ರಾಫೆಲ್ ನಡಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಫೆಲ್ ನಡಾಲ್
ಜನನ
ಸ್ಪೇನ್
Titleರಾಫೆಲ್ ನಡಾಲ್

ರಾಫೆಲ್ ನಡಾಲ್

ಜನನ[ಬದಲಾಯಿಸಿ]

ರಾಫೆಲ್ ನಡಾಲ್ ಇವರು ಜೂನ್ ೩,೧೯೮೬ರಂದು ಸ್ಪೇನ್ ಎಂಬ ದೇಶದಲ್ಲಿ ಜನಿಸಿದರು.ವಿಶ್ವದ ಪ್ರಸಿದ್ದ ಟೆನ್ನಿಸ್ ಆಟಗಾರನೆಂದು ಹೆಸರುವಾಸಿಯಾಗಿದ್ದಾರೆ. ಅವರು ಕ್ಲೇ ಅಂಕಣದಲ್ಲಿ ಆಡುವ ಆಟಗಾರರಲ್ಲಿ ಮೊದಲಿಗರಾಗಿದ್ದಾರೆ.ಅಂದರೆ ಕ್ಲೇ ಅಂಕಣದಲ್ಲಿ ಅತಿಯಾದ ಪರಿಣಿತಿಯನ್ನು ಹೊಂದಿದ್ದಾರೆ.ಆದ್ದರಿಂದ ಇವರಿಗೆ "ಕ್ಲೇ ಅಂಕಣದ ರಾಜ" ಎಂಬ ಬಿರುದನ್ನು ಕೊಡಲಾಗಿದೆ.ನಡಾಲ್ ಆದ್ದರಿಂದ ಟೆನ್ನಿಸ್ ಇತಿಹಾಸದಲ್ಲಿಯೇ ತಮ್ಮ ಛಾಪನ್ನು ಮೂಡಿಸಿದ್ದಾರೆ.[೧]

ಬಾಲ್ಯ ಜೀವನ[ಬದಲಾಯಿಸಿ]

ಇವರು ಮೊದಲೇ ಹೇಳಿದ ಹಾಗೆ ಮೊನಾಕರ್,ಬಾಲೆರಿದ್ವೀಡ,ಸ್ಪೇನ್ ಎಂಬ ದೇಶದಲ್ಲಿ ಹುಟ್ಟಿದರು.ಇವರ ತಂದೆ ಸೆಬಾಸ್ವಿಯನ್ ನಡಾಲ್ ಪ್ರಖ್ಯಾತ ವ್ಯಾಪಾರಿ ಮತ್ತು ಎಷ್ಟೋ ಸಂಸ್ಥೆಗಳ ಮಾಲೀಕರಾಗಿದ್ದರು. ತಾಯಿ ಅನಾಮರಿಯ ಒಬ್ಬ ಗೃಹಿಣಿ.ಇವರ ಸಹೋದರಿ ನರಿಯ ಇಸಾಬೆಲ್.ಇವರ ಚಿಕ್ಕಪ್ಪ ಟೋನಿ ನಡಾಲ್ ರವರು ಟೆನ್ನಿಸ್ ಆಟಗಾರನಾಗಿದ್ದು ನಡಾಲ್ ರನ್ನು ಮೂರು ವರ್ಷದವರಾಗಿದ್ದಾಗಲೇ ಟೆನ್ನಿಸ್ ಆಟಕ್ಕೆ ಪರಿಚಯಿಸಿದರು.ನಡಾಲ್ ರವರು ಎಂಟು ವರ್ಷದವರಾಗಿದ್ದಾಗಲೇ ೧೨ವರ್ಷದ ಕೆಳಗಿನವರೆಗೆ ನಡೆಯುವ ಟೆನ್ನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗಿಟ್ಟಿಸಿಕೊಂಡರು.ಈ ರೀತಿಯ ಬೆಳವಣಿಗೆಯನ್ನು ನೋಡಿ ಇವರ ಚಿಕ್ಕಪ್ಪ ನಡಾಲ್ ಅವರು ಆಡುತ್ತಿದ್ದ ಶೈಲಿಯನ್ನು ಗಮನಿಸಿ ಇವರನ್ನು ಎಡಗೈ ಆಟಗಾರನನ್ನಾಗಿ ಮಾಡಿದರು.ಆ ವಯಸ್ಸಿನಲ್ಲಿಯೇ ಎರಡೂ ಕೈಗಳಲ್ಲಿಯೂ ಉತ್ತಮವಾಗಿ ಆಟವಾಡುವ ಚಾತುರ್ಯತೆಯನ್ನು ಹೊಂದಿದ್ದರು.ನಡಾಲ್ ಹನ್ನೆರಡನೇ ವಯಸ್ಸಿನವರಾಗಿದ್ದಾಗ ಸ್ಪಾನಿಷ್ ಹಾಗೂ ಯುರೋಪಿಯನ್ ಟೆನ್ನಿಸ್ ಪ್ರಶತಿಗಳನ್ನು ತಮ್ಮದಾಗಿಸಿಕೊಂಡರು.ಹಾಗೂ ಓದಿಗಿಂತ ಹೆಚ್ಚಗಿ ಟೆನ್ನಿಸ್ ಹಾಗೂ ಪುಟ್ ಬಾಲ್ ಆಟಗಳನ್ನು ಆಡುವುದಕ್ಕಾಗಿ ಸಮಯವನ್ನು ಮೀಸಲಿಸಿತ್ತಿದ್ದರು ಆ ಸಮಯದಲ್ಲಿ ಇವರ ತಂದೆ ಯಾವುದಾದರೂ ಒಂದನ್ನು ಆಯ್ಕೆಮಾಡಲು ಅವಕಾಶ ಕಲ್ಪಿಸಿದರು.ಆದರಿಂದ ನಡಾಲ್ ಅವರು ಟೆನ್ನಿಸ್ ಆಟವನ್ನೇ ಮೈಗೂಡಿಸಿಕೊಂಡರು ಅಲ್ಲಿಗೆ ಅವರು ಪುಟ್ ಬಾಲ್ ಮೇಲಿನ ಆಸಕ್ತಿಯನ್ನು ಕ್ಷೀಣಿಸಿಕೊಂಡರು.ಇವರು ಹದಿನಾಲ್ಕು ವರ್ಷದವರಾಗಿದ್ದಾಗ ಸ್ಪಾನಿಷ್ ಟೆನ್ನಿಸ್ ಸಂಸ್ಥೆಯು ಇವರನ್ನು ಮಲ್ಲೋರ್ಕ ಎಂಬ ಸ್ಥಳವನ್ನುಬಿಟ್ಟು ಬಾರ್ಸಿಲೋನ ಎಂಬ ಸ್ಥಳಕ್ಕೆ ಟೆನ್ನಿಸ್ ತರಬೆತಿ ಪಡೆಯಲು ಹೋಗುವಂತೆ ಕೇಳಿಕೊಂಡರು.ಆದರೆ ಇವರ ಕುಟುಂಬವು ಅವರ ಬೇಡಿಕೆಯನ್ನು ನಿರಾಕರಿಸಿದರು.ಏಕೆಂದರೆ ಇದರಿಂದ ನಡಾಲ್ ಅವರ ವಿದ್ಯಾಭ್ಯಾಸಕ್ಕೆ ಅಡೆತಡೆಯುಂಟಾಗಬಹುದು ಎಂಬ ಭಯವು ಉಂಟಾಗಿತ್ತು.