ಅಂಕೋಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಂಕೋಲಾ
ಅಂಕೋಲಾ
ನಗರ
Population
 (೨೦೦೧)
 • Total೧೪೩೦೯
Websitewww.ankolatown.gov.in

ಅಂಕೋಲಾ ಕರ್ನಾಟಕ ರಾಜ್ಯದಉತ್ತರ ಕನ್ನಡ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. ಅಕೊಲಾ ಎನ್ನುವ ಮರದಿಂದ ಈ ಹೆಸರು ಬಂದಿದೆ. ಇದು ಸತ್ಯಾಗ್ರಹಿಗಳ ತವರೂರು. ಕರ್ನಾಟಕದ ಬಾರ್ಡೊಲಿ ಎಂದು ಸಹ ಕರೆಯುವರು. ಅಂಕೋಲಾದ "ಕರಿ ಈಸಾಡ"(ಮಾವಿನ ಹಣ್ಣುಗಳ ರಾಜ) ಅತ್ಯಂತ ಪ್ರಸಿದ್ದಿ ಪಡೆದಿದೆ. "ಚುಟುಕಿನ ಬ್ರಹ್ಮ" ಎಂದು ಖ್ಯಾತಿ ಪಡೆದ ದಿನಕರ ದೇಸಾಯಿಯವರ ತವರೂರಿದು. "ಅಂಕೋಲಾ ಬಂಡಿಹಬ್ಬ" ನಾಡಿನಾದ್ಯಂತ ಖ್ಯಾತಿ ಪಡೆದಿದೆ.

ಭೌಗೋಳಿಕ

ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ಪೂರ್ವದಲ್ಲಿ ಸಿರ್ಸಿ, ದಕ್ಷಿಣದಲ್ಲಿ ಕುಮಟ, ಉತ್ತರದಲ್ಲಿ ಕಾರವಾರ ಮತ್ತು ಯಲ್ಲಾಪುರ ತಾಲ್ಲೂಕುಗಳು ಈ ತಾಲ್ಲೂಕನ್ನು ಸುತ್ತುವರೆದಿವೆ. ಬೇಲೆಕೇರಿ, ಬಾಳಲೆ ಮತ್ತು ಭಾಸಗೋಡ ಇದರ ಹೋಬಳಿಗಳು. ತಾಲ್ಲೂಕಿನಲ್ಲಿ 86 ಗ್ರಾಮಗಳಿವೆ. ವಿಸ್ತೀರ್ಣ 971 ಚ.ಕಿಮೀ. ಜನಸಂಖ್ಯೆ 1,01,540. ತಾಲ್ಲೂಕಿನ ತೀರಪ್ರದೇಶ ಮರಳು ಭೂಮಿ. ಉಳಿದ ಭೂಭಾಗ ಕೆಂಪು ಜಂಬುಮಣ್ಣಿನಿಂದ ಕೂಡಿದೆ. ಮಳೆ ಹೆಚ್ಚು. ವಾರ್ಷಿಕ ಸರಾಸರಿ 3,405ಮಿಮೀ. ಬೇಡ್ತಿ ಅಥವಾ ಗಂಗಾವಳಿ ನದಿ ಈ ತಾಲ್ಲೂಕಿನ ಮಧ್ಯದಲ್ಲಿ ಈಶಾನ್ಯದಿಂದ ನೈಋತ್ಯಕ್ಕೆ ಹರಿದು ಅಂಕೋಲದ ದಕ್ಷಿಣದಲ್ಲಿ ಅರಬ್ಬಿಸಮುದ್ರ

ಅರಬ್ಬಿ ಸಮುದ್ರಕ್ಕೆಸೇರುವುದು.

ಅಂಕೋಲದ ಬಳಿ ಅಂಕೋಲ ನದಿ ಇದೆ.ಇದರ ಪೂರ್ವ ಭಾಗವನ್ನು ಶಂಕದ ಹೊಳೆ ಎಂದು ಕರೆಯುತ್ತಾರೆ. ಇದರ ಉತ್ತರದಲ್ಲಿ ಬೇಲೆಕೇರಿ ನದಿ ಹರಿಯುವುದು. ಈ ನದಿಗಳು ತಾಲ್ಲೂಕಿನ ಬಹುತೇಕ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಹರಿಯುವುದರಿಂದ ನೀರಾವರಿಗೆ ಹೆಚ್ಚು ಉಪಯುಕ್ತವಾಗಿಲ್ಲ. ಮಳೆನೀರಿನಿಂದ ಆಬಾದಾಗುವ ಅನೇಕ ತೋಟ ಗದ್ದೆಗಳಿವೆ. ಇಲ್ಲಿರುವ ಕೆಲವು ಬಾವಿಗಳಿಂದಲೂ ವ್ಯವಸಾಯಕ್ಕೆ ನೀರು ಒದಗುತ್ತದೆ. ಬತ್ತ, ಅಡಕೆ ಇಲ್ಲಿಯ ಮುಖ್ಯ ಬೆಳೆಗಳು. ತಾಲ್ಲೂಕಿನ ತೀರ ಪ್ರದೇಶ ಬಿಟ್ಟು ಅದರ ಪಕ್ಕದಲ್ಲೆ ಸಾಗುವ ಸುಮಾರು 5ರಿಂದ 8ಕಿಮೀ ಅಗಲದ ಒಳನಾಡ ಪ್ರದೇಶ ಬತ್ತದ ಗದ್ದೆಗಳಿಂದ, ಮಾವಿನ ತೋಪುಗಳಿಂದ w:Cashew:ಗೇರು ಹಲಸು ಮತ್ತು ಇತರ ಫಲವೃಕಗಳಿಂದ ಕೂಡಿದೆ. ಇದರ ಪಕ್ಕದ ಸಣ್ಣ ಗುಡ್ಡಪ್ರದೇಶದಲ್ಲಿ ಹುಲ್ಲು ಬೆಳೆಯುತ್ತದೆ. ಇವುಗಳ ಪೂರ್ವಕ್ಕೆ ಎತ್ತರವಾದ ದಟ್ಟ ಕಾಡುಗಳಿಂದ ಕೂಡಿದ ಬೆಟ್ಟ ಪ್ರದೇಶವಿದೆ. ಒಟ್ಟು 75,374 ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಇಲ್ಲಿನ ಕಾಡುಗಳಲ್ಲಿ ಬೆಲೆಬಾಳುವ ಮತ್ತಿ, ಹೊನ್ನೆ, ನಂದಿ ಮುಂತಾದ ಮರಗಳು ಬೆಳೆಯುತ್ತವೆ. ತೀರಪ್ರದೇಶದಲ್ಲಿ ತೆಂಗಿನ ಮರಗಳಿವೆ. ಇಲ್ಲಿನ ಕೆಲವು ಗ್ರಾಮಗಳು ಆರೋಗ್ಯದಾಯಕವೆಂದು ಪರಿಗಣಿತವಾಗಿವೆ.ಗಂಗಾವಳಿ ನದಿಯಲ್ಲಿ ಕೆಲವು ಕಿಮೀ ದೂರ ಸಣ್ಣ ದೋಣಿಗಳ ಸಂಚಾರ ಉಂಟು. ಕಾರವಾರ, ಹೊನ್ನಾವರ, ಮಂಗಳೂರುಗಳೊಡನೆ ಈ ತಾಲ್ಲೂಕು ಸಂಪರ್ಕ ಹೊಂದಿದೆ. ಅಂಕೋಲ ಪಟ್ಟಣದ ಉತ್ತರಕ್ಕೆ 8ಕಿಮೀ ದೂರದಲ್ಲಿರುವ ಅವರ್ಸೆ ಗ್ರಾಮದಲ್ಲಿ ಕಾತ್ಯಾಯಿನಿ ದೇವಾಲಯವಿದೆ. ಇಲ್ಲಿಯ ವಿಗ್ರಹ ಸಮುದ್ರದಲ್ಲಿ ದೊರೆತದ್ದೆಂದು ಪ್ರತೀತಿಯುಂಟು. ನವರಾತ್ರಿಯ ಒಂಬತ್ತು ದಿನಗಳೂ ಇಲ್ಲಿ ಜಾತ್ರೆ ನಡೆಯುವುದು. ಅಂಕೋಲದ ಉತರಕ್ಕೆ ಸುಮಾರು 6ಕಿಮೀ ದೂರದೆಲ್ಲಿ ಬೇಲೆಕೇರಿ ನದಿಯ ದಡದಲ್ಲಿರುವ ಬಂದರು, ಬೇಲೆಕೇರಿ ಗ್ರಾಮ. ಇದೊಂದು ಆರೋಗ್ಯಧಾಮವೆಂದು ಪ್ರಸಿದ್ಧವಾಗಿದೆ. ಅಂಕೋಲದ ದಕಿಣಕ್ಕೆ 8ಕಿಮೀ ದೂರದಲ್ಲಿರುವ ಗಂಗಾವಳಿ ಗ್ರಾಮ ಗಂಗಾವಳಿ ನದಿಯ ದಡದಲ್ಲಿದೆ. ಇಲ್ಲಿರುವ ಗಂಗೆ ದೇವಾಲಯ ಪ್ರಸಿದ್ಧ. ಗಂಗಾಷ್ಟಮಿಯಂದು ಇಲ್ಲಿ ಜಾತ್ರೆ ನಡೆಯುವುದು. ಗಂಗಾವಳಿ ಗ್ರಾಮಕ್ಕೆದುರಾಗಿ ನದಿಯ ಉತ್ತರ ದಂಡೆಯ ಮೇಲೆ ಪ್ರಕೃತಿ ಸೌಂದರ್ಯದಿಂದ ಕೂಡಿದ ಮಂಜಗುಣಿ ಗ್ರಾಮವಿದೆ. ಈ ತಾಲ್ಲೂಕಿನ ಆಡಳಿತ ಕೇಂದ್ರ ಅಂಕೋಲ. ಜನಸಂಖ್ಯೆ 14,306. ಕಾರವಾರಕ್ಕೆ ಆಗ್ನೇಯದಲ್ಲಿ 24ಕಿಮೀ ದೂರದಲ್ಲಿ ಸಮುದ್ರತೀರದಿಂದ ಸುಮಾರು 3ಕಿಮೀ ಅಂತರದಲ್ಲಿದೆ ಇಲ್ಲಿಯ ಜನರ ಮುಖ್ಯ ಉದ್ಯೋಗ ವ್ಯವಸಾಯ, ವ್ಯಾಪಾರ ಮತ್ತು ಕೂಲಿಯ ದುಡಿಮೆ. ಅಂಕೋಲಪಟ್ಟಣ ಮುಂಬಯಿ ಮತ್ತು ಹುಬ್ಬಳಿಯಿಂದ ಬರುವ ವಸ್ತುಗಳ ಮಾರುಕಟ್ಟೆ. ಅಕ್ಕಿ, ತೆಂಗು, ಅಡಕೆ ಹೊಗೆಸೊಪ್ಪು ಮುಂತಾದವು ಗಳ ವ್ಯಾಪಾರವೂ ನಡೆಯುವುದು.ಅಂಕೊಲಾ 14 ° 39'38 "N 74 ° 18'17" E. ನಲ್ಲಿ ಇದೆ. ಇದು ಸರಾಸರಿ 17 ಮೀಟರ್ (55 ಅಡಿ) ಎತ್ತರದಲ್ಲಿದೆ. ಗಂಗಾವಲಿ ನದಿಯು (ಬೆಟ್ಟಿ ಎಂದೂ ಕರೆಯಲ್ಪಡುತ್ತದೆ) ಪಟ್ಟಣಕ್ಕೆ ಸಮೀಪದಲ್ಲಿ ಹರಿಯುವ ಪ್ರಮುಖ ನದಿಯಾಗಿದೆ. ಬೇಸಿಗೆಯ ಉಷ್ಣತೆಯು 30 °C ಮತ್ತು 35 °C ನಡುವೆ ಇರುತ್ತದೆ, ಆದರೆ ಚಳಿಗಾಲದ ತಾಪಮಾನವು 20 °C ಮತ್ತು 33 °C ನಡುವೆ ಕಡಿಮೆ ಇರುತ್ತದೆ.

