ವಿಷಯಕ್ಕೆ ಹೋಗು

ನಾಲ್ಕನೆಯ ಮೈಸೂರು ಯುದ್ಧ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
The Fourth Anglo-Mysore War

ನಾಲ್ಕನೆ ಮೈಸೂರು ಯುದ್ಧವು (೧೭೯೮ - ೧೭೯೯) ಬ್ರಿಟೀಷರಿಗೂ ಮೈಸೂರು ರಾಜ್ಯಕ್ಕೂ ನಡೆದ ಯುದ್ಧ ಸರಣಿಯಲ್ಲಿ ನಾಲ್ಕನೆಯ ಹಾಗೂ ಕಡೆಯ ಯುದ್ಧ. ಆಗಿನ ಬ್ರಿಟೀಷ ಈಸ್ಟ್ ಇಂಡಿಯಾ ಕಂಪನಿಯ ಗವರ್ನರ್ ಜನರಲ್ ಪದವಿಯು ಲಾರ್ಡ್ ಕಾರ್ನವಾಲೀಸನಿಂದ ಜನರಲ್ ಹ್ಯಾರಿಸನಿಗೆ ಹಸ್ತಾಂತರಗೊಂಡಿತ್ತು.

೧೭೯೮ರಲ್ಲಿ ನೆಪೋಲಿಯನ್ , ಭಾರತವನ್ನು ಹೆದರಿಸುವ ಉದ್ದೇಶದಿಂದ , ಈಜಿಪ್ಟಿನಲ್ಲಿ ಬಂದಿಳಿದ. ಈ ಉದ್ದೇಶ ಸಾಧನೆಗೆ , ಫ್ರಾನ್ಸಿನ ಮಿತ್ರನಾಗಿದ್ದ , ಮೈಸೂರಿನ ದೊರೆ ಟಿಪ್ಪು ಸುಲ್ತಾನ ಮುಖ್ಯವಾಗಿದ್ದ.

ಹೊರಾಷಿಯೋ ನೆಲ್ಸನ್ನನು ನೆಪೋಲಿಯನ್ನನನ್ನು ನೈಲ್ ನದಿ ಯುದ್ದ್ದದಲ್ಲಿ ಸೋಲಿಸಿ, ಈ ಆಸೆಯನ್ನು ಭಂಗಗೊಳಿಸಿದರೂ, ಮೂರು ಸೇನೆಗಳು ( ಒಂದು ಬಾಂಬೆ, ಎರಡು ಬ್ರಿಟೀಶ್ ) ಅಷ್ಟಕ್ಕೆ ನಿಲ್ಲದೆ ಮುನ್ನುಗ್ಗಿ ೧೭೯೯ರಲ್ಲಿ ಮೈಸೂರಿನ ರಾಜಧಾನಿ ಶ್ರೀರಂಗಪಟ್ಟಣಕ್ಕೆ ಮುತ್ತಿಗೆ ಹಾಕಿದವು. ಮೇ ನಾಲ್ಕರಂದು ಈ ಸೇನೆಗಳು ಕೋಟೆಯ ಭಾಗವೊಂದನ್ನು ಭಗ್ನಮಾಡಿ , ಒಳನುಗ್ಗತೊಡಗಿದರು. ಅಲ್ಲಿಗೆ ಧಾವಿಸಿದ ಟಿಪ್ಪು ಸುಲ್ತಾನ ಗುಂಡೇಟಿನಿಂದ ಅಸುನೀಗಿದ. ಈ ಕಾರ್ಯದಲ್ಲಿ ಟಿಪ್ಪುವಿನ ಸೇನಾಧಿಕಾರಿ ಮೀರ್ ಸಾದಕ್ ಎಂಬಾತ , ಬ್ರಿಟೀಷರೊಂದಿಗೆ ಶಾಮೀಲಾಗಿ , ಟಿಪ್ಪುವಿಗೆ ಎರಡು ಬಗೆದನು. ಯುದ್ಧದ ತೀವ್ರವಾಗಿದ್ದ ಸಮಯದಲ್ಲಿ ಮೀರ್ ಸಾದಕನು , ತನ್ನ ಸೇನಾ ತುಕಡಿಯನ್ನು ಸಂಬಳ ಪಡೆದುಕೊಳ್ಳಲು ಕಳುಹಿಸಿ, ಆ ಮೂಲಕ , ಬ್ರಿಟೀಷರು ಗೋಡೆ ಒಡೆದು ಒಳಬರಲು ಅನುವುಮಾಡಿಕೊಟ್ಟನು. ಅಷ್ಟೇ ಅಲ್ಲ, ನೆಲಮಾಳಿಗೆಯಲ್ಲಿ ಶೇಖರಿಸಿದ್ದ ಮದ್ದುಗುಂಡುಗಳ ಮೇಲೆ ನೀರು ಹೊಯ್ದು, ಅವು ನಿರುಪಯುಕ್ತವಾಗುವಂತೆ ಮಾಡಿದನು.

