ವಿಷಯಕ್ಕೆ ಹೋಗು

ಸದಸ್ಯ:RajalabandiTejaswi1940568

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ತೇಜಸ್ವಿ .ನಾನು ೨೮ ನವೆಂಬರ್ ೨೦೦೧ದರಲ್ಲಿ ಜನಿಸಿದ್ದೇನೆ .ನನ್ನ ಜನ್ಮ ಸ್ಥಳ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕು. ನನ್ನ ತಂದೆಯ ಹೆಸರು ಸತೀಶ್ ಚಂದ್ರ ,ನನ್ನ ತಾಯಿಯ ಹೆಸರು ಆಂಡಾಳ್. ನನ್ನ ಅಕ್ಕನ ಹೆಸರು ಯಶಸ್ವಿ. ಅವಳು ಕ್ರೈಸ್ಟ್ ಡೀಮ್ಡ್ ಟು ಬಿ ಯೂನಿವರ್ಸಿಟಿಯಲ್ಲಿ ಎಂಎಸ್ಸಿ ಮಾಡುತ್ತಿದ್ದಾಳೆ .ನಾನು ಕಿರಿಯ ಪ್ರಾಥಮಿಕ ಶಿಕ್ಷಣ ಹಾಗೂ ಹಿರಿಯ ಪ್ರಾಥಮಿಕ ಶಿಕ್ಷಣ ಮಾನವೀಯ ಕಾಕತೀಯ ಸ್ಕೂಲಿನಲ್ಲಿ ಮುಗಿಸಿದೆ. ನಾನು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ೯೫.೬% ಅಂಕಗಳನ್ನು ಪಡೆದುಕೊಂಡಿದ್ದೆ. ನಂತರ ಪ್ರಥಮ ಹಾಗೂ ದ್ವಿತೀಯ ಪಿಯುಸಿ, ಸರ್. ಎಂ.ವಿ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದೆ. ನಾನು ನನ್ನ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ೯೨% ಶೇಕಡಾ ದೊಂದಿಗೆ ಉತ್ತೀರ್ಣನಾದೆ .ನಾನು ನನ್ನ ಈಗಿನ ಬಿಎಸ್ಸಿ ಪದವಿಯನ್ನು ಕ್ರೈಸ್ಟ್ ಡೀಮ್ಡ್ ಟುಬಿ ಯೂನಿವರ್ಸಿಟಿಯಲ್ಲಿ ಮಾಡುತ್ತಿದ್ದೇನೆ .ನನಗೆ ನ್ಯಾಷನಲ್ ಇನ್ಸ್ಟಿಟ್ಯೂಟ್ ನಲ್ಲಿ ಎಂಎಸ್ಸಿ ಮುಗಿಸಿ ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂಬ ಆಸೆ ಇದೆ .ನನಗೆ ಪ್ರಾಣಿಗಳೆಂದರೆ ತುಂಬಾ ಇಷ್ಟ .ಹಾಗೂ ನನಗೆ ಚಿತ್ರಕಲೆ ,ಸಂಗೀತದಲ್ಲಿ ತುಂಬಾ ಆಸಕ್ತಿ ಇದೆ .ನನಗೆ ಕನ್ನಡ ಭಾಷೆ ಎಂದರೆ ತುಂಬಾ ಪ್ರೀತಿ .

ಕನ್ನಡದಲ್ಲಿ ಕಥೆಗಳು ,ಪುಸ್ತಕಗಳನ್ನು ಓದಬೇಕೆಂದರೆ ನನಗೆ ಇಷ್ಟ .ಸ್ಕೂಲಿನಿಂದ ಹಿಡಿದು ಇಲ್ಲಿಯವರೆಗೂ ಎಲ್ಲ ಶಿಕ್ಷಕರಿಗಿಂತ ನನಗೆ ಕನ್ನಡ ಶಿಕ್ಷಕರು ಮನಸ್ಸಿಗೆ ತುಂಬಾ ಹತ್ತಿರವಾಗಿದ್ದಾರೆ ಎಂದು ತಿಳಿಸಲು ಇಷ್ಟಪಡುತ್ತೇನೆ .ನನಗೆ ಪ್ರವಾಸ ಮಾಡಲು ತುಂಬಾ ಇಷ್ಟ. ನಮ್ಮ ಊರಿನ ಹತ್ತಿರ ಹಂಪಿ ,ಅಂಜನಾದ್ರಿ ಬೆಟ್ಟ ,ಮಂತ್ರಾಲಯ ಹೀಗೆ ಮೊದಲಾದ ಪ್ರಸಿದ್ಧವಾದ ಸ್ಥಳಗಳು ಇವೆ.ತಿಂಗಳಿಗೊಮ್ಮೆ ನಾನು ಈ ಎಲ್ಲ ಸ್ಥಳಗಳಿಗೆ ಕುಟುಂಬದೊಂದಿಗೆ ಭೇಟಿ ಕೊಡುತ್ತೇನೆ .ನಮ್ಮ ಊರು ಅಕ್ಕಿ, ಜೋಳ, ರಾಗಿ ಇವುಗಳನ್ನು ಬೆಳೆಯುವುದಕ್ಕೆ ಪ್ರಸಿದ್ಧವಾಗಿದೆ .ಅದಕ್ಕಾಗಿ ಅದನ್ನು ಭತ್ತದ ನಾಡು ಎಂದು ಕರೆಯುತ್ತಾರೆ .ನನಗೆ ಕನ್ನಡ ಪದ್ಯಗಳು, ಪಾಠಗಳು ಹಾಗೂ ತರಗತಿಯಲ್ಲಿ ಕುಳಿತುಕೊಂಡು ಶಿಕ್ಷಕರು ಹೇಳುವ ಪಾಠವನ್ನು ಕೇಳುವುದೆಂದರೆ ತುಂಬಾ ಇಷ್ಟ ಎಂದು ಹೇಳಲು ಬಯಸುತ್ತೇನೆ .

ನಾನು ಜೀವನದಲ್ಲಿ ಒಂದು ಒಳ್ಳೆಯ ಸ್ಥಾನಕ್ಕೆ ಬಂದ ಮೇಲೆ ನಾನು ಸಂಪಾದನೆ ಮಾಡುವ ಹಣದಲ್ಲಿ ಕಾಲು ಭಾಗದಷ್ಟು ಇನ್ನೊಬ್ಬರಿಗೆ ಸಹಾಯ ಮಾಡಬೇಕು ,ಮರ ಗಿಡಗಳನ್ನು ನೆಡಬೇಕು ಎನ್ನುವುದು ನಂದು ಗುರಿಯಾಗಿದೆ .ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಆದರೆ ಈಗಿನ ಕಾಲದಲ್ಲಿ ಗಿಡ ಮರಗಳನ್ನೆಲ್ಲ ಕಡಿದು ಬರೇ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ಆದ್ದರಿಂದ ಮಳೆ ,ಬೆಳೆ ಎಲ್ಲ ಕಮ್ಮಿಯಾಗುತ್ತಿದೆ .ನನಗೆ ನನ್ನ ಜೀವನದಲ್ಲಿ ನಾನು ಸಂಪಾದನೆ ಮಾಡುವ ಹಣ ನನಗೆ ಅಷ್ಟೇ ಉಪಯೋಗ ಆಗಿದೆ ಕನಿಷ್ಠ ನೂರು ಜನಕ್ಕಾದರೂ ನಾನು ಸಹಾಯ ಮಾಡಬೇಕೆಂಬುದು ನನ್ನ ಆಸೆ .ನನಗೆ ಇಂತಹ ಯೋಚನೆ ಬರಲು ಕಾರಣ ಯಾರೆಂದರೆ ನನ್ನ ತಂದೆ- ತಾಯಿ.ನನಗೆ ಇಂತಹ ಒಳ್ಳೆಯ ತಂದೆ -ತಾಯಿ ಇರುವುದು ನನ್ನ ಅದೃಷ್ಟ ಎಂದು ಹೇಳಲು ಬಯಸುತ್ತೇನೆ .

