ವಿಷಯಕ್ಕೆ ಹೋಗು

ಸದಸ್ಯ:Karthik960/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ಕ್ಷೇತ್ರದ ವಿವರ

[ಬದಲಾಯಿಸಿ]
ಧೇನುಗಿರಿ ಲಕ್ಶ್ಮೀನರಸಿಂಹಸ್ವಾಮಿ ದೇವಾಲಯ
ಚಿಕ್ಕಬಳ್ಳಾಪುರ ಜಿಲ್ಲೆಯ ಅದೇ ತಾಲ್ಲೂಕಿನ ಮಂಡಿಕಲ್ಲು ಹೋಬಳಿ ವ್ಯಾಪ್ತಿಯ ರಕ್ಷಿತಾರಣ್ಯ ಹಾಗೂ ಪುರಾಣ ಪ್ರಸಿದ್ದ ಕ್ಷೇತ್ರವೇ ಈ ಧೇನುಗಿರಿ. ಸಾಮಾನ್ಯವಾಗಿ ಆವಲಕೊಂಡ (ತೆಲುಗು) ಆವಲಬೆಟ್ಟ (ಕನ್ನಡ) ಸಾಮಾನ್ಯವಾಗಿ ಇಲ್ಲಿ ತೆಲುಗು ಭಾಷಿಕರ ಸಂಖ್ಯೆ ಅಧಿಕ. ಆದ್ದರಿಂದ ಆವಲಕೊಂಡ ಎಂಬ ಹೆಸರು ಪ್ರಚುರದಲ್ಲಿದೆ. ಶ್ರೀ ಕ್ಷೇತ್ರದಲ್ಲಿ ಲಕ್ಷ್ಮೀ ನರಸಿಂಹಸ್ವಾಮಿ ಉದ್ಬವ ಮೂರ್ತಿಯಾಗಿ ಅವತರಿಸಿರುವನು. ಅವರೊಂದಿಗೆ ಭೂದೇವಿಯು ಚೆಂಚುಲಕ್ಷ್ಮಿಯಾಗಿ, ಹಾಗೂ ಮಹಾಲಕ್ಷ್ಮಿ ಅಮ್ಮನವರು ಇದೇ ಸ್ಥಳದಲ್ಲಿ ನೆಲೆಸಿದ್ದಾರೆ. ಇಲ್ಲಿ ಪ್ರತಿಯೊಂದು ಪೂಜೆಯು ಸಹ ಆಗಮಶಾಸ್ತ್ರರದ ಪ್ರಕಾರ ನಡೆಯುತ್ತದೆ. ೨೦೦೧ ರಲ್ಲಿ ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಗೆ ಈ ದೇವಾಲಯವನ್ನು ಸೇರಿಸಿಕೊಳ್ಳಲಾಯಿತು.
                                                                                                                                                                                                                                                                                                                                      

