ಬರಗೂರು (ಗೋವಿನ ತಳಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬರಗೂರು'
ತಳಿಯ ಹೆಸರುಬರಗೂರು'
ಮೂಲಬರಗೂರು ಗುಡ್ಡಗಾಡು ಪ್ರದೇಶ- ತಮಿಳುನಾಡು
ವಿಭಾಗಕೆಲಸಗಾರ ತಳಿ, ಸಾಧಾರಣ ಎತ್ತರ
ಬಣ್ಣಕಂದು ಮತ್ತು ಬಿಳಿ ಬಣ್ಣ. ಬಿಳಿ ಹಾಗೂ ಕಡು ಕಂದು ಬಣ್ಣದವುಗಳೂ ಕಾಣಬಹುದು
ಮುಖಕೊಂಬಿನ ಮಧ್ಯದಲ್ಲಿ ಹೊಂಡವಿರುತ್ತದೆ
ಕೊಂಬುಕಂದು ಬಣ್ಣ, ಉದ್ದವಾಗಿದ್ದು, ಬುಡದಲ್ಲಿ ಹತ್ತಿರವಿರುತ್ತದೆ
ಕಾಲುಗಳುಸಪೂರವಾಗಿರುತ್ತವೆ

ಹೆಚ್ಚಿನ ಭಾರತೀಯ ತಳಿಗಳಂತೆ ಬರ್ಗೂರ್ ಅಥವಾ ಬರಗೂರು ತಳಿ ತನ್ನ ಹೆಸರನ್ನು ತನ್ನ ತವರಿನಿಂದಲೇ ಪಡೆದಿದೆ. ಬರಗೂರು ತಳಿಯ ತವರು ತಮಿಳುನಾಡಿನ ಈರೋಡ್ ಜಿಲ್ಲೆಯ ಭವಾನಿ ತಾಲೂಕಿನ ಬರಗೂರು ಬೆಟ್ಟಪ್ರದೇಶ. ಇಲ್ಲಿನ ಲಿಂಗಾಯ್ ಮತ್ತು ಲಾಂಬಾಡಿ ಜನಾಂಗದವರು ಇದನ್ನು ಬಹುಹಿಂದಿನಿಂದಲೂ ರಕ್ಷಿಸಿಕೊಂಡು ಬಂದವರು. ಶುಧ್ಧ ಕೆಲಸಗಾರ ತಳಿ ಬರಗೂರು. ಬರಗೂರು ತಳಿಯ ಹೋರಿಗಳು ಸ್ವಲ್ಪ ಹೆಚ್ಚೆ ರೌದ್ರಸ್ವಭಾವದವು. ಇವುಗಳನ್ನು ಪಳಗಿಸಿವುದಕ್ಕೆ ತುಂಬಾ ತಾಳ್ಮೆ ಬೇಕು. ಒಮ್ಮೆ ಪಳಗಿದರೆ ಇವುಗಳ ಕಾರ್ಯವೈಖರಿ ಅಪೂರ್ವ ಎಂದು ಸಾಕಣೆದಾರರು ಹೇಳುತ್ತಾರೆ. ಬೆಟ್ಟಗುಡ್ಡಗಳ ಏರು ಇಳಕಲಿನ ಭೂಮಿಗಳಲ್ಲಿ ಶ್ರಮವಿಲ್ಲದೆ ಟನ್‌ಗಟ್ಟಲೆ ಭಾರ ಎಳೆಯುವ ಸಾಮರ್ಥ್ಯ ಇವುಗಳ ವಿಶೇಷ. ವೇಗ ಮತ್ತು ಹೊರ ಹೊರಲು ಅತ್ಯತ್ತಮ ಹೋರಿಗಳಿವು.

ಬರಗೂರು ತಳಿಗಳು ಆಕಾರದಲ್ಲಿ ಮೈಸೂರಿನ ಇತರ ತಳಿಗಳಂತೆಯೆ ಆದರೆ ಸ್ವಲ್ಪ ಕುಳ್ಳ ಅಷ್ಟೆ. ಬರಗೂರು ತಳಿಯನ್ನು ಬರಗೂರು ಪ್ರದೇಶಗಳಲ್ಲಿ ಸಾಕುವ ಕ್ರಮವೇ ವಿಶೇಷವಾದದ್ದು. ಇವುಗಳನ್ನು ಇಲ್ಲಿ ಪಾಟ್ಟೀಗಳು ಎಂದು ಕರೆಯಲ್ಪಡುವ ಮಂದೆಗಳಲ್ಲಿ ದಟ್ಟ ಅರಣ್ಯಪ್ರದೇಶಗಳಲ್ಲಿ ಸಾಕುತ್ತಾರೆ. ಈ ಮಂದೆಯ ಪಾಲಕರು ಸಾಮಾನ್ಯವಾಗಿ ಲಿಂಗಾಯ್ ಜನಾಂಗದವರು. ಪ್ರತೀ ಪಾಟ್ಟೀಗಳು ಐವತ್ತಿರಿಂದ ಇನ್ನೂರರವೆರೆಗೂ ಹಸುಗಳನ್ನು ಹೊಂದಿರುತ್ತದೆ. ವರ್ಷದಲ್ಲಿ ಬಹುಕಾಲ ಅರಣ್ಯ ಅಥವಾ ಹುಲ್ಲುಗಾವಲುಗಳಲ್ಲಿ ಕಾಲ ಹಾಕುವ ಈ ಮಂದೆಗಳನ್ನು ಗೋಪಾಲಕರು ಸುಗ್ಗಿ ಕಾಲದಲ್ಲಿ ಮಾತ್ರ ಹಳ್ಳಿಗೆ ಕರೆತರುತ್ತಾರೆ. ಸುಗ್ಗಿಯಲ್ಲಿ ಇವುಗಳದ್ದು ಹೆಚ್ಚಿನ ದುಡಿತ.. ಸುಗ್ಗಿಯಾದ ನಂತರ ಜನವರಿಯವರೆಗೂ ಬರಗೂರು ಪ್ರದೇಶದಿಂದ ೪೦ ಕಿಮಿ ದೂರವಿರುವ ಉಪ್ಪಿನಗಣಿಯಲ್ಲಿ ಇವುಗಳ ವಾಸ. ಅದಾದ ನಂತರ ಮತ್ತೆ ದಟ್ಟ ಅರಣ್ಯದೊಳಗಡೆ ಇವುಗಳನ್ನು ಕರೆದೊಯ್ಯಲಾಗುತ್ತದೆ. ಈ ಕ್ರಮ ದಶಕಗಳಿಂದ ಅನೂಚಾನವಾಗಿ ನಡೆದುಬಂದಿದೆ. ಬರಗೂರು ತಳಿಯ ಹಸು ಹೋರಿಗಳ ಬಣ್ಣ ಬೂದು ಬಣ್ಣ. ಅದರ ಮೇಲೆ ಸೋಕಿದಂತೆ ಬಿಳಿಯ ಪಟ್ಟೆಗಳು. ಕೆಲವು ಬಿಳಿ, ಕಪ್ಪು ದನಗಳೂ ಕಾಣಸಿಗುವುದಿದೆ. ಅಂಬ್ಲಾಚೆರಿಯಂತೆ, ಕಂಗಾಯಂನಂತೆ ಇವುಗಳ ಬಣ್ಣ ವಯಸ್ಸಾದಂತೆ ಬದಲಾಗುವುದಿಲ್ಲ. ಧೃಡಶರೀರಿಗಳಾದ ಬರಗೂರು ಹೋರಿಗಳು ನೋಡುವುದಕ್ಕೆ ಸ್ವಲ್ಪ ಮಲೆನಾಡು ಗಿಡ್ಡದಂತೆಯೆ ಕಂಡರೂ ಬರಗೂರು ಹಸುಗಳ ಹತ್ತಿರ ಜಾತಿಯ ಹಸು ನಿಮರಿ. ಸಾಮಾನ್ಯವಾಗಿ ಹಸುಗಳು ೧೦೦ರಿಂದ ೧೫೦ ಸೆಂಟಿಮೀಟರ್ ಬೆಳದರೆ ೧೭೦ರಿಂದ ೨೦೦ರರವರೆಗೂ ಹೋರಿಗಳು ಬೆಳೆಯುತ್ತವೆ. ಉದ್ದನೆಯ ಕೊಂಬು (ಅಜಮಾಸು ೩೦ ಸೆ.ಮಿ), ಸಣ್ಣ ಡುಬ್ಬ, ಮುಂಚಾಚಿಕೊಂಡ ಹಣೆ, ೨೯೫ ಕೇಜಿಯಿಂದ ೩೪೦ಕೇಜಿಯವರೆಗೆ ತೂಕ ಇವುಗಳು ಇತರ ಮಾಹಿತಿಗಳು.

ಚಿತ್ರಗಳು[ಬದಲಾಯಿಸಿ]

ಆಧಾರ/ಆಕರ[ಬದಲಾಯಿಸಿ]

'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ Archived 2018-11-24 ವೇಬ್ಯಾಕ್ ಮೆಷಿನ್ ನಲ್ಲಿ.