ರಾಸಾಯನಿಕ ಗೊಬ್ಬರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರಾಣಿಗಳ ಗೊಬ್ಬರದಲ್ಲಿ ಅವುಗಳ ಮಲ ಹಾಗು ಮೂತ್ರ ಹೀರಿಕೊಳ್ಳುವ ಗಿಡದ ಭಾಗಗಳು ಸಹ ಸೇರಿಕೊಳ್ಳುತ್ತವೆ

ರಾಸಾಯನಿಕ ಗೊಬ್ಬರ ಪ್ರಾಣಿ ಅಥವಾ ಪಕ್ಷಿಗಳ ಮಲದಿಂದ ತಯಾರಿಸಲಾಗುತ್ತದೆ.ಇದನ್ನು ವ್ಯವಸಾಯದಲ್ಲಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಉಪಯೋಗಿಸುತ್ತಾರೆ.ರಾಸಾಯನಿಕ ಗೊಬ್ಬರದಲ್ಲಿ ಸಾರಜನಕ ಹಾಗು ಇನ್ನಿತರ ಪೋಷಕವಾದ ಅಂಶಗಳಿವೆ.ಇದರಿಂದ ಮಣ್ಣಿನಲ್ಲಿರುವ ಗೊಬ್ಬರವಾಗುವ ಕೊಳೆತ ಸೇಂದ್ರಿಯ ವಸ್ತುಗಳು ಹೆಚ್ಚುತ್ತವೆ.

ವಿಧಗಳು[ಬದಲಾಯಿಸಿ]