ಸ್ಥಳದ ಬಗ್ಗೆ ಪುರಾಣಗಳಲ್ಲಿ ಉಲ್ಲೇಖ

[ಬದಲಾಯಿಸಿ]
[[[ಸಾಗರ ಮಥನ]]ದ ಸಂದರ್ಭದಲ್ಲಿ ಕಾಮಧೇನು ಪ್ರಥಮ ಬಾರಿಗೆ ಇದೇ ಸ್ಥಳದಲ್ಲಿ ಮೊದಲು ತನ್ನ ಪಾದವನ್ನು ಮೊದಲು ಇಲ್ಲೇ ಇರಿಸಿತು ಇದನ್ನು ಕಂಡ ಗ್ರಾಮಸ್ಥರು ಅಂದಿನಿಂದ ಧೇನುಗಿರಿ ಎಂಬ ಹೆಸರಿನಿಂದ ಕರೆದರು ಅದೇ ರೂಢಿಗೆ ಬಂತು. ಈ ಬಗ್ಗೆ "ಶ್ರೀಭಾಗವತ"ದಲ್ಲಿ ಉಲ್ಲೇಖಿಸಲಾಗಿದೆ.  ಆದ್ದರಿಂದಲೇ ಕ್ಷೇತ್ರಕ್ಕೆ 'ದೇನುಗಿರಿ" ಆಂದರೆ 'ಹಸುವಿನಬೆಟ್ಟ' ಎಂಬ ಹೆಸರು ಬಂತು, ಅಲ್ಲದೇ ಹಿರಣ್ಯಕಶ್ಯಪನ ಸಂಹಾರದ ನಂತರ ವಿಷ್ಣು ನಾರಸಿಂಹ ರೂಪದಲ್ಲಿಯೇ ಉಗ್ರಸ್ವರೂಪನಾಗಿ ಭೂಲೋಕದಲ್ಲಿಯೇ ನೆಲೆಸಿದ ಆತನ ಉಗ್ರಸ್ವರೂಪಕ್ಕೆ ಭೂಲೋಕವೇ ನಡುಗುವಂತಾಯಿತು.ಆಗ ಇಂದ್ರಾದಿದೇವತೆಗಳು ಭೂದೇವಿಯನ್ನು ಕುರಿತು ಪ್ರಾರ್ಥಿಸತೊಡಗಿದರು. ಆಗ ಭೂದೇವಿ ಚೆಂಚುಲಕ್ಷ್ಮಿಯೆಂಬ ಆದಿವಾಸಿ ಸುಂದರಿಯಾಗಿ ಅವತರಿಸಿದಳು.ಆಕೆಯನ್ನು ನೋಡಿ ನಾರಸಿಂಹನು ಮೋಹಿತನಾಗಿ ಆಕೆಯನ್ನು ವಿವಾಹವಾಗುತ್ತಾನೆ ,ಇದನ್ನರಿತ ಮೊದಲ ಪತ್ನಿ ಲಕ್ಷ್ಮೀ ಕುಪಿತಗೊಳ್ಳುವಳು,ಆಗ ತಾನು ಮೊದಲೇ ನೆಲೆಸಿದ್ದ ಧೇನುಗಿರಿ ಬೆಟ್ಟದ ಮಧ್ಯಭಾಗದಿಂದ ಬೆಟ್ಟದ ಮೇಲೆ ನೆಲೆಸುವಳು. ಹಾಗೂ ನರಸಿಂಹ ಹಾಗೂ ಚೆಂಚುಲಕ್ಷ್ಮೀ ಅಮ್ಮನವರು ಬೆಟ್ಟ ಮಧ್ಯದ ಗುಹಾಂತರ ದೇವಾಲಯದಲ್ಲಿ  ಉದ್ಭವ ಮೂರ್ತಿಯಾಗಿ ನೆಲೆಸುವರು.

ಇತಿಹಾಸ

[ಬದಲಾಯಿಸಿ]
ಹೀಗಲೂ ಸಹ ಪ್ರಧಾನ ದೇವಾಲಯವಾದ ನಾರಸಿಂಹ ಹಾಗೂ ಚೆಂಚುಲಕ್ಷ್ಮೀ ಅಮ್ಮನವರ ಪೂಜೆ ಹಾಗೂ ಅಭಿಷೇಕದ ನಂತರವೇ ಮಹಾಲಕ್ಷ್ಮೀ ಅಮ್ಮನ ಪೂಜೆ.ಈ ಕ್ಷೇತ್ರವು ಕೇವಲ ಪುರಾಣಗಳಲ್ಲಿ ಮಾತ್ರ ಉಲ್ಲೇಖವಾಗದೇ ಐತಿಹಾಸಿಕವಾಗಿ ಕೂಡ ಇತಿಹಾಸದ ಪುಟಗಳಲ್ಲಿ ಸೇರಿದೆ.ಚಿಕ್ಕಬಳ್ಳಾಪುರ ಪಾಳೇಗಾರರರು ಹಾಗೂ ಆವತಿ ಪಾಳೇಗಾರರ ಆಳ್ವಿಕೆಗೆ ಒಳಪಟ್ಟಿತ್ತೇಂಬುವುದಕ್ಕೆ ಅಲ್ಲಿರುವ ಚಿಕ್ಕ ಮಂಟಪವೇ ಸಾಕ್ಷಿ. ಈ ಬೆಟ್ಟದ ಮೇಲೆ ತಲುಪಲು ರಸ್ತೆ ಹಾಗೂ ಮೆಟ್ಟಿಲು ಮಾರ್ಗಗಳಿವೆ.ಸುಮಾರು ೩೦೦ರಿಂದ ೪೦೦ ಮೆಟ್ಟಿಲುಗಳನ್ನು ಹತ್ತಿದರೆ ಪ್ರಧಾನ ದೇವಾಲಯವನ್ನು ತಲುಪಬಹುದು ಮತ್ತು ಅಲ್ಲಿಂದ ಸುಮಾರು ೧೦೦ ಮೆಟ್ಟಿಲುಗಳನ್ನು ಹತ್ತಿದರೆ ಮಹಾಲಕ್ಷ್ಮೀ] ಅಮ್ಮನವರ ದೇವಾಲಯವನ್ನು ತಲುಪಬಹುದು. ಈ ದೇವಾಲಯದ ಮತ್ತೊಂದು ಆದರ್ಶವಿಧಾನವೆಂದರೆ ಯಾವುದೇ ಜಾತಿ,ಮತ ಲಿಂಗದ ಭೇಧಭಾವವಿಲ್ಲದೇ ಗರ್ಭಗುಡಿ ಪ್ರವೇಶ ಮಾಡಬಹುದು.ಶ್ರಾವಣ ಮಾಸ ವಿಷ್ಣುವಿಗೆ ಪ್ರಿಯವಾದ ಮಾಸವಾದ್ದರಿಂದ ಪ್ರತ್ಯೇಕ ಪೂಜೆ,ಆಭಿಷೇಕ, ತೊಟ್ಟಿಲು ಸೇವೆ ಮೊದಲಾದವುಗಳನ್ನು ನೆರವೇರಿಸಲಾಗುತ್ತದೆ.ಈ ದೇವರನ್ನು  ಹಲವರು ತಮ್ಮ ಮನೆ ದೇವರಾಗಿ ಆರಾಧಿಸುತ್ತಾರೆ. ಅಲ್ಲದೇ ಜಿಲ್ಲೆಯಲ್ಲಿ ಪ್ರಮುಖ ನಾರಸಿಂಹ ಕ್ಷೇತ್ರಗಳಲ್ಲಿ ಎರಡನೇಯದು, ಮೊದಲನೆಯದು ಬಾಗೇಪಲ್ಲಿ ತಾಲ್ಲೂಕಿನ ಮಿಟ್ಟೇಮರಿಯ ಶ್ರೀ ಗರುಢಾದ್ರಿ ನರಸಿಂಹ ದೇವಾಲಯ. ಈ ಪ್ರದೇಶ ಅತ್ಯುನ್ನತವಾದ ಹಾಗೂ ಅಮೋಘವಾದ ವನಸಂಪತ್ತು ಇದೆ.ಸಸ್ಯಗಳ ಬೆಳವಣಿಗೆಗೆ ಈ ಸ್ಥಳ ಅತ್ಯಂತ ಪ್ರಾಸ್ತಸ್ಯವಾದ ಜಾಗವಿದು,ವಿದೇಶಿ ಸಸ್ಯಗಳಾದ ಕಾಫಿಅರೇಬಿಕಾ ಹಾಗೂ ನೀಲಗಿರಿ ಮರಗಳು ಸಹ ಬೆಳೆದಿವೆ.ಇಲ್ಲಿನ ಕಾಡುಗಳು ದಟ್ಟವಾದ ಪೊದೆಗಳಂತೆ ಹಬ್ಬುತ್ತವೆ.ತೇವ  ಅವಶ್ಯಕ ಸಸ್ಯಗಳು ಹಾಗೂ ಪ್ರಾಣಿಗಳ ಬೆಳವಣಿಗೆಗೆ ಈ ಸ್ಥಳ ಪೂರಕವಾಗಿದೆ.ಚಳಿಗಾಳದಲ್ಲಿ ಹಾಗೂ ಮಳೆಗಾಳದಲ್ಲಿ ಕೆಲ ಜಾತ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತವೆ.ಸಂತಾನೋತ್ಪತ್ತಿಯ ನಂತರ ಅವು ಹಿಂದಿರುಗುತ್ತವೆ. ಮತ್ತು ಸಮುದ್ರ ಮಟ್ಟದಿಂದ ಸುಮಾರು ೨೩೪೬ ಅಡಿಗಳ ಎತ್ತರವನ್ನು ಹೊಂದಿದೆ.

ನೈಸರ್ಗಿಕ ಸೊಬಗು

[ಬದಲಾಯಿಸಿ]

ಆವಲಬೆಟ್ಟ ಧಾರ್ಮಿಕ ಕ್ಷೇತ್ರವಾಗಿದ್ದರೂ ಕೂಡ ಇತ್ತೀಚೆಗೆ ಸೆಲ್ಫಿಗಳ ಕ್ರೇಜ್ ನಿಂದ ಇತ್ತೀಚೆಗೆ ಪ್ರವಾಸಿ ಕೇಂದ್ರವಾಗಿ ಮಾರ್ಪಟ್ಟಿದೆ. ಪ್ರಧಾನ ದೇಗುಲದ ಹಿಂದೆಯ ಭಾಗ ಬಂಡೆಯಿಂದ ಕೂಡಿದೆ ಅಲ್ಲದೆ ಅದೇ ದೇವಾಲಯದ ಮತ್ತೊಂದು ಗೋಡೆಯಾಗಿದೆ. ಆಲ್ಲಿಂದ ಎಡಭಾಗಕ್ಕೆ ಬಂದರೆ ಬೆಟ್ಟದ ಹಿಂಭಾಗದಲ್ಲಿ ಪಕ್ಷಿಯಂತೆ ಒಂದು ಕಲ್ಲು ವಿಶಾಲವಾಗಿ ಹೊರಚಾಚಿದೆ.ಅದರ ಮೇಲೆ ನಿಂತು ಸೆಲ್ಫಿಗಳಿಗೆ ಫೋಸ್ ನೀಡುತ್ತಾರೆ. ಸ್ವಾಭಾವಿಕವಾಗಿ ಬಡವರ ಊಟಿಯೆಂದೆ ಹೆಸರಾಗಿರುವ ನಂದಿಬೆಟ್ಟ ಹಾಗೂ ಸ್ಕಂದಗಿರಿಗಳ ಸಾಲಿಗೆ ಸ್ಫರ್ಧೆ ನೀಡುತ್ತಿದೆ.ಅರಣ್ಯಗಳಿಗೆ ಅಂಟಿಕೊಂಡಿರುವ ಪಂಚಗಿರಿಗಳಾದ ಆವಲಬೆಟ್ಟ,ಭೀಮೇಶ್ವರ ಬೆಟ್ಟ, ನರಸಿಂಹಸ್ವಾಮಿ ಬೆಟ್ಟ, ಈಶ್ವರಬೆಟ್ಟ, ದೇವರಬೆಟ್ಟಗಳ ಮೇಲೆ ಬೀಳುವ ಮಳೆ ನೀರಿನಿಂದ ಮಳೆಗಾಲದಲ್ಲಿ ಕುಶಾವತಿ ಹರಿಯುತ್ತಾಳೆ.ಈ ನದಿ ಚಿಕ್ಕಬಳ್ಳಾಪುರದಿಂದ ೧೫ ಕಿಲೋ ಮೀಟರ್ ದೂರದ ಜರಮಡುಗು ಪ್ರದೇಶದಲ್ಲಿ ಸುಮಾರು ೨೫ ಅಡಿಗಳ ಮೇಲಿಂದ ನೀರು ಬಿದ್ದು ನೋಡುಗರಿಗೆ ಮನೋರಂಜನೆಯನ್ನು ನೀಡುತ್ತದೆ.ಧೇನುಗಿರಿ ಪ್ರಸ್ತುತವಾಗಿ ಅಭಿವ್ರುದ್ದಿ ಹೊಂದುತ್ತಿರುವ ಸ್ಥಳವಾಗಿದೆ.ಈ ಕ್ಷೇತ್ರಕ್ಕೆ ಶ್ರಿ ಆಂಜನೇಯ ಸ್ವಾಮಿ ಕ್ಷೇತ್ರ ಪಾಲಕನಾಗಿದ್ದಾನೆ.ಆಲ್ಲದೆ ಇಲ್ಲಿನ ಕಾಡಿನಲ್ಲಿ ಕೋತಿಗಳೆ ಅಧಿಕ ಆದ್ದರಿಂದ ಸಾಯಂಕಾಲ ದೇವಾಲಯದ ಮುಖ್ಯದ್ವಾರಗಳನ್ನು ಮುಚ್ಚಿದ ನಂತರ ಯಾರು ಕೂಡ ದೇವಾಲಯದ ಪ್ರವೇಶ ಮಾಡಲು ಬಿಡುವುದಿಲ್ಲ.ಇವು ಆಂಜನೇಯನ ಪ್ರತಿರೂಪದಂತೆ ಸ್ವಾಮಿಯ ಸೇವೆಗೆ ಕಾವಲು ಕಾಯುತ್ತವೆಂದು ಅನಾದಿ ಕಾಲದಿಂದಲೂ ನಂಬಲಾಗುತ್ತಿದೆ. ದೇವಾಲಯದ ಕಲ್ಯಾಣಿ ಒಂದು ಚಿಕ್ಕ ಬಾವಿಯಂತಿದೆ.