ಬೆಲೆಕೆರಿ ಹತ್ತಿರದ ನೈಸರ್ಗಿಕ ಬಂದರು, ಇದು ಮುಖ್ಯವಾಗಿ ಚೀನಾ ಮತ್ತು ಯುರೋಪ್ಗೆ ಕಬ್ಬಿಣದ ಅದಿರನ್ನು ಸಾಗಿಸಲು ಬಳಸಲಾಗುತ್ತದೆ.

ಅಂಕೋಲ ಒಂದು ಐತಿಹಾಸಿಕ ಸ್ಥಳ. ಪಟ್ಟಣದ ಪೂರ್ವಕ್ಕೆ ಸ್ವಲ್ಪ ಎತ್ತರದಲ್ಲಿ ವೃತ್ತಾಕಾರವಾದ ಶಿಥಿಲ ಕೋಟೆಯಿದೆ. ಸುಮಾರು 548ಮೀ ಸುತ್ತಳತೆಯುಳ್ಳ ಈ ಕೋಟೆಯ ಸುತ್ತ 4ಮೀ ಅಗಲ 4ಮೀ ಆಳದ ಕಂದಕವಿದೆ. ಇದನ್ನು ಬಳಸಿ ಮಾವು, ಗೋಡಂಬಿ, ಹಲಸು ಮುಂತಾದ ಫಲವೃಕ್ಷಗಳನ್ನು ಬೆಳೆಸಲಾಗಿದೆ. ಈ ಕೋಟೆಯನ್ನು ಸೋದೆಯ ದೊರೆ ಅಂಕೋಲದಲ್ಲಿ ವಾಸವಾಗಿದ್ದ ತನ್ನ ಪ್ರೇಯಸಿಗಾಗಿ ಕಟ್ಟಿಸಿದನೆಂದು ಪ್ರತೀತಿ. ಇಲ್ಲಿ ಮಹಾಮಾಯ, ಆರ್ಯದುರ್ಗಾ, ಕುಂಡೋದರಿ, ಶಾಂತಾದುರ್ಗಾ, ಕಾಳಮ್ಮ, ದತ್ತಾತ್ರೇಯ ಮೊದಲಾದ ದೇವಾಲಯಗಳಿವೆ. ಮಹಾಮಾಯ ಮತ್ತು ಕುಂಡೋದರಿ ದೇವಾಲಯಗಳು 16ನೆಯ ಶತಮಾನದೆಲ್ಲಿ ನಿರ್ಮಾಣಗೊಂಡವು . ಇಲ್ಲಿಯ ಕೋಟೇಶ್ವರ ಅಥವಾ ರುದ್ರೇಶ್ವರ ದೇವಾಲಯದ ಹತ್ತಿರ ಒಂದು ಕೊಳವೂ ಒಂದು ರೋಮನ್ ಕೆಥೊಲಿಕ್ ಇಗರ್ಜಿಯೂ ಇವೆ. 1540ರ ಸುಮಾರಿನಲ್ಲಿ ಈ ಊರು ಪೋರ್ಚುಗೀಸರ ವಶದಲ್ಲಿತ್ತು. ಆ ಕಾಲದಲ್ಲಿ ಅಂಕೋಲದ ಮೂಲಕ ಖನಿಜ ಮತ್ತು ಬಟೆಗಳ ವ್ಯಾಪಾರ ನಡೆಯುತ್ತಿತ್ತು. 1567ರಲ್ಲಿ ವೆನಿಸ್ಸಿನ ಪಸಿದ್ಧ ವ್ಯಾಪಾರಿಯಾದ ಸೀಸರ್ ಫ್ರೆಡರಿಕ್ ಅಂಕೋಲಕ್ಕೆ ಭೇಟಿಕೊಟ್ಟಿದ್ದ .ಬಿಜಾಪುರದ ರಾಜಪ್ರತಿನಿಧಿಯಾಗಿದ್ದ ಷರೀಫ್- ಉಚಲ್-ಮುಲ್ಕ್ 16ನೆಯ ಶತಮಾನದ ಕೊನೆಯಲ್ಲಿ ಅಂಕೋಲವನ್ನು ಆಡಳಿತ ಕೇಂದ್ರವನ್ನಾಗಿಮಾಡಿಕೊಂಡಿದ್ದ. 1676ರಲ್ಲಿ ಶಿವಾಜಿಯ ಸೇನೆ ಅಂಕೋಲದ ಅರ್ಧಭಾಗ ವನ್ನು ನಾಶಗೊಳಿಸಿತು. 1730ರಲ್ಲಿ ಅಂಕೋಲ ಸೋದೆ ರಾಜ್ಯದ ಬಂದರಾಗಿತ್ತೆಂದು ಹ್ಯಾಮಿಲ್ಟನ್ನನ ಬರವಣಿಗೆಯಲ್ಲಿ ಉಲ್ಲೇಖವಿದೆ. ಅಂಕೋಲ ಮೊದಲು ಕುಮಟ ತಾಲ್ಲೂಕಿನ ಭಾಗವಾಗಿತ್ತು. 1880ರಲ್ಲಿ ಇದನ್ನು ಪ್ರತ್ಯೇಕ ತಾಲ್ಲೂಕನ್ನಾಗಿ ಮಾಡಲಾಯಿತು.

