ಶ್ರೀಮತಿ ಕುಸುಮ ಮೋಹನ ಜಹಾಗೀರ್ ದಾರ್
'ಶ್ರೀಮತಿ ಕುಸುಮ ಮೋಹನ ಜಹಾಗೀರ್ ದಾರ್' ರವರು, ಸೋಲಾಪುರ ಮೂಲದ ಪ್ರಸಿದ್ಧ ಮನೆತನದಲ್ಲಿ ಬೆಳೆದವರು. ಮುಂಬೈನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮಾಡಿದ್ದಾರೆ. ಮಾಟುಂಗ ಉಪನಗರದ "ರೂಪರೇಲ್ ಕಾಲೇಜ್," ನಲ್ಲಿ ಮನಃಶಾಸ್ತ್ರದಲ್ಲಿ ಬಿ. ಎ. ಪದವಿಪಡೆದಿದ್ದಾರೆ. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವಲಯದಲ್ಲಿ ವಿಶೇಷ ಪರಿಣಿತಿ ಪಡೆದಿದ್ದಾರೆ. ಸದ್ಯಕ್ಕೆ 'ಕರ್ನಾಟಕ,' ಮತ್ತು 'ಮಹಾರಾಷ್ಟ್ರ,' ರಾಜ್ಯಗಳ ಮಧ್ಯೆ ಸಾಂಸ್ಕೃತಿಕ ಸೇತುವೆಯಾಗಿ, ಕನ್ನಡ ಹಾಗೂ ಮರಾಠಿ ಭಾಷೆಗಳಲ್ಲಿ ಸಂಗೀತ ಕಚೇರಿಗಳನ್ನು ನಡೆಸುತ್ತಾ ಬಂದಿದ್ದಾರೆ. ಈ ಪ್ರಶಸ್ತಿಯ ಜೊತೆ, ರೂ. ೧೧,೦೦೦/- ನಗದು ಬಹುಮಾನ, ಪ್ರಶಸ್ತಿ-ಪತ್ರ, ಶಾಲು, ಹಾಗೂ ಸ್ಮರಣಚಿನ್ಹೆಗಳನ್ನೊಳಗೊಂಡಿದ್ದು, ಫೆಬ್ರವರಿ, ೨೫ ಕ್ಕೆ ವರದರಾಜ ಆದ್ಯ ಪ್ರಶಸ್ತಿಪ್ರದಾನ ಸಮಾರಂಭದಂದು, ಈ ಪ್ರಶಸ್ತಿಯನ್ನೂ ಪ್ರದಾನಮಾಡಲಾಯಿತು.
ಖ್ಯಾತ ಹಿಂದೂಸ್ಥಾನಿ ಗಾಯಕಿ, 'ಶ್ರೀಮತಿ ಕುಸುಮ ಮೋಹನ ಜಹಾಗೀರ್ ದಾರ್,' ರವರಿಗೆ, " ಪ್ರತಿಶ್ಠಿತ ವರದರಾಜ ಆದ್ಯ ಪ್ರಶಸ್ತಿ "
[ಬದಲಾಯಿಸಿ]ದಿವಂಗತ, " ಶ್ರೀ ವರದರಾಜ ಆದ್ಯರು," ಮಾಜೀ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದರು. ಕರ್ನಾಟಕ ಸಂಘದ ಈಗಿನ ಕಟ್ಟಡವನ್ನು ನಿರ್ಮಾಣಮಾಡಲು ಅವರ ಯೋಗದಾನ ಅಪಾರವಾಗಿತ್ತು. ಆದ್ಯರ ಅನುಪಮಸೇವೆಯನ್ನು ಗಮನದಲ್ಲಿಟ್ಟುಕೊಂಡು ಅವರ ಸ್ಮರಣೆಯಲ್ಲಿ, ವರದರಾಜ ಆದ್ಯ ಪ್ರಶಸ್ತಿ,ಯನ್ನು ಕರ್ನಾಟಕ ಸಂಘ ನೀಡುತ್ತಾ ಬಂದಿದೆ. ೨೦೦೯ ರ, " ಪ್ರತಿಶ್ಠಿತ ವರದರಾಜ ಆದ್ಯ ಪ್ರಶಸ್ತಿ," ಈ ವರ್ಷ ಮುಂಬೈನ ಉಪನಗರ, ಡೊಂಬಿವಲಿಯ 'ಗ್ವಾಲಿಯರ್ ಘರಾಣ,' ದ ಖ್ಯಾತ ಹಿಂದೂಸ್ಥಾನಿ ಗಾಯಕಿ, ಶ್ರೀಮತಿ ಕುಸುಮ ಮೋಹನ್ ಜಹಾಗೀರ್ ದಾರ್ ರವರಿಗೆ ದೊರೆತಿದೆ. ಕನ್ನಡ-ಮರಾಠಿ ಸ್ನೇಹಬಾಂಧವ್ಯಕ್ಕೆ ವಿವಿಧ ಕ್ಷೆತ್ರಗಳಲ್ಲಿ ಎರಡೂ ಭಾಷೆಗಳ ಆದಾನ-ಪ್ರದಾನದಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಇದುವರೆಗೆ ಈ ಪ್ರಶಸ್ತಿ ಪುರಸ್ಕೃತರು
[ಬದಲಾಯಿಸಿ]೧೯೯೦ ರಿಂದ ಕರ್ನಾಟಕ ಸಂಘವು ಕೊಡಲು ಆರಂಭಿಸಿದ್ದು, ಇಷ್ಟರ ತನಕ ೨೦ ಕ್ಕಿಂತಲೂ ಹೆಚ್ಚು ವ್ಯಕ್ತಿ/ಸಂಸ್ಥೆಗಳು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರಲ್ಲಿ
- ಖ್ಯಾತ ಗಾಯಕ, ಭಾರತರತ್ನ, 'ಭೀಮಸೇನ್ ಜೋಷಿ,'
- ಖ್ಯಾತಗಾಯಕಿ, 'ಶ್ರೀಮತಿ ಗಂಗೂಬಾಯಿ ಹಾನಗಲ್,'
ಮುಂತಾದ ಗಣ್ಯ ವ್ಯಕ್ತಿಗಳೂ ಸೇರಿದ್ದಾರೆ.