ವಿಷಯಕ್ಕೆ ಹೋಗು

ವೃಷಭರಾಶಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೃಷಭರಾಶಿ ರಾಶಿಚಕ್ರದ ನಕ್ಷತ್ರಪುಂಜಗಳಲ್ಲಿ ಒಂದಾಗಿದೆ. ವೃಷಭರಾಶಿಯು ಉತ್ತರ ಖಗೋಳ ಗೋಲಾರ್ಧದ ಒಂದು ದೊಡ್ಡ ಮತ್ತು ಪ್ರಮುಖ ನಕ್ಷತ್ರಪುಂಜವಾಗಿದೆ. ಇದು ಅತ್ಯಂತ ಹಳೆಯ ನಕ್ಷತ್ರಪುಂಜಗಳಲ್ಲಿ ಒಂದಾಗಿದೆ. ಇದು ಆರಂಭಿಕ ಕಂಚಿನ ಯುಗದಷ್ಟು ಹಿಂದಿನದು. ಇದು ವಸಂತ ವಿಷುವತ್ ಸಂಕ್ರಾಂತಿಯ ಸಮಯದಲ್ಲಿ ಸೂರ್ಯನ ಸ್ಥಳವನ್ನು ಗುರುತಿಸುತ್ತದೆ. ಇದರ ಹಳೆಯ ಖಗೋಳ ಚಿಹ್ನೆ (♉︎). ಇದು ಗೂಳಿಯ ತಲೆಯನ್ನು ಹೋಲುತ್ತದೆ.

ಬಾನಿಗೆ ಒಳಮುಚ್ಚಿಗೆ ಅಥವಾ ಚತ್ತು ಹೊದೆಸಿರುವಂತೆ ಭಾಸವಾಗುವ ಅಸಂಖ್ಯ ನಕ್ಷತ್ರ ಚಿತ್ರಗಳನ್ನು ಖಗೋಳವಿಜ್ಞಾನಿಗಳು 88 ವಿವಿಧ ನಕ್ಷತ್ರಪುಂಜಗಳಾಗಿ ವಿಭಾಗಿಸಿದ್ದಾರೆ. ಈ ಪೈಕಿ ಒಂದು ವೃಷಭರಾಶಿ (ಟಾರಸ್). ದ್ವಾದಶ ಅಥವಾ 12 ರಾಶಿಗಳ ಪೈಕಿ ಎರಡನೆಯದು-ಮೊದಲನೆಯದು ಮೇಷ, ಮೂರನೆಯದು ಮಿಥುನ. ಈ 12 ರಾಶಿಗಳೂ ರಾಶಿಚಕ್ರದ (ಝೋಡಿಯಕ್) ಮೇಲಿವೆ. ಸೂರ್ಯ, ಚಂದ್ರ ಮತ್ತು ಗ್ರಹಗಳ ಸಂಚಾರ ಪಥಗಳು ಅಥವಾ ಕಕ್ಷೆಗಳು ರಚಿಸುವ ಇಕ್ಕಟ್ಟು ಪಟ್ಟಿಯೇ ರಾಶಿಚಕ್ರ.

ಬರೀ ಕಣ್ಣಿಗೆ ಗೋಚರಿಸುವಂತೆ ವೃಷಭರಾಶಿ.[೧] ನಕ್ಷತ್ರಪುಂಜ ರೇಖೆಗಳನ್ನು ಸ್ಪಷ್ಟತೆಗಾಗಿ ಸೇರಿಸಲಾಗಿದೆ.

ವೃಷಭರಾಶಿಯ ಆಕಾರವನ್ನು ಬಲಕ್ಕಿರುವ ಚಿತ್ರದಲ್ಲಿ ಕಾಣಿಸಿದೆ. ಸುಮಾರು 5 ಬಿಡಿ ನಕ್ಷತ್ರಗಳು ರಚಿಸುವ V-ಆಕಾರದಿಂದ ಇದನ್ನು ಗುರುತಿಸುತ್ತೇವೆ. V-ಯ ಕೋನಶೃಂಗ ಪಶ್ಚಿಮದತ್ತ ತಿರುಗಿದೆ.

ಪ್ರಮುಖ ನಕ್ಷತ್ರಗಳು

[ಬದಲಾಯಿಸಿ]
  • ವೃಷಭರಾಶಿಯ ಇನ್ನೊಂದು ಮುಖ್ಯ ನಕ್ಷತ್ರವಿದು: ಅಗ್ನಿ (ಎಲ್‍ನಾಥ್), ಉಜ್ಜ್ವಲತಾಂಕ 1.65,[೩] ನೀಲದೈತ್ಯ (ಬ್ಲೂ ಜಯಂಟ್), ದೂರ 140 ಜ್ಯೋತಿರ್ವರ್ಷ.
  • ಬಿಡಿ ಬಿಡಿಯಾಗಿ ಎಣಿಸಬಲ್ಲ 7 ನಕ್ಷತ್ರಗಳ ನಿಬಿಡ ನಿತ್ಕಟ ಒಕ್ಕೂಟ ಕೃತ್ತಿಕಾಗುಚ್ಛ (ಪ್ಲಿಯಡಿಸ್) ವೃಷಭರಾಶಿಯಲ್ಲಿದೆ. ಪುಟ್ಟ ಸೌಟಿನಂತೆ ಇದರ ಆಕಾರ.
  • ಸುಮಾರು 200 ಬಿಡಿ ನಕ್ಷತ್ರಗಳ ವಿಸ್ತಾರ ಒಕ್ಕೂಟ ವೃಷಭ ರಾಶಿಯಲ್ಲಿದೆ. ಇದಕ್ಕೆ ಹಯಡಿಸ್ ಎಂದು ಹೆಸರು.

ಉಲ್ಲೇಖಗಳು

[ಬದಲಾಯಿಸಿ]
  1. "Taurus, the bull". Allthesky.com. Retrieved 2012-05-16.
  2. "Query= alf Tau". General Catalogue of Variable Stars. Centre de Données astronomiques de Strasbourg. Archived from the original on 2015-06-09. Retrieved 2009-12-16.
  3. Ducati, J. R. (2002). "VizieR Online Data Catalog: Catalogue of Stellar Photometry in Johnson's 11-color system". CDS/ADC Collection of Electronic Catalogues. 2237: 0. Bibcode:2002yCat.2237....0D.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: