ಹರಿವು (ಸಿನೆಮಾ)
ಗೋಚರ
ಹರಿವು | |
---|---|
ಚಿತ್ರ:Movie Poster of Harivu.jpg | |
ನಿರ್ದೇಶನ | ಮಂಸೋರೆ (ಮಂಜುನಾಥ ಸೋಮಕೇಶವ ರೆಡ್ಡಿ/ ಎಸ್. ಮಂಜುನಾಥ) |
ನಿರ್ಮಾಪಕ | ಅವಿನಾಶ್ ಯು. ಶೆಟ್ಟಿ |
ಲೇಖಕ | ಮಂಸೋರೆ (ಮಂಜುನಾಥ ಸೋಮಕೇಶವ ರೆಡ್ಡಿ/ ಎಸ್. ಮಂಜುನಾಥ) |
ಚಿತ್ರಕಥೆ | ಅನಿಲ್ ಕುಮಾರ್ ಎಚ್.ಎ |
ಪಾತ್ರವರ್ಗ | ಸಂಚಾರಿ ವಿಜಯ್, ಶ್ವೇತಾ ದೇಸಾಯಿ, ಅರವಿಂದ ಕುಪ್ಲಿಕರ್, ಮಧು ಶ್ರೀ, ಮಾಸ್ಟರ್ ಶೋಹಿಬ್, ಎಂ. ಸಿ ಆನಂದ್, ಚೇತನ್, ಶೇಶನ್ ಎಂ. ಪಿ |
ಸಂಗೀತ | ಚರಣ್ ರಾಜ್ |
ಛಾಯಾಗ್ರಹಣ | ಆನಂದ್ ಸುಂದರೇಶ |
ಸಂಕಲನ | ಅವಿನಾಶ್ ಯು. ಶೆಟ್ಟಿ |
ಸ್ಟುಡಿಯೋ | ಓಂ ಸ್ಟುಡಿಯೋ |
ಅವಧಿ | ೧ಘಂಟೆ ೫೨ ನಿಮಿಷ ೪೪ ಸೆಂಕೆಂಡುಗಳು |
ದೇಶ | ಭಾರತ |
ಭಾಷೆ | ಕನ್ನಡ |
ಹರಿವು ಮಂಸೋರೆ (ಮಂಜುನಾಥ್ ಎಸ್.) ಬರೆದು ನಿರ್ದೇಶಿಸಿದ ಮೊದಲ ಚಿತ್ರ.[೧] [೨] ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಡಾ. ಆಶಾ ಬೆನಕಪ್ಪ [೩][೪] ಅವರ ಅಂತಃಕರಣ ಅಂಕಣದಲ್ಲಿನ ನೈಜ ಘಟನೆಯೊಂದನ್ನು ಮತ್ತು ಮನುಷ್ಯ ಸಂಬಂಧಗಳು ಕಾಲದ ಹರಿವಿನಲ್ಲಿ ಹೇಗೆ ವಿಕ್ಷಿಪ್ತಗೊಳ್ಳುತ್ತವೆ ಎಂಬುದನ್ನು ಎರಡು ಕಥನಗಳ ಮೂಲಕ ಹೇಳುವ ಪ್ರಯತ್ನ ಈ ಚಿತ್ರದಲ್ಲಿದೆ. [೫] [೬]
ಕಥಾ ಹಂದರ
[ಬದಲಾಯಿಸಿ]ಹೃದಯದ ಸಮಸ್ಯೆಯಿಂದ ಬಳಲುತ್ತಿರುವ ಮಗನಿಗೆ ಚಿಕಿತ್ಸೆ ಕೊಡಿಸಲು ಜೀವನೋಪಾಯಕ್ಕೆ ಇದ್ದ ಹೊಲವನ್ನೇ ಮಾರಿ ನಗರಕ್ಕೆ ಬರುವ ಬಡ ರೈತ, ಆತನನ್ನು ಉಳಿಸಿಕೊಳ್ಳಲು ಹೆಣಗಾಡುವ ಪರಿ ಒಂದೆಡೆಯಾದರೆ, ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ತಂದೆಯನ್ನು ನಿರ್ಲಕ್ಷಿಸಿ ತನ್ನ ವೃತ್ತಿಗೇ ಆದ್ಯತೆ ನೀಡುವ ಪತ್ರಕರ್ತ ಇನ್ನೊಂದೆಡೆ. ಈ ಎರಡೂ ವಿಭಿನ್ನ ಮನಸ್ಥಿತಿಗಳು ಸಂಧಿಸುವ ಸನ್ನಿವೇಶದಲ್ಲಿ ದುರಂತವಿದ್ದರೂ, ಬದಲಾಗುವ ದೃಷ್ಟಿಕೋನದ ಸಕಾರಾತ್ಮಕ ಚಿತ್ರಣವೂ ಇದೆ.
