ಶಿರಸಿ
Sirsi
ಶಿರಸಿ | |
---|---|
![]() ಶಿರಸಿ ಮಾರಿಕಾಂಬಾ ದೇವಸ್ಥಾನ | |
Grid position | MK74 |
Country | ![]() |
State | Karnataka |
ಜಿಲ್ಲೆ | ಉತ್ತರ ಕನ್ನಡ |
Area | |
• Total | ೧೧.೩೩ km೨ (೪.೩೭ sq mi) |
Elevation | ೫೯೦ m (೧,೯೪೦ ft) |
Population (2018) | |
• Total | ೧,೮೭,೦೦೦ |
• Density | ೧೭,೦೦೦/km೨ (೪೩,೦೦೦/sq mi) |
Languages | |
• Official | ಕನ್ನಡ |
Time zone | UTC+5:30 (IST) |
PIN | 5814xx |
Telephone code | +91-8384 |
Vehicle registration | KA-31 |
Website | www |
ಮಲೇನಾಡಿನ ಹೆಬ್ಬಾಗಿಲು ಶಿರಸಿ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಒಂದು ನಗರ ಹಾಗು ತಾಲ್ಲೂಕು ಕೇಂದ್ರವಾಗಿದ್ದು, ಈ ಊರಿನಲ್ಲಿ ಪ್ರಸಿದ್ಧವಾದ ಶ್ರೀ ಮಾರಿಕಾಂಬ ದೇವಸ್ಥಾನ ಇದೆ. ಶ್ರೀ ಮಾರಿಕಾಂಬ ಜಾತ್ರೆ ಎರಡು ವರ್ಷಕ್ಕೊಮ್ಮೆ ಎಂಟು ದಿನಗಳ ಕಾಲ ನಡೆಯುತ್ತದೆ. ಶಿರಸಿಯು ಅಡಿಕೆ ತೋಟಗಳು, ಕಾಡುಗಳು ಹಾಗೂ ಜಲಪಾತಗಳಿಂದ ಸುತ್ತುವರಿಯಲ್ಪಟ್ಟಿದೆ. ಅಡಿಕೆ ಬೆಳೆ ಮತ್ತು ಮಾರಾಟ ಇಲ್ಲಿನ ಆರ್ಥಿಕತೆಯ ಬೆನ್ನೆಲುಬು. ಸೋಂದಾ ಸ್ವರ್ಣವಲ್ಲಿ ಮಠ, ವಾದಿರಾಜ ಮಠ, ಮೊಗದ್ದೆ ದೇವಸ್ಥಾನ ಪ್ರಸಿದ್ಧ ಯಾತ್ರಾಸ್ಥಳಗಳು. ಹಚ್ಚ ಹಸಿರಿನಿಂದ ಕೂಡಿರುವ ಶಿರಸಿ ಪ್ರವಾಸಿಗರ ಸ್ವರ್ಗ ಎಂದೇ ಹೇಳಬಹುದು. ಶಿರಸಿಯನ್ನು ಮಲೆನಾಡಿನ ಹೆಬ್ಬಾಗಿಲು ಅಂತಾನು ಕರೆಯಲ್ಪಡುತ್ತೆ.
ಪ್ರವಾಸೀ ತಾಣಗಳು[ಬದಲಾಯಿಸಿ]
ಬನವಾಸಿ[ಬದಲಾಯಿಸಿ]
ಕ್ರಿಸ್ತಶಕ ೩೪೫ – ೫೨೫ ವರೆಗೆ ಆಳಿದ ಕದಂಬ ಅರಸರ ರಾಜಧಾನಿಯಾಗಿದ್ದ ಬನವಾಸಿ ಸಿರಸಿಯಿಂದ ೨೪ ಕಿ.ಮಿ. ದೂರದಲ್ಲಿದೆ. ಇಲ್ಲಿ ಕದಂಬರು ಕಟ್ಟಿಸಿದ ಮಧುಕೇಶ್ವರ ದೇವಸ್ಥಾನ ತುಂಬ ಸುಂದರವಾಗಿದೆ.
ಸಹಸ್ರಲಿಂಗ[ಬದಲಾಯಿಸಿ]
ಸಿರಸಿಯಿಂದ ೧೭ ಕಿ.ಮಿ. ದೂರದಲ್ಲಿರುವ ಸಹಸ್ರಲಿಂಗದಲ್ಲಿ, ನದಿಯ ಮಧ್ಯದಲ್ಲಿ ಕಲ್ಲುಗಳಲ್ಲಿ ಕೆತ್ತಲಾದ ನೂರಾರು ಶಿವಲಿಂಗಗಳಿವೆ. ಕಾಡಿನ ಮಧ್ಯ ಇರುವ ಸಹಸ್ರಲಿಂಗಕ್ಕೆ ಶಿವರಾತ್ರಿಯಂದು ಬಹಳ ಜನ ಬರುತ್ತಾರೆ.
ಸೊಂದಾ[ಬದಲಾಯಿಸಿ]
ಶಿರಸಿಯಿಂದ 20ಕಿ.ಮಿ. ದೂರದಲ್ಲಿರುವ ಸೊಂದಾದಲ್ಲಿ (ಇತರೆ ಹೆಸರುಗಳು ಸೋದೆ, ಸ್ವಾದಿ) ಪ್ರಸಿದ್ಧ ವಾದಿರಾಜ ಮಠವಿದೆ. ಮತ್ತು ಅಲ್ಲಿ ಕೆಲ ಶತಮಾನಗಳ ಹಿಂದಿನ ಸುಂದರವಾದ ಕೋಟೆಯಿದೆ.
ಉಂಚಳ್ಳಿ ಜಲಪಾತ[ಬದಲಾಯಿಸಿ]
೧೧೬ ಮಿಟರ್ ಎತ್ತರದಿಂದ ಧುಮುಕುವ ಈ ಜಲಪಾತ ರಮಣೀಯವಾಗಿದೆ. ಸಿರಸಿಯಿಂದ ೩೦ ಕಿ.ಮಿ. ದೂರದಲ್ಲಿರುವ ಈ ಜಲಪಾತದಲ್ಲಿ ವರ್ಷದ ಬಹು ಭಾಗದಲ್ಲಿ ನೀರು ಇರುತ್ತದೆ. ಯಾಣ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಷ್ರೇಣಿಯಲ್ಲಿದೆ. ಇದು ಶಿರಸಿ ಇಂದ ೪೫ ಕಿ.ಮಿ. ದೂರದಲ್ಲಿದೆ.
ಶ್ರೀ ಮಾರಿಕಾಂಬ ದೇವಸ್ಥಾನ[ಬದಲಾಯಿಸಿ]
ಶಿರಸಿಯಿಂದ ಬನವಾಸಿಗೆ ಹೋಗುವ ರಸ್ತೆಯ ಬಲಭಾಗದಲ್ಲಿ ಸುಮಾರು ೧೬ನೇ ಶತಮಾನದ ಶ್ರೀ ಮಾರಿಕಾಂಬಾ ದೇವಾಲಯವಿದೆ. ೧೯೩೩ರಲ್ಲಿ ಗಾಂಧೀಜಿಯವರು ಸಹ ಇಲ್ಲಿಗೆ ಭೇಟಿ ನೀಡಿದ್ದರು ಎಂಬ ಉಲ್ಲೇಖವಿದೆ.
ಇತಿಹಾಸ[ಬದಲಾಯಿಸಿ]
ರಾಜ ಮನೆತನಗಳು[೧][ಬದಲಾಯಿಸಿ]
ಕ್ರಿ.ಶ. | ಮನೆತನ |
---|---|
ಪೂರ್ವ | ಮೌರ್ಯ |
೧-೨ನೇ ಶತಮಾನ | ಶಾತವಾಹನ |
೨-೩ನೇ ಶತಮಾನ | ಚುಟುವಂಶ (ಶಾತವಾಹನರ ಶಾಖೆ), ಕಂಚಿ ಪಲ್ಲವರು |
೩-೬ನೇ ಶತಮಾನ | ಬನವಾಸಿ ಕದಂಬರು |
೬-೧೦ನೇ ಶತಮಾನ | ಎರಡನೇ ಪುಲಿಕೇಶಿ, ಆಳುಪರು, ರಾಷ್ಟ್ರಕೂಟರು |
೧೦-೧೨ ಶತಮಾನ | ಕದಂಬ, ಕಲ್ಯಾಣ ಚಾಲುಕ್ಯ (ಹಾನಗಲ್ಲಿನ ಶಾಸನಗಳು) |
೧೪೦೦-೧೭೬೪ ಶತಮಾನ | ಸೊಂದಾ ನಾಯಕರು (ವಿಜಯನಗರ ಸಾಮ್ರಾಜ್ಯದ ಮಾಂಡಲಿಕ) |
೧೭೬೩-೧೭೯೯ | ಮೈಸೂರಿನ ಹೈದರಾಲಿ (ಆಂಗ್ಲೋ-ಮೈಸೂರ್ ಯುದ್ಧದವರೆಗೆ) |
೧೮೦೦-೧೯೪೭ | ಆಂಗ್ಲರು |
ಪ್ರಮುಖ ಇಸವಿಗಳು[ಬದಲಾಯಿಸಿ]
೧೮೬೨ | ಆಂಗ್ಲರಿಂದ ಮುಂಬೈ ಪ್ರಾಂತ್ಯಕ್ಕೆ ಸೇರ್ಪಡೆ |
೧೯೫೬ | ಸ್ವತಂತ್ರ್ಯ ಭಾರತದ ಮೈಸೂರು ಪ್ರಾಂತ್ಯಕ್ಕೆ ಸೇರ್ಪಡೆ |
೧೮೫೯ | ಶಿರಸಿ ತಾಲೂಕಾ ಕೇಂದ್ರವಾದದ್ದು (ಸೋಂದೆಯಿಂದ) |
೧೯೭೭ | ನಾರ್ತ್ ಕೆನರಾದ ಮರುನಾಮಕರಣ - ಉತ್ತರ ಕನ್ನಡ |
ಪ್ರಮುಖ ಉಲ್ಲೇಖಗಳು[ಬದಲಾಯಿಸಿ]
ಹತ್ತಿರದ ಸಿದ್ದಾಪುರ ತಾಲೂಕಿನ ತಮಡಿ ಕಲ್ಲಾಳದಲ್ಲಿ ದೊರೆತ "ಡಿಸೆಂಬರ್ ೨೬, ೧೦೭೨ (ಗುರುವಾರ)" ತಿಥಿಯ ವೀರಗಲ್ಲಿನಲ್ಲಿ, 'ಸಿರಿಸೆ' ಎಂಬ ಸ್ಥಳದಲ್ಲಿ ಅಣ್ಣ ತಮ್ಮಂದಿರಾದ ಚಟ್ಟಯ್ಯದೇವ ಮತ್ತು ತೈಲಪದೇವರ ನಡುವೆ ಯುದ್ಧವಾಗಿತ್ತು ಎಂಬುದು ಕಂಡುಬರುತ್ತದೆ.[೧]
ಕ್ರಿ.ಶ. ೧೮೦೧ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವೈದ್ಯ ಪದವಿಧರ ಡಾ|| ಫ್ರಾನ್ಸಿಸ್ ಬುಕಾನನ್. ಟಿಪ್ಪೂ ಮರಣಾನಂತರ ಕಂಪನಿ ವಶಪಡಿಸಿಕೊಂಡ ಮೈಸೂರು ಮತ್ತು ಮಲಬಾರ್ ಪ್ರಾಂತ್ಯಗಳಲ್ಲಿ ಪ್ರವಾಸ ಕೈಗೊಂಡನು. ಆತ ತನ್ನ 'Jorney Through the Northerns Parts of Kanara' [೨]ಹೊತ್ತಿಗೆಯಲ್ಲಿ, ಉತ್ತರಕನ್ನಡದ ಸೋಂದಾದ ತಹಶೀಲ್ದಾರನಿರುವ ಒಂದು ಸಣ್ಣ ಹಳ್ಳಿ 'ಸೆರ್ಸಿ' ಎಂದು ದಾಖಲಿಸಿದ್ದಾನೆ.[೧]
ದೊರೆತ ನಾಣ್ಯಗಳು[ಬದಲಾಯಿಸಿ]
- ಬೆಳ್ಳಿ, ಪೊಟಿನ್ ಮತ್ತು ಸೀಸದ ನಾಣ್ಯಗಳು[೧]
- ಶಾತವಾಹನ, ಚುಟು, ರೋಮನ್ (ಲಿಸಿತಿಸ್, ಡೆಮೆಟ್ರಿಯಸ್, ಟೊಲೆಮಿ, ಆಗಥೊಕ್ಲಿಯಸ್)[೧]
ಜನಸಂಖ್ಯೆ[ಬದಲಾಯಿಸಿ]
೨೦೧೧ ಜನಗಣತಿಯ ಪ್ರಕಾರ ಈ ಊರಿನ ಜನಸಂಖ್ಯೆ ೧,೧೦,೨೧೫. ಇವರಲ್ಲಿ 81 ಶೇಕಡಾ ಜನರು ಸಾಕ್ಷರರು. ಶಿರಸಿಯಲ್ಲಿ ಕನ್ನಡ, (ಹವ್ಯಕ ಕನ್ನಡ), ಕೊಂಕಣಿ, ಮರಾಠಿ ಭಾಷೆಗಳನ್ನು ಮಾತಾಡುವ ಜನರಿದ್ದಾರೆ. ಮುಖ್ಯ ವ್ಯಾವಹಾರಿಕ ಭಾಷೆ ಕನ್ನಡ ಮತ್ತು ಹವ್ಯಕ ಕನ್ನಡ
ವೃತ್ತ ಪತ್ರಿಕೆಗಳು[ಬದಲಾಯಿಸಿ]
ವಾಣಿಜ್ಯ ಸಂಸ್ಥೆಗಳು[ಬದಲಾಯಿಸಿ]
- ಟಿ. ಎಸ್. ಎಸ್ (ದಿ ತೋಟಗಾರ್ಸ್ ಕೊ-ಆಪರೇಟಿವ್ ಸೇಲ್ ಸೊಸೈಟಿ ಲಿಮಿಟೆಡ್)
ಪ್ರಮುಖ ಶಿಕ್ಷಣ ಸಂಸ್ಥೆಗಳು[ಬದಲಾಯಿಸಿ]