ಇನ್ನು ಪ್ರಾಣಿಗಳ ವಿಷಯಕ್ಕೆ ಬಂದರೆ ಮನುಷ್ಯರು ತಮ್ಮ ಅವಶ್ಯ ಕ್ಕಾಗಿ ಗೋಹತ್ಯೆಯನ್ನು ಮಾಡುತ್ತಿದ್ದಾರೆ. ನನಗೆ ಈ ವಿಷಯದ ಬಗ್ಗೆ ತುಂಬಾ ಬೇಸರವಿದೆ. ನಾನು ಇದನ್ನು ತಡೆಯಲು ಪ್ರಯತ್ನಿಸುವೆ ಎಂದು ಹೇಳಲು ಬಯಸುತ್ತೇನೆ .ನಾನು ನನ್ನ ಜೀವನದಲ್ಲಿ ಎಷ್ಟೇ ಸಲ ಸೋತರು, ಬಿದ್ದು ಎದ್ದರೂ ನನ್ನ ಪ್ರಯತ್ನವನ್ನು ಅಥವಾ ಆಸಕ್ತಿಯನ್ನು ಬಿಡದೆ ಗೆದ್ದು ತೋರಿಸುವೆ ಎಂದು ಹೇಳಲು ಇಷ್ಟಪಡುತ್ತೇನೆ. ನನ್ನ ತಂದೆ ತಾಯಿಗೆ ಒಬ್ಬ ಒಳ್ಳೆಯ ಮಗಳಾಗಿ ಹಾಗೂ ದೇಶಕ್ಕೆ ಒಳ್ಳೆಯ ಪ್ರಜೆಯಾಗಿರಬೇಕು ಎನ್ನುವುದು ನನ್ನ ಆಸೆ .ಕೊನೆಯದಾಗಿ ನನ್ನ ಬಗ್ಗೆ ತಿಳಿಸಲು ಅವಕಾಶ ಕೊಟ್ಟಿದ್ದ ಕನ್ನಡ ಶಿಕ್ಷಕರಿಗೆ ವಂದನೆಗಳು .

ರಾಯಚೂರು ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿರುವ ಪ್ರಮುಖ ಜಿಲ್ಲೆ. ರಾಯಚೂರು ಜಿಲ್ಲೆಯ ಜನಸಂಖ್ಯೆ ೨೦೧೧ ರ ಜನಗಣತಿಯಂತೆ ೧೯,೨೮,೮೧೨. ರಾಯಚೂರು ಜಿಲ್ಲೆಯಲ್ಲಿ ಏಳು ತಾಲೂಕುಗಳಿವೆ: ರಾಯಚೂರು, ದೇವದುರ್ಗ, ಸಿಂಧನೂರು, ಮಾನವಿ((ಸಿರವಾರ)),((ಮಸ್ಕಿ)),ಲಿಂಗಸೂಗೂರು. ಈ ಜಿಲ್ಲೆಯ ಜಿಲ್ಲಾಕೇಂದ್ರ ರಾಯಚೂರು ನಗರ. ಇದು ಬೆಂಗಳೂರಿನಿಂದ ೪೦೯ ಕಿಮೀ ದೂರದಲ್ಲಿದೆ.

ಭಾರತದ ಸ್ವಾತಂತ್ರ ಹೋರಾಟ ಮತ್ತು ನಂತರದ ಹೈದ್ರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟದಲ್ಲಿ ಈ ಜಿಲ್ಲೆಯ ಜನತೆಯ ಪಾತ್ರ ಪ್ರಮುಖವಾದುದು. ರಾಯಚೂರು ಕೋಟೆ ರಾಯಚೂರು ನಗರದ ಚಾರಿತ್ರಿಕ ಆಕರ್ಷಣೆಗಳಲ್ಲಿ ಒಂದು - ಇದನ್ನು ೧೨೯೪ ರಲ್ಲಿ ಕಟ್ಟಲಾಯಿತು. ರಾಯಚೂರಿನ ಇನ್ನೊಂದು ವಿಶೇಷತೆಯೆಂದರೆ ವಿಜಯನಗರ ಸಾಮ್ರಾಜ್ಯ ಮತ್ತು ಬಹುಮನಿ ಸಾಮ್ರಾಜ್ಯಗಳ ಅರಸರ ಕಾಲದಲ್ಲಿ ಈ ಪ್ರದೇಶ ಹೋರಾಟದ ಅಂಗಳವೂ ಆಗಿತ್ತೆನ್ನಬಹುದು.

  • ರಾಯಚೂರು ಜಿಲ್ಲೆಯ ಶಕ್ತಿನಗರದಲ್ಲಿ ಇರುವ ಶಾಖೋತ್ಪನ್ನ ವಿದ್ಯುತ್‌ಸ್ಥಾವರ ಕರ್ನಾಟಕದಲ್ಲಿಬಳಸಲ್ಪಡುವ ವಿದ್ಯುಚ್ಛಕ್ತಿಯ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ.
  • ಲಿಂಗಸೂಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿಯು ದೇಶದಲ್ಲಿಯೇ ಅತಿ ಹೆಚ್ಚು ಚಿನ್ನದ ಅದಿರು ಹೊಂದಿರುವ ಗಣಿಯಾಗಿದೆ. ಅಶೋಕನ ಕಾಲದ ಮಸ್ಕಿ ಶಾಸನ ದೊರೆತಿರುವುದು ಇದೇ ತಾಲೂಕಿನ ಮಸ್ಕಿಯಲ್ಲಿದೆ. ಇದೇ ಶಾಸನದಲ್ಲಿ ದೇವನಾಂಪ್ರಿಯಸ ಅಸೋಕಸ ಎನ್ನುವ ಪ್ರಸಿದ್ಡ ಸಾಲಿದೆ.
  • ಸಿಂಧನೂರು ರಾಜ್ಯದಲ್ಲಿಯೇ ಅತಿ ಹೆಚ್ಚು ಪ್ರಮಾಣದಲ್ಲಿ ಭತ್ತ ಬೆಳೆಯುವ ಪ್ರದೇಶವಾಗಿದೆ.
  • ಲಿಂಗಸೂಗೂರು ತಾಲ್ಲೂಕಿನ ಮುದುಗಲ್ ನಲ್ಲಿ ಐತಿಹಾಸಿಕ ಕೋಟೆ ಇದ್ದು, ಮೊಹರಂ ಆಚರಣೆ ವಿಜೃಂಭಣೆಯಿಂದ ಜರಗುತ್ತದೆ.ಹಾಗೂ ಲಿಂಗಸೂಗೂರು ತಾಲ್ಲೂಕಿನ ಮಸ್ಕಿ ಗ್ರಾಮದಲ್ಲಿ ಅಶೋಕನ ಶೀಲಾಶಾಸನ ದೊರತಿದೆ.
  • ರಾಯಚೂರು ಕೋಟೆ
    ಜಲದುರ್ಗದಲ್ಲಿರುವ ಕೋಟೆ, ಅತ್ಯಂತ ವಿಶೇಷವಾಗಿ ನಿರ್ಮಿಸಲಾದ ಕೋಟೆಗಳಲ್ಲಿ ಒಂದಾಗಿದೆ.
  • ಮಂತ್ರಾಲಯವು ರಾಯಚೂರಿನಿಂದ ಹತ್ತಿರದಲ್ಲಿದೆ.
  • ಮಾನವಿಕೊನೆಯ ತಾಲೂಕು.ಈ ಮಾನವಿಯಲ್ಲಿ ದಾಸ ಸಾಹಿತ್ಯ ಉಗಮವಾಗಿದ್ದು. ವಿಜಯ ದಾಸರು ಮಾನವಿ ತಾಲೂಕಿನವರು.
  • ಬೆಂಗಳೂರು ನಗರವು ಕ್ರಿ.ಶ.1537ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ನಿರ್ಮಾಣವಾಯಿತು. ಇದು ದಕ್ಷಿಣ ಪ್ರಸ್ಥಭೂಮಿಯ ಮೇಲಿದ್ದು, ಕರ್ನಾಟಕದಆಗ್ನೇಯ ದಿಕ್ಕಿನಲ್ಲಿದೆ. ಭಾರತದ ೫ನೇ ದೊಡ್ಡ ಮಹಾನಗರವಾಗಿರುವ ಬೆಂಗಳೂರು ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ೩ನೇ ಸ್ಥಾನದಲ್ಲಿದೆ.
  • ಜಗತ್ತಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಮಹತ್ತರವಾದ ಕಾಣಿಕೆ ನೀಡುತ್ತಾ ಬಂದಿರುವ ಕಾರಣ ಬೆಂಗಳೂರು ವಿಶ್ವಾದ್ಯಂತ ಭಾರತದ 'ಸಿಲಿಕಾನ್ ವ್ಯಾಲಿ' ಎಂದೇ ಪ್ರಸಿದ್ಧ. ಸಮುದ್ರ ಮಟ್ಟದಿಂದ ಸುಮಾರು ೩೦೦೦ ಅಡಿ (೯೧೪.೪ ಮೀ)ಗಳಿಗಿಂತ ಎತ್ತರದಲ್ಲಿರುವ ಬೆಂಗಳೂರು ನಗರವು ವರ್ಷವಿಡೀ ಆಹ್ಲಾದಕರ ವಾತಾವರಣ ಹೊಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೆರೆಗಳನ್ನು ಹೊಂದಿದೆ. 'ಕಬ್ಬನ್ ಪಾರ್ಕ್', 'ಲಾಲ್ ಬಾಗ್'ಗಳಂತಹ ದೊಡ್ಡ ಉದ್ಯಾನವನಗಳನ್ನು ಹೊಂದಿರುವ ಈ ನಗರವು 'ಉದ್ಯಾನ ನಗರಿ' ಎಂದೂ ಪ್ರಸಿದ್ಧ. ವಿಶ್ವದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯಮಿಗಳ ಅಚ್ಚುಮೆಚ್ಚಿನ ೧೦ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ಕ್ರಿಸ್ತ ಶಕ ೧೫೩೭ರ ತನಕ ಬೆಂಗಳೂರು ದಕ್ಷಿಣ ಭಾರತದ ಸಂಸ್ಥಾನಗಳಾದ ಗಂಗ, ಚೋಳ ಮತ್ತು ಹೊಯ್ಸಳರಆಳ್ವಿಕೆಗೆ ಒಳಪಟ್ಟಿದೆ. ನಂತರ ವಿಜಯನಗರ ಸಾಮ್ರಾಜ್ಯದನಾಡ ಪ್ರಭು ಕೆಂಪೇಗೌಡರು ಬೆಂಗಳೂರಿನಲ್ಲಿ ಮಣ್ಣಿನ ಕೋಟೆ ಕಟ್ಟಿ ಆಧುನಿಕ ಬೆಂಗಳೂರಿನ ಉದಯಕ್ಕೆ ಕಾರಣಕರ್ತರಾದರು. ಮರಾಠರು ಮತ್ತು ಮುಘಲರ ಅಲ್ಪಾವಧಿ ಆಡಳಿತಕ್ಕೆ ಒಳಪಟ್ಟಿದ್ದ ಬೆಂಗಳೂರು, ಮೈಸೂರು ರಾಜರ ಆಧಿಪತ್ಯದಲ್ಲೇ ಉಳಿದಿತ್ತು. ನಂತರ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಆಡಳಿತಕ್ಕೆ ಒಳಪಟ್ಟ ಬೆಂಗಳೂರು, ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ(೧೭೯೯)ದಲ್ಲಿ ಬ್ರಿಟೀಷರ ಪಾಲಾಯಿತು. ತದನಂತರ ಬ್ರಿಟೀಷರು ಮೈಸೂರು ಸಂಸ್ಥಾನವನ್ನು ತಮ್ಮ ಆಡಳಿತದ ಒಂದು ರಾಜ್ಯವನ್ನಾಗಿಸಿ, ಬೆಂಗಳೂರನ್ನು ಅದರ ರಾಜಧಾನಿಯಾಗಿ ಘೋಷಿಸಿ, ಮೈಸೂರು ಒಡೆಯರ ಆಡಳಿತಕ್ಕೊಪ್ಪಿಸಿದರು.
  • ಬೆಂಗಳೂರು ೧೫೩೭|೧೫೩೭ರಲ್ಲಿ ಕೆಂಪೇಗೌಡರ (೧೫೧೦ - ೧೫೭೦) ರಾಜಧಾನಿಯಾಗಿತ್ತು[೨].ಈ ನಗರವನ್ನು ಕೆಂಪೇಗೌಡರು ನಿರ್ಮಿಸಿದರು. ಕೆಂಪೇಗೌಡ (೧೫೧೦-೧೫೭೦) ಈ ನಗರವನ್ನು "ಗಂಡು ಭೂಮಿ" ಮತ್ತು "ನಾಯಕರ ರಾಜ್ಯ" ಎಂದು ಹೇಳುತಿದ್ದರು. ಹದಿನೆಂಟನೇ/ಹತ್ತೊಂಬತ್ತನೇ ಶತಮಾನದಲ್ಲಿ ಬೆಂಗಳೂರು ಒಂದು ನಗರವಾಗಿ ಬೆಳೆಯಿತು. ಆಗ ಪ್ರಮುಖವಾಗಿ ನಗರದಲ್ಲಿ ಎರಡು ಮುಖ್ಯ ರಸ್ತೆಗಳಿದ್ದವು. ಅವು "ಚಿಕ್ಕಪೇಟೆ" ಮತ್ತು "ದೊಡ್ಡಪೇಟೆ" ರಸ್ತೆಗಳು. ಸ್ವಾತಂತ್ರ್ಯಾನಂತರ ಬೆಂಗಳೂರು ಬಹು ದೊಡ್ಡ ಕೈಗಾರಿಕಾ ಉತ್ಪಾದನಾ ಕ್ಷೇತ್ರಗಳಿಗೆ ಮನೆಯಾಯಿತು. ಶಾಂತಿ ಸಮೃದ್ಧಿಯೂ, ಪರಿಸರ ಸಮೃದ್ಧಿಯೂ ಜನರನ್ನು ಈ ಊರಿನೆಡೆಗೆ ಆಕರ್ಷಿಸಿತು. ಹೆಚ್ ಎ ಎಲ್, ಬಿ ಇ ಎಲ್, ಐ ಟಿ ಐ, ಇಸ್ರೋ ನಂತಹ ಬಹು ದೊಡ್ಡ ಉತ್ಪಾದನಾ ಘಟಕಗಳಿಗೆ ಮನೆಯಾಯಿತು. ಕೆಂಪೇಗೌಡರ ಮಗನಾದ ಕೆಂಪೇಗೌಡ-೨ ಅನೇಕ ದೇವಸ್ಥಾನ ಮತ್ತು ಗೋಪುರಗಳನ್ನು ನಿರ್ಮಿಸಿದನು. ಅವುಗಳಲ್ಲಿ ಪ್ರಮುಖವಾದ ನಾಲ್ಕು ಗೋಪುರಗಳನ್ನು ಈಗಿನ ಈ ಸ್ಥಳಗಳಲ್ಲಿ ಕಾಣಬಹುದಾಗಿದೆ.
    • ಲಾಲಭಾಗ್
    • ಬೆಂಗಳೂರು

    • thumbಕೆಂಪಾಂಬುಧಿ ಕೆರೆ
    • ಹಲಸೂರು ಕೆರೆ
    • ಮೇಖ್ರಿ ವೃತ್ತ
    • ಬೆಂಗಳೂರು ಇತರ ಸ್ಥಳಗಳಿಗೆ ಉತ್ತಮವಾದ ಸಂಪರ್ಕ ಹೊಂದಿರುವದರಿಂದ ಪ್ರವಾಸಿಗರಿಗೆ ಸ್ವರ್ಗವಾಗಿದ್ದು, ಅನೇಕ ಆಕರ್ಷಣೀಯ ಸ್ಥಳಗಳಾದ ಜವಾಹರಲಾಲ್ ನೆಹರು ಪ್ಲಾನೇಟೊರಿಯಮ್, ಲಾಲಬಾಗ್, ಕಬ್ಬನ್ ಪಾರ್ಕ್, ಅಕ್ವೇರಿಯಮ್, ವೆಂಕಟಪ್ಪಾ ಆರ್ಟ್ ಗ್ಯಾಲರಿ, ವಿಧಾನ ಸೌಧ ಮತ್ತು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಗಳನ್ನು ಇಲ್ಲಿ ಕಾಣಬಹುದು. ಮುತ್ಯಾಲಮಡುವು(ಮುತ್ತಿನಕಣಿವೆ), ಮೈಸೂರು, ಶ್ರವಣಬೆಳಗೋಳ, ನಾಗರಹೊಳೆ, ಬಂಡಿಪುರ, ರಂಗನತಿಟ್ಟು, ಬೇಲೂರು, ಮಂಡ್ಯ, ಹಳೇಬೀಡು, ಚಿಕ್ಕಮಗಳೂರು, ಕೊಡಗು ಮುಂತಾದ ಸ್ಥಳಗಳಿಗೂ ಕೂಡ ಬೆಂಗಳೂರಿನಿಂದ ಆರಾಮವಾಗಿ ಪ್ರಯಾಣಿಸಬಹುದಾಗಿದೆ. ನಗರದಲ್ಲಿ ಇಳಿದುಕೊಳ್ಳಲು ಅನೇಕ ಆಯ್ಕೆಗಳಿದ್ದು, ಅವುಗಳಲ್ಲಿ ಲೀಲಾ ಪ್ಯಾಲೇಸ್, ಗೊಲ್ಡನ್ ಲ್ಯಾಂಡಮಾರ್ಕ್, ವಿಂಡ್ಸರ್ ಮ್ಯಾನರ್, ಲಿ ಮೇರಿಡಿಯನ್, ತಾಜ್ ಮತ್ತು ಲಲಿತ್ ಅಶೋಕ ಮುಂತಾದ ಹಲವು ಹೋಟೆಲ್ ಗಳು ಸೂಕ್ತ ಹಾಗು ದುಬಾರಿ ಬೆಲೆಗಳಲ್ಲಿ ಪ್ರವಾಸಿಗರಿಗೆ ಲಭ್ಯವಿವೆ.
    • ಬೆಂಗಳೂರು ಅರಮನೆ

