ವಿಶ್ವೇಶ್ವರ ಭಟ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವಿಶ್ವೇಶ್ವರ ಭಟ್, ಕನ್ನಡದ ಪತ್ರಕರ್ತರು, ಬರಹಗಾರರು, ಅಂಕಣಕಾರರು. ಪ್ರಮುಖ ಕನ್ನಡ ಪತ್ರಿಕೆಗಳಿಗೆ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.

ವಿಶ್ವೇಶ್ವರ ಭಟ್

ಜನನ, ವಿದ್ಯಾಭ್ಯಾಸ[ಬದಲಾಯಿಸಿ]

ವಿಶ್ವೇಶ್ವರ ಭಟ್ ಉತ್ತರ ಕನ್ನಡ ಜಿಲ್ಲೆಯ ಕುಮುಟಾದ ಮೂರೂರಿನವರು. 'ಬಿ.ಎಸ್ಸಿ' ಮಾಡಿ, ಭೂಗರ್ಭಶಾಸ್ತ್ರದಲ್ಲಿ 'ಎಂ.ಎಸ್ಸಿ' ಮಾಡಿ, ಪತ್ರಿಕೋದ್ಯಮದಲ್ಲಿ (೪ ಚಿನ್ನದ ಪದಕ ದೊಂದಿಗೆ) ಎಂ.ಎ ಮಾಡಿದರು. ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ.

ವೃತ್ತಿ-ಜೀವನ[ಬದಲಾಯಿಸಿ]

ಅಂಕಣಗಳು[ಬದಲಾಯಿಸಿ]

 • 'ಸುದ್ದಿಮನೆ ಕತೆ' - ವಿಜಯ ಕರ್ನಾಟಕ ಪತ್ರಿಕೆಯಲ್ಲಿ 'ಸುದ್ದೀಶ' ಹೆಸರಿನಲ್ಲಿ ಬರೆದ ಈ ಅಂಕಣದಿಂದ 'ವಿಜಯ ಕರ್ನಾಟಕ' ಓದುಗರಿಗೆ ಪತ್ರಿಕೊದ್ಯಮದ ಒಳಹೊರಗುಗಳನ್ನು ಪರಿಚಯಿಸಿದ್ದಾರೆ.
 • ನೂರೆಂಟು ಮಾತು
 • ಬತ್ತದ ತೆನೆ ('ಸ್ವಾಮಿ ಅನಾಮಧೇಯ ಪೂರ್ಣ'ರೆಂಬ ಹೆಸರಿನಲ್ಲಿ ಬರೆಯುತ್ತಿದ್ದರು [೨])
 • ಬಾಲ್ಕನಿಯಿಂದ ('ಸಹಜಾ' ಹೆಸರಿನಲ್ಲಿ)
 • ವಕ್ರತುಂಡೋಕ್ತಿ (ಕಿರುಸೂಕ್ತಿಗಳು)
 • +ve ಥಿಂಕಿಗ್ ('ಸಹನೆ' ಎಂಬ ಹೆಸರಲ್ಲಿ ಬರೆಯುತ್ತಿದ್ದರು)

ಕೃತಿಗಳು[ಬದಲಾಯಿಸಿ]

ವಿಶ್ವೇಶ್ವರ ಭಟ್ ಕನ್ನಡದಲ್ಲಿ ೫೦ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದು/ಅನುವಾದಿಸಿ ಪ್ರಕಟಿಸಿದ್ದಾರೆ. ಅದರಲ್ಲಿ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಅನೇಕ ಪುಸ್ತಕಗಳೂ ಇವೆ.

