ಖಿಲಾರಿ (ಗೋವಿನ ತಳಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಖಿಲಾರಿ
ತಳಿಯ ಹೆಸರುಖಿಲಾರಿ
ವಿಭಾಗಕೆಲಸಗಾರ ತಳಿ
ಬಣ್ಣಬೂದು

ಖಿಲಾರಿ ಉಳಿದ ಭಾರತೀಯ ತಳಿಗಳಂತೆ ತನ್ನ ತನ್ನ ತವರಿನ ಹೆಸರಿಂದ ಗುರುತಿಸಲ್ಪಡದೆ ಇರುವ ಕೆಲವೇ ತಳಿಗಳಲ್ಲಿ ಒಂದು. ಮರಾಠಿಯಲ್ಲಿ ಖಿಲಾರ್ ಎಂದರೆ ಗುಂಪು, ಮಂದೆ ಎಂಬೆಲ್ಲ ಅರ್ಥಗಳಿವೆ. ಹಾಗೆ ಗುಂಪಿನಲ್ಲಿ ಸಾಕಲ್ಪಡುವುದರಿಂದಲೇ ಇದಕ್ಕೆ ಖಿಲಾರಿ ಎಂಬ ಹೆಸರಾಯಿತು. ಖಿಲಾರಿಯ ಮೂಲ ಬಾಂಬೆ ಕರ್ನಾಟಕ ಅಂತ ಗುರುತಿಸಲ್ಪಡುವ ಮಹಾರಾಷ್ಟ್ರದ ಸಾತಾರ ಖಟವಾದಿಂದ ಪ್ರಾರಂಭವಾಗಿ ಕರ್ನಾಟಕದ ಹಾವೇರಿಯವರೆಗಿನ ಪ್ರದೇಶ. ಇದನ್ನು ಆಯಾ ಪ್ರಾಂತ್ಯದ ಆಧಾರದ ಮೇಲೆ ಉಪತಳಿಗಳಾಗಿ ವರ್ಗೀಕರಿಸಿಕೊಂಡಿದ್ದಾರೆ. ಹನಮ್ ಖಿಲಾರಿ ಎಂದೂ ಕೂಡ ಕರೆಸಿಕೊಳ್ಳಲ್ಪಡುವ ಅಟ್ಪಾಡಿ ಖಿಲಾರಿ, ದಕ್ಷಿಣ ಮರಾಠ ಪ್ರದೇಶವನ್ನು ಪ್ರತಿನಿಧಿಸಿದರೆ, ಸಾತಾರ ಶೊಲಾಪುರಗಳಲ್ಲಿ ಮುಖ್ಯವಾಗಿ ಕಾಣಿಸುವುದು ಮರಾಠಾವಾಡ್ ಖಿಲಾರಿ ಅಥವಾ ಮಾಸ್ವಾಡ್ ಖಿಲಾರಿ. ಸತ್ಪುರ ಪರ್ವತಪ್ರದೇಶಗಳು, ಪಶ್ಚಿಮ ಖಂಡೆಶ ಭಾಗಗಳು ತಪ್ತಿ (ತಪತಿ)ಯ ಪ್ರಾಬಲ್ಯ ಪ್ರದೇಶಗಳು. ಇವೆಲ್ಲವುಗಳಿಗಿಂತ ಇತ್ತೀಚಿನದ್ದಾದ ನಕಲಿ ಕೂಡ ಈ ಪ್ರದೇಶಗಳಲ್ಲೆ ಹೆಚ್ಚಾಗಿ ಕಾಣಸಿಗುತ್ತದೆ. ನಾಲ್ಕೂವರೆಯಿಂದ ಐದು ಅಡಿ ಎತ್ತರದ ಖಿಲಾರಿ ಅತ್ಯಂತ ಪ್ರಸಿದ್ಧ ಕೆಲಸಗಾರ ತಳಿ.