ಪ್ರಮುಖ ದೇವಾಲಯಗಳು

  • ಶಾಂತಾದುರ್ಗಾ ದೇವಾಲಯ,
  • ಈ ದೇವಸ್ಥಾನ ಅಂಕೋಲಾ ದ ಗ್ರಾಮ ದೇವತೆ ಯಾಗಿದ್ದು ಪ್ರತಿ ವರ್ಷ ಬೇಸಿಗೆಯಲ್ಲಿ
  • ಇಲ್ಲಿ ಬಂಡೀಪುರ ಹಬ್ಬ ನಡೆಯುತ್ತದೆ. ಈ ಬಂಡಿಹಬ್ಬ ದಿಲ್ಲಿ ಪಾಲ್ಗೋಳಲು ನಾನಾ ಕಡೆಯಿಂದ ಭಕ್ತರು ಬರುತ್ತಾರೆ.
  • ಆರ್ಯಾದುರ್ಗ ದೇವಸ್ಥಾನ
  • border|420x420px
  • ಆರ್ಯಾದುರ್ಗ ದೇವಸ್ಥಾನ
  • ಮೂಲತಃ ಈ ದೇವಸ್ಥಾನ ಕಾರವಾರದ ಅಂಜದೀಪ ದ್ವೀಪ ದಲ್ಲಿತ್ತು. ಪೋರ್ಚುಗೀಸ್ ರು
  • ಈ ದೇವಸ್ಥಾನ ನನ್ನು ನಾಶಪಡಿಸಿದ್ದರು. ಇದ್ದರಿಂದ ಅಲ್ಲಿನ ಭಕ್ತಾದಿಗಳು ಈ ದೇವಾಲಯ ನನ್ನು ಅಲ್ಲಿಂದ ಅಂಕೋಲಾಗೆ
  • 1024x1024px
  • ಆರ್ಯದುರ್ಗಾ ದೇವಾಲಯ,
  • ಕೋಗ್ರೆ ದೇವಾಲಯ,
  • ವೆಂಕಟ್ರಮಣ ದೇವಾಲಯ,
  • ಕಾನಬೀರ(ಭಾವಿಕೇರಿ),
  • ಬೊಮ್ಮಯ್ಯ ದೇವರು,
  • ಕಾತ್ಯಾಯಿಣಿ ಈ ದೇವಸ್ಥಾನ ನು ಅಂಕೋಲಾ ದಿಂದ ಉತ್ತರ ದಿಕ್ಕಿಗೆ 11 ಕಿಲೋಮೀಟರ್ ದೂರದಲ್ಲಿದ ಅವರ್ಸಾ ಗ್ರಾಮದಲ್ಲಿದೆ‌.
  • ಈ ದೇವಾಲಯದ ವಿಶೇಷತೆಗಳು ಏನೆಂದರೆ ಈ ದೇವಸ್ಥಾನ ಒಂದು ಹಡಗಿನ ಆಕಾರದಲ್ಲಿದೆ. ಇದು ಮೀನುಗಾರ ಕುಲದ ಖಾರ್ವಿ ಕುಟುಂಬದ ದೇವತೆ. ದಸರಾ ಹಬ್ಬದ ಸಂದರ್ಭದಲ್ಲಿ ಈ ದೇವಾಲಯ ದಲ್ಲಿ ಒಂಭತ್ತು ದಿನಗಳ ಕಾಲ ವಿಶೇಷವಾದ ಪೂಜೆ ನಡೆಯುತ್ತದೆ.
  • ಕುಸಲ ದೇವರು

ಭಾವಿಕೇರಿಯಲ್ಲಿ ಕಾನಬೀರ,ಮಹಾಸತಿ ದೇವಸ್ಥಾನವಿದ್ದು ಇವು ತಮ್ಮದೆ ಆದ ಐತಿಹಾಸಿಕ ಹಿನ್ನಲೆಯನ್ನ ಹೊಂದಿದೆ. ಕಾನಬೀರ ದೇವನ ಅಣ್ಣ ಪಕ್ಕದೂರಿನಲ್ಲಿರುವ ಜೈನಬೀರ(ಬೇಲೇಕೇರಿ)ಈ ದೇವನ ಒಂದು ಪಾರ್ಶ್ವದಿ೦ದ ನೋಡಿದರೆ ಅಣ್ಣನ ಕಡೆ ನೋಡುತಲಿದ್ದಾನೆ ಎನಿಸುತ್ತದೆ. ಹಾಗೂ ಇಲ್ಲಿ ಮಹಾಸತಿ ದೇವಸ್ಥಾನವಿದ್ದು ದೇವಸ್ಥಾನದ ಎಡಭಗದಲ್ಲಿ "ಹಿರಿನಾಯಕ ಹಾಗೂ ಕಿರಿನಾಯಕರ ಸಮಾದಿಗಳಿವೆ", ಬಲಭಾಗಕ್ಕೆ ಕೆಲವು ಶಾಸನಗಳಿವೆ. ಈ ಹಿಂದೆ "ನಾಯಕ "ಮನೆತನದವರು ಈ ಊರನ್ನು ಆಳುತ್ತಿದ್ದರ೦ತೆ. ಅಂಕೋಲೆಯಲ್ಲಿ ಮಲ್ಲಿಕಾರ್ಜುನನ ಕೋಟೆಯಿದ್ದು, ಕೋಟೆಯ ಮದ್ಯದಲ್ಲಿ ಎದುರು ಬದುರಾಗಿ ಹನುಮದೇವನ ದೇವಾಲಯವಿದೆ. ದೇವಾಲಯದ ಪಕ್ಕದಲ್ಲಿಯೇ "ಕುದುರೆಬಾವಿ" ಇದೆ. ಈ ಬಾವಿಯ ಒಳಗಡೆ ಸುರಂಗ ಮಾರ್ಗವಿದ್ದು ಈ ಮಾರ್ಗದ ಮೂಲಕ ಗೋಕರ್ಣ, ಕಾಶಿ, ರಾಮೇಶ್ವರ ಮೊದಲಾದ ಪುಣ್ಯ ಸ್ಥಳಗಳಿಗೆ ಹೋಗುತ್ತಿದ್ದರು ಎಂಬ ಪ್ರತೀತಿ ಇದೆ. ಬೌದ್ದ ಪೂರ್ಣಿಮೆಯಂದು ಶಾಂತಾದುರ್ಗಾ ದೇವಾಲಯದಲ್ಲಿ ಒಂಬತ್ತು ದಿನಗಳ ಹಬ್ಬ ನಡೆಯುತ್ತದೆ. ಈ ತಾಲ್ಲೂಕಿನ ನೂರಾರು ಎಕರೆಗಳಷ್ಟು ಪ್ರದೇಶ ಸೀಬರ್ಡ ನೌಖಾನೆಲೆ ವ್ಯಾಪ್ತಿಗೆ ಒಳಪಟ್ಟಿದೆ. ಬೇಲೇಕೇರಿ ಸಮುದ್ರ ತೀರ ಹಲವಾರು ಪ್ರವಾಸಿಗರನ್ನು ಕರೆಯುತಿತ್ತು ಆದರೆ ಈಗ ಮ್ಯಾಂಗನೀಸ್ ಉದ್ಯಮದಲ್ಲಿ ಉನ್ನತ ಹಂತವನ್ನು ತಲುಪುತಿದ್ದು ಉದ್ಯಮಿಗಳ ತವರೂರಾಗಿದೆ. ಈ ಉದ್ಯಮವು ಪರಿಸರದ ಮೇಲೆ ಮಾರಕ ಪರಿಣಾಮವನ್ನುಂಟು ಮಾಡುತಿದೆ.ಇದಲ್ಲ ದೆ ವ್ಯೈದ್ಯ ದಿ. ಬೊಮ್ಮು ಶಿವು ಗೌಡ ಎಂಬುವವರು ಪಾರ್ಶವಾಯು ವ್ಯಾಧಿಗೆ ಉತ್ತಮ ಔಷಧಿಯನ್ನು ಕೊಡುತ್ತರೆ. ಮೂಳೆ ಮುರಿತಕ್ಕೆ ತೋಡೊರು ಗೌಡರ ಮನೆಯ ಗಿಡಮೂಲಿಕೆ ಔಷಧಿ ರಾಮಬಾಣ.

