ಸಂಚಾರಿ ವಿಜಯ್

ವಿಕಿಪೀಡಿಯ ಇಂದ
Jump to navigation Jump to search
ಸಂಚಾರಿ ವಿಜಯ್
Sanchari-Vijay 01.jpg
ಸಂಚಾರಿ ವಿಜಯ್
ಜನ್ಮನಾಮ
ವಿಜಯ್

ಜುಲೈ೧೭, ೧೯೮೩
ರಾಷ್ಟ್ರೀಯತೆಭಾರತೀಯ
ವೃತ್ತಿನಟ, ಬರಹಗಾರ
ಸಕ್ರಿಯ ವರ್ಷಗಳು೨೦೦೭–ಇಂದಿನವರೆಗೆ

ಸಂಚಾರಿ ವಿಜಯ್ ಹೆಸರಿನಿಂದ ಪರಿಚಿತರಾಗಿರುವ ಬಿ. ವಿಜಯ್ ಕುಮಾರ್ ಒಬ್ಬ ಚಲನಚಿತ್ರ ಮತ್ತು ನಾಟಕ ನಟ. ಸಂಚಾರಿ ಹೆಸರಿನ ನಾಟಕ ತಂಡದಲ್ಲಿ ಇವರು ಒಬ್ಬರಾಗಿರುವುದರಿಂದ ಇವರಿಗೆ ಸಂಚಾರಿ ವಿಜಯ್ ಎಂಬ ಹೆಸರು ಬಂತು. ೨೦೧೪ರ ಸಾಲಿನ ೬೨ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ[೨],[೩].

ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸುತ್ತಿರುವುದು

ಆರಂಭಿಕ ಜೀವನ ಮತ್ತು ಶಿಕ್ಷಣ[ಬದಲಾಯಿಸಿ]

ಇವರು ಹುಟ್ಟಿದ್ದು ಜುಲೈ ೧೭, ೧೯೮೩ರಲ್ಲಿ ಚಿಕ್ಕಮಗಳೂರು ಜಿಲ್ಲೆಯ, ಕಡೂರು ತಾಲ್ಲೂಕಿನ, ಸಿಂಗಟಗೆರೆ ಹೋಬಳಿಯ, ರಂಗಾಪುರ ಗ್ರಾಮದಲ್ಲಿ. ಇವರದ್ದು ಕಲೆಯ ಹಿನ್ನೆಲೆಯ ಕುಟುಂಬವಾಗಿದ್ದು, ತಂದೆ ಬಸವರಾಜಯ್ಯನವರು ಚಿತ್ರಕಲಾವಿದರು, ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು. ತಾಯಿ ಗೌರಮ್ಮನವರು ಜಾನಪದ ಕಲಾವಿದರಾಗಿದ್ದು, ಭದ್ರಾವತಿರೇಡಿಯೋದಲ್ಲಿ ಅನೇಕ ಕಾರ್ಯಕ್ರಗಳನ್ನು ನೀಡಿದ್ದರು. ಇಂತಹ ಕುಟುಂಬದಲ್ಲಿ ಜನಿಸಿದ ಇವರು, ಬಾಲ್ಯದಿಂದಲೇ ರಂಗಭೂಮಿ ಹಾಗೂ ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪ್ರತಿಷ್ಠಿತ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪೂರೈಸಿದ್ದಾರೆ.

ನಟನಾ ವೃತ್ತಿ[ಬದಲಾಯಿಸಿ]

ಕೆಲಕಾಲ ಕೆಐಇಟಿ ಶಿಕ್ಷಣ ಸಂಸ್ಥೆಯಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು, ತಮ್ಮ ತಮ್ಮ ಕನಸನ್ನು ಈಡೇರಿಸಿಕೊಳ್ಳಲು ತಮ್ಮ ಕೆಲಸಕ್ಕೆ ವಿದಾಯ ಹೇಳಿ ಪೂರ್ಣಪ್ರಮಾಣವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ಹತ್ತು ವರ್ಷಗಳಿಂದ ಸಂಚಾರಿ ಥಿಯೇಟರ್‍ನ ರಂಗತಂಡದ ಹಲಾವಾರು ನಾಟಕಗಳಲ್ಲಿ ಅಭಿನಯಿಸುವುದರ ಜೊತೆಗೆ ಕನ್ನಡದ ಹಲವಾರು ರಂಗತಂಡಗಳಲ್ಲಿ ನಟಿಸಿದ್ದಾರೆ. ರಂಗಭೂಮಿಯಲ್ಲಿ ನಟನೆ ಮಾತ್ರವಲ್ಲದೇ, ಎರಡು ನಾಟಕಗಳನ್ನು ನಿರ್ದೇಶಿಸಿದ್ದಾರೆ.

