ನಾತಿಚರಾಮಿ (ಚಲನಚಿತ್ರ)
ನಾತಿಚರಾಮಿ | |
---|---|
Directed by | ಮಂಸೋರೆ |
Screenplay by | ಮಂಸೋರೆ |
Story by | ಸಂಧ್ಯಾ ರಾಣಿ |
Produced by | ಎಂ ರಮೇಶ್ |
Starring | ಶೃತಿ ಹರಿಹರನ್ ಸಂಚಾರಿ ವಿಜಯ್ ಶರಣ್ಯ ಪೂರ್ಣಚಂದ್ರ ಮೈಸೂರು ಬಾಲಾಜಿ ಮನೋಹರ್ ಗೋಪಾಲ್ ದೇಶಪಾಂಡೆ |
Cinematography | ಗುರುಪ್ರಸಾದ್ ನಾರ್ನಾಡ್ |
Edited by | ನಾಗೇಂದ್ರ ಕೆ ಉಜ್ಜಾನಿ |
Music by | ಬಿಂದುಮಾಲಿನಿ |
Production company | ತೇಜಸ್ವಿನಿ ಎಂಟರ್‌ಪ್ರೈಸಸ್ |
Release date | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
Country | ಭಾರತ |
Language | ಕನ್ನಡ |
ನಾತಿಚರಾಮಿ ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ. ಇದನ್ನು ಸಂಧ್ಯಾ ರಾಣಿ ಬರೆದಿದ್ದಾರೆ,[೧][೨][೩][೪] ಮಂಸೋರೆ ನಿರ್ದೇಶಿಸಿದ್ದಾರೆ[೫] ಮತ್ತು ತೇಜಸ್ವಿನಿ ಎಂಟರ್‌ಪ್ರೈಸಸ್ ಲಾಂಛನದಡಿ ಎಂ. ರಮೇಶ್ ನಿರ್ಮಿಸಿದ್ದಾರೆ.[೬][೭][೮] ಇತರ ನಿರ್ಮಾಪಕರೆಂದರೆ ಜಗನ್‍ಮೋಹನ್ ರೆಡ್ಡಿ ಮತ್ತು ಶಿವಕುಮಾರ್ ರೆಡ್ಡಿ. ಚಿತ್ರದ ಸಂಗೀತವನ್ನು ಬಿಂದುಮಾಲಿನಿ ಸಂಯೋಜಿಸಿದ್ದಾರೆ.[೯][೧೦][೧೧] ಮುಖ್ಯ ಪಾತ್ರಗಳಲ್ಲಿ ಶೃತಿ ಹರಿಹರನ್[೧೨] ಹಾಗೂ ಸಂಚಾರಿ ವಿಜಯ್ ನಟಿಸಿದ್ದಾರೆ ಮತ್ತು ಶರಣ್ಯ,[೧೩] ಪೂರ್ಣಚಂದ್ರ ಮೈಸೂರು ಹಾಗೂ ಗೋಪಾಲ್ ದೇಶಪಾಂಡೆ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.[೧೪] ಧ್ವನಿ ವಿನ್ಯಾಸವನ್ನು ಮಹಾವೀರ್ ಸಬ್ಬಣವರ್ ಮಾಡಿದ್ದಾರೆ ಹಾಗೂ ಛಾಯಾಗ್ರಹಣವನ್ನು ಗುರುಪ್ರಸಾದ್ ನಾರ್ನಾಡ್ ಮಾಡಿದ್ದಾರೆ. ಚಿತ್ರಕ್ಕಾಗಿ ಮಾನಸಾ ಮುಸ್ತಫ಼ಾ ವಸ್ತ್ರವಿನ್ಯಾಸ ಮಾಡಿದ್ದಾರೆ.
ಈ ಚಲನಚಿತ್ರವು ೨೦ನೇ ಜಿಯೊ ಮಾಮಿ ಮುಂಬಯಿ ಚಲನಚಿತ್ರೋತ್ಸವದಲ್ಲಿ ಆಕ್ಸ್‌ಫ಼್ಯಾಮ್ ಲಿಂಗ ಸಮಾನತೆ ಮೇಲಿನ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿತ್ತು.[೧೫][೧೬][೧೭]
೨೦೧೯ರ ೬೬ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ನಾತಿಚರಾಮಿ ಐದು ಪ್ರಶಸ್ತಿಗಳನ್ನು ಗೆದ್ದಿತು. ಮಾಯಾವಿ ಮನವೇ ಹಾಡಿಗಾಗಿ ಬಿಂದುಮಾಲಿನಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ರಾಷ್ಟ್ರಪ್ರಶಸ್ತಿ, ಮಂಜುನಾಥ್ ಎಸ್‌ಗೆ ಇದೇ ಹಾಡಿಗಾಗಿ ಅತ್ಯುತ್ತಮ ಗೀತಕಾರ ರಾಷ್ಟ್ರಪ್ರಶಸ್ತಿ ಮತ್ತು ನಾಗೇಂದ್ರ ಕೆ ಉಜ್ಜಾನಿಗೆ ಅತ್ಯುತ್ತಮ ಸಂಕಲನದ ರಾಷ್ಟ್ರಪ್ರಶಸ್ತಿ. ಈ ಚಲನಚಿತ್ರವು ವರ್ಷದ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಯನ್ನು ಕೂಡ ಗೆದ್ದಿತು. ತಮ್ಮ ಅಭಿನಯಕ್ಕಾಗಿ ಶೃತಿ ಹರಿಹರನ್ ವಿಶೇಷ ಉಲ್ಲೇಖ ತೀರ್ಪುಗಾರರ ಪ್ರಶಸ್ತಿಯನ್ನು ಪಡೆದರು.
