ಬಚೌರ್ (ಗೋವಿನ ತಳಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಬಚೌರ್
ತಳಿಯ ಹೆಸರುಬಚೌರ್
ಮೂಲಬಿಹಾರ
ವಿಭಾಗಕೆಲಸಗಾರ ತಳಿ , ಧೃಡ ಶರೀರ
ಬಣ್ಣಬಿಳಿ
ಮುಖದೊಡ್ಡ ಕಣ್ಣು
ಕೊಂಬುಗಿಡ್ಡ ಅರ್ಧವೃತ್ತಾಕೃತಿ
ಕಾಲುಗಳುಮಧ್ಯಮ ಗಾತ್ರ
ಕಿವಿನೇರವಾದ ಕಿವಿ

ಉತ್ತಮ ಕೆಲಸಗಾರ ತಳಿ ಎಂದು ಈಸ್ಟ್ ಇಂಡಿಯಾ ಕಂಪೆನಿಯ ಕಾಲದಿಂದಲೇ ಖ್ಯಾತವಾಗಿದ್ದ ಗೋವು. ಗಾಡಿ ಎಳೆಯಲು ಬಹಳ ಹೆಸರುವಾಸಿಯಾಗಿದ್ದ ಈ ತಳಿಯ ಎತ್ತುಗಳಿಗೆ ಹತ್ತೊಂಬತ್ತನೆಯ ಶತಮಾನದ ಮಧ್ಯಕಾಲದ ತನಕವೂ ತುಂಬ ಬೇಡಿಕೆಯಿತ್ತು ಹರಿಯಾಣಿ ತಳಿಯ ಸಾಮ್ಯತೆಯನ್ನು ಹೊಂದಿ, ಅದರೊಟ್ಟಿಗೆ ತನ್ನದೇ ಕೆಲವು ವಿಶೇಷತೆಗಳನ್ನು ಹೊಂದಿದ ಒಂದು ಉತ್ತಮ ಕೆಲಸಗಾರ ತಳಿ ಬಚೌರ್. ಈ ತಳಿಯ ಮೂಲ ಬಿಹಾರದ ಸೀತಾಮಾರಿ, ಮಧುಬನಿ, ದರ್ಭಾಂಗ ಪ್ರಾಂತ್ಯಗಳೆಂದು ಊಹಿಸಲಾಗಿದೆ. ದೊಡ್ದ ಮಂದೆಗಳಲ್ಲಿ ಸಾಕುವವರು ಅಪರೂಪ. ಕುಟುಂಬದಲ್ಲಿ ೪-೫ ಹಸುಗಳು ಸಾಮಾನ್ಯ. ಇವರ ಸಾಕಣಿಕೆಯ ಮತ್ತೊಂದು ವಿಶೇಷವೆಂದರೆ ಹಸುಗಳಿಗೆ ಹೋರಿಗರು ಹುಟ್ಟಿದರೆ ಇವರು ಆ ಹಸುವಿನ ಹಾಲನ್ನು ಉಪಯೋಗಿಸುವುದೇ ಇಲ್ಲ. ಎಲ್ಲ ಹಾಲೂ ಕರುವಿಗೆ ಸೀಮಿತ. ಇವರಲ್ಲಿ ಒಂದು, ಒಂದೂವರೆ ವರ್ಷಕ್ಕೆ ಕೋಡು ಸುಡುವ ಸಂಪ್ರದಾಯವಿದೆ.

ನೆಟ್ಟನೆ ನಡುವಿನ, ಸಣ್ಣ ಕುತ್ತಿಗೆಗಳ, ದೊಡ್ಡ ಕಣ್ಣುಗಳ, ನೇರವಾದ ಸಣ್ಣ ಕಿವಿಗಳ ಧೃಡ ಶರೀರಿ ಬಚೌರ್ ತಳಿಯ ಆಹಾರ ಅತ್ಯಲ್ಪ. ಹೋರಿಗಳು ಅಜಮಾಸು ೧೧೦ ಸೆಂಟೀಮೀಟರ್‌ಗಳು. ಹಸುಗಳು ೧೦-೨೦ ಸೆ.ಮೀ. ಕಮ್ಮಿ. ಬಣ್ಣ ಬಿಳಿ. ಇವು ಗಾಡಿ ಎಳೆಯುವುದಕ್ಕೆ ಖ್ಯಾತವಾಗಿದ್ದವು. ಎಷ್ಟರ ಮಟ್ಟಿಗೆ ಎಂದರೆ ೧೯ನೆಯ ಶತಮಾನದ ಪ್ರಾರಂಭದ ಕಾಲದಲ್ಲಿ ಅಧಿಕ ಸಂಖ್ಯೆಯಲ್ಲಿ ಈ ಎತ್ತುಗಳಿಗೆ ಬೇಡಿಕೆಯಿತ್ತು. ಇವುಗಳ ಒಂದು ಜೋಡಿ ಎತ್ತುಗಳು ೨-೩ ಟನ್ ತೂಕದ ಗಾಡಿಯನ್ನು ಆರಾಮವಾಗಿ ಎಳೆಯಬಲ್ಲವು.

ಆಧಾರ/ಆಕರ[ಬದಲಾಯಿಸಿ]

'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ Archived 2018-11-24 at the Wayback Machine.