ವಿಷಯಕ್ಕೆ ಹೋಗು

ರವೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸೆಮಲೀನ ಇಂದ ಪುನರ್ನಿರ್ದೇಶಿತ)
ರವೆಯ ಚಿತ್ರ
ರವೆ ಧಾನ್ಯಗಳು
Semolina, unenriched
ಪೌಷ್ಟಿಕಾಂಶದ ಮೌಲ್ಯ 100 g (3.5 oz)
ಶಕ್ತಿ1,506 kJ (360 kcal)
72.83 g
ನಾರು ಪದಾರ್ಥ3.9 g
1.05 g
ಪರ್ಯಾಪ್ತ0.15 g
ಏಕಾಪರ್ಯಾಪ್ತ0.124 g
ಬಹು ಅಪರ್ಯಾಪ್ತ0.43 g
12.68 g
ವಿಟಮಿನ್‌(ಅನ್ನಾಂಗ)ಗಳುಪ್ರಮಾಣ
%DV
ಎ ಅನ್ನಾಂಗ
0%
0 μg
ಥಯಾಮಿನ್
24%
0.28 mg
ಬಿ ಅನ್ನಾಂಗ (ರೈಬೊಫ್ಲೆವಿನ್)
7%
0.08 mg
ಬಿ ಅನ್ನಾಂಗ (ನಯಾಸಿನ್)
22%
3.31 mg
ಬಿ೧೨ ಅನ್ನಾಂಗ
8%
0.1 mg
ಬಿ ಅನ್ನಾಂಗ (ಫೊಲೆಟ್)
18%
72 μg
ಬಿ೧೨ ಅನ್ನಾಂಗ
0%
0 μg
ಸಿ ಅನ್ನಾಂಗ
0%
0 mg
ಖನಿಜಗಳುಪ್ರಮಾಣ
%DV
ಸುಣ್ಣ(ಕ್ಯಾಲ್ಸಿಯಮ್)
2%
17 mg
ಕಬ್ಬಿಣ
9%
1.23 mg
ಮೆಗ್ನೀಸಿಯಂ
13%
47 mg
ಫಾಸ್ಫರಸ್
19%
136 mg
ಪೊಟಾಸಿಯಂ
4%
186 mg
ಸೋಡಿಯಂ
0%
1 mg
ಸತು
11%
1.05 mg
ಇತರೆಪ್ರಮಾಣ
ನೀರು12.67 g
  • ಘಟಕ
  • μg = ಮೈಕ್ರೋಗ್ರಾಮ್ • mg = ಮಿಲಿಗ್ರಾಮ್
  • IU = ಅಂತರರಾಷ್ಟ್ರೀಯ ಮಾನದಂಡ
Percentages are roughly approximated using US recommendations for adults.
Source: USDA FoodData Central

ರವೆ (ಸೆಮಲೀನ) ಎಂಬುದು ಒಂದು ಬಗೆಯ ಗಟ್ಟಿ ಕಾಳಿನ ಗೋಧಿ ಮತ್ತು ಗೋಧಿಯ ಸಾಮಾನ್ಯ ನುಣುಪಿನ ಹಿಟ್ಟಾಗಿದ್ದು, ಇದನ್ನು ಪಾಸ್ತ ತಯಾರಿಸಲು ಹಾಗು ಬೆಳಗ್ಗಿನ ಸಿರಿಲ್ ಗಳು ಮತ್ತು ಪುಡಿಂಗ್ ಅನ್ನು ತಯಾರಿಸಲು ಬಳಸಲಾಗುತ್ತದೆ.

ಹೆಸರು

[ಬದಲಾಯಿಸಿ]

