ಹರಿಯಾಣಿ (ಗೋವಿನ ತಳಿ)

ವಿಕಿಪೀಡಿಯ ಇಂದ
Jump to navigation Jump to search
ಹರಿಯಾಣಿ
Hariana 02.JPG
ತಳಿಯ ಹೆಸರುಹರಿಯಾಣಿ
ಮೂಲರೋಹ್ಟಕ್, ಗುರ್‌ಗಾಂವ್, ಹಿಸಾರ್ - ಹರಿಯಾಣ ರಾಜ್ಯ
ವಿಭಾಗಹಾಲು ಹಾಗೂ ಕೆಲಸಗಾರ ತಳಿ . ಸಾಧಾರಣದಿಂದ ದೊಡ್ಡ ಗಾತ್ರ
ಬಣ್ಣಬಿಳಿ ಅಥವಾ ಬೂದು. ಹೋರಿ –ಮುಂಭಾಗ ಹಾಗೂ ಹಿಂಭಾಗ ಕಪ್ಪಾಗಿರುತ್ತದೆ.
ಮುಖಉದ್ದವಾಗಿರುತ್ತದೆ. ಕೊಂಬಿನ ನಡುವೆ ಎಲುಬು ಉಬ್ಬಿರುತ್ತದೆ
ಕೊಂಬುಸಣ್ಣ

ಹರಿಯಾಣಿ ಅಥವಾ ಹರಿಯಾಣ ತಳಿ ಮೂಲತಃ ಹರಿಯಾಣ ಪ್ರಾಂತ್ಯದ್ದು . ಆದರೆ ಈ ತಳಿಯ ಸರ್ವಕಾಲಿಕ, ಸರ್ವದೇಶಿಕ ಉಪಯುಕ್ತತೆ ಈ ತಳಿಯನ್ನು ಜಗತ್ತಿನಾದ್ಯಂತ ಕಾಣಸಿಗುವಂತೆ ಮಾಡಿತು. ತುಂಬಾ ಅಪೂರ್ವದ ಉಭಯೋದ್ದೇಶ ತಳಿ. ಹೋರಿಗಳು ಉತ್ತಮ ಕಷ್ಟಸಹಿಷ್ಣು ಕೆಲಸಗಾರ ಪ್ರಾಣಿಗಳಾದರೆ, ಆಕಳುಗಳು ಉತ್ತಮ ಹಾಲುಕರೆಯುವಂತವು. ಇವುಗಳನ್ನು ಕ್ರಿ.ಪೂ.೨೦೦೦ ಇಸವಿಯ ಸುಮಾರಿಗೆ ಆರ್ಯರು ಇಂದು ಉತ್ತರ ಪಾಕಿಸ್ತಾನವೆಂದು ಗುರುತಿಸಲ್ಪಡುವ ಪ್ರದೇಶದಿಂದ ತಂದರೆಂದೂ, ಅಲ್ಲಿಂದ ಬಂದವುಗಳಲ್ಲಿ ಹೆಚ್ಚು ಜಾನುವಾರುಗಳು ಹರ್ಯಾಣ ಪ್ರಾಂತ್ಯದಲ್ಲಿ ಜಮೆಯಾದ್ದರಿಂದ ಇವುಗಳಿಗೆ ಹರ್ಯಾಣಿ ಅಥವಾ ಹರ್ಯಾಣ ಎಂಬ ಹೆಸರು ಬಂತೆಂಬುದು ಐತಿಹ್ಯ. ಹರಿಯಾಣಿ ಉತ್ತರ ಭಾರತದ ಉರಿಬಿಸಿಲಿನ, ಕಲ್ಲುಮಿಶ್ರಿತ ಗಟ್ಟಿಮಣ್ಣಿನಲ್ಲಿ ಉಳುವ ಸಾಮರ್ಥ್ಯವಿರುವ ಒಂದು ಉತ್ತಮ ತಳಿ. ಇವು ಅಜಮಾಸು ಒಂದು ಟನ್ ಭಾರವನ್ನು ಗಂಟೆಗೆ ೨೦ ಮೈಲಿಯಂತೆ ಎಳೆಯಬಲ್ಲ ಶಕ್ತಿಶಾಲಿಗಳು. ತಾಪಮಾನ ೪೨ ಡಿಗ್ರಿ ಸೆ. ಮಿಕ್ಕಿ ಇದ್ದಾಗಲೂ ದಿನಕ್ಕೆ ೨೫-೩೦ ಕಿ.ಮಿ ನಡೆಯಬಲ್ಲಂತವು.

ಹರ್ಯಾಣಿಗಳು ಗಿಡ್ಡ ನಿಡಿದಾದ ಕೊಂಬಿನ ಜಾತಿಗೆ ಸೆರಿದವು. ಇವುಗಳದ್ದು ಉದ್ದ ಶರೀರ, ಸಣ್ಣ ಡುಬ್ಬ, ಉದ್ದನೆಯ ಗಂಗೆದೊಗಲು. ಹರ್ಯಾಣಿಗಳು ಅತಿ ಸಾತ್ವಿಕ ಪ್ರಾಣಿಗಳು. ಒಂದು ಅವಧಿಗೆ (Lactation period) ೧೪೦೦ ಲೀ ಸಾಮಾನ್ಯವಾದರೆ ಸ್ವಲ್ಪ ಕಾಳಜಿವಹಿಸಿದರೆ ೨೧೦೦ ಲೀ ವರೆಗೂ ಹೆಚ್ಚಿಸಬಹುದು ಎನ್ನುತ್ತರೆ ರೈತರು.

ಈ ತಳಿಗಳಿನ್ನೂ ಅವನತಿಯ ಹಾದಿ ಹಿಡಿದಿಲ್ಲ. ಉಳಿದ ಉತ್ತರ ಭಾರತದ ತಳಿಗಳಿಗೆ ಹೋಲಿಸಿದರೆ ಇವುಗಳ ಸಂಖ್ಯೆ ಪರವಾಗಿಲ್ಲ ಎನ್ನುವಷ್ಟಿದೆ. ಅದರಲ್ಲೂ ಪಾಕಿಸ್ತಾನದಲ್ಲಿ ಇವುಗಳದ್ದು ಪ್ರಾಬಲ್ಯ.

ಚಿತ್ರಗಳು[ಬದಲಾಯಿಸಿ]

ಆಧಾರ/ಆಕರ[ಬದಲಾಯಿಸಿ]

'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