    • ಬಹುಮುಖಿಯ ಸಂಸ್ಕೃತಿಹೊಂದಿರುವ ಕಾರಣ, ವಿವಿಧ ಬಗೆಯ ಖಾದ್ಯಗಳನ್ನು ಕೂಡ ಇಲ್ಲಿ ಕಾಣಬಹುದು. ಬೀದಿ ತಿನಿಸುಗಳಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದವರೆಗಿನ ತಿನಿಸುಗಳು ಕೂಡ ಇಲ್ಲಿ ಲಭ್ಯ. ಬೆಂಗಳೂರಿನಾದ್ಯಂತ ಬಹುಸಂಖ್ಯೆಯಲ್ಲಿ ಮ್ಯಾಕ್ ಡೊನಾಲ್ಡ್, ಕೆ.ಎಫ್.ಸಿ ಮತ್ತು ಪೀಜ್ಜಾ ಹಟ್ ಗಳ ಔಟ್ ಲೆಟ್ ಗಳನ್ನು ಕಾಣಬಹುದಾಗಿದ್ದು, ಆಸಕ್ತಿಯುಳ್ಳ ಪ್ರವಾಸಿಗರು ಸ್ಥಳೀಯ ತಿಂಡಿತಿನಿಸುಗಳ ಕೇಂದ್ರವಾದ ಎಂ.ಟಿ.ಅರ್. ಗೂ ಕೂಡ ಭೇಟಿ ನೀಡಬಹುದು. ಇತರ ಅನೇಕ ಸ್ಥಳಗಳಲ್ಲಿ ಭಾರತದ ಬೇರೆ ಬೇರೆ ರಾಜ್ಯಗಳ ಖಾದ್ಯಗಳು ಲಭ್ಯವಿದ್ದು, ಉತ್ತರ ಅಥವಾ ಪೂರ್ವ ಭಾರತದ ಅಡುಗೆಗಳಿಗೆ ಯಾವುದೆ ಕೊರತೆಯಿಲ್ಲ. , ದಿ ಫೋರಮ್, ಗರುಡಾ ಮಾಲ್, ಸೆಂಟ್ರಲ್ ,ಒರಾಯನ್ ಮಾಲ್, ಮತ್ತು ಮಂತ್ರಿ ಮಾಲ್ ಗಳಲ್ಲಿ, ದೇಶಿಯ ಹಾಗು ವಿದೇಶಿಯ ಉತ್ಪನ್ನಗಳು ಲಭ್ಯವಿದ್ದು ಖರೀದಿಗೆ ಯೋಗ್ಯವಾದ ಸ್ಥಳಗಳಾಗಿವೆ. ಎಂ.ಜಿ. ರಸ್ತೆಯಲ್ಲಿರುವ ಕಾವೇರಿ ಎಂಪೋರಿಯಮ್ ದೇಶೀಯ ಉತ್ಪನ್ನಗಳಾದ ಚಂದನದ ಸಾಮಗ್ರಿಗಳು, ಜನಪ್ರಿಯವಾದ ಚೆನ್ನಪಟ್ಟಣದ ಕಟ್ಟಿಗೆಯ ಬೊಂಬೆಗಳನ್ನು ಖರೀದಿಸಲು ಉತ್ತಮ ಸ್ಥಳವಾಗಿದೆ. ತುಡಿಯುತ್ತಿರುವ ಯುವಜನಾಂಗದ ಪರಿಣಾಮವಾಗಿ, ಬೆಂಗಳೂರಿನ ರಾತ್ರಿ ಜೀವನವು ಬಲು ಸೊಗಸಾಗಿರುತ್ತದೆ
    • .ಬೆಂಗಳೂರು ಅರಮನೆಯು ಸದಾಶಿವನಗರ ಮತ್ತು ಜಯಮಹಲ್ ಮಧ್ಯದ, ನಗರದ ಹೃದಯ ಭಾಗವಾದ ಪ್ಯಾಲೇಸ್ ಗಾರ್ಡನನಲ್ಲಿದೆ. ಈ ಕಟ್ಟಡ ನಿರ್ಮಾಣದ ಹಿಂದಿನ ಉದ್ದೇಶವು, ಇದನ್ನು ಇಂಗ್ಲೆಂಡಿನ ವಿನ್ಸರ ಕ್ಯಾಸಲನ ಹಾಗೆ ನಿರ್ಮಿಸಬೇಕೆಂದಿದ್ದು, ಇದರ ಕಾಮಗಾರಿಯು 1862 ರಲ್ಲಿ ರೆವ್.ಗಾರೆಟ್ ಅವರಿಂದ ಪ್ರಾರಂಭವಾಯಿತು. ನಂತರ 1884 ರಲ್ಲಿ ಒಡೆಯರ್ ರಾಜವಂಶಸ್ಥರಾದ ಚಾಮರಾಜ ಒಡೆಯರ್ ಅವರಿಂದ ಇದು ಖರೀದಿಸಲ್ಪಟ್ಟಿತು.
      ಲಾಲ್ಭಬಾಗ್
    • ಲಾಲ್‌ಬಾಗ್,ಕೆಂಪು ತೋಟ, ಅಥವಾ ಲಾಲ್‌ಬಾಗ್ ಸಸ್ಯೋದ್ಯಾನ, ವರ್ಣರಂಜಿತ ಫಲ-ಪುಷ್ಪ-ಹಣ್ಣು-ಕಾಯಿಗಳಿಗೆ ಪ್ರಸಿದ್ಧವಾದ ಸಸ್ಯೋದ್ಯಾನ, ಕರ್ನಾಟಕದರಾಜಧಾನಿ ಬೆಂಗಳೂರಿನಲ್ಲಿದೆ. ಈ ಉದ್ಯಾನವನವನ್ನು ನಿರ್ಮಿಸಲು ಮೈಸೂರಿನ ಆಡಳಿತ ನಡೆಸುತ್ತಿದ್ದ ಹೈದರಾಲಿಸೂಚಿಸಿದ್ದನು. Vagidhe ಪ್ರಸಿದ್ಧ ಗಾಜಿನ ಮನೆಯನ್ನು ಹೊಂದಿದ್ದು ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಸಮಯದಲ್ಲಿ ಫಲ ಪುಷ್ಪ ಪ್ರದರ್ಶನಏರ್ಪಡಿಸಲಾಗುತ್ತದೆ. ಇದಲ್ಲದೇ ಮತ್ಸ್ಯಾಗಾರ ಮತ್ತು ಕೆರೆಯನ್ನು ಹೊಂದಿದ್ದು ಬೆಂಗಳೂರಿನಲ್ಲಿರುವ ಒಂದು ಪ್ರವಾಸಿಗರ ಆಕರ್ಷಣೆಯ ತಾಣವಾಗಿದೆ.
    • ಹಂಪಿ