  • ಪ್ರಾಣಿಗಳ ಗೊಬ್ಬರ:ಇದು ಬಹುಮುಖ್ಯವಾಗಿ ಪ್ರಾಣಿಗಳ ಮಲದಿಂದ ಕೂಡಿದ್ದು ಇದರ ಜೊತೆಯಲ್ಲಿ ಪ್ರಾಣಿಗಳ ಮಲ ಹಾಗು ಮೂತ್ರವನ್ನು ಹೀರಿಕೊಳ್ಳುವ ಗಿಡದ ಭಾಗಗಳು ಸಹ ಸೇರಿಕೊಳ್ಳುತ್ತದೆ.ವಿವಿಧ ಪ್ರಾಣಿಗಳ ಗೊಬ್ಬರದ ಗುಣಮಟ್ಟವು ಬೇರೆಯಾಗಿದ್ದು ನಾವು ಉಪಯೋಗಿಸುವ ಗೊಬ್ಬರದ ಪ್ರಾಮಾಣದಲ್ಲಿ ಸಹ ವ್ಯತ್ಯಾಸವಿರುತ್ತದೆ.ಉದಾಹರಣೆಗೆ ಕುದುರೆಗಳು,ದನಗಳು,ಹಂದಿಗಳು,ಕುರಿ,ಕೋಳಿಗಳು,ಮೊಲಗಳು,ಬಾವುಲಿಗಳು ಇನ್ನಿತರ ಜೀವಿಗಳಿಂದ ಬರುವ ಗೊಬ್ಬರಗಳಲ್ಲಿ ತಮ್ಮದೇ ಆದ ವಿವಿಧ ಲಕ್ಷಣಗಳಿರುತ್ತವೆ.ಕುರಿ ಗೊಬ್ಬರದಲ್ಲಿ ಸಾರಜನಕ ಹಾಗು ಸಸ್ಯಕ್ಷಾರ ಹೆಚ್ಚಿನ ಪ್ರಮಾಣದಲ್ಲಿದ್ದು,ಹಂದಿಯ ಗೊಬ್ಬರದಲ್ಲಿ ಈ ಎರಡು ಸಹ ಕಡಿಮೆ ಪ್ರಮಾಣದಲ್ಲಿದೆ.ಕುದುರೆಗಳು ಮುಖ್ಯವಾಗಿ ಹುಲ್ಲು ಹಾಗು ಅಲುಬುಗಳನ್ನು ತಿನ್ನುವುದರಿಂದ ಅದರ ಗೊಬ್ಬರದಲ್ಲಿ ಹುಲ್ಲು ಹಾಗು ಅಲುಬುಗಳ ಬೀಜಗಳು ಸಹ ಇರುತ್ತದೆ.ಏಕೆಂದರೆ ಅವು ದನಗಳಂತೆ ಬೀಜಗಳನ್ನು ಜೀರ್ಣಿಸಿಕೊಳ್ಳುವುದಿಲ್ಲ.ಕೋಳಿಗಳ ಮಲದಿಂದ ತಯಾರಿಸಿದ ಗೊಬ್ಬರದಲ್ಲಿ ಸಾರಜನಕ ಹಾಗು ಸಸ್ಯಕ್ಷಾರ ಎರಡೂ ಹೆಚ್ಚಿನ ಪ್ರಮಾಣದಲ್ಲಿದೆ.ಪ್ರಾಣಿಗಳ ಗೊಬ್ಬರವು ಅವುಗಳ ಇತರ ಉತ್ಪನ್ನಗಳಾದ ಉಣ್ಣೆ,ರಕ್ತ,ಮೂಳೆ,ಪುಕ್ಕಗಳಿಂದ ಮಲಿನಗೊಳ್ಳುವ ಸಾಧ್ಯತೆಗಳು ಸಹ ಇದೆ.
  • ಮನುಷ್ಯನ ಗೊಬ್ಬರ:ಕೆಲವರು ಮನುಷ್ಯನ ಗೊಬ್ಬರವನ್ನು ಮನುಷ್ಯನ ಮಲಕ್ಕೆ ಹೋಲಿಸುತ್ತಾರೆ.ಇತರ ಗೊಬ್ಬರದಂತೆ ನಾವು ಇದನ್ನು ಸಹ ಉಪಯೋಗಿಸಬಹುದು.
  • ಹಸಿರು ಗೊಬ್ಬರ:ಮಣ್ಣಿನಲ್ಲಿರುವ ಕೊಳೆಯದ ಗಿಡಗಳ ಭಾಗಗಳನ್ನು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಉಳುಮೆ ಮಾಡುವ ಪದ್ಧತಿಯಿಂದ ಬರುವ ಗೊಬ್ಬರವನ್ನು ಹಸಿರು ಗೊಬ್ಬರ ಎನ್ನುತ್ತಾರೆ.ದ್ವಿದಳ ಧಾನ್ಯ ಸಸ್ಯಗಳನ್ನು ಮುಖ್ಯವಾಗಿ ಉಪಯೋಗಿಸುತ್ತಾರೆ.ಇವು ತಮ್ಮ ಬೇರಿನ ಗಂಟಿನಲ್ಲಿರುವ ರೈಜೋಬಿಯಂ ಬ್ಯಾಕ್ಟೀರಿಯದ ಸಹಾಯದಿಂದ ಸಾರಜನಕವನ್ನು ಮಣ್ಣಿನಲ್ಲಿ ನೆಲೆಗೊಳಿಸುತ್ತದೆ.[೧].ಹಸಿರು ಗೊಬ್ಬರವನ್ನು ಗಿಡಗಳು ಹೂಗಳನ್ನು ಬಿಡುವ ಮುನ್ನವೇ ಮಣ್ಣಿನಲ್ಲಿ ಸಂಯೋಜಿಸಬೇಕು, ಏಕೆಂದರೆ ಅವುಗಳನ್ನು ಮುಖ್ಯವಾಗಿ ತಮ್ಮ ಹಸಿರು ಎಲೆಗಳಿಗಾಗಿ ಬೆಳೆಸಲಾಗುತ್ತದೆ.ಇದರಿಂದ ಫಲವತ್ತತೆ ಹೆಚ್ಚುತ್ತದೆ.ನಾವು ಇಂತಹ ಉಳುಮೆಯನ್ನು ಬೆಳೆ ನೆಟ್ಟುವ ಮುಂಚೆ ಮಾಡಬೇಕು.ಏಕೆಂದರೆ ಈ ಕ್ರಿಯೆಗೆ ಸಾಕಷ್ಟು ಸಮಯ ಬೇಕಾಗುತ್ತದೆ.
  • ಮಿಶ್ರ ಗೊಬ್ಬರ:ಇದು ರಾಸಾಯನಿಕ ವಸ್ತುಗಳು ಕೊಳೆತ ನಂತರ ಬರುವ ಉಳಿಕೆವಸ್ತು.ಇದು ಮುಖ್ಯವಾಗಿ ಗಿಡದಿಂದ ಸಂಗ್ರಹಿಸಲ್ಪಡುತ್ತದೆ.ಆದರೆ ಕೆಲವೊಮ್ಮೆ ಪ್ರಾಣಿಗಳ ಸಗಣಿ ಸಹ ಸೇರಿಕೊಳ್ಳುತ್ತದೆ.

