ಸವಾಯಿ ಗಂಧರ್ವ
ಹುಬ್ಬಳ್ಳಿಗೆ ೧೨ ಮೈಲಿದೂರದಲ್ಲಿರುವ,'ಕುಂದಗೋಳ','ಜಮಖಂಡಿ ಸಂಸ್ಥಾನ'ಕ್ಕೆ ಸೇರಿತ್ತು. ಇಂತಹ ಪರಿಸರದಲ್ಲಿ ಹಿಂದೂಸ್ತಾನೀ ಸಂಗೀತದಲ್ಲಿ ದೇಶದ ಮನೆಮಾತಾಗಿ ಪ್ರಸಿದ್ಧರಾಗಿದ್ದ, ಸವಾಯಿ ಗಂಧರ್ವರು,'ಜನಿಸಿದರು. ಅವರ ಬಾಲ್ಯದ ಹೆಸರು, 'ರಾಮಚಂದ್ರ ಗಣೇಶ ಕುಂದಗೋಳಕರ್', ಎಂದು. ಅವರ ತಂದೆ, 'ಗಣೇಶರಾವ್' ಹತ್ತಿರದ ’ಸಂಶಿ’ಊರಿನಲ್ಲಿ ಜನಿಸಿದವರು. ತಾಯಿ, ಧಾರವಾಡದ ಹತ್ತಿರದ ’ಅಮ್ಮಿನಹಾಳ್’ನವರು. ಜನವರಿ, ೧೯, ೧೮೮೬ ರಲ್ಲಿ ಜನಿಸಿದರು. 'ಗಣೇಶರಾವ್', 'ಬೆನಕನ ಹಳ್ಳಿ'ಯ 'ನಾಡಿಗೇರ ರಂಗನಗೌಡರ ಬಳಿ' 'ಕಾರಕೂನಿಕೆ' ಮಾಡುತ್ತಿದ್ದರು. ಅವರಿಗೂ ಬಾಲ್ಯದಿಂದಲೂ ಸಂಗೀತದಲ್ಲಿ ಆಸಕ್ತಿ. ಬಾಲ್ಯದ ದಿನಗಳಲ್ಲಿ ರಾಮಚಂದ್ರ ಗಣೇಶರು, ಸ್ವಾಗತ ಗೀತೆ, ಪಲ್ಲಕ್ಕಿ ಸೇವೆಯ ಸಮಯದಲ್ಲಿ ಭಜನೆ ಹಾಡು, ಮುಂತಾದವುಗಳನ್ನು ಹಾಡುತ್ತಿದ್ದರು.
ಬಾಲ್ಯ,ಶಿಕ್ಷಣ
[ಬದಲಾಯಿಸಿ]ಪ್ರಾಥಮಿಕ ಶಿಕ್ಷಣ ಹಳ್ಳಿಯಲ್ಲೇ ನಡೆಯಿತು. 'ಪ್ರೌಢಶಾಲಾ ವಿದ್ಯಾಭ್ಯಾಸ'ವನ್ನು ಹುಬ್ಬಳ್ಳಿಯ ’ಲ್ಯಾಮಿಂಗ್ಟನ್ ಹೈಸ್ಕೂಲ್’ ನಲ್ಲಿ. ಪ್ರತಿದಿನವೂ ರೈಲಿನಲ್ಲಿ ಹೋಗಿಬರಬೇಕು. ಆದರೆ ಇದು ಹೆಚ್ಚುದಿನ ಸಾಗಲಿಲ್ಲ. ತಾಯಿಯ ಮರಣದಿಂದಾಗಿ, ಚಿಕ್ಕಮ್ಮನ ಆಸರೆಯಲ್ಲಿ, 'ನಾಡಿಗೇರವಾಡಿ'ಯಲ್ಲೇ ಬೆಳೆದರು. ಕಿರಾಣೆಘರಾನದ ಗಾಯಕ, 'ಅಬ್ದುಲ್ ಕರೀಂ ಖಾನರ 'ಭೈರವಿ ರಾಗ'ದಲ್ಲಿ ಹಾಡಿದ, ’ಜಮುನಾಕೆ ತೀರ್' ಎಂಬ ಗೀತೆ ಅವರ ಹೃದಯದಲ್ಲಿ ಅಚ್ಚೊತ್ತಿತು.ಕಿರಾಣಾ ಘರಾಣೆಯ ಆದ್ಯ ಪ್ರವರ್ತಕರಾದ ಉಸ್ತಾದ ಅಬ್ದುಲ್ ಕರೀಮ್ ಖಾನ್. [೧]. ಖಾನಸಾಹೇಬರು ಕುಂದಗೋಳಕ್ಕೆ, ತಮ್ಮ ಶಿಷ್ಯರಾದ 'ನಾನಾಸಾಹೇಬ ನಾಡಗೇರ'ರಲ್ಲಿ ಆಗಾಗ್ಗೆ ಬರುತ್ತಿದ್ದರು. ಅಲ್ಲಿಯೆ ಅವರಿಗೆ ರಾಮಭಾವುರವರ ಪರಿಚಯವಾಗಿ ಅವರಿಗೆ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ದೀಕ್ಷೆ ಕೊಟ್ಟರು ಅಕ್ಕ-ಪಕ್ಕದಲ್ಲಿ ಓಡಾಡುತ್ತಿದ್ದ ಬಾಲಕನ ಸಂಗೀತಾಸಕ್ತಿಯನ್ನು ಕಂಡು,ಖಾನ್ ಸಾಹೇಬರು ಅವನನ್ನು ತಮ್ಮ ಜೊತೆಯಲ್ಲಿ ಮಿರಜ್ ಗೆ ಕರೆದುಕೊಂಡು ಹೋದರು. ಅಂದಿನ ದಿನಗಳಲ್ಲಿ ಕೆಲವು ಸಂಗೀತ ಪರಂಪರೆಗಳು ಪ್ರಖ್ಯಾತವಾಗಿದ್ದವು.(ಘರಾಣೆಗಳು)
- ಆಗ್ರಾ,
- ಕಿರಾಣೆ,
- ಜೈಪುರ,
- ಗ್ವಾಲಿಯರ್,
- ಪಾಟಿಯಾಲಾ,
- ಇಂದೋರ್ ಮುಂತಾದವುಗಳು
ಕಿರಾಣೆ ಘರಾನ, ಸ್ವರ ಪ್ರಧಾನವಾದ ಘರಾನ. ಆಗ್ರಘರಾನ, ಲಯಕ್ಕೆ ಪ್ರಾಮುಖ್ಯತೆ ಕೊಡುತ್ತಿತ್ತು. ಇತರೆ ಘರಾನಗಳು,ಎರಡೂ ಅಂಶಗಳನ್ನು ಸಾಮರಸ್ಯ ಮಧ್ಯದಲ್ಲಿವೆ.
