ವಿಷಯಕ್ಕೆ ಹೋಗು

ಕಡಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Kadapa
ಕಡಪ
Cuddapah
city
CountryIndia
Stateಆಂಧ್ರ ಪ್ರದೇಶ
RegionRayalaseema
DistrictYSR district
Government
 • BodyKadapa Municipal Corporation
Area
 • Total೧೬೪.೦೮ km (೬೩.೩೫ sq mi)
Elevation
೧೩೮ m (೪೫೩ ft)
Population
 (2011)
 • Total೩,೪೪,೦೭೮
 • Density೨,೧೦೦/km (೫,೪೦೦/sq mi)
Languages
 • Officialತೆಲುಗು, Urdu[೨]
Time zoneUTC+5:30 (IST)
PIN
516001,516002,516003,516004 [೩]
Telephone code08562[೪]
Vehicle registrationAP-04
Websitehttp://cdma.gov.in/KADAPA/ http://kadapa.nic.in/

ಕಡಪ : ಆಂಧ್ರ ಪ್ರದೇಶದ ದಕ್ಷಿಣ ಭಾಗದಲ್ಲಿರುವ ಜಿಲ್ಲೆಗಳಲ್ಲೊಂದು. ಈ ಜಿಲ್ಲೆಯ ಮುಖ್ಯಪಟ್ಟಣಕ್ಕೂ ಇದೇ ಹೆಸರಿದೆ. ಉ.ಆ.130 25' ನಿಂದ ಉ.ಆ.150 14'ವರೆಗೆ ಮತ್ತು ಪು.ರೇ.770 51' ನಿಂದ 790 29' ವರೆಗೆ ಈ ಜಿಲ್ಲೆ ಹಬ್ಬಿದೆ. ಕಡಪ ಎಂದರೆ ತೆಲುಗು ಭಾಷೆಯಲ್ಲಿ ಹೆಬ್ಬಾಗಿಲು ಎಂದರ್ಥ. ಯಾತ್ರಾ ಸ್ಥಳವಾದ ತಿರುಪತಿಗೆ ಕಡಪ ನಗರವೇ ಉತ್ತರದ ಹೆಬ್ಬಾಗಿಲಿನಂತಿದೆ. ಈ ಜಿಲ್ಲೆಯ ಉತ್ತರಕ್ಕೆ ಕರ್ನೂಲು, ದಕ್ಷಿಣಕ್ಕೆ ಚಿತ್ತೂರು, ಪಶ್ಚಿಮಕ್ಕೆ ಅನಂತಪುರ ಮತ್ತು ಪುರ್ವಕ್ಕೆ ನೆಲ್ಲೂರು ಜಿಲ್ಲೆಗಳಿವೆ. ದಖನ್ ಪ್ರಸ್ಥಭೂಮಿಯ ಮೇಲಿರುವ ಈ ಜಿಲ್ಲೆಯ ಸಾಮಾನ್ಯ ಎತ್ತರ ಸಮುದ್ರಮಟ್ಟಕ್ಕಿಂತ 1,500' ರಿಂದ 2,250'. ಜಿಲ್ಲೆಯ ದಕ್ಷಿಣ ಭಾಗದ ಮೈದಾನಗಳೂ ತಗ್ಗು ಪ್ರದೇಶಗಳೂ ಶೇಷಾಚಲಂ ಮತ್ತು ಪಾಲ್ಕೊಂಡ ಬೆಟ್ಟ ಸಾಲುಗಳಿಂದ ಪ್ರತ್ಯೇಕಗೊಂಡಿವೆ. ಈ ಜಿಲ್ಲೆಯ ಉತ್ತರ ಭಾಗದಲ್ಲಿ ಕೆಂಪುಮಣ್ಣಿನ ಭೂಮಿಯೂ ದಕ್ಷಿಣದಲ್ಲಿ ಫಲವತ್ತಾದ ಕಪ್ಪು ಮಣ್ಣಿನ ನೆಲವೂ ಇವೆ. ಕಡಪ ಜಿಲ್ಲೆಯಲ್ಲಿ ಹರಿಯುವ ಅತ್ಯಂತ ಮುಖ್ಯ ನದಿ. ಪೆನ್ನಾರ್ ಪಾಪಾಗ್ನಿ, ಚೆಯ್ಯರು, ಚಿತ್ರಾವತಿ ಮೊದಲಾದವು ಇದರ ಉಪನದಿಗಳು. ಮಳೆಗಾಲದಲ್ಲಿ ಇವು ತುಂಬಿ ಹರಿಯುತ್ತವೆ. ಕಡಪ ಕಲ್ಲುಗಳೆಂದು ಪ್ರಸಿದ್ಧವಾದ ಶಿಲೆಗಳು ಈ ಜಿಲ್ಲೆಯ ಉತ್ತರ ಭಾಗದಲ್ಲಿ ದೊರಕುತ್ತವೆ. ಇವನ್ನು ನೆಲಕ್ಕೆ ಹೆಂಚಿನಂತೆ ಹಾಸುವುದಕ್ಕೂ ಮೇಜುಗಳ ಮೇಲ್ಭಾಗಕ್ಕೂ ಉಪಯೋಗಿಸುತ್ತಾರೆ. ಕಡಪಶಿಲೆಗಳ ಅನೇಕ ಸಮಕಾಲೀನ ಶಿಲೆಗಳಲ್ಲಿ ವಜ್ರ ದೊರಕುತ್ತದೆ. ಪ್ರಸಿದ್ಧವಾದ ಗೋಲ್ಕೊಂಡ ವಜ್ರ ದೊರಕಿರುವುದು ಇಂಥ ಶಿಲಾಸ್ತರಗಳಿಂದಲೇ. ಕಡಪಶಿಲೆಗಳ ಈಶಾನ್ಯ ಭಾಗಕ್ಕೆ 49 ಕಿಮೀ ಗಳಷ್ಟು ಉದ್ದಕ್ಕೂ ಇರುವುವು ಕ್ವಾರ್ಟ್‌ಸೈಟ್ ಶಿಲೆಗಳು. ಈ ಜಿಲ್ಲೆಯ ಉನ್ನತ ಪ್ರದೇಶಗಳಲ್ಲಿ ದಟ್ಟವಾದ ಅರಣ್ಯಗಳುಂಟು. ಹುಲಿ ಚಿರತೆಗಳು ಇಲ್ಲಿಯ ವನ್ಯಮೃಗಗಳು. ಜಿಲ್ಲೆಯ ವಿಸ್ತೀರ್ಣ 15,346 ಚ.ಕಿಮೀ ಜನಸಂಖ್ಯೆ 13,42,015.