ಉಪಯೋಗಗಳು[ಬದಲಾಯಿಸಿ]

  • ಪ್ರಾಣಿಗಳ ಗೊಬ್ಬರ:ಕೋಳಿ ಹಾಗೂ ಹಸು ಸಗಣಿಯನ್ನು ನಮ್ಮ ಕೃಷಿ ಕ್ಷೇತ್ರದಲ್ಲಿ ಬಹಳ ವರ್ಷಗಳಿಂದ ಉಪಯೋಗಿಸುತ್ತಾರೆ.ಇದರಿಂದ ನಮ್ಮ ಮಣ್ಣಿನ ರಚನೆಯು ಹೆಚ್ಚು ನೀರು ಹಾಗು ಪೌಷ್ಟಿಕಗಳನ್ನು ಹಿಡಿಯುವ ಹಾಗೆ ವಿನ್ಯಾಸಗೊಳ್ಳುತ್ತದೆ.ಇದರಿಂದಾಗಿ ನಮ್ಮ ಭೂಮಿಯ ಫಲವತ್ತತೆ ಹೆಚ್ಚುತ್ತದೆ.ಇತರ ಪ್ರಾಣಿಗಳ ಗೊಬ್ಬರವು ಸಹ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ.ಇದರಿಂದ ನಮ್ಮ ಗಿಡಗಳ ಪೌಷ್ಟಿಕಾಂಶಗಳು ಸಹ ಹೆಚ್ಚುತ್ತದೆ.ಇಂಪಿಲ್ಲದ ವಾಸನೆಬರುವಂತಹ ಗೊಬ್ಬರಗಳನ್ನು ಮಣ್ಣಿನೊಳಗೆ ಹಾಕುತ್ತಾರೆ.ಇದರಿಂದಾಗಿ ಅದರ ವಾಸನೆ ಕಡಿಮೆಯಾಗುತ್ತದೆ.ತರಕಾರಿಗಳಲ್ಲಿ ಕಡಿಮೆ ಮಟ್ಟದ ಪ್ರೋಟೀನ್ ಇರುವುದರಿಂದ ಸಸ್ಯಹಾರಿಗಳಿಂದ ಬರುವ ವಾಸನೆ ಮಾಂಸಹಾರಿ ಹಾಗು ಸರ್ವಭಕ್ಷ್ಯಗಳಿಂದ ಬರುವ ವಾಸನೆಗಿಂತ ಕಡಿಮೆಯಾಗಿರುತ್ತದೆ.ಆದರೂ ಸಹ ಆಮ್ಲಜನಕವಿಲ್ಲದೆ ಹುದುಗುವಿಕೆಯಾದಂತಹ ಸಸ್ಯಾಹಾರಿಗಳ ಗೊಬ್ಬರವು ದುರ್ವಾಸನೆಯನ್ನು ನೀಡುತ್ತದೆ.ಕೋಳಿ ಹಿಕ್ಕೆಗಳನ್ನು ಸಹ ಕೊಳೆತ ನಂತರೆ ಉಪಯೋಗಿಸಬೇಕು.ಹಸಿ ಗೊಬ್ಬರವನ್ನು ಉಪಯೋಗಿಸುವುದರಿಂದ ಗಿಡಗಳಿಗೆ ಹಾನಿಯಾಗುತ್ತದೆ.
  • ಆಲ್ಬಂ ಗ್ರೇಕಂ/ಸ್ಟರ್ಕಸ್ ಕೆನಿಸ್ ಒಫಿಸಿನಾಲೆ,ಇದು ನಾಯಿ ಅಥವಾಾ ಕತ್ತೆಕಿರುಬದ ಗೊಬ್ಬರ.ಇದನ್ನು ಗಾಳಿಗೆ ತೆರೆದಿಟ್ಟರೆ ಬಿಳಿಯಾಗುತ್ತದೆ.ಇದನ್ನು ಗಂಟಳಿನ ಉರಿಯುವಿಕೆಯನ್ನು ಕಡಿಮೆ ಮಾಡಲು ಜೇನು ತುಪ್ಪದ ಜೊತೆಗೆ ಉಪಯೋಗಿಸುತ್ತಿದ್ದರು.ಗಾಯಗಳಿಗೆ ಔಷಧಲೇಪವಾಗಿಯೂ ಸಹ ಇದನ್ನು ಉಪಯೋಗಿಸುತ್ತಿದ್ದರು.