ಹೀಗಾಗಿ ಇವರು ಟೆನ್ನಿಸ್ ಆಟವನ್ನು ಮನೆಯಲ್ಲಿಯೇ ಅಭ್ಯಾಸ ಮಾಡಿಕೊಂಡರು.ಹಾಗೂ ಈ ನಿರಾಕರಣೆಯಿಂದ ಆ ಟೆನ್ನಿಸ್ ಸಂಸ್ಥೆಯು ಹಣಕಾಸಿನ ವಿಷಯದಲ್ಲಿ ಹೇಳಿಕೊಳ್ಳುವಂತಹ ಸಹಾಯವನ್ನು ನಡಾಲ್ ರವರಿಗೆ ಮಾಡಲಿಲ್ಲ.ಪೂರ್ತಿ ಜವಾಬ್ದಾರಿಯು ಅವರ ತಂದೆಯೇ ಅನುಸರಿಸಿಕೊಂಡು ಹೋಗುವಂತಾಯಿತು ಹೀಗಿರುವಾಗಲೇ ನಡಾಲ್ ರವರು ಮೇ ೨೦೦೧ರಲ್ಲಿ ಹಿಂದಿನ ವರ್ಷದ ಗ್ರ್ಯಾಂಡ್ ಸ್ಲಾಂ ಟೂರ್ನಿಯ ಚಾಂಪಿಯನ್ ಆಗಿದ್ದ ಪ್ಯಾಚಿ ತ್ಯಾಷ ಅವರನ್ನು ಸೋಲಿಸಿದರು.ಅವರು ಹದಿನೈದನೇ ವಯಸ್ಸಲ್ಲಿದ್ದಾಗಲೇ ತಮ್ಮ ವೃತ್ತಿಪರ ಜೀವನಕ್ಕೆ ಕಾಲಿಟ್ಟರು.ಹಾಗೂ ೨೦೦೨ರಲ್ಲಿ ಹದಿನಾರನೇ ವಯಸ್ಸಿನವರಾಗಿದ್ದಾಗ ವಿಂಬಲ್ದನ್ ಟೂರ್ನಿಯ ಪುರುಷರ ಸಿಂಗಲ್ಸ್ನಲ್ಲಿ ಸೆಮಿಫೈನಲ್ಸ್ ತಲುಪಿದರು.ಇದು ಇವರ ಪ್ರಥಮ ಜೂನಿಯರ್ ಪಂದ್ಯವಾಗಿತ್ತು.ಇವರು ತಮ್ಮ ಹದಿನೇಳನೇ ವಯಸ್ಸಿನಲ್ಲಿ ಪ್ರಪ್ರಥಮ ಬಾರಿಗೆ ರೋಜರ್ ಫೆಡರರ್ ಅವರನ್ನು ಸೋಲಿಸಿ ವಿಂಬಲ್ದನ್ ಟೂರ್ನಿಯ ಮೂರನೇ ಸುತ್ತನ್ನು ಪ್ರವೇಶಿಸಿದ ಅತ್ಯಂತ ಕಿರಿದಾದ ಆಟಗಾರ ಎಂಬ ಹೆಸರನ್ನು ಗಳಿಸಿದರು.ಹಾಗೂ ಹದಿನೆಂಟನೇ ವಯಸ್ಸಿನಲ್ಲಿ ಐ.ಎಷ್.ಟ್ ಪಂದ್ಯದಲ್ಲಿ ತಮ್ಮ ದೇಶವಾದ ಸ್ಪೇನ್ ನ ಪರವಾಗಿ ಆಡಿ ಅಮೇರಿಕಾದ ವಿರುದ್ಧ ಗೆಲುವನ್ನು ತಂದುಕೊಟ್ಟರು.ತಮ್ಮ ಹತ್ತೊಂಭತ್ತನೇ ವಯಸ್ಸಿನಲ್ಲಿ ಅವರು ಫ್ರೆಂಚ್ ಓಪನ್ ಟೂರ್ನಿಯನ್ನು ಮೊದಲಬಾರಿಗೆ ಆಟವಾಡಿ ಪ್ರಶಸ್ತಿಯನ್ನೇ ತಮ್ಮದಾಗಿಸಿಕೊಂಡರು.ಹಾಗು ಸತತವಾಗಿ ನಾಲ್ಕು ಬಾರಿ "ರೋಲ್ಯಾಂಡ್ ಗ್ಯಾರೋಸ್" ನಲ್ಲಿ ಆಗುವ ಫ್ರಂಚ್ ಓಪನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.೨೦೦೩ನೇ ಇಸವಿಯಲ್ಲಿ ಎ.ಟಿ.ಪಿ ಸಂಸ್ಥೆಯಿಂದ "ನ್ಯೂಕಮ್ಮರ್ ಆಫ್ ದ ಇಯರ್" ಎಂಬ ಪ್ರಶಸ್ತಿಯನ್ನೂ ಸಹ ಪಡೆದುಕೊಂಡರು.ತಮ್ಮ ಅತಿಯಾದ ಕಿರಿ ವಯಸ್ಸಿನಲ್ಲಿಯೇ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಅತ್ಯನ್ನುತವಾದ ಕೀರ್ತಿಯನ್ನು ಪಡೆದುಕೊಂಡರು.

