ವಿಷಯಕ್ಕೆ ಹೋಗು

ಸಿರ್ಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸಿರ್ಸಿ, ಕರ್ನಾಟಕ ಇಂದ ಪುನರ್ನಿರ್ದೇಶಿತ)
ಸಿರ್ಸಿ
ಸಿರಿಸೆ, ಸಿರಸಿ
ಕಲ್ಯಾಣ ಪಟ್ಟಣ
ನಗರ
ಸಿರ್ಸಿ
Nickname(s): 
ಮಲೆನಾಡಿನ ಹೆಬ್ಬಾಗಿಲು []
ಸಿರ್ಸಿ is located in Karnataka
ಸಿರ್ಸಿ
ಸಿರ್ಸಿ
ಸಿರ್ಸಿ , ಕರ್ನಾಟಕ, ಭಾರತ
Coordinates: 14°37′10″N 74°50′07″E / 14.6195°N 74.8354°E / 14.6195; 74.8354
Grid positionMK74
ದೇಶ ಭಾರತ
ರಾಜ್ಯಕರ್ನಾಟಕ
ವಿಭಾಗಕಿತ್ತೂರು ಕರ್ನಾಟಕ
ಪ್ರದೇಶಮಲೆನಾಡು
ಜಿಲ್ಲೆಉತ್ತರ ಕನ್ನಡ
ಹೆಸರಿಡಲು ಕಾರಣಸಿರಿಸ ಮರ
Area
 • Total೧೧.೩೩ km (೪.೩೭ sq mi)
Elevation
೫೯೦ m (೧,೯೪೦ ft)
Population
 (2018)
 • Total೧,೮೭,೦೦೦
 • ಸಾಂದ್ರತೆ೧೭,೦೦೦/km (೪೩,೦೦೦/sq mi)
ಭಾಷೆ
 • ಅಧಿಕೃತಕನ್ನಡ
ಸಮಯ ವಲಯಯುಟಿಸಿ+5:30
PIN
5814xx
ದೂರವಾಣಿ ಸಂಖ್ಯೆ+91-8384
ವಾಹನ ನೋಂದಣಿKA 31
ಜಾಲತಾಣwww.sirsicity.mrc.gov.in

ಸಿರ್ಸಿ, ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಒಂದು ನಗರ, ತಾಲ್ಲೂಕು ಮತ್ತು ವಾಣಿಜ್ಯ ಕೇಂದ್ರವಾಗಿದೆ. ಇದನ್ನು "ಸಿರಸಿ" ಹಾಗೂ "ಶಿರಸಿ" ಎಂದೂ ಕರೆಯಲಾಗುತ್ತದೆ. ಸಿರ್ಸಿ ತಾಲ್ಲೂಕು [] ಪ್ರದೇಶವು ಅಡಿಕೆ ತೋಟಗಳು, ಕಾಡುಗಳು ಹಾಗೂ ಜಲಪಾತಗಳಿಂದ ಕೂಡಿದ್ದು ಅಡಿಕೆ ಬೆಳೆ ಮತ್ತು ಮಾರಾಟ ಇಲ್ಲಿನ ಆರ್ಥಿಕತೆಯ ಬೆನ್ನೆಲುಬು. ಈ ಊರಿನಲ್ಲಿ ಪ್ರಸಿದ್ಧವಾದ ಸಿರ್ಸಿ ಮಾರಿಕಾಂಬಾ ದೇವಸ್ಥಾನ ಇದೆ. ಎರಡು ವರ್ಷಕೊಮ್ಮೆ ಸಿರ್ಸಿಯಲ್ಲಿ ನಡೆಯುವ ಶ್ರೀ ಮಾರಿಕಾಂಬಾ ದೇವಿ ಜಾತ್ರೆಯು ಭಾರತದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೂ ಕೂಡ ಪಾತ್ರವಾಗಿದೆ.