ಅಬ್ದುಲ್ ಕರೀಂ ಖಾನ್
[ಬದಲಾಯಿಸಿ]ಕರೀಂ ಖಾನ್, ದಿಲ್ಲಿಯ ಹತ್ತಿರದ 'ಕಿರಾನಾ' ಹಳ್ಳಿಯಲ್ಲಿ ಜನಿಸಿದ್ದರು. ಕಾಲಾಂತರದಲ್ಲಿ 'ಮಿರಜ್' ನಲ್ಲಿ ಬಂದು ನೆಲೆಸಿದರು. ಖಾನರು ಸಂಗೀತ ಪ್ರಸಾರಕ್ಕಾಗಿ ಮಿರಜ್, ಪುಣೆ, ಮೈಸೂರ್, ಬೆಳಗಾವಿ ’ಆರ್ಯ ಸಂಗೀತ ವಿದ್ಯಾಲಯ’ವೆಂಬ ಹೆಸರಿನ ಶಾಲೆಯನ್ನು ನಡೆಸುತ್ತಿದ್ದರು. ಅವರ ಶಿಷ್ಯೆ, ನಂತರ ಹೆಂಡತಿಯಾದ, 'ತಾರಾಬಾಯಿ' ಪ್ರಾಚೀನ ಪರಂಪರೆಯ ಶೈಲಿಯ ಗುರುಕುಲ, ಪ್ರಶಿಷ್ಯರೂ ೮ ವರ್ಷ ಖಡ್ಡಾಯವಾಗಿ ಅಲ್ಲಿ ಶಿಕ್ಷಣವನ್ನು ಹೊಂದಲೇಬೇಕೆಂಬ ಕರಾರಿಗೆ ಸಹಿಹಾಕಬೇಕಾಗಿತ್ತು. ಗುರುಗಳಿಗೆ ಶೃತಿ ತಂಬೂರಿ ಮೀಟುತ್ತಾ ಗಂಟೆಗಟ್ಟಲೆ ಸಂಗೀತವನ್ನು ಅವಲೋಕಿಸುವ ಅವಕಾಶವನ್ನು ಸದುಪಯೋಗಗೊಳಿಸಿದರು. ನಿಧಾನವಾಗಿ ಸ್ವರಬೆರೆಸುವ ಆರಂಭವಾಯಿತು.ಸಂಗೀತ ಶಿಕ್ಷಣದ ಪದ್ಧತಿ ವಿಶಿಷ್ಟವಾಗಿತ್ತು. ಪ್ರಾತಃ, ಅಪರಾನ್ಹ, ಸಾಯಂಕಾಲ ೩ ಮುಖ್ಯ ರಾಗಗಳ, ತೋಡಿ, ಮುಲ್ತಾನಿ, ಪೂರಿಯಾ ಮಾತ್ರ ಪೂರಿಯ ರಾಗದ ಪಾಠ ಒಂದು ವರ್ಷ ಪರಿಶ್ರಮ , ನಿಷ್ಠೆ, ಶ್ರದ್ಧೆ ಮತ್ತು ಗುರುದಕ್ಷ್ಣಿಣೆ, ಈ ಮೂರು ರಾಗಗಳ ಬುನಾದಿಯಮೇಲೆ ಕಲ್ಪನಾಶಕ್ತಿ ನೂರಾರು ರಾಗ-ರಾಗಿಣಿಗಳ ತಮ್ಮದಾಗಿರಿಸಿಲೊಂಡರು.ಸಂಗೀತ ಶಿಕ್ಷಣದ ನಂತರ ರಾಮಭಾವು ಹೊಟ್ಟೆಪಾಡಿಗಾಗಿ ಮರಾಠಿ ನಾಟಕ ಕಂಪನಿ ಸೇರಿಕೊಂಡರು. ಆ ಸಮಯದಲ್ಲಿ ಮಹಾರಾಷ್ಟ್ರದಲ್ಲಿ ಸಂಗೀತ ಹಾಗು ನಾಟಕರಂಗದಲ್ಲಿ ಪ್ರಸಿದ್ಧರಾದ ಬಾಲಗಂಧರ್ವರಿಗಿಂತಲೂ ಸಂಗೀತ ಹಾಗು ಅಭಿನಯದಲ್ಲಿ ಇವರು ಒಂದೂಕಾಲು ಮಡಿ ಹೆಚ್ಚು ಎನ್ನುವ ಅರ್ಥದಲ್ಲಿ ರಾಮಭಾವು ಕುಂದಗೋಳಕರ ಅವರನ್ನು ಸವಾಯಿ ಗಂಧರ್ವ ಎಂದು ಕರೆಯಲಾಯಿತು ಮೈಸೂರು, ಮಹಾರಾಷ್ಟ್ರ, ಉತ್ತರ ಕರ್ನಾಟಕ ೧೯೦೦ -೧೯೦೭ ಅವ್ಯಾಹತವಾಗಿ ಸಂಗೀತ ತಪಶ್ಚರ್ಯ ನಡೆಯಿತು. ಸ್ವರ ಹತ್ತಿತಲ್ಲದೆ ಹಲವಾರು ತಾಸು ಸಂಗೀತ ಕಾರ್ಯಕ್ರಮ ಕೊಟ್ಟರು. ಮಂಜೀಖಾನ್ ಇಷ್ಟಪಟ್ಟರು. ಓಂಕಾರನಾಥ ಠಾಕೂರ ಕಲ್ಕತ್ತಾ ಪರಿಷತ್ತಿನಲ್ಲಿ ಆನಂದಶೃಗಳಿಂದ ಫಿಯಾಜ್ ಖಾನ್ ಮೆಚ್ಚಿದರು. ೧೯೩೨, ರಿಂದ ಸುಮಾರು ೯ ವರ್ಷ ಕುಂದಗೋಳ ದತ್ತಾತ್ರೆಯ ಭಜನೆ ದತ್ತ, ಗುರುಶಕ್ತಿ ಎಂದು ಹಾಡಿದರು. ಪಾರ್ಶ್ವವಾಯುವಿನಿಂದ ತೊಂದರೆ ಪಟ್ಟರು. ಪುಣೆಯಿಂದ ಹೆಂಡತಿ ಜೊತೆ, ಹುಬ್ಬಳ್ಳಿಯಲ್ಲಿ ಗಂಗೂಬಾಯಿ ಹಾನಗಲ್ ಅವರ ಮನೆಯಲ್ಲಿ ವಾಸ್ತವ್ಯ. ಆ ಸಮಯದಲ್ಲಿ ಗಂಗೂಬಾಯಿಯವರಿಗೆ ಉನ್ನತ ಸ್ತರದ ಪಾಠ ನೀಡಲಾಗುತ್ತಿತ್ತು.ಸನ್. ೧೯೪೬ ರಲ್ಲಿ ಸವಾಯಿ ಗಂಧರ್ವರಿಗೆ ೬೦ ವರ್ಷ. ಅವರ ಪ್ರಿಯ ಶಿಷ್ಯರು.ಪುಣೆ,ಮುಂತಾದನಗರಗಳಲ್ಲಿ ಅವರ ಗೌರವಾರ್ಥವಾಗಿ, ಸಂಗೀತೋತ್ಸವವನ್ನು ಆಯೋಜಿಸುತ್ತಿದ್ದರು. ಆ ಸಮಯದಲ್ಲಿ ಬೇರೆಬೇರೆ ಘರಾಣೆಗಳ ಮೂಲದ ಹಿರಿಯ ಸಂಗೀತಗಾರರಾದ,ರಾಮಕೃಷ್ಣ ಬುವ, ವಝೆ, ಭಾಸ್ಕರಬುವ ಬಖಲೆ, ರಹಿಮತ್ ಖಾ ಸಾಹೇಬ, ಮಂಜೀಖಾನ್ ಸಾಹೇಬ, ಮುಂತಾದ ಹಿರಿಯ ಉಚ್ಚಮಟ್ಟದ ಸಂಗೀತಕಾರರು ಭಾಗವಹಿಸುತ್ತಿದ್ದರು. ಗ್ರಾಮಾಫೋನ್ ಕಂಪನಿ, ಅಬ್ದುಲ್ ಖಾನ್ ಸಾಹೇಬರ ಗೀತೆಗಳ ಮುಂಚೆಯೇ ರಾಮಭಾವು ರವರ ಧ್ವನಿಮುದ್ರಿಕೆಗಳು ಮಾರುಕಟ್ಟೆಗೆ ಬಂದವು.
ಮದುವೆ
[ಬದಲಾಯಿಸಿ]ತಂದೆ ಗದುಗಿನ ವೈದ್ಯ ಮನೆತನದ 'ಸೀತಾಬಾಯಿ' ಯೆಂಬ ಕನ್ಯೆಯೊಂದಿಗೆ ಲಗ್ನಕ್ಕೆ ಏರ್ಪಾಡುಮಾಡಿದರು.ಕೇವಲ ಸಂಗೀತದಿಂದ ಹೊಟ್ಟೆತುಂಬುವುದು ಕಷ್ಟವಾದಾಗ ಅವರು ನಾಟಕ ಕಂಪೆನಿಗಳಲ್ಲಿ ಅಭಿನಯಿಸಲು ಪ್ರಾರಂಭಿಸಿದರು. 'ಬಾಲಗಂಧರ್ವ'ರೆಂದು ಹೆಸರಾಂತ, 'ನಾರಾಯಣರಾವ್' ೧೯೦೮ ರಲ್ಲಿ, 'ಅಮರಾವತಿ ನಗರ'ದಲ್ಲಿ, 'ನೂತನ ಸಂಗೀತ ನಾಟಕ ಮಂಡಳಿ'ಯ ಬಳಿಯಲ್ಲೇ ಬೀಡು ಬಿಟ್ಟಿದ್ದರು. 'ಹೀರಾಬಾಯಿ ಬಡೋದೆಕರ್', ನೂತನ ನಾಟ್ಯ ಶಾಖೆಯಲ್ಲಿ ಕೆಲಸಕಾಗಿ ೧೯೩೨ ರಲ್ಲಿ ರಂಗಭೂಮಿತ್ತು. 'ಸುಭದ್ರೆ' ಪಾತ್ರದಲ್ಲಿ, 'ಕಿತಿ ಕಿತಿ ಸಾಂಗತಿ ತುವಾ' ರಂಗ ಪ್ರೆವೇಶ ಮಾಡಿದೊಡನೆಯೇ ಮುಂದಿನ ಸಾಲಿನಲ್ಲಿ ಕುಳಿತು ಅವಲೋಕಿಸುತ್ತಿದ್ದ ಗುರು,ಕರೀಂಖಾನ್ ರನ್ನು ಕಂಡು ಸ್ತಬ್ಧರಾದರು. ಅಕಸ್ಮತ್ತಾಗಿ ಗುರುಗಳನ್ನು ಕಂಡಾಗ ಮಾನಸಿಕ ಆಘಾತವಾಯಿತು.'ಸವಾಯಿ ಗಂಧರ್ವರು, ಹುಬ್ಬಳ್ಳಿಯಲ್ಲಿ ಬೀಡುಬಿಟ್ಟಾಗ 'ಖಾನ್ ಸಾಹೇರು' ಅಲ್ಲಿಗೆ ಬಂದು, ಹಾಡುಗಳನ್ನು ಆಲಿಸಿ ಆಶೀರ್ವಾದಮಾಡಿದರು. ಮುಖ್ಯತೊಡಕೆಂದರೆ, ಸ್ವರಹತ್ತುವ ತನಕ ತೊಂದರೆ,ಇತ್ತು.
ಇಪ್ಪತ್ತೈದು ವರ್ಷಗಳ ಶಿಷ್ಯಪರಂಪರೆ
[ಬದಲಾಯಿಸಿ]೧೯೧೬-೧೯೪೧ ರ ವಾರೆಗಿನ ೨೫ ವರ್ಷಗಳ ಕಾಲುಶತಮಾನ ಶಿಷ್ಯ ಪರಂಪರೆ ಸೃಷ್ಟಿ. 'ವಿ. ಏ. ಕಾಗಲ್ ಕರ್', 'ನೀಲ ಕಂಠ ಬುವಾ', 'ಗಡಗೋಳಿ ವೆಂಕಟರಾವ್', 'ರಾಮದುರ್ಗ ಕೃಷ್ಣಾ ಬಾಯಿ', 'ಗಂಗಾಬಾಯಿ ಹಾನಗಲ್', 'ಫಿರೋಜ್ ದಸ್ತಾರ್', 'ಭೀಮಸೇನ್ ಜೋಷಿ','ಬಸವರಾಜ ರಾಜ ಗುರು', ಕನ್ನಡಿಗರು. ಸನ್, ೧೯೩೫ ರಲ್ಲಿ, ಗಾಂಧಿಜಯಂತಿ ನಿಮಿತ್ತ ನಡೆದ ಸಂಗೀತ ಅಧ್ಯಕ್ಷತೆಯನ್ನು ’ವೀರ ನಾರಿಮನ್’ ವಹಿಸಿದ್ದರು. ಹೈದರಾಬಾದ್ ಕರ್ನಾಟಕ ಮಂಡಳಿ, ಮಾನಪತ್ರ, 'ಧರಪುರದ ಮಹಾರಾಜ್ ಚಿನ್ನದ ಪದಕ', ಪೂರಿಯಾರಾಗ ಪಿಯಾ ಗುನಾಂತ, ಪೂರಿಯ ಧನಾಶ್ರೀ ರಾಗದ ಅಪಾರಕರ್ ಅರಜ ಸುನೋ, ಭೈರವಿರಾಗದ ಬಿನ್ ದೇಖೆ ಪರೆನಾಹೀ ಚೈನ್ ೩ ಧ್ವನಿಮುದ್ರಿಕೆಗಳು.
- ೧೯೩೮ ರಲ್ಲಿ, 'ಹುಬ್ಬಳ್ಳಿ ಮ್ಯೂಜಿಕ್ ಸರ್ಕಲ್ ವಾರ್ಷಿಕ ಉತ್ಸವದ ಅಧ್ಯಕ್ಷ'.
- ೧೯೩೯ ರಲ್ಲಿ 'ಕಲ್ಕತ್ತಾ ಬೆಂಗಾಲ್ ಮ್ಯೂಸಿಕ್ ಕಾನ್ಫರೆನ್ಸ್' ವಿಶೇಷವಾಗಿ ಗೌರವಿಸಿ 'ಸುವರ್ಣಪದಕ' ಆಕಾಶವಾಣಿಗಳಲ್ಲಿ ಬಿತ್ತರವಾಯಿತು.
