ವಿಷಯಕ್ಕೆ ಹೋಗು

ಸಿಂಧಿ (ಗೋವಿನ ತಳಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿಂಧಿ
ತಳಿಯ ಹೆಸರುಸಿಂಧಿ
ಮೂಲಪಾಕಿಸ್ತಾನಸಿಂಧ್ ಪ್ರ್ಯಾಂತ್ಯ
ವಿಭಾಗಹಾಲಿನ ತಳಿ
ಬಣ್ಣಹೆಚ್ಚಾಗಿ ಕೆಂಪು. ಕೆಲವೊಮ್ಮೆ ಕೆಂಪುಮಿಶ್ರಿತ ಬೂದು
ಕೊಂಬುಗಿಡ್ಡ, ಒಳಬಗ್ಗಿದಂತಿರುವ ಕೋಡು

ಸಿಂಧಿ ಅಥವಾ ಕೆಂಪು ಸಿಂಧಿ ಹುಟ್ಟಿದ್ದು ಪಾಕಿಸ್ತಾನಸಿಂಧ್ ಪ್ರ್ಯಾಂತ್ಯದಲ್ಲಿ. ಆದರೆ ಇಂದು ಸಿಂಧಿ ತಳಿಯ ಗೋವುಗಳು ಭಾರತ, ಶ್ರೀಲಂಕಾ, ಬಾಂಗ್ಲಾ, ಆಸ್ಟ್ರೇಲಿಯ, ಅಮೆರಿಕ ಸೇರಿದಂತೆ ೩೩ ದೇಶಗಳಲ್ಲಿ ವ್ಯಾಪಿಸಿವೆ. ಇಂದೂ ಕೂಡ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಇವುಗಳದ್ದು ಏಕಸ್ವಾಮ್ಯ. ಅಲ್ಲಿನ ಸಂಪೂರ್ಣ ಆರ್ಥಿಕತೆಯೇ ಸಿಂಧಿಯನ್ನು ಆಧರಿಸಿದೆಯೆಂದರೆ ಉತ್ಪ್ರೇಕ್ಷೆಯಾಗಲಾರದು. ಒಂದು ಲೆಕ್ಕಾಚಾರದ ಪ್ರಕಾರ ಪಾಕಿಸ್ತಾನದ ೨೪ ಪ್ರತಿಶತ ಹಾಲು ಸಿಂಧಿ ತಳಿಗಳಿಂದಲೇ ದೊರಕುತ್ತದೆ. ಸಿಂಧಿಗಳು ಅತ್ಯುತ್ತಮ ಹಾಲಿನ ತಳಿಗಳು.

ಎಲ್ಲ ಹವಾಮಾನಗಳಲ್ಲೂ ದಿನಕ್ಕೆ ೧೨-೧೫ ಲೀ ಹಾಲು ಕೊಡಬಲ್ಲವು ಸಿಂಧಿಗಳು. ಇವುಗಳ ಉಷ್ಣ ನಿರೋಧಕತೆ, ರೋಗ ನಿರೋಧಕ ಸಾಮರ್ಥ್ಯ ಅನನ್ಯ. ಸಿಂಧಿಗಳು ಸಾಹಿವಾಲ್ ಅನ್ನು ಹೆಚ್ಚಾಗಿ ಹೋಲುತ್ತವೆ. ಸಾಹಿವಾಲ್‌ಗಳಿಂದ ಇವು ಭಿನ್ನವಾಗುವುದು ಬಣ್ಣ ಹಾಗು ಕೋಡಿನಿಂದ. ಸಿಂಧಿಗಳದ್ದು ಗಿಡ್ಡ, ಒಳಬಗ್ಗಿದಂತಿರುವ ಕೋಡುಗಳಾದರೆ ಸಾಹಿವಾಲ್‌ಗಳದ್ದು ಉದ್ದಕೋಡು. ಸಿಂಧಿಗಳ ಬಣ್ಣ ಹೆಚ್ಚಾಗಿ ಕೆಂಪು. ಕೆಲವೊಮ್ಮೆ ಕೆಂಪುಮಿಶ್ರಿತ ಬೂದು ಬಣ್ಣದಲ್ಲಿಯೂ ಕಾಣಬಹುದು.

ಕಾಲಕ್ರಮೇಣ ಇವುಗಳನ್ನು ದೊಡ್ಡ ಮಟ್ಟದಲ್ಲಿ ತಳಿ ಸಂಕರಗೊಳಿಸಲಾಯಿತು. ಯುರೋಪಿನಲ್ಲಂತೂ ೪೦ ಪ್ರತಿಶತಕ್ಕಿಂತಲೂ ಹೆಚ್ಚಿನ ತಳಿಗಳು ಸಿಂಧಿಯ ಮಿಶ್ರತಳಿಗಳು. ಯುರೋಪಿನ ಜನಜನಿತ ಸ್ವಿಸ್ ಬ್ರೌನ್, ಡ್ಯಾನಿಶ್ ರೆಡ್ ಇತ್ಯಾದಿಗಳು ಸಿಂಧಿಯ ಸಂಕರತಳಿಗಳು. ಇಂದು ವಿಶ್ವವಿಖ್ಯಾತವಾಗುತ್ತಿರುವ ಆಸ್ಟ್ರೇಲಿಯನ್ ಸಿಂಧಿ ಪಾಕಿಸ್ತಾನ ಸರಕಾರದಿಂದ ೧೯೫೪ರಲ್ಲಿ ಕೊಡುಗೆಯಾಗಿ ಕೊಡಲ್ಪಟ್ಟಿದ್ದು. ನಂತರ ಸಾಕಷ್ಟು ಸಂಕರವಾಗಿ ಮೂಲತಳಿಯಿಂದ ಭಿನ್ನವಾಗಿದೆಯಾದರೂ ಸಿಂಧಿಗಳ ಉಷ್ಣನಿರೋಧಕತೆ, ಉತ್ತಮ ಹಾಲು ನೀಡುವ ಸಾಮರ್ಥ್ಯಗಳನ್ನು ಹಾಗೆ ಉಳಿಸಿಕೊಳ್ಳಲಾಗಿದೆ. ಇಂದು ಸಿಂಧಿಗಳನ್ನು ಭಾರತದ ಕೆಲವೇ ಗೋಶಾಲೆಗಳಲ್ಲಿ ಕಾಣಬಹುದು. ಭಾರತದಲ್ಲಿ ಇವುಗಳ ಸಂಖ್ಯೆ ನಶಿಸುವುದಕ್ಕೆ ಮುಖ್ಯ ಕಾರಣ ಪ್ರಚಾರವಿಲ್ಲದೆ ಇರುವುದು ಮಾತ್ರ ಎನ್ನುತ್ತರೆ ತಜ್ಞರು.

ಚಿತ್ರಗಳು

[ಬದಲಾಯಿಸಿ]

ಆಧಾರ/ಆಕರ

[ಬದಲಾಯಿಸಿ]

'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ Archived 2018-11-24 ವೇಬ್ಯಾಕ್ ಮೆಷಿನ್ ನಲ್ಲಿ.