- ಅರಣ್ಯ ಮಹಾವಿದ್ಯಾಲಯ, ಶಿರಸಿ (೧೯೮೫)
- ಎಮ್. ಇ. ಎಸ್ ಎಜುಕೇಶನ್ ಟ್ರಸ್ಟ್ (ಎಂ. ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಕಾನೂನು ಮಹಾವಿದ್ಯಾಲಯ, ವಾಣಿಜ್ಯ ಮಹಾವಿದ್ಯಾಲಯ)
- ಆವೆ ಮರಿಯಾ ಎಜುಕೇಶನ್ ಟ್ರಸ್ಟ್ (೧೯೪೫)
- ಪ್ರೋಗ್ರೆಸ್ಸಿವ್ ಎಜುಕೇಶನ್ ಟ್ರಸ್ಟ್
- ಡೊನ್ ಬೊಸ್ಕೊ ಎಜುಕೇಶನ್ ಟ್ರಸ್ಟ್
- ಆರ್.ಎನ್.ಎಸ್ ಪೊಲಿಟೇಕ್ನಿಕ್ ಎಜುಕೇಶನ್ ಟ್ರಸ್ಟ್
- ಶ್ರೀ ಮಾತಾ ವಿದ್ಯಾನಿಕೇತನ,
- ಚಂದನ ಪ್ರೌಢಶಾಲೆ
- ಜಿ.ಎಸ್.ಎಸ್. ವಾನಳ್ಳಿ
- ಶ್ರೀದೇವಿ ಪ್ರೌಢಶಾಲೆ, ಹುಲೇಕಲ್
- ಲಯನ್ಸ್ ಶಿಕ್ಷಣ ಸಂಸ್ಥೆ (೧೯೯೪)
- ಶ್ರೀ ಸಿದ್ಧಿ ವಿನಾಯಕ ಪ್ರೌಢಶಾಲೆ, ಗೋಳಿ (೧೯೬೧)
- ಶ್ರೀ ಕಾಳಿಕ ಭವಾನಿ ಸೆಕೆಂಡರಿ ಶಾಲೆ, ಕಾನ್ಸೂರ್
ಪ್ರಮುಖ ವ್ಯಕ್ತಿಗಳು[ಬದಲಾಯಿಸಿ]
- ಮಯೂರವರ್ಮ - ಕದಂಬ ಮನೆತನದ ಸ್ಥಾಪಕ
- ರಾಮಕೃಷ್ಣ ಹೆಗಡೆ, ರಾಜಕಾರಣಿ
- ನಂದನ್ ನಿಲೇಕಣಿ, ಉದ್ಯಮಿ
- ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜಕಾರಣಿ
- ಗಿರೀಶ್ ಕಾರ್ನಾಡ್, ಸಾಹಿತಿ, ನಟ, ನಿರ್ದೇಶಕ
- ಹರ್ಡೇಕರ ಮಂಜಪ್ಪ, ರಾಜಕಾರಣಿ
ಉಲ್ಲೇಖ[ಬದಲಾಯಿಸಿ]
![]() |
Wikimedia Commons has media related to Sirsi, Karnataka. |
- Pages with non-numeric formatnum arguments
- Articles with short description
- Short description is different from Wikidata
- Pages using infobox settlement with bad settlement type
- Pages using infobox settlement with unknown parameters
- Pages using infobox settlement with no coordinates
- Commons link is locally defined
- ಶಿರಸಿ ತಾಲೂಕಿನ ಪ್ರವಾಸಿ ತಾಣಗಳು