ಕಥಾವಸ್ತು
[ಬದಲಾಯಿಸಿ]ನಾತಿಚರಾಮಿ ಗೌರಿಯ ಬಗ್ಗೆ ಆಗಿದೆ. ಇವಳ ಜೀವನವು ತನ್ನ ದೈಹಿಕ ಬಯಕೆಗಳು ಮತ್ತು ಭಾವನಾತ್ಮಕ ನಂಬಿಕೆಗಳ ನಡುವೆ ಗೋಜಲಾಗಿರುತ್ತದೆ. ಈ ಚಿತ್ರವು ದೈಹಿಕ ಬಯಕೆಗಳನ್ನು ಕೇವಲ ಮದುವೆಯು ಅನುಸರಿಸಬಹುದು ಎಂದು ನಂಬಿರುವ ಸಮಾಜದಲ್ಲಿ ಮುಖ್ಯಪಾತ್ರದ ಹೋರಾಟಗಳನ್ನು ಹೇಳುತ್ತದೆ. ಅವಳು ತನ್ನ ಸಾಮಾನ್ಯ ಜೀವನದಲ್ಲಿ ಒಂದಕ್ಕೊಂದಕ್ಕೆ ವಿರುದ್ಧವಾದ ತಮ್ಮ ಭಾವನೆಗಳ ಬಗ್ಗೆ ಹೇಳಿಕೊಳ್ಳುವ ತನ್ನ ದೈನಂದಿನ ಜೀವನದ ಮಾದರಿಯ ಜನರೊಂದಿಗೆ ಸಿಲುಕಿಕೊಂಡಿರುತ್ತಾಳೆ. ಅಂತಿಮವಾಗಿ, ತಾನು ತನ್ನ ಅಸ್ಪಷ್ಟತೆಯನ್ನು ಜಯಿಸಿದ್ದೇನೆಂದು ಅವಳಿಗೆ ಅನಿಸಿದಾಗ, ಹೊಸ ಸಂದರ್ಭಕ್ಕೆ ಕಾಲಿಡುತ್ತಾಳೆ. ಚಲನಚಿತ್ರವು ಪ್ರೇಕ್ಷಕರ ಗಮನವನ್ನು ವಿವಿಧ ವೃತ್ತಿಗಳ ಮಹಿಳೆಯರು ಎದುರಿಸುವ ಸೂಕ್ಷ್ಮಾತಿಸೂಕ್ಷ್ಮಗಳ ಕಡೆಗೂ ತರುತ್ತದೆ.
ಪಾತ್ರವರ್ಗ
[ಬದಲಾಯಿಸಿ]- ಶೃತಿ ಹರಿಹರನ್ ಗೌರಿ ಆಗಿ
- ಸಂಚಾರಿ ವಿಜಯ್ ಸುರೇಶ್ ಆಗಿ
- ಶರಣ್ಯ ಸುಮಾ ಆಗಿ
- ಪೂರ್ಣಚಂದ್ರ ಮೈಸೂರು ಮಹೇಶ್ ಆಗಿ
- ಬಾಲಾಜಿ ಮನೋಹರ್ ಕರ್ವಾಲೊ ಆಗಿ (ಮನೋವೈದ್ಯ)
- ಗೋಪಾಲ್ ದೇಶಪಾಂಡೆ ರವಿ ಆಗಿ
- ಶಾಂತಲಾ ಜಯಮ್ಮ ಆಗಿ
- ವಲ್ಲಭ ಅಭಿಮನ್ಯು ಆಗಿ
- ಗ್ರೀಷ್ಮಾ ಶ್ರೀಧರ್
- ಹರ್ಷಿಲ್ ಕೌಶಿಕ್
- ಡಾ. ಸೀತಾ ಕೋಟೆ
- ಕಲಾಗಂಗೋತ್ರಿ ಮಂಜು
- ಪ್ರದೀಪ್ ಶಿವಮೊಗ್ಗ
- ಕೆ ಜೆ ಪವನ್
ಉಲ್ಲೇಖಗಳು
[ಬದಲಾಯಿಸಿ]- ↑ avadhi (2018-10-27). "ಇದು ಸಂಧ್ಯಾರಾಣಿಯ 'ನಾತಿಚರಾಮಿ'". Avadhi/ಅವಧಿ (in ಅಮೆರಿಕನ್ ಇಂಗ್ಲಿಷ್). Retrieved 2018-12-21.[permanent dead link]
- ↑ ಸುದ್ದಿಜಾಲ, ವಿಜಯವಾಣಿ (2018-03-02). "ನಾತಿಚರಾಮಿಯಲ್ಲಿ ಮದುವೆ ಮಾತು". ವಿಜಯವಾಣಿ (in ಅಮೆರಿಕನ್ ಇಂಗ್ಲಿಷ್). Archived from the original on 2018-12-29. Retrieved 2018-12-21.
