ವಿಷಯಕ್ಕೆ ಹೋಗು

ದರ್ಶನಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಷಟ್ ದರ್ಶನ ಇಂದ ಪುನರ್ನಿರ್ದೇಶಿತ)

ದರ್ಶನ ಶಾಸ್ತ್ರ-ಪಾಶ್ಚ್ಯಾತ್ಯ ದೃಷ್ಠಿಕೋನ

[ಬದಲಾಯಿಸಿ]

  • ೧.ತತ್ವ ಮೀಮಾಂಸೆ - (ಮೆಟಾಫಿಸಿಕ್ಸ್) : ತತ್ವಗಳಾವುವು - ಅವು ಹೇಗಿವೆ?
  • ೨. ಜ್ಞಾನ ಮೀಮಾಂಸೆ -(ಎಪಿಸ್ಟೋಮಾಲೊಜಿ) : ಪ್ರಮಾಣಗಳೆಷ್ಠು -ಯಾವುವು-ಹೇಗಿವೆ? ಜ್ಞಾನವುಂಟಾಗುವುದು ಹೇಗೆ?
  • ತರ್ಕ ಶಾಸ್ತ್ರ (ಲಾಜಿಕ್)  : ಸತ್ಯ ಅಸತ್ಯಗಳ ಪರಿಶೀಲನಾ ವಿಧಾನ.
  • ಮನೋವಿಜ್ಞಾನ (ಸೈಕೊಲೊಜಿ)  : ಮನೋ ವ್ಯಾಪಾರ- ಪ್ರವೃತ್ತಿಗಳ ಅಧ್ಯಯನ.
  • ನೀತಿ ನಿಯಮ (ಎಥಿಕ್ಸ್ )  : ಲೌಕಿಕ - ಪಾರಮಾರ್ಥಿಕ ಜೇವನಕ್ಕೆ ಬೇಕಾದ ನೀತಿ ನಿಯಮಗಳು, ಆಚಾರಗಳು.
  • ತತ್ವ ಶಾಸ್ತ್ರವೇ ಎಲ್ಲದಕ್ಕಿಂತ ಶ್ರೇಷ್ಠ ವಿದ್ಯೆ, ಎಂಬ ಅಭಿಪ್ರಾಯ ಸಲ್ಲದು. ಎಲ್ಲಾ ಶಾಸಗಳೂ ಶ್ರೇಷ್ಠವೇ. ತತ್ವ ಶಾಸ್ತ್ರವು ವೃದ್ಧರು ಮಾತ್ರರವಲ್ಲದೇ ಎಲ್ಲರೂ ಅಭ್ಯಾಸ ಮಾಡಬಹುದಾದ ಶಾಸ್ತ್ರ. ( ಎಂ. ಪ್ರಭಾಕರ ಜೋಷಿ & ಎಂ.ಎಂ. ಹೆಗಡೆ _ಭಾರತೀಯ ತತ್ವ ಶಾಸ್ತ್ರ ಪರಿಚಯ )

ಭಾರತದ ದರ್ಶನಗಳು.

[ಬದಲಾಯಿಸಿ]

ಸೂತ್ರ ಮತ್ತು ವ್ಯಾಖ್ಯಾನ

[ಬದಲಾಯಿಸಿ]

  • ೧. ಸೂತ್ರಗಳು , ದರ್ಶನಗಳ ಬಗ್ಗೆ ಹೇಳುವ ಸಂಕ್ಷಿಪ್ತ ಹೇಳಿಕೆ, ಪದಗಳ ಗುಂಪು.
  • ೨. ವ್ಯಾಖ್ಯಾನ : ಸೂತ್ರಗಳ ವಿವರಣೆ. ಒಂದೆ ಸೂತ್ರಕ್ಕೆ, ಬೇರೆ ಬೇರೆ ದರ್ಶನದವರು , ಬೇರೆ ಬೇರೆ ವ್ಯಾಖ್ಯಾನ-ವಿವರಣೆ ನೀಡಬಹುದು. ಹಾಗೆ ಬೇರೆ ಬೇರೆ ಪಂಥಗಳಾಗುವುವು. ಇವಕ್ಕೆ ಬಾಷ್ಯಗಳೆಂದೂ , ಬಾಷ್ಯಗಳನ್ನು ವಿವರಿಸಿದರೆ ವಾರ್ತಿಕಗಳೆಂದೂ, ವಾರ್ತಿಕಗಳನ್ನು ಅರ್ಥೈಸಿದರೆ ವ್ಯಾಖ್ಯಾನ / ಟೀಕೆ ಎಂದೂ ಆಗುವುದು.

ಆಧಾರಗಳು (ಪ್ರಾಚೀನ)

[ಬದಲಾಯಿಸಿ]

ತತ್ವ ಚರ್ಚೆಯ ಮುಖ್ಯ ಅಂಶಗಳು

[ಬದಲಾಯಿಸಿ]

  • ೧. ಜಡತ್ವ :- ಜೀವವಿಲ್ಲದ್ದು.
  • ೨. ಚೇತನತ್ವ :- ಜೀವ ಅಥವಾ ಚಿತ್ ಭಾವ ವುಳ್ಳದ್ದು (ಮನಸ್ಸು ಉಳ್ಳದ್ದು)
  • ೩. ಬೌದ್ಧರು -ಮತ್ತು ಶಂಕರರ ಅದ್ವೈತ :-ಚೈತನ್ಯ ಪ್ರಧಾನ ವಾದಿಗಳು.
  • ೪. ಸಾಂಖ್ಯರು -ಮತ್ತು ಚಾರ್ವಾಕರು : -ಜಡ ಪ್ರಧಾನ ವಾದಿಗಳು.
  • ೫. ನ್ಯಾಯ , ವೈಶೇಷಿಕ , ಮೀಮಾಂಸ , ದ್ವೈತ (ದ್ ವೈ ತ), ಜೈನ ದರ್ಶನಗಳು ಉಭಯ ವಾದಿಗಳು, ಎರಡೂ ಪ್ರಧಾನ ವೆನ್ನುವರು.

ಭಾರತದ ಮುಖ್ಯ ದರ್ಶನಗಳು ಮತ್ತು ವಿಚಾರಗಳು

[ಬದಲಾಯಿಸಿ]

ದರ್ಶನಗಳಲ್ಲಿ ವಿಚಾರ ವಿಮರ್ಶೆ

[ಬದಲಾಯಿಸಿ]

ಸೃಷ್ಟಿ ಮತ್ತು ಪುರಾಣ ದರ್ಶನ ಗಳಲ್ಲಿ ವಿಶ್ವ ಸೃಷ್ಟಿ . ಭಗವದ್ಗೀತಾ ತಾತ್ಪರ್ಯ ಹುಟ್ಟು , ಇತಿಹಾಸ, ಹಿನ್ನೆಲೆ, ಪಠನ ಕ್ರಮ

ಉಲ್ಲೇಖಗಳು

[ಬದಲಾಯಿಸಿ]
  1. ಭಾರತೀಯ ತತ್ವ ಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & ಪ್ರೊ.ಎಂ.ಎ.ಹೆಗಡೆ, ಎಚ್.ಒ.ಡಿ ಸಂಸ್ಕೃತ -ಎಂ.ಜಿ.ಸಿ. ಕಾಲೇಜು ಸಿದ್ದಾಪುರ ಕಾರವಾರ ಜಿಲ್ಲೆ. (ಕಾಪಿ ರೈಟಿನಿಂದ ಮುಕ್ತವಾಗಿದೆ)ಪ್ರಕಾಶಕರು :ದಿಗಂತ ಸಾಹಿತ್ಯ ಯೆಯ್ಯಾಡಿ ಮಂಗಳೂರು.
  2. ಹಿಂದೂಧರ್ಮದ ಪರಿಚಯ: ಏದುರ್ಕಳ ಶಂಕರನಾರಾಯಣ ಭಟ್

ಉಲ್ಲೇಖ

[ಬದಲಾಯಿಸಿ]