ಪಾತ್ರ ವರ್ಗ
[ಬದಲಾಯಿಸಿ]- ಸಂಚಾರಿ ವಿಜಯ್
- ಶ್ವೇತಾ ದೇಸಾಯಿ
- ಅರವಿಂದ ಕುಪ್ಲಿಕರ್
- ಮಧು ಶ್ರೀ
- ಮಾಸ್ಟರ್ ಶೋಹಿಬ್
- ಎಂ. ಸಿ ಆನಂದ್
- ಚೇತನ್
- ಶೇಶನ್ ಎಂ. ಪಿ
ಪ್ರಮುಖ ಪ್ರದರ್ಶನಗಳು
[ಬದಲಾಯಿಸಿ]- ೭ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ, ೨೦೧೪.[೫] It was also selected in the Kannada Competition category.
- ದೆಹಲಿ ಅಂತರರಾಷ್ಟ್ರೀಯ ಸಿನಿಮೋತ್ಸವ, ೨೦೧೪ [೭]
ಪ್ರಶಸ್ತಿಗಳು
[ಬದಲಾಯಿಸಿ]- ೨೦೧೪ನೇ ಸಾಲಿನ ೬೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯಲ್ಲಿ, ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ. [೮]
- ೨೦೧೪ನೇ ಸಾಲಿನ ಅತ್ಯುತ್ತಮ ನಿರ್ಮಾಣ ಮತ್ತು ನಿರ್ದೇಶನ ವರ್ಗದಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. [೯]
ಉಲ್ಲೇಖಗಳು
[ಬದಲಾಯಿಸಿ]- ↑ [೧], ಹರಿವು ಅತ್ಯುತ್ತಮ ಪ್ರಾದೇಶಿಕ ಚಿತ್ರ
- ↑ "Meaningful frames". The Hindu. Retrieved 7 December 2014.
- ↑ "ಬಡವರಿಗೆ ಬದುಕು ತುಟ್ಟಿ; ಸಾವು ಇನ್ನೂ ತುಟ್ಟಿ! - ಡಾ. ಆಶಾ ಬೆನಕಪ್ಪ". Prajavani. 15 May 2011. Retrieved 25 March 2015.
- ↑ "For the poor, death is as miserable as living, by Dr. Asha Benakappa". Deccan Herald. 30 April 2011. Retrieved 25 March 2015.
- ↑ ೫.೦ ೫.೧ "The Passage Through Human Mortality". Archived from the original on 23 ಡಿಸೆಂಬರ್ 2014. Retrieved 9 December 2014.
- ↑ "I am not that Bad - Dr Asha Benakappa". Retrieved 24 March 2015.
- ↑ "International filmmakers to judge Kannada movies". Times of India. Retrieved 7 December 2014.
- ↑ "62nd National Film Awards 2014" (PDF). DFF.nic.in. Archived from the original (PDF) on 2015-04-02. Retrieved 25 ಮಾರ್ಚ್ 2015.
- ↑ "After national honour, 'Harivu' bags top State film award". ಡೆಕ್ಕನ್ ಹೆರಾಲ್ಡ್. Retrieved 13 ಫೆಬ್ರುವರಿ 2016.
- ↑ "Sanchari Vijay Bags State Best Actor Award & Harivu was picked as the first Best Film". New Indian Express. Archived from the original on 2016-02-14. Retrieved 13 ಫೆಬ್ರುವರಿ 2016.