ನಾವು ಮುಖ್ಯವಾಗಿ ಬಳಸುವ ಗೊಬ್ಬರ

  • ಕೋಳಿ ಗೊಬ್ಬರ:ಕೋಳಿ ಗೊಬ್ಬರದಲ್ಲಿ ಸಾರಜನಕ ಹೆಚ್ಚಾಗಿದ್ದು,ಕಡಿಮೆ ಸಾರಜನಕವಿರುವ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಉಪಯೋಗಿಸುತ್ತಾರೆ.ಬೇರೆ ಪ್ರಾಣಿಗಳ ಗೊಬ್ಬರಗಳಿಗೆ ಹೋಲಿಸಿದರೆ ಇದರಲ್ಲಿ ಸಾರಜನಕ,ಪೊಟ್ಯಾಶಿಯಮ್,ರಂಜಕ ಈ ಎಲ್ಲವೂ ಹೆಚ್ಚಿನ ಪ್ರಮಾಣದಲ್ಲಿದೆ.ಈ ಗೊಬ್ಬರವನ್ನು ನಾವು ಮುಚ್ಚಿದ ಸ್ಥಳದಲ್ಲಿ ಇಡಬೇಕು ಹಾಗು ಅದು ತನ್ನ ಧ್ರವ ರೂಪವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು,ಏಕೆಂದರೆ ಅದರ ಮೂತ್ರದಲ್ಲಿಯೇ ಹೆಚ್ಚಿನ ಪ್ರಮಾಣದ ಸಾರಜನಕವಿದೆ.ಕೋಳಿ ಗೊಬ್ಬರದಲ್ಲಿ ಶೇಕಡವಾರು ೫ ರಷ್ಟು ಸಾರಜನಕವಿರುತ್ತದೆ.ಒಂದು ಕೋಳಿ ಸುಮಾರು ೮-೧೧ ಪೌಂಡ್ ಗೊಬ್ಬರವನ್ನು ನೀಡುತ್ತದೆ.ಇದನ್ನು ಉಪಯೋಗಿಸಿ ನಾವು ಮನೆಯಲ್ಲಿಯೆ ರಸಗೊಬ್ಬರವನ್ನು ತಯಾರಿಸಬಹುದು.
ಸಗಣಿಯನ್ನು ನಾವು ಹಸುವಿನ ಗೊಬ್ಬರ ಎಂದು ಕರೆಯಬಹುದು
  • ಸಗಣಿ: ಇದನ್ನು ಹಸುವಿನ ಗೊಬ್ಬರ ಎಂದೂ ಕರೆಯುತ್ತಾರೆ.ಇದು ಕಪ್ಪು ಅಥವಾ ಹಸಿರು ಬಣ್ಣದಲ್ಲಿರುತ್ತದೆ.ಈ ಗೊಬ್ಬರವು ದನ,ಎಮ್ಮೆ,ಚಮರೀಮೃಗ(ಯಾಕ್) ಎಂಬ ಪ್ರಾಣಿಗಳಿಂದ ಬರುವ ತ್ಯಾಜ್ಯ ಉತ್ಪನ್ನ[೨].ಸಗಣಿಯು ಈ ಪ್ರಾಣಿಗಳು ತಿನ್ನುವಂತಹ ಗಿಡದ ಭಾಗಗಳ ಜೀರ್ಣಗೊಳ್ಳದ ಶೇಷ.ಇದರಲ್ಲಿ ಖನಿಜಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವದೆ.ಸಗಣಿಯನ್ನು ಎರೆಹುಳುಗಳು ಅಥವಾ ಸಗಣಿ ಜೀರುಂಡೆಗಳು ಪುನರುಪಯೋಗಿಸದಿದ್ದರೆ ಅದು ಒಣಗುತ್ತದೆ.ಇದರ ಮೇಲೆ ದನದ ಮೇವು ಒಳ್ಳೆಯ ರೀತಿಯಲ್ಲಿ ಬೆಳೆಯುತ್ತದೆ .ನಮ್ಮ ಪ್ರಪಂಚದ ವಿವಿಧ ಭಾಗಗಳಲ್ಲಿ ಒಣಗಿದ ಸಗಣಿಯನ್ನು ಇಂಧನವನ್ನಾಗಿ ಉಪಯೋಗಿಸುತ್ತಾರೆ.ಸಗಣಿಯನ್ನು ಜೈವಿಕ ಅನಿಲವನ್ನು ಉತ್ಪತ್ತಿಮಾಡಲು ಉಪಯೋಗಿಸುತ್ತಾರೆ,ಇದರಿಂದ ನಾವು ವಿದ್ಯುತ್ ತಯಾರಿಸಬಹುದು.ಈ ಜೈವಿಕ ಅನಿಲದಲ್ಲಿ ಮೀಥೇನ್ ಹೆಚ್ಚಾಗಿದ್ದು,ಇದನ್ನು ನಮ್ಮ ದೇಶದ ಗ್ರಾಮೀಣ ಭಾಗಗಳಲ್ಲಿ ನವೀಕರಿಸಬಹುದಾದ ವಿದ್ಯುತ್ ಮೂಲವನ್ನಾಗಿ ಉಪಯೋಗಿಸುತ್ತಾರೆ.