ರಕ್ತಚಂದನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ರಕ್ತಚಂದನ
ರಕ್ತಚಂದನ ಮರ

ರಕ್ತಚಂದನ ದಕ್ಷಿಣ ಭಾರತದ ಪರ್ವತ ವ್ಯಾಪ್ತಿಯ ಸ್ಥಳೀಯ ಸಸ್ಯ. ಕೆಂಪು ಸ್ಯಾಂಡಲ್‍ವುಡ್, ಕೆಂಪು ಚಂದನ, ಟಿರೋಕಾರ್ಪಸ್ ಸ್ಯಾಂಟಾಲಿನಸ್ ಇವು ಈ ಮರಕ್ಕಿರುವ ಸಾಮಾನ್ಯ ಹೆಸರುಗಳು. ಈ ಮರವು ದಕ್ಷಿಣ ಭಾರತದಲ್ಲಿ ಸ್ಥಳೀಯವಾಗಿ ಬೆಳೆಯುವ ಆರೊಮ್ಯಾಟಿಕ್ ಸ್ಯಾಂಟಾಲಿನಸ್ ಸ್ಯಾಂಡಲ್‍ವುಡ್ ಮರಗಳ ಗುಂಪಿಗೆ ಸೇರುತ್ತವೆ.[೧]

ದೇಶೀಯ ಹೆಸರುಗಳು[ಬದಲಾಯಿಸಿ]

ಬಂಗಾಳಿ: ರಾಕ್ಷ ಚಂದನ್, ಗುಜರಾತಿ: ರತಂಜಲಿ; ಹಿಂದಿ: ಲಾಲ್ ಚಂದನ್, ರಾಗತ್ ಚಂದನ್, ರುಖ್ಟೋ ಚಂದನ್, ಅಂಡಮ್, ಕನ್ನಡ: ರಕ್ತಚಂದನ, ಮರಾಠಿ: ತಂಬದಾ ಚಂದನ್, ಒರಿಯಾ: ರಾಕ್ಷಚಂದನ್, ಮಲಯಾಳಂ: ಪತರಂಗಂ, ತಿಲಪರ್ಣಿ, ರಾಕ್ಷ ಚಂದನಮ್, ತಮಿಳು: ಚೆಂಜಂಡನಮ್, ಸೆಮರಮಮ್, ಸಿವಪ್ಪು ಚಂದನಂ, ತೆಲುಗು: ಅಗರು ಗಂಧಮು, ಎರಾಚಂಡನಂ, ರಾಕ್ಷಚಂಡನಂ, ರಕ್ಷಾ ಗಂಧಮು[೨]

ವಿವರಣೆ[ಬದಲಾಯಿಸಿ]

ರಕ್ತಚಂದನ ಎಂಬುದು ಬಹು ಬೇಡಿಕೆಯ ಸಣ್ಣ ಮರವಾಗಿದೆ. ಇದು ೫೦-೧೫೦ಸೆಂಮೀ ವ್ಯಾಸವಿದೆ ಹಾಗೂ ಸುಮಾರು ೨೬ ರಿಂದ ೩೦ ಅಡಿ ಎತ್ತರಕ್ಕೆ ಬೆಳೆಯುತ್ತದೆ. ಗಿಡ ಸಣ್ಣದಿರುವಾಗ ವೇಗವಾಗಿ ಬೆಳೆಯುತ್ತದೆ, ಮೂರು ವರ್ಷಗಳಲ್ಲಿ ೪-೫ ಮೀಟರ್ (೧೬ ಅಡಿ) ಎತ್ತರಕ್ಕೆ ಬೆಳೆಯುತ್ತದೆ. ಇದರ ಎಲೆಗಳು ೩-೯ಸೆಂ.ಮೀ. ಉದ್ದವಿದ್ದು ಮೂರು ಪದರಗಳನ್ನು ಹೊಂದಿದೆ.[೩]

ಉಪಯೋಗ[ಬದಲಾಯಿಸಿ]

