ವೃಷಭರಾಶಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾನಿಗೆ ಒಳಮುಚ್ಚಿಗೆ ಅಥವಾ ಚತ್ತು ಹೊದೆಸಿರು ವಂತೆ ಭಾಸವಾಗುವ ಅಸಂಖ್ಯ ನಕ್ಷತ್ರ ಚಿತ್ರಗಳನ್ನು ಖಗೋಳವಿಜ್ಞಾನಿಗಳು 88 ವಿವಿಧ ನಕ್ಷತ್ರಪುಂಜಗಳಾಗಿ ವಿಭಾಗಿಸಿದ್ದು ವೃಷಭರಾಶಿ ಈ ಪೈಕಿ ಒಂದು (ಟಾರಸ್). ದ್ವಾದಶ ಅಥವಾ 12 ರಾಶಿಗಳ ಪೈಕಿ ಎರಡನೆಯದು-ಮೊದಲನೆಯದು ಮೇಷ, ಮೂರನೆಯದು ಮಿಥುನ.

ಈ 12 ರಾಶಿಗಳೂ ರಾಶಿಚಕ್ರದ (ಝೋಡಿಯಕ್) ಮೇಲಿವೆ. ಸೂರ್ಯಚಂದ್ರ ಮತ್ತು ಗ್ರಹಗಳ ಸಂಚಾರ ಪಥಗಳು ಅಥವಾ ಕಕ್ಷೆಗಳು ರಚಿಸುವ ಇಕ್ಕಟ್ಟು ಪಟ್ಟಿಯೇ ರಾಶಿಚಕ್ರ.

ಸುಮಾರು 5 ಬಿಡಿ ನಕ್ಷತ್ರಗಳು ರಚಿಸುವ V-ಆಕಾರದಿಂದ ಇದನ್ನು ಗುರುತಿಸುತ್ತೇವೆ. -V ಯ ಕೋನಶೃಂಗ ಪಶ್ಚಿಮದತ್ತ ತಿರುಗಿದೆ. ದಕ್ಷಿಣ ಬಾಹುವಿನ ತುದಿ ನಕ್ಷತ್ರದ ಬಣ್ಣ ಮಾಣಿಕ್ಯ ಕೆಂಪು. ಇದು ರೋಹಿಣಿ (ಆಲ್ಡೆಬರಾನ್). ಇದೊಂದು ರಕ್ತದೈತ್ಯ ನಕ್ಷತ್ರ (ರೆಡ್ ಜಯಂಟ್ ಸ್ಟಾರ್).

ಭೂಮಿಯಿಂದ ದೂರ 69 ಜ್ಯೋತಿರ್ವರ್ಷಗಳು. ಇದರ ಅರ್ಥ ಇಂದಿನಿರುಳು ನಮಗೆ ಕಾಣುವ ರೋಹಿಣಿ ವಾಸ್ತವವಾಗಿ 69 ವರ್ಷಹಿಂದಿನದು! ಇದರ ಉಜ್ಜ್ವಲ ತಾಂಕ (ಮ್ಯಾಗ್ನಿಟ್ಯೂಡ್) 0.9 ವೃಷಭ ರಾಶಿಯ ಇನ್ನೊಂದು ಮುಖ್ಯ ನಕ್ಷತ್ರವಿದು : ಅಗ್ನಿ (ಎಲ್‍ನಾಥ್), ಉಜ್ಜ್ವಲತಾಂಕ 1.7, ನೀಲದೈತ್ಯ (ಬ್ಲೂ ಜಯಂಟ್), ದೂರ 140 ಜ್ಯೋತಿರ್ವರ್ಷ. ಬಿಡಿ ಬಿಡಿಯಾಗಿ ಎಣಿಸಬಲ್ಲ 7 ನಕ್ಷತ್ರಗಳ ನಿಬಿಡ ನಿತ್ಕಟ ಒಕ್ಕೂಟ ಕೃತ್ತಿಕಾಗುಚ್ಛ (ಪ್ಲಿಯಡಿಸ್) ವೃಷಭ ರಾಶಿಯಲ್ಲಿದೆ. ಪುಟ್ಟ ಸೌಟಿನಂತೆ ಇದರ ಆಕಾರ. ಸುಮಾರು 200 ಬಿಡಿ ನಕ್ಷತ್ರಗಳ ವಿಸ್ತಾರ ಒಕ್ಕೂಟ ವೃಷಭ ರಾಶಿಯಲ್ಲಿದೆ. ಇದಕ್ಕೆ ಹಯಡಿಸ್ ಎಂದು ಹೆಸರು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: