ರೋಹಿಣಿ (ನಕ್ಷತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರೋಹಿಣಿ ನಕ್ಷತ್ರವು ವೃಷಭ (ಟಾರಸ್) ರಾಶಿಯಲ್ಲಿಯ ಪ್ರಮುಖ ತಾರೆ (ಅಲ್ಡೆಬರಾನ್; ಟಾರಿ). ಇದೊಂದು ರಕ್ತದೈತ್ಯ (ಅಂದರೆ ಹೀಲಿಯಮ್ ನಕ್ಷತ್ರ) ಚಾಂದ್ರ ಕಕ್ಷೆಯ 27 ನಕ್ಷತ್ರಗಳ ಪೈಕಿ ಒಂದು. ಇದರ ವಿಷುವದಂಶ 4ಗಂ. 34ಮಿ. 39ಸೆ; ಫಂಟಾವೃತ್ತಾಂಶ 1602758" ಉತ್ತರ. ಒಂದನೆಯ ಕಾಂತಿಮಾನದ ಕೆಂಪುಬಣ್ಣದ ನಕ್ಷತ್ರ. ವ್ಯಾಸ ಸೂರ್ಯ ವ್ಯಾಸದ ಸುಮಾರು 35ಮಡಿ; ಉಜ್ಜ್ವಲತೆ ಸೂರ್ಯನದರ 90ರಷ್ಟು. ಸೂರ್ಯನಿಂದ 68 ಜೋತಿರ್ವರ್ಷ ದೂರದಲ್ಲಿದೆ. ಕ್ರಾಂತಿ ವೃತ್ತದ ಬಳಿಯೇ ಇರುವುದರಿಂದ ಸೂರ್ಯ ಮತ್ತು ಚಂದ್ರ ಈ ನಕ್ಷತ್ರಕ್ಕೆ ತೀರ ಸಮೀಪದಲ್ಲಿ ಹಾದುಹೋಗುತ್ತವೆ.

ಇದು ಕೃಷ್ಣನ ಜನ್ಮನಕ್ಷತ್ರವಾಗಿದೆ. ಪುರಾಣಗಳ ಪ್ರಕಾರ ರೋಹಿಣಿಯು ಚಂದ್ರನ ಪತ್ನಿ. ಚಂದ್ರನ ಎಲ್ಲ ಪತ್ನಿಯರಲ್ಲಿ ರೋಹಿಣಿಯು ಚಂದ್ರನಿಗೆ ಅಚ್ಚುಮೆಚ್ಚಿನವಳು. ಇವಳು ಒಳ್ಳೆ ಉಡುಪುಗಳು, ಪ್ರಸಾಧನಗಳು ಮತ್ತು ಅಲಂಕಾರವನ್ನು ಇಷ್ಟಪಡುವವಳು ಎಂದು ಹೇಳಲಾಗುತ್ತದೆ. ಹಸುಗಳಿಂದ ಎಳೆಯಲ್ಪಡುವ ಬಂಡಿ ಈ ನಕ್ಷತ್ರದ ಸಂಕೇತವಾಗಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Rohini nakshatra

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: