ವಿಷಯಕ್ಕೆ ಹೋಗು

ಸ್ಥಳೀಯ ಜನರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಾರ್ವೆಯಲ್ಲಿ[]

ಅರ್ಥ ನಿರೂಪಣೆ

[ಬದಲಾಯಿಸಿ]
Ati woman, the Philippines, 2007.[] ನೆಗ್ರೈಟೋಗಳು ಆಗ್ನೇಯ ಏಷ್ಯಾದ ಅತ್ಯಂತ ಮುಂಚಿನ ನಿವಾಸಿಗಳಾಗಿದ್ದರು.[]

ಸ್ಥಳೀಯ ಎಂಬ ಗುಣವಾಚಕವು "ಇಂದ" ಅಥವಾ "ಮೂಲ ಉಗಮಸ್ಥಾನದ" ಎಂಬ ಸಾಮಾನ್ಯ ಅರ್ಥವನ್ನು ಹೊಂದಿದೆ. ಆದ್ದರಿಂದ, ಒಂದು ಅಪ್ಪಟವಾದ ಗುಣವಾಚಕದ ಅರ್ಥದಲ್ಲಿ ಹೇಳುವುದಾದರೆ, ಯಾವುದೇ ನಿರ್ದಿಷ್ಟ ಜನರು, ಜನಾಂಗೀಯ ಗುಂಪು ಅಥವಾ ಸಮುದಾಯವನ್ನು ಒಂದು ನಿರ್ದಿಷ್ಟ ಪ್ರದೇಶ ಅಥವಾ ತಾಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ರಾಗಿರುವವರು ಎಂಬುದಾಗಿ ವಿವರಿಸಬಹುದಾಗಿದೆ.[]

ಒಂದು ಸಾಂಸ್ಕೃತಿಕ ಗುಂಪು ನಿರ್ವಹಿಸುವ ರಾಜ್ಯನೀತಿಯ ಪಾತ್ರವು "ಸ್ಥಳೀಯತೆ"ಯ ಒಂದು ಸಮಕಾಲೀನ ಗ್ರಹಿಕೆಗೆ ಪ್ರಮುಖವೆನಿಸುತ್ತದೆ; ಸ್ಥಳೀಯ ಗುಂಪುಗಳನ್ನು ಸೂಚಿಸುವುದಕ್ಕಾಗಿ ಸಾಮಾನ್ಯವಾಗಿ ಪರಿಗಣಿಸಲಾಗುವ ಇತರ ಎಲ್ಲಾ ಮಾನದಂಡಗಳನ್ನು (ಭೂಪ್ರದೇಶ, ಕುಲ, ಇತಿಹಾಸ, ಕನಿಷ್ಟ ಮಟ್ಟದ ಜೀವನಶೈಲಿ, ಇತ್ಯಾದಿ), ಒಂದು ಮಹತ್ತರವಾದ ಅಥವಾ ಕಡಿಮೆಯಿರುವ ವ್ಯಾಪ್ತಿಗೆ ಸಂಬಂಧಿಸಿದಂತೆ, ಬಹುತೇಕ ಸಂಸ್ಕೃತಿಗಳಿಗೂ ಸಹ ಅನ್ವಯಿಸಬಹುದಾಗಿದೆ.[] ಆದ್ದರಿಂದ, ಸ್ಥಳೀಯ ಗುಂಪುಗಳಿಗೆ ಅನ್ವಯಿಸಲಾದ ವೈಲಕ್ಷಣ್ಯವನ್ನು "ರಾಜಕೀಯವಾಗಿ ಕಡಿಮೆ ಸವಲತ್ತನ್ನು ಹೊಂದಿರುವ ಒಂದು ಗುಂಪು ಎಂಬುದಾಗಿ ಸೂತ್ರೀಕರಿಸಬಹುದಾಗಿದ್ದು, ಅಧಿಕಾರದಲ್ಲಿ ರಾಷ್ಟ್ರಕ್ಕೆ ವಿಭಿನ್ನವಾಗಿರುವ, ಅದೇ ರೀತಿಯ ಒಂದು ಗುರುತನ್ನು ಈ ಗುಂಪುಗಳು ಹಂಚಿಕೊಳ್ಳುತ್ತವೆ",[] ಮತ್ತು ಒಂದು ವಸಾಹತಿನ ಅಧಿಕಾರದಿಂದ ಆಳಲ್ಪಡುತ್ತಿರುವ ನಿರ್ದಿಷ್ಟ ಪ್ರದೇಶವೊಂದಕ್ಕಿರುವ ಪ್ರಾದೇಶಿಕ ಹಕ್ಕುಗಳನ್ನು ಈ ಗುಂಪುಗಳು ಹಂಚಿಕೊಳ್ಳುತ್ತವೆ. ಆದಾಗ್ಯೂ, ಮಾನವ ಸಮುದಾಯಗಳ ಸಮಷ್ಟಿಯ ಹಕ್ಕುಗಳಿಗೆ ಸಂಬಂಧಿಸಿದ ಹೆಚ್ಚು ವಿಧ್ಯುಕ್ತಗೊಳಿಸಲ್ಪಟ್ಟ, ಕಾನೂನುವಾದದ, ಮತ್ತು ವಿದ್ವತ್‌ಪೂರ್ಣವಾದ ಅರ್ಥದಲ್ಲಿ ಸ್ಥಳೀಯ ಜನರು ಎಂಬುದನ್ನು ಬಳಸಿದಾಗ, ಆ ನಿರ್ದಿಷ್ಟ ಶಬ್ದವು ಹೆಚ್ಚು ಪರಿಮಿತಿಗೊಳಿಸುವ ಒಂದು ಅರ್ಥ ವಿವರಣೆಯನ್ನು ಹೊಂದಿರುತ್ತದೆ.[] ಈ ಸಂದರ್ಭಗಳಲ್ಲಿ, ವಿಶ್ವದೆಲ್ಲೆಡೆಯಿರುವ ನಿರ್ದಿಷ್ಟ ಜನರು ಮತ್ತು ಗುಂಪುಗಳನ್ನು ಸೂಚಿಸಲು ಸದರಿ ಶಬ್ದವು ಬಳಸಲ್ಪಡುತ್ತದೆ. ಈ ಗುಂಪುಗಳು ಒಂದು ನಿರ್ದಿಷ್ಟ ಭೂಪ್ರದೇಶಕ್ಕೆ[] ಸ್ಥಳೀಕರಾಗಿರುವುದರ ಅಥವಾ ಅದರೊಂದಿಗೆ ಸಂಬಂಧಿಸಿರುವುದರ ಜೊತೆಗೆ, ಇತರ ಕೆಲವೊಂದು ಮಾನದಂಡಗಳನ್ನು (ಸಾವಿರಾರು ವರ್ಷಗಳಷ್ಟು ಹಿಂದೆಯೇ ಒಂದು ಸಾಮಾಜಿಕ ಮತ್ತು ತಾಂತ್ರಿಕ ಸಮಸ್ಥಿತಿಯನ್ನು ತಲುಪಿರುವಂಥದ್ದು) ಈಡೇರಿಸುತ್ತವೆ.

ಮಾನದಂಡಗಳು

[ಬದಲಾಯಿಸಿ]

ಇವುಗಳನ್ನು ಅವಲಂಬಿಸಿ, ನಿಶ್ಚಿತ ಉದ್ದೇಶಗಳಿಗೆ ಸಂಬಂಧಿಸಿದಂತಿರುವ "ಸ್ಥಳೀಯ ಜನರ" ಒಂದು ಸಮಕಾಲೀನ ಕಾರ್ಯೋಪಯುಕ್ತ ಅರ್ಥವಿವರಣೆಯು ಮಾನದಂಡಗಳನ್ನು ಹೊಂದಿದ್ದು, ಸಾಂಸ್ಕೃತಿಕ ಗುಂಪುಗಳನ್ನು (ಮತ್ತು ಒಂದು ನಿರ್ದಿಷ್ಟ ಪ್ರದೇಶದೊಂದಿಗೆ ಅಥವಾ ಪ್ರದೇಶವೊಂದರ ಭಾಗಗಳೊಂದಿಗಿನ, ಹಾಗೂ ಆ ಪ್ರದೇಶದಲ್ಲಿ ಹಿಂದಿದ್ದ ಅಥವಾ ಪ್ರಸಕ್ತವಾಗಿ ವಾಸಿಸುತ್ತಿರುವವರೊಂದಿಗಿನ ಅವುಗಳ ನಿರಂತರತೆ ಅಥವಾ ಸಂಬಂಧವನ್ನು) ಒಳಗೊಳ್ಳಲು ಬಯಸುತ್ತವೆ. ಈ ಒಳಗೊಳ್ಳುವಿಕೆಯು ಇವುಗಳಲ್ಲೊಂದಾಗಿರುತ್ತದೆ:[]

  • ಮುಂಚಿತವಾಗಿ ಅಥವಾ ಅದರ ತರುವಾಯದ ವಸಾಹತುಗಾರಿಕೆ ಅಥವಾ ಜೋಡಣೆಯಲ್ಲಿ; ಅಥವಾ
  • ವಸಾಹತು ಅಥವಾ ರಾಷ್ಟ್ರ-ಸಂಸ್ಥಾನವೊಂದರ ರಚನೆ ಮತ್ತು/ಅಥವಾ ಆಳ್ವಿಕೆಯ ಸಂದರ್ಭದಲ್ಲಿ ಇತರ ಸಾಂಸ್ಕೃತಿಕ ಗುಂಪುಗಳ ಜೊತೆಜೊತೆಯಲ್ಲಿಯೇ; ಅಥವಾ
  • ರಾಷ್ಟ್ರ-ಸಂಸ್ಥಾನವೊಂದರ ಸಮರ್ಥಿಸಲ್ಪಟ್ಟ ಆಳ್ವಿಕೆಯ ಪ್ರಭಾವದಿಂದ ಸ್ವತಂತ್ರವಾಗಿ ಅಥವಾ ಬಹುಪಾಲು ಪ್ರತ್ಯೇಕಿಸಲ್ಪಟ್ಟ ರೀತಿಯಲ್ಲಿ ಇರುತ್ತದೆ.

ಮತ್ತು ಮೇಲಾಗಿ ಅದು ಹೀಗಿರಲೂ ಸಾಧ್ಯವಿದೆ:[]

  • ಯಾವ ಜನರು ಕನಿಷ್ಟಪಕ್ಷ ಭಾಗಶಃವಾಗಿಯಾದರೂ ತಮ್ಮ ಸ್ಪಷ್ಟವಾದ ಸಾಂಸ್ಕೃತಿಕ, ಸಾಮಾಜಿಕ/ಸಾಂಸ್ಥಿಕ, ಮತ್ತು/ಅಥವಾ ಭಾಷಿಕ ಗುಣಲಕ್ಷಣಗಳನ್ನು ಕಾಯ್ದುಕೊಂಡು ಬಂದಿದ್ದಾರೋ, ಮತ್ತು ಹಾಗೆ ಮಾಡುವ ಸಂದರ್ಭದಲ್ಲಿ ರಾಷ್ಟ್ರ-ಸಂಸ್ಥಾನದ ಪ್ರಬಲ ಸಂಸ್ಕೃತಿ ಮತ್ತು ಸುತ್ತುಮುತ್ತಲ ಸಮುದಾಯಗಳಿಂದ ಒಂದಷ್ಟು ಮಟ್ಟದಲ್ಲಿ ಪ್ರತ್ಯೇಕತೆಯನ್ನು ಕಾಯ್ದಕೊಂಡು ಬಂದಿರುವರೋ ಅಂಥವರನ್ನೂ ಸದರಿ ಸಾಂಸ್ಕೃತಿಕ ಗುಂಪುಗಳು ಒಳಗೊಂಡಿರಲು ಸಾಧ್ಯವಿದೆ.

ಮೇಲೆ ಉಲ್ಲೇಖಿಸಿರುವುದರ ಜೊತೆಗೆ, ಈ ಕೆಳಕಂಡ ಜನರನ್ನೂ ಒಳಗೊಳ್ಳುವಂತಾಗಲು ಮಾನದಂಡವೊಂದನ್ನು ಸಾಮಾನ್ಯವಾಗಿ ಸೇರ್ಪಡೆ ಮಾಡಲಾಗುತ್ತದೆ:[]

  • ಸ್ಥಳೀಯರೆಂದು ಸ್ವಯಂ-ಗುರುತಿಸಲ್ಪಟ್ಟಿರುವ ಜನರು, ಮತ್ತು/ಅಥವಾ ಈ ರೀತಿಯಾಗಿ ಇತರ ಗುಂಪುಗಳಿಂದ ಗುರುತಿಸಲ್ಪಟ್ಟಿರುವ ಜನರು.

ಒಂದು ವೇಳೆ ಮೇಲಿನ ಎಲ್ಲಾ ಮಾನದಂಡಗಳು ಈಡೇರಿಸಲ್ಪಟ್ಟರೂ ಸಹ, ಕೆಲವೊಂದು ಜನರು ಒಂದೋ ಸ್ವತಃ ತಮ್ಮನ್ನು ಸ್ಥಳೀಯರೆಂಬುದಾಗಿ ಪರಿಗಣಿಸಿಕೊಳ್ಳದಿರಬಹುದು ಅಥವಾ ಸರ್ಕಾರಗಳು, ಸಂಘಟನೆಗಳು ಅಥವಾ ಪಂಡಿತರಿಂದ ಅವರು ಸ್ಥಳೀಯರೆಂಬುದಾಗಿ ಪರಿಗಣಿಸಲ್ಪಡದೇ ಇರಬಹುದು. ಸ್ಥಳೀಯರಾದ / ಸ್ಥಳೀಯರಲ್ಲದ ಜನರ ಕುರಿತಾದ ಸಂವಾದವನ್ನು ವಸಾಹತು ನೀತಿಯ ನಂತರದ ಸಂದರ್ಭದ ಮತ್ತು ವಸಾಹತಿನ-ನಂತರದ ಸಮಾಜಗಳ ವಿಕಸನದ ಸಂದರ್ಭಗಳ ವ್ಯಾಪ್ತಿಯೊಳಗೂ ನೋಡಬಹುದು.

ಗುಣಲಕ್ಷಣಗಳು

[ಬದಲಾಯಿಸಿ]

ಜನಸಂಖ್ಯೆ ಮತ್ತು ಹಂಚಿಕೆ

[ಬದಲಾಯಿಸಿ]
ಶ್ರೀಲಂಕಾಗೆ ಸೇರಿದ ವೆಡಾಹ್‌ ಮನುಷ್ಯ.

ಸ್ಥಳೀಯ ಸಮಾಜಗಳ ವ್ಯಾಪ್ತಿಯು ಬಹು ವಿಶಾಲವಾಗಿದೆ ಎಂದು ಹೇಳಬಹುದು. ಇತರ ಸಮಾಜಗಳ ವಸಾಹತೀಕರಣದ ಅಥವಾ ವಿಸ್ತರಣೀಯ ಚಟುವಟಿಕೆಗಳಿಗೆ (ಮೆಕ್ಸಿಕೊ ಮತ್ತು ಮಧ್ಯ ಅಮೆರಿಕಾದ ಮಾಯಾ ಜನರ ಚಟುವಟಿಕೆಗಳಂಥವು) ಗಮನಾರ್ಹವಾಗಿ ಒಡ್ಡಿಕೊಂಡ ಸಮಾಜಗಳಿಂದ ಮೊದಲ್ಗೊಂಡು, ಯಾವುದೇ ಬಾಹ್ಯ ಪ್ರಭಾವದಿಂದಾದ (ಅಂಡಮಾನ್‌ ದ್ವೀಪಗಳ ಸೆಂಟಿನೆಲೀಸ್‌ ಮತ್ತು ಜರಾವದಂಥ) ತುಲನಾತ್ಮಕವಾದ ಪ್ರತ್ಯೇಕಿಸುವಿಕೆಯಲ್ಲಿ ಇನ್ನೂ ಉಳಿದುಕೊಂಡಿರುವ ಸಮಾಜಗಳವರೆಗೆ ಸ್ಥಳೀಯ ಸಮಾಜಗಳು ವ್ಯಾಪ್ತಿ ಹರಡಿದೆ.

ವಿಶ್ವದ ಸ್ಥಳೀಯ ಜನರ ಒಟ್ಟು ಸಂಖ್ಯೆಯ ಕರಾರುವಾಕ್ಕಾದ ಅಂದಾಜುಗಳನ್ನು ಒಟ್ಟುಗೂಡಿಸುವುದು ಅತ್ಯಂತ ಕಷ್ಟಕರವಾಗಿದೆ. ಗುರುತಿಸುವಿಕೆಯಲ್ಲಿರುವ ತೊಡಕುಗಳು ಹಾಗೂ ಲಭ್ಯವಿರುವ ಜನಗಣತಿಯ ದತ್ತಾಂಶದ ವ್ಯತ್ಯಾಸಗಳು ಮತ್ತು ಕೊರತೆಗಳು ಇದಕ್ಕೆ ಕಾರಣವೆನ್ನಬಹುದು. 21ನೇ ಶತಮಾನದ ಆರಂಭದ ವೇಳೆಗೆ ಇದ್ದಂತೆ, ಇತ್ತೀಚಿನ ಮೂಲ ಅಂದಾಜುಗಳು 300 ದಶಲಕ್ಷದಿಂದ[] 350 ದಶಲಕ್ಷದವರೆಗೆ[] ತಮ್ಮ ವ್ಯಾಪ್ತಿಯನ್ನು ಹೊಂದಿವೆ. ಇದು ಒಟ್ಟು ವಿಶ್ವ ಸಮುದಾಯದ 6%ಗಿಂತಲೂ ಸ್ವಲ್ಪವೇ ಕೆಳಗಿರುವುದರ ಪ್ರಮಾಣಕ್ಕೆ ಸಮೀಕರಿಸುತ್ತದೆ. 72ಕ್ಕೂ ಹೆಚ್ಚಿನ ದೇಶಗಳಲ್ಲಿರುವ ಕನಿಷ್ಟಪಕ್ಷ 5000ದಷ್ಟು ವಿಶಿಷ್ಟ ಜನರನ್ನು[] ಇದು ಒಳಗೊಳ್ಳುತ್ತದೆ.

ಕೇವಲ ಕೆಲವೇ ಡಜನ್ನುಗಳಿಂದ ನೂರಾರು ಸಾವಿರಗಳಷ್ಟು ಮತ್ತು ಅದಕ್ಕೂ ಹೆಚ್ಚಿನವರೆಗಿನ ವ್ಯಾಪ್ತಿಯನ್ನು ಹೊಂದಿರುವ ಸಮುದಾಯಗಳಲ್ಲಿ ಸಮಕಾಲೀನವಾದ ವಿಸ್ಪಷ್ಟ ಸ್ಥಳೀಯ ಗುಂಪುಗಳು ಅಸ್ತಿತ್ವದಲ್ಲಿರುತ್ತವೆ. ವಿಶ್ವದ ಅನೇಕ ಭಾಗಗಳಲ್ಲಿ, ಅನೇಕ ಸ್ಥಳೀಯ ಸಮುದಾಯಗಳು ಒಂದು ನಾಟಕೀಯ ಕುಸಿತಕ್ಕೆ ಒಳಗಾಗಿವೆ ಮತ್ತು ಅಳಿವಿಗೂ ಈಡಾಗಿವೆ, ಮತ್ತು ಬೆದರಿಕೆಗೊಳಗಾಗಿ ಉಳಿದುಕೊಂಡಿವೆ. ಕೆಲವೊಂದು ಸಮುದಾಯಗಳು ಇತರ ಸಮುದಾಯಗಳ ವತಿಯಿಂದ ಒಳಗೂಡಿಸಿಕೊಳ್ಳಲ್ಪಟ್ಟಿವೆ ಅಥವಾ ಇತರ ಅನೇಕ ಬದಲಾವಣೆಗಳಿಗೆ ಒಳಗಾಗಿವೆ. ಇತರ ನಿದರ್ಶನಗಳಲ್ಲಿ, ಸ್ಥಳೀಯ ಸಮುದಾಯಗಳು ಒಂದು ಚೇತರಿಕೆಗೆ ಒಳಗಾಗಿವೆ ಅಥವಾ ಸಂಖ್ಯೆಗಳಲ್ಲಿ ವಿಸ್ತರಣೆಗೊಳಗಾಗಿವೆ.

ಕೆಲವೊಂದು ಸ್ಥಳೀಯ ಸಮಾಜಗಳು ವಲಸೆ, ಹೊಸ ಜಾಗಕ್ಕೆ ಹೋಗುವಿಕೆ, ಬಲವಂತದ ಪುನರ್ವಸತಿ ಕಲ್ಪಿಸುವಿಕೆಯ ಕಾರಣದಿಂದಾಗಿ ಅಥವಾ ಇತರ ಸಾಂಸ್ಕೃತಿಕ ಗುಂಪುಗಳಿಂದ ದುರಾಕ್ರಮಣಕ್ಕೆ ಈಡಾದ ಕಾರಣದಿಂದಾಗಿ ತಮ್ಮ "ಸಾಂಪ್ರದಾಯಿಕ" ಪ್ರದೇಶಗಳಲ್ಲಿ ಇನ್ನೆಂದೂ ವಾಸಿಸದೇ ಇದ್ದರೂ ಸಹ, ತಮ್ಮ ಅಸ್ತಿತ್ವವನ್ನು ಕಾಯ್ದುಕೊಂಡು ಬಂದಿವೆ. ಇತರ ಅನೇಕ ಪರಿಗಣನೆಗಳಲ್ಲಿ, ಸ್ಥಳೀಯ ಗುಂಪುಗಳ ಸಂಸ್ಕೃತಿಯ ರೂಪಾಂತರವು ಚಾಲ್ತಿಯಲ್ಲಿದೆ, ಮತ್ತು ಭಾಷೆಯ ಕಾಯಂ ನಷ್ಟ, ಪ್ರದೇಶಗಳ ನಷ್ಟ, ಸಾಂಪ್ರದಾಯಿಕ ಭೂಪ್ರದೇಶಗಳ ಮೇಲಿನ ಅತಿಕ್ರಮಣ, ಹಾಗೂ ನೀರು ಮತ್ತು ಭೂಪ್ರದೇಶಗಳ ಕಲುಷಿತಗೊಳಿಸುವಿಕೆ ಮತ್ತು ಮಾಲಿನ್ಯದ ಕಾರಣದಿಂದಾಗಿ ಸಾಂಪ್ರದಾಯಿಕ ಜೀವನಮಾರ್ಗಗಳಲ್ಲಿ ಕಂಡುಬರುವ ಅಡಚಣೆಗಳನ್ನು ಒಳಗೊಳ್ಳುತ್ತದೆ.

ಸಾಮಾನ್ಯ ಗುಣಲಕ್ಷಣಗಳು

[ಬದಲಾಯಿಸಿ]

ಅನೇಕ ಸ್ಥಳೀಯ ಗುಂಪುಗಳಾದ್ಯಂತ ಸಾಮಾನ್ಯವಾಗಿ ಕಂಡುಬರುವ ಗುಣಲಕ್ಷಣಗಳಲ್ಲಿ ಇವು ಸೇರಿವೆ: ಕನಿಷ್ಟ ಮಟ್ಟವನ್ನು ಆಧರಿಸಿದ ಉತ್ಪಾದನೆಯ (ಕುರಿದನಗಳ ಮಂದೆಗಳ, ತೋಟಗಾರಿಕೆಯ ಮತ್ತು/ಅಥವಾ ಬೇಟೆಯಾಡುವಿಕೆ ಮತ್ತು ಒಟ್ಟುಗೂಡುವಿಕೆಯ ಕುಶಲತೆಗಳನ್ನು ಆಧರಿಸಿದ) ಮೇಲಿನ ಈಗಿನ ಅಥವಾ ಐತಿಹಾಸಿಕ ಅವಲಂಬನೆ ಮತ್ತು ಪ್ರಧಾನವಾಗಿ ನಗರೀಕರಿಸಲ್ಪಟ್ಟ ವರ್ಗಕ್ಕೆ ಸೇರದ ಒಂದು ಸಮಾಜ. ಎಲ್ಲಾ ಸ್ಥಳೀಯ ಗುಂಪುಗಳೂ ಈ ಗುಣಲಕ್ಷಣಗಳನ್ನು ಹಂಚಿಕೊಳ್ಳುವುದಿಲ್ಲ. ಸ್ಥಳೀಯ ಸಮಾಜಗಳು ಒಂದು ನಿರ್ದಿಷ್ಟ ಘಟನಾಸ್ಥಳ/ಪ್ರದೇಶದಲ್ಲಿ ನೆಲೆಗೊಂಡಿರಬಹುದು ಅಥವಾ ಒಂದು ಬೃಹತ್‌ ಭೂಪ್ರದೇಶದ ಉದ್ದಗಲಕ್ಕೂ ಅಲೆಮಾರಿ ವಂಶದ ಒಂದು ಜೀವನಶೈಲಿಯನ್ನು ಪ್ರದರ್ಶಿಸಬಹುದು; ಆದರೆ ಅವು ಅವಲಂಬಿತವಾಗಿರುವ ಒಂದು ನಿರ್ದಿಷ್ಟ ಭೂಪ್ರದೇಶದೊಂದಿಗೆ ಅವು ಸಾಮಾನ್ಯವಾಗಿ ಐತಿಹಾಸಿಕವಾಗಿ ಸಂಬಂಧವನ್ನು ಹೊಂದಿರುತ್ತವೆ. ವಾಸಕ್ಕೊಳಗಾಗಿರುವ ವಿಶ್ವದ ಪ್ರತಿಯೊಂದು ಹವಾಮಾನ ವಲಯ ಮತ್ತು ಭೂಖಂಡದಲ್ಲಿ ಸ್ಥಳೀಯ ಸಮಾಜಗಳು ಕಂಡುಬರುತ್ತವೆ.[][೧೦]

ಸಾಮಾನ್ಯ ಕಳವಳಗಳು

[ಬದಲಾಯಿಸಿ]

ಸ್ಥಳೀಯ ಜನರು ಒಂದು ವೈವಿಧ್ಯಮಯ ವ್ಯಾಪ್ತಿಯಲ್ಲಿರುವ ಕಳವಳಗಳನ್ನು ಎದುರಿಸುತ್ತಾರೆ. ಅವು ಇತರ ಸಾಂಸ್ಕೃತಿಕ ಗುಂಪುಗಳ ಜೊತೆಗಿನ ಸ್ಥಳೀಯ ಜನರ ಸ್ಥಾನಮಾನ ಮತ್ತು ಪರಸ್ಪರ ಪ್ರಭಾವದೊಂದಿಗೆ ಸಂಬಂಧಿಸಿದವಾಗಿರುತ್ತವೆ ಮತ್ತು ಅವರು ವಾಸವಾಗಿರುವ ಪರಿಸರದಲ್ಲಿ ಕಂಡುಬರುವ ಬದಲಾವಣೆಗಳೊಂದಿಗೆ ಸಂಬಂಧಿಸಿದವಾಗಿರುತ್ತವೆ. ಕೆಲವೊಂದು ಸವಾಲುಗಳು ನಿರ್ದಿಷ್ಟ ಗುಂಪುಗಳಿಗೆ ನಿಶ್ಚಿತ ಸ್ವರೂಪದಲ್ಲಿರುತ್ತವೆ; ಆದಾಗ್ಯೂ, ಇತರ ಸವಾಲುಗಳೂ ಸಹ ಸಾಮಾನ್ಯವಾಗಿ ಅನುಭವಕ್ಕೆ ಬರುತ್ತವೆ. ವಿಶ್ವದ ಇತರ ಭಾಗಗಳಲ್ಲಿ ಸ್ಥಳೀಯ ಜನರ ಮಾನವ ಹಕ್ಕುಗಳು ದುರುಪಯೋಗಕ್ಕೊಳಗಾಗುತ್ತಿರುವ ಸ್ಥಿತಿಯು ಮುಂದುವರಿದಿರುವ ಸಂದರ್ಭದಲ್ಲೇ, ವಿಶ್ವದ ಕೆಲವೊಂದು ಸ್ಥಳಗಳಲ್ಲಿ ಅವರ ಸ್ಥಿತಿಗತಿಗಳು ಏಕೆ ಮತ್ತು ಹೇಗೆ ಸುಧಾರಿಸುತ್ತಿವೆ ಎಂಬುದರ ಕುರಿತಾಗಿ ಬಾರ್ಥೊಲೊಮೆವ್‌ ಡೀನ್‌ ಮತ್ತು ಜೆರೋಮ್‌ ಲೆವಿ (2003) ಒಳಹೊಕ್ಕು ವಿಚಾರಮಾಡಿದ್ದಾರೆ.[೧೧] ಈ ವಿವಾದಾಂಶಗಳಲ್ಲಿ ಇವೆಲ್ಲವೂ ಸೇರಿವೆ: ಸಾಂಸ್ಕೃತಿಕ ಮತ್ತು ಭಾಷಿಕ ಸಂರಕ್ಷಣೆ, ಭೂಮಿಯ ಹಕ್ಕುಗಳು, ಸ್ವಾಭಾವಿಕ ಸಂಪನ್ಮೂಲಗಳ ಮಾಲೀಕತ್ವ ಮತ್ತು ಉಪಯೋಗಿಸಿಕೊಳ್ಳುವಿಕೆ, ರಾಜ್ಯನೀತಿಯ ಸಂಕಲ್ಪಶಕ್ತಿ ಮತ್ತು ಸ್ವಾಯತ್ತತೆ, ಪರಿಸರೀಯ ಅವನತಿ ಮತ್ತು ಹಠಾತ್‌ ದಾಳಿ, ಬಡತನ, ಆರೋಗ್ಯ, ಮತ್ತು ಭೇದಭಾವ.