- ೧೯೨೦ ಮಹಾನ್ ಸಂ ಅಬಾಸಾಹೇಬ್ ಮುಜುಮ್ ದಾರ್ ಮನೆ ಸಂ ೧ ದಿನ ಏರ್ಪಡಿಸಲಾಗಿತ್ತು; ಹೊಟ್ಟೆನೋವಿನಿಂದ ಬರಲಗಾಲಿಲ್ಲ ಬಲವಂತ .ಹುಬ್ಬಳ್ಳಿ ನಾಟ್ಯಶಾಲೆ. ಕುಂದಗೋಳ , ಪುಣೆ, ಮೊಕ್ಕಂ ಬಾಲಗಂ ದ್ರಪದಿ ನಾಟಕ ಪ್ರಯೋಗ ಆತ್ಮ ತೋಚ ಇದೇ ಕಥಾವಸ್ತುವನ್ನು ನಾಟಕ ನೂ ಸಂ. ಮ ಪ್ರಯೋಗ ದರುಪದಿ ಪಾತ್ರ ಬಾಲ ಗಂಧರ್ವ ಮಾಡಿದರೆ ರಾಮಭಾವೂ ಮಾಡಿದ್ದರು.
ನಾಗಪುರದಲ್ಲಿ ಪ್ರಚಂಡ ಜನಮನ್ನಣೆ
[ಬದಲಾಯಿಸಿ]ಸವಾಯಿ ಗಂಧರ್ವರು ಕಚೇರಿಮಾಡಲು ಮೊದಲು ಬಂದಾಗ, ಅಲ್ಲಿನ ಸಭಿಕರು, ಮಹಾ ತುಚ್ಚರೀತಿಯಲ್ಲಿ ನಡೆದುಕೊಳ್ಳುತ್ತಿದ್ದರು. ಮುಂದೆ ಅವರೇ 'ಸವಾಯ್' ಎಂದರೆ, ಹೆಚ್ಚು ನಿಷ್ಣಾತರೆಂದು ಮನಸಾರೆ ಮೆಚ್ಚಿದರು.ನಾಗಪುರದಲ್ಲಿ ಸಾರ್ವಜನಿಕ ಸಭೆಯಲ್ಲಿ ಅವರ ಪ್ರಿಯ ಶ್ರೋತೃಗಳು ಸವಾಯ್ ಯೆಂಬ, ಬಿರುದನ್ನು ನೀಡಿ ತಮ್ಮ ಗೌರವವನ್ನು ವ್ಯಕ್ತಪಡಿಸಿದರು. ಮರಾಠಿಯಲ್ಲಿ ಸವಾಯ್ ಎಂದರೆ ಎಲ್ಲೆ ಇಲ್ಲದ ಸಾಮರ್ಥ್ಯ, ಕಲಾವಂತಿಕೆ, ಅತಿಹೆಚ್ಚು ಪ್ರತಿಭೆ ಎಂದರ್ಥ. ನಂತರದ ದಿನಗಳಲ್ಲಿ ಸವಾಯಿ ಗಂಧರ್ವರ ಆರೋಗ್ಯ ಹದಗೆಟ್ಟಿತು. ಮೇಲಾಗಿ ರಂಗಭೂಮಿಯ ಮಾಲಿಕತ್ವವನ್ನು ನಿಭಾಯಿಸಬೇಕಾಯಿತು. ವ್ಯವಹಾರ ಚತುರರಲ್ಲದ ಗಂಧರ್ವರು ಕೊನೆಗೆ,ತಮ್ಮ ಮನೆ, ಜಮೀನು, ಆಸ್ತಿಪಾಸ್ತಿಗಳನ್ನು ಅಡವಿಟ್ಟು ಸಾಲ ತೀರಿಸಬೇಕಾಗಿಬಂತು. ೧೯೪೧ ರಲ್ಲಿ ಕೆಲವು ನಾಟಕಗಳನ್ನು ಆಡಿ ಅದರಲ್ಲಿ ಹಂದ ಹಣವನ್ನು ಸಾಲಗಾರರಿಗೆ ಕೊಟ್ಟು, ಕೈತೊಳೆದುಕೊಂಡರು. ೩೦ ನೇ ವಯಸ್ಸಿನಲ್ಲಿ ತಂದೆಯವರ ಮರಣ.ಆ ಸಮಯದಲ್ಲಿ ಅವರ ಗುರುಬಂಧು, ಶಂಕರವ್ ಸರ್ ನಾಯಕ್ ನೆರವಾದರು.ಶಂಕರ್ ರಾವ್ 'ಸ್ತ್ರೀಪಾತ್ರ' ಧರಿಸಿದರೆ, ಸವಾಯಿ ಗಂಧರ್ವರು 'ಪುರುಷಪಾತ್ರ' ಧರಿಸುತ್ತಿದ್ದರು. ಇಬ್ಬರ ಪರಿಶ್ರಮದಿಂದ ನಾಟಕಗಳು ಹೆಚ್ಚು ಯಶಸ್ವಿಯಾದವು. ಚಂದ್ರಿಕಾ ಹೀ ಜಣುಠೇವುಯಾ' ಸಂತ್ ತುಳಸೀದಾದ್ ಹೊಸನಾಟಕ ನಾಟಕ ಪ್ರಾರಂಭಿಸುವ ಸನ್ನಾಹದಲ್ಲಿರುವಾಗಲೇ ನಾಟಕ ಕಂಪೆನಿ ದಿವಾಳಿಯಾಗಿ ಮುಚ್ಚಬೇಕಾಯಿತು.
