ನಾರಾಯಣ ಗೌಡ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
![]() | ಈ ಲೇಖನವು ಅಪೂರ್ಣವಾಗಿದೆ. |
ಶ್ರೀ ಟಿ ಏ ನಾರಾಯಣ ಗೌಡರು ಕನ್ನಡಪರ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆ (ಕ.ರ.ವೇ)ಯ ಸ್ಥಾಪಿತರಲ್ಲೊಬ್ಬರು ಹಾಗು ಸದ್ಯದ ಅಧ್ಯಕ್ಷರು. ಕ.ರ.ವೇ ಇಷ್ಟು ದೊಡ್ಡ ಸಂಘಟನೆಯಾಗುವಲ್ಲಿ ನಾರಾಯಣ ಗೌಡರು ಪ್ರಮುಖ ಪಾತ್ರ ವಹಿಸಿದ್ದಾರೆ. ಇಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದ ಎಲ್ಲೆಡೆ ತನ್ನ ಸದಸ್ಯರನ್ನು ಹೊಂದಿದೆ.
ಇತಿಹಾಸ[ಬದಲಾಯಿಸಿ]
ನಾರಾಯಣಗೌಡರು ಅರಸಿಕೆರೆ ತಾಲ್ಲೂಕಿನಲ್ಲಿ ಜೂನ್ ೧೦, ೧೯೬೭ ರಂದು ಶ್ರೀ ಅನಂತಯ್ಯ ಮತ್ತು ಶ್ರೀಮತಿ ಗೌರಮ್ಮ ದಂಪತಿಗೆ ಹುಟ್ಟಿದರು. ಕಿರಿ ವಯಸ್ಸಿನಲ್ಲೆ ಹೋರಾಟದ ಹಾದಿ ಹಿಡಿದ ಇವರು, ೯ನೇ ತರಗತಿ ಮುಗಿಯುತ್ತಲೆ ಒಂದು ತಮಿಳು ಆರ್ಕೆಸ್ಟ್ರ ವಿರುದ್ಧ ಹೋರಾಡಿ, ಎರಡು ದಿನಗಳ ಕಾಲ ಜೈಲುವಾಸ ಅನುಭವಿಸಿದರು. ಇದರಿಂದ ತಮ್ಮ ಮನೆಯಲ್ಲಿ ಗೊಂದಲವುಂಟಾಗಿ ಮುಂಬಯಿಗೆ ಹೋದರು. ಅಲ್ಲಿಯೇ ೬ ವರ್ಷಗಳ ಕಾಲ ಐಸ್-ಕ್ರೀಮ್ ಕಾರ್ಖಾನೆಯಲ್ಲಿ ದುಡಿದು ಬೆಂಗಳೂರಿಗೆ ಮರಳಿ ವೈಶ್ಯ ಬ್ಯಾಂಕಿನಲ್ಲಿ ಕೆಲಸ ಪ್ರಾರಂಭಿಸಿದರು. ತದನಂತರ ತಮ್ಮದೇ "ಶ್ರೀಮಾತ" ಧ್ವನಿ ಮುದ್ರಣಾ ಕಂಪನಿಯೊಂದು ಸ್ಥಾಪಿಸಿದರು.