ಕರ್ನಾಟಕ ರಕ್ಷಣಾ ವೇದಿಕೆ
ಪ್ರಕಾರ: | ಸಾರ್ವಜನಿಕ ಸಂಸ್ಥೆ |
---|---|
ಸ್ಥಾಪನೆ: | {{{ ಸ್ಥಾಪನೆ }}} |
ಕೇಂದ್ರ ಸ್ಥಳ: | ಬೆಂಗಳೂರು, ಕರ್ನಾಟಕ, ಭಾರತ |
ಮುಖ್ಯವಾದ ಸಿಬ್ಬಂದಿ: | ಶ್ರೀ ನಾರಾಯಣ ಗೌಡ (ಅಧ್ಯಕ್ಷರು) |
ಅಂತರ್ಜಾಲ: | www |
ಕರ್ನಾಟಕ ರಕ್ಷಣಾ ವೇದಿಕೆ ಅಥವಾ ಕ.ರ.ವೆಕರ್ನಾಟಕದ ಅತಿ ದೊಡ್ಡ ಕನ್ನಡಪರ ಸಂಘಟನೆಯಾಗಿದ್ದು, ವಿಶ್ವದಾದ್ಯಂತ ಸುಮಾರು ೫೦ ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ. ಇದನ್ನು ಶ್ರೀ ನಾರಾಯಣ ಗೌಡ ಮತ್ತು ಜಾಣಗೆರೆ ವೆಂಕಟರಾಮಯ್ಯ ಸ್ಥಾಪಿಸಿದ್ದು, ಗೌಡರ ಅಧ್ಯಕ್ಷತೆಯಲ್ಲಿ ಕರ್ನಾಟಕದ ಎಲ್ಲಾ ೩೧ ಜಿಲ್ಲೆಗಳಿಗೂ ಹಬ್ಬಿದೆ.[೧] ಈ ಸಂಘಟನೆಯು "ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು"ಯೆಂಬ ಘೋಷಣೆಯಡಿ ಕಾರ್ಯ ನಿರ್ವಹಿಸುತ್ತಿದೆ ಹಾಗೂ ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧವಿಲ್ಲ.
ಇತಿಹಾಸ[ಬದಲಾಯಿಸಿ]
ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎನ್ನುವ ಘೋಷಣ ವಾಕ್ಯದೊಂದಿಗೆ ೧೯೯೯ರಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ರಕ್ಷಣಾ ವೇದಿಕೆ ಇಂದು ನಾಡಿನ ಅತಿ ದೊಡ್ಡ ಬಲಿಷ್ಟ ಕನ್ನಡ ಪರ ಸಂಘಟನೆಯಾಗಿ, ಹೆಮ್ಮರವಾಗಿ ಬೆಳೆದು ನಿಂತಿದೆ.