ಹಬ್ಬಗಳು

ಬಂಡೀಹಬ್ಬ

center

ಬಂಡೀಹಬ್ಬ ಅಂಕೋಲಾ ದ ಪ್ರಸಿದ್ಧ ಉತ್ಸವ ವಾಗಿದ್ದು ಇದು ಬೇಸಿಗೆಯಲ್ಲಿ ಮೇ ತಿಂಗಳಲ್ಲಿ ನಡೆಯುತ್ತದೆ.ಈ ಹಬ್ಬ ಒಂಂತ್ತು ದಿನಗಳ ಕಾಲ ನಡೆಯುತ್ತದೆ.ಗ್ರಾಮ ದೇವತೆದೇವತೆಯಾದ ಶಾಂತಾದುರ್ಗಾ ದೇವಾಲಯ ದಿಲ್ಲಿ ನಡೆಯುತ್ತದೆ. ಈ ಉತ್ಸವದಲ್ಲಿ ಪಾಲ್ಗೊಳ್ಳಲು ದೂರದೂರಿನಿಂದ ಭಕ್ತಾದಿಗಳು ಬರುತ್ತಾರೆ.

ಕಾರ್ತಿಕ ಉತ್ಸವ

ಅದೇ ರೀತಿ ಇನ್ನೂಂದು ಉತ್ಸವವು ಕೂಡಾ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ ಅದೇ ಕಾರ್ತಿಕ್ ಉತ್ಸವ ಈ ಉತ್ಸವ ನನ್ನು ನವೆಂಬರ್ ತಿಂಗಳಲ್ಲಿ ನಡೆಸಲಾಗುತ್ತದೆ. ಐದು ದೇವತೆಗಳ ಪಲಕ್ಕಿಯನ್ನು ರಾತ್ರಿಯಿಡೀ ಅಂಕೋಲಾ ಪಟ್ಟಣದಲ್ಲಿ ಮೇರವಣಿಗೆ ನಡೆಸುತ್ತಾರೆ ಈ ವೇಳೆ ಭಕ್ತರು ಸಂಭ್ರಮ ತುಂಬಿ ತುಳುಕುತ್ತಿರುತ್ತದೆ.

ದಹಿಂಕಾಲ

ಈ ಹಬ್ಬಬವನು ಮಹಾರಾಷ್ಟ್ರ ದಲ್ಲಿ ದಾಹಿಹಂಡಿ ಎಂದು ಕರೆಯುತ್ತಾರೆ. ಈ ದಹಿಂಕಾಲ ಕೃಷ್ಣ ನ ತುಂಟಾಟ ಮತ್ತು ವಿನೋದದ ಪ್ರತೀಕವಾಗಿದೆ.ಈ ಉತ್ಸವದಲ್ಲಿ ಒಂದು ಮಡೀಕೆಯಲ್ಲಿ ಮೊಸರು ತುಂಬಿ ಅದನ್ನು ಬಹಳ ಎತ್ತರಕ್ಕೆ ಕೈಗೆ ಎಟುಕದಂತೆ ಹಗ್ಗದಿಂದ ಕಟ್ಟಿರುತ್ತಾರೆ. ಈ ಉತ್ಸವದಲ್ಲಿ ಭಾಗವಹಿಸುವ ಸ್ಪರ್ಧಿಗಳು ಒಬ್ಬರ ಹೆಗಲ ಮೇಲೆ ಮತ್ತೂಂಬರು ಏರುತ್ತಾ ಒಂದು ಮಾನವ ಗೋಪುರ ರಚಿಸುತ್ತಾರೆ ಗೋಪುರದ ಕೊಟ್ಟು ಕಡೆಯ ವ್ಯಕ್ತಿ ಆದರೆ ಮಡೀಕೆಯನ್ನು ಕೋಲಿನಿಂದ ಹೊಡೆಯುತ್ತಾನೆ. ಹೀಗೆ ಹೊಡೆದು ವಿಜಯಿಯಾದವರಿಗೆ ಕೆಲವೊಮ್ಮೆ ಬಹುಮಾನಗಳು ಇರುತ್ತವೆ. ಈ ಸಂಪ್ರದಾಯ ಅಂಕೋಲಾ ದ ನಾಮಧಾರಿ ಸಮುದಾಯದ ವರಲ್ಲಿ ಪ್ರಮುಖವಾಗಿ ಕಂಡುಬರುತ್ತದೆ.

ಟೆಂಪ್ಲೇಟು:ಅಂಕೋಲಾ


ಜನಸಂಖ್ಯೆ


2011 ರ ಭಾರತದ ಜನಗಣತಿಯಂತೆ, ಅಂಕೊಲಾ ತಾಲ್ಲೂಕಿನ ಒಟ್ಟು ಜನಸಂಖ್ಯೆ 21,079 ಮನೆಗಳಲ್ಲಿ 101,549 ಜನಸಂಖ್ಯೆ ಇದೆ, ಒಟ್ಟು 309 ಗ್ರಾಮಗಳು ಮತ್ತು 20 ಪಂಚಾಯತ್ಗಳಲ್ಲಿ ಹರಡಿದೆ. ಪುರುಷರು 51,398 ಮತ್ತು ಹೆಣ್ಣು 50,151. ಅಂಕೊಲಾ ಪಟ್ಟಣ ಪಂಚಾಯತ್ನಲ್ಲಿ 22,249 ಜನಸಂಖ್ಯೆ ಇದೆ, ಇದರಲ್ಲಿ 11,034 ಪುರುಷರು ಮತ್ತು 11,215 ಮಹಿಳೆಯರು 2011 ರ ಜನಗಣತಿಯಿಂದ ಬಿಡುಗಡೆಯಾದ ವರದಿಯ ಪ್ರಕಾರ.

0-6 ರ ವಯಸ್ಸಿನ ಮಕ್ಕಳ ಸಂಖ್ಯೆ 2025 ಆಗಿದೆ, ಇದು ಅಂಕೊಲಾ (TP + OG) ನ ಒಟ್ಟು ಜನಸಂಖ್ಯೆಯ 9.10% ಆಗಿದೆ. ಅಂಕೊಲಾ ಪಟ್ಟಣ ಪಂಚಾಯತ್ನಲ್ಲಿ, ಸ್ತ್ರೀ ಲಿಂಗ ಅನುಪಾತವು ರಾಜ್ಯದ ಸರಾಸರಿ 973 ರ ವಿರುದ್ಧ 1016 ರಷ್ಟಿತ್ತು. ಇದಲ್ಲದೆ, ಅಂಕೋಲಾದಲ್ಲಿನ ಮಕ್ಕಳ ಸೆಕ್ಸ್ ಅನುಪಾತವು ಕರ್ನಾಟಕ ರಾಜ್ಯದ ಸರಾಸರಿ 948 ಕ್ಕೆ ಹೋಲಿಸಿದರೆ ಸುಮಾರು 1013 ಆಗಿದೆ. ಅಂಕೊಲಾ ನಗರದ ಸಾಕ್ಷರತೆಯು 90.63% ಆಗಿದೆ, 75.36%. ಅಂಕೊಲಾದಲ್ಲಿ, ಪುರುಷರ ಸಾಕ್ಷರತೆ 94.63% ಮತ್ತು ಸ್ತ್ರೀ ಸಾಕ್ಷರತೆಯು 86.69% ರಷ್ಟಿದೆ.

