೦ ೨೪.೧ Perry, R.; Green D.; Maloney J. (1984).Perry's Chemical Engineers' Handbook (6th ed.). McGraw-Hill Book Company. ISBN 0-07-049479-7.
- ↑ ಈ ಆರು ಖನಿಜ ಆಮ್ಲಗಳು- ಅವುಗಳ ಆಮ್ಲೀಯತೆಯ ಸಾಮರ್ಥದ ಆಧಾರದ ಮೇಲೆ (ಹೆಚ್ಚಿನದು ಮೊದಲು) –ಪೆರ್ಕ್ಲೋರಿಕ್ ಆಮ್ಲ, ಹೈಡ್ರೊಐಯೊಡಿಕ್ ಆಮ್ಲ, ಹೈಡ್ರೊಬ್ರೋಮಿಕ್ ಆಮ್ಲ, ಹೊಡ್ರೊಕ್ಲೋರಿಕ್ ಆಮ್ಲ, ಗಂಧಕಾಮ್ಲ, ಟೊಲುನೆಸಲ್ಳೊನಿಕ್ ಆಮ್ಲ ಮತ್ತು ಮೀಥೇನ್ಸಲ್ಫೋನಿಕ್ ಆಮ್ಲ
- ↑ Mendham, J.; Denney, R. C.; Barnes, J. D.; Thomas, M.J.K.; Denney, R. C.; Thomas, M. J. K. (2000). Vogel's Quantitative Chemical Analysis (6th ed.). New York: Prentice Hall. ISBN 0-582-22628-7.
- ↑ Lide D (2000). CRC Handbook of Chemistry and Physics (81st ed.). CRC Press. ISBN 978-0-8493-0481-1.
- ↑ Perry R, Green D, Maloney J (1984). Perry's Chemical Engineers' Handbook (6th ed.). McGraw-Hill Book Company. ISBN 978-0-07-049479-4.
- ↑ Simhon, Rachel (13 September 2003). "Household plc: really filthy bathroom". The Daily Telegraph. London. Retrieved 31 March 2010.
- ↑ ೩೦.೦ ೩೦.೧ ೩೦.೨ Maton, Anthea; Jean Hopkins; Charles William McLaughlin; Susan Johnson; Maryanna Quon Warner; David LaHart; Jill D. Wright (1993). Human Biology and Health. Englewood Cliffs, New Jersey, USA: Prentice Hall. ISBN 0-13-981176-1.
- ↑ Haas, Elson. "Digestive Aids:Hydrochloric acid". healthy.net.
- ↑ Arthur, C.; Guyton, M. D.; Hall, John E. (2000). Textbook of Medical Physiology (10th ed.). W.B. Saunders Company. ISBN 0-7216-8677-X.
- ↑ Bowen, R. (18 March 2003). "Control and Physiologic Effects of Secretin". Colorado State University. Retrieved 16 March 2009.
- ↑ "Council Directive 67/548/EEC of 27 June 1967 on the approximation of laws, regulations and administrative provisions relating to the classification, packaging and labelling of dangerous substances". EUR-lex. Retrieved 2 September 2008
ಹೊರಗಿನ ಕೊಂಡಿಗಳು
[ಬದಲಾಯಿಸಿ]- NIST WebBook, general link
- Hydrochloric Acid – Part One and Hydrochloric Acid – Part Two at The Periodic Table of Videos (University of Nottingham)
- Calculators: surface tensions Archived 2020-02-22 ವೇಬ್ಯಾಕ್ ಮೆಷಿನ್ ನಲ್ಲಿ., and densities, molarities and molalities Archived 2020-02-22 ವೇಬ್ಯಾಕ್ ಮೆಷಿನ್ ನಲ್ಲಿ. of aqueous HCl
- General safety information
- EPA Hazard Summary
- Hydrochloric acid MSDS by Georgia Institute of Technology
- NIOSH Pocket Guide to Chemical Hazards
- Pollution information
- Pages with reference errors
- Pages using the JsonConfig extension
- CS1 ಇಂಗ್ಲಿಷ್-language sources (en)
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Pages using ISBN magic links
- Pages using PMID magic links
- Articles without InChI source
- Articles without KEGG source
- ECHA InfoCard ID from Wikidata
- E number from Wikidata
- Chembox having GHS data
- GHS errors
- Articles containing unverified chemical infoboxes
- ರಸಾಯನಶಾಸ್ತ್ರ
- ರಾಸಾಯನಿಕ ಸಂಯುಕ್ತಗಳು
- ಆಮ್ಲಗಳು
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