ಸಂಜೀವ ಮಠಂದೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಂಜೀವ ಮಠಂದೂರು
ಸಂಜೀವ ಮಠಂದೂರು

ಕರ್ನಾಟಕದ ಹಾಲಿ ಶಾಸಕ
ಹಾಲಿ
ಅಧಿಕಾರ ಸ್ವೀಕಾರ 
2018
ಮತಕ್ಷೇತ್ರ ಪುತ್ತೂರು ವಿಧಾನ ಸಭಾ ಕ್ಷೇತ್ರ
ವೈಯಕ್ತಿಕ ಮಾಹಿತಿ
ಜನನ 01.05.1961 - 60 ವರ್ಷ
ದಕ್ಷಿಣ ಕನ್ನಡ, ಕರ್ನಾಟಕ
ರಾಜಕೀಯ ಪಕ್ಷ ಬಿಜೆಪಿ
ಸಂಗಾತಿ(ಗಳು) ಹೇಮಲತಾ(ಪತ್ನಿ)
ಮಕ್ಕಳು ಶ್ರೇಯಾ ಎಂ.ಎಸ್.(ಮಗಳು), ಶಶಾಂಕ್ ಎಂ.ಎಸ್.(ಮಗ)
ವಾಸಸ್ಥಾನ ಪುತ್ತೂರು, ಕರ್ನಾಟಕ
ಧರ್ಮ ಹಿಂದೂ

ಸಂಜೀವ ಮಠಂದೂರು (ಜನನ ೦೧ ಮೇ ೧೯೬೧) ಒಬ್ಬ ಭಾರತೀಯ ರಾಜಕಾರಣಿಯಾಗಿದ್ದಾರೆ.[೧] ಅವರು ಜನವರಿ 2018 ರಿಂದ ಕರ್ನಾಟಕ ರಾಜ್ಯದ ಶಾಸಕರಾಗಿ ಆಯ್ಕೆಯಾದರು. ಅವರು ಕರ್ನಾಟಕ ವಿಧಾನಸಭೆಯಿಂದ ಮೊದಲ ಬಾರಿ ಪುತ್ತೂರಿನಿಂದ ಎಂ.ಎಲ್.ಎ.ಯಾಗಿ ಆಯ್ಕೆಯಾಗಿ ವಿಧಾನ ಸಭೆಯ ಸದಸ್ಯರಾಗಿದ್ದಾರೆ. ಕುಟುಂಬ ಜೀವನ ನಿರ್ವಹಣೆಗಾಗಿ ಕೃಷಿಯನ್ನು ಅವಲಂಭಿಸಿರುವರು.

ಆರಂಭಿಕ ಜೀವನ[ಬದಲಾಯಿಸಿ]

ಸಂಜೀವ ಮಠಂದೂರು ಅವರು ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದಲ್ಲಿ ಜನಿಸಿದರು.

ಕೌಟುಂಬಿಕ ವಿವರ[ಬದಲಾಯಿಸಿ]

  • ದಿನಾಂಕ 01.05.1961ರಲ್ಲಿ ಪುತ್ತೂರ ತಾಲೂಕಿನ ಹಿರೇಬಂಡಾಡಿ ಗ್ರಾಮದ ದಿ| ದೇವು ಗೌಡ ಮತ್ತು ಬಾಲಕ್ಕ ದಂಪತಿಯರಿಗೆ ಜನಿಸಿದರು.
  • ಪತ್ನಿ-ಹೇಮಾವತಿ, ಮಗಳು – ಶ್ರೇಯಾ ಎಂ.ಎಸ್. ಗೌತಮ್(ದಂತ ವೈದ್ಯ ಪದವಿ), ಮಗ-ಶಶಾಂಕ್ ಎಂ.ಎಸ್.(ಇಂಜಿನಿಯರಿಂಗ್ ಪದವಿ)[೨]

ಶೈಕ್ಷಣಿಕ ವಿವರ[ಬದಲಾಯಿಸಿ]

ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಬಂಡಾಡಿಯಲ್ಲಿ ಮಾಡಿದರು. ಪ್ರಾಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಉಪ್ಪಿನಂಗಡಿ ಸರಕಾರಿ ಕಾಲೇಜಿನಲ್ಲಿ ಪಡೆದರು. ಬಿ.ಕಾಂ. ಪದವಿ ಶಿಕ್ಷಣವನ್ನು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲದಲ್ಲಿ ಪೂರೈಸಿದರು.

ಕ್ಷೇತ್ರ[ಬದಲಾಯಿಸಿ]

ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಸಂಜೀವ ಮಠಂದೂರು ಅವರು 2018 ರಿಂದ ಮೊದಲ ಬಾರಿ ಬಿಜೆಪಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.[೩]

ರಾಜಕೀಯ ಪ್ರವೇಶ[ಬದಲಾಯಿಸಿ]

  1. ಪದವಿ ವಿದ್ಯಾರ್ಥಿಯಾಗಿರುವಾಗ ಆರ್. ಎಸ್. ಎಸ್. ಸ್ವಯಂ ಸೇವಕರಾಗಿ ಸಂಘ ಪರಿವಾರದ ವಿವಿಧ ವಿಭಾಗಗಳಲ್ಲಿ ದುಡಿದು ನಾಯಕತ್ವವನ್ನು ಮೈಗೂಡಿಸಿಕೊಂಡರು.
  2. ಹಿರೇಬಂಡಾಡಿ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾದರು.
  3. ಪುತ್ತೂರು ತಾಲೂಕು ಪಂಚಾಯತ ಸದಸ್ಯರಾಗಿ ಆಯ್ಕೆ.
  4. 2018ರಲ್ಲಿ 206ನೇ ವಿಧಾನ ಸಭಾ ಕ್ಷೇತ್ರವಾದ ಪುತ್ತೂರಿನಲ್ಲಿ ಬಿಜೆಪಿ ಎಂ.ಎಲ್.ಎ. ಆಗಿ ಆಯ್ಕೆಯಾದರು. [೪]

ಸಾಮಾಜಿಕ ಕ್ಷೇತ್ರದ ಸೇವೆ[ಬದಲಾಯಿಸಿ]

  1. ಹಿರೇಬಂಡಾಡಿ ಹಾಲುತ್ಪಾದಕರ ಸಂಘದ ಸ್ಥಾಪಕ ಅಧ್ಯಕ್ಷರು
  2. ಉಪ್ಪಿನಂಗಡಿ ಸೇವಾ ಸಹಕಾರಿ ಬ್ಯಾಂಕು, ದ.ಕ.ಜಿಲ್ಲಾ ಕೃಷಿಕರ ಮಾರಾಟ ಸಂಘ ಮಂಗಳೂರು, ಜನತಾ ಬಜಾರ್‌ ಮಂಗಳೂರು, ಕೃಷಿಕರ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
  3. ಪುತ್ತೂರು ಎ.ಪಿ.ಎಂ.ಸಿ. ಸದಸ್ಯರಾಗಿ ಸೇವೆ.

ಶೈಕ್ಷಣಿಕ ಕ್ಷೇತ್ರದ ಸೇವೆ[ಬದಲಾಯಿಸಿ]

  1. ಸ.ಹಿ.ಪ್ರಾ. ಶಾಲೆ ಹಿರೇಬಂಡಾಡಿಯ ಎಸ್.ಡಿ. ಎಂ.ಸಿ. ಅಧ್ಯಕ್ಷರಾಗಿ, ಶಾಲೆಯ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸೇವೆ.
  2. ಪರಿಯಡ್ಕದ ನವೋದಯ ವಿದ್ಯಾವರ್ಧಕ ಸಂಘದ ಕಾಯದರ್ಶಿ ಮತ್ತು ಅ‍ಧ್ಯಕ್ಷರಾಗಿ ಹಾಗೂ ನವೋದಯ ಪ್ರೌಢಶಾಲೆಯ ಸಂಚಾಲಕರಾಗಿ ಸೇವೆ.
  3. ಉಪ್ಪಿನಂಗಡಿ ಪಿ.ಯು. ಕಾಲೇಜಿನ ಎ.ಡಿ.ಎಂ.ಸಿ. ಸದಸ್ಯರಾಗಿ ಮತ್ತು ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಸೇವೆ.

ಉಲ್ಲೇಖಗಳು[ಬದಲಾಯಿಸಿ]

  1. https://web.archive.org/web/20130127201450/https://eci.gov.in/eci_main/StatisticalReports/SE_1951/STATISTICALREPORTS_51_MADRAS.pdf
  2. https://myneta.info/karnataka2018/candidate.php?candidate_id=6651
  3. https://elections.traceall.in/vidhan-sabha-assembly-election-results/Puttur-in-Karnataka
  4. https://dk.nic.in/ಜನ-ಪ್ರತಿನಿಧಿಗಳು/

ಬಾಹ್ಯ ಕೊಂಡಿಗಳು[ಬದಲಾಯಿಸಿ]