ಅಂಕೊಲಾ ಪಟ್ಟಣ ಪಂಚಾಯತ್ 5,271 ಮನೆಗಳ ಒಟ್ಟು ಆಡಳಿತವನ್ನು ಹೊಂದಿದೆ, ಇದಕ್ಕಾಗಿ ನೀರು ಮತ್ತು ಒಳಚರಂಡಿ ಮೂಲಭೂತ ಸೌಕರ್ಯಗಳನ್ನು ಪೂರೈಸುತ್ತದೆ. ಇದು ಟೌನ್ ಪಂಚಾಯತ್ ಮಿತಿಗಳಲ್ಲಿ ರಸ್ತೆಗಳನ್ನು ನಿರ್ಮಿಸಲು ಮತ್ತು ಅದರ ವ್ಯಾಪ್ತಿಗೆ ಬರುವ ಗುಣಲಕ್ಷಣಗಳ ಮೇಲೆ ತೆರಿಗೆಗಳನ್ನು ವಿಧಿಸಲು ಅಧಿಕಾರ ಹೊಂದಿದೆ.

ಅಂಕೊಲಾ ಜನಸಂಖ್ಯೆಯು ವೈವಿಧ್ಯಮಯ ಸಮುದಾಯಗಳನ್ನು ಒಳಗೊಂಡಿದೆ. ಮಾತನಾಡುವ ಪ್ರಮುಖ ಭಾಷೆಗಳು ಕನ್ನಡ ಭಾಷೆಯಾಗಿದೆ. ಅಂಕೋಲಾದ ಜನಸಂಖ್ಯೆಯಲ್ಲಿ ಹಾಲಕ್ಕಿ ಒಕ್ಕಲಿಗರು ಹಾಗೂ ನಾಡವರು ಬಹುಸಂಖ್ಯಾತರು. ಹಾಗೆಯೇ ಕೋಮಾರಪ0ತರು ಹೆಚ್ಚಾಗಿ ಅವರ್ಸಾ, ಭಾವಿಕೇರಿ, ಬೆಲೆಕೇರಿ ಹಾಗೂ ಹಟ್ಟಿಕೇರಿ ಡೊಂಗ್ರಿ ಗ್ರಾಮಗಳಲ್ಲಿ ಇದ್ದಾರೆ. ನಾಮಧಾರಿ ಗಳು ಪಟ್ಟಣದಲ್ಲಿ ಹೆಚ್ಚಾಗಿ ವಾಸಿಸುತ್ತಾರೆ. ನಾಡವರು ಅಂಕೋಲಾದ ಪ್ರಬಲ ಜಾತಿಯಾಗಿದೆ.ಮುಸ್ಲಿಮರಲ್ಲಿ ಉರ್ದುವು ಸಾಮಾನ್ಯವಾಗಿದೆ. ಅಧಿಕೃತ ಭಾಷೆ ಕನ್ನಡ ಆಗಿದೆ.ಈ ಒಂದು ಸಂಪ್ರದಾಯ ವು ಅಂಕೋಲಾ ದ ನಾಮಧಾರಿ ಗಳಿಗೆ ಬಹಳ ವಿಶೇಷ ಪ್ರಮುಖ

ಅಂಕೋಲಾ ತಾಲ್ಲೂಕಿನ ಹಳ್ಳಿಗಳು

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಅಚವೆ

ಆಚವೆ

  1. ಅಡಿಗೋಣ
  2. ಅಡ್ಲೂರ
  3. ಅಗ್ರಗೋಣ
  4. ಅಗಸೂರು
  5. ಅಲಗೇರಿ
  6. ಆಂದ್ಲೆ
  7. ಅವರ್ಸಾ

ಬೇಳಾಬಂದರ

ಬಾಳೆಲೆ

ಬಾಳೆಗುಳಿ

ಬೆಳಂಬರ್

ಬಾಸಗೋಡ

ಬೆಲೇಕೇರಿ

ಬೆಳಸೆ

ಭಾವಿಕೇರಿ

ಬೀದರಗೇರ್

ಬೂಗ್ರಿಬೈಲ್

ಬಿಳಿಹೂಯ್ಗಿ

ಬಬ್ರುವಾಡ

ಬೊಳೆ

ಬ್ರಹ್ಮೊರ್

ದೇವಿಗದ್ದೆ

ಡೊಂಗ್ರಿ

ಗುಂಡಬಾಳ

ಹಳ್ಳವಳ್ಳಿ

ಹಾರವಾಡ

ಹಟ್ಟಿಕೇರಿ

ಹೊನ್ನೆಕೇರಿ

ಹೆಗರಣಿಬಾವಿ

ಹಿಲ್ಲೂರ್

ಹಿಚ್ಚಡ್

ಹೂಸಕೇರಿ

ಹೆಗ್ಗಾರ್ (ಪದಮಪುರ)

ಜೂಗ

ಜಮ್ಮಗೂಡ

ಕಬಗಾಲ

ಕನಸಿಗದ್ದೆ

ಕಲೇಶ್ವರ್

ಕಮ್ಮನಿ

ಕಣಗಿಲ್

ಕಂತ್ರಿ

ಕೆಂಡಿಗೆ

ಕೇಣಿ

ಕೇಕಂಣಿಶಿವಪುರ

ಕೂಂಗ್ರೆ

ಕುಂಬಾರಕೇರಿ

ಕುಂಟಕಣಿ

ಲಕ್ಕೆಗುಳಿ

ಲಕ್ಷಮೇಶ್ವರ

ಮಕ್ಕಿಗದ್ದೆ

ಮಾಣಿಗುಡ್ಡೆ

ಮಠಾಕೇರಿ

[[:wManjaguni ಮಂಜಗುಣಿ]

ಮೊಗಟಾ

ಮೊರಳ್ಳಿ

ನದಿಭಾಗ

ನವಗದ್ದೆ

ನೆಲ್ಲೂರಕಂಚಿನಭೈಲ್

ಪೂಜಗೇರಿ

ಸಗಡಗೇರಿ

ಶೆಟಗೇರಿ

ಶೆವೆಗುಳಿ

ಶಿರಕುಳ್ಳಿ

ಶಿಂಗನಮಕ್ಕಿ

ಶಿರೂರ

ಶಿರಗುಂಜಿ

ಸುಂಕಸಾಳ

ಸುರ್ವೆ (ಸೂರ್ವೆ)