ಹೆಸರು

[ಬದಲಾಯಿಸಿ]

ಈ ಪ್ರದೇಶದಲ್ಲಿ ಹೆಚ್ಚಾಗಿ ಕಾಣಸಿಗುತ್ತಿದ್ದ ಸಿರಿಸ ಮರಗಳ ಕಾರಣದಿಂದ ಈ ಊರನ್ನು ಸಿರಿಸೆ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಕಾಲಕ್ರಮೇಣ ಇದು ಸಿರಸಿಯಾಗಿ, ಅನಂತರ 'ಸಿರ್ಸಿ'ಯಾಗಿ ಬಳಕೆಗೆ ಬಂದಿತು. ಸಿರ್ಸಿಯನ್ನ ಸೋಂದಾ ಅರಸರ ಕಾಲದಲ್ಲಿ ಕಲ್ಯಾಣ ಪಟ್ಟಣ ಎಂಬ ಹೆಸರಿನಿಂದ ಸಹ ಕರೆಯುತ್ತಿದ್ದರು.

ಪ್ರವಾಸೀ ತಾಣಗಳು

[ಬದಲಾಯಿಸಿ]

ಬನವಾಸಿ

[ಬದಲಾಯಿಸಿ]

ಕ್ರಿಸ್ತಶಕ ೩೪೫ – ೫೨೫ ವರೆಗೆ ಆಳಿದ ಕದಂಬ ಅರಸರ ರಾಜಧಾನಿಯಾಗಿದ್ದ ಬನವಾಸಿ ಸಿರ್ಸಿಯಿಂದ ೨೪ ಕಿ.ಮಿ. ದೂರದಲ್ಲಿದೆ. ಇಲ್ಲಿ ಕದಂಬರು ಕಟ್ಟಿಸಿದ ಮಧುಕೇಶ್ವರ ದೇವಸ್ಥಾನ ತುಂಬ ಸುಂದರವಾಗಿದೆ.

ಸಹಸ್ರಲಿಂಗ

[ಬದಲಾಯಿಸಿ]

ಸಿರ್ಸಿಯಿಂದ ೧೭ ಕಿ.ಮಿ. ದೂರದಲ್ಲಿರುವ ಸಹಸ್ರಲಿಂಗದಲ್ಲಿ, ನದಿಯ ಮಧ್ಯದಲ್ಲಿ ಕಲ್ಲುಗಳಲ್ಲಿ ಕೆತ್ತಲಾದ ನೂರಾರು ಶಿವಲಿಂಗಗಳಿವೆ. ಕಾಡಿನ ಮಧ್ಯ ಇರುವ ಸಹಸ್ರಲಿಂಗಕ್ಕೆ ಶಿವರಾತ್ರಿಯಂದು ಬಹಳ ಜನ ಬರುತ್ತಾರೆ.

ಸೋಂದಾ

[ಬದಲಾಯಿಸಿ]

ಸಿರ್ಸಿಯಿಂದ 20 ಕಿ.ಮಿ. ದೂರದಲ್ಲಿರುವ ಸೋಂದಾದಲ್ಲಿ (ಇತರೆ ಹೆಸರುಗಳು ಸೋದೆ, ಸ್ವಾದಿ) ಪ್ರಸಿದ್ಧ ವಾದಿರಾಜ ಮಠವಿದೆ. ಮತ್ತು ಅಲ್ಲಿ ಕೆಲ ಶತಮಾನಗಳ ಹಿಂದಿನ ಸುಂದರವಾದ ಕೋಟೆಯಿದೆ.

ಉಂಚಳ್ಳಿ ಜಲಪಾತ

[ಬದಲಾಯಿಸಿ]

೧೧೬ ಮಿಟರ್ ಎತ್ತರದಿಂದ ಧುಮುಕುವ ಈ ಜಲಪಾತ ರಮಣೀಯವಾಗಿದೆ. ಸಿರ್ಸಿಯಿಂದ ೩೦ ಕಿ.ಮಿ. ದೂರದಲ್ಲಿರುವ ಈ ಜಲಪಾತದಲ್ಲಿ ವರ್ಷದ ಬಹು ಭಾಗದಲ್ಲಿ ನೀರು ಇರುತ್ತದೆ.

ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಶ್ರೇಣಿಯಲ್ಲಿದೆ. ಇದು ಶಿರಸಿಯಿಂದ ೪೫ ಕಿ.ಮಿ. ದೂರದಲ್ಲಿದೆ.

