ರಾಜೋದಕ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ರಾಜೋದಕ.

ರಾಜೋದಕ(Aqua regia) ನೈಟ್ರಿಕ್ ಅಮ್ಲ ಹಾಗೂ ಹೈಡ್ರೋಕ್ಲೋರಿಕ್ ಆಮ್ಲಗಳ ಮಿಶ್ರಣ.ಇದು ರಾಜಲೋಹಗಳೆಂದು ಪರಿಗಣಿತವಾದ ಚಿನ್ನ ಹಾಗೂ ಪ್ಲಾಟಿನಮ್ ಗಳನ್ನು ಕರಗಿಸುವುದರಿಂದ ಲ್ಯಾಟಿನ್ ಭಾಷೆಯಲ್ಲಿ ಇದನ್ನು Aqua regia ಎಂದರೆ ರಾಜ ದ್ರವ್ಯ ಎಂದು ಕರೆದರು.ಇದನ್ನು ೧:೩ರ ಪ್ರಮಾಣದಲ್ಲಿ ಪ್ರಬಲ ನೈಟ್ರಿಕ್ ಅಮ್ಲ ಹಾಗೂ ಹೈಡ್ರೋಕ್ಲೋರಿಕ್ ಆಮ್ಲಗಳನ್ನು ಬೆರೆಸಿ ತಯಾರಿಸುತ್ತಾರೆ.ಇದನ್ನು ಮಿಶ್ರಣ ಮಾಡುವಾಗ ಪ್ರಬಲ ಆಮ್ಲಕಾರಕವಾದ ನೈಟ್ರೋಸಿಲ್ ಕ್ಲೋರೈಡ್ ಹಾಗೂ ಕ್ಲೋರಿನ್ ಅನಿಲವಾಗಿ ಪರಿವರ್ತಿತವಾಗುತ್ತದೆ.ಈ ಮಿಶ್ರಣ ಹಾಗೂ ಹೆಚ್ಚಿನ ಹೈಡ್ರೋಕ್ಲೋರಿಕ್ ಆಮ್ಲ ಸೇರಿ ಲೋಹಗಳನ್ನು ಕರಗಿಸುತ್ತದೆ.ಇದನ್ನು ಹಲವಾರು ಕೈಗಾರಿಕೆಗಳಲ್ಲಿ ಲೋಹಗಳನ್ನು ಶುಚಿಮಾಡಲು,ಗಾಜಿನ ಮೇಲೆ ಎಚ್ಚಿಸ (etching)ಲು,ಗಾಜಿನ ಕೊಳವೆಗಳ ಶುದ್ಧೀಕರಣಕ್ಕೆ ಉಪಯೋಗಿಸುತ್ತಾರೆ.ವಿಶ್ಲೇಷಕ ರಸಾಯನಶಾಸ್ತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಲ್ಲಿದೆ.

"https://kn.wikipedia.org/w/index.php?title=ರಾಜೋದಕ&oldid=318510" ಇಂದ ಪಡೆಯಲ್ಪಟ್ಟಿದೆ