ಕಡಪ ಈ ಜಿಲ್ಲೆಯ ಮುಖ್ಯಪಟ್ಟಣ. ರೈಲುಮಾರ್ಗದಲ್ಲಿ ಚೆನ್ನೈಗೆ ವಾಯವ್ಯದಲ್ಲಿ 259 ಕಿಮೀ ದೂರದಲ್ಲಿದೆ. ಸಮುದ್ರಮಟ್ಟಕ್ಕಿಂತ 183 ಮೀ ಎತ್ತರದಲ್ಲಿದೆ. ಪೆನ್ನಾರ್ ನದಿ ಇದಕ್ಕೆ ಉತ್ತರದಲ್ಲಿ 9 ಕಿಮೀ ದೂರದಲ್ಲಿ ಹರಿಯುತ್ತದೆ. ಪುರ್ವ, ಉತ್ತರ ಮತ್ತು ದಕ್ಷಿಣಗಳಲ್ಲಿ ಬಂಡೆಗಲ್ಲುಗಳಿಂದ ತುಂಬಿದ ನಲ್ಲಮಲೈ ಮತ್ತು ಪಾಲ್ಕೊಂಡ ಬೆಟ್ಟಗಳಿರುವುದರಿಂದ ಬೇಸಗೆಯಲ್ಲಿ ಸೆಕೆ ವಿಪರೀತ. ಆಗ ಇಲ್ಲಿಯ ಉಷ್ಣತೆ 100ಲಿ ಫ್ಯಾ.ಗೂ ಹೆಚ್ಚಾಗಿರುತ್ತದೆ.

.

ರೆಫ಼ರೆನ್ಸ್ ಗಳು

[ಬದಲಾಯಿಸಿ]
  1. "Brief about Kadapa Municipal Corporation". www.cdma.gov.in. Municipal Administration & Urban Development Department, Govt. of Andhra Pradesh. Archived from the original on 16 ನವೆಂಬರ್ 2012. Retrieved 8 October 2013.
  2. http://www.languageinindia.com/april2003/urduinap.html
  3. "India Post- PIN Code Search". http://www.indiapost.gov.in/. Department of Posts, Ministry of Communications & Information Technology, Government of India. Archived from the original on 7 ಜನವರಿ 2019. Retrieved 8 October 2013. {{cite web}}: External link in |work= (help)
  4. "STD Codes (Andhra Pradesh)". Sarkaritel. 2005. Archived from the original on 2009-09-17. Retrieved 2009-10-19.
"https://kn.wikipedia.org/w/index.php?title=ಕಡಪ&oldid=1128258" ಇಂದ ಪಡೆಯಲ್ಪಟ್ಟಿದೆ