ಶ್ರೀ ಮಾರಿಕಾಂಬಾ ದೇವಸ್ಥಾನ

[ಬದಲಾಯಿಸಿ]

ಸಿರ್ಸಿಯಿಂದ ಬನವಾಸಿಗೆ ಹೋಗುವ ರಸ್ತೆಯ ಬಲಭಾಗದಲ್ಲಿ ಸುಮಾರು ೧೬ನೇ ಶತಮಾನದ ಶ್ರೀ ಮಾರಿಕಾಂಬಾ ದೇವಾಲಯವಿದೆ. ೧೯೩೩ರಲ್ಲಿ ಗಾಂಧೀಜಿಯವರು ಸಹ ಇಲ್ಲಿಗೆ ಭೇಟಿ ನೀಡಿದ್ದರು ಎಂಬ ಉಲ್ಲೇಖವಿದೆ.

ಮುಂಡಿಗೆಕೆರೆ ಪಕ್ಷಿಧಾಮ

[ಬದಲಾಯಿಸಿ]

ಸಿರ್ಸಿ ತಾಲೂಕಿನ ಸುಧಾಪುರ ಕ್ಷೇತ್ರದ ಸೋಂದಾ ಗ್ರಾಮದಲ್ಲಿರುವ ಬಾಡಲಕೊಪ್ಪ ಮಜರೆಯಲ್ಲಿರುವ ಮುಂಡಿಗೆಕೆರೆ ಪಕ್ಷಿಧಾಮಕ್ಕೆ ಪ್ರತಿವರ್ಷ ಸಾವಿರಾರು ಬೆಳ್ಳಕ್ಕಿಗಳು ವಂಶಾಭಿವೃದ್ಧಿಗೆ ಜೂನ್ ತಿಂಗಳಲ್ಲಿ ಬಂದು ನೂರಾರು ಗೂಡುಗಳನ್ನು ಕಟ್ಟಿ ವಾಸಿಸುತ್ತವೆ. [] ಅಕ್ಟೋಬರ್‌ ತಿಂಗಳ ಕೊನೆಯವರೆಗೆ ಸಂತಾನೋತ್ಪತ್ತಿ ಮಾಡಿಕೊಂಡು ಹಾರಿಹೋಗುತ್ತವೆ. ಸುಮಾರು ೪ ಎಕರೆ ವಿಸ್ತಾರದ ಈ ಕೆರೆಯನ್ನು ಸಂಪೂರ್ಣ ಆವರಿಸಿವ ಮುಂಡಿಗೆ ಗಿಡಗಳ ಮೇಲೆಯೇ ಗೂಡು ಕಟ್ಟಿಕೊಳ್ಳುತ್ತವೆ. ಕೆರೆಯ ಪಕ್ಕದಲ್ಲೇ ೪೦ ಅಡಿ ಎತ್ತರದ ವೀಕ್ಷಣಾ ಗೋಪುರ ಸಹ ಇದೆ.[]

ಮುಸುಕಿನ ಬಾವಿ

[ಬದಲಾಯಿಸಿ]

ಸದ್ಯ ಸಿರ್ಸಿ ನಗರದ ನಾಡಿಗಲ್ಲಿಯ ಕೊನೆಯಲ್ಲಿರುವ ಮುಸುಕಿನ ಬಾವಿಯನ್ನು ೧೭ನೇ ಶತಮಾನದಲ್ಲಿ ಸೋದೆಯ ಅರಸ ಸದಾಶಿವರಾಯ ತನ್ನ ಪ್ರೇಯಸಿ ಸ್ನಾನಕ್ಕೆ ಅನುಕೂಲ ಕಲ್ಪಿಸಲು ಕಟ್ಟಿಸಿದ್ದ.[]

ಇತಿಹಾಸ

[ಬದಲಾಯಿಸಿ]

ರಾಜ ಮನೆತನಗಳು[]

[ಬದಲಾಯಿಸಿ]
ಕ್ರಿ.ಶ. ಮನೆತನ
ಪೂರ್ವ ಮೌರ್ಯ
೧-೨ನೇ ಶತಮಾನ ಶಾತವಾಹನ
೨-೩ನೇ ಶತಮಾನ ಚುಟುವಂಶ (ಶಾತವಾಹನರ ಶಾಖೆ), ಕಂಚಿ ಪಲ್ಲವರು
೩-೬ನೇ ಶತಮಾನ ಬನವಾಸಿ ಕದಂಬರು
೬-೧೦ನೇ ಶತಮಾನ ಎರಡನೇ ಪುಲಿಕೇಶಿ, ಆಳುಪರು, ರಾಷ್ಟ್ರಕೂಟರು
೧೦-೧೨ ಶತಮಾನ ಕದಂಬ, ಕಲ್ಯಾಣ ಚಾಲುಕ್ಯ (ಹಾನಗಲ್ಲಿನ ಶಾಸನಗಳು)
೧೪೦೦-೧೭೬೪ ಶತಮಾನ ಸೊಂದಾ ನಾಯಕರು (ವಿಜಯನಗರ ಸಾಮ್ರಾಜ್ಯದ ಮಾಂಡಲಿಕ)
೧೭೬೩-೧೭೯೯ ಮೈಸೂರಿನ ಹೈದರಾಲಿ (ಆಂಗ್ಲೋ-ಮೈಸೂರ್ ಯುದ್ಧದವರೆಗೆ)
೧೮೦೦-೧೯೪೭ ಆಂಗ್ಲರು

ಪ್ರಮುಖ ಇಸವಿಗಳು

[ಬದಲಾಯಿಸಿ]
೧೮೬೨ ಆಂಗ್ಲರಿಂದ ಮುಂಬೈ ಪ್ರಾಂತ್ಯಕ್ಕೆ ಸೇರ್ಪಡೆ
೧೯೫೬ ಸ್ವತಂತ್ರ್ಯ ಭಾರತದ ಮೈಸೂರು ಪ್ರಾಂತ್ಯಕ್ಕೆ ಸೇರ್ಪಡೆ
೧೮೫೯ ಸಿರ್ಸಿ ತಾಲೂಕಾ ಕೇಂದ್ರವಾದದ್ದು (ಸೋಂದೆಯಿಂದ)
೧೯೭೭ ನಾರ್ತ್ ಕೆನರಾದ ಮರುನಾಮಕರಣ - ಉತ್ತರ ಕನ್ನಡ

ದೊರೆತ ನಾಣ್ಯಗಳು

[ಬದಲಾಯಿಸಿ]
  • ಬೆಳ್ಳಿ, ಪೊಟಿನ್ ಮತ್ತು ಸೀಸದ ನಾಣ್ಯಗಳು[]
  • ಶಾತವಾಹನ, ಚುಟು, ರೋಮನ್ (ಲಿಸಿತಿಸ್, ಡೆಮೆಟ್ರಿಯಸ್, ಟೊಲೆಮಿ, ಆಗಥೊಕ್ಲಿಯಸ್)[]

ಪ್ರಮುಖ ಉಲ್ಲೇಖಗಳು

[ಬದಲಾಯಿಸಿ]
  • ಸಿರ್ಸಿ ಹತ್ತಿರದ ಸಿದ್ದಾಪುರ ತಾಲೂಕಿನ ತಮಡಿ ಕಲ್ಲಾಳದಲ್ಲಿ ದೊರೆತ "ಡಿಸೆಂಬರ್ ೨೬, ೧೦೭೨ (ಗುರುವಾರ)" ತಿಥಿಯ ವೀರಗಲ್ಲಿನಲ್ಲಿ, ಸಿರಿಸೆ' ಎಂಬ ಸ್ಥಳದಲ್ಲಿ ಅಣ್ಣ ತಮ್ಮಂದಿರಾದ ಚಟ್ಟಯ್ಯದೇವ ಮತ್ತು ತೈಲಪದೇವರ ನಡುವೆ ಯುದ್ಧವಾಗಿತ್ತು ಎಂದು ಉಲ್ಲೇಖವಿದೆ.[]
  • ಜರ್ನಿ ಥ್ರೋ ದಿ ನಾರ್ಥನ್ ಪಾರ್ಟ್ಸ್ ಆಫ್ ಕೆನರಾ: ಕ್ರಿ.ಶ. ೧೮೦೧ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವೈದ್ಯ ಪದವಿಧರ ಡಾ|| ಫ್ರಾನ್ಸಿಸ್ ಬುಕಾನನ್. ಟಿಪ್ಪೂ ಮರಣಾನಂತರ ಕಂಪನಿ ವಶಪಡಿಸಿಕೊಂಡ ಮೈಸೂರು ಮತ್ತು ಮಲಬಾರ್ ಪ್ರಾಂತ್ಯಗಳಲ್ಲಿ ಪ್ರವಾಸ ಕೈಗೊಂಡನು. ಆತ ತನ್ನ 'Jorney Through the Northerns Parts of Kanara' []ಹೊತ್ತಿಗೆಯಲ್ಲಿ, ಉತ್ತರಕನ್ನಡದ ಸೋಂದಾದ ತಹಶೀಲ್ದಾರನಿರುವ ಒಂದು ಸಣ್ಣ ಹಳ್ಳಿ 'ಸೆರ್ಸಿ' ಎಂದು ದಾಖಲಿಸಿದ್ದಾನೆ.[]

ಜನಸಂಖ್ಯೆ

[ಬದಲಾಯಿಸಿ]

೨೦೧೧ ಜನಗಣತಿಯ ಪ್ರಕಾರ ಈ ಊರಿನ ಜನಸಂಖ್ಯೆ ೧,೧೦,೨೧೫. ಇವರಲ್ಲಿ 81 ಶೇಕಡಾ ಜನರು ಸಾಕ್ಷರರು. ಸಿರ್ಸಿಯಲ್ಲಿ ಕನ್ನಡ, (ಹವ್ಯಕ ಕನ್ನಡ), ಕೊಂಕಣಿ, ಮರಾಠಿ ಭಾಷೆಗಳನ್ನು ಮಾತಾಡುವ ಜನರಿದ್ದು ಮುಖ್ಯ ವ್ಯಾವಹಾರಿಕ ಭಾಷೆ ಕನ್ನಡವಾಗಿದೆ.

ಪಾರಂಪರಿಕ ಸ್ಥಳಗಳು

[ಬದಲಾಯಿಸಿ]

ಪಂಡಿತ್ ಜನರಲ್ ವಾಚನಾಲಯ

[ಬದಲಾಯಿಸಿ]

೧೮೭೦ರಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿಗಳು ಸಂಗ್ರಹಿಸಿದ ೩೦೦ ಪುಸ್ತಕಗಳೊಂದಿಗೆ ಕಂದಾಯ ಕಛೇರಿಯಲ್ಲಿ ಪ್ರಾರಂಭವಾಗಿತ್ತು. ನಂತರ ಪುರಸಭಾ ಕಟ್ಟಡಕ್ಕೆ ಸ್ಥಳಾಂತರಗೊಂಡು ೧೯೦೦ರ ಸುಮಾರಿಗೆ ದಿ. ರಾವಬಹದ್ದೂರ್ ಪುಂಡಲೀಕರಾವ್ ಪಂಡಿತರು (ಪುರಸಭಾಧ್ಯಕ್ಷ) ೨೦೦೮ ಚಮೀ ಜಾಗವನ್ನು ೯೯ವರ್ಷಗಳ ಲೀಸಿಗೆ ನೀಡಿದರು. ೧೯೦೪ರಲ್ಲಿ ಕಟ್ಟಡ ನಿರ್ಮಾಣ ಆರಂಭಗೊಂಡು, ೧೯೦೭ರಲ್ಲಿ ಶ್ರೀಮತಿ ಸಿ. ಸಿ. ಬೋಯ್ಡ್‌ರವರಿಂದ ಉದ್ಘಾಟನೆಯಾಯಿತು. []

೧೯೭೦ರಲ್ಲಿ ಪದ್ಮಶ್ರೀ ಟಾಕೀಸಿನಲ್ಲಿ ನೃತ್ಯ ಪ್ರದರ್ಶನದಿಂದ ೨೧,೦೦೦ ರೂಪಾಯಿಗಳನ್ನು ಸಂಗ್ರಹಿಸಿ ವಾಚನಾಲಯದ ಶತಮಾನೋತ್ಸವ ಆಚರಿಸಲಾಯಿತು. ರಾಜ್ಯಪಾಲರ ಆಡಳಿತವಿದ್ದ ಕಾಲದಲ್ಲಿ ಅಂದಿನ ರಾಜ್ಯಪಾಲರಾಗಿದ್ದ ಧರ್ಮವೀರರು ಉದ್ಘಾಟಿಸಿ ೧೫,೦೦೦ ರೂಪಾಯಿಗಳ ಅನುದಾನವನ್ನು ಕಟ್ಟಡನಿಧಿಗೆ ನೀಡಿದರು. ೮-೫-೧೯೭೧ರಂದು ಲಕ್ಷ್ಮೀ ಟಾಕೀಸನಲ್ಲಿ ಶತಮಾನೋತ್ಸವ ಕಾರ್ಯಕ್ರಮ ಕಾರ್ಯಕ್ರಮ ನಡೆಯಿತು.[]

೧೯೭೧ರಲ್ಲಿ ೭೦೦೦ ಪುಸ್ತಕಗಳಿದ್ದ ವಾಚನಾಲಯ ಇಂದು ೨೫೦೦೦ದಷ್ಟು ಬೆಳೆದಿದೆ. ಆ ಸಂಗ್ರಹದಲ್ಲಿ ೨೭-೧೨-೧೯೩೧ರಂದು ರವೀಂದ್ರನಾಥ ಠಾಗೋರ್ರು ಶರಾ ಬರೆದು ಸಹಿಮಾಡಿರುವ 'ಗೋಲ್ಡನ್ ಬುಕ್ ಆಫ಼್ ಟಾಗೋರ್' ಪ್ರಮುಖ ಆಕರ್ಷಣೆಯಾಗಿದೆ. ಮತ್ತೂರು ಕೃಷ್ಣಮೂರ್ತಿ, ಯಂಡಮೂರಿ ವೀರೇಂದ್ರನಾಥ್‌, ಎಂ. ಕೆ. ಇಂದಿರ, ಸಾಯಿಸುತೆ, ಎಸ್.ಎಲ್. ಭೈರಪ್ಪ, ಎಲ್. ಎಸ್. ಶೇಷಗಿರಿ ರಾವ್, ಮುಂತಾರವರು ಭೇಟಿ ನೀಡಿ ಶರಾ ಬರೆದಿದ್ದಾರೆ. []

ನಾಗೂಬಾಯಿ ಓಣಿ

[ಬದಲಾಯಿಸಿ]

ರಾಯರಪೇಟೆಯ ವಿಷ್ಣು ಮಠದ ಎದುರಿಗಿರುವ ರಸ್ತೆಗೆ ನಾಗೂಬಾಯಿ ಓಣಿ ಎಂದು ಕರೆಯುತ್ತಾರೆ. ೧೯೨೦ರಲ್ಲಿ ಸಿರ್ಸಿಗೆ ಬಂದ ಶ್ರೀಮತಿ ನಾಗೂಬಾಯಿ ಭಟ್ಕಳ್ಕರ್ (೧೮೯೭-೧೯೬೯) ಎಂಬ ಶುಶ್ರೂಕಿಯ ನೆನಪಿಗಾಗಿ ಹೆಸರಿಟ್ಟಿದ್ದಾರೆ. ಇವರು ದಶಕಗಳ ಕಾಲ ಸಿರ್ಸಿ ಭಾಗದ ಬಾಣಂತಿ ಮತ್ತು ನವಜಾತ ಶಿಶುಗಳ ಆರೈಕೆಮಾಡುತ್ತಿದ್ದಲ್ಲದೇ ೧೯೫೪-೫೬ರ ಕಾಲದಲ್ಲಿ ರಾಯರಪೇಟೆ ವಾರ್ಡಿನಿಂದ ಪುರಸಭೆಗೆ ನಾಮಕರಣ ಸದಸ್ಯರಾಗಿಯೂ ಸೇವೆಸಲ್ಲಿಸಿದ್ದಾರೆ. ಇವರ ಹೆಸರಿನ ದತ್ತಿನಿಧಿಯಿಂದ ಪ್ರತಿವರ್ಷ ಎಂ. ಇ. ಎಸ್. ನರ್ಸಿಂಗ್ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಶುಶ್ರೂಕಿಗೆ ವಿಶೇಷ ಪುರಸ್ಕಾರವನ್ನು ನೀಡಲಾಗುತ್ತದೆ.[]