ಇತಿಹಾಸದುದ್ದಕ್ಕೂ ಕಂಡುಬರುವ ಸ್ಥಳೀಯ ಸಮಾಜಗಳು ಮತ್ತು ಸ್ಥಳೀಯವಲ್ಲದ ಸಮಾಜಗಳ ನಡುವಿನ ಪರಸ್ಪರ ಪ್ರಭಾವವು ಸಂಕೀರ್ಣವಾಗಿದ್ದು, ಸಂಪೂರ್ಣವಾದ ಘರ್ಷಣೆ ಮತ್ತು ದಾಸ್ಯಕ್ಕೆ ಗುರಿಮಾಡುವಿಕೆಯಿಂದ ಮೊದಲ್ಗೊಂಡು ಒಂದು ಮಟ್ಟದ ಪರಸ್ಪರ ಪ್ರಯೋಜನ ಮತ್ತು ಸಾಂಸ್ಕೃತಿಕ ವರ್ಗಾವಣೆಯವರೆಗೆ ಇದರ ವ್ಯಾಪ್ತಿಯಿದೆ. ಮೊದಲ ಸಂಪರ್ಕ ಎಂದು ಕರೆಯಲ್ಪಡುವುದರ ಕವಲೊಡೆಯುವಿಕೆಗಳ ಪರಿಶೀಲನೆಯನ್ನು, ಹಾಗೂ ಎರಡು ಸಂಸ್ಕೃತಿಗಳು ಮೊದಲಿಗೆ ಒಂದಕ್ಕೊಂದು ಮುಖಾಮುಖಿಯಾದಾಗ ಏನು ಸಂಭವಿಸುತ್ತದೆ ಎಂಬುದರ ಅಧ್ಯಯನವನ್ನು ಮನುಷ್ಯ ಸ್ವಭಾವದ ಅಧ್ಯಯನದ ಒಂದು ನಿರ್ದಿಷ್ಟ ಮಗ್ಗುಲು ಒಳಗೊಳ್ಳುತ್ತದೆ. ಒಂದು ನಿರ್ದಿಷ್ಟ ಪ್ರದೇಶದ ಸಮುದಾಯ ಹಾಗೂ ವಲಸೆಯ ಕುರಿತಾಗಿ ಒಂದು ಜಟಿಲಗೊಂಡ ಅಥವಾ ವಾಗ್ವಾದ ಮಾಡಲ್ಪಟ್ಟ ಇತಿಹಾಸವು ಕಂಡುಬಂದಾಗ, ಸದರಿ ಸನ್ನಿವೇಶವು ಮತ್ತಷ್ಟು ಗೊಂದಲವುಂಟುಮಾಡಬಹುದು; ಇದರಿಂದಾಗಿ ಭೂಮಿ ಮತ್ತು ಸಂಪನ್ಮೂಲಗಳ ಆದ್ಯತೆ ಮತ್ತು ಮಾಲೀಕತ್ವದ ಕುರಿತಾದ ವಿವಾದಗಳು ಹುಟ್ಟಿಕೊಳ್ಳಬಹುದು.

ಐತಿಹಾಸಿಕ ಸಂಸ್ಕೃತಿಗಳು

[ಬದಲಾಯಿಸಿ]
ಭಾರತದ ಒರಿಸ್ಸಾದಲ್ಲಿನ ಕುಟಿಯಾ ಕೊಂಢ್‌ ಬುಡಕಟ್ಟಿನ ಗುಂಪಿಗೆ ಸೇರಿದ ಓರ್ವ ಆದಿವಾಸಿ ಮಹಿಳೆ.

ವಿಭಿನ್ನ ಭೂಪ್ರದೇಶಗಳ ಉದ್ದಗಲಕ್ಕೂ ಕಂಡುಬರುವ ಸಮಾಜಗಳ ವಲಸೆ, ವಿಸ್ತರಣೆ ಮತ್ತು ನೆಲೆಗೊಳಿಸುವಿಕೆಯು ಒಂದು ಸಾರ್ವತ್ರಿಕವಾದ, ಹೆಚ್ಚೂಕಮ್ಮಿ ವಿಶದೀಕರಿಸುವ ತಂತುವಾಗಿದ್ದು, ಇದು ಮಾನವ ಇತಿಹಾಸದ ಸಮಗ್ರ ಪಥದ ಉದ್ದಕ್ಕೂ ವ್ಯಾಪಿಸುತ್ತದೆ. ಈ ಐತಿಹಾಸಿಕ ಮುಖಾಮುಖಿಗಳ ಒಂದು ಫಲವಾಗಿ ಹುಟ್ಟಿಕೊಂಡ ವಿಭಿನ್ನ-ಸಂಸ್ಕೃತಿಗಳ ಪರಸ್ಪರ ಪ್ರಭಾವಗಳ ಪೈಕಿ ಅನೇಕವು, ಸ್ಥಳೀಯ ಎಂಬುದಾಗಿ ಸೂಕ್ತವಾಗಿ ಪರಿಗಣಿಸಲ್ಪಡಬಹುದಾದ ಸಮಾಜಗಳನ್ನು ಒಳಗೊಂಡಿದ್ದವು; ಸದರಿ 'ಸ್ಥಳೀಯ' ಎಂಬ ಪರಿಗಣನೆಯು ಅವುಗಳದ್ದೇ ಆದ ದೃಷ್ಟಿಕೋನದಿಂದ ಅಥವಾ ಬಾಹ್ಯ ಸಮಾಜಗಳ ದೃಷ್ಟಿಕೋನದಿಂದ ಬಂದದ್ದಾಗಿತ್ತು.

ಅನೇಕವೇಳೆ, ಸ್ಥಳೀಯ ಗುಂಪುಗಳು ಮತ್ತು "ಸ್ಥಳೀಯವಲ್ಲದ" ಗುಂಪುಗಳ ನಡುವಿನ ಈ ಗತಕಾಲದ ಮುಖಾಮುಖಿಗಳಲ್ಲಿ, ಸಮಕಾಲೀನ ಸಮರ್ಥನೆ ಅಥವಾ ವಿವರಣೆಯ ಕೊರತೆ ಕಂಡುಬರುತ್ತದೆ. ಪುರಾತತ್ತ್ವಶಾಸ್ತ್ರದ ವಿಧಾನ, ಭಾಷಿಕ ವಿಧಾನ ಅಥವಾ ಇತರ ಪುನರ್ನಿರ್ಮಾಣದ ವಿಧಾನಗಳನ್ನು ಬಳಸಿಕೊಂಡು, ಪ್ರಭಾವ, ಫಲಿತಾಂಶ ಮತ್ತು ಸಂಬಂಧದ ಯಾವುದೇ ಮೌಲ್ಯನಿರ್ಣಯ ಅಥವಾ ಗ್ರಹಿಕೆಯನ್ನು ಅತ್ಯುತ್ತಮವಾಗಿ ಊಹಿಸಬಹುದಾಗಿದೆ. ಸಮರ್ಥನೆಗಳು ಅಸ್ತಿತ್ವದಲ್ಲಿರುವ ನಿದರ್ಶನಗಳಲ್ಲಿ, ವಸಾಹತೀಕರಣದ, ವಿಸ್ತರಣೀಯ ಅಥವಾ ಉದ್ಭವಾವಸ್ಥೆಯ ಸಂಸ್ಥಾನದಿಂದ ಅವು ಪದೇಪದೇ ಹುಟ್ಟಿಕೊಳ್ಳುತ್ತವೆ; ಅಥವಾ ಸ್ಥಳೀಯ ಸಮುದಾಯಗಳು ಮತ್ತು/ಅಥವಾ ಅವುಗಳ ಪ್ರತಿನಿಧಿಗಳೊಂದಿಗೆ ಹೆಚ್ಚು ಸಮಾನ ಮನೋಧರ್ಮವನ್ನು ಹೊಂದಿದವರಿಂದ ಒಟ್ಟುಗೂಡಿಸಲ್ಪಟ್ಟ, ಸಾಕಷ್ಟು ದುರ್ಲಭವಾದ ಮತ್ತು ಪ್ರತ್ಯೇಕಗೊಳಿಸಲ್ಪಟ್ಟ ಜನಾಂಗ ವಿವರಣೆಯ ಆಕರಗಳಿಂದ ಅವು ಪದೇಪದೇ ಹುಟ್ಟಿಕೊಳ್ಳುತ್ತವೆ.

ಶಾಸ್ತ್ರೀಯ ಪ್ರಾಚೀನತೆ

[ಬದಲಾಯಿಸಿ]

ಶಾಸ್ತ್ರೀಯ ಅವಧಿಗೆ ಸೇರಿದ ಗ್ರೀಕ್‌ ಆಕರಗಳು, ಸ್ಥಳೀಯ ಜನರ ಪೂರ್ವಭಾವಿ ಅಸ್ತಿತ್ವವನ್ನು ಅಂಗೀಕರಿಸುತ್ತವೆ ಮತ್ತು ಅವರನ್ನು "ಪಿಲಾಸ್ಜಿಯನ್‌‌‌ಗಳು" ಎಂಬುದಾಗಿ ಉಲ್ಲೇಖಿಸುತ್ತವೆ. ಈ ಲೇಖಕರಿಂದ ಸಮರ್ಥಿಸಲ್ಪಟ್ಟಿರುವಂತೆ, ಗ್ರೀಕರಿಗೆ ಸಂಬಂಧಪಟ್ಟ ಪೂರ್ವಜರಿಂದ ಆದ ತರುವಾಯದ ವಲಸೆಗಳಿಗೆ ಮುಂಚಿತವಾಗಿ, ಈ ಜನರು ಏಜಿಯನ್‌ ಸಮುದ್ರದ ಸುತ್ತುಮುತ್ತಲ ಪ್ರದೇಶಗಳಲ್ಲಿ ವಾಸವಾಗಿದ್ದರು. ಈ ಹಿಂದಿನ ಗುಂಪಿನ ಕ್ರಮಜೋಡಣೆ ಮತ್ತು ಕರಾರುವಾಕ್ಕಾದ ಗುರುತುಗಳು ಗ್ರಹಿಕೆಗೆ ನಿಲುಕದಂತಿವೆ, ಹಾಗೂ ಹೋಮರ್‌‌, ಹೆಸಿಯೋಡ್‌ ಮತ್ತು ಹೆರೋಡೋಟಸ್‌ ರೀತಿಯ ಆಕರಗಳು ಬದಲಾಗುತ್ತಾ ಹೋಗುವ, ಭಾಗಶಃ ಪೌರಾಣಿಕ ಸಮರ್ಥನೆಗಳನ್ನು ನೀಡುತ್ತವೆ. ಆದಾಗ್ಯೂ, ತರುವಾಯದ ಗ್ರೀಕರ ಸಂಸ್ಕೃತಿಗಳಿಂದ ಪ್ರತ್ಯೇಕಿಸಲ್ಪಟ್ಟಿದ್ದ (ಮತ್ತು ಐತಿಹಾಸಿಕ ಗ್ರೀಕರಿಂದ "ಅನ್ಯದೇಶೀಯರು" ಎಂಬುದಾಗಿ ಕರೆಯಲ್ಪಡುತ್ತಿದ್ದ, ಗ್ರೀಕ್‌ ಮಾತನಾಡದ "ವಿದೇಶಿಯರಿಂದ" ಪ್ರತ್ಯೇಕವಾಗಿದ್ದ) ಸ್ಥಳೀಯ ಗುಣಲಕ್ಷಣಗಳನ್ನು ಹೊಂದಿದ್ದ ಸಂಸ್ಕೃತಿಗಳು ಅಸ್ತಿತ್ವದಲ್ಲಿದ್ದವು ಎಂಬುದು ಸ್ಪಷ್ಟವಾಗಿದೆ. ‌250 BC ಮತ್ತು 480 AD ನಡುವಿನ ಅವಧಿಯಲ್ಲಿ ಗ್ರೀಕ್‌ ಮತ್ತು ರೋಮನ್ ಸಮಾಜಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದವು ಹಾಗೂ ಭೂಮಂಡಲದ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಭದ್ರವಾಗಿ ಹಿಡಿದುಕೊಂಡಿದ್ದ ಗೆಲ್ಲುವಿಕೆಗಳ ಅವಿಚ್ಛಿನ್ನವಾದ ಅಲೆಗಳ ಅಥವಾ ಸಮೂಹದ ನಿಯಂತ್ರಣವನ್ನು ಅವು ಹೊಂದಿದ್ದವು. ಶಾಸ್ತ್ರೀಯ ಪ್ರಾಚೀನತೆಯ ಅವಧಿಯಲ್ಲಿ ಯುರೋಪ್‌ನ ಇತರ ಭಾಗಗಳೊಳಗೆ ಅಷ್ಟುಹೊತ್ತಿಗಾಗಲೇ ಅಸ್ತಿತ್ವದಲ್ಲಿದ್ದ ಸಮುದಾಯಗಳು, ಗ್ರೀಕ್‌ ಮತ್ತು ರೋಮನ್‌ ವಿಶ್ವದೊಂದಿಗೆ ಹೆಚ್ಚು ಸಮಾನವಾಗಿ ಸಾಂಸ್ಕೃತಿಕವಾಗಿ ಮಾತನಾಡುವ ಸಾಮರ್ಥ್ಯವನ್ನು ಹೊಂದಿದ್ದರಿಂದಾಗಿ, ಐರೋಪ್ಯ ಸೀಮಾರೇಖೆಯ ಉದ್ದಕ್ಕೂ ಇದ್ದ ವಿಸ್ತರಣೆಯಲ್ಲಿ ಒಳಗೊಂಡಿದ್ದ ಜಟಿಲತೆಗಳು ಸ್ಥಳೀಯ ವಿವಾದಾಂಶಗಳಿಗೆ ಸಂಬಂಧಿಸಿದಂತೆ ಅಷ್ಟೊಂದು ವಿವಾದಾಸ್ಪದವಾಗಿರಲಿಲ್ಲ. ಆದರೆ, ವಿಶ್ವದ ಇತರ ಭಾಗಗಳಲ್ಲಿ, ಅಂದರೆ ಏಷ್ಯಾ, ಆಫ್ರಿಕಾ, ಮತ್ತು ಮಧ್ಯಪ್ರಾಚ್ಯಗಳಲ್ಲಿನ ವಿಸ್ತರಣೆಯ ಸನ್ನಿವೇಶವು ಎದುರಾದಾಗ, ಒಟ್ಟಾರೆಯಾಗಿ ಹೊಸ ಸಾಂಸ್ಕೃತಿಕ ಪ್ರೇರಕ ಶಕ್ತಿಗಳು ಸಮೀಕರಣದೊಳಗೆ ಪ್ರವೇಶಿಸಿದ್ದವು. ಇಲ್ಲಿ ನಾವು[who?] ಒಂದು ಆರಂಭವನ್ನು ಕಾಣುತ್ತೇವೆ; ಅಂದರೆ ಕೆಲ ನೂರು ವರ್ಷಗಳ ನಂತರ ಅಮೆರಿಕಾ ಖಂಡಗಳು, ಆಗ್ನೇಯ ಏಷ್ಯಾ, ಮತ್ತು ಪೆಸಿಫಿಕ್‌ ವಲಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದ್ದ ಸಂಗತಿಯು ಇಲ್ಲಿ ಕಂಡುಬರುತ್ತದೆ. ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ಜನಾಂಗೀಯ ಚಹರೆಗಳನ್ನು ಹೊಂದಿದ್ದ ಜನರು, ವಸಾಹತೀಕರಿಸುವ ಅಧಿಕಾರ ಶಕ್ತಿಯ ಜನರಿಗಿಂತ ಗಮನ ಸೆಳೆಯುವ ರೀತಿಯಲ್ಲಿ ವಿಭಿನ್ನವಾಗಿದ್ದರು ಎಂಬ ಪರಿಕಲ್ಪನೆಯು, ಮಧ್ಯಯುಗದ ಅವಧಿ ಅಥವಾ ವಿವೇಚನಾ ಯುಗದಿಂದ ಸಮರ್ಥಿಸಲ್ಪಟ್ಟ ಒಂದು ಹೊಸ ಪರಿಕಲ್ಪನೆಯೇನೂ ಅಲ್ಲ. ವಾಸ್ತವವಾಗಿ ಹೇಳಬೇಕೆಂದರೆ, ಈ ಪರಿಕಲ್ಪನೆಯು ಶಾಸ್ತ್ರೀಯ ಪ್ರಾಚೀನತೆಯ ರಾಜ್ಯನೀತಿಯ ಮತ್ತು ಬೌದ್ಧಿಕ ಚಿಂತನೆಗಳಲ್ಲಿ ತನ್ನ ಬೇರುಗಳನ್ನು ಹೊಂದಿತ್ತು; ಪ್ರಕೃತಿ ಮತ್ತು ಸಂಸ್ಕೃತಿಯ ಪರಸ್ಪರಾವಲಂಬಿ ಸಂಘಟಿತ ವಸ್ತುಗಳನ್ನು ಎರಡಾಗಿಸುವುದರ ಕಡೆಗೆ ಸದರಿ ಶಾಸ್ತ್ರೀಯ ಪ್ರಾಚೀನತೆಯು ಒಲವು ತೋರಿಸಿತ್ತು. ಇದು ಎಷ್ಟರ ಮಟ್ಟಿಗೆ ಇತ್ತೆಂದರೆ, 'ನಾಗರಿಕರಾಗಿರುವ' ಅಥವಾ ಸುಸಂಸ್ಕೃತರಾಗಿರುವ ಎಲ್ಲಾ ಜನರನ್ನು ಸಂಸ್ಕೃತಿಯೊಂದರ ಆದರ್ಶಪ್ರಾಯವಾಗಿರುವಂತೆ ನೋಡಲಾಗುತ್ತಿತ್ತು; ಇಂಥ ಸಂಸ್ಕೃತಿಯು ತಾನು ಹೊಂದಿದ್ದ ಸಮಾಜೋ-ಸಂಬಂಧಾತ್ಮಕ ಗುಣಲಕ್ಷಣಗಳು ಮತ್ತು ಪರಿಣಾಮಕ ರಾಜ್ಯನೀತಿಯ ಸಾಮರ್ಥ್ಯದಿಂದಾಗಿ ಸ್ವರೂಪದಿಂದ ನಿಸ್ಸಂದಿಗ್ಧವಾಗಿ ಸಂಸ್ಕರಿಸಲ್ಪಟ್ಟಿತ್ತು ಮತ್ತು ಸಾರಭೂತವಾಗಿ ಪ್ರತ್ಯೇಕವಾಗಿತ್ತು; ಸ್ಥಾನಮಾನ ಮತ್ತು ಸಂಪತ್ತಿನ ಒಟ್ಟುಗೂಡಿಸುವಿಕೆಯೆಡೆಗಿನ ಮೂಲಭೂತವಾದ ಪ್ರಚೋದನೆ ಮತ್ತು ವಿವೇಚನಾಶೀಲ ಒಲವು ಎಂಬುದಾಗಿ ನಂಬಲ್ಪಟ್ಟ ಅಂಶದಿಂದ ತಿಳಿಸಲ್ಪಟ್ಟ ವಶಪಡಿಸಿಕೊಳ್ಳುವ ಮನಸ್ಥಿತಿಯೊಂದನ್ನು ನಿಸ್ಸಂಕೋಚದಿಂದ ಸ್ವೀಕರಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು.[ಸೂಕ್ತ ಉಲ್ಲೇಖನ ಬೇಕು] ಆದ್ದರಿಂದ, ಸರ್ವೋಚ್ಚ ವಿವೇಚನಾಶೀಲತೆಯ ಒಂದು ಶ್ರೇಣಿ ವ್ಯವಸ್ಥೆಯ ದರ್ಜೆಯ ಪರಿಣಾಮಕಾರಿತ್ವದಲ್ಲಿನ ಈ ಚಾಲ್ತಿಯಲ್ಲಿರುವ ಸಾಮಾಜಿಕ ನಂಬಿಕೆಯು, ಗ್ರೀಕ್‌ ಮತ್ತು ರೋಮನ್‌ ಪ್ರಪಂಚದಲ್ಲಿನ ಪ್ರಮುಖವಾದ ಮತ್ತು ಗೌಣವಾದ ಎಲ್ಲಾ ರಾಜನೀತಿಯ ನಿರ್ಣಯಗಳ ಮೇಲೆ ಅಧಿಪತ್ಯ ನಡೆಸಿತು.[೧೨] ರಾಜ್ಯವಿಸ್ತರಣ ನೀತಿಯ ಸಂಸ್ಕೃತಿ ಮತ್ತು ರಾಜನೀತಿ ಎಂದರೆ ಇದೇ ಆಗಿದೆ. ಯಾವುದೇ ಸಂಸ್ಕೃತಿಗೆ ಸಂಬಂಧಿಸಿರುವ ಒಂದು ಎದ್ದುಕಾಣುವ ಅಸಡ್ಡೆಯೊಂದಿಗೆ ಸೇರಿಕೊಂಡ ಅಂಶದ ಮೇಲೆ ಇದು ಆಧಾರವಾಗಿದ್ದು, ಈ ಸ್ವಾರ್ಥಪರ ಅಧಿಕಾರದ ವಿರುದ್ಧ ಪ್ರತಿರೋಧ ತೋರುವಲ್ಲಿ ಸದರಿ ಸಂಸ್ಕೃತಿಯು ಸ್ವತಃ ಊರೆಯಾಗಿ ನಿಂತುಕೊಳ್ಳುವ ಧೈರ್ಯ ತೋರಿದೆ ಎನ್ನಬಹುದು. ಈ ಅವಧಿಯಲ್ಲಿ ಗ್ರೀಕ್‌ ಮತ್ತು ರೋಮನ್‌ ಆಳ್ವಿಕೆಯ ಸಂಸ್ಕೃತಿ ಗ್ರಹಣದ ಪ್ರಭಾವಗಳನ್ನು ಎದುರಿಸಲೆಂದು ಇಂಥ ವರ್ತನೆಗಳನ್ನು ತೋರಿದ ಸ್ಥಳೀಯ ಸಂಸ್ಕೃತಿಗಳು, ವಿವೇಚನಾರಹಿತ ದಮನಕ್ಕೆ ಅನೇಕ ವೇಳೆ ಒಳಗಾದವು ಹಾಗೂ ಒಂದು ಅಗಾಧ ಪ್ರಮಾಣದ ಸಾಂಸ್ಕೃತಿಕ ವಿಘಟನೆಗೆ ಈಡಾದವು; ಇದು 15ನೇ ಶತಮಾನದಿಂದ 20ನೇ ಶತಮಾನದವರೆಗೆ ಹಿಗ್ಗಿಸಲ್ಪಟ್ಟಂಥ, ತರುವಾಯದ ಐರೋಪ್ಯ ವಸಾಹತಿನ ಅವಧಿಯ ಸಂದರ್ಭದಲ್ಲಿ ಕಂಡುಬಂದ ಸನ್ನಿವೇಶಕ್ಕೆ ವ್ಯಾಪ್ತಿಯಲ್ಲಿ ಸರಿದೂಗುವಂತಿತ್ತು. ಈ ಬಗೆಯ ಆರಂಭಿಕ ಸ್ಥಳೀಯ ಪ್ರತಿರೋಧದ ಆಂದೋಲನಗಳಲ್ಲಿನ ಎರಡು ಅತ್ಯಂತ ಸುಪರಿಚಿತ ಆಂದೋಲನಗಳಲ್ಲಿ, ಪ್ರಾಚೀನ ಇಸ್ರೇಲ್‌ನಲ್ಲಿ ಕಂಡುಬಂದ "ಹಟೋತ್ಸಾಹಿ ಯೆಹೂದಿ ಪಂಥ"ದ ಜನಪ್ರಿಯ ಬಂಡಾಯಗಳು ಸೇರಿವೆ; ಗ್ರೀಕ್‌ ಮತ್ತು ರೋಮನ್‌ ಚಕ್ರಾಧಿಪತ್ಯದ ಅಸ್ತಿತ್ವದ ಸ್ವಯಂ-ನಿಯುಕ್ತ ಪರಿಣಾಮಕಾರಿತ್ವ ಮತ್ತು ಸಾಂಸ್ಕೃತಿಕ ಡಂಭಾಚಾರವನ್ನು ಹಾಗೂ ರೋಮ್‌ ಚಕ್ರಾಧಿಪತ್ಯದಡೆಗೆ ಕ್ರಿಶ್ಚಿಯನ್‌ ದೇಶಭ್ರಷ್ಟರು ಇಸ್ರೇಲ್‌ನಲ್ಲಿನ[೧೩] ತಮ್ಮ ಸಾಂಪ್ರದಾಯಿಕ ಭೂಪ್ರದೇಶದಿಂದ ಹೊಮ್ಮಿಸಿದ ಅಸಮ್ಮತಿಯ ಉದ್ಧಟ ಪ್ರತಿ-ಸಂಸ್ಕೃತಿಯನ್ನು ಇವು ಭಂಡತನದಿಂದ ನಿರಾಕರಿಸಿದವು; ಇದರ ಪರಿಣಾಮವಾಗಿ 70 ADಯಲ್ಲಿ ರಾಜಕೀಯ ದೊಂಬಿಯು ಕಂಡುಬಂದಿತು.[೧೪]

ಸೆರೆಹಿಡಿಯಲಾದ ಟೆನೆರೈಫ್‌ನ ಗುವಾಂಚೆ ರಾಜರನ್ನು ಫರ್ಡಿನೆಂಡ್‌ ಮತ್ತು ಇಸಬೆಲ್ಲಾರಿಗೆ ಅಲೊನ್ಸೊ ಫರ್ನಾಂಡೆಜ್‌ ಡೆ ಲೂಗೊ ಅರ್ಪಿಸುತ್ತಿರುವುದು.