ನಡಾಲ್ ರವರ ಆಟದ ಶೈಲಿ[ಬದಲಾಯಿಸಿ]

ನಡಾಲ್ ಒಬ್ಬ ಆಕ್ರಮಣಕಾರಿ ಆಟಗಾರನೆಂದೇ ಹೆಸರುವಾಸಿಯಾಗಿದ್ದಾರೆ.ಹಾಗೂ ಅವರ ಆಟದಲ್ಲಿ ಬಹಳ ಸಾಂದ್ರತೆಯನ್ನು ಹೊಂದಿದ್ದಾರೆ.ಹಾಗೂ ಅವರ ಚಲನ ವಲನಗಳು ತುಂಬಾ ವೇಗವಾಗಿವೆ.ನಡಾಲ್ ರವರು ಬಹಳ ಚಾತುರ್ಯತೆಹೊಂದಿದ ಮತ್ತು ಅಂಕಣದಲ್ಲಿ ಎದುರಾಳಿಯಿಂದ ರಕ್ಷಣೆ ಮಾಡಿಕೊಳ್ಳುವ ಅತ್ಯದ್ಭುತವಾದ ಆಟಗಾರರಾಗಿದ್ದರೆ.ನಡಾಲ್ ರವರು ಅಂಕಣದಲ್ಲಿ ಓಡಾಡುವಾಗ ಪ್ರದರ್ಶಿಸುವ ಹೊಡೆತಗಳು ತುಂಬಾ ಶಕ್ತಿಯುತವಾಗಿದ್ದು ಇವರ ಆಟದ ಧನಾತ್ಮಕ ಅಂಶವಾಗಿದೆ.೨೦೧೦ ರಷ್ಟರಲ್ಲಿ ಇವರು ತಮ್ಮ ಸರಾಸರಿ ವೇಗವನ್ನು ೩೧೭ ಕಿ.ಮೀ ಅಷ್ಟು ಹೆಚ್ಚಿಸಿಕೊಂಡು ತಮ್ಮದೇ ಆದ ಆಟದ ಶೈಲಿಯನ್ನು ರೂಪಿಸಿಕೊಂಡರು.೨೦೦೫ರವರೆಗೆ ಒಂಭತ್ತು ಸಲ ರೋಲ್ಯಾಂಡ್ ಗಾರೋಸ್ ನಲ್ಲಿ ಹಾಗೂ ಎಂಟು ಬಾರಿ ಮಾಂಟೆಕಾರ್ಲೋ ರಲ್ಲಿ ಹಾಗೂ ಏಳು ಬಾರಿ ರೋಮ್ ನಲ್ಲಿ ಪ್ರಶಸ್ತಿಗಳನ್ನು ಗೆದ್ದರು.ಈ ರೀತಿ ಆಟಗಳನ್ನು ಆಡುತ್ತಲೇ ನಡಾಲ್ ರವರು ಆನೇಕ ರೀತಿಯ ಗಾಯಗಳನ್ನೂ ಸಹ ಮಾಡಿಕೊಂಡು ಚಿಕಿತ್ಸೆಯನ್ನು ಪಡೆದುಕೊಂಡರು.

ಆಸಕ್ತಿಗಳು[ಬದಲಾಯಿಸಿ]

ನಡಲ್ ರವರು ಥೈಲ್ಯಾಂಡ್ ಓಪನ್ ಟೂರ್ನಿಯಲ್ಲಿ ಭಾಗವಹಿಸಲು ಹೋದಾಗ ಅವರು ಥೈಲ್ಯಾಂಡ್ ನಲ್ಲಿ "ಬುಮಿಬಾಲ್" ಎಂಬ ರಾಜನ ನೆರವಿನಲ್ಲಿ "ಐ ಮಿಲಿಯನ್ ಟ್ರೀಸ್ ಪಾರ್ ಕಿಂಗ್" ಎಂಬ ಯೋಜನೆಯನ್ನು ಕೈಗೊಂಡರು.ಹಾಗೂ ಈ ಯೋಜನೆಯ ಪ್ರಕಾರ ಇವರಿಗೆ ಕೈಲಾಗುವಷ್ಟು ಮರಗಳನ್ನು ನೆಡುವುದು.ನಡಾಲ್ ರವರು ಇದರ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿ ಥೈಲ್ಯಾಂಡ್ ನ ರಾಜ ಹಾಗೂ ಜನರ ಬಗ್ಗೆ ಸಿಹಿಯಾದ ಮಾತುಗಳನ್ನಾಡಿದ್ದಾರೆ.