ಬಲಯುತವಾದ ಕುತ್ತಿಗೆ, ಬಿಗಿ ಚರ್ಮ, ಸ್ವಲ್ಪ ಹಳ್ಳಿಕಾರಿನಂತೆ ಕಾಣುವ ಕೊಂಬು ಇವು ಖಿಲಾರಿಯ ಮೇಲ್ನೋಟಕ್ಕೆ ಗುರುತಿಸಬಹುದಾದ ಲಕ್ಷಣಗಳು. ಖಿಲಾರಿಗಳ ಬಣ್ಣ ಬೂದು. ಅಟ್ಪಾಡಿ ಹಾಗೂ ಮಾಸ್ವಾಡ್ ಹೋರಿಗಳು ಹಣೆಯ ಭಾಗದಲ್ಲಿ ಹೆಚ್ಚು ಗಾಢವಾಗಿರುವ ಬೂದು ಬಿಳಿ ಬಣ್ಣವನ್ನು ಹೊಂದಿದ್ದರೆ ನಕಲಿಗಳದ್ದು ಸ್ವಲ್ಪ ಕಪ್ಪು ಮಿಶ್ರಿತ ಕೆಂಬಣ್ಣದ ಮುಂಭಾಗ ಹೊಂದಿರುತ್ತವೆ. ಹೀಗೆ ಇವುಗಳ ಮಧ್ಯ ಅಲ್ಪಸ್ವಲ್ಪ ವ್ಯತ್ಯಾಸವಿದೆಯಾದರೂ ಈ ಉಪತಳಿಗಳು ಶುದ್ಧರೂಪದಲ್ಲಿ ಕಾಣಸಿಗುವುದು ಕಷ್ಟಸಾಧ್ಯ ಅನ್ನುತ್ತಾರೆ.

ದಕ್ಷಿಣ ಮಹಾರಾಷ್ಟದ ಸಾತಾರ, ಶೊಲ್ಲಾಪುರಗಳಲ್ಲಿ ಇವುಗಳನ್ನು ರೈತರು ಮನೆಗೆ ಒಂದು ಎರಡರಂತೆ ಸಾಕುತ್ತಾರೆ. ಆದರೆ ಸತ್ಪುರ ಪ್ರಾಂತ್ಯದಲ್ಲಿ ಇದು ಒಂದು ಉದ್ಯಮವಾಗಿ ಬೆಳೆದಿದೆ. ಅಲ್ಲಿ ಥಿಲಾರಿಗಳು ಎಂದು ಕರೆಯಲ್ಪಡುವ ವೃತ್ತಿಪರ ಖಿಲಾರಿ ಸಾಕಣಿಕೆದಾರರು ದೊಡ್ಡ ಮಂದೆಗಳಲ್ಲಿ ಇವುಗಳನ್ನು ಸಾಕುತ್ತಾರೆ. ಖಿಲಾರಿ ಹೋರಿಗಳಿಗೆ ಭಾರಿ ಬೇಡಿಕೆ ಬಯಲುಸೀಮೆ ಜಾನುವಾರು ಸಂತೆಗಳಲ್ಲಿ ಇವು ಲಕ್ಷಾಂತರ ರೂಪಾಯಿಗಳಿಗೆ ಮಾರಾಟವಾಗುತ್ತವೆ. ಖಿಲಾರಿಗಳು ಪ್ರತಿಷ್ಟೆಯ ಸೂಚಕ ಕೂಡ. ಅವುಗಳಿಗೆ ಹಾಕಿದ ಹಣ ಸುಲಭವಾಗಿ ಹಿಂದಿರುಗಿ ಬರುತ್ತದೆ ಎನ್ನುತ್ತರೆ ಇಲ್ಲಿನ ರೈತರು. ಖಿಲಾರಿಗಳಿಗೋಸ್ಕರ ರಾಜ್ಯಸರ್ಕಾರ ಬಂಕಾಪುರದಲ್ಲೊಂದು ಸಂರಕ್ಷಣಾ ಘಟಕವೊಂದನ್ನು ತೆರೆದಿದೆ.

ಚಿತ್ರಗಳು[ಬದಲಾಯಿಸಿ]

ಆಧಾರ/ಆಕರ[ಬದಲಾಯಿಸಿ]

'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ Archived 2018-11-24 ವೇಬ್ಯಾಕ್ ಮೆಷಿನ್ ನಲ್ಲಿ.