ಐರೋಪ್ಯ ವಿಸ್ತರಣೆ ಮತ್ತು ವಸಾಹತು ನೀತಿ

[ಬದಲಾಯಿಸಿ]

15ನೇ ಶತಮಾನದ ಆರಂಭಿಕ ಭಾಗದಿಂದ ಮೊದಲ್ಗೊಂಡು ನಂತರ ಮುಂದುವರೆದ ನಾನಾಬಗೆಯ ಐರೋಪ್ಯ ಅಧಿಕಾರಗಳ ಕ್ಷಿಪ್ರ ಮತ್ತು ವ್ಯಾಪಕ ಹರಡಿಕೆಯು, ತನ್ನ ಸಂಪರ್ಕಕ್ಕೆ ಬಂದ ಸ್ಥಳೀಯ ಸಂಸ್ಕೃತಿಗಳ ಪೈಕಿಯ ಅನೇಕ ಸಂಸ್ಕೃತಿಗಳ ಮೇಲೆ ತುಂಬಾ ಆಳವಾದ ಒಂದು ಪ್ರಭಾವವನ್ನು ಬೀರಿತು. ಅಮೆರಿಕಾ ಖಂಡಗಳು, ಆಫ್ರಿಕಾ, ಏಷ್ಯಾ ಮತ್ತು ಪೆಸಿಫಿಕ್‌ ವಲಯಗಳಲ್ಲಿ ಕಂಡುಬಂದ ಪರಿಶೋಧನಾತ್ಮಕ ಮತ್ತು ವಸಾಹತಿನ ಸಾಹಸಗಳು ಅನೇಕ ವೇಳೆ ಪ್ರಾದೇಶಿಕ ಮತ್ತು ಸಾಂಸ್ಕೃತಿಕ ಘರ್ಷಣೆಗೆ ಕಾರಣವಾದವು; ಅಷ್ಟೇ ಅಲ್ಲ, ಸ್ಥಳೀಯ ಸಮುದಾಯಗಳ ಉದ್ದೇಶಪೂರ್ವಕವಾದ ಅಥವಾ ಉದ್ದೇಶಪೂರ್ವಕವಲ್ಲದ ಸ್ಥಳಾಂತರಣ ಮತ್ತು ವಿನಾಶನಕ್ಕೂ ಇವು ಕಾರಣವಾದವು.

ಗುವಾಂಚೆಗಳು ಎಂದು ಕರೆಯಲ್ಪಡುವ ಸ್ಥಳೀಯ ಸಮುದಾಯವೊಂದನ್ನು ಕೆನರಿ ದ್ವೀಪಗಳು ಹೊಂದಿದ್ದವು ಮತ್ತು ಈ ಸಮುದಾಯದ ಹುಟ್ಟು, ಇತಿಹಾಸಕಾರರು ಮತ್ತು ಭಾಷಾತಜ್ಞರ ವಲಯದಲ್ಲಿ ಈಗಲೂ ಚರ್ಚಾವಿಷಯವಾಗಿದೆ.[೧೫]

ಸಮಕಾಲೀನ ಹರಡಿಕೆ ಮತ್ತು ಸಮೀಕ್ಷೆ

[ಬದಲಾಯಿಸಿ]

ಭೂಮಂಡಲದ ಉದ್ದಗಲಕ್ಕೂ ಇರುವ ಪ್ರದೇಶಗಳಲ್ಲಿ ಸ್ಥಳೀಯ ಸಮುದಾಯಗಳು ಹರಡಿಕೊಂಡಿವೆ. ಒಂದು ನಿರ್ದಿಷ್ಟ ಪ್ರದೇಶದ ವ್ಯಾಪ್ತಿಯೊಳಗೆ ಸ್ಥಳೀಯ ಗುಂಪುಗಳ ಸಂಖ್ಯೆಗಳು, ಸ್ಥಿತಿಗತಿ ಮತ್ತು ಅನುಭವ ಇವುಗಳು ವ್ಯಾಪಕವಾಗಿ ಬದಲಾಗಬಹುದು. ಕೆಲವೊಮ್ಮೆ ವಿವಾದಾಸ್ಪದವಾಗಿ ಕಂಡುಬರುವ ಸದಸ್ಯತ್ವ ಮತ್ತು ಗುರುತಿಸುವಿಕೆಯಿಂದಾಗಿ ಒಂದು ವ್ಯಾಪಕ ಸಮೀಕ್ಷೆಯು ಮತ್ತಷ್ಟು ಜಟಿಲಗೊಳ್ಳುತ್ತದೆ.

ಅರಬ್‌ ಬುಡಕಟ್ಟಿನ ಸಮಾಜಗಳು

[ಬದಲಾಯಿಸಿ]

ಅರೇಬಿಯಾದ ಪರ್ಯಾಯ ದ್ವೀಪ ಮತ್ತು ಪಕ್ಕದ ಪ್ರದೇಶಗಳು ನಾನಾಬಗೆಯ ಸ್ಥಳೀಯ ಅರಬ್‌ ಬುಡಕಟ್ಟುಗಳಿಗೆ ನೆಲೆಯಾಗಿವೆ. ಮೆಡಿಟರೇನಿಯನ್‌ನ ದೂರ ಪ್ರಾಚ್ಯದ ಸಮುದ್ರತೀರ ಹಾಗೂ ಅರೇಬಿಯಾದ ಪರ್ಯಾಯ ದ್ವೀಪಗಳೆರಡೂ ಸಹ ಒಂದು ಬೃಹತ್‌ ಸಂಖ್ಯೆಯಲ್ಲಿರುವ ಬೆಡೌಯಿನ್‌ ಬುಡಕಟ್ಟುಗಳಿಗೆ ನೆಲೆಯಾಗಿದ್ದು, ಈ ಬುಡಕಟ್ಟುಗಳು ಇತಿಹಾಸ ಪೂರ್ವದ ಕಾಲದಿಂದಲೂ ಈ ಪ್ರದೇಶಗಳಲ್ಲಿ ನೆಲೆಸಿದ್ದವು ಎಂಬುದು ಗಮನಾರ್ಹ ಅಂಶವಾಗಿದೆ. ಅನೇಕ ಅರಬ್‌ ಬುಡಕಟ್ಟುಗಳು ಆಫ್ರಿಕಾ, ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾ ಭಾಗಗಳಿಗೆ ವರ್ಗಾವಣೆಗೊಂಡಿದ್ದು, ಇಂಥ ನಿದರ್ಶನಗಳಲ್ಲಿ ಅವನ್ನು ಸ್ಥಳೀಯ ಬುಡಕಟ್ಟುಗಳು ಎಂದು ಪರಿಗಣಿಸಲಾಗುವುದಿಲ್ಲ. ಓಮನ್‌ ಮತ್ತು ಯೆಮನ್‌ಗಳಲ್ಲಿ ಹಳೆಯ ದಕ್ಷಿಣ ಅರೇಬಿಯಾದ ಸ್ಥಳೀಯ ಜನರ ಅವಶೇಷಗಳು ಕಂಡುಬಂದಿವೆ.

ಉತ್ತರ ಭಾಗದ ಅರಬ್‌ ಬುಡಕಟ್ಟಿನ ಓರ್ವ ಯೋಧನು (ಸುಮಾರು 1914), ಟ್ರಾನ್ಸ್‌ಜೋರ್ಡಾನ್‌ನ್ನು ಒಟ್ಟೋಮನ್‌ ಆಕ್ರಮಿಸುವ ಸಂದರ್ಭದಲ್ಲಿ ಕುದುರೆಯ ಬೆನ್ನಮೇಲೆ ಬೇಟೆಯಾಡುವ ಒಂದು ಬೃಹತ್ತಾದ ಬೆಡುವೈನ್‌ ಅಝ್‌-ಝಗಾಯಾಹ್‌ ಸಾಧನವನ್ನು ಸಾಗಿಸುತ್ತಿರುವುದು.

ಅರಬರ ಪೈಕಿ ಹೇಳುವುದಾದರೆ, ಅದ್ನಾನಿ ಅರಬರು (ಅರೇಬಿಕ್‌: العرب المستعربة) - ( ಅರಬೀಕರಿಸಿದ ಅರಬರು) ಮತ್ತು ಕತಾನಿ ಅರಬರ (العرب ಅರೇಬಿಕ್‌:العاربة) ನಡುವೆ ಒಂದು ವೈಲಕ್ಷಣ್ಯವನ್ನು ಅನೇಕ ವೇಳೆ ಕಲ್ಪಿಸಲಾಗುತ್ತದೆ. ಜನಾಂಗೀಯ ಆಧಾರದ ಮೇಲೆ ಭೇದಭಾವ ಮಾಡುವುದನ್ನು ಇಸ್ಲಾಮ್‌ ಧರ್ಮವು ನಿಷೇಧಿಸಿದ್ದರಿಂದ ಮತ್ತು ಓರ್ವ ಗುಲಾಮ ಹಾಗೂ ಓರ್ವ ಸ್ವತಂತ್ರ ವ್ಯಕ್ತಿಯ ಸಂತತಿಯು ಕುಟುಂಬದ ಹೆಸರನ್ನು ಪಾರಂಪರ್ಯವಾಗಿ ಪಡೆಯುವ, ಓರ್ವ ಉತ್ತರಾಧಿಕಾರಿಯಾಗುವ ಮತ್ತು ಸ್ವತಂತ್ರನಾಗುವ ಅಧಿಕಾರವನ್ನು ಪಡೆಯುವುದರ ಕುರಿತು ತೀರ್ಪು ನೀಡಿದ್ದರಿಂದ, ಅರಬ್‌ ಸಮುದಾಯದ ಮೇಲೆ ಒಂದು ಪ್ರಬಲವಾದ ವಿದೇಶಿ ಪ್ರಭಾವವು ಕಂಡುಬಂದಿದೆ ಎನ್ನಬಹುದು. ಐತಿಹಾಸಿಕವಾದ ಅಂತರ-ಸಾಂಸ್ಕೃತಿಕ ಪರಸ್ಪರ ಬೆರೆಯುವಿಕೆಯ ಕಾರಣದಿಂದಾಗಿ ಈಗ ಹೊರಹೊಮ್ಮಿರುವ ಕೆಲವೊಂದು ಬುಡಕಟ್ಟುಗಳು ಬಹುತೇಕವಾಗಿ ಕರಿಯರು ಎಂಬುದಾಗಿ ಸಮಗ್ರವಾಗಿ ಉಲ್ಲೇಖಿಸಲ್ಪಡುತ್ತವೆ ಮತ್ತು ಮೆಡಿಟರೇನಿಯನ್‌ನ ದೂರ ಪ್ರಾಚ್ಯದ ಸಮುದ್ರತೀರದಲ್ಲಿರುವ, ಅದೇ ರೀತಿಯಲ್ಲಿ ಕಾಣುವ ಕೆಲವೊಂದು ಬುಡಕಟ್ಟುಗಳು ಬಿಳಿಯ ಜನರು ಎಂಬುದಾಗಿ ಉಲ್ಲೇಖಿಸಲ್ಪಡುತ್ತವೆ. ಕೊಲ್ಲಿ ದೇಶಗಳಲ್ಲಿ, ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ, ಭಾರತದ, ಬಾಂಗ್ಲಾದೇಶದ ವಲಸೆಗಾರರು, ಪರ್ಷಿಯನ್ನರು ಮತ್ತು ಫಿಲಿಪಿನೋ ವಲಸೆಗಾರರು ಬೃಹತ್‌ ಸಂಖ್ಯೆಯಲ್ಲಿ ಕಂಡುಬಂದಿದ್ದು, ವಾಸ್ತವವಾಗಿ ಹೇಳಬೇಕೆಂದರೆ ಇವರ ಸಂಖ್ಯೆಯು ಅನೇಕ ಸಣ್ಣಗಾತ್ರದ ಸಂಸ್ಥಾನಗಳಲ್ಲಿನ ಸ್ಥಳೀಯ ಸಮುದಾಯಗಳನ್ನು ಮೀರಿಸುವಂತಿದೆ. ಇವರ ಪೈಕಿ ಅನೇಕರು ದೇಶೀಕರಣದ ಮೂಲಕ ಪೌರತ್ವವನ್ನು ಗಳಿಸಿದ್ದಾರೆ. ಹೋಲಿಕೆಯ ದೃಷ್ಟಿಯಿಂದ ತುಲನಾತ್ಮಕವಾಗಿ ಸಣ್ಣ ಸಂಖ್ಯೆಯಲ್ಲಿರುವ ಸ್ಥಳೀಯ ಸಮುದಾಯಗಳ ಮೇಲೆ ಈ ವಿದೇಶಿ ಗುಂಪುಗಳು ಭವಿಷ್ಯದಲ್ಲಿ ಒಂದು ಪ್ರಬಲವಾದ ಒತ್ತಡವನ್ನು ಹೇರಲಿವೆ ಎಂಬುದಾಗಿ ಭಾವಿಸಲಾಗಿದೆ. ಒಂದು ಸಾರ್ವತ್ರಿಕ ವಾಡಿಕೆಯಂತೆ, ಕೆಲವೊಂದು ಸ್ಥಳೀಕ ಅಮೆರಿಕನ್‌ ಬುಡಕಟ್ಟಿನ ಸರ್ಕಾರಗಳು ಮಾಡುವ ರೀತಿಯಲ್ಲಿ ಈ ಭೌಗೋಳಿಕ ನೆರೆಹೊರೆಯಲ್ಲಿರುವ ಬುಡಕಟ್ಟುಗಳು ರಕ್ತದ ಪ್ರಮಾಣವನ್ನು ಆಧರಿಸಿದ ಬುಡಕಟ್ಟಿನ ದಾಖಲಾತಿಯನ್ನು ಆಚರಿಸುವುದಿಲ್ಲ. ಕೇವಲ ಬೆಡೌಯಿನ್‌ ಅರಬರು ಮಾತ್ರವೇ ಸ್ಥಳೀಯ ಬುಡಕಟ್ಟುಗಳ ಸದಸ್ಯರಾಗಿದ್ದಾರೆ ಎಂದು ಭಾವಿಸುವುದು ಒಂದು ತಪ್ಪೆನಿಸಿಕೊಳ್ಳುತ್ತದೆ. ಆದಾಗ್ಯೂ, ಅರೇಬಿಯಾದ ಅನೇಕ ಪ್ರಾಚೀನ ಬುಡಕಟ್ಟುಗಳ ಪೈಕಿ ಒಂದರಲ್ಲಿ ತಮ್ಮ ಪರಂಪರೆಯ ಮೂಲವನ್ನು ಹೊಂದಿರುವ ಸ್ಥಳೀಯ ಬುಡಕಟ್ಟುಗಳು ಇಲ್ಲಿವೆ ಮತ್ತು ಒಂದಲ್ಲಾ ಒಂದು ಕಾರಣಕ್ಕೆ, ಚಟುವಟಿಕೆಯಿಲ್ಲದ ಜೀವನಶೈಲಿ ಅಥವಾ ಇತರ ಅಂಶಗಳಿಂದಾಗಿ ತಮ್ಮ ಬುಡಕಟ್ಟಿನ ಹೆಸರುಗಳನ್ನು ಅಥವಾ ಮಾನ್ಯತೆಗಳನ್ನು ಕಳೆದುಕೊಂಡಿರುವ ಸ್ಥಳೀಯ ಗುಂಪುಗಳು ಕೂಡಾ ಇಲ್ಲಿವೆ.ಇಂಥ ಸ್ಥಳೀಯ ಗುಂಪುಗಳನ್ನು ಸಂಕುಚಿತ ಅರ್ಥದಲ್ಲಿ ಸ್ಥಳೀಯರು ಎಂಬುದಾಗಿ ಪರಿಗಣಿಸಬೇಕೇ ಎಂಬುದು ಚರ್ಚಾವಿಷಯವಾಗಿ ಉಳಿದುಕೊಳ್ಳುತ್ತದೆ. ಇವುಗಳನ್ನು ಕೆಲವೊಮ್ಮೆ 220 ವೋಲ್ಟುಗಳು ಮತ್ತು 110 ವೋಲ್ಟುಗಳು ಎಂಬುದಾಗಿ ಕ್ರಮವಾಗಿ ಉಲ್ಲೇಖಿಸಲಾಗುತ್ತದೆ.[೧೬] [unreliable source]

ಆಫ್ರಿಕಾ

[ಬದಲಾಯಿಸಿ]

ವಸಾಹತಿನ-ನಂತರದ ಅವಧಿಯಲ್ಲಿ, ಆಫ್ರಿಕಾದ ಭೂಖಂಡದ ವ್ಯಾಪ್ತಿಯೊಳಗಿನ ನಿರ್ದಿಷ್ಟ ಸ್ಥಳೀಯ ಜನರ ಪರಿಕಲ್ಪನೆಯು ವ್ಯಾಪಕವಾದ ಮಾನ್ಯತೆಯನ್ನು ಗಳಿಸಿದೆಯಾದರೂ, ಅದರ ಜೊತೆಗೆ ವಿವಾದವೂ ಹೆಗಲೇರಿದೆ. ಆಫ್ರಿಕಾದ ಅತ್ಯಂತ ಆಧುನಿಕ, ಸ್ವತಂತ್ರ ಸಂಸ್ಥಾನಗಳನ್ನು ಒಳಗೊಂಡಿರುವ ಅತೀವವಾಗಿ ವೈವಿಧ್ಯಮಯವಾಗಿರುವ ಮತ್ತು ನಾನಾಬಗೆಯ ಜನಾಂಗೀಯ ಗುಂಪುಗಳು ತಮ್ಮೊಳಗೆ ನಾನಾಬಗೆಯ ಜನರನ್ನು ಸೇರಿಸಿಕೊಂಡಿವೆ; ಈ ಜನರ ಸನ್ನಿವೇಶ, ಸಂಸ್ಕೃತಿಗಳು ಮತ್ತು ಕುರಿ ಸಾಕುವವರ ಅಥವಾ ಬೇಟೆಗಾರ-ಸಂಗ್ರಾಹಕರ ಜೀವನಶೈಲಿಗಳು ಸಾಮಾನ್ಯವಾಗಿ ಅಪ್ರಧಾನವಾಗಿಸಲ್ಪಟ್ಟಿವೆ ಮತ್ತು ರಾಷ್ಟ್ರದ ಪ್ರಬಲ ರಾಜಕೀಯ ಮತ್ತು ಆರ್ಥಿಕ ರಚನೆಗಳಿಂದ ಪ್ರತ್ಯೇಕಿಸಲ್ಪಟ್ಟಿವೆ. 20ನೇ ಶತಮಾನದ ಅಂತ್ಯಭಾಗದಿಂದಲೂ ಈ ಜನರು ವಿಸ್ಪಷ್ಟವಾದ ಸ್ಥಳೀಯ ಜನರು ರೀತಿಯಲ್ಲಿಯೇ ತಮ್ಮ ಹಕ್ಕುಗಳ ಮಾನ್ಯತೆಯನ್ನು ಹೆಚ್ಚಿನ ರೀತಿಯಲ್ಲಿ ಬಯಸುತ್ತಾ ಬಂದಿದ್ದು, ಇದು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂದರ್ಭಗಳೆರಡರಲ್ಲೂ ಕಂಡುಬಂದಿದೆ.

ನಮೀಬಿಯಾಕ್ಕೆ ಸೇರಿದ ಓರ್ವ ಸಾನ್‌ ಮನುಷ್ಯ.

ಆಫ್ರಿಕಾದ ಜನರು ಆ ಭೂಖಂಡದಿಂದ ಹಾಗೂ ಮಧ್ಯ ಏಷ್ಯಾ ಮತ್ತು ಆಗ್ನೇಯ ಏಷ್ಯಾದಿಂದ ಹುಟ್ಟಿಕೊಂಡವರು ಎಂಬ ಅರ್ಥದಲ್ಲಿ ಅವರ ಪೈಕಿಯ ಬೃಹತ್‌ ಭಾಗವನ್ನು ಸ್ಥಳೀಯರು ಎಂಬುದಾಗಿ ಪರಿಗಣಿಸಬಹುದಾದರೂ, ಸದರಿ ಶಬ್ದದ ಆಧುನಿಕ ಅನ್ವಯದ ಅನುಸಾರ ಅವರನ್ನು "ಸ್ಥಳೀಯ ಜನರು" ಎಂಬುದಾಗಿ ಆಚರಣೆಯಲ್ಲಿ ಗುರುತಿಸುವುದು ಹೆಚ್ಚು ಪರಿಮಿತಿಗೊಳಿಸುವ ರೀತಿಯಲ್ಲಿ ಅಥವಾ ನಿರ್ಬಂಧಕವಾಗಿ ಕಂಡುಬರುತ್ತದೆ, ಮತ್ತು ಈ ಶಬ್ದಗಳ ಅಡಿಯಲ್ಲಿ ಗುರುತಿಸಲ್ಪಡುವುದನ್ನು ಆಫ್ರಿಕಾದ ಪ್ರತಿಯೊಂದು ಜನಾಂಗೀಯ ಗುಂಪು ಸಮರ್ಥಿಸುವುದಿಲ್ಲ. ಒಂದು ವೈವಿಧ್ಯಮಯವಾದ ಐತಿಹಾಸಿಕ ಮತ್ತು ಪರಿಸರೀಯ ಸಂದರ್ಭಗಳಿಂದಾಗಿ ಪ್ರಬಲವಾದ ಸಂಸ್ಥಾನ ವ್ಯವಸ್ಥೆಗಳ ಆಚೆಗೆ ಇರಿಸಲ್ಪಟ್ಟ ಗುಂಪುಗಳು ಮತ್ತು ಸಮುದಾಯಗಳು ಈ ಮಾನ್ಯತೆಯನ್ನು ಸಮರ್ಥಿಸುತ್ತವೆ; ಅಷ್ಟೇ ಅಲ್ಲ, ಸರ್ಕಾರಗಳು, ಕಂಪನಿಗಳು ಮತ್ತು ಸುತ್ತುಮುತ್ತಲ ಪ್ರಬಲ ಸಮಾಜಗಳಿಂದ ಪ್ರಸಾರಮಾಡಲ್ಪಟ್ಟ ಉದ್ದೇಶಗಳು ಮತ್ತು ಕಾರ್ಯನೀತಿಗಳೊಂದಿಗೆ ಅನೇಕ ವೇಳೆ ಘರ್ಷಣೆಗೆ ಇಳಿಯುವುದಕ್ಕೆ ಕಾರಣವಾದ ಸಾಂಪ್ರದಾಯಿಕ ಆಚರಣೆಗಳು ಮತ್ತು ಭೂಮಿಯ ಹಕ್ಕುಗಳನ್ನು ಹೊಂದಿರುವ ಗುಂಪುಗಳು ಮತ್ತು ಸಮುದಾಯಗಳು ಈ ಮಾನ್ಯತೆಯನ್ನು ಸಮರ್ಥಿಸುತ್ತವೆ.

ಟಾಜೆಲ್‌ಮಸ್ಟ್‌ ಧರಿಸಿರುವ ಓರ್ವ ಟೌರೆಗ್‌.

ಆಫ್ರಿಕಾದೊಳಗಿನ ಮಾನವ ವಲಸೆಯ ವ್ಯಾಪಕವಾದ ಮತ್ತು ಜಟಿಲಗೊಂಡ ಇತಿಹಾಸದ ನಿರ್ದಿಷ್ಟ ಸಂದರ್ಭದಲ್ಲಿ "ಭೂಪ್ರದೇಶವೊಂದರಲ್ಲಿನ ಮೊದಲ ಜನರು" ಎನಿಸಿಕೊಳ್ಳುವುದು, ಸ್ಥಳೀಯ ಜನರು ಎಂಬ ಮಾನ್ಯತೆಯನ್ನು ಗಳಿಸುವುದಕ್ಕೆ ಸಂಬಂಧಿಸಿದಂತೆ ಒಂದು ಅವಶ್ಯಕವಾದ ಪೂರ್ವಭಾವಿ ಷರತ್ತು ಎನಿಸಿಕೊಳ್ಳುವುದಿಲ್ಲ. ಅದರ ಬದಲಿಗೆ, ಆಗಮನದ ಆದ್ಯತೆಗಿಂತ ಹೆಚ್ಚಾಗಿ ಗುಣಲಕ್ಷಣಗಳು ಮತ್ತು ಆಚರಣೆಗಳ ಒಂದು ವರ್ಗಕ್ಕೆ ಸ್ಥಳೀಯ ಗುರುತು ಹೆಚ್ಚಿನ ರೀತಿಯಲ್ಲಿ ಸಂಬಂಧಿಸುತ್ತದೆ. ಉದಾಹರಣೆಗೆ, ಸಹರಾ ಮತ್ತು ಸಹೇಲ್‌ ಪ್ರದೇಶಗಳ ಟೌರೆಗ್‌‌‌‌ನಂಥ ಅಲೆಮಾರಿ ವಂಶದ ಜನರ ಹಲವಾರು ಸಮುದಾಯಗಳು, ತುಲನಾತ್ಮಕವಾಗಿ ಇತ್ತೀಚಿಗಷ್ಟೇ ತಾವು ಬಂದಿಳಿದ ಪ್ರದೇಶಗಳಲ್ಲಿ ಈಗ ವಾಸಿಸುತ್ತಿವೆ; ಸ್ಥಳೀಯ ಸ್ಥಾನಮಾನಕ್ಕೆ (ಮಾನವ ಹಕ್ಕುಗಳು ಮತ್ತು ಸ್ಥಳೀಯ ಜನರ ಹಕ್ಕುಗಳ ಕುರಿತಾದ ಆಫ್ರಿಕಾದ ಆಯೋಗದಿಂದ ಶಿಫಾರಸುಮಾಡಲ್ಪಟ್ಟಿರುವಂಥದ್ದು) ಸಂಬಂಧಿಸಿದಂತೆ ಅವು ಹೊಮ್ಮಿಸುವ ಸಮರ್ಥನೆಯು , ಚಟುವಟಿಕೆಯಿಲ್ಲದ ಕೃಷಿಕ ಜನರ ಪ್ರಾಬಲ್ಯತೆ ಇರುವ ಸಂಸ್ಥಾನಗಳು ಮತ್ತು ಭೂಪ್ರದೇಶಗಳಲ್ಲಿನ ಅಲೆಮಾರಿ ವಂಶದ ಜನರಾಗಿ ಅವರ ಅಮುಖ್ಯೀಕರಣದ ಮೇಲೆ ಆಧರಿತವಾಗಿದೆ.

ಸಾಂಪ್ರದಾಯಿಕ ಬಿಲ್ಲು ಮತ್ತು ಬಾಣದೊಂದಿಗೆ ಬಾಟ್ವಾ ಪಿಗ್ಮಿ.