    • ಈ ನಗರದ ಬಹುಭಾಗ ತು೦ಗಭದ್ರಾ ನದಿಯ ದಕ್ಷಿಣ ದ೦ಡೆಯ ಮೇಲಿದೆ. ಈ ನಗರ ಹ೦ಪೆಯ ವಿರೂಪಾಕ್ಷ ದೇವಸ್ಥಾನದ ಪವಿತ್ರ ಮಧ್ಯಭಾಗದ ಸುತ್ತ ಕಟ್ಟಲಾದ ನಗರ. ಅದರ ವ್ಯಾಪ್ತಿಯಲ್ಲಿ ಇತರ ಪವಿತ್ರ ಸ್ಥಳಗಳು ಸಹ ಇವೆ - ಇವು ಸುಗ್ರೀವನ ಹುಟ್ಟೂರಾದ ಕಿಷ್ಕಿ೦ಧೆ ಇದ್ದ ಸ್ಥಳವೆ೦ದು ಹೇಳಲಾದ ಕ್ಷೇತ್ರವನ್ನು ಒಳಗೊ೦ಡಿವೆ. ಈಗ ರಾಜಕೇ೦ದ್ರ ಮತ್ತು ಪವಿತ್ರಕೇ೦ದ್ರ ಎಂದು ಕರೆಯಲ್ಪಡುವ ಸ್ಥಳಗಳನ್ನು ಒಳಗೊ೦ಡ ನಗರದ ಮಧ್ಯಭಾಗ ೪೦ ಚ.ಕಿಮೀ ಗಿ೦ತ ಹೆಚ್ಚು ವಿಸ್ತೀರ್ಣದಲ್ಲಿ ಹಬ್ಬಿದೆ. ಇದು ಈಗಿನ ಹ೦ಪೆ ಗ್ರಾಮವನ್ನು ಸಹ ಕೂಡಿದೆ. ಕಮಲಾಪುರಮ್ ಎ೦ಬ ಗ್ರಾಮ ಹಳೆಯ ನಗರದ ಸ್ವಲ್ಪ ದೂರದಲ್ಲೇ ಇದ್ದು ಅನೇಕ ಸ್ಮಾರಕಗಳನ್ನು ಹೊಂದಿದೆ. ಇಲ್ಲಿಗೆ ಅತಿ ಹತ್ತಿರದ ನಗರ ಮತ್ತು ರೈಲ್ವೇ ನಿಲ್ದಾಣ ಎ೦ದರೆ ಹೊಸಪೇಟೆ, ೧೩ ಕಿಮೀ ದೂರದಲ್ಲಿದೆ. ಪ್ರಾಕೃತಿಕವಾಗಿ, ಈ ನಗರ ಎಲ್ಲ ಗಾತ್ರದ ಜಲ್ಲಿಯ ಬ೦ಡೆಗಳಿ೦ದ ಕೂಡಿದ ಗುಡ್ಡಗಾಡು ಪ್ರದೇಶದಲ್ಲಿ ಇದೆ. ಇಲ್ಲಿರುವ ಒಂದು ಕೊರಕಲಿನ ಮೂಲಕ ತು೦ಗಭದ್ರಾ ನದಿ ಹರಿಯುತ್ತದೆ ಮತ್ತು ಉತ್ತರ ದಿಕ್ಕಿನಲ್ಲಿ ರಕ್ಷಣೆಯನ್ನು ಒದಗಿಸುತ್ತಿತ್ತು. ದೊಡ್ಡ ಜಲ್ಲಿಕಲ್ಲಿನ ಕೋಟೆಗಳು ನಗರದ ಮಧ್ಯಭಾಗವನ್ನು ರಕ್ಷಿಸುತ್ತಿದ್ದವು. ನಾಶವಾದ ಈ ನಗರ ಯುನೆಸ್ಕೋ ಪ್ರಪ೦ಚ ಸ೦ಸ್ಕೃತಿ ಕ್ಷೇತ್ರವಾಗಿ ಮಾನ್ಯತೆ ಪಡೆದಿದೆ.
    • ಶ್ರೀ ಲಕ್ಷ್ಮಿನರಸಿಂಹ ಗುಡಿಯಲ್ಲಿ, ೬.೭ಮೀ. ಎತ್ತರವಿರುವ ಒಂದೆ ಕಲ್ಲಿನಲ್ಲಿ ಕೆತ್ತಲಾದ, ನರಸಿಂಹನ(ಭಗವಾನ ವಿಷ್ಣುವಿನ ಅವತಾರ) ವಿಗ್ರಹವು ಆದಿಶೇಷನ(ಎಳು ಹೆಡೆಯ ಸರ್ಪ) ಮೇಲೆ ವಿಶ್ರಮಿಸುವ ಭಂಗಿಯಲ್ಲಿದ್ದು, ಇಲ್ಲಿಗೆ ಬರುವ ಪ್ರವಾಸಿಗರಲ್ಲಿ ಹೆಸರುವಾಸಿಯಾಗಿದೆ. ಇಲ್ಲಿ ಕೆತ್ತಲಾಗಿರುವ ಮಾಹಿತಿಯ ಪ್ರಕಾರ, ಇದನ್ನು, ಕ್ರಿ.ಶ.೧೫೨೮ರಲ್ಲಿ ದೊರೆಯಾದ ಕೄಷ್ಣದೇವರಾಯನ ಆಳ್ವಿಕೆಯಲ್ಲಿ ಪೂರ್ಣಗೊಳಿಸಲಾಯಿತೆಂದು ತಿಳಿದು ಬರುತ್ತದೆ.ಮೂಲ ವಿಗ್ರಹವು ಲಕ್ಶ್ಮಿ ದೇವತೆಯು ವಿಷ್ಣುವಿನ ತೊಡೆಯಲ್ಲಿ ಕುಳಿತಿರುವ ಭಂಗಿಯಲ್ಲಿದೆ.ಆದರೆ, ಕ್ರಿ.ಶ.೧೫೬೫ರಲ್ಲಿ, ಲಕ್ಷ್ಮಿ ದೇವತೆಯ ವಿಗ್ರಹವು ನಾಶ ಹೊಂದಿದ್ದು, ಪ್ರಸ್ತುತ ಅದನ್ನು ಕಮಲಾಪುರ ಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಆದರೂ ಉಬ್ಬಿರುವ ಕಣ್ಣುಗಳನ್ನು ಚಿತ್ರಿಸಲಾಗಿರುವ ನರಸಿಂಹನ ವಿಗ್ರಹವು ಇಂದಿಗೂ ಕೂಡ ಬಹುಪಾಲು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
      ನರಸಿಂಹ ವಿಗ್ರಹ
    • ನರಸಿಂಹ ಹಾಗು ಲಕ್ಷ್ಮಿ ದೇವತೆಯ ವಿಗ್ರಹಗಳನ್ನು ಒಂದೆ ಕಲ್ಲಿನಿಂದ ಕೆತ್ತಲಾಗಿದೆ. ಸಾಮಾನ್ಯವಾಗಿ ದಕ್ಷಿಣ ಭಾರತದ ವಾಸ್ತುಶಿಲ್ಪಿಗಳು ಉಪಯೋಗಿಸುವ ಸಾಮಗ್ರಿಗಳ ವಿರುದ್ಧವಾಗಿ,ಸಂಗಮರು ಗ್ರಾನೈಟ್ ಕಲ್ಲುಗಳಿಂದ ಲಕ್ಷ್ಮಿನರಸಿಂಹ ದೇವಾಲಯವನ್ನು ಕಟ್ಟಿದ್ದಾರೆ. ಆದರೆ ಕೆಲವು ಸೂಕ್ಶ್ಮವಾದ ಕೆಲಸಗಳನ್ನು ಸ್ಚಿಸ್ಟ(ಒಂದು ಮೃದುವಾದ ಕಲ್ಲು)ನಿಂದ ಮಾಡಲ್ಪಟ್ಟಿದ್ದು ಗ್ರಾನೈಟ್ ಬಳಕೆ ಮಾಡಲಾಗಿಲ್ಲ. ಜಟಿಲವಾದ ವಿನ್ಯಾಸಗಳ ಅಭಾವವನ್ನು ಸರಿದೂಗಿಸಲು, ವಾಸ್ತುಶಿಲ್ಪಗಾರರು ವಿಶಾಲವಾದ ಕಟ್ಟಡವನ್ನು ನಿರ್ಮಿಸಲು ನಿಶ್ಚಯಿಸಿದ್ದಾರೆ

ವಿರೂಪಾಕ್ಷ ದೇವಾಲಯವು ಶಿವ ಹಾಗು ಅವನ ಸಂಗಾತಿ ದೇವತೆಯಾದ ಪಂಪಾಳಿಗೆ ಸಮರ್ಪಿತವಾಗಿದ್ದು, ಹಂಪಿಗೆ ಬರುವ ಪ್ರವಾಸಿಗರು ಇದಕ್ಕೆ ಭೇಟಿ ನೀಡಬಹುದು. ೫೦ ಮೀ. ಎತ್ತರದ ಗೋಪುರವನ್ನು ಹೊಂದಿರುವ ಈ ದೇವಾಲಯವು ತುಂಗಭದ್ರ ನದಿಯ ದಕ್ಷಿಣ ದಡದಲ್ಲಿರುವ ಹೇಮಕೂಟ ಬೆಟ್ಟದ ಕೆಳಭಾಗದಲ್ಲಿದೆ. ದಕ್ಷಿಣ ಭಾರತದ ದ್ರಾವಿಡಿಯನ್ ಮಾದರಿಯ ವಾಸ್ತುಶಿಲ್ಪವನ್ನು ಹೊಂದಿರುವ ಈ ದೇವಾಲಯವು ಇಟ್ಟಿಗೆ ಹಾಗು ಮೊರ್ಟಾರ್ ಗಳಿಂದ ರಚಿಸಲ್ಪಟ್ಟಿದೆ.

