ವಿಶ್ವೇಶ್ವರ ಹೆಗಡೆ ಕಾಗೇರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಶ್ವೇಶ್ವರ ಹೆಗಡೆ ಕಾಗೇರಿ

ಕರ್ನಾಟಕ ವಿಧಾನಸಭಾ ಸ್ಪೀಕರ್
ಹಾಲಿ
ಅಧಿಕಾರ ಸ್ವೀಕಾರ 
ಜುಲೈ ೩೧, ೨೦೧೯
ಪೂರ್ವಾಧಿಕಾರಿ ಕೆ.ಆರ್.ರಮೇಶ್ ಕುಮಾರ್
ಮತಕ್ಷೇತ್ರ ಸಿರ್ಸಿ

ಕರ್ನಾಟಕ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು
ಅಧಿಕಾರ ಅವಧಿ
ಮೇ ೩೦, ೨೦೦೮ – ಮೇ ೨೩, ೨೦೧೩
ಪೂರ್ವಾಧಿಕಾರಿ ರಾಷ್ಟ್ರಪತಿ ಆಡಳಿತ
ಉತ್ತರಾಧಿಕಾರಿ ಕಿಮ್ಮನೆ ರತ್ನಾಕರ್
ಮತಕ್ಷೇತ್ರ ಸಿರ್ಸಿ

ಕರ್ನಾಟಕ ವಿಧಾನಸಭಾ ಸದಸ್ಯರು
ಹಾಲಿ
ಅಧಿಕಾರ ಸ್ವೀಕಾರ 
೨೦೧೮
ಮತಕ್ಷೇತ್ರ ಸಿರ್ಸಿ
ಅಧಿಕಾರ ಅವಧಿ
೨೦೧೩ – ೨೦೧೮
ಮತಕ್ಷೇತ್ರ ಸಿರ್ಸಿ
ಅಧಿಕಾರ ಅವಧಿ
೨೦೦೮ – ೨೦೧೩
ಮತಕ್ಷೇತ್ರ ಸಿರ್ಸಿ
ಅಧಿಕಾರ ಅವಧಿ
೨೦೦೫ – ೨೦೦೮
ಮತಕ್ಷೇತ್ರ ಅಂಕೋಲಾ
ಅಧಿಕಾರ ಅವಧಿ
೧೯೯೯ – ೨೦೦೪
ಮತಕ್ಷೇತ್ರ ಅಂಕೋಲಾ
ಅಧಿಕಾರ ಅವಧಿ
೧೯೯೪ – ೧೯೯೯
ಪೂರ್ವಾಧಿಕಾರಿ ಉಮೇಶ್ ಭಟ್
ಮತಕ್ಷೇತ್ರ ಅಂಕೋಲಾ
ವೈಯಕ್ತಿಕ ಮಾಹಿತಿ
ಜನನ (1961-07-10) ೧೦ ಜುಲೈ ೧೯೬೧ (ವಯಸ್ಸು ೬೨)
ಸಿರ್ಸಿ, ಉತ್ತರ ಕನ್ನಡ, ಕರ್ನಾಟಕ, ಭಾರತ
ರಾಷ್ಟ್ರೀಯತೆ ಭಾರತೀಯ
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ
ವೃತ್ತಿ ಕೃಷಿಕ

ವಿಶ್ವೇಶ್ವರ ಹೆಗಡೆ ಕಾಗೇರಿ ಕರ್ನಾಟಕದ ಭಾರತೀಯ ಜನತಾ ಪಕ್ಷದ ಮುಖಂಡರಾಗಿದ್ದಾರೆ. ಅವರು ಸತತ ಆರನೇ ಬಾರಿಗೆ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕರ್ನಾಟಕದ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರದ ಅವಧಿಯಲ್ಲಿ (೨೦೦೮-೨೦೧೩) ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ, ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.[೧]

ಆರಂಭಿಕ ಜೀವನ[ಬದಲಾಯಿಸಿ]

ಕಾಗೇರಿಯವರು ೧೦ ಜುಲೈ ೧೯೬೧ ರಂದು ಕರ್ನಾಟಕದ ಸಿರ್ಸಿಯಲ್ಲಿ ಜನಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಕಾಂ ಮುಗಿಸಿದ ಅವರು, ಕಾಲೇಜು ದಿನಗಳಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳಾಗಿದ್ದರು ಮತ್ತು ವಿದ್ಯಾರ್ಥಿ ಸಂಘದ ಪ್ರಭಾವಿ ನಾಯಕರಾಗಿದ್ದರು.[೨]

ರಾಜಕೀಯ ಜೀವನ[ಬದಲಾಯಿಸಿ]

ಅವರು ಮೊದಲ ಮೂರು ಅವಧಿಗೆ ಅಂಕೋಲಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು: ೧೯೯೪-೯೯, ೧೯೯೯-೨೦೦೪ ಮತ್ತು ೨೦೦೪-೦೮. ಡಿಲಿಮಿಟೇಶನ್ ಪ್ರಕ್ರಿಯೆಯ ನಂತರ, ಅವರು ಹೊಸದಾಗಿ ರಚಿಸಲಾದ ಸಿರ್ಸಿ ಕ್ಷೇತ್ರಕ್ಕೆ ಸ್ಥಳಾಂತರಗೊಂಡರು ಮತ್ತು ೨೦೦೮, ೨೦೧೩ ಮತ್ತು ೨೦೧೮ ರ ಚುನಾವಣೆಗಳಲ್ಲಿ ಶಾಸಕರಾಗಿ ಆಯ್ಕೆಗೊಂಡರು.[೩] ಅವರು ತಮ್ಮ ರಾಜಕೀಯ ಜೀವನದಲ್ಲಿ ೬ ಅವಧಿಗೆ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ

ಹುದ್ದೆಗಳು[ಬದಲಾಯಿಸಿ]

  • ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು (೨೦೦೮-೨೦೧೩)
  • ವಿಧಾನ ಸಭೆ ಸ್ಪೀಕರ್ (೨೦೧೯ - )

ಉಲ್ಲೇಖ[ಬದಲಾಯಿಸಿ]



  1. https://vijaykarnataka.indiatimes.com/state/karnataka/vishweshwar-hegde-kageri-elected-as-karnataka-assembly-speaker/articleshow/70451772.cms
  2. https://www.prajavani.net/stories/stateregional/speaker-vishweshwar-hegde-654996.html
  3. "ಆರ್ಕೈವ್ ನಕಲು". Archived from the original on 2019-08-01. Retrieved 2019-08-01.