ಸೆಮಲೀನ ಎಂಬ ಪದವು "ಸೆಮೊಲಾ" ಎಂಬ ಇಟಲಿಯನ್ ಪದದಿಂದ ಹುಟ್ಟಿಕೊಂಡಿದೆ. ಈ ಸೆಮೊಲಾ ಪದ ಪ್ರಾಚೀನ ಲ್ಯಾಟಿನ್ ಸಿಮಿಲಾ ಎಂಬ ಪದದಿಂದ ಹುಟ್ಟಿದ್ದು, "ಹಿಟ್ಟು" ಎಂಬ ಅರ್ಥವನ್ನು ನೀಡುತ್ತದೆ. ಇದನ್ನು ಗ್ರೀಕ್ ನ σεμῖδαλις (ಸೆಮಿಡಲಿಸ್) ನಿಂದ ಎರವಲು ಪಡೆಯಲಾಗಿದ್ದು, "ಹೊಟ್ಟು ಕಳೆದ ಧಾನ್ಯ" ಎಂಬ ಅರ್ಥವನ್ನು ನೀಡುತ್ತದೆ. ಲ್ಯಾಟಿನ್ ಮತ್ತು ಗ್ರೀಕ್ ನಲ್ಲಿ ಉಪಸ್ಥಿತವಿರುವುದರೊಂದಿಗೆ ಈ ಪದವು ಮೂಲದಲ್ಲಿ ಇಂಡೋ- ಯುರೋಪಿಯನ್ ಆಗಿರದೆ, ಸೆಮಿಟಿಕ್ ಧಾತು smd ನಿಂದ ಎರವಲು ಪಡೆದ ಪದವಾಗಿದೆ - ಗ್ರೈಂಡ್(ಪುಡಿಮಾಡು) ಎಂಬುದು ಗ್ರೋಟ್ಸ್ ಆಗಿದೆ(ಹಿಟ್ಟು ಮಾಡು) (ಅರೇಬಿಕ್: سميد samīd , IPA: [saˈmiːd]). ಮೂಲ ಧಾತುವನ್ನು ಅರೇಬಿಕ್ ,ಅರ್ಮೈಕ್ ಮತ್ತು ಅಕೇಡಿಯನ್ ನಲ್ಲಿ ದೃಢೀಕರಿಸಲಾಗಿದೆ.

ನಿರ್ಮಾಣ

[ಬದಲಾಯಿಸಿ]

ಗೋಧಿಯನ್ನು ಹಿಟ್ಟಾಗಿಸುವ ಆಧುನಿಕ ಬೀಸುವಿಕೆಯು, ಕೊರೆದು ಮಾಡಿದ ಕಬ್ಬಿಣದ ರೋಲರ್ (ಸುರುಳಿಸುತ್ತುವ ಸಾಧನ)ಅನ್ನು ಬಳಸುವ ವಿಧಾನವಾಗಿದೆ. ರೋಲರ್ ಗಳನ್ನು ಸರಿಯಾಗಿ ಹೊಂದಿಸಲಾಗಿರುತ್ತದೆ, ಏಕೆಂದರೆ ಅವುಗಳ ಮಧ್ಯದ ಸ್ಥಳ ಗೋಧಿ ಬೀಜಗಳ ಅಗಲಕ್ಕಿಂತ ಸ್ವಲ್ಪ ಸಂಕುಚಿತವಾಗಿರಬೇಕು. ಗೋಧಿಯನ್ನು, ಬೀಸುವ ಯಂತ್ರದೊಳಗೆ ಹಾಕಿದಂತೆ ರೋಲರ್ ಗಳು ಹೊಟ್ಟು ಮತ್ತು ಬೀಜವನ್ನು ಉದುರಿಸುತ್ತವೆ. ಈ ಸಮಯದಲ್ಲಿ ಪಿಷ್ಟವನ್ನು (ಅಥವಾ ಬೀಜಫೋಷಕ) ಒರಟಾದ ತುಂಡುಗಳಾಗಿ ಸೀಳಲ್ಪಡುತ್ತದೆ. ಜರಡಿಹಿಡಿಯುವ ಮೂಲಕ ಈ ಕಣಗಳನ್ನು ಹೊಟ್ಟಿನಿಂದ ಪ್ರತ್ಯೇಕಿಸಲಾಗುತ್ತದೆ. ಇದೇ ಸೆಮಲೀನವಾಗಿದೆ. ಅನಂತರ ಸೆಮಲೀನವನ್ನು ಹಿಟ್ಟಾಗಿ ಪುಡಿಮಾಡಲಾಗುತ್ತದೆ. ಇದು ಹೊಟ್ಟು ಮತ್ತು ಪಿಷ್ಟದಿಂದ ಬೀಜ ಪೋಷಕವನ್ನು ಪ್ರತ್ಯೇಕಿಸುವ ವಿಧಾನವನ್ನು ಸರಳಗೊಳಿಸುತ್ತದೆ. ಅಲ್ಲದೇ ಬೀಜಫೋಷಕಗಳನ್ನು ವಿಭಿನ್ನ ವರ್ಗಗಳಲ್ಲಿ ಬೇರ್ಪಡಿಸುವಂತೆಯು ಮಾಡುತ್ತದೆ. ಏಕೆಂದರೆ ಬೀಜ ಫೋಷಕದ ಒಳಗಿನ ಭಾಗವು ಹೊರಗಿನ ಭಾಗಕ್ಕಿಂತ ಸಣ್ಣ ಸಣ್ಣ ತುಂಡುಗಳಾಗಿ ವಿಭಾಗವಾಗುತ್ತದೆ. ಹೀಗೆ ಹಿಟ್ಟಿನ ವಿಭಿನ್ನ ವರ್ಗಗಳನ್ನು ಮಾಡಬಹುದಾಗಿದೆ.[]