ಪಂಡಿತ್ ಜನರಲ್ ಆಸ್ಪತ್ರೆ

[ಬದಲಾಯಿಸಿ]

ಶ್ರೀಮಾರಿಕಾಂಬಾ ಮೆಟರ್ನಿಟಿ ವಾರ್ಡ: ೧೯೩೦ರಲ್ಲಿ ಮಾರಿಕಾಂಬಾ ದೇವಸ್ಥಾನದ ಧನಸಹಾಯದಿಂದ ನಿರ್ಮಾಣಗೊಂಡು, ೧೯೩೨ರಲ್ಲಿ ಮುಂಬೈ ಪ್ರೆಸಿಡೆನ್ಸಿಯ ಗವರ್ನರ್ ಕೌನ್ಸಿಲ್‌ನ ಆರೋಗ್ಯ ಇಲಾಖಾ ಸದಸ್ಯರಾಗಿದ್ದ ಶಾನ್‌ವಾಜ್‌ಖಾನ್‌ರಿಂದ ಉದ್ಘಾಟನೆಗೊಂಡಿತು. []

ಇತರ ಕಟ್ಟಡಗಳು:

[ಬದಲಾಯಿಸಿ]
  • ರಾಯಪ್ಪ ಹುಲೇಕಲ್ ಶಾಲೆ (ಸು. ೧೫೦ ವರ್ಷ)
  • ಕೇಶವೈನ್ ಬಂಗಲೆ - ೧೯೩೧ರಲ್ಲಿ ಗಾಂಧೀಜಿಯವರು ವಾಸ್ತವ್ಯ ಮಾಡಿದ ಕಟ್ಟಡ

ವೃತ್ತ ಪತ್ರಿಕೆಗಳು

[ಬದಲಾಯಿಸಿ]

ವಾಣಿಜ್ಯ ಸಂಸ್ಥೆಗಳು

[ಬದಲಾಯಿಸಿ]
  • ಟಿ. ಎಸ್. ಎಸ್. (ದಿ ತೋಟಗಾರ್ಸ್ ಕೊ-ಆಪರೇಟಿವ್ ಸೇಲ್ ಸೊಸೈಟಿ ಲಿಮಿಟೆಡ್)

ಪ್ರಮುಖ ಶಿಕ್ಷಣ ಸಂಸ್ಥೆಗಳು

[ಬದಲಾಯಿಸಿ]
  • ಅರಣ್ಯ ಮಹಾವಿದ್ಯಾಲಯ, ಸಿರ್ಸಿ (೧೯೮೫)
  • ಎಮ್. ಇ. ಎಸ್ ಎಜುಕೇಶನ್ ಟ್ರಸ್ಟ್ (ಎಂ. ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಕಾನೂನು ಮಹಾವಿದ್ಯಾಲಯ, ವಾಣಿಜ್ಯ ಮಹಾವಿದ್ಯಾಲಯ)
  • ಆವೆ ಮರಿಯಾ ಎಜುಕೇಶನ್ ಟ್ರಸ್ಟ್ (೧೯೪೫)
  • ಪ್ರೋಗ್ರೆಸ್ಸಿವ್ ಎಜುಕೇಶನ್ ಟ್ರಸ್ಟ್
  • ಡೊನ್ ಬೊಸ್ಕೊ ಎಜುಕೇಶನ್ ಟ್ರಸ್ಟ್
  • ಆರ್.ಎನ್.ಎಸ್ ಪೊಲಿಟೇಕ್ನಿಕ್ ಎಜುಕೇಶನ್ ಟ್ರಸ್ಟ್
  • ಶ್ರೀ ಮಾತಾ ವಿದ್ಯಾನಿಕೇತನ,
  • ಚಂದನ ಪ್ರೌಢಶಾಲೆ
  • ಜಿ.ಎಸ್.ಎಸ್. ವಾನಳ್ಳಿ
  • ಶ್ರೀದೇವಿ ಪ್ರೌಢಶಾಲೆ, ಹುಲೇಕಲ್
  • ಲಯನ್ಸ್ ಶಿಕ್ಷಣ ಸಂಸ್ಥೆ (೧೯೯೪)
  • ಶ್ರೀ ಸಿದ್ಧಿ ವಿನಾಯಕ ಪ್ರೌಢಶಾಲೆ, ಗೋಳಿ (೧೯೬೧)
  • ಶ್ರೀ ಕಾಳಿಕ ಭವಾನಿ ಸೆಕೆಂಡರಿ ಶಾಲೆ, ಕಾನಸೂರು

