ಗಂಗಾತೀರಿ (ಗೋವಿನ ತಳಿ)

ವಿಕಿಪೀಡಿಯ ಇಂದ
Jump to navigation Jump to search
ಗಂಗಾತೀರಿ
Gangatiri 01.JPG
ತಳಿಯ ಹೆಸರುಗಂಗಾತೀರಿ
ಮೂಲಗಂಗಾನದಿ ತೀರ ಪ್ರದೇಶಗಳಾದ ಬಿಹಾರ, ವಾರಣಾಸಿ
ವಿಭಾಗಉಭಯ
ಬಣ್ಣಬಿಳಿ
ಮುಖಸಪೂರ, ನೀಳ, ಕಪ್ಪು ಮೂತಿ, ಕಪ್ಪು ಕಣ್ಣು
ಕೊಂಬುಸಣ್ಣ

ಉತ್ತರ ಭಾರತದ ಗಂಗಾತೀರಿ ಹಸುಗಳಿಗೆ ಆ ಹೆಸರು ಬರಲು ಕಾರಣ ಅವುಗಳು ಗಂಗಾನದಿ ತೀರದಲ್ಲಿ ಬದುಕುತ್ತಿದ್ದುದ್ದು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಅವುಗಳು ಕಂಡುಬರುತ್ತಿದ್ದುದ್ದು ಅಲಹಾಬಾದ್ ಜಿಲ್ಲೆಯ ವಾರಣಾಸಿ ಪ್ರದೇಶದಲ್ಲಿ. ಇವು ಆಕಾರದಲ್ಲಿ ಕೊಂಚ ಮಾಳ್ವಿ ಮತ್ತು ಹರಿಯಾಣಿ ತಳಿಯನ್ನು ಹೋಲುತ್ತವೆ. ಗಂಗಾತೀರಿ ಉಭಯೋಪಯೋಗಿ ತಳಿ. ಅಂದರೆ ಗಂಗಾತೀರಿ ಹಸುಗಳನ್ನು ಹಾಲು ಉತ್ಪಾದನೆಗಾಗಿಯೂ ಹಾಗೂ ಉಳುಮೆ ಇತ್ಯಾದಿಗಳಿಗಾಗಿಯೂ ಉಪಯೋಗಿಸುತ್ತಾರೆ. ೬ ರಿಂದ ೮ ಲೀಟರಷ್ಟು ಹಾಲನ್ನು ಕೊಡಬಲ್ಲದು

ಬಿಳಿಯ ಬಣ್ಣ. ಸದೃಡ ಶರೀರಿಗಳು. ಕಾಲುಗಳು ಉದ್ದ ಹಾಗೂ ಬಲಶಾಲಿ. ಪಾದದ ತುದಿಗಳು ಸಾಮಾನ್ಯವಾಗಿ ಕಪ್ಪು ಬಣ್ಣದ್ದು. ಕಡುಗಪ್ಪು ಬಣ್ಣದ ಬಾಲಗಳು ನೆಲಕ್ಕು ತಾಗುವಂತಿರುತ್ತದೆ. ಹೋರಿಗಳ ಸಾಮಾನ್ಯ ಎತ್ತರ ಅಂದಾಜು ೧೫೦ಸೆಮೀ, ಹಸುಗಳದ್ದು ೧೪೦ಸೆಮೀ. ಹೋರಿಗಳ ಸಾಮಾನ್ಯ ತೂಕ ೫೦೦ಕಿಗ್ರಾಂ, ಗೋವುಗಳದ್ದು ಸುಮಾರು ೩೫೦ಕಿಗ್ರಾಂ.

ಗಂಗಾನದಿ ತೀರದ ಈ ತಳಿ ನಾಶದ ಅಂಚಿನಲ್ಲಿದೆ. ಗಂಗಾತೀರಿಯನ್ನು ಉಳಿಸಲೋಸುಗವೇ ಇರುವ ಒಂದೇ ಒಂದು ಗೋಶಾಲೆ ವಾರಣಾಸಿಯಲ್ಲಿದೆ. ಶುದ್ಧ ಹಾಗೂ ಉತ್ತಮ ಗೋವುಗಳ ಸಂಗ್ರಹ ಈ ಗೋಶಾಲೆಯಲ್ಲಿದೆ.

ಚಿತ್ರಗಳು[ಬದಲಾಯಿಸಿ]

ಆಧಾರ/ಆಕರ[ಬದಲಾಯಿಸಿ]

'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