ನಿಮರಿ (ಗೋವಿನ ತಳಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಿಮರಿ
ತಳಿಯ ಹೆಸರುನಿಮರಿ
ಮೂಲನಿಮರಿ ಪ್ರದೇಶ - ನರ್ಮದಾ ಕಣಿವೆ- ಮಧ್ಯಪ್ರದೇಶ
ವಿಭಾಗಕೆಲಸಗಾರ ತಳಿ. ಗಿರ್ ಹಾಗೂ ಖಿಲಾರಿ ತಳಿಯಿಂದ ಬೆಳವಣಿಗೆಯಾದವುಗಳು
ಬಣ್ಣಕೆಂಪು ಬಣ್ಣದಲ್ಲಿ ಅಗಲವಾದ ಬಿಳಿ ಪಟ್ಟೆಗಳು.
ಮುಖಉದ್ದ ಮುಖ, ಉಬ್ಬಿದ ಹಣೆ, ಮೂತಿ : ತಾಮ್ರದ ಬಣ್ಣ ಅಥವಾ ಕೆಂಪುಬಣ್ಣ
ಕೊಂಬುಹಿಂದಕ್ಕೆ ಬಾಗಿರುತ್ತದೆ. ತಾಮ್ರದ ಬಣ್ಣವಿರುತ್ತದೆ

ಮಧ್ಯ ಪ್ರದೇಶದಲ್ಲಿ ಗೀರ್ ಹಾಗೂ ಖಿಲಾರಿ ತಳಿಯ ಸಂಯೋಗದಿಂದ ಬಂದ ಒಂದು ಉತ್ತಮ ತಳಿ ನಿಮರಿ ಅಥವಾ ನಿಮಾರಿ. ಉತ್ತಮ ಕೆಲಸಗಾರ ತಳಿ ಇದು. ಇದರ ದೊಡ್ಡ ದೇಹ, ಉಬ್ಬು ಹಣೆ ಗೀರ್ ತಳಿಯದಾದರೆ ಖಿಲಾರಿಯ ದೃಡತೆ, ಚುರುಕು, ಸಿಡುಕು ಸ್ವಭಾವಗಳು ಬಂದಿದ್ದು ಖಿಲಾರಿಯಿಂದ. ನಿಮರಿಯ ಮೂಲ ಮಧ್ಯಪ್ರದೇಶದ ಕರ್ಗಾಂವ್ ಮತ್ತು ಖಾಂಡ್ವ ಪ್ರದೇಶ. ನಂತರ ಇದರ ಪ್ರಸಿದ್ಧಿ ಹೆಚ್ಚತೊಡಗಿ ದೊಡ್ಡ ಸಂಖ್ಯೆಯಲ್ಲಿ ಮಹಾರಾಷ್ಟ್ರ ಮತ್ತು ಭಾರತದ ಉಳಿದ ಪ್ರದೇಶಗಳ ಕೊಟ್ಟಿಗೆಗಳನ್ನು ತುಂಬತೊಡಗಿತು. ಇಂದು ಭಾರತದ ಅನೇಕ ರಾಜ್ಯಗಳಲ್ಲಿ ಇದನ್ನು ಕಾಣಬಹುದು. ನಿಮರಿ ಅತ್ಯುತ್ತಮ ಕೆಲಸಗಾರ ತಳಿ. ಅಪರೂಪಕ್ಕೆ ಕೆಲವು ಹಸುಗಳು ಹೆಚ್ಚು ಹಾಲು ನೀಡುವುದಿದೆಯಾದರೂ ನಿಮರಿಯ ಮುಖ್ಯ ಉಪಯೋಗವಿರುವುದು ಉಳುಮೆಗೇ. ನಿಮರಿ ತಳಿ ಸದೃಡ, ಸುಂದರ ಹಾಗೂ ಗಂಭೀರ.

ಸಾಮಾನ್ಯವಾಗಿ ಇವುಗಳ ದೇಹದ ಮೇಲೆ ಕೆಂಪು, ಬಿಳಿಪಟ್ಟೆಗಳಿರುತ್ತವೆ.. ಇವುಗಳದ್ದು ಉದ್ದ ಮುಖ, ಉಬ್ಬಿದ ಹಣೆ, ಎತ್ತರವಾದ ಡುಬ್ಬ, ನೇರ ನಿಡಿದಾದ ಕಾಲುಗಳು, ಉದ್ದವಾಗಿ ನೆಲತಾಕುವಂತೆ ಬಾಲ.

ಚಿತ್ರಗಳು[ಬದಲಾಯಿಸಿ]

ಆಧಾರ/ಆಕರ[ಬದಲಾಯಿಸಿ]

'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ Archived 2018-11-24 ವೇಬ್ಯಾಕ್ ಮೆಷಿನ್ ನಲ್ಲಿ.