ಸಂಗೀತ ಕ್ಷೇತ್ರ[ಬದಲಾಯಿಸಿ]

ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನೂ ಅಭ್ಯಸಿಸಿರುವ ಇವರು, ಹಲವಾರು ನಾಟಕಗಳಲ್ಲಿ ಹಾಡಿದ್ದು, ರಿಯಾಲಿಟಿ ಶೋಗಳಲ್ಲಿಯೂ ಸಹ ಭಾಗವಹಿಸಿದ್ದಾರೆ.

ನಟನಾಗಿ[ಬದಲಾಯಿಸಿ]

ಒಬ್ಬ ಭಾರತೀಯ ರಂಗಭೂಮಿ ಮತ್ತು ಸಿನೆಮಾ ಕಲಾವಿದರಾಗಿದ್ದು ಪ್ರಮುಖವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ, ಜೊತೆಗೆ ತಮಿಳು, ತೆಲುಗು ಮತ್ತು ಹಿಂದಿ ಸಿನೆಮದಲ್ಲಿಯೂ ಕೆಲಸ ಮಾಡಿದ್ದಾರೆ.[೪]

೬೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ, ಇವರಿಗೆ ಕನ್ನಡದ ನಾನು ಅವನಲ್ಲ...ಅವಳು ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದ್ದು, ಈ ಚಿತ್ರದಲ್ಲಿ ತೃತೀಯ ಲಿಂಗಿಯ ಪಾತ್ರ ನಿರ್ವಹಿಸಿದ್ದಾರೆ.[೫][೬][೭] ಇದೇ ಪಟ್ಟಿಯಲ್ಲಿ, ಮುಖ್ಯ ಪಾತ್ರ ನಿರ್ವಹಿಸಿದ್ದ ಮತ್ತೊಂದು ಸಿನೆಮಾ ಹರಿವು, ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಪಡೆಯಿತು.

ರಂಗಭೂಮಿ[ಬದಲಾಯಿಸಿ]

ನಟನೆ[ಬದಲಾಯಿಸಿ]

 1. ಸಾವು ಧ್ಯೇಯಕ್ಕಿಲ್ಲ
 2. ಸಾಂಬಶಿವ ಪ್ರಹಸನ
 3. ಸ್ಮಶಾನ ಕುರುಕ್ಷೇತ್ರ
 4. ಸಾವಿರದವಳು
 5. ಪ್ಲಾಸ್ಟಿಕ್ ಭೂತ
 6. ಶೂದ್ರ ತಪಸ್ವಿ
 7. ಸತ್ಯಾಗ್ರಹ
 8. ಸಂತೆಯೊಳಗೊಂದು ಮನೆಯ ಮಾಡಿ
 9. ಮಾರ್ಗೊಸ ಮಹಲ್
 10. ಮಹಾಕಾಲ
 11. ಅರಹಂತ
 12. ಕಮಲಮಣಿ ಕಾಮಿಡಿ ಕಲ್ಯಾಣ
 13. ನರಿಗಳಿಗೇಕೆ ಕೋಡಿಲ್ಲ
 14. ವ್ಯಾನಿಟಿ ಬ್ಯಾಗ್
 15. ಪಿನಾಕಿಯೋ
 16. ಹೀಗೆರೆಡು ಕಥೆಗಳು
 17. ಹಳ್ಳಿಯೂರ ಹಮ್ಮೀರ
 18. ಶ್ರೀದೇವಿ ಮಹಾತ್ಮೆ

ನಿರ್ದೇಶನ[ಬದಲಾಯಿಸಿ]

 1. ಪಿನಾಕಿಯೋ
 2. ಮಿಸ್ ಅಂಡರ್‌ಸ್ಟ್ಯಾಂಡಿಂಗ್

ಕಿರುತೆರೆ[ಬದಲಾಯಿಸಿ]

 1. ನಗುನಗುತಾ ನಲಿ
 2. ಹೊಸ ಬಾಳಿಗೆ ನೀ ಜೊತೆಯಾದೆ
 3. ಪಂಚರಂಗಿ ಪೋಂ..ಪೋಂ
 4. ಪಾಂಡುರಂಗ ವಿಠಲ
 5. ಪಾರ್ವತಿ ಪರಮೇಶ್ವರ
 6. ಅನಾವರಣ

ಕಿರುಚಿತ್ರ[ಬದಲಾಯಿಸಿ]