ರಕ್ತಚಂದನ ಮರದ ತಿರುಳು
  • ಮರದ ದಿಮ್ಮಿ

ಚೀನಾದ ಕ್ವಿಂಗ್ ರಾಜವಂಶದ ಚಕ್ರವರ್ತಿಗಳು ಬಳಸುತ್ತಿದ್ದ ರಕ್ತಚಂದನದ ಒಂದು ಕುರ್ಚಿಯನ್ನು ಇಂದು ಕಾಣಬಹುದಾಗಿದೆ. ರಕ್ತಚಂದನದಿಂದ ತಯಾರಿಸಲ್ಪಟ್ಟ ವಸ್ತುಗಳು ಹಾಗೂ ಪೀಠೋಪಕರಣಗಳಿಗೆ ಬಹಳಷ್ಟು ಬೇಡಿಕೆಯಿದ್ದು ದುಬಾರಿಯಾಗಿದೆ.

ಔಷಧೀಯ ಮೌಲ್ಯಗಳು[ಬದಲಾಯಿಸಿ]

ರಕ್ತಚಂದನವನ್ನು ಸಾಂಪ್ರದಾಯಿಕ ಗಿಡಮೂಲಿಕೆ ಔಷಧಿಗಳಲ್ಲಿ ಚರ್ಮ ರೋಗಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ಇವುಗಳನ್ನು ಆಂಟಿಪೈರೆಟಿಕ್ (ಜ್ವರಹರ), ಆಂಟಿ-ಇನ್ಫ್ಲೆಮೇಟರಿ, ಆಂಥೆಲ್ಮಿಂಟಿಕ್, ಟಾನಿಕ್, ಹೆಮರೇಜ್, ಡೈರೆಂಟರಿ, ಕಾಮೋತ್ತೇಜಕ, ವಿರೋಧಿ ಹೈಪರ್ಗ್ಲೈಸೆಮಿಕ್ ಮತ್ತು ಡೈಆಫೋರ್ಟಿಕ್ ಆಗಿ ಬಳಸುತ್ತಾರೆ. ಕಾಂಡದ ತಿರುಳನ್ನು ಔಷಧಿಯಾಗಿ ಬಳಸಲಾಗುತ್ತದೆ. ಜೀರ್ಣಾಂಗ ತೊಂದರೆಗಳು, ದ್ರವ ಧಾರಣ, ರಕ್ತಶುದ್ಧೀಕರಣ ಮತ್ತು ಕೆಮ್ಮಿನ ಚಿಕಿತ್ಸೆಗಾಗಿ ಕೆಂಪು ಶ್ರೀಗಂಧದ ಮರವನ್ನು ಬಳಸಲಾಗುತ್ತದೆ. ವಿವಿಧ ಔಷಧೀಯ ಹಾಗೂ ಆಹಾರ ಉಪಯೋಗಿ ಪಾನೀಯಗಳ ಉತ್ಪಾದನೆಯಲ್ಲಿ ರಕ್ತಚಂದನವನ್ನು ಸುವಾಸನೆಗಾಗಿ ಬಳಸಲಾಗುತ್ತದೆ.[೫]

ಸಂರಕ್ಷಣೆ ಸ್ಥಿತಿ[ಬದಲಾಯಿಸಿ]

ದಕ್ಷಿಣ ಭಾರತದಲ್ಲಿ ಅದನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ ಐಯುಸಿಎನ್ ಸಂಸ್ಥೆಯು ರಕ್ತಚಂದನವನ್ನು ನಶಿಸಿ ಹೋಗುತ್ತಿರುವ ಪ್ರಭೇದವಾಗಿ ಪಟ್ಟಿಮಾಡಿದೆ.

ಉಲ್ಲೇಖ[ಬದಲಾಯಿಸಿ]

  1. http://tropical.theferns.info/viewtropical.php?id=Pterocarpus+santalinus
  2. "ಆರ್ಕೈವ್ ನಕಲು". Archived from the original on 2017-09-29. Retrieved 2018-08-16.
  3. http://vikaspedia.in/agriculture/crop-production/package-of-practices/medicinal-and-aromatic-plants/pterocarpus-santalinus
  4. https://www.webmd.com/vitamins/ai/ingredientmono-383/red-sandalwood
  5. https://www.researchgate.net/publication/259005803_Medicinal_uses_of_Hildegardia_populifolia_and_Pterocarpus_santalinus_Red_listed_and_endemic_taxa_in_Andhra_Pradesh