ವಿಧಗಳು

[ಬದಲಾಯಿಸಿ]

ಸೆಮಲೀನವನ್ನು ಒಂದು ಬಗೆಯ ಗಟ್ಟಿ ಕಾಳಿನ ಗೋಧಿಯಿಂದ ಮಾಡಬಹುದಾಗಿದೆ. ಈ ಗೋಧಿ ಹಳದಿ ಬಣ್ಣದಲ್ಲಿರುತ್ತದೆ. ಇದು ಸಾಮಾನ್ಯವಾಗಿ ಕೂಸ್ ಕೂಸ್ ನಂತಹ ಒಣ ಉತ್ಪನ್ನಗಳ ಆಧಾರವಾಗಿದೆ. ಈ ಉತ್ಪನ್ನವನ್ನು ಸರಿಸುಮಾರಾಗಿ 2 ಭಾಗಗಳ ಸೆಮಲೀನವನ್ನು 1 ಭಾಗದ ಗಟ್ಟಿ ಕಾಳಿನ ಗೋಧಿ ಹಿಟ್ಟಿನೊಂದಿಗೆ ಬೆರೆಸುವ ಮೂಲಕ ತಯಾರಿಸಲಾಗುತ್ತದೆ.[]

ಒರಟಾಗಿರದೇ ಮೆದುವಾಗಿರುವ ಗೋಧಿಯ ವಿಧಗಳಿಂದ ಮಾಡಲಾಗುವ ಹಿಟ್ಟು ಬಿಳಿಯ ಬಣ್ಣದಲ್ಲಿರುತ್ತದೆ. ಇಂತಹ ಪ್ರಸಂಗದಲ್ಲಿ ಸರಿಯಾದ ಹೆಸರು ಹಿಟ್ಟಾಗಿರುತ್ತದೆಯೇ ಹೊರತು ಸೆಮಲೀನವಾಗಿರುವುದಿಲ್ಲ. ಇದು ಕೇವಲ ಗಟ್ಟಿ ಕಾಳಿನ ಗೋಧಿ ಯಿಂದ ಮಾತ್ರ ಬರುತ್ತದೆ. ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ, ಮೃದುವಾದ ಗೋಧಿಯ ವಿಧಗಳಿಂದ ತಯಾರಿಸಲಾಗುವ ಮಿದುವಿಲ್ಲದ ಭಕ್ಷ್ಯವನ್ನು ಫರೈನ (ಹಿಟ್ಟು) ಎಂದು ಕರೆಯಲಾಗುತ್ತದೆ ಅಥವಾ ವಾಣಿಜ್ಯ ನಾಮ, ಕ್ರೀಮ್ ಆಫ್ ವೀಟ್ ಎಂದು ಕರೆಯಲಾಗುತ್ತದೆ. ಜರ್ಮನಿ, ಆಸ್ಟ್ರಿಯಾ, ಹಂಗೇರಿ, ಬಲ್ಗೇರಿಯಾ, ಸರ್ಬಿಯಾ ಮತ್ತು ರೊಮಾನಿಯದಲ್ಲಿ ಇದನ್ನು Grieß ("ಗ್ರಿಟ್ಸ್"ಗೆ ಸಂಬಂಧಿಸಿದ ಪದವಾಗಿದೆ) ಎಂದು ಕರೆಯಲಾಗುತ್ತದೆ. ಅಲ್ಲದೇgrießknödel ಅನ್ನು ಮಾಡಲು ಇದನ್ನು ಮೊಟ್ಟೆಗಳೊಂದಿಗೆ ಬೆರೆಸಲಾಗುತ್ತದೆ. ಅಲ್ಲದೇ ಸೂಪ್ ನಲ್ಲಿ ಸೇರಿಸಿ ಸೇವಿಸಬಹುದು. ಇದನ್ನು ನೀರು ಅಥವಾ ಹಾಲಿನಿಂದಲು ಮಾಡಬಹುದಾಗಿದೆ. ಅಲ್ಲದೇ ಬೆಳಗ್ಗಿನ ತಿಂಡಿ "Grießkoch" ಅನ್ನು ಮಾಡಲು ಚಾಕ್ಲೆಟ್ ನ ತುಂಡುಗಳನ್ನು ಸೇರಿಸಲಾಗುತ್ತದೆ. ಕಣಗಳು ಒರಟಾಗಿರುತ್ತವೆ ಹಾಗು ವ್ಯಾಸದಲ್ಲಿ 0.25 ಮತ್ತು 0.75 ರ ನಡುವಿನ ಮಿಲಿಮೀಟರ್ ಗಳಷ್ಟಿರುತ್ತವೆ.

ಬೇಯಿಸಿದಾಗ ಇದು ಮೃದುವಾಗುತ್ತದೆ ಮತ್ತು ಮೆತ್ತಗಿನ ಅಂಬಲಿಯಾಗುತ್ತದೆ. ಈ ಹಿಟ್ಟು ವಾಯವ್ಯ ಯುರೋಪಿನಲ್ಲಿ ಮತ್ತು ಉತ್ತರ ಅಮೇರಿಕಾದಲ್ಲಿ ಡೆಸರ್ಟ್ (ಸಿಹಿತಿಂಡಿ) ನ ರೂಪದಲ್ಲಿ ಜನಪ್ರಿಯವಾಗಿದೆ. ಸೆಮಲೀನ ಪುಡಿಂಗ್ ಎಂದು ಕರೆಯಲಾಗುವ ಇದನ್ನು ಹಾಲಿನೊಂದಿಗೆ ಬೇಯಿಸಿ ಸಿಹಿಗೊಳಿಸಲಾಗುವುದು. ಇದನ್ನು ಹೆಚ್ಚಾಗಿ ವೆನಿಲಾ ರುಚಿಯೊಂದಿಗೆ ತಯಾರಿಸಲಾಗುತ್ತದೆ ಹಾಗು ಜ್ಯಾಮ್ ನೊಂದಿಗೆ ಸೇವಿಸಲು ನೀಡಲಾಗುತ್ತದೆ. ಸ್ವೀಡನ್, ಎಸ್ಟೊನಿಯ, ಫಿನ್‍ಲ್ಯಾಂಡ್, ಲಿತುಆನಿಯ, ಲ್ಯಾಟಿವಿಯಾ, ಪೋಲೆಂಡ್ ಮತ್ತು ರಷ್ಯಾದಲ್ಲಿ ಇದನ್ನು ಬೆಳಗ್ಗಿನ ಅಂಬಲಿಯಂತೆ ಸೇವಿಸಲಾಗುತ್ತದೆ. ಕೆಲವೊಮ್ಮೆ ಒಣದ್ರಾಕ್ಷಿಯೊಂದಿಗೆ ಬೆರೆಸಿ ಹಾಲಿನೊಂದಿದೆ ಸೇವಿಸಲು ನೀಡಲಾಗುತ್ತದೆ. ಸ್ವೀಡಿಷ್ ನಲ್ಲಿ ಇದನ್ನು mannagrynsgröt ಎಂದು ಕರೆಯಲಾಗುತ್ತದೆ ಅಥವಾ ಬಿಲ್ಬರಿ ಹಣ್ಣಿನೊಂದಿಗೆ ಸೇರಿಸಿ blåbärsgröt ಯಂತೆ ಸೇವಿಸಲಾಗುತ್ತದೆ. ಮಧ್ಯ ಪ್ರಾಚ್ಯದಲ್ಲಿ, ಇದನ್ನು ಹ್ಯಾರಿಸ ಅಥವಾ ಬ್ಯಾಸ್ ಬೋಸಾ ಅಥವಾ ನ್ಯಾಮೊರಾ ಎಂದು ಕರೆಯಲಾಗುವ ಡೆಸರ್ಟ್ (ಸಿಹಿತಿಂಡಿ)ಅನ್ನು ತಯಾರಿಸಲು ಬಳಸಲಾಗುತ್ತದೆ.

ಇದನ್ನು ಕುರಿತು ಮತಷ್ಟು ಹೇಳಬೇಕೆಂದರೆ ಗೋಧಿಯನ್ನು ಹೊರತು ಪಡಿಸಿ ಇತರ ಧಾನ್ಯಗಳಿಂದ ತಯಾರಿಸಲಾಗುವ ಭಕ್ಷ್ಯವನ್ನು ಕೂಡ ಸೆಮಲೀನ ಎಂದು ಸೂಚಿಸಬಹುದಾಗಿದೆ, ಉದಾಹರಣೆಗೆ., ಅಕ್ಕಿಯ ಸೆಮಲೀನ, ಅಥವಾ ಮೆಕ್ಕೆ ಜೋಳದ ಸೆಮಲೀನ (U.S. ನಲ್ಲಿ ಸಾಮಾನ್ಯವಾಗಿ ಗ್ರಿಟ್ಸ್ (ಓಟ್ಸ್ ತರಿ) ಎಂದು ಕರೆಯಲಾಗುತ್ತದೆ).

ದಕ್ಷಿಣ ಭಾರತದಲ್ಲಿ ಸೆಮಲೀನವನ್ನು ರವೆ ದೋಸೆ ಮತ್ತು ಉಪ್ಪಿಟ್ಟು ಅನ್ನು ಮಾಡಲು ಬಳಸಲಾಗುತ್ತದೆ. ಉತ್ತರ ಭಾರತದಲ್ಲಿ ಇದನ್ನು ಸುಜಿ ಹಲ್ವಾ ದಂತಹ ಸಿಹಿತಿಂಡಿಗಳಲ್ಲಿ ಬಳಸಲಾಗುತ್ತದೆ. ಗ್ರೀಸ್ ("ಹ್ಯಾಲ್ವಸ್"), ಸಿಪ್ರಸ್ ("ಹ್ಯಾಲೊವಸ್" ಅಥವಾ "ಹೆಲ್ವಾ"), ಟರ್ಕಿ ("ಹೆಲ್ವಾ"), ಇರಾನ್ ("ಹಲ್ವಾ"), ಪಾಕಿಸ್ತಾನ್ ("ಹಲ್ವಾ"), ಮತ್ತು ಅರಬ್ ರಾಷ್ಟ್ರಗಳಲ್ಲಿನ ("ಹಲ್ವಾ") ಜನಪ್ರಿಯ ಡೆಸರ್ಟ್ ಅನ್ನು, ಸಕ್ಕರೆ, ಬೆಣ್ಣೆ, ಹಾಲು ಮತ್ತು ಪೈನ್ ಕಾಯಿಗಳೊಂದಿಗೆ ಬೇಯಿಸಿ ಕೆಲವೊಮ್ಮೆ ಸೆಮಲೀನದೊಂದಿಗೆ ಮಾಡಲಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಬ್ಯಾಸ್ ಬೌಸ (ಉತ್ತರ ಆಫ್ರಿಕಾ ಮತ್ತು ಅಲೆಕ್ಸಾಂಡ್ರಿಯಾ ದ ಹ್ಯಾರಿಸ ) ವನ್ನು ಸೆಮಲೀನದಿಂದ ಮಾಡಲಾಗುತ್ತದೆ. ಕೆಲವು ಸಂಸ್ಕೃತಿಗಳಲ್ಲಿ ಇದನ್ನು ಶವಸಂಸ್ಕಾರದ ಸಮಯದಲ್ಲಿ, ವಿಶೇಷ ಆಚರಣೆಗಳ ಸಂದರ್ಭದಲ್ಲಿ ಅಥವಾ ಧಾರ್ಮಿಕ ವಿಧಿಯೆಂಬಂತೆ ಸೇವಿಸಲು ನೀಡಲಾಗುತ್ತದೆ. ಉತ್ತರ ಆಫ್ರಿಕಾದ ಬಹುಪಾಲು ಪ್ರದೇಶಗಳಲ್ಲಿ , ಗಟ್ಟಿ ಕಾಳಿನ ಗೋಧಿಯ ಸೆಮಲೀನದಿಂದ ಪ್ರಮುಖ ಕೂಸ್ ಕೂಸ್ ಖಾದ್ಯವನ್ನ್ ಮಾಡಲಾಗುತ್ತದೆ.[]