ಸವಾಯ್ ಗಂಧರ್ವರ ಪರಿವಾರ
[ಬದಲಾಯಿಸಿ]ಸವಾಯಿ ಗಂಧರ್ವರಿಗೆ ಇಬ್ಬರು ಮಕ್ಕಳು. ಮಗ,ಮಾನಸಿಕವಾಗಿ ಅಪ್ರಬುದ್ಧ. ಮಗಳು 'ಪ್ರಮೀಳ. ಡಾ. ದೇಶಪಾಂಡೆಯವರನ್ನು ಲಗ್ನವಾದರು. ಸವಾಯಿಗಂಧರ್ವರು ತಮ್ಮ ಕೊನೆಯ ದಿನಗಳನ್ನು ಪುಣೆಯಲ್ಲಿ ಅವರ ಮಗಳ ಮನೆಯಲ್ಲಿ ಕಳೆದರು.೧೯೪೨ರಲ್ಲಿ ಸವಾಯಿ ಗಂಧರ್ವರಿಗೆ ಪಾರ್ಶ್ವವಾಯುವಿನಿಂದ ತೊಂದರೆಯಾಯಿತು. ೧೯೪೬ರಿಂದ ೧೯೪೯ರವರೆಗೆ ಅವರು ತಮ್ಮ ಶಿಷ್ಯೆಯಾದ ಗಂಗೂಬಾಯಿ ಹಾನಗಲ್ ಇವರ ಮನೆಯಲ್ಲಿಯೆ ಉಳಿದುಕೊಂಡು ಚಿಕಿತ್ಸೆ ಪಡೆದರು. ೨೦ನೆಯ ಶತಮಾನದಲ್ಲಿ ಅವಿಭಜಿತ ಧಾರವಾಡ ಜಿಲ್ಲೆ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ರತ್ನಪ್ರಾಯ ಸಂಗೀತಗಾರರಿಗೆ ಜನ್ಮ ನೀಡಿದ ಜಿಲ್ಲೆಯಾಗಿದೆ. ಇವರಲ್ಲಿ ಆರು ಸಂಗೀತಗಾರರಂತೂ ಅಖಿಲ ಭಾರತದಲ್ಲಿ ಸುಪ್ರಸಿದ್ಧರಾದವರು:
- ೧. ಸವಾಯಿ ಗಂಧರ್ವ (೧೮೮೬-೧೯೫೨)
- ೨. ಮಲ್ಲಿಕಾರ್ಜುನ ಮನಸೂರ (೧೯೦೧-೧೯೯೨)
- ೩. ಗಂಗೂಬಾಯಿ ಹಾನಗಲ್ (೧೯೧೩-)
- ೪. ಬಸವರಾಜ ರಾಜಗುರು (೧೯೧೭-೧೯೯೧)
- ೫. ಭೀಮಸೇನ ಜೋಷಿ (೧೯೨೨-)
- ೬. ಕುಮಾರ ಗಂಧರ್ವ (೧೯೨೪-೧೯೯೨)
ಸ್ವರ ಹತ್ತುವುದು ಸ್ವಲ್ಪ ಕಠಿಣವಾಗಿತ್ತು
[ಬದಲಾಯಿಸಿ]ಸ್ವರಹತ್ತಿತಲ್ಲದೆ ಹಲವಾರು ತಾಸು ಸಂ ಕಾರ್ಯಕ್ರಮ ಕೊಟ್ಟರು.ಮಂಜೀಖಾನ್ ಇಷ್ಟಪಟ್ಟರು. 'ಓಂಕಾರನಾಥ ಠಾಕೂರ' ಕಲ್ಕತ್ತಾ ಪರಿಷತ್ತಿನಲ್ಲಿ ಆನಂದಶೃಗಳಿಂದ ಸ್ವಾಗತಿಸಿದರು.'ಫಿಯಾಜ್ ಖಾನ್' ಮೆಚ್ಚಿದರು. ೧೯೩೨, ೯ ವರ್ಷ ಕುಂದಗೋಳ ದತ್ತಾತ್ರೆಯ ಭಜನೆ ದತ್ತ, ಗುರುಶಕ್ತಿ ಎಂದು ಹಾಡಿದರು. ೧೯೪೧ ರಲ್ಲಿ ಹೊಲಮಾರಿದರು. ಪಾರ್ಶ್ವವಾಯು. ಪುಣೆಯಿಂದ ಹೆಂಡತಿ ಜೊತೆ, ಹುಬ್ಬಳ್ಳಿಯಲ್ಲಿ ಗಂಗೂಬಾಯಿ ಹಾನಗಲ್ ಅವರ ಮನೆಯಲ್ಲಿ ವಾಸ್ತವ್ಯ. ಪಾಠ. ೧೯೪೬ ರಲ್ಲಿ ೬೦ ವರ್ಷ. ಬುಬ್ಬಳ್ಳಿ ಶಿಷ್ಯರು. ಪುಣೆ, ಬೇರೆಬೇರೆ ಘರಾಣೆಗಳ ಮೂಲದ ರಮಕೃಷ್ಣ ಬುವ,ವಝೆ, ಭಾಸ್ಕರಬುವ ಬಖಲೆ, ರಹಿಮತ್ ಖಾ ಸಾಹೇಬ, ಮಂಜೀಖಾನ್ ಸಾಹೇಬ ಹಿರಿಯ ಉಚ್ಚಮಟ್ಟದ ಸಂಗೀತಕಾರರು ಆಚರಿಸಿದರು.