ತೆಂಕಣಕೇರಿ

ಊಳವರೆ

ವೈದ್ಯ ಹೆಗ್ಗಾರ್

ವಂದಿಗೆ

ವಾರಿಲಬೇಣ

ವಾಸರಕುದುರಿಗೆ

ವಾಡಿಬೊಗರಿ

ಉಪ್ಪಿನ ಸತ್ಯಾಗ್ರಹ

ಉಪ್ಪನ್ನು ತಯಾರಿಸುವ ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಿದ  ಬ್ರಿಟಿಷ್ ಸರಕಾರದ ನಿಯಮದಿಂದ ರಾಷ್ಟ್ರೀಯ ನಾಯಕರು ತಿವ್ರ ಅಸಮಾಧಾನಗೂಂಡು ಈ ಸಮಸ್ಯೆಯನ್ನು ಹೋರಾಟದ ಮೂಲಕವೇ ಇತ್ಯರ್ಥ ಮಾಡಬೇಕೆಂದು ನಿರ್ಧರಿಸಿದರು. ಅದರಂತೆ 1930, ಫೆಬ್ರುವರಿ 20 ರಂದು ಬಳ್ಳಾರಿಯಲ್ಲಿ ಸಭೆ ಸೇರಿದ್ದ ಪ್ರದೇಶ ಕಾಂಗ್ರೆಸ್ ಸಮಿತಿಯು ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಸಲು ಅಂಕೋಲೆಯೇ ಸೂಕ್ತ ಎಂದು ನಿರ್ಧರಿಸಿದ್ದರು. ಏಪ್ರಿಲ್ 13ನೇ ತಾರೀಖಿನಂದು ಭಾರಿ ಮೆರವಣಿಗೆಯೊಂದಿಗೆ ಹೋರಾಟಗಾರರು ಉಪ್ಪು ತಯಾರಿಸಿ ಮಾರಾಟ ಮಾಡಿದ್ದರು.ಈ ಹೋರಾಟದ ನೇತೃತ್ವವನ್ನು ಎಂಪಿ ನಾಡಕರ್ಣಿ ವಹಿಸಿದ್ದರು.ಕರಬಂಧಿ ಚಳವಳಿಯ ಸರ್ವಾಧಿಕಾರಿಯಾಗಿ ಹೋರಾಡಿದ ಬಾಸಗೋಡದ ರಾಮ ನಾಯಕರು ತಮ್ಮ ಗ್ರಾಮದಲ್ಲಿಯೇ ಸೇವಾದಳದ ತರಬೇತಿ ಶಿಬಿರವನ್ನು ನಡೆಸಿ ಸ್ವಾತಂತ್ರ್ಯ ಚಳವಳಿಯ ಪ್ರಾಥಮಿಕ ಪಾಠಗಳನ್ನು ನಾ.ಸು. ಹರ್ಡೀಕರ, ಗಂಗಾಧರರಾವ್ ದೇಶಪಾಂಡೆ, ಮುದವೀಡು ಕೃಷ್ಣರಾವ್ ಮುಂತಾದ ಮಹನೀಯರಿಂದ ಇಲ್ಲಿನ ಹೋರಾಟಗಾರರಿಗೆ ಹೇಳಿಸಿಕೊಟ್ಟರು. ತಾಲ್ಲೂಕಿನ ನಾಡವ ಸಮುದಾಯದವರು ಸಾಮೂಹಿಕವಾಗಿ ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ಈ ಭಾಗದಲ್ಲಿ ಸಂಚರಿಸಿ ಹೋರಾಟದ ಕಹಳೆಯನ್ನು ಊದಿದ ಕೃಷ್ಣಾಬಾಯಿ ಪಂಜೀಕರ, ಉಮಾಬಾಯಿ ಕುಂದಾಪುರ ಮಹಿಳೆಯರನ್ನು ಕೂಡ ಚಳವಳಿಗೆ ಅಣಿಗೊಳಿಸಿದರು.

ರಂಗನಾಥ ದಿವಾಕರ, ಡಿ.ಪಿ. ಕರ್ಮಕರ, ಜಯರಾಮಾಚಾರ್ಯ ಮುಂತಾದವರು ಈ ಭಾಗದಲ್ಲಿ ಸಂಚರಿಸಿ ಹೋರಾಟದ ಕಿಚ್ಚನ್ನು ಹೆಚ್ಚಿಸಿದ್ದರು.

ಎಂ.ಪಿ. ನಾಡಕರ್ಣಿ, ಶಾಮರಾವ್ ಶೇಣ್ವಿ, ಸ್ವಾಮಿ ವಿದ್ಯಾನಂದ, ವಂದಿಗೆ ಹಮ್ಮಣ್ಣ ನಾಯಕ, ಶೆಟಗೇರಿ ಜೋಗಿ ನಾಯಕ, ಬಾಸ್ಗೋಡ ಬೊಮ್ಮಯ್ಯ  ನಾಯಕ ಮುಂತಾದವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದ ಉಪ್ಪಿನ ಸತ್ಯಾಗ್ರಹವು ದೇಶದ ಗಮನವನ್ನು ಸೆಳೆಯಿತು.

ಹಳ್ಳಿ ಹಳ್ಳಿಗಳಿಗೆ ವಿಸ್ತರಿಸಿದ ಉಪ್ಪಿನ ಸತ್ಯಾಗ್ರಹದಲ್ಲಿ ವಂದಿಗೆ, ಶೆಟಗೇರಿ, ಹೊಸ್ಕೇರಿ,  ಸೂರ್ವೆ, ಬಾವಿಕೇರಿ, ಹಿಚ್ಕಡ, ಕಣಗೀಲ ಮುಂತಾದ ಗ್ರಾಮಗಳ ನೂರಾರು ಹೋರಾಟಗಾರರು ಪೊಲೀಸರ ಲಾಠಿಗೆ ಎದೆಯೊಡ್ಡಿ ನಿಂತರು. ಜನರ ನಿರಂತರ ಹೋರಾಟದಿಂದ ಉಪ್ಪಿನ ಸತ್ಯಾಗ್ರಹ ಯಶಸ್ವಿಯಾಯಿತು. ಅಂಕೋಲೆಯ  ಕೀರ್ತಿ ದೇಶಾದ್ಯಂತ ಹರಡಿತು.

ಸಮುದ್ರ ತೀರಗಳು

ಹನಿ ಬೀಚ್

ಹನಿ ಬೀಚ್ (7 ಕಿಮೀ ಅಂಕೋಲಾದಿಂದ), ಇದನ್ನು ಹನಿ ಬೀಚ್ ಎಂದೂ ಕರೆಯುತ್ತಾರೆ, ಇದನ್ನು ಇತ್ತೀಚೆಗೆ ಕೆಲವು ಖಾಸಗಿ ಉದ್ಯಮಿಗಳು ಅಭಿವೃದ್ಧಿಪಡಿಸಿದ್ದಾರೆ. ಕಡಲತೀರದ ಎರಡು ರೆಸಾರ್ಟ್ಗಳು ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರನ್ನು ಪೂರೈಸುತ್ತವೆ.

ಚಿತ್

ನ ದಿಭಾಗ ಬೀಚ್

ಅಂಕೋಲಾ ಪಟ್ಟಣದಿಂದ 5 ಕಿಲೋ ಮೀಟರ್ ದೂರದಲ್ಲಿರುವ ಈ ಪ್ರಾಚೀನ ಕಡಲತೀರವು ಸ್ಥಳೀಯ ಜನಾಂಗದವರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪಕ್ಕದ ಪರ್ವತದ ಒಂದು ನೋಟ ಸ್ಥಳೀಯ ನದಿಯ ಸಂಗಮವನ್ನು ಅರೇಬಿಯನ್ ಸಮುದ್ರದೊಂದಿಗೆ ತೋರಿಸುತ್ತದೆ. ಹತ್ತಿರದಲ್ಲೇ ಇರುವ ಶೆಡಿಕುಲಿ ಕಡಲತೀರಗಳು ಸಹ ಭೇಟಿ ಯೋಗ್ಯವಾಗಿದೆ.ಚಿತ್

ಅಂಕೋಲಾವು ಅರಬಿ ಸಮುದ್ರದ ದಡದಲ್ಲಿದು ಇಲ್ಲಿ ಅನೇಕ ಸುಂದರ ಸಮುದ್ರ ತೀರಗಳಿವೆ ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ

ಬೇಲೇಕೇರಿ ಬೀಚ್,ನದಿಭಾಗ ಬೀಚ್,ಬೆಳಂಬಾರ್ ಬೀಚ್, ಶೆಡಿಕುಳಿ ಬೀಚ್, ಗಾಬಿತಕೇಣಿ ಬೀಚ್, ಹೊನ್ನೆ ಗುಡ್ಡ ಬೀಚ್, ಹನಿ ಬೀಚ್, ಕೇಣಿ ಬೀಚ್

ಸಂಸ್ಕ್ರತಿ ಮತ್ತು ಕಲೆ

center

ಯಕ್ಷಗಾನ ಇಂದು ಅಂಕೋಲಾದ ಪ್ರಸಿದ್ಧ ಜಾನಪದ ಕಲೆಯಾಗಿದೆ. ಸುಗ್ಗಿ ಕುಣಿತ ಒಂದು ವಿಶಿಷ್ಟವಾದ ಸ್ಥಳೀಯ ಜಾನಪದ ಕಲೆಯಾಗಿದೆ.ಈ ಕಲೆಯ ಹುಟ್ಟು ಉತ್ತರ ಕನ್ನಡ ಜಿಲ್ಲೆಯ ತಾಲ್ಲೂಕುಗಳಿಂದ ಪ್ರಾರಂಭವಾಗಿದೆ.ಸುಗ್ಗಿ ಕಾಲದಲ್ಲಿ ಸುಗ್ಗಿಯ ನರ್ತಕರು ಒಂದು ಊರಿನಿಂದ ಮತ್ತೂಂದು ಊರಿಗೆ ಸಾಗುತ್ತಾ ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ.