- ↑ "ನಾತಿಚರಾಮಿ ಎಂದ ಶ್ರುತಿ, ಸಂಪತ್". Vijaya Karnataka. 2018-01-19. Retrieved 2018-12-21.
- ↑ Chettiar, Blessy. "An award brings focus to your film: Paddayi director Abhaya Simha". Cinestaan. Archived from the original on 2018-12-29. Retrieved 2018-12-21.
- ↑ "ಪದಗಳು ಕಡಿಮೆಯಾದಾಗಲೇ ಸಿನಿಮಾ". kannadaprabha.com. Archived from the original on 2018-12-29. Retrieved 2018-12-21.
- ↑ "Nathicharami gets a global launch before local release". The New Indian Express (in ಇಂಗ್ಲಿಷ್). India: The New Indian Express. Retrieved 2018-12-28.
- ↑ Khajane, Muralidhara (2018-09-27). "Two women-centric Kannada films in MAMI festival". The Hindu (in Indian English). India: ದಿ ಹಿಂದೂ. Retrieved 2018-12-28.
- ↑ Agatheeswaran (2018-12-15). "Nathicharami Kannada Movie (2019) | Cast | Songs | Teaser | Trailer | Release Date". News Bugz (in ಅಮೆರಿಕನ್ ಇಂಗ್ಲಿಷ್). Archived from the original on 2018-12-29. Retrieved 2018-12-21.
- ↑ "Manso Re's Nathicharami has music by Aruvi's Bindhu Malini". The New Indian Express. 14 January 2018. Retrieved 19 September 2019.
- ↑ "A soulful song from Nathicharami - Times of India". The Times of India. Retrieved 2018-12-21.
- ↑ "'ನಾತಿಚರಾಮಿ' ಸಿನಿಮಾ ಹಾಡುಗಳ ಬಿಡುಗಡೆ". BCinemas (in ಅಮೆರಿಕನ್ ಇಂಗ್ಲಿಷ್). 2018-12-14. Retrieved 2018-12-21.
- ↑ "Shruthi Hariharan in Mansore film - Kannada Movie News". IndiaGlitz.com. 2017-12-21. Retrieved 2018-12-21.
- ↑ "ಥಿಯೇಟರ್ ಹೊಸ್ತಿಲಿಗೆ ನಾತಿಚರಾಮಿ - Prajavani". DailyHunt (in ಇಂಗ್ಲಿಷ್). Retrieved 2018-12-21.
- ↑ "Nathicharami on floors - Kannada Movie News". IndiaGlitz.com. 2018-02-27. Retrieved 2018-12-21.
- ↑ "20th Jio MAMI Mumbai Film Festival". Mumbai Film Festival.
- ↑ "MAMI 2018: Soni, Balekempa, Hamid nominated for Oxfam Best Film on Gender Equality Award". Cinestaan. Archived from the original on 2018-12-29. Retrieved 2019-12-26.
- ↑ "Director Mansore's 'Nathicharami' selected for MAMI - Times of India". The Times of India. Retrieved 2018-12-21.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Pages using the JsonConfig extension
- CS1 ಅಮೆರಿಕನ್ ಇಂಗ್ಲಿಷ್-language sources (en-us)
- All articles with dead external links
- Articles with dead external links from ಆಗಸ್ಟ್ 2021
- Articles with invalid date parameter in template
- Articles with permanently dead external links
- CS1 ಇಂಗ್ಲಿಷ್-language sources (en)
- CS1 Indian English-language sources (en-in)
- Short description is different from Wikidata
- Template film date with 1 release date
- Pages using infobox film with unknown parameters
- ಕನ್ನಡ ಚಲನಚಿತ್ರಗಳು