ಜೋಳದ ಭಕ್ಷ್ಯಕ್ಕೆ ಪರ್ಯಾಯವಾಗಿ ಸುಟ್ಟ ಮೇಲ್ಮೈ ಅಂಟದಂತೆ ತಡೆಯಲು ಸೆಮಲೀನವನ್ನು ಹಿಟ್ಟಿನಲ್ಲಿ ಬಳಸಬಹುದಾಗಿದೆ. ಬ್ರೆಡ್ ಅನ್ನು ತಯಾರಿಸುವಾಗ ಗಟ್ಟಿ ಕಾಳಿನ ಗೋಧಿಯ ಸೆಮಲೀನದ ಸ್ವಲ್ಪ ಭಾಗವನ್ನು ಹಿಟ್ಟಿನ ಸಾಮಾನ್ಯ ಬೆರಕೆಗೆ ಸೇರಿಸಲಾಗುತ್ತದೆ. ಇದನ್ನು ಕ್ರಸ್ಟ್ (ಹೆಕ್ಕಳಿಕೆ) ರುಚಿಯನ್ನು ನೀಡಲೆಂದು ಸೇರಿಸಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. ವಯೆನ್ ಗಿಸ್ಲೆನ್ (2001), ಪ್ರೊಫೇಷನಲ್ ಬೇಕಿಂಗ್, ಜಾನ್ ವಿಲ್ಲೆ ಅಂಡ್ ಸನ್ಸ್
  2. "ಗ್ರೈನ್ ಪ್ರಾಡೆಕ್ಟ್ ಬೇಸಿಕ್ಸ್ - ಸೆಮಲೀನ ಅಂಡ್ ಕೂಸ್ ಕೂಸ್". Archived from the original on 2011-07-10. Retrieved 2011-03-22.
  3. SEMO ಎಂದು ಜನಪ್ರಿಯವಾಗಿ ಸೂಚಿಸಲಾಗುವ ಸೆಮಲೀನ ಪಶ್ಚಿಮ ಆಫಿಕ್ರಾ, ಅದರಲ್ಲು ವಿಶೇಷವಾಗಿ ನೈಜೀರಿಯಾದವರ ಸಾಮಾನ್ಯ ಆಹಾರವಾಗಿದೆ. ಇದನ್ನು ಸ್ಟ್ಯೂ ಅಥವಾ ಸೂಪ್ ನೊಂದಿಗೆ ಮಧ್ಯಾಹ್ನದ ಅಥವಾ ರಾತ್ರಿಯ ಆಹಾರವಾಗಿ ಸೇವಿಸಲಾಗುತ್ತದೆ. ಇದನ್ನು ಇಬಾ (ಮರಗೆಣಸಿನ ಹಿಟ್ಟು) ಅಥವಾ ಫುಫು ವಂತೆ ನೀರಿನೊಂದಿಗೆ 5 ರಿಂದ 10 ನಿಮಿಷಗಳ ಕಾಲ ಬೇಯಿಸುವುದರೊಂದಿಗೆ ತಯಾರಿಸಬಹುದಾಗಿದೆ. "Couscous". www.ag.ndsu.nodak.edu. Archived from the original on 2012-04-07. Retrieved 2008-05-12.


"https://kn.wikipedia.org/w/index.php?title=ರವೆ&oldid=1057825" ಇಂದ ಪಡೆಯಲ್ಪಟ್ಟಿದೆ