ಈ ಯುದ್ಧದಲ್ಲಿ ಟಿಪ್ಪು ಸುಲ್ತಾನನು ರಾಕೆಟ್ಟುಗಳ ಉಪಯೋಗ ಮಾಡಿದ್ದು ಗಮನಾರ್ಹವಾಗಿತ್ತು. ಮೂರನೆಯ ಮತ್ತು ನಾಲ್ಕನೆಯ ಮೈಸೂರು ಯುದ್ಧಗಳಲ್ಲಿ ಈ ರಾಕೆಟ್ಟುಗಳ ಪರಿಣಾಮದಿಂದ ಪ್ರಭಾವಿತನಾದ ವಿಲಿಯಮ್ ಕಾಂಗ್ರೀವನು ಮುಂದೆ ಕಾಂಗ್ರೀವ್ ರಾಕೆಟ್ಟುಗಳನ್ನು ಸಂಶೋಧಿಸಿದನು.

ಈ ಯುದ್ಧದ ಪರಿಣಾಮವಾಗಿ ಮೈಸೂರು ಬ್ರಿಟೀಷರ ವಶಕ್ಕೆ ಬಂದಿತು. ಒಡೆಯರ್ ವಂಶಕ್ಕೆ ಮರಳಿ ಅಧಿಕಾರ ದೊರೆತು, ಅವರಿಗೆ ಸಲಹಾಕಾರರಾಗಿ ಬ್ರಿಟೀಷ್ ಕಮೀಷನರು ನೇಮಿಸಲ್ಪಟ್ಟರು. ಟಿಪ್ಪುವಿನ ಎಳೆಯ ಮಗ ಮತ್ತು ಉತ್ತರಾಧಿಕಾರಿ ಫತೇ ಆಲಿಯನ್ನು ಗಡೀಪಾರು ಮಾಡಲಾಯಿತು. ಮೈಸೂರು ರಾಜ್ಯವು ಬ್ರಿಟೀಷ್ ಅಧೀನ ಸಂಸ್ಥಾನವಾಯಿತು. ಕೊಯಮತ್ತೂರು , ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಬ್ರಿಟೀಷ್ ಭಾರತದ ಭಾಗವಾದವು.[][]

ಉಲ್ಲೇಖ

[ಬದಲಾಯಿಸಿ]
  1. ಹಿಂದೂದೇಶದ ಚರಿತ್ರೆ ಲೇಖಕರು:ಇ.ಡಬ್ಳ್ಯು.ಥಾಂಸನ್. ಅನುವಾದಕರರು: ಕೆ.ವಿ.ದೊರೆಸ್ವಾಮಿ ಲೆಕ್ಚರರ್ ಮೈಸೂರು.
  2. History of India: R.C.mujumdar and Raychoudhry S.C