ಇಂಡಿಜಿನಸ್‌ ಪೀಪಲ್ಸ್‌ ಆಫ್‌ ಆಫ್ರಿಕಾ ಕೋ-ಆರ್ಡಿನೇಟಿಂಗ್‌ ಕಮಿಟಿ (IPACC) ಎಂಬ ಸಂಸ್ಥೆಯು ರಾಷ್ಟ್ರದಾಚೆಯ ಮುಖ್ಯ ಜಾಲ ಸಂಘಟನೆಗಳ ಪೈಕಿ ಒಂದೆನಿಸಿದ್ದು, ಸರ್ಕಾರಗಳೊಂದಿಗೆ ಮತ್ತು ವಿಶ್ವಸಂಸ್ಥೆಯಂಥ (UN) ಘಟಕಗಳೊಂದಿಗೆ ನಡೆಸುವ ಮಾತುಕತೆಗಳಿಗೆ ಸಂಬಂಧಿಸಿದಂತೆ ಆಫ್ರಿಕಾದ ಸ್ಥಳೀಯ ಜನರ ಒಂದು ಪ್ರತಿನಿಧಿ ಎಂದು ಗುರುತಿಸಲ್ಪಟ್ಟಿದೆ. ಆಫ್ರಿಕಾದಲ್ಲಿನ ಸ್ಥಳೀಯ ಜನರ ಸಮರ್ಥನೆಗಳು ಅಥವಾ ಹಕ್ಕುಗಳೊಂದಿಗೆ ಸಂಬಂಧಿಸಿದ ಹಲವಾರು ಪ್ರಮುಖ ಗುಣಲಕ್ಷಣಗಳನ್ನು IPACC ಗುರುತಿಸುತ್ತದೆ:

  • ವಸಾಹತು ನೀತಿಯಲ್ಲಿ ಬೇರುಬಿಟ್ಟಿರುವ ರಾಜಕೀಯ ಮತ್ತು ಆರ್ಥಿಕ ಅಮುಖ್ಯೀಕರಣ;
  • ಸಂಸ್ಥಾನ ವ್ಯವಸ್ಥೆಯಲ್ಲಿ ಅನೇಕ ವೇಳೆ ಕೃಷಿಕ ಜನರ ಪ್ರಾಬಲ್ಯದ ಮೇಲೆ ಆಧರಿತವಾಗಿರುವ ವಸ್ತುತಃ ಭೇದಭಾವ (ಉದಾಹರಣೆಗೆ, ಬೇಟೆಗಾರರು ಮತ್ತು ದನಗಾಹಿಗಳು ಅಥವಾ ಕುರಿಗಾಹಿಗಳಿಗೆ ಶಿಕ್ಷಣ ಮತ್ತು ಆರೋಗ್ಯ ಪಾಲನೆಯ ಕ್ಷೇತ್ರಕ್ಕಿರುವ ಪ್ರವೇಶ ಲಭ್ಯತೆಯ ಕೊರತೆ);
  • ಬೇಟೆಯಾಡುವ ಮತ್ತು ಹಿಂಡುಕಾಯುವ ಜನರನ್ನು ಮರುಭೂಮಿಗಳು ಮತ್ತು ಅರಣ್ಯಗಳಲ್ಲಿನ ಅವರ ತವರು ಪರಿಸರಗಳೊಂದಿಗೆ ಸಂಬಂಧಿಸುವ ಸಂಸ್ಕೃತಿ, ಗುರುತು, ಆರ್ಥಿಕತೆ ಮತ್ತು ಪ್ರಾದೇಶಿಕತೆಯ ನಿರ್ದಿಷ್ಟತೆಗಳು (ಉದಾಹರಣೆಗೆ, ಅಲೆಮಾರಿತನ, ಆಹಾರಕ್ರಮ, ಜ್ಞಾನ ವ್ಯವಸ್ಥೆಗಳು);
  • ಸಾನ್‌ ಮತ್ತು ಪಿಗ್ಮಿ ಜನರಂಥ ಕೆಲವೊಂದು ಸ್ಥಳೀಯ ಜನರು ಶಾರೀರಿಕವಾಗಿ ಪ್ರತ್ಯೇಕತೆಯನ್ನು ಅಥವಾ ವೈಲಕ್ಷಣ್ಯವನ್ನು ಕಾಯ್ದುಕೊಳ್ಳುತ್ತಾರೆ. ಇದು ಭೇದಭಾವದ ನಿರ್ದಿಷ್ಟ ಸ್ವರೂಪಗಳಿಗೆ ಅವರನ್ನು ಈಡಾಗಿಸುತ್ತದೆ.

ಇತರರನ್ನು ಬಿಟ್ಟು ಕೆಲವೊಂದು ಗುಂಪುಗಳನ್ನಷ್ಟೇ ಸ್ಥಳೀಯ ಜನರೆಂದು ಗುರುತಿಸುವಂತೆ ವ್ಯಕ್ತಪಡಿಸಲಾದ ಕಾಳಜಿಗಳು ಸ್ವತಃ ತಮ್ಮಲ್ಲೇ ಪಕ್ಷಪಾತದ ಸ್ವರೂಪವನ್ನು ಹೊಂದಿವೆ ಎಂಬುದಕ್ಕೆ ಸಂಬಂಧಿಸಿದಂತೆ, IPACCಯು ಹೀಗೆ ವ್ಯಾಖ್ಯಾನಿಸುತ್ತದೆ:

  • "...ಎಲ್ಲಾ ಆಫ್ರಿಕನ್ನರೂ ಸಮಾನ ಹಕ್ಕುಗಳು ಮತ್ತು ಗೌರವವನ್ನು ಅನುಭವಿಸಬೇಕು ಎಂಬುದನ್ನು ಇದು ಗುರುತಿಸುತ್ತದೆ. ಆಫ್ರಿಕಾದ ಎಲ್ಲ ಬಗೆಯ ವೈವಿಧ್ಯತೆಗೆ ಮಹತ್ವ ಕೊಡಬೇಕು. ಐತಿಹಾಸಿಕ ಮತ್ತು ಪರಿಸರೀಯ ಸಂದರ್ಭಗಳ ಕಾರಣದಿಂದಾಗಿ ನಿರ್ದಿಷ್ಟ ಸಮುದಾಯಗಳು ತಮ್ಮನ್ನು ಸಂಸ್ಥಾನ-ವ್ಯವಸ್ಥೆಯ ಆಚೆಗೆ ಕಂಡುಕೊಂಡಿವೆ ಮತ್ತು ಅವು ಆಳ್ವಿಕೆಯಲ್ಲಿ ಸಮರ್ಥವಾಗಿ ಪ್ರತಿನಿಧಿಸಲ್ಪಟ್ಟಿಲ್ಲ... ಇದರ ಹಿಂದೆ ಇತರ ಆಫ್ರಿಕನ್ನರಿಗೆ ಅವರ ಸ್ಥಾನಮಾನವನ್ನು ನಿರಾಕರಿಸುವ ಉದ್ದೇಶವಿಲ್ಲ; ಬೇಟೆಗಾರ-ಸಂಗ್ರಾಹಕರು ಹಾಗೂ ಹಿಂಡುಕಾಯುವ ಜನರು ತಮ್ಮ ಉಳಿವನ್ನು ಖಾತ್ರಿಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಸಮರ್ಥಿಸುವ ಮಾನ್ಯತೆಯು ಅವಶ್ಯಕವಾಗಿದೆ ಎಂಬುದಕ್ಕೆ ಮಹತ್ವ ಕೊಡುವುದು ಇದರ ಹಿಂದಿನ ಉದ್ದೇಶವಾಗಿದೆ."
ಕಾಲುಹೊಳೆಯನ್ನು ದಾಟುತ್ತಿರುವ ಒಂದು ಬರ್ಬೆರ್‌ ಕುಟುಂಬ - ಆಲ್ಜೀರಿಯಾದಲ್ಲಿ ಕಂಡುಬಂದ ದೃಶ್ಯ.ಬರ್ಬೆರ್‌ಗಳು ನೈಲ್‌ ಕಣಿವೆಯ ಪಶ್ಚಿಮಕ್ಕಿರುವ ಉತ್ತರ ಆಫ್ರಿಕಾದ ಸ್ಥಳೀಯ ಜನರಾಗಿದ್ದಾರೆ.

ಆಫ್ರಿಕಾದ ಸರ್ಕಾರಗಳ-ನಡುವಿನ ಮಟ್ಟವೊಂದರಲ್ಲಿ, ಸ್ಥಳೀಯ ಹಕ್ಕುಗಳು ಮತ್ತು ಕಾಳಜಿಗಳ ಪರಿಶೀಲನೆಯನ್ನು ಮಾನವ ಹಕ್ಕುಗಳ ಮತ್ತು ಸ್ಥಳೀಯ ಜನರ ಹಕ್ಕುಗಳ ಕುರಿತಾಗಿರುವ ಆಫ್ರಿಕಾದ ಆಯೋಗದ (ACHPR) (ಆಫ್ರಿಕನ್‌ ಕಮಿಷನ್‌ ಆನ್‌ ಹ್ಯೂಮನ್‌ ಅಂಡ್‌ ಪೀಪಲ್‌'ಸ್‌ ರೈಟ್ಸ್‌) ಅಡಿಯಲ್ಲಿ ಸ್ಥಾಪಿಸಲ್ಪಟ್ಟಿರುವ ಒಂದು ಉಪ-ಆಯೋಗವು ಮುಂದುವರಿಸಿಕೊಂಡು ಬಂದಿದೆ; ಮತ್ತು ಈ ಉಪ-ಆಯೋಗವನ್ನು ಆಫ್ರಿಕಾದ ಒಕ್ಕೂಟವು (AU) (ಆರ್ಗನೈಸೇಷನ್‌ ಆಫ್‌ ಆಫ್ರಿಕನ್‌ ಯುನಿಟಿ (OAU) ಎಂಬುದರ ತರುವಾಯದ ಘಟಕ) ಪ್ರಾಯೋಜಿಸಿದೆ. 2003ರ ಅಂತ್ಯಭಾಗದಲ್ಲಿ, ಸ್ಥಳೀಯ ಜನಸಂಖ್ಯೆಗಳು/ಸಮುದಾಯಗಳ ಕುರಿತಾದ ಆಫ್ರಿಕಾದ ಆಯೋಗದ ಕಾರ್ಯನಿರತ ಗುಂಪಿನ ವರದಿ ಯನ್ನು ಮತ್ತು ಅದರ ಶಿಫಾರಸುಗಳನ್ನು ACHPRನ 53 ಸಹಿದಾರ ಸಂಸ್ಥಾನಗಳು ಅಳವಡಿಸಿಕೊಂಡವು. ಈ ವರದಿಯ ಒಂದು ಭಾಗದಲ್ಲಿ (ಪುಟ 62) ಹೀಗೆ ಹೇಳುತ್ತದೆ: 

  • ...ಅಪ್ರಧಾನವಾಗಿಸಲ್ಪಟ್ಟ ಕೆಲವೊಂದು ಗುಂಪುಗಳು ಹೊಂದಿರುವ ನಿರ್ದಿಷ್ಟ ಸಂಸ್ಕೃತಿ, ಉತ್ಪಾದನೆಯ ವಿಧಾನ ಮತ್ತು ಸಂಸ್ಥಾನದೊಳಗಿನ ಅವುಗಳ ಅಪ್ರಧಾನವಾಗಿಸಲ್ಪಟ್ಟ ಸ್ಥಾನದ ಕಾರಣದಿಂದಾಗಿ ಸದರಿ ಗುಂಪುಗಳಿಗೆ ನಿರ್ದಿಷ್ಟ ಮಾರ್ಗಗಳಲ್ಲಿ ಭೇದ ಕಲ್ಪಿಸಲಾಗಿದೆ; ಇದು ಸಂಸ್ಥಾನದೊಳಗಿನ ಇತರ ಗುಂಪುಗಳ ಬಳಲಿಕೆಗೆ ಕಾರಣವಾಗದ ಭೇದಭಾವದ ಒಂದು ಸ್ವರೂಪವಾಗಿದೆ. ಅಪ್ರಧಾನವಾಗಿಸಲ್ಪಟ್ಟ ಈ ಗುಂಪುಗಳು ತಮ್ಮ ಹಕ್ಕುಗಳನ್ನು ಸಂರಕ್ಷಿಸಿಕೊಳ್ಳುವುದಕ್ಕಾಗಿ ಹೊರಹೊಮ್ಮಿಸುವ ಕರೆಯು, ಈ ನಿರ್ದಿಷ್ಟ ಸ್ವರೂಪದ ಭೇದಭಾವವನ್ನು ಉಪಶಮನಮಾಡುವುದಕ್ಕೆ ಅಥವಾ ಪರಿಹರಿಸುವುದಕ್ಕೆ ಸಂಬಂಧಿಸಿದ ಒಂದು ನ್ಯಾಯಸಮ್ಮತ ಕರೆಯಾಗಿದೆ.

ಈ ವರದಿಯನ್ನು ಅಳವಡಿಸಿಕೊಂಡಿದ್ದರಿಂದಾಗಿ, ಆಫ್ರಿಕಾದ ಸ್ಥಳೀಯ ಜನರ ಗುರುತು ಮತ್ತು ಹಕ್ಕುಗಳನ್ನು ಮುಂದುವರಿಸುವುದರ ಪರಿಕಲ್ಪನೆಗಳು ಮತ್ತು ಗುರಿಗಳಿಗೆ, ಕನಿಷ್ಟಪಕ್ಷ ಸೈದ್ಧಾಂತಿಕವಾಗಿಯಾದರೂ ಸಹಿದಾರರು ಸಮ್ಮತಿಸುವಂತಾಯಿತು. ಆದಾಗ್ಯೂ, ಈ ಶಿಫಾರಸುಗಳನ್ನು ಆಚರಣೆಗೆ ತರುವುದಕ್ಕಾಗಿ ಪ್ರತ್ಯೇಕ ಸಂಸ್ಥಾನಗಳು ಸಜ್ಜುಗೊಳ್ಳುತ್ತಿರುವುದರ ವ್ಯಾಪ್ತಿಯು ಅಗಾಧವಾಗಿ ಬದಲಾಗುತ್ತದೆ ಮತ್ತು ಭೂಪ್ರದೇಶದ ಹಕ್ಕುಗಳು, ಸ್ವಾಭಾವಿಕ ಸಂಪನ್ಮೂಲಗಳ ಬಳಕೆ, ಪರಿಸರ ಮತ್ತು ಸಂಸ್ಕೃತಿಯ ಸಂರಕ್ಷಣೆ, ರಾಜಕೀಯದ ಮಾನ್ಯತೆ ಹಾಗೂ ಭೇದಭಾವದಿಂದ ದೊರಕುವ ಸ್ವಾತಂತ್ರ್ಯ ಇವೇ ಮೊದಲಾದ ಕ್ಷೇತ್ರಗಳಲ್ಲಿನ ಸುಧಾರಣೆಗಳಿಗೆ ಸಂಬಂಧಿಸಿದಂತೆ ಮತ್ತೆ ಮತ್ತೆ ಆಲೋಚಿಸುವುದನ್ನು ಬಹುತೇಕ ಸ್ಥಳೀಯ ಗುಂಪುಗಳು ಮುಂದುವರಿಸುವಂತಾಗುತ್ತದೆ.

ಪೆರು ದೇಶದ ಸ್ಥಳೀಯ ಜನರು ಓದುವುದನ್ನು ಕಲಿಯುತ್ತಿರುವುದು.[೧೭]

ಅಮೆರಿಕಾ ಖಂಡಗಳು

[ಬದಲಾಯಿಸಿ]

ಐರೋಪ್ಯ ವಸಾಹತುಗಾರರು ಮತ್ತು ಮೊದಲ ನೆಲಸಿಗರ (ಅಂದರೆ, ಕೊಲಂಬಸ್‌-ಪೂರ್ವದ ವಲಸಿಗರ) ಆಗಮನಕ್ಕೆ ಮುಂಚಿತವಾಗಿಯೇ ಅಮೆರಿಕಾ ಖಂಡಗಳ ಪ್ರದೇಶದಲ್ಲಿ ವಾಸವಾಗಿದ್ದಂಥ ಗುಂಪುಗಳು ಮತ್ತು ಅವರ ಸಂತತಿಯವರಾಗಿ ಅಮೆರಿಕಾದ‌ ಭೂಖಂಡಗಳ ಸ್ಥಳೀಯ ಜನರು ವ್ಯಾಪಕವಾಗಿ ಗುರುತಿಸಲ್ಪಡುತ್ತಾರೆ. ಜೀವನದ ಸಾಂಪ್ರದಾಯಿಕ ಮಾರ್ಗಗಳನ್ನು ಕಾಯ್ದುಕೊಂಡು ಹೋಗುವ ಅಥವಾ ಕಾಯ್ದುಕೊಂಡು ಹೋಗಲು ಬಯಸುವ ಸ್ಥಳೀಯ ಜನರು, ಉನ್ನತ ಆರ್ಕ್ಟಿಕ್‌ ಪ್ರದೇಶದ ಉತ್ತರ ಭಾಗದಿಂದ ಟಿಯೆರಾ ಡೆಲ್‌ ಫ್ಯೂಗೊದ ದಕ್ಷಿಣ ಭಾಗದ ತುತ್ತತುದಿಗಳವರೆಗೆ ಕಂಡುಬರುತ್ತಾರೆ.

ಓರ್ವ ಚಾಕ್ಟಾ ಚೆಲುವೆ (1850)

ಸ್ಥಳೀಯ ಸಮುದಾಯಗಳ ಮೇಲಿನ ಅಮೆರಿಕಾ ಖಂಡಗಳ ಐರೋಪ್ಯ ವಸಾಹತುಗಾರಿಕೆಯ ಪ್ರಭಾವವು ಸಾಧಾರಣವಾಗಿ ಸಾಕಷ್ಟು ತೀವ್ರವಾಗಿದ್ದು, ಗಮನಾರ್ಹವಾಗಿರುವ ಜನಸಂಖ್ಯಾ ಕುಸಿತದ ವ್ಯಾಪ್ತಿಗಳನ್ನು ಅಧಿಕಾರಿ ವರ್ಗದವರು ಅಂದಾಜಿಸುತ್ತಿದ್ದಾರೆ; ನಾನಾಬಗೆಯ ಜನಹತ್ಯಾ ಪ್ರಚಾರಾಂದೋಲನಗಳು, ಸಾಂಕ್ರಾಮಿಕ ಕಾಯಿಲೆಗಳು (ಸಿಡುಬು, ದಡಾರ, ಇತ್ಯಾದಿ), ಸ್ಥಳಾಂತರಣ, ಘರ್ಷಣೆ, ಕಡ್ಡಾಯ ವಸತಿ ಶಾಲೆಗಳು, ಕಗ್ಗೊಲೆಗಳು ಮತ್ತು ಶೋಷಣೆಗಳ ವಿಧ್ವಂಸನ ಪರಿಣಾಮಗಳು ಸದರಿ ಜನಸಂಖ್ಯಾ ಕುಸಿತಕ್ಕೆ ಕಾರಣವಾಗಿವೆ. ಈ ಪ್ರಭಾವದ ವ್ಯಾಪ್ತಿಯು ಸಾಕಷ್ಟು ಮುಂದುವರಿಯುತ್ತಿರುವ ಚರ್ಚೆಯ ವಿಷಯವಾಗಿದೆ. ಅದಾದ ನಂತರದ ಕೆಲ ಅವಧಿಯಲ್ಲಿ ಹಲವಾರು ಜನರು ನಿರ್ನಾಮವಾದರು, ಅಥವಾ ಹೆಚ್ಚೂಕಮ್ಮಿ ಆ ಸ್ಥಿತಿಯನ್ನು ತಲುಪಿದರು.

ಉತ್ತರ ಮತ್ತು ದಕ್ಷಿಣ ಅಮೆರಿಕಾದಲ್ಲಿರುವ ಎಲ್ಲಾ ರಾಷ್ಟ್ರಗಳು ತಮ್ಮ ಗಡಿಗಳ ವ್ಯಾಪ್ತಿಯೊಳಗೆ ಸ್ಥಳೀಯ ಜನರ ಸಮುದಾಯಗಳನ್ನು ಹೊಂದಿವೆ. ಕೆಲವೊಂದು ದೇಶಗಳಲ್ಲಿ (ಅದರಲ್ಲೂ ನಿರ್ದಿಷ್ಟವಾಗಿ ಲ್ಯಾಟಿನ್‌ ಅಮೆರಿಕಾದ‌ ದೇಶಗಳಲ್ಲಿ), ಸ್ಥಳೀಯ ಜನರು ಒಟ್ಟಾರೆ ರಾಷ್ಟ್ರೀಯ ಜನಸಂಖ್ಯೆಯ ಒಂದು ಗಣನೀಯ ಗಾತ್ರದ ಘಟಕವಾಗಿ ಹೊರಹೊಮ್ಮುತ್ತಾರೆ— ಬೊಲಿವಿಯಾದಲ್ಲಿ ಅವರು ಒಟ್ಟು ಜನತೆಯ ಒಂದು ಅಂದಾಜಿಸಲ್ಪಟ್ಟ 56%-70%ನಷ್ಟು ಭಾಗವನ್ನು ಪ್ರತಿನಿಧಿಸಿದರೆ, ಗ್ವಾಟೆಮಾಲಾದಲ್ಲಿ ಜನಸಂಖ್ಯೆ ಯ ಕನಿಷ್ಟಪಕ್ಷ ಅರ್ಧದಷ್ಟು ಭಾಗವನ್ನು ಹಾಗೂ ಪೆರುವಿನ ಆಂಡೀಸ್‌ ಪರ್ವತದ ಮತ್ತು ಅಮೆಜೋನಿಯಾದ ಜನಾಂಗಗಳನ್ನು ಅವರು ಪ್ರತಿನಿಧಿಸುತ್ತಾರೆ. ಇಂಗ್ಲಿಷ್‌ನಲ್ಲಿ, ಸ್ಥಳೀಯ ಜನರು ಹಲವಾರು ವಿಭಿನ್ನ ಶಬ್ದಗಳಿಂದ ಒಟ್ಟಾಗಿ ಉಲ್ಲೇಖಿಸಲ್ಪಡುತ್ತಾರೆ. ಈ ಶಬ್ದಗಳು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತವೆ ಹಾಗೂ ಸ್ಥಳೀಕ ಅಮೆರಿಕನ್ನರು, ಅಮೆರಿಂಡಿಯನ್ನರು, ಇಂಡಿಯನ್ನರು ಈ ಬಗೆಯ ಜನಾಂಗೀಯ-ಸಮಾನಾರ್ಥಕ ಶಬ್ದಗಳನ್ನು ಅವು ಒಳಗೊಂಡಿರುತ್ತವೆ. ಸ್ಪ್ಯಾನಿಷ್‌ ಅಥವಾ ಪೋರ್ಚುಗೀಸ್‌ ಭಾಷೆಯನ್ನು ಮಾತನಾಡುವ ದೇಶಗಳಲ್ಲಿ ಪ್ಯೂಬ್ಲೋಸ್‌ ಇಂಡಿಗೆನಾಸ್‌ , ಪೊವೋಸ್‌ , ನೇಟಿವೋಸ್‌ , ಇಂಡಿಗೆನಾಸ್‌ ರೀತಿಯ ಶಬ್ದಗಳ ಬಳಕೆಯನ್ನು ಕಾಣಬಹುದು. ಪೆರುವಿನಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಯುರಾರಿನಾ[೧೮] ಮತ್ತು ಮ್ಯಾಟ್‌ಸೆಸ್‌‌ನಂಥ ಅಮೆಜೋನಿಯಾದ ಸಮಾಜಗಳ ನಡುವೆ ಕಮ್ಯುನಿಡೇಡ್ಸ್‌ ನೇಟಿವಸ್‌ ಎಂಬ ಶಬ್ದದ ಬಳಕೆಯನ್ನು ಕಾಣಬಹುದು.

ಮೊದಲ ಜನಾಂಗಗಳು,[೧೯] ಇನ್ಯೂಯಿಟ್‌ ಎಸ್ಕಿಮೊಗಳು[೨೦] ಮತ್ತು ಮಿಶ್ರ ಜನಾಂಗದ ವ್ಯಕ್ತಿಗಳನ್ನು ಕೆನಡಾದಲ್ಲಿನ ಮೂಲನಿವಾಸಿ ಜನರು ಒಳಗೊಂಡಿದ್ದಾರೆ.[೨೧] "ಇಂಡಿಯನ್‌" ಮತ್ತು "ಎಸ್ಕಿಮೊ" ಎಂಬ ವಿವರಕಗಳು ಕೆನಡಾದಲ್ಲಿ ಬಳಕೆ ತಪ್ಪಿದ ಸ್ಥಿತಿಗೆ ತಲುಪಿವೆ.[೨೨][೨೩] ಪ್ರಸಕ್ತವಾಗಿ ಅಲ್ಲಿ 600ಕ್ಕೂ ಹೆಚ್ಚಿನ ಗುರುತಿಸಲ್ಪಟ್ಟ ಮೊದಲ ಜನಾಂಗಗಳ ಸರ್ಕಾರಗಳು ಅಥವಾ ಪಟ್ಟಿಗಳು ಅಸ್ತಿತ್ವದಲ್ಲಿದ್ದು, ಕೆನಡಾದ ಉದ್ದಗಲಕ್ಕೂ ಹಬ್ಬಿಕೊಂಡಿರುವ 1,172,790 2006 ಜನರನ್ನು ಅವು ಒಳಗೊಂಡಿವೆ ಹಾಗೂ ಈ ಜನರು ಮೂಲನಿವಾಸಿ ಸಂಸ್ಕೃತಿಗಳು, ಭಾಷೆಗಳು, ಕಲೆ, ಮತ್ತು ಸಂಗೀತದಂಥ ಭಿನ್ನತಾ ಸೂಚಕಗಳನ್ನು ಹೊಂದಿದ್ದಾರೆ.[೨೪][೨೫][೨೬] ರಾಷ್ಟ್ರೀಯ ಮೂಲನಿವಾಸಿ ದಿನವು ಕೆನಡಾದ ಇತಿಹಾಸಕ್ಕೆ ಮೂಲನಿವಾಸಿಗಳು ನೀಡಿರುವ ಸಂಸ್ಕೃತಿಗಳು ಮತ್ತು ಕೊಡುಗೆಗಳನ್ನು ಗುರುತಿಸುತ್ತದೆ.

ಗ್ರೀನ್‌ಲ್ಯಾಂಡ್‌ನಲ್ಲಿನ ಅನೇಕ ಇನುಯಿಟ್‌ ಎಸ್ಕಿಮೊಗಳು ಈಗ ಆಧುನಿಕವಾದ ಸಾರ್ವಜನಿಕ ವಸತಿಯಲ್ಲಿ ವಾಸಿಸುತ್ತಾರೆ

1999ರಲ್ಲಿ ನ್ಯುನಾವಿಕ್‌ (ಉತ್ತರ ಭಾಗದ ಕ್ವೆಬೆಕ್‌ನಲ್ಲಿ), ನ್ಯೂನಾಟ್ಸಿಯಾವಟ್‌ (ಉತ್ತರ ಭಾಗದ ಲ್ಯಾಬ್ರಾಡರ್‌ನಲ್ಲಿ‌) ಮತ್ತು ನ್ಯೂನಾವಟ್‌ ಭೂಪ್ರದೇಶಗಳು ಸೃಷ್ಟಿಯಾಗುವುದರೊಂದಿಗೆ, ಇನ್ಯೂಯಿಟ್‌ ಎಸ್ಕಿಮೊಗಳು ಒಂದು ಮಟ್ಟದ ಆಡಳಿತಾತ್ಮಕ ಸ್ವಾಯತ್ತತೆಯನ್ನು ಸಾಧಿಸಿದ್ದಾರೆ; ನ್ಯೂನಾವಟ್ ಭೂಪ್ರದೇಶವು 1999ರವರೆಗೂ ವಾಯವ್ಯ ಭೂಪ್ರದೇಶಗಳ ಒಂದು ಭಾಗವಾಗಿತ್ತು. ಸ್ವಯಮಾಡಳಿತ ನಡೆಸುವ ಡೆನ್ಮಾರ್ಕಿನ ಗ್ರೀನ್‌ಲ್ಯಾಂಡ್‌‌ ಭೂಪ್ರದೇಶವು ಸ್ಥಳೀಯ ಇನ್ಯೂಯಿಟ್‌ ಎಸ್ಕಿಮೊಗಳ ಒಂದು ಅಧಿಕಾಂಶದ ಜನಸಂಖ್ಯೆಗೆ (ಸುಮಾರು 85%) ನೆಲೆಯಾಗಿದೆ.

ಅಮೆಜಾನ್‌ ಮಳೆಕಾಡಿನ ಯಾನೋಮಾಮಿ ಹಳ್ಳಿ.

ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ, ಸ್ಥಳೀಕ ಅಮೆರಿಕನ್ನರು, ಇನ್ಯೂಯಿಟ್‌ ಎಸ್ಕಿಮೊಗಳು ಮತ್ತು ಇತರ ಸ್ಥಳೀಯ ಅಂಕಿತಗಳ ಸಂಯೋಜಿತ ಜನಸಂಖ್ಯೆಯು 2,786,652ರಷ್ಟನ್ನು ಮುಟ್ಟಿತು (2003ರ US ಜನಗಣತಿ ಅಂಕಿ-ಅಂಶಗಳ ಸುಮಾರು 1.5%ನಷ್ಟು ಭಾಗವನ್ನು ಇದು ಪ್ರತಿನಿಧಿಸಿತು). ಒಕ್ಕೂಟದ ಮಟ್ಟದಲ್ಲಿ ಸುಮಾರು 563 ಅನುಸೂಚಿತ ಬುಡಕಟ್ಟುಗಳು ಗುರುತಿಸಲ್ಪಟ್ಟಿವೆ, ಮತ್ತು ಸಂಸ್ಥಾನದ ಮಟ್ಟದಲ್ಲಿ ಹಲವಾರು ಇತರ ಸಮುದಾಯಗಳು ಗುರುತಿಸಲ್ಪಟ್ಟಿವೆ.

ಮೆಕ್ಸಿಕೊದಲ್ಲಿ ಸರಿಸುಮಾರಾಗಿ 6,011,202ನಷ್ಟು (2005ರ ಮೆಕ್ಸಿಕನ್‌ ಜನಗಣತಿಯ ಅಂಕಿ-ಅಂಶಗಳ ಪೈಕಿ ಸುಮಾರು 6.7%ನಷ್ಟು ಭಾಗವನ್ನು ಇದು ಪ್ರತಿನಿಧಿಸುತ್ತದೆ) ಜನರು ಇಂಡಿಗೆನಾಸ್‌‌‌ ಗಳಾಗಿ (ಸ್ಥಳೀಕರು ಅಥವಾ ಸ್ಥಳೀಯ ಜನರನ್ನು ಸ್ಪ್ಯಾನಿಷ್‌ ಭಾಷೆಯಲ್ಲಿ ಹೀಗೆ ಕರೆಯಲಾಗುತ್ತದೆ) ಗುರುತಿಸಲ್ಪಟ್ಟಿದ್ದಾರೆ. ದಕ್ಷಿಣ ಭಾಗದ ಷಿಯಾಪಾಸ್‌, ಯುಕಾಕ್ಟಾನ್‌ ಮತ್ತು ಓವಕ್ಸಾಕಾ ಸಂಸ್ಥಾನಗಳಲ್ಲಿ ಅವರು ಕ್ರಮವಾಗಿ ಸಮುದಾಯದ 26.1%, 33.5% ಮತ್ತು 35.3%ನಷ್ಟು ಭಾಗವನ್ನು ಪ್ರತಿನಿಧಿಸುತ್ತಾರೆ. ಈ ಸಂಸ್ಥಾನಗಳಲ್ಲಿ ನಾಗರಿಕ ಯುದ್ಧದ ಹಲವಾರು ಘರ್ಷಣೆಗಳು ಮತ್ತು ಪ್ರಸಂಗಗಳು ನಡೆದಿದ್ದು, ಅವುಗಳಲ್ಲಿನ ಸ್ಥಳೀಯ ಸಮಾಜಗಳ ಸ್ಥಿತಿಗತಿ ಮತ್ತು ಪಾಲ್ಗೊಳ್ಳುವಿಕೆಯು ಗಮನಾರ್ಹ ಅಂಶಗಳಾಗಿ ಹೊರಹೊಮ್ಮಿದ್ದವು (ಉದಾಹರಣೆಗೆ ನೋಡಿ: EZLN).

ಅಮೆರಿಂಡಿಯನ್ನರು ಬ್ರೆಜಿಲ್‌ನ ಜನಸಂಖ್ಯೆಯ 0.4%ನಷ್ಟು ಭಾಗವನ್ನು, ಅಥವಾ ಸುಮಾರು 700,000 ಜನರನ್ನು ಪ್ರತಿನಿಧಿಸುತ್ತಾರೆ.[೨೭] ಬ್ರೆಜಿಲ್‌ನ ಸಮಗ್ರ ಭೂಪ್ರದೇಶದಲ್ಲಿ ಸ್ಥಳೀಯ ಜನರು ಕಂಡುಬರುತ್ತಾರಾದರೂ, ಅವರಲ್ಲಿ ಬಹುತೇಕ ಮಂದಿ ದೇಶದ ಉತ್ತರ ಮತ್ತು ಮಧ್ಯ-ಪಶ್ಚಿಮದ ಭಾಗದಲ್ಲಿನ ಇಂಡಿಯನ್‌ ಮೀಸಲು ಪ್ರದೇಶಗಳಲ್ಲಿ ವಾಸಿಸುತ್ತಾರೆ. 2007ರ ಜನವರಿ 18ರಂದು FUNAI ವರದಿಯೊಂದನ್ನು ನೀಡಿ, ಬ್ರೆಜಿಲ್‌ನಲ್ಲಿ 67 ವಿಭಿನ್ನ ಸಂಪರ್ಕರಹಿತ ಬುಡಕಟ್ಟುಗಳ ಅಸ್ತಿತ್ವವನ್ನು ತಾನು ದೃಢೀಕರಿಸಿದ್ದಾಗಿ ಮತ್ತು 2005ರಲ್ಲಿ ಕಂಡುಬಂದಿದ್ದ 40 ಬುಡಕಟ್ಟುಗಳ ಪ್ರಮಾಣದಿಂದ ಈ ಮಟ್ಟಕ್ಕೆ ಅದು ಹೆಚ್ಚಳಗೊಂಡಿರುವುದಾಗಿ ಅದು ತಿಳಿಸಿತು. ಈ ಸೇರ್ಪಡೆಯಿಂದಾಗಿ, ಅತಿದೊಡ್ಡ ಸಂಖ್ಯೆಯಲ್ಲಿ ಸಂಪರ್ಕರಹಿತ ಬುಡಕಟ್ಟುಗಳನ್ನು ಹೊಂದಿರುವ ದೇಶವಾಗಿ ಬ್ರೆಜಿಲ್‌ ಈಗ ನ್ಯೂಗಿನಿಯಾ ದ್ವೀಪವನ್ನು ಮೀರಿಸಿದೆ.[೨೮]

ಯಾರ ಅಂಕಿಅಂಶಗಳನ್ನು ಬಳಸಲಾಗಿದೆ ಎಂಬುದನ್ನು ಅವಲಂಬಿಸಿ, ಗ್ವಾಟೆಮಾಲಾ ದೇಶವು 50ರಿಂದ 80%ನಷ್ಟು ಸ್ಥಳೀಯ ಜನರನ್ನು ಹೊಂದಿದೆ (ನೆಲ್ಸನ್‌, ಫಿಂಗರ್‌ ಇನ್‌ ದಿ ವೂಂಡ್‌ 1999).

ಏಷ್ಯಾ

[ಬದಲಾಯಿಸಿ]
ಇದನ್ನೂ ನೋಡಿ:ವರ್ಗ:Indigenous peoples of Asia
ಜಪಾನಿ ಸ್ಥಳೀಯ ಜನರಾದ ಐನು ಗುಂಪಿಗೆ ಸೇರಿದ ಓರ್ವ ಮನುಷ್ಯ ಸುಮಾರು 1930ರಲ್ಲಿ ಒಂದು ಕರಡಿಯೊಂದಿಗೆ ಇರುವುದು.

IWGIA ಅಂಕಿ-ಅಂಶಗಳ ಅನುಸಾರ, ಏಷ್ಯಾದ ಬೃಹತ್‌ ಪ್ರದೇಶಗಳು ವಿಶ್ವದ ವರ್ತಮಾನದ ಸ್ಥಳೀಯ ಜನರ ಜನಸಂಖ್ಯೆಯ ಬಹುಭಾಗವನ್ನು, ಅಂದರೆ ಸುಮಾರು 70%ನಷ್ಟು ಭಾಗವನ್ನು ಹೊಂದಿವೆ.

ಅತ್ಯಂತ ಗಣನೀಯ ಜನಸಂಖ್ಯೆಗಳು ಭಾರತದಲ್ಲಿದ್ದು, ಇದು ತನ್ನ ಗಡಿರೇಖೆಗಳ ವ್ಯಾಪ್ತಿಯೊಳಗೆ "ಅನುಸೂಚಿತ ಬುಡಕಟ್ಟುಗಳ" ಒಂದು ವ್ಯಾಪ್ತಿಯನ್ನು ಸಾಂವಿಧಾನಾತ್ಮಕವಾಗಿ ಗುರುತಿಸುತ್ತದೆ. ಈ ನಾನಾಬಗೆಯ ಜನರು (ಆದಿವಾಸಿಗಳು, ಅಥವಾ ಬುಡಕಟ್ಟಿನ ಜನರು ಎಂಬುದಾಗಿ ಒಟ್ಟಾಗಿ ಉಲ್ಲೇಖಿಸಲ್ಪಟ್ಟವರು) ಸುಮಾರು 68 ದಶಲಕ್ಷದಷ್ಟು ಸಂಖ್ಯೆಯಲ್ಲಿದ್ದಾರೆ (1991ರ ಜನಗಣತಿ ಅಂಕಿ-ಅಂಶಗಳ ಅನುಸಾರ, ಒಟ್ಟು ರಾಷ್ಟ್ರೀಯ ಜನಸಂಖ್ಯೆಯ ಪೈಕಿ ಸರಿಸುಮಾರಾಗಿ 8%ನಷ್ಟು ಭಾಗವನ್ನು ಇವರು ಪ್ರತಿನಿಧಿಸುತ್ತಾರೆ).

20ನೇ ಶತಮಾನದ ಆರಂಭದಲ್ಲಿ ಕಂಡುಬಂದಂತೆ, ನಿವ್ಕ್‌‌ ಜನರ ಒಂದು ಬೇಸಿಗೆ ಹಳ್ಳಿ.

‌‌ನಿವ್ಕ್ ಜನರು ಸಖಾಲಿನ್‌‌‌ಗೆ ಸ್ಥಳೀಯರಾಗಿರುವ ಒಂದು ಜನಾಂಗೀಯ ಗುಂಪು ಆಗಿದ್ದು, ನಿವ್ಕ್‌‌ ಭಾಷೆಯನ್ನು ಮಾತನಾಡುವ ಕೆಲವೇ ಜನರನ್ನು ಆ ಗುಂಪು ಹೊಂದಿದೆ; ಆದರೆ 1990ರ ದಶಕದಿಂದ ನಡೆದಿರುವ ಸಖಾಲಿನ್‌ನ ತೈಲಕ್ಷೇತ್ರದ ಅಭಿವೃದ್ಧಿಯ ಕಾರಣದಿಂದಾಗಿ, ಅವರ ಮೀನುಗಾರ ಸಂಸ್ಕೃತಿಯು ವಿಪತ್ತಿಗೆ ಸಿಲುಕಿದೆ.[೨೯]

ಐನು ಜನರು ಹೊಕಾಯ್ಡೊ, ಕುರಿಲ್‌ ದ್ವೀಪಗಳು, ಮತ್ತು ಸಖಾಲಿನ್‌ನ ಬಹುಭಾಗಕ್ಕೆ ಸ್ಥಳೀಯರಾಗಿರುವ ಒಂದು ಜನಾಂಗೀಯ ಗುಂಪಾಗಿದೆ. ಜಪಾನಿಯರ ನೆಲೆಗೊಳಿಸುವಿಕೆಯು ವಿಸ್ತರಿಸುತ್ತಾ ಹೋದಂತೆ, ಐನು ಜನರು ಉತ್ತರದೆಡೆಗೆ ತಳ್ಳಲ್ಪಟ್ಟರು; ಮೆಯಿಜಿ ಅವಧಿಯ ವೇಳೆಗೆ, ಹೊಕಾಯ್ಡೊದಲ್ಲಿನ ಒಂದು ಸಣ್ಣ ಪ್ರದೇಶಕ್ಕೆ ಸರ್ಕಾರವು ಅವರನ್ನು ಸೀಮಿತಗೊಳಿಸಿತು. ಈ ವಿಧಾನವು ಮೀಸಲು ಪ್ರದೇಶಗಳಲ್ಲಿ ಸ್ಥಳೀಕ ಅಮೆರಿಕನ್ನರನ್ನು ಇರಿಸುವ ವಿಧಾನವನ್ನು ಹೋಲುವಂತಿತ್ತು.[೩೦]

ತೈವಾನಿನ ಮೂಲನಿವಾಸಿಗಳ ಭಾಷೆಗಳು ಐತಿಹಾಸಿಕ ಭಾಷಿಕರ ವಲಯದಲ್ಲಿ ಪ್ರಾಮುಖ್ಯತೆಯನ್ನು ಹೊಂದಿವೆ; ಎಲ್ಲಾ ಸಂಭಾವ್ಯತೆಗಳಲ್ಲಿ ತೈವಾನ್‌ ದೇಶವು ಓಷಿಯಾನಿಯಾದ ಉದ್ದಗಲಕ್ಕೂ ಹರಡಿಕೊಂಡ ಸಮಗ್ರ ಆಸ್ಟ್ರನೇಷಿಯನ್‌ ಭಾಷಾ ಕುಟುಂಬದ ಜನ್ಮಸ್ಥಳವಾಗಿರಬಹುದಾದ ಸಾಧ್ಯತೆ ಇದ್ದುದು ಈ ಪ್ರಾಮುಖ್ಯತೆಗೆ ಕಾರಣವಾಗಿದೆ.[೩೧][೩೨][೩೩]

ಅಲ್ಲಿ ಫಿಲಿಪೈನ್ಸ್‌ನ ಸ್ಥಳೀಯ ಜನರ ಅಸ್ತಿತ್ವವೂ ಇದ್ದು, ಈ ಪ್ರದೇಶವನ್ನು ಸ್ಪೇನ್‌ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳು ವಸಾಹತೀಕರಣಕ್ಕೆ ಒಳಪಡಿಸಿವೆ.

ಇರಾಕ್‌, ಸಿರಿಯಾ, ಮತ್ತು ಟರ್ಕಿಯ ಭಾಗಗಳನ್ನು ಒಳಗೊಂಡಿರುವ ಮೆಸಪಟ್ಯಾಮಿಯಾದ ಭೂ-ಸಾಂಸ್ಕೃತಿಕ ಪ್ರದೇಶದ ಕ್ಷೇತ್ರಗಳಿಗೆ ಅಸಿರಿಯನ್ನರು ಮತ್ತು ಮಾರ್ಷ್‌ ಅರಬರು ಸ್ಥಳೀಯರಾಗಿದ್ದಾರೆ. ಲೋರೆಸ್ತಾನ್‌ ಮತ್ತು ಇಲಮ್‌‌ ಪ್ರಾಂತಗಳೊಂದಿಗೆ ಇರುವ ಇರಾನಿನ ಗಡಿಗೆ ಸನಿಹದಲ್ಲಿರುವ ಇರಾಕ್‌ನ ಭಾಗಗಳಲ್ಲಿ ಲೂರ್‌ಗಳು ಕೂಡಾ ವಾಸಿಸುತ್ತಾರೆ.

ಬಹ್ರಾನಿ ಜನಗಳು ಸೌದಿ ಅರೇಬಿಯಾದ ಪರ್ಷಿಯನ್‌ ಕೊಲ್ಲಿ ತೀರಪ್ರದೇಶದ ಮೇಲಿರುವ ಕಾಟಿಫ್‌ ಓಯಸಿಸ್‌ ಹಾಗೂ ಬಹ್ರೇನ್‌ ದ್ವೀಪಸಮೂಹದ ಸ್ಥಳೀಯ ಜನರಾಗಿದ್ದಾರೆ. (ನೋಡಿ: ಬಹ್ರೇನ್‌ನ ಐತಿಹಾಸಿಕ ಪ್ರದೇಶ).

ಯುರೋಪ್‌

[ಬದಲಾಯಿಸಿ]
ಇದನ್ನೂ ನೋಡಿ: ವರ್ಗ:Indigenous peoples of Europe ಮತ್ತು ಐರೋಪ್ಯ ಜನಾಂಗೀಯ ಗುಂಪುಗಳು
ಓರ್ವ ಸರ್ಕ್ಯಾಸಿಯನ್‌ (ಅಡ್ಯಾಘೆ) ಹುಡುಗಿ

ಐತಿಹಾಸಿಕ ಅವಧಿಯಲ್ಲಿ ಯುರೋಪ್‌ನ ಬಹುಭಾಗವು ಸುದೀರ್ಘವಾದ ಪರಿಣಾಮದೊಂದಿಗೆ ಐರೋಪ್ಯವಲ್ಲದ ಅಧಿಕಾರದ ಅಸ್ತಿತ್ವಗಳಿಂದ ಎಂದಿಗೂ ವಸಾಹತೀಕರಣಕ್ಕೆ ಒಳಗಾಗಲಿಲ್ಲವಾದ್ದರಿಂದ (ಹಂಗರಿ, ಟರ್ಕಿಷ್‌ ಥ್ರೇಸ್‌, ಟಾಟಾರ್‌ಸ್ತಾನ್‌, ಕಾಲ್ಮಿಕಿಯಾ ಮತ್ತು ಮಾಲ್ಟಾ ಅಥವಾ ಸೈಪ್ರಸ್‌‌‌ನಂಥ[೩೪] ದ್ವೀಪಗಳನ್ನು ವಾದಯೋಗ್ಯವಾಗಿ ಹೊರತುಪಡಿಸಿ), ಯುರೋಪಿಯನ್ನರ ಬಹುದೊಡ್ಡ ಭಾಗವನ್ನು ಸ್ಥಳೀಯರೆಂದು ಪರಿಗಣಿಸಬಹುದಾಗಿದೆ. ಆದಾಗ್ಯೂ, "ಸ್ಥಳೀಯ ಜನರು" ಎಂಬ ಶಬ್ದವನ್ನು ಕಟ್ಟುನಿಟ್ಟಾದ ಸ್ವರೂಪಗಳಲ್ಲಿ ವ್ಯಾಖ್ಯಾನಿಸುವಂಥ ವ್ಯಾಪಕವಾಗಿ ಸ್ವೀಕರಿಸಲ್ಪಟ್ಟ ಹಲವಾರು ಸೂತ್ರೀಕರಣಗಳನ್ನು ವಿಶ್ವಸಂಸ್ಥೆ, ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ ಮತ್ತು ವಿಶ್ವ ಬ್ಯಾಂಕ್‌‌‌ನಂಥ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಸಂಘಟನೆಗಳು ಮುಂದಿಟ್ಟಿವೆ. ಈ ಲೇಖನದಲ್ಲಿ ಸ್ಥಳೀಯ ಜನರು ಎಂಬ ಪರಿಭಾಷೆಯನ್ನು ಇಂಥದೊಂದು ಸಂಕುಚಿತವಾದ ಪ್ರಜ್ಞೆಯಲ್ಲಿ ಬಳಸಲಾಗಿದೆ.

ಯುರೋಪ್‌ನಲ್ಲಿ, ಗುರುತಿಸಲ್ಪಟ್ಟಿರುವ ವರ್ತಮಾನದ ಸ್ಥಳೀಯ ಸಮುದಾಯಗಳು ತುಲನಾತ್ಮಕವಾಗಿ ಕೆಲವೇ ಸಂಖ್ಯೆಯಲ್ಲಿವೆ ಎನ್ನಬಹುದು; ಯುರೇಷಿಯಾದ ಈ ಪರ್ಯಾಯ ದ್ವೀಪದ ದೂರಪ್ರಾಚ್ಯದ ಹಾಗೂ ಉತ್ತರ ಭಾಗದ ನೆಲೆಗಳಿಗೆ ಅವು ಮುಖ್ಯವಾಗಿ ಸೀಮಿತಗೊಳಿಸಲ್ಪಟ್ಟಿವೆ. ಐರೋಪ್ಯ ದೇಶಗಳ ವ್ಯಾಪ್ತಿಗಳೊಳಗೆ ನಾನಾಬಗೆಯ ಜನಾಂಗೀಯ ಅಲ್ಪಸಂಖ್ಯಾತರು ಹರಡಿಕೊಂಡಿರುವುದು ಕಂಡುಬರುವ ಸಂದರ್ಭದಲ್ಲೇ, ಅವರ ಪೈಕಿಯ ಕೆಲವರು ಈಗಲೂ ಕನಿಷ್ಟ ಮಟ್ಟದ ಸಾಂಪ್ರದಾಯಿಕ ಸಂಸ್ಕೃತಿಗಳನ್ನು ಕಾಯ್ದುಕೊಂಡು ಹೋಗುತ್ತಿದ್ದಾರೆ ಮತ್ತು ವಸ್ತುತಃ ಸ್ಥಳೀಯ ಜನರು ಎಂಬುದಾಗಿ ಅವರು ಗುರುತಿಸಲ್ಪಟ್ಟಿದ್ದಾರೆ. ಗಮನಾರ್ಹವಾದ ಸ್ಥಳೀಯ ಸಮುದಾಯಗಳಲ್ಲಿ ಇವರು ಸೇರಿದ್ದಾರೆ: ಸ್ಕ್ಯಾಂಡಿನೇವಿಯಾದ ಉತ್ತರ ಭಾಗದ ಸ್ಯಾಮಿ ಜನರು, ರಷ್ಯಾದ ಒಕ್ಕೂಟದ ಉತ್ತರ ಭಾಗದ ನೆನೆಟ್ಸ್‌ ಮತ್ತು ಇತರ ಸ್ಯಾಮಯೆಡ್‌ ಜನಾಂಗದ ಜನರು, ಮತ್ತು ಪಶ್ಚಿಮದ ಉರಲ್ಸ್‌‌‌ನ ಕೋಮಿ ಜನರು.

ಸ್ಪೇನ್‌ನ ಉತ್ತರ ಭಾಗ ಮತ್ತು ಫ್ರಾನ್ಸ್‌ನ ನೈಋತ್ಯ ಭಾಗದಲ್ಲಿ ವಾಸಿಸುತ್ತಿರುವ ಬಾಸ್ಕ್‌ ಜನರು, ಯುರೋಪ್‌ನಲ್ಲಿನ ಅತಿ ಹಳೆಯ ಸ್ಥಳೀಯ ಗುಂಪುಗಳ ಪೈಕಿ ಒಬ್ಬರೆನಿಸಿಕೊಂಡಿದ್ದಾರೆ. ಇಂಡೋ-ಐರೋಪ್ಯ ಭಾಷೆಗಳು ಮತ್ತು ಜನರ ಒಳನುಗ್ಗುವಿಕೆಗೆ ಮುಂಚಿತವಾಗಿ, ನವಶಿಲಾಯುಗದ ಯುರೋಪ್‌‌ನ ಸಮುದಾಯಗಳಿಂದ ಜನ್ಮತಾಳಿದ ಕೊನೆಗೆ ಉಳಿದಿರುವ ಜನಾಂಗೀಯ-ಭಾಷಿಕ ಗುಂಪೇ ಬಾಸ್ಕ್ ಜನಗಳದ್ದಾಗಿರುವ ಸಾಧ್ಯತೆಗಳಿವೆ ಎಂಬುದಾಗಿ ವ್ಯಾಪಕವಾಗಿ ಸಮರ್ಥಿಸಲಾಗುತ್ತದೆ. ಬಾಸ್ಕ್‌ ಜನರ ಮೂಲಗಳ ಕುರಿತಾದ ಮತ್ತೊಂದು ಸಿದ್ಧಾಂತವು ಸೂಚಿಸುವ ಪ್ರಕಾರ, ಅವರು ಕನಿಷ್ಟಪಕ್ಷ ಮ್ಯಾಗ್ಡಲೀನಿಯನ್‌ ಅವಧಿಯಿಂದಲೂ ಫ್ರಾಂಕೋ-ಕ್ಯಾಂಟಬ್ರಿಯನ್‌ ಪ್ರದೇಶದಲ್ಲಿ ನಿರಂತರವಾಗಿ ವಾಸಿಸುತ್ತಿರುವ ಪ್ರಾಚೀನ ಶಿಲಾಯುಗದ ಯುರೋಪಿಯನ್ನರ ಒಂದು ಉಳಿದ ಜನಸಮುದಾಯವಾಗಿದ್ದಾರೆ. ಬಾಸ್ಕ್‌ ದೇಶದ ಒಂದು ಆಕ್ರಮಣಕ್ಕೆ ಸಂಬಂಧಿಸಿದ ಪುರಾತತ್ತ್ವಶಾಸ್ತ್ರದ ಏಕೈಕ ಪುರಾವೆಯು ಸುಮಾರು 40,000 ವರ್ಷಗಳಷ್ಟು ಹಿಂದಕ್ಕೆ ಕರೆದುಕೊಂಡು ಹೋಗುತ್ತದೆ; ಈ ಅವಧಿಯಲ್ಲಿ ಕ್ರೋಮ್ಯಾಗ್ನನ್‌ ಜನಾಂಗದ ಜನರು ಯುರೋಪ್‌ನಲ್ಲಿ ಮೊದಲು ಬಂದಿಳಿದರು ಹಾಗೂ ಹೋಮೋ ನಿಯಾಂಡರ್ತಲೆನ್ಸಿಸ್‌‌‌ನ್ನು ಅವರು ಆಕ್ರಮಿಸಿಕೊಂಡರು.[೩೫]

‌ಕಕೇಷಸ್ ಪ್ರದೇಶವು ತನ್ನ ವೈವಿಧ್ಯತೆಯಲ್ಲಿ ಅನನ್ಯವಾಗಿದ್ದು, ವಿಶ್ವದಲ್ಲಿರುವ ಇದೇ ಗಾತ್ರದ ಯಾವುದೇ ಪ್ರದೇಶದಲ್ಲಿ ಮಾತನಾಡಲಾಗುವ ಭಾಷೆಗಳಿಗಿಂತ ಮಹತ್ತರವಾದ ವೈವಿಧ್ಯತೆಯುಳ್ಳ ಭಾಷೆಗಳನ್ನು ಇಲ್ಲಿ ಮಾತಾಡಲಾಗುತ್ತದೆ. ಕಕೇಷಸ್‌ ಪ್ರದೇಶವು ಸರ್ಕ್ಯಾಸಿಯನ್ನರಂಥ 50ಕ್ಕೂ ಹೆಚ್ಚಿನ ಸಾಂಸ್ಕೃತಿಕ ಅಲ್ಪಸಂಖ್ಯಾತರ ನೆಲೆಯಾಗಿದೆ.[೩೬][೩೭] ಇದನ್ನೂ ನೋಡಿ: ಕಕೇಷಸ್‌ನ ಜನರು‌.

ಓಷಿಯಾನಿಯ

[ಬದಲಾಯಿಸಿ]
ಚಿತ್ರ:Suleyman khinalugian.jpg
ಖಿನಲುಗ್‌ ಜನರು ಕಕೇಷಸ್‌ನ ಸ್ಥಳೀಯ ನಿವಾಸಿಗಳ ಪೈಕಿ ಒಬ್ಬರಾಗಿದ್ದಾರೆ.
ಪಪುವಾ ನ್ಯೂಗಿನಿಯಾದ ದಕ್ಷಿಣ ಭಾಗದ ಪರ್ವತ ಪ್ರದೇಶಗಳಿಗೆ ಸೇರಿದ ಹೂಲಿ ಮನುಷ್ಯ.ನ್ಯೂಗಿನಿಯಾ 1,000ಕ್ಕೂ ಹೆಚ್ಚಿನ ಸ್ಥಳೀಯ ಭಾಷೆಗಳನ್ನು ಹೊಂದಿದೆ.