 • ನನ್ನ ಪ್ರೀತಿಯ ವೈಎನ್ಕೆ (ವ್ಯಕ್ತಿಚಿತ್ರ)
 • ವೈಯೆನ್ಕೆ ಅವರ ಬೆಸ್ಟ್ ಆಫ್ ವಂಡರ್ಸ್
 • ಬತ್ತದ ತೆನೆ (ವ್ಯಕ್ತಿತ್ವ ವಿಕಾಸನ)
 • ನೂರೆಂಟು ಮಾತು (ಅಂಕಣ ಬರಹ)
 • ಸುದ್ದಿ ಮನೆ ಕತೆ(ಪತ್ರಿಕೋದ್ಯಮ)
 • ನಿಮಗೆ ಗೊತ್ತಲ್ಲದ ರಾಮನಾಥ ಗೋಯಂಕಾ(ವ್ಯಕ್ತಿ ಚಿತ್ರಣ)
 • ಎಚ್. ವೈ ಶಾರದಪ್ರಸಾದ್ ಅವರ ಕಾಲದೇಶ(ಅಂಕಣ ಬರಹಗಳು)
 • ಆಗಾಗ ಬಿದ್ದ ಮಳೆ (ಬಿಡಿ ಬರಹಗಳು)
 • ರುಪೆರ್ಟ ಮುಡರ್ೋಕ್ (ವ್ಯಕ್ತಿ ಚಿತ್ರ)
 • ಸರಿಗಮ ಪದ (ಪತ್ರಿಕಾಭಾಷೆ ಕುರಿತು)
 • ನೂರೆಂಟು ಮಾತು – 3 (ಅಂಕಣ ಬರಹ)
 • ಕಲಾಮ್ ಕಮಾಲ್ (ವ್ಯಕ್ತಿ ಚಿತ್ರಣ)
 • ಅಂಜಿಕೆಯಿಲ್ಲದ ಕರಂಜಿಯಾ(ವ್ಯಕ್ತಿ ಚಿತ್ರಣ)
 • ಹೂ ಬಿಸಿಲಿನ ನೆರಳು (ನೂರೆಂಟು ಮಾತು – 4)
 • ಸಂಪಾದಕ ಅಂದ್ರೆ ಗಂಡ ಇದ್ದಂತೆ(ಪತ್ರಿಕೋದ್ಯಮ)
 • ಲಾಲ ಬಹದ್ದೂರ್ ಶಾಸ್ತ್ರಿ (ವ್ಯಕ್ತಿ ಚಿತ್ರಣ)
 • ನೂರೆಂಟು ಮಾತು – 5
 • ತಲೆಬರಹ ಪತ್ರಿಕೆಯ ಹಣೆಬರಹ (ಪತ್ರಿಕೋದ್ಯಮ)
 • ವೈಯೆನ್ಕೆ ಅವರ ಕೊನೆ ಸಿಡಿ
 • ನೂರೆಂಟು ಮಾತು – 6 (ಅಂಕಣ ಬರಹ)
 • ಪತ್ರಿಕೋದ್ಯಮ ಪಲ್ಲವಿ
 • ಸ್ಪೂರ್ತಿಸೆಲೆ
 • ನಾನೇಕೆ ಮಂತ್ರಿಯತ್ತ ಬೂಟನ್ನೆಸೆದೆ?
 • ಸುದ್ದಿಮನೆಕತೆ
 • ಅಂಜಿಕೆಯಿಲ್ಲದ ಕರಂಜಿಯಾ
 • ನಿಮ್ಮಷ್ಟು ಸುಖಿ ಯಾರಿಲ್ಲ - ನಿಮಗೇಕೆ ಅದು ಗೊತ್ತಿಲ್ಲ?
 • ನೂರೆಂಟು ಮಾತು-೭
 • ಲಾಲ್ ಕೃಷ್ಣ ಅಡ್ವಾಣಿಯವರ ಜೀವನ ಚರಿತ್ರೆಯ ಕನ್ನಡ ಅನುವಾದ.
 • ಅಜಾತಶತ್ರು - ಅಟಲ್ ಬಿಹಾರಿ ವಾಜಪೇಯಿಯವರ ಜೀವನಚರಿತ್ರೆಯ ಕನ್ನಡ ಅನುವಾದ.
 • ಬಾನಯಾನ - ಕ್ಯಾಪ್ಟನ್ ಗೋಪಿನಾಥ್ ಅವರ ಆತ್ಮಕತೆ 'ಸಿಂಪ್ಲೀ ಫ್ಲೈಯಿಂಗ್' ಪುಸ್ತಕದ ಕನ್ನಡ ಅನುವಾದ.
 • ಅಷ್ಟಕ್ಕೂ ನಾ ಹೇಳೋದು ಇಷ್ಟು - ಸ್ವಪನ್ ಸೇಠ್ ಅವರ ಪುಸ್ತಕದ ಅನುವಾದ

ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಜೊತೆ ಹದಿನಾಲ್ಕು ದಿನ ರಷ್ಯಾ, ಆಸ್ಟ್ರೇಲಿಯಾ, ಯುಕ್ರೇನ್, ಐಸ್ ಲ್ಯಾಂಡ್ನಲ್ಲಿ ಪ್ರವಾಸ ಮಾಡಿದ ಅನುಭವ ಇವರದು. ಇಪ್ಪತ್ತಕ್ಕೂ ಹೆಚ್ಚು ದೇಶಗಳನ್ನು ಸುತ್ತಿದ್ದಾರೆ.

ಪ್ರಶಸ್ತಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]