ವಿಷಯಕ್ಕೆ ಹೋಗು

ಗ್ಯಾಲ್ವನೀಕರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೀದಿ ದೀಪದ ದೀಪಸ್ಥಂಬವನ್ನು ಗ್ಯಾಲ್ವನೀಕರಿಸಿರುವುದು

ಕಬ್ಬಿಣದ ಇಲ್ಲವೇ ಉಕ್ಕಿನ ಪದಾರ್ಥಗಳಲ್ಲಿನ ಫೆರ್ರಸ್ ತಳಕ್ಕೆ ತುಕ್ಕು ಹಿಡಿಯದಂತೆ ಮಾಡಲು ಅವುಗಳಿಗೆ ತೆಳು ಪದರವನ್ನು ಲೇಪಿಸಲು ಬಳಸುವ ವಿವಿಧ ತಂತ್ರಗಳ ಸಾಮೂಹಿಕ ಹೆಸರು (ಗ್ಯಾಲ್ವನೈಸೇಷನ್).

ಗ್ಯಾಲ್ವನೀಕರಿಸಿದ ಮೊಳೆಗಳು

ಗಾಳಿ, ನೀರು ಮತ್ತು ಆಮ್ಲಗಳ ಪ್ರಭಾವದಿಂದ ಲೋಹಗಳು ಕ್ಷಯಿಸುತ್ತವೆ. ಬಯಲಲ್ಲಿ ಬಿದ್ದಿರುವ ಕಬ್ಬಿಣ ತುಕ್ಕು ಹಿಡಿಯುವುದು ಇದಕ್ಕೊಂದು ಉದಾಹರಣೆ ಆಮ್ಲಜನಕ, ತೇವ ಮತ್ತು ಇಂಗಾಲಾಮ್ಲಗಳ ಪ್ರಭಾವದಿಂದ ಉಂಟಾಗುವ ಕ್ರಿಯಾವಿಶೇಷವೇ ತುಕ್ಕು. ಇದು ಪದಾರ್ಥಗಳ ಮೇಲ್ಮೈನ್ನು ತಿನ್ನುತ್ತ ಅವುಗಳ ನಾಶಕ್ಕೆ ಕಾರಣವಾಗುತ್ತದೆ. ಇದನ್ನು ತಪ್ಪಿಸಬೇಕಾದರೆ ಪದಾರ್ಥಗಳಿಗೆ ಯುಕ್ತ ಮೇಲು ಹೊದಿಕೆಯನ್ನು ಹೊದಿಸಿ ರಕ್ಷಿಸಬೇಕಾಗುತ್ತದೆ. ಇದಕ್ಕಾಗಿ ಬಳಸುವ ಪದಾರ್ಥಗಳಲ್ಲಿ ಸತುವೇ ಅತಿ ಸುಲಭದ ವಸ್ತು. ಸತುವಿನ ಕವಚದ ಮೇಲ್ಮೈಯ ಪದರ ಮೊದಲು ಕ್ಷಯಿಸಿ ಒಂದು ಬಗೆಯ ಕಾರ್ಬೊನೇಟ್ ಉತ್ಪನ್ನವಾಗುವುದು. ಕರಗದೇ ಇರುವ ಕಾರ್ಬೊನೇಟಿನ ಪದರ ಲೋಹಕ್ಕೆ ತುಕ್ಕುಹಿಡಿಯದಂತೆ ಮಾಡುವುದು.[]

ಎಲೆಕ್ಟ್ರೋಪ್ಲೇಟಿಂಗ್

[ಬದಲಾಯಿಸಿ]

ಸತುವನ್ನು ಲೇಪಿಸಿದ ಪದಾರ್ಥಗಳು ಎಲ್ಲ ಸಂದರ್ಭಗಳಲ್ಲಿಯೂ ಉಪಯುಕ್ತವಾಗಿರುವುದಿಲ್ಲ. ಸತುವಿನ ಹೊದಿಕೆಯನ್ನು ಸಮುದ್ರದ ಮೇಲಿನ ಲವಣಮಿಶ್ರಿತ ವಾಯು ಮತ್ತು ಗಂಧಕದ ಹವೆಯಿಂದ ಕೂಡಿದ ಪಟ್ಟಣದ ವಾಯು ಭೇದಿಸುತ್ತವೆ. ಆಮ್ಲ ಕ್ಷಾರಗಳೆರಡೂ ಸತುವನ್ನು ತಿನ್ನುವುದರಿಂದ ಆಹಾರ ಪದಾರ್ಥಗಳನ್ನೀಡುವ ಡಬ್ಬಗಳಿಗೆ ಸತು ಹೊದಿಕೆಯನ್ನು ಹೊದಿಸುವುದಿಲ್ಲ. ಬರೀ ಸತುವಿನ ಹೊದಿಕೆಗಿಂತ ಸತು ಮತ್ತು ನಿಕ್ಕಲುಗಳ ಮಿಶ್ರಣದ ಹೊದಿಕೆ ಉತ್ತಮವಾದ ರಕ್ಷಾಕವಚವನ್ನು ಒದಗಿಸುತ್ತದೆ. ಇಂಥ ಹೊದಿಕೆ ಬೇಕಾದಾಗ ವಿದ್ಯುಲ್ಲೇಪನ (ಎಲೆಕ್ಟ್ರೋಪ್ಲೇಟಿಂಗ್) ವಿಧಾನದಿಂದ ನಿಕ್ಕಲ್ ಪೊರೆಯನ್ನು ರಚಿಸುತ್ತಾರೆ. ಬಳಿಕ ಕುಲುಮೆಯಲ್ಲಿ ಕಾಯಿಸಿದಾಗ ಎರಡು ಪೊರೆಗಳೂ ಒಗ್ಗೂಡಿ ಭದ್ರ ಹೊರಕವಚ ಏರ್ಪಡುವುದು.

ಉಲ್ಲೇಖ

[ಬದಲಾಯಿಸಿ]
  1. [https://books.google.co.in/books?id=W8oGAAAAYAAJ&pg=PA52&dq=%22Specification+of+a+Patent+for+a+process+for+protecting+articles+made+of+Iron+or+Steel+from+oxidation.%22&lr=&as_brr=0&as_pt=ALLTYPES&redir_esc=y#v=onepage&q=%22Specification%20of%20a%20Patent%20for%20a%20process%20for%20protecting%20articles%20made%20of%20Iron%20or%20Steel%20from%20oxidation.%22&f=false ಕಬ್ಬಿಣ ಮತ್ತು ಸ್ಟೀಲ್‍ಅನ್ನು ತುಕ್ಕು ಹಿಡಿಯದಂತೆ ರಕ್ಷಿಸುವುದು ಹೇಗೆ