ಆಫ್ರಿಕ್ಕಾದ ಕೆಲವು ಭಾಗಗಳಲ್ಲಿ ಸೊಳ್ಳೆಗಳನ್ನು ಹೆಮ್ಮೆಟ್ಟಿಸಲು ಸುಟ್ಟ ಸಗಣಿಯನ್ನು ಉಪಯೋಗಿಸುತ್ತಾರೆ.ನಮ್ಮ ದೇಶದ ಹಳ್ಳಿಗಳಲ್ಲಿ ಸಗಣಿಯನ್ನು ನೀರಿನ ಜೊತೆ ಬೆರೆಸಿ ಮನೆ ಮುಂದೆ ಸಿಂಪಡಿಸುತ್ತಾರೆ,ಇದರಿಂದ ಕೀಟಗಳು ಕಡಿಮೆಯಾಗುತ್ತವೆ.ಒಣಗಿದ ಸಗಣಿಯನ್ನು ಕಟ್ಟಿಗೆಯ ಬದಲಾಗಿ ಉಪಯೋಗಿಸುತ್ತಾರೆ.ಸಗಣಿಯು ಅನೇಕ ಪ್ರಾಣಿಗಳು ಹಾಗುಶಿಲೀಂಧ್ರಗಳ ವರ್ಗಗಳಿಗೆ ಆಹಾರವಾಗುತ್ತದೆ.ಈ ಮೂಲಕ ಅದು ಮುರಿದು ಪುನರುಪಯೋಗಿಸುವ ರೀತಿಯಲ್ಲಿ ನಮ್ಮ ಆಹಾರಚಕ್ರ ಹಾಗು ಮಣ್ಣಿನಲ್ಲಿ ಸೇರಿಕೊಳ್ಳುತ್ತದೆ.
ದ್ರವದ ರೂಪದಲ್ಲಿರುವ ಗೊಬ್ಬರ
  • ದ್ರವ ಗೊಬ್ಬರ:ಇದು ದ್ರವದ ರೂಪದಲ್ಲಿರುವ ಗೊಬ್ಬರ.ಗೊಬ್ಬರವನ್ನು ನೀರಿನ ಜೊತೆಗೆ ಬೆರೆಸಿದಾಗ ಅದು ದ್ರವ ಗೊಬ್ಬರವಾಗಿ ಬದಲಾಗುತ್ತದೆ.ಇದನ್ನು ಗೊಬ್ಬರದ ಬದಲಾಗಿ ಉಪಯೋಗಿಸುತ್ತಾರೆ.ಆದರೆ ನಾವು ಇದನ್ನು ಸಮವಾಗಿ ಸಿಂಪಡಿಸಲು ಸಾಧ್ಯವಿಲ್ಲ.ಇದು ಸಹ ಗಿಡದ ಪೋಷಕಾಂಶಗಳನ್ನು ಹೆಚ್ಚಿಸುತ್ತದೆ.
  • ಒಣ ಗೊಬ್ಬರ:ತೇವವಾದ ಗೊಬ್ಬರಕ್ಕಿಂತ ಒಣ ಗೊಬ್ಬರವು ಹೆಚ್ಚು ಉಪಯುಕ್ತ.ಏಕೆಂದರೆ ಅದನ್ನು ಸುಲಭವಾಗಿ ಸುಡಬಹುದು.ಒಣ ಗೊಬ್ಬರದಲ್ಲಿ ಶೇಕಡವಾರು ೩೦ಕ್ಕಿಂತ ಕಡಿಮೆ ತೇವಾಂಶ ಭಾಗವಿರುತ್ತದೆ.
  • ಒಣ ಗೊಬ್ಬರದ ಪ್ರಯೋಜನಗಳು
  1. ಬೇರೆ ಆಧುನಿಕ ಇಂಧನಗಳಿಗೆ ಹೋಲಿಸಿದರೆ ಇದು ಅಗ್ಗ.
  2. ಸುಲಭವಾಗಿ ದೊರೆಯುತ್ತದೆ-ಬಹಳ ದೂರ ನಡೆಯುವ ಅವಶ್ಯಕತೆ ಇಲ್ಲ.
  3. ಕಟ್ಟಿಗೆ ಸಂಪನ್ಮೂಲಗಳ ನಾಶವನ್ನು ಕಡಿಮೆಮಾಡುತ್ತದೆ.
  4. ಕಡಿಮೆ ಪರಿಸರ ಮಾಲಿನ್ಯ.
  5. ಗೊಬ್ಬರ ವಿಲೇವಾರಿಯನ್ನು ಸುರಕ್ಷಿತ ರೀತಿಯಲ್ಲಿ ಮಾಡಬಹುದು.
  6. ಸಮರ್ಥನೀಯ ಹಾಗು ನವೀಕರಿಸಬಹುದಾದ ಶಕ್ತಿಯ ಮೂಲ.
  • ಒಣ ಗೊಬ್ಬರ ಇಂಧನ:ಒಣಗಿದ ಪ್ರಾಣಿಗಳ ಕಲ್ಮಶಗಳನ್ನು ಇಂಧನದ ಮೂಲವನ್ನಾಗಿ ಉಪಯೋಗಿಸುವುದರಿಂದ ಬರುವ ಇಂಧನವನ್ನು ಒಣ ಗೊಬ್ಬರ ಇಂಧನ ಎನ್ನುತ್ತಾರೆ.ಪ್ರಪಂಚದ ಅನೇಕ ಭಾಗಗಳಲ್ಲಿ ಇದನ್ನು ಇಂಧನವನ್ನಾಗಿ ಉಪಯೋಗಿಸುತ್ತಾರೆ.ಈ ರೀತಿಯಾಗಿ ಮಲವು ಉಪಯೋಗಕರ ರೀತಿಯಲ್ಲಿ ಮರುಬಳಕೆಯಾಗುತ್ತದೆ.