       ಸುಗ್ಗಿ ನರ್ತಕರ ಉಡುಪುಗಳು ಸಾಂಪ್ರದಾಯಿಕವಾಗಿರುತ್ತವೆ. ಈ ನೃತ್ಯಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಸಹಕಾರಿಯಾಗಿತ್ತು.

ಆಹಾರ

ಸಾಮಾನ್ಯವಾಗಿ ಬೇಯಿಸಿದ ಬಿಳಿ ಅನ್ನ (ಕುಚಿಗೆ/ಬೆಣತಿಗೆ) ಮೀನು, ಮತ್ತು ಬಸಳೆ ಸೂಪ್ಪಿನ ಹುಳಗಾ (ಒಂದು ತರಕಾರಿ ಸಾಂಬಾರ್) ಮತ್ತು ಕೋಳಿ ಸಾರು ಸ್ಥಳೀಯವಾಗಿ ಕೋಳಿ ಆಸಿ (ಚಿಕನ್ ಕರಿ) ಮೀನು ಗಳನ್ನು ಸಾಕಷ್ಟು ಜಾಸ್ತಿ ಪ್ರಮಾಣದಲ್ಲಿ ಸೇವಿಸುತ್ತಾರೆ. ಮತ್ತು ವಿಶೇಷವಾಗಿ ಕೂಟ್ಟಿರೊಟ್ಟಿ ತಯಾರಿಸುತ್ತಾರೆ. ಇದನ್ನು ಹಲಸಿನ ಮರದ ಎಲೆಗಳನ್ನು ಬಿದಿರಿನ ಕಡ್ಡಿಗಳಿಂದ ನೆಣೆದು ಶಂಕುವಿನ ಆಕೃತಿಯ ಒಂದು ಪೂಟ್ಟಣ ತಯಾರು ಮಾಡುತ್ತಾರೆ. ಇದಲ್ಲದೆ ಮೊಗ್ಗೆಕಾಯಿ ಕಡುಬು, ತಯಾರಿಸುತ್ತಾರೆ. ಇಲ್ಲಿನ ವಿಶೇಷ ಸಿಹಿ ತಿಂಡಿ ಕಾಜಮೀಜಿ.

ಸಾರಿಗೆ ಸಂಪರ್ಕ

ಅಂಕೋಲಾದ ರಸ್ತೆ ಸಾರಿಗೆ ವ್ಯವಸ್ಥೆಯನ್ನು NWKRTC (ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ) ನಿರ್ವಹಿಸುತ್ತದೆ.ರಸ್ತೆ ಸಾರಿಗೆ ಇಲ್ಲಿನ ಪ್ರಮುಖ ಸಂಪರ್ಕ ಸಾಧನವಾಗಿದೆ. ಅಂಕೋಲಾ ಮೊದಲು ರಾಷ್ಟ್ರೀಯ ಹೆದ್ದಾರಿ 17 ಆಗಿತ್ತು, ಆದರೆ ಈಗ ಈ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿ 66 ಆಗಿ ಪರಿವರ್ತನೆ ಆಗಿದ್ದು ಅಂಕೋಲಾದ ಸಾರಿಗೆ ಸಂಪರ್ಕ ವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಭರವಸೆಯನ್ನು ವ್ಯಕ್ತಪಡಿಸಿದೆ. ಅಂಕೋಲಾ ರೈಲ್ವೇ ನಿಲ್ದಾಣವು ಅಂಕೋಲಾ ಪಟಣ್ಣದ ಹೊರಭಾಗದಲ್ಲಿ ಸುಮಾರು 3 ಕಿಲೋಮೀಟರ್ ದೂರದಲ್ಲಿದೆ. ಮತ್ತು ಶಿಘ್ರವೆ ಅಂಕೋಲಾದ ಅಲಗೇರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುವ ಭರವಸೆ ಇದೆ.

ರಸ್ತೆ ರೈಲ್ವೇ ಸಂಪರ್ಕ

ಬಸ್ ಮತ್ತು ರೈಲ್ವೇ ಸಾರಿಗೆಯ ಮೂಲಕ ಮಂಗಳೂರು ಮತ್ತು ಗೋವಾ ದಂತಹ ದೂಡ್ಡ ನಗರಗಳಿಗೆ ಸಂಪರ್ಕವನ್ನು ಹೊಂದಿದೆ.ಇದರಲ್ಲಿ ರೈಲ್ವೇ ಸಂಪರ್ಕ ನಿಯಮಿತವಾಗಿದೆ. ರಾಷ್ಟ್ರೀಯ ಹೆದ್ದಾರಿ66 (ಮೊದಲು ರಾಷ್ಟ್ರೀಯ ಹೆದ್ದಾರಿ17) ಮೂಲಕ ಬೆಂಗಳೂರು ನೊಂದಿಗೆ ಸಂಪರ್ಕ ಹೊಂದಿದ್ದೆ.

ಮತ್ತು ರಾಷ್ಟ್ರೀಯ ಹೆದ್ದಾರಿ52 ಲಾ ಮುಖಾಂತರ ಹುಬ್ಬಳ್ಳಿ ಯೊಂದಿಗೆ ಸಂರ್ಪಕ ಹೊಂದಿದೆ. ಪ್ರತಿ ಅರ್ಧ ಗಂಟೆಗೊಂದು ಬಸ್ಸುಗಳು ಅಂಕೋಲಾ ದಿಂದ ಹುಬ್ಬಳ್ಳಿ ಗೆ ಸಾಗುತ್ತಿರುತ್ತವೆ. ಮಂಗಳೂರು.ಬೆಂಗಳೂರಿಗೆ ಹೋಲಿಸಿದ್ದಲಿ ಹುಬ್ಬಳ್ಳಿ ಯೊಡನೆ ಅಂಕೋಲಾ ದ ಸಂರ್ಪಕ ಬಹಳ ನಿಕಟವಾಗಿದೆ. ಇದ್ದಲದೆ ಹುಬ್ಬಳ್ಳಿ ವಾಣಿಜ್ಯ ನಗರಿಯಾಗಿದು, ಅಂಕೋಲಾ ಕ್ಕೆ ಬಹಳ ಸನಿಹದಲ್ಲಿರುವದ್ದರಿಂದ ಇಲ್ಲಿನ ವ್ಯಾಪಾರಿಗಳಿಗೆ ಸರಕು ಸಾಗಾಣಿಕೆ ಮಾಡಲು ಮತ್ತು ಸರಕನ್ನು ಆಮದು ಮಾಡಿಕೊಳ್ಳಳು ಈ ರಸ್ತೆ ಸಾರಿಗೆ ಸಂಪರ್ಕ ಪ್ರಮುಖ ಸಾಧನವಾಗಿದೆ.

ಇದ್ದರೆ ಹುಬ್ಬಳ್ಳಿ ಅಂಕೋಲಾ ರೈಲ್ವೇ ಮಾರ್ಗ ದ ಕಾಮಗಾರಿಯನ್ನು ಹಲವು ವರ್ಷಗಳ ಹಿಂದೆಯೆ ಆರಂಭಿಸಿದ್ದರೂ ಪರಿಸರವಾದಿಗಳ ವಿರೋಧದಿಂದಾಗಿ ಕಾಮಗಾರಿ ನನೆಗುದಿಗೆ ಬಿದ್ದಿದ್ದೆ. ಮುಂದಿನ ದಿನಗಳಲ್ಲಿ ಈ ಕಾಮಗಾರಿ ಮುಂದುವರಿದರೆ ಈ ಭಾಗದ ಸಾರಿಗೆ ಸಂಪರ್ಕ ಸುಧಾರಿಸಬಹುದು.

ಪೊರ್ವ ದಿಕ್ಕಿನಲ್ಲಿ ರಾಷ್ಟ್ರೀಯ ಹೆದ್ದಾರಿ63 ಲಾ ಮುಖಾಂತರ ಹೈದರಾಬಾದ್ ಗೆ ಸಂರ್ಪಕ ಸಾಧಿಸಲಾಗಿದೆ.

ಉತ್ತರ ದಿಕ್ಕಿನಲ್ಲಿ ಕಾರವಾರ, ಗೋವಾ ರಸ್ತೆ ಮತ್ತು ರೈಲ್ವೇ ಸಂಪರ್ಕ.

ದಕ್ಷಿಣ ದಿಕ್ಕಿನಲ್ಲಿ ಗೋಕರ್ಣ, ಮುರ್ಡೇಶ್ವರ,ಭಟ್ಕ

ಳ್,ಉಡುಪಿ, ಮಂಗಳೊರಿಗೆ ರಸ್ತೆ ಮತ್ತು ರೈಲ್ವೇ ಮೂಲಕ ಸಂಪರ್ಕಿಸಲಾಗಿದೆ.

ಪಶ್ಚಿಮ ದಿಕ್ಕಿನಲ್ಲಿ ಅರಬ್ಬಿ ಸಮುದ್ರ, ಕಡಲತೀರಗಳು, ನದಿಗಳನ್ನ ಮೂಲಕ ಒಳನಾಡು ನೀರಿನ ಸಂಚಾರವಿದೆ.ಇದ್ದಕ್ಕಾಗಿ ಸಾಂಪ್ರದಾಯಿಕ ನಾಡು ದೋಣಿಗಳನ್ನು ಮತ್ತು ಯಾಂತ್ರಿಕೃತ ದೋಣಿಗಳನ್ನು ಬಳಸಿಕೊಳ್ಳಲಾಗಿದೆ.

ಹತ್ತಿರದ ವಿಮಾನ ನಿಲ್ದಾಣಗಳು

  1. ಗೋವಾ ಅಂತರಾಷ್ರಿಯ ವಿಮಾನ [[:wGoa_International_Airport ನಿಲ್ದಾಣ]
  2. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
  3. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
  4. ಬೆಳಗಾವಿ ವಿಮಾನ ನಿಲ್ದಾಣ
  1. ಹುಬ್ಬಳ್ಳಿ ವಿಮಾನ ನಿಲ್ದಾಣ

ಪತ್ರಿಕೆಗಳು ಮತ್ತು ಮಾಧ್ಯಮಗಳು

ಕರಾವಳಿ ಮುಂಜಾವು, ಇಡೀ ಜಿಲ್ಲೆಯಾದ್ಯಂತ ಪ್ರಸರಣ ಇರುವ ಸ್ಥಳೀಯ ದಿನಪತ್ರಿಕೆಯಾಗಿದೆ.ಕನ್ನಡ ಜನಾತರಂಗ ಇಲ್ಲಿನ ಪ್ರಾದೇಶಿಕ ಪತ್ರಿಕೆಯಾಗಿದೆ.ನೊತನ ಟಿವಿ ಅಂಕೋಲಾದ ಸ್ಥಳೀಯ ಪ್ರಸಿದ್ಧ ವಾಹಿನಿಯಾಗಿದೆ.ಅಂಕೋಲಾ ನ್ಯೊಸ್,ಕೆನರಾ ನ್ಯೊಸ್,ಸಿಟಿ ನ್ಯೂಸ್,ಆರ್ಯಾ ನ್ಯೊಸ್, ನೊತನ ನ್ಯೂಸ್, ಇವು ಅಂಕೋಲಾದ ಸ್ಥಳೀಯ ವಾಹಿನಿಗಳು‌.

ಶಿಕ್ಷಣ ಸಂಸ್ಥೆಗಳು

ಅಂಕೋಲಾ ಪಟಣ್ಣವು ಹಲವಾರು ಸರಕಾರಿ, ಅರೆಸರಕಾರಿ, ಖಾಸಗಿ ಒಡೆತನದ ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ.ಅವುಗಳು ಈ ಕೆಳಗಿನಂತಿವೆ

1]ನಿರ್ಮಲ ಹೃದಯ ಕಾನ್ವೆಂಟ್

2] ಕೆನರಾ ವೆಲ್ಫೇರ್ ಟ್ರಸ್ಟ್ ನ PMHS ಹೈಸ್ಕೂಲ್

3] ಜೈಹಿಂದ್ ಹೈಸ್ಕೂಲ್

4] ಕೆ.ಎಲ್.ಇ ಶಿಕ್ಷಣ ಸಂಸ್ಥೆ ಹೀಗೆ ಕೆಲವು ಪ್ರಸಿದ್ಧ ಶೈಕ್ಷಣಿಕ ಸಂಸ್ಥೆಗಳನ್ನು ಹೂಂದಿದೆ‌.

5] ಗೋಖಲೆ ಸೆಂಟನರಿ ಕಾಲೇಜ್ ಇಲ್ಲಿ ವಿವಿಧ ಪದವಿಪೂರ್ವ, ಸೀಮಿತ ಸ್ನಾತಕೋತ್ತರ ಶಿಕ್ಷಣವನ್ನು ಒದಗಿಸುತ್ತದೆ.

6] ಹಿಮಾಲಯ ಶಿಕ್ಷಣ ಸಂಸ್ಥೆಗಳು ಈ ಶಿಕ್ಷಣ ಸಂಸ್ಥೆಗಯು ಖಾಸಗಿ ಶಿಕ್ಷಣ ಸಂಸ್ಥೆಯಾಗಿದೆ ಈ ಸಂಸ್ಥೆಯ ಒಡೆತನ ಉದ್ಯಮಿ ದಿವಂಗತ ಆರ್.ಎನ್ ನಾಯಕ ಅಧೀನದಲ್ಲಿದೆ.

7] ಸರಕಾರಿ ಪ್ರಥಮ ದರ್ಜೆ ಕಾಲೇಜು ಪೊಜಗೇರಿ

2007 ರಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜನ್ನು ಅಂಕೋಲಾದ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ತಾತ್ಕಾಲಿಕವಾಗಿ ಪ್ರಾರಂಭಿಸಲಾಗಿತ್ತು ನಂತರ ಅಂಕೋಲಾ ದಿಂದ 2 ಕಿಲೋಮೀಟರ್ ಹೂರಗೆ ಪೊಜಗೇರಿ ಗ್ರಾಮದಲ್ಲಿ ನೊತನ ಕಟ್ಟಡದಲ್ಲಿ ಪ್ರಾರಂಭವಾಯಿತು.ಇಲ್ಲಿ ಈ ಕಾಲೇಜ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಮತ್ತು ಬಿಸಿನೆಸ್ ಅಡ್ಮಿನಿಸ್ಟ್ರೇಷನ್ಗಳಲ್ಲಿ ಸ್ನಾತಕೋತ್ತರ ಪದವಿಯನ್ನು ನೀಡುತ್ತದೆ. ಅಂಕೊಲಾ ತಾಲ್ಲೂಕು ಇತ್ತೀಚಿನ ವರ್ಷಗಳಲ್ಲಿ ಪದವಿಪೂರ್ವ ಕಾಲೇಜುಗಳ ಹೆಚ್ಚಿನ ಸಂಖ್ಯೆಯನ್ನು ಸ್ಥಾಪಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಪ್ರಾಥಮಿಕ ಮತ್ತು ಹೈಸ್ಕೂಲ್ ಸೌಲಭ್ಯಗಳಿವೆ.

"https://kn.wikipedia.org/w/index.php?title=ಅಂಕೋಲಾ&oldid=1157542" ಇಂದ ಪಡೆಯಲ್ಪಟ್ಟಿದೆ