ಪ್ರಮುಖ ವ್ಯಕ್ತಿಗಳು

[ಬದಲಾಯಿಸಿ]

ಇವನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ಮಲೆನಾಡಿನ ಹೆಬ್ಬಾಗಿಲು | ವಿಜಯ ಕರ್ನಾಟಕ
  2. ಉತ್ತರ ಕನ್ನಡ ಜಿಲ್ಲೆ | karnataka.gov.in
  3. "ಬೆಳ್ಳಕ್ಕಿಗಳ ನಿರ್ಗಮನ; ಮುಂಗಾರು ಮುಕ್ತಾಯದ ಸೂಚನೆ!", ಅಕ್ಟೋಬರ್ ೧೦, ೨೦೨೨, ಉದಯವಾಣಿ
  4. "ಮುಂಡಿಗೆಕೆರೆ ಪಕ್ಷಿಧಾಮ ತಾಣವೆಂದು ಘೋಷಿಸಿ", ೧೦ ಜ. ೨೦೨೦, ವಿಜಯ ಕರ್ನಾಟಕ
  5. "ಕಳೆಗುಂದಿದ್ದ ಉದ್ಯಾನಕ್ಕೆ ಹೊಸ ಸ್ಪರ್ಶ ನೀಡಿದ ನಗರಸಭೆ: ಉದ್ಯಾನಕ್ಕೆ ಹೊಸ ಸ್ಪರ್ಶ: ಮುಸುಕಿನ ಬಾವಿಗೆ ಬೆಳಕಿನ ಹೊದಿಕೆ", 28 ಫೆಬ್ರವರಿ 2022, ಪ್ರಜಾವಾಣಿ
  6. ೬.೦ ೬.೧ ೬.೨ ೬.೩ ೬.೪ "ಸಿರ್ಸಿ ತಾಲೂಕಿನ ಐತಿಹಾಸಿಕ ಆಕರಗಳು", ಡಾ|| ಎ. ಕೆ. ಶಾಸ್ತ್ರಿ
  7. "Journey Through the Northern Parts of Kanara": (being the Journey of Dr. Buchanan in the Present District of North Kanara in the Year 1801 Between 18th February and 17th March)
  8. ೮.೦ ೮.೧ ೮.೨ "ಶಾನ್‌ಭಾಗ್ ಸಾಂಗ್ತಾ" ಅಂಕಣ(೯೧) ೧೦, ಅಕ್ಟೋಬರ್, ೨೦೨೨, ಜನಮಾಧ್ಯಮ ಪತ್ರಿಕೆ
  9. ೯.೦ ೯.೧ "ಸಿರ್ಸಿಯ ಫ್ಲಾರೆನ್ಸ್ ನೈಟಿಂಗೇಲ್ ಎನ್ನಿಸಿದ ನಾಗೂಭಾಯಿ ಭಟ್ಕಳಕರ್", ಶಾನಭಾಗ ಸಾಂಗ್ತಾ ಅಂಕಣ (೮೩), ೮, ಆಗಷ್ಟ್ ೨೦೨೨, ಜನಮಾಧ್ಯಮ


"https://kn.wikipedia.org/w/index.php?title=ಸಿರ್ಸಿ&oldid=1231795" ಇಂದ ಪಡೆಯಲ್ಪಟ್ಟಿದೆ