ಧ್ವನಿಮುದ್ರಿಕೆ
[ಬದಲಾಯಿಸಿ]ಗ್ರಾಮಾಫೋನ್ ಕಂ ಅಬ್ದುಲ್ ಖಾನ್ ರಾಮಭಾವು ಧ್ವನಿಮುದ್ರಿಕೆ, ತಂದೆ ಮಿರಜ್ ಕುಂದಗೋಳ ಮದುವೆ, ಗದುಗಿನ ವೈದ್ಯ ಮನೆತನದ ಸೀತಾಬಾಯಿ ಕನ್ಯೆ. ನಾಟಕ ಕಂ. ಹಣ ಸಾಲದ್ದಕ್ಕೆ ಕನ್ನಡ ಮಾತೃಭಾಷೆ ಮರಾಠಿ ಕಂ. ರಂಗಭೂಮಿ ಹಿಂದೆ ಬಾಲಗಂಧರ್ವರು ಹೆಸರಾಂತ ನಾರಾಯಣರಾವ್ ೧೯೦೮ ಅಮರಾವತಿ ನೂತನ ಸಂ ನಾ. ಮಂ ಬೀಡು ಬಿಟ್ಟಿದ್ದರು. ಬಾಲಗಂಧರ್ವ ಅಲ್ಲಿತ್ತು. ಹೀರಾಬಾಯಿ ಬಡೋದೆಕರ್, ನೂತನ ನಾಟ್ಯ ಶಾಖೆಯಲ್ಲಿ ಕೆಲಸಕಾಗಿ ೧೯೩೨ ರಲ್ಲಿ ರಂಗಭೂಮಿತ್ತು. ಸುಭದ್ರೆ ಪಾತ್ರದಲ್ಲಿ, 'ಕಿತಿ ಕಿತಿ ಸಾಂಗತಿ ತುವಾ' ರಂಗ ಪ್ರೆವೇಶ ಮಾಡಿದೊಡನೆಯೇ ಮುಂದಿನ ಸಾಲಿನಲ್ಲಿ ಕುಳಿತು ಅವಲೋಕಿಸುತ್ತಿದ್ದ ಗುರುಗಳನ್ನು ಕಂಡು ಸ್ತಬ್ಧರಾದರು. ಕರೀಂಖಾ ಮಾನಸಿಕ ಆಘಾತ. ಸವಾಯ್ ಹುಬ್ಬಳ್ಳಿಯಲ್ಲಿ ಬೀಡು ಖಾನ್ ಸಾಹೇರು ಹಾಡುಗಳು ಆಶೀರ್ವಾದ. ಸ್ವರಹತ್ತುವ ತೊಂದರೆ, ಇತ್ತು. ೧೯೧೬-೧೯೪೧ ೨೫ ವರ್ಷಗಳ ಕಾಲುಶತಮಾನ ಶಿಷ್ಯ ಪರಂಪರೆ ಸೃಷ್ಟಿ. 'ವಿ. ಏ. ಕಾಗಲ್ ಕರ್' 'ನೀಲ ಕಂಠ ಬುವಾ ಗಡಗೋಳಿ' 'ವೆಂಕಟರಾವ್ ರಾಮದುರ್ಗ' 'ಕೃಷ್ಣಾ ಬಾಯಿ' 'ಗಂಗೂಬಾಯಿ ಹಾನಗಲ್' 'ಫಿರೋಜ್ ದಸ್ತಾರ್' ಭೀಮಸೇನ ಜೋಷಿ, ಬಸವರಾಜ ರಾಜಗುರು; ಎಲ್ಲರು ಕನ್ನಡಿಗರು. ೧೯೩೫ ರಲ್ಲಿ ಗಾಂಧಿಜಯಂತಿ ನಿಮಿತ್ತ ನಡೆದ ಸಂಗೀತ ಅಧ್ಯಕ್ಷತೆಯನ್ನು ’ವೀರ ನಾರಿಮನ್’ ವಹಿಸಿದ್ದರು. ಪೂರಿಯಾರಾಗದಲ್ಲಿ. 'ಪಿಯಾ ಗುನಾಂತ', 'ಪೂರಿಯ ಧನಾಶ್ರೀ ರಾಗದ ಅಪಾರಕರ್ ಅರಜ ಸುನೋ' 'ಭೈರವಿರಾಗದ ಬಿನ್ ದೇಖೆ ಪರೆನಾಹೀ ಚೈನ್ 'ಮೊದಲಾದ, ೩ ಧ್ವನಿಮುದ್ರಿಕೆಗಳು ಹೊರಬಂದವು.
- ಹೈದರಬಾದ್ ಕರ್ನಾಟಕ ಮಂಡಳಿಯ ಮಾನಪತ್ರ,
- ಧರಪುರದ ಮಹಾರಾಜ್ ಚಿನ್ನದ ಪದಕ,
- ೧೯೩೮ ಹುಬ್ಬಳ್ಳಿ ಮ್ಯೂಜಿಕ್ ಸರ್ಕಲ್ ವಾರ್ಷಿಕ ಉತ್ಸವದ ಅಧ್ಯಕ್ಷ ಪದವಿ.
- ೧೯೩೯ ರಲ್ಲಿ ಕಲ್ಕತ್ತಾ ಬೆಂಗಾಲ್ ಮ್ಯೂಸಿಕ್ ಕಾನ್ಫರೆನ್ಸ್ ವಿಶೇಷವಾಗಿ ಗೌರವಿಸಿ ಸುವರ್ಣಪದಕ
- ದೇಶದ ವಿವಿಧ ಆಕಾಶವಾಣಿಗಳಲ್ಲಿ ಅವರ ಸಂಗೀತ ಕಾರ್ಯಕ್ರಮ ಬಿತ್ತರವಾಯಿತು.
- ೧೯೨೦ ರಲ್ಲಿ, ಮಹಾನ್ ಸಂಗೀತಕಾರ, ಅಬಾಸಾಹೇಬ್ ಮುಜುಮ್ ದಾರ್ ಮನೆಯಲ್ಲಿ ಒಂದುದಿನದ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು; ಹೊಟ್ಟೆನೋವಿನಿಂದ ಬಳಲುತ್ತಿದ್ದ ಸವಾಯಿ ಗಂಧರ್ವರು, ಬರಲು ಸಾಧ್ಯವಿಲ್ಲವೆಂದು ಸುದ್ದಿ ಕಳಿಸಿದರು. ಆದರೆ ಸಂಗೀತ ರಸಿಕರು ಹೇಗಾದರು ಬರಲೇ ಬೇಕೆಂದು ಬಲವಂತ ಮಾಡುತ್ತಿದ್ದರು. ಆದರೆ ಹೇಗೋ ಯೋಗಾಯೋಗದಿಂದ ಸ್ವರಹತ್ತಿ, ಸುಮಾರು ೩-೪ ಗಂಟೆಗಳ ಕಾಲ ಹಾಡಿದ ಅವರಿಗೇ ಹೊಟ್ಟೆನೋವಿನ ವಿಷಯ ಮರೆತೇ ಹೋಗಿತ್ತು.
ಬಾಲಗಂಧರ್ವ, ಮತ್ತು ಸವಾಯ್ ಗಂಧರ್ವರ ನಾಟಕ ಪ್ರಯೋಗಗಳು
[ಬದಲಾಯಿಸಿ]ಕೆಲವೊಮ್ಮೆ, ಸವಾಯಿಗಂಧರ್ವರು, ಮೊಕ್ಕಂಮಾಡಿದ ಸ್ಥಳದಲ್ಲಿಯೇ ಬಾಲಗಂಧರ್ವರ ನಾಟಕ ಕಂಪೆನಿಯೂ ಡೇರ ಹಾಕುತ್ತಿತ್ತು. ಆಗ, 'ದ್ರಪದಿ ನಾಟಕ'ದ ಪ್ರಯೋಗವನ್ನು ಬಾಲಗಂಧರ್ವರು ಮಾಡಿದಾಗ, ಅದೇ ಕಥಾವಸ್ತುವನ್ನು ಬಳಸಿ, 'ಆತ್ಮ ತೋಚ' ವೆಂಬ ಹೆಸರಿನಲ್ಲಿ ನಾಟಕವನ್ನು ನೂತನ ಸಂಗೀತ ಮಂಡಳಿ ಪ್ರಯೋಗ ಮಾಡಿತು.'ದ್ರೌಪದಿ'ಯ ಪಾತ್ರ 'ಬಾಲ ಗಂಧರ್ವ' ಮಾಡಿದರೆ 'ರಾಮಭಾವೂ' ಮಾಡಿದ್ದರು. ಅಭಿನಯದಲ್ಲಿ ಹೆಚ್ಚು ಸಾಮರ್ಥ್ಯವಿಲ್ಲದಿದ್ದರೂ, 'ಕಿರಾನಾ ಘರಾನ'ದ ಶಾಸ್ತ್ರೀಯ ಸಂಗೀತದ ತರಬೇತಿಯ ಭದ್ರ ತಳಹದಿ ಅವರ ಅಭಿನಯಕ್ಕೆ ಬೇರೊಂದು ಕಳೆ ಕೊಟ್ಟಿತು. 'ಸವಾಯಿ ಗಂಧರ್ವ'ರ ಹಾಡುಗಾರಿಕೆಯನ್ನು ಕೇಳಿದ 'ಬಾಲ ಗಂಧರ್ವ'ರು ಮನಸೋತರು. ತಮ್ಮ ಪಾತ್ರಮುಗಿದ ಬಳಿಕ ಬಣ್ಣವನ್ನು ಅಳಿಸಿಕೊಂಡು, 'ಸವಾಯಿ'ಯವರ ಪಾತ್ರ, ಮತ್ತು ಅವರ ಸಂಗೀತವನ್ನು ಕೇಳಲು ಬರುತ್ತಿದ್ದರು. ಹೀಗೆ ಅವರ ಮಧ್ಯೆ ಬೆಳೆದ ಮೈತ್ರಿ, ಗೌರವ, ಕೀರ್ತಿ, ಧನಲಾಭ, ಹಾಗೂ ಅಪಾರ ಯಶಸ್ಸನ್ನು ದೊರಕಿಸಿಕೊಟ್ಟಿತು.
- -'ಮಾಧವ ಎನ್. ಮಹಿಷೆ', 'ಭಾರತ-ಭಾರತಿ ಪುಸ್ತಕ ಸಂಪದ', 'ರಾಷ್ಟ್ರೋತ್ಥಾನ ಸಾಹಿತ್ಯ'. ಬೆಂಗಳೂರು. ೧೯ ಪುಟಗಳ ಪುಟ್ಟ ಪುಸ್ತಕ,(ಜನವರಿ, ೧೯೮೦ ರಲ್ಲಿ ಪ್ರಕಟಿತ)