ವೈಯಕ್ತಿಕ ಜೀವನ[ಬದಲಾಯಿಸಿ]

ನಡಾಲ್ ರವರು ಅವರ ಪೋಷಕರು ಹಾಗೂ ಸಹೋದರಿ ಮರಿಯ ಇಸಾಬೆಲ್ ರವರೊಂದಿಗೆ ಐದು ಮಹಡಿಯ ಕಟ್ಟಡವೊಂದರಲ್ಲಿ ನೆಲೆಸಿದ್ದರು.ಆದರೆ ೨೦೦೯ರಲ್ಲಿ ಸ್ಪಾನಿಷ್ ವಾರ್ತಾ ಪತ್ರಿಕೆಯ ಪ್ರಕಾರ ಅವರ ಪೋಷಕರು ಹಾಗೂ ಸಹೋದರಿಯು ಬೇರ್ಪಡೆಯಾದರು ಎಂಬ ವರದಿಯಿದೆ.ಈ ಆಘಾತವು ಅವರ ವೃತ್ತಿ ಜೀವನದಲ್ಲಿ ಸ್ವಲ್ಪಮಟ್ಟದ ಹಿನ್ನಡೆಯನ್ನು ಅನುಭವಿಸಲು ಪ್ರಮುಖವಾದ ಕಾರಣವೆಂದು ಹೇಳಲಾಗಿದೆ.ನಡಾಲ್ ರವರು ತಾವು ಹೇಳಿಕೊಂಡಿರುವ ಹಾಗೆ ಒಬ್ಬ ನಾಸ್ತಿಕ ವ್ಯಕ್ತಿ ಸಿ.ಎನ್.ಎನ್ ಎಂಬ ಒಬ್ಬ ವ್ಯಕ್ತಿಯು ನಡಾಲ್ ರವರ "ಬಾಲ್ಯಜೀವನದ ಪ್ರೇರೇಪಣೆ" ಎಂಬ ಲೇಖನವನ್ನು ಬರೆದಿದ್ದಾರೆ.ಇವರ ಅಸಂಪ್ರದಾಯಿಕ ಶೈಲಿಯಿಂದ ಇವರನ್ನು "ದ ಡ್ಯ್ರಾಗನ್ ಬಾಲ್ ಆಪ್ ಟೆನ್ನಿಸ್" ಎಂದು ಕರೆದಿದ್ದಾರೆ.ಟೆನ್ನಿಸ್ ಹಾಗೂ ಪುಟ್ ಬಾಲ್ ಜೊತೆಗೆ ನಡಾಲ್ ರವರು ಗೋಲ್ಪ್ ಆಟ ಆಡುವುದನ್ನೂ ಆಹ್ಲಾದಿಸುತ್ತಾರೆ.ನಡಾಲ್ ರವರ ಆತ್ಮಚರಿತ್ರೆ "ರಾಫಾ" ಎಂಬುದನ್ನು ಆಗಸ್ಟ್ ೨೦೧೧ರಲ್ಲಿ ಬಿಡುಗಡೆ ಮಾಡಲಾಗಿದೆ.

ಪ್ರಶಸ್ತಿಗಳು[ಬದಲಾಯಿಸಿ]

ಆಸ್ಟ್ರೇಲಿಯನ್ ಓಪನ್[೨೦೦೯], ಫ್ರೆಂಚ ಓಪನ್[೨೦೦೫,೨೦೦೬,೨೦೦೭,೨೦೦೮,೨೦೧೦,೨೦೧೧,೨೦೧೨,೨೦೧೩,೨೦೧೪], ವಿಂಬಲ್ಡನ್[೨೦೦೮,೨೦೧೦], ಯು.ಎಸ್ ಓಪನ್[೨೦೧೦,೨೦೧೩], ಟೂರ್ ಫೈನಲ್ಸ್[೨೦೧೦,೨೦೧೩], ಡೇವಿಸ್ ಕಪ್[೨೦೦೪,೨೦೦೮,೨೦೦೯,೨೦೧೧] ಹೀಗೆ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.೧೮ ಆಗಸ್ಟ್ ೨೦೦೮ರಲ್ಲಿ ವಿಶ್ವದ ನಂ.೧ ಆಟಗಾರನೆಂಬ ಹೆಗ್ಗಳಿಕೆ ಇವರದು.ಆದರೆ ೨೦೧೯ರ ೧೮ನೇ ಏಪ್ರಿಲ್ ನ ಪ್ರಚಲಿತ ಶ್ರೇಣಿಯ ಪ್ರಕಾರ ನಡಾಲ್ ರವರು ೧೪೫ನೇ ಸ್ಥಾನವನ್ನು ಗಳಿಸಿದ್ದಾರೆ.ಈ ರೀತಿ ನಡಾಲ್ ರವರು ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿ ವಿಶ್ವದ ಖ್ಯಾತ ಟೆನ್ನಿಸ್ ಆಟಗಾರರಾಗಿ ಹೊರಚಿಮ್ಮಿದ್ದಾರೆ.[೨]

ಉಲ್ಲೇಖನಗಳು[ಬದಲಾಯಿಸಿ]