ವಿಷಯಕ್ಕೆ ಹೋಗು

ಸಾಹಿವಾಲ್ (ಗೋವಿನ ತಳಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಾಹಿವಾಲ್
ತಳಿಯ ಹೆಸರುಸಾಹಿವಾಲ್
ಮೂಲಈಗಿನ ಪಾಕಿಸ್ತಾನಸಾಹಿವಾಲ್ ನಗರ
ವಿಭಾಗಕೆಲಸಗಾರ ಹಾಗೂ ಹಾಲಿನ ತಳಿ
ಬಣ್ಣಕೆಂಪು ಅಥವಾ ಊದು
ಕೊಂಬುಹಿಂಚಾಚಿರುವ ಕೋಡುಗಳು.

ಭಾರತೀಯ ಗೋಪರಂಪರೆಯಲ್ಲಿ ಅತ್ಯುತ್ಕೃಷ್ಟ ಹಾಲಿನ ತಳಿ ಎನ್ನಿಸಿರುವುದು ಸಾಹಿವಾಲ್. ಇದರ ಮೂಲ ಈಗಿನ ಪಾಕಿಸ್ತಾನಸಾಹಿವಾಲ್ ನಗರ. ಅಲ್ಲಿ ಜಂಗ್ಳಿಗಳು ಎಂಬ ಜನರು ಇವುಗಳನ್ನು ದೊಡ್ಡ ಸಂಖ್ಯೆಯಲ್ಲಿ ಸಾಕುತ್ತಿದ್ದರಂತೆ. ಎಂತಹ ಬಿಸಿಲಿಗೂ ಜಗ್ಗದ ಇದರ ದೇಹ ಪ್ರಕೃತಿ ಇವುಗಳನ್ನು ಬೇಗ ಜನಪ್ರಿಯರನ್ನಾಗಿಸಿ ಅಲ್ಲಿಂದ ಪಂಜಾಬ್, ಉತ್ತರಾಂಚಲ ದಾಟಿಸಿ ಕರೆತಂದಿತು. ಇವುಗಳ ರೋಗ ನಿರೋಧದಕತೆ, ಅತ್ಯುತ್ತಮ ಹಾಲು ಉತ್ಪಾದಕತೆ ಎಲ್ಲವು ಇವುಗಳನ್ನು ಸರ್ವವ್ಯಾಪಿಯನ್ನಾಗಿಸಿದವು.

ಎಂತಹ ಬಿಸಿಲಿಗೂ ದೇಹದ ತಾಪಮಾನದಲ್ಲಿ ವ್ಯತ್ಯಯವಾಗದೆ ಉಳಿಸುವ ವಿಶೇಷ ಚರ್ಮ ಹೊಂದಿರುವ ತಳಿ ಇದು. ಮೊಣಕಾಲುದ್ದದ ಬಾಲ, ಕೆಂಪು ಅಥವಾ ಊದು ಬಣ್ಣ, ಅಗಲ ಕಿವಿಗಳು, ಉದ್ದ ಬಾಲ, ಹಿಂಚಾಚಿರುವ ಕೋಡುಗಳು. ೩೫೦ ಕೆ.ಜಿ ತೂಗುವ ಇವುಗಳನ್ನು ಮಧ್ಯಮ ಗಾತ್ರ ಗೋವುಗಳಾಗಿ ವರ್ಗೀಕರಿಸುತ್ತಾರೆ. ಮೊದಲ ಕರು ಈಯುವುದು ಸಾಮಾನ್ಯವಾಗಿ ೩೫ರಿಂದ ೪೦ ತಿಂಗಳಿಗೆ. ನಂತರ ಸಾಮಾನ್ಯವಾಗಿ ೪೦೦-೪೨೫ ದಿನಗಳ ಅವಧಿ ಮುಂದಿನ ಕರುವಿಗೆ. ಹೀಗೇ ಸಾಗುತ್ತಾ ಒಂದು ಜೀವಮಾನಕ್ಕೆ. ೧೦-೧೨ ಕರು ಹಾಕಬಲ್ಲವು. ದಿನಕ್ಕೆ ೧೫-೨೦ ಲೀಟರ್ ಹಾಲು ಕೊಡುತ್ತವೆ. ಇವುಗಳ ಮೈಯಲ್ಲಿ ಸ್ರವಿಸುವ ವಿಶೇಷ ದ್ರವಕ್ಕೆ ಹುಳಹುಪ್ಪಟೆ ಕ್ರಿಮಿಕೀಟಗಳನ್ನು ದೂರವಿಡುವ ವಿಶೇಷತೆ ಇದೆ.

೧೯೫೦ರಲ್ಲಿ ನೂರಾರು ಗೋವುಗಳನ್ನು ಭಾರತಕ್ಕೆ ಬಂದಿದ್ದ ನ್ಯೂಗಿನಿಯಾದ ಪ್ರವಾಸಿಗರು, ಸಂಶೋಧಕರು ನೋಡಿ ಮೆಚ್ಚಿ ಅಲ್ಲಿಗೆ ಕರದೊಯ್ದು ಅಲ್ಲೆಲ್ಲ ಪ್ರಸಿದ್ಧಿಯಾಗಿ ನಂತರ ಆಸ್ಟ್ರೇಲಿಯಕ್ಕೆ ರವಾನೆಯಾದವು. ಆಸ್ಟ್ರೇಲಿಯಾದಲ್ಲಿ ಮೊದಲು ಹೈನುಗಾರಿಕೆ, ಮತ್ತು ಉಳುಮೆಗೆ ಬಳಸಲ್ಪಡುತ್ತಿದ್ದೆವಾದರೂ ನಂತರ ಇವುಗಳನ್ನು ಉತ್ತಮ ಹಾಲಿನ ತಳಿಯಾಗಿ ಅಭಿವೃಧ್ಧಿಪಡಿಸಿದರು. ಸಾಹಿವಾಲ್ ಉಪತಳಿಗಳಾದ Australian milking Zebu, Australian friesian sahiwal ಜಗತ್ಪ್ರಸಿದ್ಧ. ಕೀನ್ಯಾ ದೇಶದಲ್ಲಂತೂ ಸಾಹಿವಾಲ್ ಮನೆಮಾತು. ೫೦ ವರ್ಷಗಳ ಹಿಂದೆಯೇ ಭಾರತದಿಂದ ಹೊರಹೋದ ತಳಿಗಳ ದೇಹದಲ್ಲಿ ಸಣ್ಣ ಪುಟ್ಟ ಬದಲಾವಣೆಗಳಾಗಿವೆ.

ಚಿತ್ರಗಳು

[ಬದಲಾಯಿಸಿ]

ಆಧಾರ/ಆಕರ

[ಬದಲಾಯಿಸಿ]

'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ Archived 2018-11-24 ವೇಬ್ಯಾಕ್ ಮೆಷಿನ್ ನಲ್ಲಿ.