 1. ರೌರವ
 2. ಟಿಕೆಟ್
 3. ಮರ್ಡರ್
 4. ಕವಲೊಡೆದ ದಾರಿ
 5. ಅಹಂ ಬ್ರಹ್ಮಾಸ್ಮಿ
 6. ಅಜ್ಜಿ ಕಥೆ

ಹಿರಿತೆರೆ[ಬದಲಾಯಿಸಿ]

ಪೋಷಕ ಪಾತ್ರ[ಬದಲಾಯಿಸಿ]

 1. ರಂಗಪ್ಪ ಹೋಗ್ಬಿಟ್ನಾ
 2. ರಾಮರಾಮ ರಘುರಾಮ
 3. ವಿಲನ್
 4. ದಾಸ್ವಾಳ
 5. ಒಗ್ಗರಣೆ
 6. ಹೋಂ ಸ್ಟೇ
 7. ಸಿನೆಮಾ ಮೈ ಡಾರ್ಲಿಂಗ್
 8. ಮಾರಿಕೊಂಡವರು
 9. ಸಿಪಾಯಿ
 10. ಶುದ್ಧಿ
 11. ಗೋದಿ ಬಣ್ಣ ಸಾಧಾರಣ ಮೈಕಟ್ಟು
 12. ಭಲೇ ಜೋಡಿ
 13. ಕಿಲ್ಲಿಂಗ್ ವೀರಪ್ಪನ್
 14. ಅಲ್ಲಮ
 15. ವೈಟ್ ಹಾರ್ಸ್

ಸಿನೆಮಾ ಬದುಕು[ಬದಲಾಯಿಸಿ]

ಕೀ
Films that have not yet been released ಇನ್ನೂ ಬಿಡುಗಡೆಗೊಂಡಿರದ ಚಿತ್ರಗಳನ್ನು ಸೂಚಿಸುತ್ತದೆ
ವರ್ಷ ಸಿನೆಮಾ ಭಾಷೆ ಪಾತ್ರ ಟಿಪ್ಪಣಿಗಳು
೨೦೧೧ ರಂಗಪ್ಪ ಹೋಗ್ಬಿಟ್ನ ಕನ್ನಡ
೨೦೧೩ ದಾಸವಾಳ ಕನ್ನಡ
೨೦೧೪ ಹರಿವು ಕನ್ನಡ ರೈತ
೨೦೧೪ ಒಗ್ಗರಣೆ ಕನ್ನಡ ಬ್ಯೂಟಿ ಸಲೂನ್ ಸೇವಕ
೨೦೧೪ ವುನ್ ಸಮಯಲ್ ಅರಯಿಲ್  ತಮಿಳು ಬ್ಯೂಟಿ ಸಲೂನ್ ಸೇವಕ
೨೦೧೪ ಉಲವಚಾರು ಬಿರಿಯಾನಿ ತೆಲುಗು ಬ್ಯೂಟಿ ಸಲೂನ್ ಸೇವಕ
೨೦೧೫ ನಾನು ಅವನಲ್ಲ...ಅವಳು ಕನ್ನಡ ತೃತೀಯ ಲಿಂಗಿ ಅತ್ಯುತ್ತಮ ನಟ ರಾಷ್ಟ್ರೀಯ ಸಿನೆಮಾ ಪ್ರಶಸ್ತಿ[೮]
ವರ್ತಮಾನ ಕನ್ನಡ
ರಿಕ್ತ ಕನ್ನಡ
ಆರ್ಯ ಮೌರ್ಯ ಕನ್ನಡ
ಕೃಷ್ಣ ತುಳಸಿ ಕನ್ನಡ
ಪಿರಂಗಿಪುರ ಕನ್ನಡ
ಪಾದರಸ ಕನ್ನಡ
ಹತ್ಯಾರ ಕನ್ನಡ

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. "Meet the first Kannada actor to win a National Award". rediff.com. Italic or bold markup not allowed in: |publisher= (help)
 2. http://kannada.filmibeat.com/news/national-award-winner-sanchari-vijay-in-demand-018176.html
 3. "Kannada Hero Vijay Beats Stalwarts to Win National Award". The New Indian Express. Italic or bold markup not allowed in: |publisher= (help)
 4. Kumar G. S. "Portraying transgender's life made me learn a lot: 'Sanchari' Vijay". The Times of India. Italic or bold markup not allowed in: |publisher= (help)
 5. "Vijay bags National Award for Best Actor". timesofindia. 2015-03-24.
 6. "Sanchari Vijay Actor–Profile-Biography and Interesting Facts". cinetrooth.
 7. "Vijay elated on winning best actor award". deccanherald.
 8. http://www.kannadaprabha.com/cinema/news/kannada-film-harivu-wins-national-award-sanchari-vijay-best-actor/248544.html