ಓಷಿಯಾನಿಯಾ ಪ್ರದೇಶದಲ್ಲಿನ ವರ್ತಮಾನದ ಪೆಸಿಫಿಕ್‌ ದ್ವೀಪ ರಾಷ್ಟ್ರಗಳ ಪೈಕಿಯ ಅನೇಕ ರಾಷ್ಟ್ರಗಳು, ಸಾವಿರಾರು ವರ್ಷಗಳ ಪಥದುದ್ದಕ್ಕೂ ಪಾಲಿನೇಷಿಯಾದ, ಮೆಲನೇಷಿಯಾದ ಮತ್ತು ಮೈಕ್ರೊನೇಷಿಯಾದ ಜನರಿಂದ ಮೂಲತಃ ತುಂಬಿಕೊಂಡಿದ್ದವು. ಪೆಸಿಫಿಕ್‌ ವಲಯದಲ್ಲಿನ ಐರೋಪ್ಯ ವಸಾಹತಿನ ವಿಸ್ತರಣೆಯು ಇವುಗಳ ಪೈಕಿಯ ಅನೇಕ ರಾಷ್ಟ್ರಗಳನ್ನು ಸ್ಥಳೀಯವಲ್ಲದ ಆಡಳಿತದ ಅಡಿಯಲ್ಲಿ ತಂದಿತು. 20ನೇ ಶತಮಾನದ ಅವಧಿಯಲ್ಲಿ, ಈ ಹಿಂದಿನ ವಸಾಹತುಗಳ ಪೈಕಿಯ ಹಲವಾರು ಪ್ರದೇಶಗಳು ಸ್ವಾತಂತ್ರ್ಯವನ್ನು ಗಳಿಸಿದವು ಹಾಗೂ ಸ್ಥಳೀಯ ನಿಯಂತ್ರಣದ ಅಡಿಯಲ್ಲಿ ರಾಷ್ಟ್ರ-ಸಂಸ್ಥಾನಗಳು ರೂಪುಗೊಂಡವು. ಆದಾಗ್ಯೂ, ನಾನಾಬಗೆಯ ಜನರು ಸ್ಥಳೀಯ ಮಾನ್ಯತೆಗೆ ಸಂಬಂಧಿಸಿದಂತೆ ತಮ್ಮ ಹಕ್ಕುಗಳನ್ನು ಮುಂದಿಟ್ಟಿದ್ದು, ಅಲ್ಲಿ ಈಗಲೂ ಅವರ ದ್ವೀಪಗಳು ಬಾಹ್ಯ ಆಡಳಿತದ ಅಡಿಯಲ್ಲಿವೆ; ಉದಾಹರಣೆಗಳಲ್ಲಿ ಇವರು ಸೇರಿದ್ದಾರೆ: ಗುವಾಮ್‌‌ ಹಾಗೂ ಮೇರಿಯಾನಾಸ್‌ನ ಉತ್ತರ ಭಾಗದ‌ ಚಾರ್‌ಮೊರೋಗಳು ಮತ್ತು ಮಾರ್ಷಲ್‌ ದ್ವೀಪಗಳ ಮಾರ್ಷಲೀಸ್‌ ಜನರು.

1,000 ಮತ್ತು 3,000 ವರ್ಷಗಳ ಹಿಂದಿನ ಅವಧಿಯ ನಡುವೆ ವಾಸಿಸಿದ್ದ ಚಿಕ್ಕ ಗಾತ್ರದ ಮಾನವರ ಕನಿಷ್ಟಪಕ್ಷ 25 ಅವಶೇಷಗಳು, ಮೈಕ್ರೊನೇಷಿಯಾದಲ್ಲಿನ ಪಲಾವು ದ್ವೀಪಗಳ ಮೇಲೆ ಇತ್ತೀಚೆಗಷ್ಟೇ ಕಂಡುಬಂದವು.[೩೮]

ಓಷಿಯಾನಿಯಾದ ಬಹುತೇಕ ಭಾಗಗಳಲ್ಲಿ, ಸ್ಥಳೀಯ ಜನರು ಸಂಖ್ಯೆಯಲ್ಲಿ ವಸಾಹತುಗಾರರ ಸಂತತಿಯವರನ್ನು ಮೀರಿಸುತ್ತಾರೆ. ಇದಕ್ಕಿರುವ ವಿನಾಯಿತಿಗಳಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಮತ್ತು ಹವಾಯಿ ಪ್ರದೇಶಗಳು ಸೇರಿವೆ. 2001ರ ಆಸ್ಟ್ರೇಲಿಯಾದ ಜನಗಣತಿಯ ಅನುಸಾರ, ಆಸ್ಟ್ರೇಲಿಯಾದ ಸ್ಥಳೀಯರು ಒಟ್ಟು ಜನಸಂಖ್ಯೆಯ 2.4%ನಷ್ಟು ಭಾಗವನ್ನು ಪ್ರತಿನಿಧಿಸಿದರೆ, ನ್ಯೂಜಿಲೆಂಡ್‌ನಲ್ಲಿ ಜನಸಂಖ್ಯೆಯ ಕನಿಷ್ಟಪಕ್ಷ 14.6%ನಷ್ಟು ಭಾಗವನ್ನು ಸ್ಥಳೀಯ ಮಾವೊರಿ ಜನರು ಪ್ರತಿನಿಧಿಸುತ್ತಾರೆ; ಎಲ್ಲ ಮಾವೊರಿ ನಿವಾಸಿಗಳ ಪೈಕಿಯ ಅರ್ಧಕ್ಕೂ ಕೊಂಚಮಟ್ಟಿಗೆ ಹೆಚ್ಚಿನ (53%) ಭಾಗವು ಸಂಪೂರ್ಣವಾಗಿ ಮಾವೊರಿಗಳಾಗಿ ಗುರುತಿಸಲ್ಪಡುತ್ತದೆ. ಮಾವೊರಿ ಜನರು ಪಾಲಿನೇಷಿಯಾಗೆ ಸ್ಥಳೀಯರಾಗಿದ್ದು, ತುಲನಾತ್ಮಕವಾಗಿ ಇತ್ತೀಚೆಗಷ್ಟೇ ನ್ಯೂಜಿಲೆಂಡ್‌ನಲ್ಲಿ ನೆಲೆಗೊಂಡಿದ್ದಾರೆ ಮತ್ತು ಅವರ ವಲಸೆಗಳು 1000-1200 CEಯ ನಡುವೆ ಸಂಭವಿಸಿರಬಹುದು ಎಂದು ಭಾವಿಸಲಾಗಿದೆ. ನ್ಯೂಜಿಲೆಂಡ್‌ನಲ್ಲಿ, ಸಂಪರ್ಕ-ಪೂರ್ವ ಮಾವೊರಿ ಬುಡಕಟ್ಟುಗಳು ಒಂದು ಏಕೈಕ ಜನರಾಗಿರಲಿಲ್ಲ, ಹೀಗಾಗಿ ಬುಡಕಟ್ಟಿನ (iwi) ವ್ಯವಸ್ಥೆಗಳಾಗಿ ಹೊರಹೊಮ್ಮಿರುವ ತೀರಾ ಇತ್ತೀಚಿನ ಗುಂಪಾಗುವಿಕೆಯು, ತೀರಾ ಇತ್ತೀಚಿನ ಕಾಲದಲ್ಲಿನ ಒಂದು ಹೆಚ್ಚು ಔಪಚಾರಿಕ ವ್ಯವಸ್ಥೆ ಎನಿಸಿಕೊಂಡಿದೆ. ವೈಟಾಂಗಿಯ ಒಡಂಬಡಿಕೆ ಎಂದು ಕರೆಯಲ್ಪಡುವ ಬ್ರಿಟಿಷರೊಂದಿಗಿನ ಒಡಂಬಡಿಕೆಯೊಂದಕ್ಕೆ ಮಾವೊರಿ ಬುಡಕಟ್ಟಿನ ಅನೇಕ ನಾಯಕರು ಸಹಿಹಾಕಿದರು. ಇದರಿಂದಾಗಿ, ಭೂರಾಜ್ಯಶಾಸ್ತ್ರದ ಆಧುನಿಕ ಅಸ್ತಿತ್ವವಾದ ನ್ಯೂಜಿಲೆಂಡ್‌ ಪ್ರದೇಶವು ಭಾಗಶಃ ಸಮ್ಮತಿಯಿಂದ ಸ್ಥಾಪಿಸಲ್ಪಟ್ಟಂತಾಯಿತು. ಆದಾಗ್ಯೂ, ಅವರು ಸಹಿಹಾಕಿದ ವೈಟಾಂಗಿಯ ಒಡಂಬಡಿಕೆಯ ಮಾವೊರಿ ಭಾಷೆಯ ಅನುವಾದವು ಸಂದಿಗ್ಧವಾಗಿ ಪದಗಳಲ್ಲಿ ನಿರೂಪಿಸಲ್ಪಟ್ಟಿದೆ ಮತ್ತು ಅದು ಇಂಗ್ಲಿಷ್‌ ಆವೃತ್ತಿಯೊಂದಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುವುದಿಲ್ಲ. ಸದರಿ ಒಡಂಬಡಿಕೆ ಪ್ರಕ್ರಿಯೆಯು 'ಸ್ಥಳೀಕ' ಸಮುದಾಯಕ್ಕೆ ಬ್ರಿಟಿಷ್‌ ಪೌರತ್ವವನ್ನು ನೀಡಿತು. ಆದಾಗ್ಯೂ, ಮೊದಲ ಬ್ರಿಟಿಷ್‌ ನೆಲಸಿಗರ ಪೈಕಿಯ ಕೆಲವೊಬ್ಬರು ವೈಟಾಂಗಿಯ ಒಡಂಬಡಿಕೆಯನ್ನು ಉಪೇಕ್ಷಿಸಿದರು ಹಾಗೂ ವಸಾಹತುಗಾರಿಕೆಯ ಒಂದಷ್ಟು ಕಾನೂನುಬಾಹಿರ ವರ್ತನೆಗಳು ಮತ್ತು ಯುದ್ಧದ ಕಾರಣದಿಂದ (ಮಾವೊರಿ ಜನರು ಮತ್ತು ಮೊದಲ ನೆಲಸಿಗರ ನಡುವೆ ನ್ಯಾಯಸಮ್ಮತವಾದ ಭೂಮಿಯ ಮಾರಾಟವು ಅಲ್ಲಿ ಇದ್ದರೂ ಸಹ) ಮಾವೊರಿ ಜನರು ತಮ್ಮ ಭೂಪ್ರದೇಶ ಹಾಗೂ ಸಂಪನ್ಮೂಲಗಳ 95%ನಷ್ಟು ಭಾಗವನ್ನು ಕಳೆದುಕೊಂಡರು. ಇದು 1850ರ ದಶಕದಿಂದ ಮೊದಲ್ಗೊಂಡು 1970ರ ದಶಕದವರೆಗೂ ಮುಂದುವರೆಯಿತು. ಇದರ ಪರಿಣಾಮವಾಗಿ, ಬೃಹತ್‌ ಸಂಖ್ಯೆಯ ಮಾವೊರಿ ಜನರ ಸಮಾಜೋ-ಆರ್ಥಿಕ ಅಮುಖ್ಯೀಕರಣವು ದೊಡ್ಡ ಪ್ರಮಾಣದಲ್ಲಿ ಸಂಭವಿಸಿತು. 1970ರ ದಶಕದಿಂದಲೂ ಮಾವೊರಿ ಜನರು ಒಂದು ಸಾಂಸ್ಕೃತಿಕ ಪುನರುಜ್ಜೀವನವನ್ನು ಹಾಗೂ ಒಂದು ರಾಜಕೀಯದ ಪ್ರಚೋದನೆಯನ್ನು ದಾಖಲಿಸಿದ್ದಾರೆ; ವೈಟಾಂಗಿ ನ್ಯಾಯಾಧಿಕರಣ [೪] ಪ್ರಕ್ರಿಯೆಯ ಮೂಲಕ ತಮ್ಮ ಭೂಮಿ, ಸಂಪನ್ಮೂಲಗಳು ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ತಮ್ಮ ಒಡಂಬಡಿಕೆಯ ಹಕ್ಕುಗಳನ್ನು ಸಮರ್ಥಿಸಲು ಅವರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಮಾವೊರಿ ಭಾಷೆ ಮತ್ತು ಸಂಸ್ಕೃತಿಯ ಕಾನೂನುಬದ್ಧ ಮಾನ್ಯತೆಗೆ ಇದು ಕಾರಣವಾಗಿದೆ ಮತ್ತು ಒಂದಷ್ಟು ಭೂಮಿ, ಸಂಪನ್ಮೂಲಗಳು ಮತ್ತು ಹಣವು ಮಾವೊರಿ ಜನರಿಗೆ ಮರಳಲು ಇದು ಕಾರಣವಾಗಿದೆ; ಇದರಿಂದಾಗಿ ಮಾವೊರಿ ಜನರ ಇಂದಿನ ವ್ಯವಹಾರಗಳು 14 ಶತಕೋಟಿ NZD$ಗೂ ಹೆಚ್ಚಿನ ಒಂದು ಅಂದಾಜಿಸಲ್ಪಟ್ಟ ಮೌಲ್ಯವನ್ನು ಹೊಂದಿವೆ. ಮಾವೊರಿ ಜನರು ಒಂದು ಪ್ರಮುಖ ರಾಜಕೀಯ ಪಕ್ಷವನ್ನೂ ರೂಪಿಸಿದ್ದಾರೆ.

ಪಪುವಾ ನ್ಯೂಗಿನಿಯಾ (PNG) ಸ್ವತಂತ್ರ ಸಂಸ್ಥಾನವು ಸ್ಥಳೀಯ ಸಮಾಜಗಳ ಒಂದು ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ್ದು, 5 ದಶಲಕ್ಷಕ್ಕೆ ಸ್ವಲ್ಪವೇ ಹೆಚ್ಚಿನ ಒಂದು ಒಟ್ಟು ಜನಸಂಖ್ಯೆಯ ಪೈಕಿ ವಿಭಿನ್ನ ಬುಡಕಟ್ಟಿನ ಸುಮಾರು 700+ ಗುಂಪುಗಳು ಗುರುತಿಸಲ್ಪಟ್ಟಿವೆ. PNG ಸಂವಿಧಾನ ಮತ್ತು ಇತರ ಕಾಯಿದೆಗಳು ಸಾಂಪ್ರದಾಯಿಕವಾದ ಅಥವಾ ಸಂಪ್ರದಾಯ-ಆಧರಿತ ಆಚರಣೆಗಳನ್ನು ಮತ್ತು ಭೂಮಿ ಒಡೆತನವನ್ನು ಗುರುತಿಸುತ್ತವೆ ಹಾಗೂ ಆಧುನಿಕ ಸಂಸ್ಥಾನದ ವ್ಯಾಪ್ತಿಯೊಳಗೆ ಈ ಸಾಂಪ್ರದಾಯಿಕ ಸಮಾಜಗಳ ಕಾರ್ಯಸಾಧ್ಯತೆಯನ್ನು ಉತ್ತೇಜಿಸುವುದಕ್ಕಾಗಿ ರೂಪರೇಖೆಗಳನ್ನು ಸ್ಪಷ್ಟವಾಗಿ ಸೂಚಿಸುತ್ತವೆ. ಆದಾಗ್ಯೂ, ಭೂಮಿಯ ಬಳಕೆ ಮತ್ತು ಸಂಪನ್ಮೂಲದ ಹಕ್ಕುಗಳಿಗೆ ಸಂಬಂಧಿಸಿದ ಹಲವಾರು ಘರ್ಷಣೆಗಳು ಮತ್ತು ವಿವಾದಗಳು, ಸ್ಥಳೀಯ ಗುಂಪುಗಳು, ಸರ್ಕಾರ ಮತ್ತು ಸಾಂಸ್ಥಿಕ ಘಟಕಗಳ ನಡುವೆ ಈಗಲೂ ಮುಂದುವರಿಯುತ್ತಿವೆ.

ಹಕ್ಕುಗಳು, ವಿವಾದಾಂಶಗಳು ಮತ್ತು ಕಾಳಜಿಗಳು

[ಬದಲಾಯಿಸಿ]

ಸ್ಥಳೀಯ ಸಾಂಸ್ಕೃತಿಕ ಗುರುತು ಎಲ್ಲೆಲ್ಲಿ ಸಮರ್ಥಿಸಲ್ಪಟ್ಟಿವೆಯೋ, ಅಲ್ಲಿ ಸಾಮಾಜಿಕ ವಿವಾದಾಂಶಗಳು ಮತ್ತು ಕಾಳಜಿಗಳ ಒಂದು ನಿರ್ದಿಷ್ಟ ವರ್ಗವು ಧ್ವನಿಸಬಹುದಾಗಿರುತ್ತದೆ; ಇದು (ಕನಿಷ್ಟಪಕ್ಷ ಭಾಗಶಃ ಪ್ರಮಾಣದಲ್ಲಿ) ಅವರ ಸ್ಥಳೀಯ ಸ್ಥಾನಮಾನದಿಂದ ಹುಟ್ಟಿಕೊಂಡಿರಬಹುದು, ಅಥವಾ ಅವರ ಸ್ಥಳೀಯ ಸ್ಥಾನಮಾನದೊಂದಿಗೆ ಸಂಬಂಧಿಸಿದ ಒಂದು ನಿರ್ದಿಷ್ಟ ಆಯಾಮವನ್ನು ಹೊಂದಿರಬಹುದು. ಈ ಕಾಳಜಿಗಳು ಅನೇಕ ವೇಳೆ ಸಾಮಾನ್ಯವಾಗಿ ಸಮರ್ಥಿಸಲ್ಪಡುತ್ತವೆ ಅಥವಾ ಇತರ ಸಮಾಜಗಳ ಮೇಲೂ ಪ್ರಭಾವ ಬೀರುತ್ತವೆ; ಮತ್ತು ಇವನ್ನು ಸ್ಥಳೀಯ ಗುಂಪುಗಳು ಅವಶ್ಯವಾಗಿ ಅನನ್ಯವೆಂಬಂತೆ ಅನುಭವಿಸುವುದಿಲ್ಲ.

ಸ್ಥಳೀಯ ಜನರ ವೈವಿಧ್ಯತೆಯ ಹೊರತಾಗಿಯೂ ಗಮನಿಸಬಹುದಾದ ಒಂದು ಅಂಶವೆಂದರೆ, ಚಾಲ್ತಿಯಲ್ಲಿರುವ ಅಥವಾ ಆಕ್ರಮಿಸುತ್ತಿರುವ ಸಮಾಜದೊಂದಿಗೆ ವ್ಯವಹರಿಸುತ್ತಿರುವಾಗ ಅವರು ಸಾಮಾನ್ಯ ಸಮಸ್ಯೆಗಳು ಮತ್ತು ವಿವಾದಾಂಶಗಳನ್ನು ಹಂಚಿಕೊಳ್ಳುತ್ತಾರೆ. ಸ್ಥಳೀಯ ಜನರ ಸಂಸ್ಕೃತಿಗಳು ಕಳೆದುಹೋಗುತ್ತಿವೆ ಎಂಬುದರ ಕುರಿತಾಗಿ ಮತ್ತು ಸ್ಥಳೀಯ ಜನರು ತಮ್ಮ ಸುತ್ತುಮುತ್ತಲ ಸಮಾಜಗಳಿಂದ ಸ್ವೀಕರಿಸಲ್ಪಡುವಂತಾಗಲು ಅಥವಾ ಮೈಗೂಡಿಸಿಕೊಳ್ಳುವಂತಾಗಲು ಭೇದಭಾವ ಮತ್ತು ಒತ್ತಡಕ್ಕೆ ಒಳಗಾಗುತ್ತಾರೆ ಎಂಬ ಕಾಳಜಿಯನ್ನು ಅವರು ಸಾಮಾನ್ಯವಾಗಿ ಹೊಂದಿರುತ್ತಾರೆ. ಈ ಲೇಖನದ ಕೊನೆಯಲ್ಲಿ ಪಟ್ಟಿಮಾಡಲಾದ ಸರಿಸುಮಾರು ಎಲ್ಲಾ ಜನರ ಪ್ರದೇಶಗಳು ಮತ್ತು ಸಂಸ್ಕೃತಿಗಳು ಅಪಾಯದಲ್ಲಿ ಸಿಲುಕಿವೆ ಎಂಬ ವಾಸ್ತವಾಂಶದಿಂದ ಇದು ಸಮರ್ಥಿಸಲ್ಪಟ್ಟಿದೆ. ಸಾಖಾ ಮತ್ತು ಕೋಮಿ ಜನರು (ರಷ್ಯಾದ ಉತ್ತರ ಭಾಗದ ಸ್ಥಳೀಯ ಜನರ ಪೈಕಿಯ ಎರಡು ಪ್ರಭೇದಗಳು) ಇದಕ್ಕಿರುವ ಗಮನಾರ್ಹ ವಿನಾಯಿತಿಗಳಾಗಿದ್ದು, ಇವರು ರಷ್ಯಾದ ಸಂಸ್ಥಾನದ ವ್ಯಾಪ್ತಿಯೊಳಗೆ ತಮ್ಮದೇ ಆದ ಸ್ವಯಮಾಧಿಕಾರದ ಗಣರಾಜ್ಯಗಳ ನಿಯಂತ್ರಣವನ್ನು ಹೊಂದಿದ್ದಾರೆ; ಹಾಗೆಯೇ, ಇನ್ಯೂಯಿಟ್‌ ಎಸ್ಕಿಮೊಗಳು ನ್ಯೂನಾವಟ್‌‌‌ನ (ಇದು 1999ರಲ್ಲಿ ಸೃಷ್ಟಿಸಲ್ಪಟ್ಟಿತು) ಭೂಪ್ರದೇಶದ ಒಂದು ಬಹುಭಾಗವನ್ನು ರೂಪಿಸುತ್ತಾರೆ.

ಸಾಧ್ಯವಾದಷ್ಟು ಮಟ್ಟಿಗೆ ಸಾಂಸ್ಕೃತಿಕ ವೈವಿಧ್ಯತೆಯ ಒಂದು ವ್ಯಾಪಕ ಶ್ರೇಣಿಯನ್ನು ಸಂರಕ್ಷಿಸುವುದು ಮಾನವ ಜಾತಿಗೆ ಒಟ್ಟಾರೆಯಾಗಿ ಸಂಬಂಧಿಸಿದ ಒಂದು ಪ್ರಮುಖ ಆದ್ಯತೆಯಾಗಬೇಕು, ಮತ್ತು ಈ ಸಾಹಸದಲ್ಲಿ ಸ್ಥಳೀಯ ಸಂಸ್ಕೃತಿಗಳ ಸಂರಕ್ಷಣೆಯು ಪ್ರಧಾನವಾಗಿ ಹೊರಹೊಮ್ಮಬೇಕು ಎಂಬ ವಾದಗಳನ್ನೂ ಕೆಲವೊಮ್ಮೆ ಮಂಡಿಸಲಾಗುತ್ತದೆ.

ಇದಕ್ಕೆ ಸಂಬಂಧಿಸಿದ ಒಂದು ಉದಾಹರಣೆಯು 2002ರಲ್ಲಿ ಸಂಭವಿಸಿತು; ಈ ಅವಧಿಯಲ್ಲಿ ಬೋಟ್ಸ್‌ವಾನಾದ ಸರ್ಕಾರವು ಸಾನ್‌ ಎಂಬುದಾಗಿ ಕರೆಯಲ್ಪಡುತ್ತಿದ್ದ ಕಲಹರಿ ಬುಷ್‌ಮೆನ್‌ ಜನರನ್ನು ತನ್ನ ಪ್ರದೇಶಗಳಿಂದ ಹೊರಹಾಕಿತು; ಈ ಪ್ರದೇಶಗಳಲ್ಲಿ ಆ ಜನರು ಕನಿಷ್ಟಪಕ್ಷ ಇಪ್ಪತ್ತು ಸಾವಿರ ವರ್ಷಗಳಿಂದಲೂ ವಾಸವಾಗಿದ್ದರು ಎಂಬುದು ಗಮನಾರ್ಹ ಅಂಶವಾಗಿತ್ತು. ಬುಷ್‌ಮೆನ್‌ ಜನರನ್ನು "ಶಿಲಾಯುಗ ಜೀವಿಗಳು" [೩೯] ಎಂಬುದಾಗಿ ಅಧ್ಯಕ್ಷ ಫೆಸ್ಟಸ್‌ ಮೊಗಾಯ್‌ ವರ್ಣಿಸಿದ್ದಾನೆ; ಸ್ಥಳೀಯ ಸರ್ಕಾರಕ್ಕೆ ಸಂಬಂಧಿಸಿದ ಓರ್ವ ಸಚಿವೆಯಾದ ಮಾರ್ಗರೇಟ್‌ ನಶಾ, ಅವರ ಉಚ್ಚಾಟನೆಗೆ ಸಂಬಂಧಿಸಿದಂತೆ ಹೊರಬಿದ್ದ ಸಾರ್ವಜನಿಕ ಟೀಕೆಗಳನ್ನು, ಆನೆಗಳನ್ನು ಕೊಂದುಹಾಕುವಾಗ ಕೇಳಲ್ಪಡುವ ಟೀಕೆಗಳಿಗೆ ಹೋಲಿಸಿದಳು.[೪೦] 2006ರಲ್ಲಿ ಬೋಟ್ಸ್‌ವಾನಾದ ಉಚ್ಚ ನ್ಯಾಯಾಲಯವು ಒಂದು ತೀರ್ಪನ್ನು ನೀಡಿ, ಮಧ್ಯ ಕಲಹರಿಯ ಆಟದ ಮೀಸಲು ಪ್ರದೇಶದಲ್ಲಿನ ತಮ್ಮ ಭೂಪ್ರದೇಶಕ್ಕೆ ಮರಳಲು ಬುಷ್‌ಮೆನ್‌ ಜನರು ಒಂದು ಹಕ್ಕನ್ನು ಹೊಂದಿದ್ದಾರೆ ಎಂದು ತಿಳಿಸಿತು.[೪೧][೪೨]

ಮನ್ನಣೆ ಪಡೆದಿರುವ ಸಂಘಟನೆಗಳು

[ಬದಲಾಯಿಸಿ]
ಚಿತ್ರ:Indigenous rights organizations.PNG
ಸ್ಥಳೀಯ ಹಕ್ಕುಗಳಿಗಾಗಿ ಹೋರಾಡುವ ಸಂಘಟನೆಗಳು.