ಪಂಪಾಪತಿ ದೇವಾಲಯವೆಂದೂ, ಕರೆಯಲ್ಪಡುವ ಈ ದೇವಾಲಯವು ಮುಖ ಮಂಟಪ(ರಂಗ ಮಂಟಪ), ಮುರು ಭಾಗಗಳು ಮತ್ತು ಕಂಬಗಳುಳ್ಳ ವಿಶಾಲವಾದ ಕೊಠಡಿಯನ್ನು ಹೊಂದಿದೆ. ವಿರೂಪಾಕ್ಷ ದೇವಾಲಯವು 7ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು, ಕೆತ್ತನೆಯ ಕೆಲಸವು ಸುಮಾರು ೯ ಹಾಗು ೧೧ ನೇ ಶತಮಾನಗಳ ಮಧ್ಯದಲ್ಲಿ ಮಾಡಲ್ಪಟ್ಟಿವೆ ಎಂಬುದನ್ನು ಅಲ್ಲಿ ಭೇಟಿ ನೀಡಿದಾಗ ತಿಳಿಯಬಹುದು. ಪ್ರಾರಂಭದಲ್ಲಿ, ಈ ದೇವಾಲಯವು ಕೆಲವೆ ವಿಗ್ರಹಗಳನ್ನು ಹೊಂದಿದ್ದು ಕಾಲಾಕ್ರಮೇಣ ಬೃಹದಾಕಾರವನ್ನು ಪಡೆಯಿತು. ಕ್ರಿ.ಶ.೧೫೧೦ ರಲ್ಲಿ, ಕೃಷ್ಣದೇವರಾಯರಿಂದ, ರಂಗಮಂಟಪವು ನಿರ್ಮಿಸಲ್ಪಟ್ಟಿದ್ದು ವಿಜಯನಗರದ ಶೈಲಿಯ ವಾಸ್ತುಶಿಲ್ಪವನ್ನು ಸೂಚಿಸುತ್ತದೆ. ತದನಂತರ ಕಂಬಗಳು,ದೀಪಸ್ಥಂಬಗಳು,ಸ್ತೂಪಗಳನ್ನು ನಿರ್ಮಿಸಲಾಯಿತು. ಹಿಂದು ಸಂಸ್ಕೃತಿಯನ್ನು ಬಿಂಬಿಸುವಂತಹ ಪ್ರಾಣಿ ಪಕ್ಷಿಗಳ ಕೆತ್ತನೆಗಳು ವಿರೂಪಾಕ್ಷ ದೇವಾಲಯದ ಪ್ರಮುಖ .

ಉತ್ತರ ಕರ್ನಾಟಕದಲ್ಲಿರುವ ವಿಜಯನಗರ ಎಂಬುದು ಪ್ರಾಚೀನ ಚಾರಿತ್ರಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿ. ಈ ನಗರದ ಬಹುಭಾಗ ತುಂಗಭದ್ರಾ ನದಿಯ ದಕ್ಷಿಣ ದಂಡೆಯ ಮೇಲಿದೆ. ಹಂಪೆ ಎಂದು ಕರೆಯಲ್ಪಡುವ ಈ ನಗರದ ಮಧ್ಯಭಾಗದಲ್ಲಿ ಪವಿತ್ರ ವಿರೂಪಾಕ್ಷ ದೇವಾಲಯವಿದೆ . ಸುತ್ತಲೂ ಇತರ ಪವಿತ್ರ ಸ್ಥಳಗಳು ಸಹ ಇವೆ - ಸುಗ್ರೀವನ ಹುಟ್ಟೂರಾದ ಕಿಷ್ಕಿಂಧೆ ಇದ್ದ ಸ್ಥಳವೆಂದು ಹೇಳಲಾದ ಕ್ಷೇತ್ರವನ್ನು ಒಳಗೊಂಡಿವೆ. ಪ್ರಸ್ತುತ ಇದು ರಾಜಕೇಂದ್ರ ಮತ್ತು ಪವಿತ್ರಕೇಂದ್ರ ಎಂದು ಕರೆಯಲ್ಪಡುವ ಸ್ಥಳಗಳನ್ನು ಒಳಗೊಂಡ ನಗರದ ಮಧ್ಯಭಾಗ ೪೦ ಚ.ಕಿಮೀ ಗಿಂತ ಹೆಚ್ಚು ವಿಸ್ತೀರ್ಣದಲ್ಲಿ ಹಬ್ಬಿದೆ. ಇದು ಈಗಿನ ಹಂಪೆ ಗ್ರಾಮವನ್ನು ಸಹ ಕೂಡಿದೆ. ಕಮಲಾಪುರ ಎಂಬ ಗ್ರಾಮ ಹಳೆಯ ನಗರದ ಸ್ವಲ್ಪ ದೂರದಲ್ಲೇ ಇದ್ದು ಅನೇಕ ಸ್ಮಾರಕಗಳನ್ನು ಹೊಂದಿದೆ.

ಇಲ್ಲಿಗೆ ಅತಿ ಹತ್ತಿರದ ನಗರ ಮತ್ತು ರೈಲ್ವೇ ನಿಲ್ದಾಣ ಎಂದರೆ ಹೊಸಪೇಟೆ, ೧೩ ಕಿಮೀ ದೂರದಲ್ಲಿದೆ. ಪ್ರಾಕೃತಿಕವಾಗಿ, ಈ ನಗರ ಎಲ್ಲ ಗಾತ್ರದ ಜಲ್ಲಿಯ ಬಂಡೆಗಳಿಂದ ಕೂಡಿದ ಗುಡ್ಡಗಾಡು ಪ್ರದೇಶದಲ್ಲಿ ಇದೆ. ಇಲ್ಲಿರುವ ಒಂದು ಕೊರಕಲಿನ ಮೂಲಕ ತುಂಗಭದ್ರಾ ನದಿ ಹರಿಯುತ್ತದೆ ಮತ್ತು ಉತ್ತರ ದಿಕ್ಕಿನಲ್ಲಿ ರಕ್ಷಣೆಯನ್ನು ಒದಗಿಸುತ್ತಿತ್ತು. ದೊಡ್ಡ ಬಂಡೆ ಕಲ್ಲಿನ ಕೋಟೆಗಳು ನಗರದ ಮಧ್ಯಭಾಗವನ್ನು ರಕ್ಷಿಸುತ್ತಿದ್ದವು.