ಅದರಲ್ಲಿಯೂ ಕೂಡ ಸದಾಕಾಲಾ ನೀರು ಇರುತ್ತದೆ.ಈ ಭಾಗವು ಬಯಲುಸೀಮೆಗೆ ಸೇರಿದ್ದು ಇಲ್ಲಿನ ಕೆಳ ಭಾಗಗಳಲ್ಲಿ ಮಳೆಗಾಲದಲ್ಲಿಯೂ ಕೆಲವೊಮ್ಮೆ ನೀರು ದೊರೆಯುವುದು ಕಷ್ಟ ಅಂತದರಲ್ಲಿ ಇಲ್ಲಿ ಸದಾಕಾಲ ನೀರು ಇರುವುದು ಅಚ್ಚ್ರಿಯ ಸಂಗತಿ.ಇವೆಲ್ಲಾ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ಮಹಿಮೆ ಎಂದು ಭಕ್ತರು ನಂಬುತ್ತಾರೆ.ಆಂಧ್ರಫ್ರದೇಶದ ಗಡಿ ಇಲ್ಲಿಂದ ಕೇವಲ ೨೫-೩೦ ಕಿಲೋ ಮೀಟರಗಳ ಅಂತರ ಹೊಂದಿದೆ. ಅಲ್ಲದೇ ವಿಜಯನಗರ ಅರಸರ ಶ್ಯೆಕ್ಷಣಿಕ ಕೇಂದ್ರವಾಗಿದ್ದ ಲೇಪಾಕ್ಷಿ ಇಲ್ಲಿಗೆ ಹತ್ತಿರದಲ್ಲಿದೆ,ಕದಿರಿಯ ಖಾದ್ರಿಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯವು ಇಲ್ಲಿಗೆ ಹತ್ತಿರವಾಗಿದ್ದು. ಬೆಂಗಳೂರು ಕೇಂದ್ರವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಗಳು ಕದಿರಿ, ಗೋರಂಟ್ಲ, ಪುಟ್ಟಪರ್ತಿ ಬಾಗೇಪಲ್ಲಿ ಸ್ಥಳಗಳಿಗೆ ಕೆಂಪೇಗೌಡ ಬಸ್ ನಿಲ್ದಾಣದ ಟರ್ಮಿನಲ್ ೩ ರಲ್ಲಿ ಹೊರಡುತ್ತವೆ. ಬಾಗೇಪಲ್ಲಿ ಬಳಿಯ ಸುಂಕಲಮ್ಮ ದೇವಾಲಯ ಮತ್ತೊಂದು ಹೆಸರಾಂತ ದೇವಾಲಯ.

ಇತರೆ ಪ್ರೇಕ್ಷಣಿಯ ಸ್ಥಳಗಳು

[ಬದಲಾಯಿಸಿ]

೧) ಎಲ್ಲೋಡು ಆದಿನಾರಾಯಣ ಸ್ವಾಮಿ ದೇವಾಲಯ ೨) ಗಡಿದಂ ವೆಂಕಟೇಶ್ವರ ಸ್ವಾಮಿ ದೇವಾಲಯ ೩)ನಂದಿಬೆಟ್ಟ೪) ಮುದ್ದೇನಹಳ್ಳಿ ೫)ಗುಡಿಬಂಡೆ ಕೋಟೆ ಮುಂತಾದವುಗಳು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಚಿಕ್ಕಬಳ್ಳಾಪುರ- ಗುಡಿಬಂಡೆ ಮಾರ್ಗದಲ್ಲಿ ಆವಲಬೆಟ್ಟಕ್ಕೆ ಬಸ್ ವ್ಯವಸ್ತೆಯನ್ನು ಕಲ್ಪಿಸಿದೆ.