ಸ್ಥಳೀಯ ಜನರ ಸಂರಕ್ಷಣೆ ಅಥವಾ ಅಧ್ಯಯನಕ್ಕೆಂದು ನಾನಾಬಗೆಯ ಸಂಘಟನೆಗಳು ಸಮರ್ಪಿಸಿಕೊಂಡಿವೆ. ಇವುಗಳ ಪೈಕಿಯ ಹಲವಾರು ಸಂಘಟನೆಗಳು, ಸರ್ಕಾರಗಳು ಮತ್ತು ಅಂತರರಾಷ್ಟ್ರೀಯ ಸಂಘಟನೆಗಳ ಜೊತೆಗಿನ ಸ್ಥಳೀಯ ವಿವಾದಾಂಶಗಳ ಕುರಿತಾದ ಸಮಾಲೋಚನೆಗಳಲ್ಲಿ ಸ್ಥಳೀಯ ಜನರ ಗುಂಪುಗಳ ಪರವಾಗಿ ಓರ್ವ ಮಧ್ಯಸ್ಥಗಾರ ಅಥವಾ ಪ್ರತಿನಿಧಿಯಾಗಿ ವರ್ತಿಸಲು ಅಗತ್ಯವಾದ ಆಧಾರಗಳು ಅಥವಾ ರುಜುವಾತುಗಳನ್ನು ವ್ಯಾಪಕವಾಗಿ ಗುರುತಿಸಿವೆ. ಅಂಥ ಸಂಘಟನೆಗಳಲ್ಲಿ ಇವು ಸೇರಿವೆ:

  • ಆಫ್ರಿಕನ್‌ ಕಮಿಷನ್‌ ಆನ್‌ ಹ್ಯೂಮನ್‌ ಅಂಡ್‌ ಪೀಪಲ್‌ಸ್‌' ರೈಟ್ಸ್‌ (ACHPR)
  • ಸೆಂಟರ್‌ ಫಾರ್‌ ವರ್ಲ್ಡ್‌ ಇಂಡಿಜಿನಸ್‌ ಸ್ಟಡೀಸ್‌
  • ಕಲ್ಚರಲ್‌ ಸರ್ವೈವಲ್‌
  • ಫ್ರೆಂಡ್ಸ್‌ ಆಫ್‌ ಪೀಪಲ್ಸ್‌ ಕ್ಲೋಸ್‌ ಟು ನೇಚರ್‌ (fPcN)
  • ಇನ್‌ಕಮಿಂಡಿಯೋಸ್‌ ಸ್ವಿಜರ್ಲೆಂಡ್‌
  • ಇಂಡಿಜಿನಸ್‌ ಡೈಲಾಗ್ಸ್‌
  • ಇಂಡಿಜಿನಸ್‌ ಪೀಪಲ್ಸ್‌ ಆಫ್‌ ಆಫ್ರಿಕಾ ಕೋ-ಆರ್ಡಿನೇಟಿಂಗ್‌ ಕಮಿಟಿ (IPACC)
  • ಇಂಟರ್‌ನ್ಯಾಷನಲ್‌ ವರ್ಕ್‌ ಗ್ರೂಪ್‌ ಫಾರ್‌ ಇಂಡಿಜಿನಸ್‌ ಅಫೇರ್ಸ್‌ (IWGIA)
  • ಸರ್ವೈವಲ್ ಇಂಟರ್‌ನ್ಯಾಷನಲ್
  • ಸೊಸೈಟಿ ಫಾರ್‌ ಥ್ರೆಟನ್ಡ್‌ ಪೀಪಲ್ಸ್‌ (GfbV)

ವಿಶ್ವದ ಸ್ಥಳೀಯ ಜನರ ಅಂತರರಾಷ್ಟ್ರೀಯ ದಿನ

[ಬದಲಾಯಿಸಿ]

ವಿಶ್ವದ ಸ್ಥಳೀಯ ಜನರ ಅಂತರರಾಷ್ಟ್ರೀಯ ದಿನವು ಆಗಸ್ಟ್‌ 9ರಂದು ಬರುತ್ತದೆ. ಮಾನವ ಹಕ್ಕುಗಳ ಕುರಿತಾದ ಆಯೋಗದ, ಭೇದಭಾವವನ್ನು ತಡೆಗಟ್ಟುವಿಕೆಯ ಹಾಗೂ ಅಲ್ಪಸಂಖ್ಯಾತರ ಸಂರಕ್ಷಣೆಯ ಕುರಿತಾದ ಉಪಆಯೋಗದ ಸ್ಥಳೀಯ ಸಮುದಾಯಗಳ ವಿಶ್ವಸಂಸ್ಥೆಯ ಕಾರ್ಯನಿರತ ಗುಂಪಿನ ಮೊದಲ ಸಭೆಯು 1982ರಲ್ಲಿ ನಡೆದ ದಿನಾಂಕವು ಇದೇ ಆಗಿರುವುದರಿಂದ, ಸದರಿ ದಿನಾಚರಣೆಗೆ ಇದೇ ಪ್ರಶಸ್ತ ದಿನವೆಂದು ಆಯ್ಕೆಮಾಡಲಾಗಿದೆ.

ವಿಶ್ವದ ಸ್ಥಳೀಯ ಜನರ ಅಂತರರಾಷ್ಟ್ರೀಯ ದಶಕದ ಸಂದರ್ಭದಲ್ಲಿ ಪ್ರತಿ ವರ್ಷದ ಆಗಸ್ಟ್‌ 9ರಂದು ವಿಶ್ವದ ಸ್ಥಳೀಯ ಜನರ ಅಂತರರಾಷ್ಟ್ರೀಯ ದಿನವನ್ನು ಆಚರಿಸಬೇಕೆಂದು UN ಸಾರ್ವತ್ರಿಕ ಸಭೆಯು 1994ರ ಡಿಸೆಂಬರ್‌ 23ರಂದು ತೀರ್ಮಾನಿಸಿತು (ನಿರ್ಣಯ 49/214). ನಂತರದಲ್ಲಿ 2004ರ ಡಿಸೆಂಬರ್‌ 20ರಂದು ಸಭೆಯು ತೀರ್ಮಾನವೊಂದನ್ನು ಹೊರಡಿಸಿ, ವಿಶ್ವದ ಸ್ಥಳೀಯ ಜನರ ಎರಡನೇ ಅಂತರರಾಷ್ಟ್ರೀಯ ದಶಕದ ಸಂದರ್ಭದಲ್ಲಿ (2005–2014) ಸ್ಥಳೀಯ ಜನರ ಅಂತರರಾಷ್ಟ್ರೀಯ ದಿನದ ಆಚರಣೆಯನ್ನು ಮುಂದುವರಿಸಬೇಕು ಎಂಬುದಾಗಿ ಘೋಷಿಸಿತು (ನಿರ್ಣಯ 59/174).[೪೩]

ಜ್ಞಾನ ಮತ್ತು ಸಂಸ್ಕೃತಿ

[ಬದಲಾಯಿಸಿ]

ಸ್ಥಳೀಯ ಸಂಸ್ಕೃತಿಗಳು, ಹೊರಾಂಗಣ ಶಿಕ್ಷಣ ಮತ್ತು ಪರಿಸರೀಯ ಅರಿವಿನ ವಿಷಯಗಳು ಈಗ ಅಪವಾದಾತ್ಮಕವಾಗಿ ಸಂಗತವಾಗಿದ್ದು, ನಾವೀಗ ಈ ಆರನೇ ಜಾಗತಿಕ ಜಾತಿ ಅಳಿವಿನ (ಹಾಲಸೀನ್‌ ಕಲ್ಪದ ಅಳಿವು) ಅವಧಿಯಲ್ಲಿದ್ದೇವೆ. ಒಂದು ನಿರ್ದಿಷ್ಟ ಪ್ರದೇಶ ಅಥವಾ ದೇಶದಲ್ಲಿ ಅಸ್ತಿತ್ವದಲ್ಲಿರುವ ಮತ್ತು ಸ್ವಾಭಾವಿಕವಾಗಿ ಬೆಳೆಯುವ ಸಂಸ್ಕೃತಿಗಳಿಗೆ ಸ್ಥಳೀಯ ಎಂಬ ಶಬ್ದವು ಉಲ್ಲೇಖಿಸಲ್ಪಡುತ್ತದೆ ಹಾಗೂ ಇಂಥ ಸನ್ನಿವೇಶಗಳಲ್ಲಿರುವವರನ್ನು ಅನೇಕವೇಳೆ ಸ್ಥಳೀಕರು ಎಂದು ಕರೆಯಲಾಗುತ್ತದೆ. ಐತಿಹಾಸಿಕವಾಗಿ ಹೇಳುವುದಾದರೆ, ಸ್ಥಳೀಯ ಸಂಸ್ಕೃತಿಗಳು ಅನೇಕ ಪೀಳಿಗೆಗಳವರೆಗೆ ಒಂದು ನಿರ್ದಿಷ್ಟ ಜೈವಿಕ ಪ್ರದೇಶದಲ್ಲಿ ನೆಲೆಯೂರಿರುತ್ತವೆ ಮತ್ತು ಅಲ್ಲಿ ಸಮರ್ಥನೀಯವಾಗಿ ಹೇಗೆ ಜೀವಿಸಬೇಕು ಎಂಬುದರ ಕುರಿತು ಸಾಮಾನ್ಯವಾಗಿ ಕಲಿತಿರುತ್ತವೆ. ಈ ಗುಣಮಟ್ಟವು, ನಿಜವಾದ ಅರ್ಥದಲ್ಲಿ ಸ್ಥಳೀಯವಾಗಿರುವ ಸಂಸ್ಕೃತಿಗಳನ್ನು ವರ್ತಮಾನದಲ್ಲಿನ ಒಂದು ಅನನ್ಯ ಸ್ಥಾನದಲ್ಲಿ ಅನೇಕ ವೇಳೆ ಇರಿಸುತ್ತವೆ; ತಮ್ಮ ಜೈವಿಕ ಪ್ರದೇಶದ ಪರಸ್ಪರ ಸಂಬಂಧಗಳು, ಅಗತ್ಯಗಳು, ಪ್ರಯೋಜನಗಳು ಮತ್ತು ಅಪಾಯಗಳ ಕುರಿತಾಗಿ ಜ್ಞಾನವನ್ನು ಸಂಪಾದಿಸಿಕೊಳ್ಳಲಿ ಎಂಬುದು ಇದರ ಹಿಂದಿನ ಉದ್ದೇಶವಾಗಿರುತ್ತದೆ. ಯಾವ ಸ್ಥಳೀಕರ ಸಂಸ್ಕೃತಿಗಳು ಸವೆದುಹೋಗಿವೆಯೋ ಅಥವಾ ಯಾರು ಪಲ್ಲಟಗೊಳಿಸಲ್ಪಟ್ಟಿದ್ದಾರೋ ಅಂಥ ಸ್ಥಳೀಕರಿಗೆ ಸಂಬಂಧಿಸಿ ಇದು ಎಲ್ಲ ಸಮಯದಲ್ಲೂ ಸತ್ಯವಾಗಿ ಪರಿಣಮಿಸುವುದಿಲ್ಲ.

ಸಮಾಜದೊಂದಿಗೆ ಸಂಬಂಧಿಸಿರುವ ಸ್ವಾಭಾವಿಕ ಪರಿಸರದ ಸಂಪನ್ಮೂಲಗಳಿಗೆ ನಿರ್ದಿಷ್ಟವಾಗಿ ಸಂಬಂಧವನ್ನು ಹೊಂದಿರುವ ವಿಶೇಷಜ್ಞತೆಯ ಸ್ಥಳೀಯ ಜ್ಞಾನದ ಸಂರಕ್ಷಣೆ ಮತ್ತು ಪರಿಶೀಲನೆಯು, ಸ್ಥಳೀಯರು ಮತ್ತು ಸಮಾಜಗಳೆರಡಕ್ಕೂ ಸಂಬಂಧಿಸಿದ ಅಗತ್ಯದ-ಗುರಿಯಾಗಿದ್ದು, ಇವರು ತನ್ಮೂಲಕ ಹೊಸ ಸಂಪನ್ಮೂಲಗಳು ಮತ್ತು ಪ್ರಯೋಜನಗಳನ್ನು ಗುರುತಿಸಲು ಬಯಸುತ್ತಾರೆ (ಉದಾಹರಣೆ: ಅಮೆಜಾನ್‌ ಮಳೆ ಕಾಡುಗಳಲ್ಲಿನ ಸಸ್ಯವರ್ಗದಿಂದ ಪಡೆಯಬಹುದಾದ ಪ್ರಯೋಜನಕಾರಿ ಜೈವಿಕ ಸಾರಗಳ ಕುರಿತಾದ ಸಂಶೋಧನೆಗೆ ಸ್ಥಾಪಿಸಲ್ಪಟ್ಟ ಪಾಲುದಾರಿಕೆಗಳು).

ಕೆಲವೊಂದು ಜನರಿಗೆ ಸಂಬಂಧಿಸಿದಂತೆ ಹೇಳುವುದಾದರೆ (ಉದಾಹರಣೆಗೆ, ಭಾರತ, ಬ್ರೆಜಿಲ್‌, ಮತ್ತು ಮಲೇಷಿಯಾಗಳಿಗೆ ಸೇರಿದ ಸ್ಥಳೀಯ ಸಮುದಾಯಗಳು ಮತ್ತು GRAIN ಮತ್ತು ಥರ್ಡ್‌ ವರ್ಲ್ಡ್‌ ನೆಟ್‌ವರ್ಕ್‌‌‌‌ನಂಥ ಕೆಲವೊಂದು NGOಗಳು), ಸ್ಥಳೀಯ ಜನರು ಅನೇಕ ವೇಳೆ ಜೈವಿಕ ಕಳ್ಳತನದ ಬಲಿಪಶುಗಳಾಗಿದ್ದಾರೆ; ಅಂದರೆ, ಅವರ ಸ್ವಾಭಾವಿಕ ಸಂಪನ್ಮೂಲಗಳ[ಸೂಕ್ತ ಉಲ್ಲೇಖನ ಬೇಕು] ಅನಧಿಕೃತ ಬಳಕೆಗೆ, ಈ ಜೈವಿಕ ಸಂಪನ್ಮೂಲಗಳ ಕುರಿತಾದ ಅವರ ಸಾಂಪ್ರದಾಯಿಕ ಜ್ಞಾನದ ಅನಧಿಕೃತ ಬಳಕೆಗೆ, ಅವರ ಮತ್ತು ಓರ್ವ ಏಕಸ್ವಾಮ್ಯದ ಹಕ್ಕುಪತ್ರವನ್ನು ಹೊಂದಿರುವವನ ನಡುವಿನ ಪ್ರಯೋಜನಗಳ ಅಸಮಾನ ಹಂಚಿಕೆಯ ಅನಧಿಕೃತ ಬಳಕೆಗೆ ಸ್ಥಳೀಯ ಜನರು ಅನೇಕ ವೇಳೆ ಈಡಾಗಿದ್ದಾರೆ.

ದೃಷ್ಟಿಕೋನಗಳು

[ಬದಲಾಯಿಸಿ]

ಭಿನ್ನವಾಗಿರುವ ದೃಷ್ಟಿಕೋನಗಳು ಮತ್ತು ವರ್ತನೆಗಳ ಒಂದು ಶ್ರೇಣಿಯು, ಸ್ಥಳೀಯ ಸಮುದಾಯಗಳು ಮತ್ತು "ಸ್ಥಳೀಯರಲ್ಲದ" ಸಮುದಾಯಗಳ ನಡುವಿನ ಸಂಪರ್ಕದ ಅನುಭವ ಮತ್ತು ಇತಿಹಾಸದಿಂದ ಹುಟ್ಟಿಕೊಂಡಿವೆ. ಈ ದೃಷ್ಟಿಕೋನಗಳು ಬೆಳೆದುಬಂದಿರುವ ಸಾಂಸ್ಕೃತಿಕ, ಪ್ರಾದೇಶಿಕ ಮತ್ತು ಐತಿಹಾಸಿಕ ಸಂದರ್ಭಗಳು ಸಂಕೀರ್ಣವಾಗಿವೆ ಹಾಗೂ ಯಾವುದೇ ಒಂದು ನಿರ್ದಿಷ್ಟ ಸಮಾಜದಲ್ಲಿ ಅನೇಕ ಸ್ಪರ್ಧಾತ್ಮಕ ದೃಷ್ಟಿಕೋನಗಳು ಏಕಕಾಲದಲ್ಲಿ ಅಸ್ತಿತ್ವದಲ್ಲಿರುತ್ತವೆ; ಆದಾಗ್ಯೂ ವಿಭಿನ್ನ-ಸಂಸ್ಕೃತಿಗಳ ಒಡ್ಡುವಿಕೆ ಮತ್ತು ಆಂತರಿಕ ಸಾಮಾಜಿಕ ಬದಲಾವಣೆಯ ವ್ಯಾಪ್ತಿಯನ್ನು ಅವಲಂಬಿಸಿ ಮಹತ್ತರವಾದ ಅಥವಾ ಕಡಿಮೆಯಿರುವ ಬಲದೊಂದಿಗೆ ಅವು ಪ್ರಸಾರವಾಗುತ್ತವೆ. ಸಂಬಂಧದ ಎರಡೂ ಪಾರ್ಶ್ವಗಳಿಂದ ಈ ದೃಷ್ಟಿಕೋನಗಳನ್ನು ಗಮನಿಸಬಹುದು.

ಸ್ಥಳೀಯ ದೃಷ್ಟಿಕೋನಗಳು

[ಬದಲಾಯಿಸಿ]

ಸ್ಥಳೀಯ ಜನರು ತಮ್ಮ ಪರಮಾಧಿಕಾರ, ಪರಿಸರ, ಮತ್ತು ಸ್ವಾಭಾವಿಕ ಸಂಪನ್ಮೂಲಗಳಿಗೆ ತಮಗಿರುವ ಪ್ರವೇಶ ಲಭ್ಯತೆಗೆ ಇರುವ ಅಪಾಯಗಳನ್ನು ಎದುರಿಸುತ್ತಲೇ ಹೋಗುತ್ತಾರೆ. ಹುಲುಸಾದ ಮಳೆ ಕಾಡುಗಳ ನಾಶವು ಇದಕ್ಕೆ ಸಂಬಂಧಿಸಿದ ಉದಾಹರಣೆಗಳಲ್ಲಿ ಸೇರಿದ್ದು, ಇಂಥ ಸಂದರ್ಭಗಳಲ್ಲಿ ಅನೇಕ ಸ್ಥಳೀಕ ಬುಡಕಟ್ಟುಗಳ ಕನಿಷ್ಟ ಮಟ್ಟದ ಜೀವನಶೈಲಿಗಳು ಅಪಾಯದಂಚಿಗೆ ಸಿಲುಕುತ್ತವೆ. ಸಮೀಕೃತವಾಗಬಲ್ಲ ವಸಾಹತಿನ ಕಾರ್ಯನೀತಿಗಳು ಮೂಲನಿವಾಸಿ ಶಿಶು ಸಂರಕ್ಷಣೆಗೆ ಸಂಬಂಧಿಸಿದ ಚಾಲ್ತಿಯಲ್ಲಿರುವ ವಿವಾದಾಂಶಗಳಿಗೆ ಕಾರಣವಾಗಿವೆ.

ಸ್ಥಳೀಯವಲ್ಲದ ದೃಷ್ಟಿಕೋನಗಳು

[ಬದಲಾಯಿಸಿ]

ಆದಿಮಾನವರು , ಕಾಡುಮನುಷ್ಯರು , ಅಥವಾ ಅನಾಗರಿಕರು ಎಂಬ ಹೆಸರುಗಳಿಂದ ಸ್ಥಳೀಯ ಜನರು ಸೂಚಿಸಲ್ಪಟ್ಟಿದ್ದಾರೆ. ಐರೋಪ್ಯ ವಸಾಹತಿನ ವಿಸ್ತರಣೆಯ ಉತ್ತುಂಗದ ಕಾಲದಲ್ಲಿ ಈ ಶಬ್ದಗಳು ಸಾಮಾನ್ಯವಾಗಿದ್ದವಾದರೂ, ವರ್ತಮಾನ ಕಾಲದಲ್ಲಿ ಈಗಲೂ ಮುಂದುವರಿಯುತ್ತಿವೆ.[೪೪] 17ನೇ ಶತಮಾನದ ಅವಧಿಯಲ್ಲಿ, ಸ್ಥಳೀಯ ಜನರಿಗೆ "ಅನಾಗರಿಕರು" ಎಂಬ ಹಣೆಪಟ್ಟಿಯನ್ನು ಸಾಮಾನ್ಯವಾಗಿ ಅಂಟಿಸಲಾಗಿತ್ತು. ಕಲಾತ್ಮಕ ಅನ್ವೇಷಣೆಗಳಲ್ಲಿ ಶಾಸ್ತ್ರೀಯ ಪ್ರಾಚೀನತೆಯ ಸೃಜನಶೀಲ ಅಂಶಗಳನ್ನು ಮರಳಿ ತರುವಲ್ಲಿ ಒಂದು ಏರಿಳಿತವು ಇದ್ದ ಸಂದರ್ಭದಲ್ಲಿಯೇ, ಅನ್ಯದ್ವೇಷದ ಪರಿಕಲ್ಪನೆಗಳನ್ನು ಕಕ್ಕುವಂಥದ್ದರ ಸೃಜನಶೀಲವಲ್ಲದ ಅಂಶಗಳೂ ಆ ಅವಧಿಗೆ ಸೇರಿದ್ದವು. ಥಾಮಸ್‌ ಹೋಬ್ಸ್‌‌‌ನಂಥ ಕೆಲವೊಂದು ದಾರ್ಶನಿಕರು ಸ್ಥಳೀಯ ಜನರನ್ನು ಕೇವಲವಾಗಿ 'ಕಾಡುಮನುಷ್ಯರಾಗಿ' ಪರಿಗಣಿಸಿದರೆ, ಇನ್ನು ಕೆಲವರು ಅವರನ್ನು "ಗಣ್ಯ ಕಾಡುಮನುಷ್ಯರಾಗಿ" ಪರಿಗಣಿಸುವ ಇಂಗಿತವನ್ನು ವ್ಯಕ್ತಪಡಿಸಿದರು. ಹೋಬ್ಸ್‌ನ ಅಭಿಪ್ರಾಯಕ್ಕೆ ನಿಕಟವಾಗಿದ್ದ ಕೆಲವರು, ಸ್ಥಳೀಯರನ್ನು ನಾಗರಿಕವಾಗಿಸುವ ಮತ್ತು ಆಧುನಿಕೀಕರಿಸುವ ಒಂದು ಕರ್ತವ್ಯವು ತಮ್ಮ ಮೇಲಿದೆ ಎಂಬುದನ್ನು ಸ್ವತಃ ನಂಬುವುದರ ಕಡೆಗೆ ಒಲವು ತೋರಿಸಿದರು. ಮಾನವಶಾಸ್ತ್ರಜ್ಞರು, ಅದರಲ್ಲೂ ವಿಶೇಷವಾಗಿ ಯುರೋಪ್‌ಗೆ ಸೇರಿದವರು ಈ ಶಬ್ದಗಳನ್ನು ಎಲ್ಲಾ ಬುಡಕಟ್ಟಿನ ಸಂಸ್ಕೃತಿಗಳಿಗೆ ಅನ್ವಯಿಸಲು ಬಳಸಿಕೊಂಡರಾದರೂ, ಇದು ಅಲ್ಪವಾಗಿಸುವ ರೀತಿಯಲ್ಲಿದೆ ಎಂಬ ಕಾರಣಕ್ಕೆ ಅಸಮ್ಮತಿಯನ್ನು ಸ್ವೀಕರಿಸಿತು ಮತ್ತು, ಮಾನವಶಾಸ್ತ್ರಜ್ಞರ ಅನುಸಾರ ಇದು ಕರಾರುವಾಕ್ಕಾಗಿಲ್ಲದ ಪರಿಭಾಷೆ ಎನಿಸಿಕೊಂಡಿತು (ನೋಡಿ: ಬುಡಕಟ್ಟು, ಸಾಂಸ್ಕೃತಿಕ ವಿಕಸನ). ಸ್ಥಳೀಯ ಜನರನ್ನು 'ಆದಿಮಾನವರು' ಅಥವಾ 'ಕಾಡುಮನುಷ್ಯರು' ಎಂಬುದಾಗಿ ಬಿಂಬಿಸುವ ಮಾಧ್ಯಮಗಳ ನಿರೂಪಣೆಯನ್ನು ಕೊನೆಗಾಣಿಸಲು ಸರ್ವೈವಲ್‌ ಇಂಟರ್‌ನ್ಯಾಷನಲ್‌ ಎಂಬ ಸಂಸ್ಥೆಯು ಒಂದು ಪ್ರಚಾರಾಂದೋಲನವನ್ನು ನಡೆಸುತ್ತಿದೆ.[೪೫] ‌ಫ್ರೆಂಡ್ಸ್‌ ಆಫ್‌ ಪೀಪಲ್ಸ್‌ ಕ್ಲೋಸ್‌ ಟು ನೇಚರ್ ಎಂಬ ಸಂಸ್ಥೆಯು, ಸ್ಥಳೀಯ ಸಂಸ್ಕೃತಿಯು ಕೆಳದರ್ಜೆಗೆ ಸೇರಿಲ್ಲ ಎಂಬ ರೀತಿಯಲ್ಲಿ ಅದನ್ನು ಗೌರವಿಸಬೇಕು ಎಂಬುದನ್ನು ಪರಿಗಣಿಸುವುದಷ್ಟೇ ಅಲ್ಲದೇ, ಅವರ ಜೀವನಮಾರ್ಗವನ್ನು ಸಮರ್ಥನೀಯತೆಯ ಒಂದು ಪಾಠವಾಗಿ ಹಾಗೂ ಅಪಾಯ ಉದ್ಭವಿಸಲು ಕಾರಣವಾಗುವ "ಭ್ರಷ್ಟಗೊಂಡ" ಪಶ್ಚಿಮದ ವಿಶ್ವದೊಳಗಿನ ಹೋರಾಟದ ಒಂದು ಭಾಗವಾಗಿ ನೋಡುತ್ತದೆ.[೪೬]

ಆದಾಗ್ಯೂ, Iನೇ ಜಾಗತಿಕ ಸಮರದ ನಂತರ, ಅನೇಕ ಯುರೋಪಿಯನ್ನರು ನಾಗರಿಕತೆಯ ಮೌಲ್ಯವನ್ನು ಸಂದೇಹಿಸತೊಡಗಿದರು. ಅದೇ ವೇಳೆಗೆ, ವಸಾಹತು-ವಿರೋಧಿ ಆಂದೋಲನದ ಪ್ರತಿಪಾದಕರು ಹಾಗೂ ಸ್ಥಳೀಯ ಜನರ ಸಮರ್ಥಕರು ತಮ್ಮ ವಾದವನ್ನು ಮಂಡಿಸುತ್ತಾ, "ಸುಸಂಸ್ಕೃತ" ಮತ್ತು "ಕಾಡುಮನುಷ್ಯ" ಎಂಬಂಥ ಪದಗಳು ವಸಾಹತು ನೀತಿಯ ಉತ್ಪನ್ನಗಳು ಮತ್ತು ಸಾಧನಗಳಾಗಿವೆ ಎಂದು ತಿಳಿಸಿದರು ಮತ್ತು ಸ್ವತಃ ವಸಾಹತು ನೀತಿಯೇ ಅನಾಗರಿಕವಾದ ರೀತಿಯಲ್ಲಿ ವಿಧ್ವಂಸಕವಾಗಿತ್ತು ಎಂದು ವಾದಿಸಿರು.

20ನೇ ಶತಮಾನದ ಮಧ್ಯಭಾಗದಲ್ಲಿ, ಯುರೋಪಿಯನ್ನರ ವರ್ತನೆಗಳು ತಮ್ಮ ಅಭಿಪ್ರಾಯವನ್ನು ಬದಲಿಸಲು ಶುರುಮಾಡಿದವು; ಸ್ಥಳೀಯ ಮತ್ತು ಬುಡಕಟ್ಟಿನ ಜನರು ತಮ್ಮ ಪ್ರಾಚೀನ ಸಂಸ್ಕೃತಿಗಳಿಗೆ ಮತ್ತು ತಮ್ಮ ಪೂರ್ವಜರ ಪ್ರದೇಶಗಳಿಗೆ ಆಗಬೇಕಿರುವುದೇನು ಎಂಬುದನ್ನು ಸ್ವತಃ ತೀರ್ಮಾನಿಸುವುದಕ್ಕೆ ಸಂಬಂಧಿಸಿದ ಹಕ್ಕುಗಳನ್ನು ಹೊಂದಬೇಕು ಎಂಬುದೇ ಈ ಬದಲಾದ ಅಭಿಪ್ರಾಯವಾಗಿತ್ತು.

ಸ್ಥಳೀಯ ಜನರ ಪರಿಕಲ್ಪನೆಯ ಕುರಿತಾದ ಹಲವಾರು ಟೀಕೆಗಳು ಹೀಗಿವೆ:

  • ದಾಖಲಿತ ಇತಿಹಾಸಕ್ಕೂ ಮುಂಚಿತವಾಗಿ ಜನರು ಆಕ್ರಮಿಸಿಕೊಂಡಿದ್ದರು ಅಥವಾ ಪರಸ್ಪರರ ಪ್ರದೇಶಗಳಲ್ಲಿ ವಸಾಹತು ಸ್ಥಾಪಿಸಿದ್ದರು; ಆದ್ದರಿಂದ ಸ್ಥಳೀಯ ಜನರ ಮತ್ತು ಸ್ಥಳೀಯರಲ್ಲದ ಜನರ ಗುಂಪಾಗಿ ಮಾಡುವ ವಿಭಜನೆಯು ತೀರ್ಮಾನಕ್ಕೆ ಅರ್ಹವಾದ ಒಂದು ವಿಷಯವಾಗಿದೆ. ಇತ್ತೀಚಿನ ಶತಮಾನಗಳಲ್ಲೂ ಸಹ ಅಲ್ಲಿ ಒಂದಷ್ಟು ತೊಡಕುಗಳು ಕಂಡುಬರುತ್ತವೆ: ಝುಲು ಜನರು ದಕ್ಷಿಣ ಆಫ್ರಿಕಾಕ್ಕೆ ಸ್ಥಳೀಯರೇ? ಎಂಬ ಪ್ರಶ್ನೆಯು ಇದಕ್ಕೊಂದು ಉದಾಹರಣೆಗೆಯಾಗಿದೆ.
  • ಯಥೇಚ್ಛವಾದ ಸ್ಥಳೀಯ ಜನರು ಒಂದೇ ಗುಂಫಿನಲ್ಲಿ ಗುರುತಿಸಲ್ಪಡುವುದರಿಂದಾಗಿ ಅವರ ನಡುವಿನ ವೈವಿಧ್ಯತೆಯ ಬೃಹತ್‌ ಪ್ರಮಾಣಗಳು ಉಪೇಕ್ಷೆಗೆ ಒಳಗಾಗುತ್ತವೆ; ಅದೇ ವೇಳೆಗೆ ಅವರ ಮೇಲೆ ಒಂದು ಏಕರೂಪದ ಗುರುತನ್ನು ಅವು ವಿಧಿಸುತ್ತವೆ, ಇದು ಐತಿಹಾಸಿಕವಾಗಿ ನಿಖರವಾದದ್ದಾಗಿರದೇ ಇರಬಹುದು.

ಇವನ್ನೂ ಗಮನಿಸಿ

[ಬದಲಾಯಿಸಿ]
  • ಸಮಷ್ಟಿಯ ಹಕ್ಕುಗಳು
  • ವಸಾಹತು ನೀತಿ
  • ಜನಾಂಗೀಯ ಅಲ್ಪಸಂಖ್ಯಾತರು
  • ಮಾನವ ಹಕ್ಕುಗಳು
  • ದಿ ಇಮೇಜ್‌ ಎಕ್ಸ್‌ಪೆಡಿಷನ್‌
  • ಸ್ಥಳೀಯ ಬೌದ್ಧಿಕ ಸ್ವತ್ತು
  • ಅಗ್ರಾಹ್ಯ ಸಾಂಸ್ಕೃತಿಕ ಪರಂಪರೆ
  • ಇಸುಮಾ
  • ಸಂಪರ್ಕರಹಿತ ಜನರು
  • ಸ್ಥಳೀಯ ವಿವಾದಾಂಶಗಳ ಕುರಿತಾದ ವಿಶ್ವಸಂಸ್ಥೆ ಕಾಯಂ ವೇದಿಕೆ
  • ಪ್ರತಿನಿಧಿಸಲ್ಪಡದ ರಾಷ್ಟ್ರಗಳು ಮತ್ತು ಜನರ ಸಂಘಟನೆ
  • ಜನಾಂಗೀಯ ಗುಂಪುಗಳ ಪಟ್ಟಿ
  • ಸ್ಥಳೀಯ ಜನರ ಹವಾಮಾನ ಬದಲಾವಣೆಯ ಮೌಲ್ಯನಿರ್ಣಯದ ಉಪಕ್ರಮ

ಉಲ್ಲೇಖಗಳು

[ಬದಲಾಯಿಸಿ]
  1. "ಸ್ಥಳೀಯ ಜನರು ವಾಸಿಸುವ ನಾನಾಬಗೆಯ ಮತ್ತು ಬದಲಾಗುವ ಸಂದರ್ಭಗಳ ಕಾರಣದಿಂದಾಗಿ ಮತ್ತು “ಸ್ಥಳೀಯ ಜನರು” ಎಂಬುದಕ್ಕೆ ಸಾರ್ವತ್ರಿಕವಾಗಿ ಸ್ವೀಕರಿಸಲ್ಪಟ್ಟ ಅರ್ಥವಿವರಣೆಯು ಇಲ್ಲದ ಕಾರಣದಿಂದಾಗಿ, ಈ ಕಾರ್ಯನೀತಿಯು ಸದರಿ ಶಬ್ದವನ್ನು ವ್ಯಾಖ್ಯಾನಿಸುವುದಿಲ್ಲ. ವಿಭಿನ್ನ ದೇಶಗಳಲ್ಲಿ ಸ್ಥಳೀಯ ಜನರನ್ನು ವಿಭಿನ್ನ ಶಬ್ದಗಳಿಂದ ಉಲ್ಲೇಖಿಸಲಾಗುತ್ತದೆ. ಅದರ ನಿದರ್ಶನಗಳು ಹೀಗಿವೆ: "ಸ್ಥಳೀಯ ಜನಾಂಗೀಯ ಅಲ್ಪಸಂಖ್ಯಾತರು," "ಮೂಲನಿವಾಸಿಗಳು," "ಗುಡ್ಡದ ಬುಡಕಟ್ಟುಗಳು," "ಅಲ್ಪಸಂಖ್ಯಾತ ಜನಾಂಗಗಳು," "ಅನುಸೂಚಿತ ಬುಡಕಟ್ಟುಗಳು, (ಭಾರತ)" ಅಥವಾ "ಬುಡಕಟ್ಟಿನ ಗುಂಪುಗಳು."[೧]
  2. "World Directory of Minorities and Indigenous Peoples - Philippines : Overview, 2007", UNHCR |ರೆಫ್‌ವರ್ಲ್ಡ್‌.
  3. [8] [9]
  4. ೪.೦ ೪.೧ ೪.೨ ೪.೩ ೪.೪ "United NationsDeclaration on the Rights of Indigenous Peoples (A/RES/61/295)" (PDF). United Nations. UNPFII. Retrieved 2009-10-23.
  5. ೫.೦ ೫.೧ ೫.೨ "Frequently Asked Questions: Declaration on the Rights of Indigenous Peoples" (PDF). United Nations Permanent Forum on Indigenous Issues. Retrieved 2009-10-23.
  6. WGIP (2001). "Indigenous Peoples and the United Nations System". Office of the High Commissioner for Human Rights, United Nations Office at Geneva. Archived from the original on 2009-03-27. Retrieved 2011-03-22. {{cite journal}}: Cite journal requires |journal= (help)
  7. "Indigenous issues". International Work Group on Indigenous Affairs. Retrieved September 5, 2005.
  8. ಐಬಿಡ್‌.
  9. ಆಚಾರ್ಯ, ದೀಪಕ್ ಮತ್ತು ಶ್ರೀವಾಸ್ತವ ಅಂಶು (2008): ಇಂಡಿಜಿನಸ್ ಹರ್ಬಲ್ ಮೆಡಿಸಿನ್ಸ್: ಟ್ರೈಬಲ್ ಫಾರ್ಮುಲೇಶನ್ಸ್‌ ಆ‍ಯ್‌೦ಡ್ ಟ್ರೆಡಿಷನಲ್ ಹರ್ಬಲ್ ಪ್ರ್ಯಾಕ್ಟೀಸಸ್‌, ಆವಿಷ್ಕಾರ್‌ ಪಬ್ಲಿಷರ್ಸ್ ಡಿಸ್ಟ್ರಿಬ್ಯೂಟರ್ಸ್, ಜೈಪುರ- ಭಾರತ. ISBN 978-81-7910-252-7. ಪುಟಗಳು 440.
  10. ಸ್ಯಾಂಡರ್ಸ್‌, ಡೋಗ್ಲಸ್‌. 1999. ಇಂಡಿಜಿನಸ್‌ ಪೀಪಲ್ಸ್‌: ಇಷ್ಯೂಸ್‌ ಆಫ್‌ ಡೆಫನಿಷನ್‌. ಇಂಟರ್‌ನ್ಯಾಷನಲ್‌ ಜರ್ನಲ್‌ ಆಫ್‌ ಕಲ್ಚರಲ್‌ ಪ್ರಾಪರ್ಟಿ. ಸಂ. 8 ಪುಟಗಳು 4 - 13.
  11. ಬಾರ್ಥೊಲೊಮೆವ್‌ ಡೀನ್‌ ಮತ್ತು ಜೆರೋಮ್‌ ಲೆವಿ (ಸಂಪಾದಕರು) ಅಟ್‌ ದಿ ರಿಸ್ಕ್‌ ಆಫ್‌ ಬೀಯಿಂಗ್‌ ಹರ್ಡ್‌: ಇಂಡಿಜಿನಸ್‌ ರೈಟ್ಸ್‌, ಐಡೆಂಟಿಟಿ ಅಂಡ್‌ ಪೋಸ್ಟ್‌ಕಲೋನಿಯಲ್‌ ಸ್ಟೇಟ್ಸ್‌ ಯೂನಿವರ್ಸಿಟಿ ಆಫ್‌ ಮಿಚಿಗನ್‌ ಪ್ರೆಸ್‌ (2003)[೨] Archived 2006-08-21 ವೇಬ್ಯಾಕ್ ಮೆಷಿನ್ ನಲ್ಲಿ.
  12. ‌ಮಿನುಷಿಯಸ್ ಫೆಲಿಕ್ಸ್‌, ದಿ ಆಕ್ಟೇವಿಯಸ್‌
  13. ‌ವಿಲ್ಕೆನ್, ರಾಬರ್ಟ್‌ ಲೂಯಿಸ್‌, 2003, ದಿ ಕ್ರಿಶ್ಚಿಯನ್ಸ್‌ ಆಸ್‌ ದಿ ರೋಮನ್ಸ್‌ ಸಾ ದೆಮ್‌, 2ನೇ ಆವೃತ್ತಿ, ಯೇಲ್‌ ಯೂನಿವಿರ್ಸಿಟಿ ಪ್ರೆಸ್‌
  14. ಜೆಂಟ್ರಿ, ಕೆನ್ನೆತ್‌ L. ಜೂನಿಯರ್‌, 1989, ಬಿಫೋರ್‌ ಜೆರೂಸಲೆಮ್‌ ಫೆಲ್‌, ಇನ್‌‌ಸ್ಟಿಟ್ಯೂಟ್‌ ಫಾರ್‌ ಕ್ರಿಶ್ಚಿಯನ್‌ ಇಕನಾಮಿಕ್ಸ್‌‌, ಟೈಲರ್‌‌, ಟೆಕ್ಸಾಸ್‌
  15. "ಓಲ್ಡ್‌ ವರ್ಲ್ಡ್‌ ಕಾಂಟ್ಯಾಕ್ಟ್ಸ್‌/ಕಲೋನಿಸ್ಟ್ಸ್‌/ಕೆನರಿ ಐಲೆಂಡ್ಸ್‌". Archived from the original on 2007-10-13. Retrieved 2011-03-22.
  16. "Pride in Lineage and Prejudice Against Outsiders". Archive.arabnews.com. 2004-04-02. Archived from the original on 2010-04-09. Retrieved 2010-06-30.
  17. ಅಲ್ಪವೇ-ಪರಿಚಿತವಿರುವ ಭಾರತೀಯ ಬುಡಕಟ್ಟು ಪೆರುವಿನ ಅಮೆಜಾನ್‌ನಲ್ಲಿ ಪತ್ತೆಯಾಗಿರುವುದು
  18. ಡೀನ್‌, ಬಾರ್ಥೊಲೊಮೆವ್‌ 2009 ಯುರಾರಿನಾ ಸೊಸೈಟಿ, ಕಾಸ್ಮಾಲಜಿ, ಅಂಡ್‌ ಹಿಸ್ಟರಿ ಇನ್‌ ಪೆರುವಿಯನ್‌ ಅಮೆಜೋನಿಯಾ , ಗೈನೆಸ್‌ವಿಲ್ಲೆ: ಯೂನಿವರ್ಸಿಟಿ ಪ್ರೆಸ್ ಆಫ್‌ ಫ್ಲೋರಿಡಾ ISBN 978-081303378 [೩]
  19. "Civilization.ca-Gateway to Aboriginal Heritage-Culture". Canadian Museum of Civilization Corporation. Government of Canada. May 12, 2006. Retrieved 2009-09-18.
  20. "Inuit Circumpolar Council (Canada)-ICC Charter". Inuit Circumpolar Council > ICC Charter and By-laws > ICC Charter. 2007. Retrieved 2009-09-18.
  21. "In the Kawaskimhon Aboriginal Moot Court Factum of the Federal Crown Canada" (PDF). Faculty of Law. University of Manitoba. 2007. p. 2. Archived from the original (PDF) on 2008-06-25. Retrieved 2009-09-18.
  22. "Words First An Evolving Terminology Relating to Aboriginal Peoples in Canada". Communications Branch of Indian and Northern Affairs Canada. 2004. Archived from the original on 2007-11-14. Retrieved 2010-06-26.{{cite web}}: CS1 maint: bot: original URL status unknown (link)
  23. "Terminology of First Nations, Native, Aboriginal and Metis" (PDF). Aboriginal Infant Development Programs of BC. 2009. Archived from the original (PDF) on 2010-07-14. Retrieved 2010-06-26.
  24. "Aboriginal Identity (8), Sex (3) and Age Groups (12) for the Population of Canada, Provinces, Territories, Census Metropolitan Areas and Census Agglomerations, 2006 Census - 20% Sample Data". Census > 2006 Census: Data products > Topic-based tabulations >. Statistics Canada, Government of Canada. 06/12/2008. Archived from the original on 2009-04-20. Retrieved 2009-09-18. {{cite web}}: Check date values in: |date= (help); More than one of |archivedate= and |archive-date= specified (help); More than one of |archiveurl= and |archive-url= specified (help)
  25. "Assembly of First Nations - Assembly of First Nations-The Story". Assembly of First Nations. Archived from the original on 2009-08-02. Retrieved 2009-10-02. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  26. "Civilization.ca-Gateway to Aboriginal Heritage-object". Canadian Museum of Civilization Corporation. May 12, 2006. Retrieved 2009-10-02.
  27. ಬ್ರೆಜಿಲ್‌ ಅರ್ಜ್‌ಡ್‌ ಟು ಪ್ರೊಟೆಕ್ಟ್‌ ಇಂಡಿಯನ್ಸ್‌
  28. ಬ್ರೆಜಿಲ್ ಸೀಸ್ ಟ್ರೇಸಸ್ ಆಫ್ ಮೋರ್ ಐಸೊಲೇಟೆಡ್ ಅಮೆಜಾನ್ ಟ್ರೈಬ್ಸ್
  29. "Natives in Russia's far east worry about vanishing fish". The Economic Times. Agence France-Presse. February 25, 2009. Retrieved March 5, 2011.
  30. ರೆಕಗ್ನಿಷನ್‌ ಅಟ್‌ ಲಾಸ್ಟ್‌ ಫಾರ್‌ ಜಪಾನ್‌'ಸ್‌ ಐನು, BBC ನ್ಯೂಸ್‌
  31. ಬ್ಲಸ್ಟ್‌, R. (1999), "ಸಬ್‌ಗ್ರೂಪಿಂಗ್‌, ಸರ್ಕ್ಯುಲಾರಿಟಿ ಅಂಡ್‌ ಎಕ್ಸ್‌ಟಿಂಕ್ಷನ್‌: ಸಂ್‌ ಇಷ್ಯೂಸ್‌ ಇನ್‌ ಆಸ್ಟ್ರನೇಷಿಯನ್‌ ಕಂಪ್ಯಾರಿಟಿವ್‌ ಲಿಂಗ್ವಿಸ್ಟಿಕ್ಸ್‌"; E. ಝೀಟೌನ್‌ & P.J.K ಲೀ, ಸಂಪಾದಿತ ಸೆಲೆಕ್ಟೆಡ್‌ ಪೇಪರ್ಸ್‌ ಫ್ರಂ ದಿ ಎಯ್ತ್‌ ಇಂಟರ್‌ನ್ಯಾಷನಲ್‌ ಕಾನ್ಫರೆನ್ಸ್‌ ಆನ್‌ ಆಸ್ಟ್ರನೇಷಿಯನ್‌ ಲಿಂಗ್ವಿಸ್ಟ್ಸ್‌ ಕೃತಿಯಲ್ಲಿರುವಂಥದ್ದು. ತೈಪೀ: ಅಕಾಡೆಮಿಯಾ ಸಿನಿಷಿಯಾ
  32. ಫಾಕ್ಸ್‌, ಜೇಮ್ಸ್‌ J."Current Developments in Comparative Austronesian Studies" PDF (105 KB) . ಪೇಪರ್‌ ಪ್ರಿಪೇರ್ಡ್‌ ಫಾರ್‌ ಸಿಂಪೋಜಿಯಂ ಆಸ್ಟ್ರನೇಷಿಯಾ ಪ್ಯಾಸ್ಕಾಸರ್ಜಾನಾ ಲಿಂಗ್ವಿಸ್ಟಿಸ್ಟಿಕ್‌ ಡ್ಯಾನ್‌ ಕಾಜಿಯನ್‌ ಬುದಾಯಾ. ಯೂನಿವರ್ಸಿಟಾಸ್ ಉದಾಯನಾ, ಬಾಲಿ 19–20 ಆಗಸ್ಟ್‌ 2004.
  33. ಡೈಮಂಡ್‌, ಜೇರ್ಡ್‌ M. "Taiwan's gift to the world" PDF (107 KB) "Taiwan's gift to the world" PDF (107 KB) . ನೇಚರ್‌, ಸಂಪುಟ 403, ಫೆಬ್ರುವರಿ 2000, ಪುಟಗಳು 709-710
  34. ಟೆಂಪರರಿ ರೂಲ್ಸ್‌ ಆವರ್‌ ಪಾರ್ಟ್ಸ್‌ ಆಫ್‌ ಯುರೋಪ್‌ ಬೈ ನಾನ್‌-ಯುರೋಪಿಯನ್‌ ಪವರ್ಸ್‌ ಇನ್‌ಕ್ಲೂಡ್‌ ಅವರ್‌ ಖಗನಾಟೆ (ಸುಮಾರು 560-800), ಅಲ್‌-ಅಂದಾಲಸ್‌ (711-1492), ಎಮಿರೇಟ್‌ ಆಫ್‌ ಸಿಸಿಲಿ (831-1072), ದಿ ಮಂಗೋಲ್‌‌/ಟಾಟಾರ್‌ ಇನ್‌ವೇಷನ್ಸ್‌ (1223-1480), ಅಂಡ್‌ ಒಟ್ಟೋಮನ್‌ ಕಂಟ್ರೋಲ್‌ ಆಫ್‌ ದಿ ಬಾಲ್ಕನ್ಸ್‌ (1389-1878)
  35. ದಿ ಬಾಸ್ಕ್‌ ಹಿಸ್ಟರಿ ಆಫ್‌ ದಿ ವರ್ಲ್ಡ್‌
  36. ಕಕೇಷಿಯನ್‌ ಪೀಪಲ್ಸ್‌
  37. ಮೌಂಟನ್‌ ಆಫ್‌ ಟಂಗ್ಸ್‌: ದಿ ಲಾಂಗ್ವೇಜಸ್‌ ಆಫ್‌ ದಿ ಕಕೇಷಸ್‌
  38. ಪಿಗ್ಮಿ ಹ್ಯೂಮನ್‌ ರಿಮೇಯ್ನ್ಸ್‌ ಫೌಂಡ್‌ ಆನ್‌ ರಾಕ್‌ ಐಲೆಂಡ್ಸ್‌, ಸೈನ್ಸ್‌ | ದಿ ಗಾರ್ಡಿಯನ್‌
  39. Simpson, John (2005-05-02). "Africa | Bushmen fight for homeland". BBC News. Retrieved 2010-06-30.
  40. Monbiot, George (21 March 2006). "Who really belongs to another age - bushmen or the House of Lords?". The Guardian. London. Retrieved 5 May 2010.
  41. "Botswana bushmen ruling accepted". BBC News. 18 December 2006. Retrieved 5 May 2010.
  42. "ಆರ್ಕೈವ್ ನಕಲು". Archived from the original on 2008-12-03. Retrieved 2008-12-03.
  43. ಇಂಟರ್‌‌ನ್ಯಾಷನಲ್‌ ಡೇ ಆಫ್‌ ದಿ ವರ್ಲ್ಡ್ಸ್‌ ಇಂಡಿಜಿನಸ್‌ ಪೀಪಲ್‌ - 9 ಆಗಸ್ಟ್‌
  44. ನೋಡಿ : ಓಲಿಫ್ಯಾಂಟ್‌ v. ಸುಕ್ವಾಮಿಶ್‌ ಇಂಡಿಯನ್‌ ಟ್ರೈಬ್‌ , 435 U.S. 191 (1978); ಇದನ್ನೂ ನೋಡಿ: ರಾಬರ್ಟ್‌ ವಿಲಿಯಮ್ಸ್‌, ಲೈಕ್‌ ಎ ಲೋಡೆಡ್‌ ವೆಪನ್‌
  45. ಸರ್ವೈವಲ್‌ ಇಂಟರ್‌ನ್ಯಾಷನಲ್‌ ವೆಬ್‌ಸೈಟ್‌ - ಎಬೌಟ್‌ ಅಸ್‌/FAQ
  46. "friends of Peoples close to Nature website - Our Ethos and statement of principles". Archived from the original on 2010-07-26. Retrieved 2011-03-22. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • ಸ್ಟಡಿ ಆಫ್‌ ದಿ ಪ್ರಾಬ್ಲಂ ಆಫ್‌ ಡಿಸ್ಕ್ರಿಮಿನೇಷನ್‌ ಎಗೇನ್ಸ್ಟ್‌ ಇಂಡಿಜಿನಸ್‌ ಪಾಪ್ಯುಲೇಷನ್ಸ್‌‌‌ ನಿಂದ ಪಡೆಯಲಾದ ಯುನೈಟೆಡ್‌ ನೇಷನ್ಸ್‌ ವರ್ಕಿಂಗ್‌ ಗ್ರೂಪ್‌ ಆನ್‌ ಇಂಡಿಜಿನಸ್‌ ಪಾಪ್ಯುಲೇಷನ್ಸ್‌, J. ಮಾರ್ಟಿನೆಜ್‌ ಕೋಬೋ, ಯುನೈಟೆಡ್‌ ನೇಷನ್ಸ್‌ ಸ್ಪೆಷಲ್‌ ರ್ಯಾಪೋರ್ಟರ್‌ (1987)
  • ರಿಪೋರ್ಟ್‌ ಆಫ್‌ ದಿ ಆಫ್ರಿಕನ್‌ ಕಮಿಷನ್‌'ಸ್‌ ವರ್ಕಿಂಗ್‌ ಗ್ರೂಪ್‌ ಆಫ್‌ ಎಕ್ಸ್‌ಪರ್ಟ್ಸ್‌ ಆನ್‌ ಇಂಡಿಜಿನಸ್‌ ಪಾಪ್ಯುಲೇಷನ್ಸ್‌/ಕಮ್ಯುನಿಟೀಸ್‌, ನವೆಂಬರ್‌ 2003
  • FRITZ ಜೀನ್‌-ಕ್ಲೌಡೆ, ಲಾ ನೌವೆಲ್ಲೆ ಕ್ವೆಶ್ಚನ್‌ ಇಂಡಿಜೀನ್‌. ಪೀಪಲ್ಸ್‌ ಆಟೋಕ್ಟೋನ್ಸ್‌ ಎಟ್‌ ಆರ್ಡ್‌ರೆ ಮಾಂಡಿಯಲ್ (ಎನ್‌ ಕೋ-ಡೈರೆಕ್ಷನ್‌ ಅವೆಕ್‌ ಫ್ರೆಡೆರಿಕ್‌ ಡೆರೋಕ್‌, ಗೆರಾರ್ಡ್‌ ಫ್ರಿಟ್ಜ್‌ ಎಟ್‌ ರ್ಯಾಫೆಲ್‌ ಪೋರ್ಟೀಲಾ), ಪ್ಯಾರಿಸ್‌, ಎಲ್‌'ಹರ್ಮಾಟನ್‌, 2006.
  • FRITZ ಜೀನ್‌-ಕ್ಲೌಡೆ, ಎಲ್‌'ಹ್ಯುಮಾನಿಟೆ ಫೇಸ್‌ ಅ ಲಾ ಮಾಂಡಿಯಲೈಸೇಷನ್‌. ಡ್ರಾಯ್ಟ್‌ ಡೆಸ್‌ ಪೀಪಲ್ಸ್‌ ಎಟ್‌ ಎನ್ವಿರಾನ್ಮೆಂಟ್‌ (ಎನ್‌ ಕೋ-ಡೈರೆಕ್ಷನ್‌ ಅವೆಕ್‌ ಚಾರಲಾಂಬೋಸ್‌ ಅಪೋಸ್ಟೊಲಿಡಿಸ್‌ ಎಟ್‌ ಗೆರಾರ್ಡ್‌ ಫ್ರಿಟ್ಜ್‌), ಪ್ಯಾರಿಸ್‌, ಎಲ್‌'ಹರ್ಮಾಟನ್‌, 1997.
  • ಇಂಡಿಜಿನಸ್‌ ಪೀಪಲ್ಸ್‌ ಅಂಡ್‌ ಎನ್ವಿರಾನ್ಮೆಂಟಲ್‌ ಇಷ್ಯೂಸ್‌: ಆನ್‌ ಎನ್‌ಸೈಕ್ಲೋಪೀಡಿಯಾ , ಲೇಖಕಳ ಬ್ರೂಸ್‌ E. ಜೊಹಾನ್ಸೆನ್‌. ವೆಸ್ಟ್‌ಪೋರ್ಟ್‌, ಕನೆಕ್ಟಿಕಟ್‌, ಗ್ರೀನ್‌ವುಡ್‌ ಪ್ರೆಸ್‌, 2003. 506 ಪುಟ, ISBN 978-0-313-32398-0
  • Groh, Arnold (2018). Research Methods in Indigenous Contexts. New York: Springer. ISBN 978-3-319-72774-5
  • Henriksen, John B. (2001). "Implementation of the Right of Self-Determination of Indigenous Peoples" (PDF). Indigenous Affairs. Vol. 3/2001 (PDF ed.). Copenhagen: International Work Group for Indigenous Affairs. pp. 6–21. ISSN 1024-3283. OCLC 30685615. Archived from the original (PDF) on 2010-06-02. Retrieved 2007-09-01. {{cite news}}: Cite has empty unknown parameter: |dead-url= (help)

ಬಾಹ್ಯ ಕೊಂಡಿಗಳು‌

[ಬದಲಾಯಿಸಿ]
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಸಂಸ್ಥೆಗಳು

[ಬದಲಾಯಿಸಿ]

ಸ್ಥಳೀಯ ಅಧ್ಯಯನಗಳು

[ಬದಲಾಯಿಸಿ]