ಮೊಗಲರಿಂದ ನಾಶವಾದ ಈ ನಗರ ಯುನೆಸ್ಕೋ ಪ್ರಪಂಚ ಸಂಸ್ಕೃತಿ ಕ್ಷೇತ್ರವಾಗಿ ಮಾನ್ಯತೆ ಪಡೆದಿದೆ.ಹಿಂದೂ ವಿಜಯನಗರ ಸಾಮ್ರಾಜ್ಯ ೧೩೩೬ ರಲ್ಲಿ ಹಾಲುಮತ ಸಮಾಜಕ್ಕೆ ಸೇರಿದ ಹಕ್ಕ (ನಂತರ ಹರಿಹರ) ಮತ್ತು ಬುಕ್ಕ (ನಂತರ ಬುಕ್ಕ ರಾಯ) ಎಂಬ ಅಣ್ಣತಮ್ಮಂದಿರಿಂದ ಸ್ಥಾಪಿಸಲ್ಪಟ್ಟಿತ್ತು. ಅವರ ಮೂಲ ಸ್ಥಾನ ಇದೇ ಕ್ಷೇತ್ರದಲ್ಲೇ ಇತ್ತೆಂದು ತಿಳಿದು ಬಂದಿದೆ. ರಾಜಧಾನಿ ಮೊದಲು ಪ್ರಾಯಶಃ ತುಂಗಭದ್ರಾ ನದಿಯ ಉತ್ತರದಲ್ಲಿ ವಿಠ್ಠಲ ದೇವಸ್ಥಾನದ ಬಳಿ ಇರುವ ಆನೆಗೊಂದಿ ಎಂಬ ಗ್ರಾಮದಲ್ಲಿತ್ತು. ಸಾಮ್ರಾಜ್ಯ ಬೆಳೆಯುತ್ತಾ ಸಮೃದ್ಧವಾದಂತೆ ರಾಜಧಾನಿಯನ್ನು ತುಂಗಭದ್ರೆಯ ದಕ್ಷಿಣದಲ್ಲಿರುವ ಹೆಚ್ಚು ಸುರಕ್ಷಿತ ವಿಜಯನಗರಕ್ಕೆ ವರ್ಗಾಯಿಸಲಾಯಿತು.

ನಗರ ೧೪ನೇ ಶತಮಾನದಿಂದ ೧೬ ನೇ ಶತಮಾನದ ವರೆಗೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು, ವಿಜಯನಗರ ಸಾಮ್ರಾಜ್ಯದ ಶಕ್ತಿಯ ತುಟ್ಟ ತುದಿಯಲ್ಲಿತ್ತು. ಇದೇ ಸಮಯದಲ್ಲಿ ಅದು ಕಾಲ ಕಾಲಕ್ಕೆ ಉತ್ತರ ದಖನ್ ಪ್ರದೇಶದಲ್ಲಿ ಇದ್ದು ಒಟ್ಟಾಗಿ ದಖನ್ ಸುಲ್ತಾನೇಟ್ ಎಂದು ಕರೆಯಲ್ಪಟ್ಟ ಮುಸ್ಲಿಮ್ ರಾಜ್ಯಗಳೊಂದಿಗೆ ಯುದ್ಧದಲ್ಲಿ ತೊಡಗುತ್ತಿತ್ತು. ೧೫೬೫ರಲ್ಲಿ ನಗರ ಅಂತಿಮವಾಗಿ ಈ ಸುಲ್ತಾನೇಟ್‌ಗಳ ಮೈತ್ರಿತ್ವಕ್ಕೆ ಸೋತಿತು ಮತ್ತು ರಾಜಧಾನಿಯನ್ನು ವಶಪಡಿಸಿಕೊಳ್ಳಲಾಯಿತು. ಜಯ ಪಡೆದ ಸೈನಿಕರು ಅನೇಕ ತಿಂಗಳುಗಳ ಕಾಲ ವಿಜಯನಗರದಲ್ಲಿ ಕೊಲೆ, ಲೂಟಿ ನಡೆಸಿದರು.

ಇದರ ನಂತರವೂ ವಿಜಯನಗರ ಸಾಮ್ರಾಜ್ಯ ಉಳಿದರೂ ಸಹ ಅದು ನಿಧಾನವಾಗಿ ಅವನತಿಯೆಡೆಗೆ ಮುಖಮಾಡಿತು. ರಾಜಧಾನಿಯಾಗಿದ್ದ ವಿಜಯನಗರವನ್ನು ಪುನರ್ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇಂದಿನವರೆಗೂ ಅಲ್ಲಿ ಜನವಸತಿಯಿಲ್ಲ. ಅಂದಿನ ಮುಸ್ಲಿಮ್ ರಾಜ್ಯಗಳ ಸಂಪರ್ಕದ ಪರಿಣಾಮವಾಗಿ ವಿಜಯನಗರದ ಕಟ್ಟಡಗಳಲ್ಲಿ ಮುಸ್ಲಿಮ್ ಪ್ರಭಾವವನ್ನು ಸ್ವಲ್ಪ ಮಟ್ಟಿಗೆ ಕಾಣಬಹುದು.ವಿರೂಪಾಕ್ಷ ದೇವಾಲಯವು ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿ ಹೊಸಪೇಟೆ ಯ ಬಳಿ ಹಂಪಿಯಲ್ಲಿದೆ.[೧]l ಈ ದೇವಾಲಯವು ಶಿವ ರೂಪವಾದ ವಿರೂಪಾಕ್ಷಕ್ಕೆ ಅರ್ಪಿತವಾಗಿದೆ. ಈ ದೇವಾಲಯವನ್ನು ವಿಜಯನಗರ ಸಾಮ್ರಾಜ್ಯದ ಆಡಳಿತಗಾರ ದೇವರಾಯ ೨ ನೇ ಅಧಿಪತಿಯಾದ ಲಕನಾ ದಂಡೇಶರು ನಿರ್ಮಿಸಿದರು.

ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ, ತುಂಗಭದ್ರ ನದಿಯ ತೀರದಲ್ಲಿದೆ. ಹಂಪಿಯಲ್ಲಿರುವ ವಿರೂಪಾಕ್ಷ ದೇವಾಲಯವು ತೀರ್ಥಯಾತ್ರೆಯ ಮುಖ್ಯ ಕೇಂದ್ರವಾಗಿದೆ ಮತ್ತು ಶತಮಾನಗಳಿಂದಲೂ ಅತ್ಯಂತ ಪವಿತ್ರ ಅಭಯಾರಣ್ಯವೆಂದು ಪರಿಗಣಿಸಲಾಗಿದೆ. ಇದು ಸುತ್ತಮುತ್ತಲಿನ ಅವಶೇಷಗಳ ನಡುವೆ ಅಸ್ಥಿತ್ವದಲ್ಲಿದೆ ಮತ್ತು ಇದನ್ನು ಈಗಲೂ ಆರಾಧನೆಯನ್ನು ಮಾಡುತ್ತಾರೆ. ಈ ದೇವಸ್ಥಾನವು ಶಿವನಿಗೆ ಸಮರ್ಪಿತವಾಗಿದೆ. ಇಲ್ಲಿ ತು೦ಗಭದ್ರ ನದಿಗೆ ಸಂಬಂಧಿಸಿರುವ ಸ್ಥಳೀಯ ದೇವತೆ ಪಂಪನ ಪತ್ನಿ ವಿರೂಪಾಕ್ಷ ಎಂದೇ ಕರೆಯಲಾಗುತ್ತದೆ. ತಿರುಪತಿಯಿಂದ ಸುಮಾರು ೧೦೦ ಕಿ.ಮೀ. ದೂರದಲ್ಲಿರುವ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ನಳಗಮಪಲ್ಲಿ ಎಂಬ ಗ್ರಾಮದಲ್ಲಿ ವಿರೂಪಾಕ್ಷಿನಿ ತಾಯಿ ದೇವಸ್ಥಾನ ಇದೆ.