ಸದಸ್ಯ:Sanjukta663

ವಿಕಿಪೀಡಿಯ ಇಂದ
Jump to navigation Jump to search

ನನ್ನ ಪರಿಚಯ[ಬದಲಾಯಿಸಿ]

ಹಾಸನ ಜಿಲ್ಲೆ

ನನ್ನ ಹೆತ್ತವರು ಆಶೀರ್ವಾದಿಸಿ ನಾಮಕರಣ ಮಾಡಿದ್ದು "ಸಂಜುಕ್ತಾ ಗುಬ್ಬಿ" ಎಂದು. ಮೂಲತಃ ಹಾಸನ ಜಿಲ್ಲೆಯ, ಹೊಳೆನರಸೀಪುರ ತಾಲ್ಲೂಕಿನ "ಜೋಡಿಗುಬ್ಬಿ" ಊರಿಗೆ ಸೇರಿದ ನಾನು ಹುಟ್ತಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ. ಹುಟ್ಟಿದ್ದು ಫ಼ೆಬ್ರವರಿ ಮಾಹೆಯ ಇಪ್ಪತ್ತೊಂದು ೧೯೯೯ರಲ್ಲಿ. ನನ್ನ ತಂದೆಯ ಹೆಸರು ಶ್ರೀಯುತ. ಪ್ರವೀಣ್ ಜಿ.ಎನ್. ಹಾಗೂ ತಾಯಿ ಶ್ರೀಮತಿ. ನಾಗು ಹೆಚ್.ಕೆ. ನನಗೆ ಒಡಹುಟ್ಟಿದವರಿಬ್ಬರು, ಕು|| ಸುದೀಪ್ತಾ ಮತ್ತು ಕು|| ಸುವ್ಯಕ್ತಾ ಎಂದು. ಪ್ರಸ್ತುತ ಕ್ರೈಸ್ಟ್ ಯೂನಿವರ್ಸಿಟಿಯ ಬಿಸಿಜೆಡ್ ವಿಭಾಗದಲ್ಲಿ ಮೊದಲನೇ ಬಿ.ಎಸ್.ಸಿ ಓದುತ್ತಿದ್ದೇನೆ.

ಕ್ರೈಸ್ಟ್ ಯೂನಿವರ್ಸಿಟಿ (ಡೀಂಡ್ ಟು ಬಿ ಯೂನಿವರ್ಸಿಟಿ)

ನನ್ನ ಹವ್ಯಾಸಗಳು[ಬದಲಾಯಿಸಿ]

ನಾಲ್ಕನೇ ವಯಸ್ಸಿನಲ್ಲಿ ರೋಲರ್ ಸ್ಕೇಟಿಂಗ್ ಕ್ರೀಡಾ ಜಗತ್ತಿಗೆ ಕಾಲಿಟ್ಟ ನಾನು ಮುಂದೆ ಥ್ರೋ ಬಾಲ್, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್ ಇನ್ನಿತರೆ ಕ್ರೀಡೆಗಳಲ್ಲಿ ಅಭಿರುಚಿ ಹೊಂದಿದೆನು. ಚೆಸ್ ನನಗೆ ತುಂಬಾ ಪ್ರಿಯವಾದ ಆಟವಾಗಿದ್ದು ಏಕಾಗ್ರತೆ ಹೆಚ್ಚಿಸಿ, ಓದಿನಲ್ಲಿ ಚುರುಕುತನ ಹುಟ್ಟಿಸುವಲ್ಲಿ ಸಹಾಯವಾಗಿದೆ.

ಇದಲ್ಲದೆ ಪೈಂಟಿಂಗ್, ರಂಗೋಲಿ ಬಿಡಿಸುವುದು, ಪೆನ್ಸಿಲ್ ಶೇಡಿಂಗ್ ಮತ್ತು ನಮ್ಮ ಪ್ರೀತಿಪಾತ್ರರಾದ  ಭಾರತದ ಪ್ರಧಾನ ಮಂತ್ರಿ ಶೀಯುತ. ನರೇಂದ್ರ ಮೋದಿಯವರ "ಸ್ವಚ್ಛ ಭಾರತ" ಅಭಿಯಾನದಲ್ಲಿ ನನ್ನದೊಂದು ಅಳಿಲು ಸೇವೆ ಮಾಡುತ್ತಿದ್ದೇನೆ.

ನನ್ನ ಸ್ಪೂರ್ತಿ-ಮೂರ್ತಿಗಳು[ಬದಲಾಯಿಸಿ]

ಬಾಲ್ಯದಲ್ಲೇ ಆಟದ ಕಡೆ ಹೆಚ್ಚಿನ ಗಮನಹರಿಸಿದ ನನಗೆ, ಪ್ರೇರೇಪಿಸಿ ಆದರ್ಶ ವ್ಯಕ್ತಿಗಳಾದವರು ಮೂವರು. ಭಾರತದ ಕ್ರಿಕೆಟ್ ತಂಡದ ಮೇರು ಆಟಗಾರ ರಾಹುಲ್ ಡ್ರಾವಿಡ್, ಸ್ಪೇನ್ ದೇಶದ ಟೆನ್ನಿಸ್ ತಾರೆ ರಾಫ಼ೆಲ್ ನಡಾಲ್ ಹಾಗೂ ನಮ್ಮ ದೇಶದ ಮೇರು ಬ್ಯಾಡ್ಮಿಂಟನ್ ಆಟಗಾರ ಹಾಗು ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ನಲ್ಲಿ ಅಗ್ರಸ್ಥಾನದಲ್ಲಿರುವ ಸೈನಾ ನೆಹವಾಲಿನ ತರಬೇತುದಾರ ಪುಲ್ಲೇಲ ಗೋಪಿಚಂದ್ ರವರು. ಕನ್ನಡ ಭಾಷೆಗೆ ನನ್ನನ್ನು ಅರ್ಪಿಸಿಕೊಂಡು ನಂತರ ನನಗೆ ಬರೆಯಲು ಪರೋಕ್ಷವಾಗಿ ಸ್ಪೋರ್ತಿಯಾದವರು ಗೋರೂರು ರಾಮಸ್ವಾಮಿ ಅಯ್ಯಂಗಾರ್ ರವರು ಹಾಗು ನಮ್ಮ ದೇಶದ "ರಾಷ್ಟ್ರ ಕವಿ" ಪಟ್ಟತೊಟ್ಟಿರುವ, ಪದ್ಮ ಭೂಷಣ, ಪದ್ಮ ವಿಭೂಷಣ ಹಾಗೂ ಜ್ಞಾನಪೀಠ ಪ್ರಶಸ್ತಿ ಪಡೆದಂತಹ ಚಿಕ್ಕಮಂಗಳೂರು ಜಿಲ್ಲೆಯ ಡಾ|| ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ನವರು. ಶಿಕ್ಷಣ ಕ್ಷೇತ್ರದಲ್ಲಿ ನವೀನತೆ ತಂದು ವಿದ್ಯಾರ್ಥಿಗಳಿಗೆ ಓದಲು ಪ್ರೇರೇಪಿಸಿದಂತಹ ಸರ್ವ ಶ್ರೇಷ್ಠ ಅಧ್ಯಾಪಕರಾದ ಡಾ|| ಸರ್ವಪಲ್ಲಿ ರಾಧಾಕೃಷ್ಣರವರು ನನ್ನ ಅಚ್ಚುಮೆಚ್ಚಿನ ಆದರ್ಶ ವ್ಯಕ್ತಿ.

ನನ್ನ ದೇಶದ ವೀಕ್ಷಣೆ[ಬದಲಾಯಿಸಿ]

ವಿಜಯನಗರ ಸಾಂರಾಜ್ಯದ ಸ್ಥಾಪಕರಾದ ಹಕ್ಕ-ಬುಕ್ಕ
ಟೆಪ್ಪುವಿನ ಅರಮನೆ

ಇದೆಲ್ಲಾ ಹೊರತು ಪಡಿಸಿ ವೈವಿಧ್ಯಮಯವಾದ ಭಾಷೆ, ಆಚಾರ-ವಿಚಾರ, ಕೋಟೆಗಳು, ರಾಜಮನೆತನಗಳನ್ನು ಹೊಂದಿರುವ ನನ್ನ ಭಾರತ ದೇಶದ ದರ್ಶನ ಮಾಡುವುದು ನನಗೆ ಬಹಳ ಇಷ್ಟವಾದ ಮತ್ತು ಹೆಮ್ಮೆಯ ವಿಷಯ. ಮೈಸೂರಿನ ಒಡೆಯರ ಅರಮನೆ, ಹೊಯ್ಸಳ, ಚಾಲುಕ್ಯ ಮತ್ತು ರಾಷ್ಟ್ರಕೂಟರು ಆಳಿದಂತಹ ಬೇಲೂರು, ಹಳೆಬೀಡು, ಬಾದಾಮೆ, ಐಹೊಳೆ, ಪಟ್ಟದ ಕಲ್ಲು, ಗಂಗರು ಆಳಿದ ತಲಕಾಡು, ಹಕ್ಕ-ಬುಕ್ಕರ ವಿಜಯನಗರ, ಟೆಪ್ಪುವಿನ ಅರಮನೆ, ಇವೆಲ್ಲವನ್ನು ವೀಕ್ಷಿಸಿರುವ ನಾನು ಮತ್ತಿತ್ತರ ಸ್ಥಳಗಳನ್ನು ನೋಡುವ ಹುಮ್ಮಸ್ಸಿನಲ್ಲಿರುವೆ.