ರಾಸಾಯನಿಕ ಗೊಬ್ಬರದ ಇತರ ಉಪಯೋಗಗಳು[ಬದಲಾಯಿಸಿ]

  • ರಾಸಾಯನಿಕ ಗೊಬ್ಬರವು ಗಿಡಗಳಿಗೆ ಬೇಕಾದ ಪೋಷಕಾಂಶಗಳನ್ನು ನಿಯಮಿತ ಪ್ರಮಾಣದಲ್ಲಿ ನೀಡುತ್ತದೆ.
  • ಇದು ಮಣ್ಣಿನ ಸಿ:ಎನ್ ಅನುಪಾತವನ್ನು ನಿರ್ವಹಿಸುವುದರಲ್ಲಿ ಉಪಯುಕ್ತವಾಗುತ್ತದೆ.ಇದರಿಂದಾಗಿ ಮಣ್ಣಿನ ಫಲವತ್ತತೆ ಹಾಗು ಉತ್ಪನ್ನತೆ ಹೆಚ್ಚುತ್ತದೆ.
  • ಇದು ಮಣ್ಣಿನ ರಾಸಾಯನಿಕ ಹಾಗು ಜೈವಿಕ ಗುಣಗಳನ್ನು ಹೆಚ್ಚಿಸುತ್ತದೆ.
  • ಇದು ಪೋಷಕಾಂಶಗಳನ್ನು ಹೆಚ್ಚು ಇರಿಸಿಕೊಳ್ಳುವಂತೆ ಮಣ್ಣಿನ ರಚನೆ ಹಾಗು ವಿನ್ಯಾಸವನ್ನು ಬದಲಾಯಿಸುತ್ತದೆ.
  • ಇದು ನೀರನ್ನು ಹಿಡಿದಿರುವ ಸಾಮಥ್ಯವನ್ನು ಹೆಚ್ಚಿಸುತ್ತದೆ.
  • ಇದು ಮಣ್ಣಿನ ಜೈವಿಕ ಚಟುವಟಿಕೆಯನ್ನು ಹೆಚ್ಚಿಸುವುದರಿಂದ ,ಕೆಳಭಾಗದಲ್ಲಿರುವ ಪೋಷಕಾಂಶಗಳು ಕೂಡ ಗಿಡದ ಬೆಳವಣಿಗೆಗೆ ಲಭ್ಯವಾಗುತ್ತದೆ.
  • ಇದು ಮಣ್ಣಿನ ತೇವಾಂಶವು ಆವಿಯಾಗುವುದನ್ನು ಕಡಿಮೆಮಾಡುತ್ತದೆ.

ಮುನ್ನೆಚ್ಚರಿಕೆ ಕ್ರಮಗಳು[ಬದಲಾಯಿಸಿ]

ಗೊಬ್ಬರವು ಕೊಳೆಯುವ ಸಂಧರ್ಭದಲ್ಲಿ ತಾಪವನ್ನು ಹೊರಹಾಕುತ್ತದೆ.ಇದರಿಂದಾಗಿ ರಾಶಿಯಾಗಿ ಇಟ್ಟಂತಹ ಗೊಬ್ಬರವು ಕೆಲವೊಮ್ಮೆ ಬೆಂಕಿಹತ್ತಿಕೊಳ್ಳುವ ಸಾಧ್ಯತೆಗಳಿವೆ.ಇದರಿಂದ ಸುತ್ತಮುತ್ತಲಿನ ಗಾಳಿಯೂ ಸಹ ಮಲಿನವಾಗುತ್ತದೆ ಹಾಗು ಬೆಂಕಿಯನ್ನು ನಂದಿಸುವುದು ಬಹಳ ಕಷ್ಟ.ಆದ್ದರಿಂದ ನಾವು ಹಸಿಗೊಬ್ಬರವನ್ನು ಸಂಗ್ರಹಿಸುವಾಗ ಅದರ ಪ್ರಮಾಣವನ್ನು ಸರಿಯಾಗಿ ನೋಡಿಕೊಳ್ಳಬೇಕು.ಕ್ರಿಮಿ ಕೀಟಗಳು ಮಲವನ್ನು ನೀರು ಹಾಗು ಆಹಾರಕ್ಕೆ ಸಾಗಿಸುವ ಸಾಧ್ಯತೆ ಇದೆ.ಇದರಿಂದಾಗಿ ನಮಗೆ ರೋಗಗಳು ಸಹ ಬರುತ್ತವೆ.

ಹೊರಗಿನ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖನಗಳು[ಬದಲಾಯಿಸಿ]

  1. "ರೈಜೋಬಿಯಂ".
  2. "ಸಗಣಿ".