ವಿಷಯಕ್ಕೆ ಹೋಗು

ಪಿ. ಸಾಯಿನಾಥ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಾಲಗುಮ್ಮಿ ಸಾಯಿನಾಥ್
2012ರ ವಿಬ್ಜೋರ್ ಫಿಲ್ಮ್ ಫೆಸ್ಟಿವಲ್‍ನಲ್ಲಿ ಪಿ. ಸಾಯಿನಾಥ್
ಜನನ1957
ಮದ್ರಾಸ್ (ಚೆನ್ನೈ), ತಮಿಳುನಾಡು, ಭಾರತ
ವೃತ್ತಿಪತ್ರಕರ್ತ
ರಾಷ್ಟ್ರೀಯತೆಭಾರತೀಯ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಲೊಯೋಲಾ ಕಾಲೇಜು, ಜವಹರಲಾಲ್ ನೆಹರು ವಿಶ್ವವಿದ್ಯಾನಿಲಯ
ಪ್ರಮುಖ ಪ್ರಶಸ್ತಿ(ಗಳು)ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ, ಪಿ.ಯು.ಸಿ.ಎಲ್ ಹ್ಯುಮನ್ ರೈಟ್ಸ್ ಜರ್ನಲಿಸಂ ಪ್ರಶಸ್ತಿ, ರಾಜ-ಲಕ್ಷ್ಮೀ ಪ್ರಶಸ್ತಿ
ಸಂಬಂಧಿಗಳುವಿ. ಶಂಕರ ಗಿರಿ, ವಿ. ವಿ. ಗಿರಿ

ಪಾಲಗುಮ್ಮಿ ಸಾಯಿನಾಥ್ (ಜನನ 1957) ಭಾರತೀಯ ಪತ್ರಕರ್ತ ಮತ್ತು ಪತ್ರಿಕಾ ಛಾಯಾಚಿತ್ರಕಾರ. ಸಮಾಜದಲ್ಲಿನ ಸಮಸ್ಯೆಗಳು, ಗ್ರಾಮೀಣ ವಿಷಯಗಳು, ಬಡತನ ಹಾಗೂ ಭಾರತದಲ್ಲಿ ಜಾಗತೀಕರಣದ ಪರಿಣಾಮಗಳ ಬಗ್ಗೆ ತಮ್ಮ ಹೆಚ್ಚಿನ ಗಮನ ಕೇಂದ್ರೀಕರಿಸಿದವರು. ಅವರು ತಮ್ಮನ್ನು ತಾವು ‘ಗ್ರಾಮೀಣ ವರದಿಗಾರ’ ಅಥವಾ ಸರಳವಾಗಿ ‘ವರದಿಗಾರ’ ಎಂದು ಕರೆದುಕೊಂಡಿದ್ದಾರೆ. ಅವರು ಪ್ರಸ್ತುತ ದಿ ಹಿಂದೂ ದೈನಿಕ ಹಾಗೂ ಅಂತರ್ಜಾಲತಾಣ ಇಂಡಿಯಾ ಟುಗೆದೆರ್[೧] ನ ಗ್ರಾಮೀಣ ವಿಷಯಗಳ ಸಂಪಾದಕರಾಗಿದ್ದಾರೆ. ದಿ ಹಿಂದೂ ದೈನಿಕದಲ್ಲಿ ಅವರ ಕಳೆದ ಆರು ವರ್ಷಗಳ ಕೆಲವು ಕೆಲಸಗಳು ಸಂಗ್ರಹಿಸಲ್ಪಟ್ಟಿದೆ. ಅವರನ್ನು ಅಮರ್ತ್ಯ ಸೇನ್ಬರ ಮತ್ತು ಹಸಿ(ವು)ವಿನ ಪ್ರಪಂಚದ ಓರ್ವ ಶ್ರೇಷ್ಠ ಅನುಭವಶಾಲಿ”[೨] ಎಂದು ಬಣ್ಣಿಸಿದ್ದಾರೆ. ಇತ್ತೀಚೆಗೆ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯ(PARI)ವನ್ನು ಆರಂಭಿಸಿದ್ದಾರೆ.[೩]

ಆರಂಭಿಕ ಜೀವನ[ಬದಲಾಯಿಸಿ]

ಸಾಯಿನಾಥ್ ಮದ್ರಾಸ್(ಈಗ ಚೆನ್ನೈ)ನ ಪ್ರಮುಖ ಕುಟುಂಬವೊಂದರಲ್ಲಿ ಜನಿಸಿದರು. ಅವರು ಸ್ವಾತಂತ್ರ್ಯ ಹೋರಾಟಗಾರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ರಾಜಕಾರಣಿ, ಭಾರತದ ಮಾಜಿ ರಾಷ್ಟ್ರಪತಿ ವಿ.ವಿ.ಗಿರಿ[೪] ಯವರ ಮೊಮ್ಮಗ ಹಾಗೂ ಕಾಂಗ್ರೆಸ್‌ನ ರಾಜಕಾರಣಿ ವಿ. ಶಂಕರ ಗಿರಿಯವರ ಸೋದರಳಿಯನೂ ಹೌದು. ಸಾಯಿನಾಥ್ ತಮ್ಮ ಶಿಕ್ಷಣವನ್ನು ಕಾಲೇಜ್‌ ಚೆನ್ನೈ[ಶಾಶ್ವತವಾಗಿ ಮಡಿದ ಕೊಂಡಿ] ನಲ್ಲಿ ಪಡೆದರು. ಅವರು ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಸಮಾಜದಲ್ಲಿನ ಸಮಸ್ಯೆಗಳು ಮತ್ತು ರಾಜಕೀಯ ದೃಷ್ಟಿಯೆಡೆಗಿನ ಮುಂದಾಲೋಚನೆಯನ್ನು ಆರಂಭಿಸಿದ್ದರು. ಅವರು ದೆಹಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ[೫] ದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಆ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ಕಾರ್ಯಕರ್ತರಾಗಿದ್ದರು. ಪ್ರಸ್ತುತ ಅವರು ಅದೇ ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ಸಮಿತಿಯ ಸದಸ್ಯರು. ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಅವರು 1980ರಲ್ಲಿ ಪತ್ರಕರ್ತರಾಗಿ ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ Archived 2014-03-04 ವೇಬ್ಯಾಕ್ ಮೆಷಿನ್ ನಲ್ಲಿ. ದಲ್ಲಿ ವೃತ್ತಿಯನ್ನು ಆರಂಭಿಸಿದರು. ಅಲ್ಲಿ ಅವರು ಸುದ್ದಿ ಸಂಸ್ಥೆಯ ಅತ್ಯುಚ್ಛ ವೈಯಕ್ತಿಕ ಪ್ರಶಸ್ತಿ ಪಡೆದರು. ಆ ನಂತರ ಅವರು ಮುಂಬಯಿನಿಂದ ಪ್ರಕಟವಾಗುತ್ತಿದ್ದ 6,00,000 ಪ್ರಸಾರ ಹೊಂದಿದ್ದ ಸಾಪ್ತಾಹಿಕ ಟ್ಯಾಬ್ಲೋಯ್ಡ್ ಬ್ಲಿಟ್ಜ‍್‌‍ಗೆ ಆರಂಭದಲ್ಲಿ ಅಂತರಾಷ್ಟ್ರೀಯ ವಿಷಯಗಳ ಸಂಪಾದಕರಾಗಿ, ನಂತರ ಉಪ ಸಂಪಾದಕರಾಗಿ ಹತ್ತು ವರ್ಷಗಳ ಕಾಲ ಮುಂದುವರಿದರು. ಅವರು ಕಳೆದ ಇಪ್ಪತೈದು ವರ್ಷಗಳಿಂದ ಸೋಫಿಯಾ ಪಾಲಿಟೆಕ್ನಿಕ್‍ ಸೋಷಿಯಲ್ ಕಮ್ಯುನಿಕೇಶನ್ಸ್ ಮೀಡಿಯಾ Archived 2014-01-08 ವೇಬ್ಯಾಕ್ ಮೆಷಿನ್ ನಲ್ಲಿ. ಹಾಗೂ ಏಷಿಯನ್ ಕಾಲೇಜ್ ಆಫ್ ಜರ್ನಲಿಸಂ ಗೆ ಸಂದರ್ಶಕ ಪ್ರಾಧ್ಯಾಪಕರಾಗಿದ್ದು ಎಲ್ಲಾ ತಲೆಮಾರಿನ ಯುವ ಪತ್ರಕರ್ತರಿಗೆ ಸ್ಪೂರ್ತಿಯಾಗಿದ್ದಾರೆ. ತದನಂತರ ಭಾರತದ ಹತ್ತು ಬರಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿದ ಸಾಯಿನಾಥ್, ಅವುಗಳ ಬಗ್ಗೆ ದುಃಖಿತರಾಗಿ ನಂತರ ಸ್ಮರಿಸಿದರು.

ಸಾಂಪ್ರದಾಯಿಕ ಪತ್ರಿಕೋದ್ಯಮವು ಅಧಿಕಾರದ ಸೇವೆಗಿಂತ ಎಲ್ಲ ರೀತಿಯಲ್ಲೂ ಮಿಗಿಲಾದುದು ಎಂಬುದನ್ನು ಅರಿತೆ. ನೀವು ಯಾವಾಗಲೂ ಅಧಿಕಾರಕ್ಕೆ ಕೊನೆಯ ಪದವನ್ನು ಮೀಸಲಿಡಬೇಕು. ನನಗೆ ದೊರೆತ ಒಂದು ಜೊತೆ ಗೌರವಗಳನ್ನು ನಾನು ನಿರಾಕರಿಸಿದೆ, ಯಾಕೆಂದರೆ ನನಗೆ ನಾಚಿಕೆಯಾಯಿತು.[೪]

ಅಭ್ಯುದಯ ಪತ್ರಕರ್ತನಾಗಿ[ಬದಲಾಯಿಸಿ]

 • ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಮಾರ್ಗದರ್ಶಿತ ಹಣಕಾಸು ಸುಧಾರಣೆಗಳನ್ನು 1991ರಲ್ಲಿ ಮನಮೋಹನ್ ಸಿಂಗ್ ರಚಿಸಿ ಜಾರಿಗೆ ತರುವುದರೊಂದಿಗೆ ಭಾರತೀಯ ಆರ್ಥಿಕ ಇತಿಹಾಸಕ್ಕೆ ನೀರೆರೆಯುವಂತಾಯಿತು; ಜೊತೆಗೆ ಸಾಯಿನಾಥ್‌ರ ಪತ್ರಕರ್ತ ವೃತ್ತಿಗೂ. ಅವರಿಗೆ ಮಾಧ್ಯಮಗಳ ಗಮನ “ಸುದ್ದಿ”ಯಿಂದ “ಮನರಂಜನೆ”ಯತ್ತಲೂ ಮತ್ತು ದಿನಪತ್ರಿಕೆಗಳು ಉಪಭೋಗಿತವಾದ ಹಾಗೂ ನಗರದ ಜನಜೀವನದ ಸಾರಕ್ಕೆ ಮಾತ್ರವೇ ಪ್ರಾಮುಖ್ಯತೆ ನೀಡಿ ಭಾರತದ ಬಡತನದ ನೈಜತೆಯ ಸುದ್ದಿಗೆ ಅಪರೂಪಕ್ಕೆ ಮಾತ್ರ ಅವಕಾಶ ನೀಡುತ್ತಿರುವುದು ತಿಳಿದು ಬಂದಿತು.
 • “ನಾನು ತಿಳಿದಿರುವಂತೆ ಭಾರತದ ಪತ್ರಿಕೆಗಳು ಮೇಲ್ವರ್ಗದ 5 ಪ್ರತಿಶತಃ ವ್ಯಾಪಿಸಿಕೊಳ್ಳುವುದಾದರೆ, ನಾನು ಕೆಳ ವರ್ಗದ 5 ಪ್ರತಿಶತಃರನ್ನು ವ್ಯಾಪಿಸಿಕೊಳ್ಳುತ್ತೇನೆ”, ಎನ್ನುತ್ತಾರೆ ಸಾಯಿನಾಥ್.[೬] 1993ರಲ್ಲಿ ಸಾಯಿನಾಥ್ ಫೆಲೊಶಿಪ್‌ಗಾಗಿ ಟೈಮ್ಸ್ ಆಫ್ ಇಂಡಿಯವನ್ನು ಸಂಪರ್ಕಿಸುತ್ತಾರೆ.
 • ಸಂದರ್ಶನದ ಸಂದರ್ಭದಲ್ಲಿ ಗ್ರಾಮೀಣ ಭಾರತದಿಂದ ವರದಿ ಮಾಡುವ ತಮ್ಮ ಯೋಜನೆಯ ಬಗ್ಗೆ ಮಾತಾಡುತ್ತಾರೆ. “ನನ್ನ ಓದುಗರು ಈ ಬಗೆಯ ಒತ್ತಾಯ ಪೂರ್ವಕ ತುಂಬಿಸುವಿಕೆಯ ಬಗ್ಗೆ ಆಸಕ್ತರಾಗಿಲ್ಲ ಎಂದು ನಾನೇನಾದರು ಹೇಳಿದೆನೆಂದು ಕಲ್ಪಿಸಿ” ಎಂದು ಸಂಪಾದಕರು ಪ್ರಶ್ನಿಸಿದಾಗ, ಸಾಯಿನಾಥ್, ”ನೀವು ಈ ರೀತಿ ನಿಮ್ಮ ಓದುಗರ ಪರವಾಗಿ ಹಕ್ಕು ಸಾಧಿಸಲು ಕೊನೆಯ ಬಾರಿ ಯಾವತ್ತು ನಿಮ್ಮ ಓದುಗರನ್ನು ಭೇಟಿಯಾಗಿದ್ದೀರಿ?” ಎಂದು ಮರುಪ್ರಶ್ನಿಸುತ್ತಾರೆ.
 • ಅವರು ಫೆಲೊಶಿಪ್ ಪಡೆದು ಐದು ರಾಜ್ಯಗಳ ಕಡು ಬಡತನದ ಹತ್ತು ಜಿಲ್ಲೆಗಳ ರಸ್ತೆಗೆ ಹಿಂದಿರುಗಿಬಿಟ್ಟರು. ಅದು 16 ಪ್ರಕಾರದ ಸಂಪರ್ಕ ಸಾಧನಗಳನ್ನು ಉಪಯೋಗಿಸಿದ, 5000ಕಿ.ಮೀ.ಗಳ ಕಾಲ್ನಡಿಗೆಯನ್ನೂ ಒಳಗೊಂಡಿದ್ದ [೭], ಭಾರತದಾದ್ಯಂತ ಸುಮಾರು 1,00,000 ಕಿ. ಮೀ.ಗಳ ಆವರಿಸಿಕೊಳ್ಳುವ ಯಾತ್ರೆಯಾಗಿತ್ತು. ತಮ್ಮ ಹೆಚ್ಚಿನ ಬರಹಗಳು ವರ್ತಮಾನ ಶೈಲಿಯಲ್ಲೇ ಯಶಸ್ವಿಯಾಗಿ ಪ್ರಕಟವಾಗಲು ಅನುವು ಮಾಡಿಕೊಟ್ಟ ಆ ಕಾಲದ ಇಬ್ಬರು ಸಂಪಾದಕರಿಗೆ ಸಹಾನುಭೂತಿಯ ಗೌರವವನ್ನು ಸಲ್ಲಿಸುತ್ತಾರೆ. ಯಾಕೆಂದರೆ ಆ ದಿನಗಳಲ್ಲಿ ಅದು ಶ್ರೇಷ್ಠ ದಿನ ಪತ್ರಿಕೆಯೊಂದು ಮೊದಲ ಪುಟದಿಂದ ಮೂರನೇ ಪುಟಕ್ಕೆ ತನ್ನ ಕರ್ತವ್ಯವನ್ನು ನೆಲೆ ಬದಲಾಯಿಸಿದ್ದ ಆಪಾದನೆಯಾಗಿತ್ತು.
 • 18 ತಿಂಗಳ ಅವಧಿಯಲ್ಲಿ ಸಾಯಿನಾಥ್‍ರ 84 ವರದಿಗಳು ಪತ್ರಿಕೆಯಲ್ಲಿ ಪ್ರಕಟಿಸಲ್ಪಟ್ಟವು. ಅವುಗಳಲ್ಲಿ ಹೆಚ್ಚಿನ ವರದಿಗಳು ತದನಂತರ ಅವರ ಪುಸ್ತಕ “ಎವರಿಬಡಿ ಲವ್ಸ್ ಎ ಗುಡ್ ಡ್ರಾಟ್“ನಲ್ಲಿ ಮರು ಮುದ್ರಣಗೊಂಡವು. ಈ ಪುಸ್ತಕ ಅತೀ ಹೆಚ್ಚು ಮಾರಾಟ ಕಂಡ ಕಾದಂಬರಿಯೇತರ ಪ್ರಕಾರದ ಪುಸ್ತಕಗಳ ಸಾಲಿನಲ್ಲಿ ಎರಡು ವರ್ಷಗಳಿಗೂ ಅಧಿಕ ಕಾಲ ವಿವಿಧ ಪಟ್ಟಿಗಳಲ್ಲಿ ಮೊದಲ ಸ್ಥಾನದಲ್ಲಿತ್ತು.
 • ಇದಲ್ಲದೆ ‘ಪೆಂಗ್ವಿನ್ ಇಂಡಿಯಾ’ದ ಎಲ್ಲಾ ಕಾಲದ ಅತೀ ಹೆಚ್ಚು ಮಾರಾಟ ಕಂಡ ಪುಸ್ತಕಗಳ ಪಂಕ್ತಿಯಲ್ಲೂ ಸ್ಥಾನ ಪಡೆಯಿತು. ಸದ್ಯ ಪುಸ್ತಕ ಮೂವತ್ತೊಂದನೆಯ ಮುದ್ರಣದಲ್ಲಿದ್ದು, ಇನ್ನೂ ಮುದ್ರಣಗೊಳ್ಳುತ್ತಿದೆ. 'ಎವರಿಬಡಿ ಲವ್ಸ್ ಎ ಗುಡ್ ಡ್ರಾಟ್' ಹಲವು ಭಾಷೆಗಳಿಗೆ ಅನುವಾದಗೊಂಡಿದೆ. ‘ಬರ ಅಂದ್ರೆ ಎಲ್ಲರಿಗೂ ಇಷ್ಟ’ ಇದರ 9ನೆಯ ಅನುವಾದ.
 • ಕೆನಡಿಯನ್ ಸಾಕ್ಷಚಿತ್ರ ನಿರ್ಮಾಣಗಾರ. ಜೊ ಮೌಲಿನ್ “ಅ ಟ್ರೈಬ್ ಆಫ್ ಹಿಸ್ ಓನ್” ಎಂಬ ಹೆಸರಿನ ಸಾಯಿನಾಥ್‍ರ ಕುರಿತಾದ ಸಿನಿಮಾ ನಿರ್ಮಿಸಿದ್ದಾರೆ. ಎಡ್ಮೊಂಟಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆಯ್ಕೆಗಾರರು ತಮ್ಮ ವಿಜೇತರನ್ನು ಆಯ್ಕೆ ಮಾಡಿದ ಸಂದರ್ಭದಲ್ಲಿ, ‘ಸ್ಪೂರ್ತಿಗಾಗಿ ಪ್ರಶಸ್ತಿ’ ಎಂದು ಸಾಯಿನಾಥರನ್ನೂ ಹಾಗೂ ಚಲನಚಿತ್ರ ನಿರ್ಮಾಣಕಾರನನ್ನೂ ಸೇರಿಸುವ ನಿರ್ಣಯ ಮಾಡಿದರು.
 • ಸಾಯಿನಾಥ್‍ರ ಅಸಮಾನತೆಯ ಬಗೆಗಿನ ವರದಿಗಳನ್ನಾಧರಿಸಿ, ಅಸಮಾನತೆಯ ಇನ್ನೊಂದು ಸಾಕ್ಷ್ಯ ಚಿತ್ರ ನೀರೋಸ್ ಗೆಸ್ಟ್ಸ್ [೮] ಕೂಡ ನಿರ್ಮಾಣವಾಯಿತು.ನೀರೋಸ್ ಗೆಸ್ಟ್ಸ್ 2010ನೇ ಸಾಲಿನ ಅತ್ಯುತ್ತಮ ಸಾಕ್ಷ್ಯಚಿತ್ರವಾಗಿ ಭಾರತೀಯ ಸಾಕ್ಷ್ಯಚಿತ್ರ ನಿರ್ಮಾಪಕರ ಒಕ್ಕೂಟದ ಚಿನ್ನದ ಪದಕವನ್ನೂ ಪಡೆಯಿತು[೯]. ಇದು ಮುಂದೆ ಇನ್ನೂ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.
 • ಅವರ ಬರಹಗಳು ಹಲವಾರು ಪ್ರತಿಕ್ರಿಯೆಗಳನ್ನು ಉಂಟು ಮಾಡಿದವು. ಅವುಗಳಲ್ಲಿ ತಮಿಳುನಾಡು ರಾಜ್ಯದ ಬರಗಾಲ ನಿರ್ವಹಣಾ ಕಾರ್ಯಕ್ರಮಗಳು, ಒಡಿಶಾದ ಮಲ್ಕನ್‍ಗಿರಿಯಲ್ಲಿ ಸ್ವದೇಶಿ ವೈದ್ಯಕೀಯ ವ್ಯವಸ್ಥೆಯಲ್ಲಿನ ಅಭಿವೃದ್ಧಿ ಕಾರ್ಯನೀತಿಗಳು, ಮತ್ತು ಮಧ್ಯ ಪ್ರದೇಶದಲ್ಲಿ ಆದಿವಾಸಿ ಜನರ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮಗಳ ಪುನರ್ ರಚನೆ ಪ್ರಮುಖವಾದವು.
 • ಅವರ ವರದಿಗಾರಿಕೆಯ ಶೈಲಿಯನ್ನೇ ದಿ ಟೈಮ್ಸ್ ಆಫ್ ಇಂಡಿಯಾ ತನ್ನ ಸಂಸ್ಥೆಯ ಒಂದು ಶೈಲಿಯಾಗಿ ಅಳವಡಿಸಿಕೊಂಡಿದ್ದರೆ, ಇತರ ಪ್ರಮುಖ ಅರವತ್ತು ದಿನ ಪತ್ರಿಕೆಗಳು ಗ್ರಾಮೀಣಾಭಿವೃದ್ಧಿ ಹಾಗೂ ಬಡತನದ ಬಗ್ಗೆ ಅಂಕಣಗಳನ್ನೇ ಆರಂಭಿಸಿವೆ[೧೦].
 • ಅವರ ಬರಹಗಳು ಅವರಿಗೆ ಪತ್ರಕರ್ತರಾಗಿ ಹೆಸರನ್ನು ತಂದು ಕೊಟ್ಟಿರುವ ಜೊತೆಗೆ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಬಹುಮಾನಗಳನ್ನೂ ತಂದು ಕೊಟ್ಟಿವೆ. ಬಹುಮಾನಗಳು ಅವರಿಗೆ ವಿಶ್ವಾಸಾರ್ಹತೆಯನ್ನು ಒದಗಿಸುವುದರ ಜೊತೆಗೆ ಸ್ವತಂತ್ರ ಪತ್ರಕರ್ತ ರಾಗಿ ಕಾರ್ಯನಿರ್ವಹಿಸಲು ಹಣವನ್ನೂ ನೀಡಿದೆ. ಆಂಧ್ರ ಪ್ರದೇಶದಲ್ಲಿ ಕೃಷಿಯ ಸುಧಾರಣೆ ಮಾರ್ಗಗಳ ಸಲಹೆಗಾಗಿ, ಕೃಷಿ ಆಯೋಗವನ್ನು ಸ್ಥಾಪಿಸಲೂ ಅವರು ಕಾರಣಕರ್ತರಾಗಿದ್ದಾರೆ.
 • ಆಂಧ್ರ ಪ್ರದೇಶ, ರಾಜಸ್ಥಾನ, ಮತ್ತು ಒಡಿಶಾ ವಿಷಮ ಸ್ಥಿತಿಯ ರಾಜ್ಯಗಳು. ಆಂಧ್ರ ಪ್ರದೇಶದ ಅನಂತಪುರ್ ಜಿಲ್ಲೆಯೊಂದರಲ್ಲೇ 1997 ಮತ್ತು 2000 ಇಸವಿಯ ಮಧ್ಯೆ 1800ಕ್ಕೂ ಮಿಕ್ಕಿ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ರಾಜ್ಯ ವಿಧಾನ ಸಭೆಯಲ್ಲಿ ಈ ಅಂಕಿಅಂಶಗಳಿಗೆ ಬೇಡಿಕೆ ಇಟ್ಟಾಗ ಅಲ್ಲಿ ಕೇವಲ 54 ಆತ್ಮಹತ್ಯೆಗಳು ಮಾತ್ರ ಪಟ್ಟಿಯಲ್ಲಿದ್ದವು [ ಹೆಚ್ಚಿನ ಮಾಹಿತಿಗಾಗಿ ದಿ ಹಿಂದೂ, 29 ಏಪ್ರಿಲ್ ಮತ್ತು 6 ಮೇ].

 • ಭಾರತದಲ್ಲಿ ಆತ್ಮಹತ್ಮೆಯನ್ನು ಒಂದು ಅಪರಾಧವಾಗಿ ಪರಿಗಣಿಸಿರುವುದರಿಂದ, ಜಿಲ್ಲಾ ಅಪರಾಧ ದಾಖಲೀಕರಣ ವಿಭಾಗದ ಪಟ್ಟಿಯಲ್ಲಿ – ಪ್ರೇಮವೈಫಲ್ಯ, ಪರೀಕ್ಷೆ, ಸತಿ ಮತ್ತು ಪತಿಯರ ನಡವಳಿಕೆಗಳು ಇತ್ಯಾದಿ ಕಾರಣಗಳಾಗಿ ವರ್ಗೀಕರಿಸಿದೆ;ಅನಂತಪುರ್ನಲ್ಲಿ ಈ ವಿಭಾಗಗಳಿಂದ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 5 ಪ್ರತಿ ಶತಕ್ಕಿಂತ ಕಡಿಮೆ. ಅತೀ ಹೆಚ್ಚಿನ 1061 ಜನರು “ಉದರ ಬೇನೆ” (ಹೊಟ್ಟೆ ನೋವಿನಿಂದ) ಆತ್ಮಹತ್ಯೆ ಮಾಡಿಕೊಂಡಿರುವುದೆಂದು ಪಟ್ಟಿ ಮಾಡಲಾಗಿದೆ. ಇಂಥ ವಿನಾಶಕಾರಿ ಪರಿಸ್ಥಿತಿಗೆ ಕಾರಣ ಸಿಬ – ಗೈಜಿ(Ciba-Geigy) ಎಂಬ ರಸಗೊಬ್ಬರದ ಬಳಕೆ. ಇದು ಸರ್ಕಾರವೇ ಉಚಿತವಾಗಿ ಪೂರೈಸುವ ಗೊಬ್ಬರವಾಗಿದ್ದು, ಹೆಚ್ಚಿನ ಗ್ರಾಮೀಣ ಭಾಗದ ಬಡವರು ಸುಲಭವಾಗಿ ಪಡೆಯಬಹುದಾಗಿದೆ!![೧೧]
 • ಅವರ ದಿ ಹಿಂದೂಗಾಗಿನ ದಲಿತರ ಮೇಲಿನ ಇತ್ತೀಚಿನ ಯೋಜನೆ ಅಂತಿಮ ಹಂತದಲ್ಲಿದ್ದು, ಅವರು ಅದನ್ನು ಆಧರಿಸಿ ಪುಸ್ತಕ ಹೊರತರುವ ಯೋಚನೆಯಲ್ಲಿದ್ದಾರೆ. ಈ ಯೋಜನೆ ಭಾರತದ 15 ರಾಜ್ಯಗಳ ಅತಿದೊಡ್ಡ ಪ್ರದೇಶವನ್ನು ಆವರಿಸಿಕೊಳ್ಳಲಿದೆ. ಅವರು ಈಗಾಗಲೇ 1,50,000 ಕಿ.ಮೀ. ಕ್ರಮಿಸಿದ್ದು 5 ರಾಜ್ಯಗಳು ಬಾಕಿ ಉಳಿದಿವೆ.
 • ದಿನಪತ್ರಿಕೆಗಳು ಒಂದು ಹಂತಕ್ಕಿಂತ ಹೆಚ್ಚು ಬಂಡವಾಳ ನೀಡಲು ನಿರಾಕರಿಸಿದ ಸಂದರ್ಭದಲ್ಲಿ ಅವರು ತಮ್ಮ ಸ್ವಂತ ಮೂಲಗಳಾದ, ತಮ್ಮ ಉಳಿತಾಯ, ತಮ್ಮ ಭವಿಷ್ಯ ನಿಧಿ, ತಮ್ಮ ಕೊಡುಗೆಗಳನ್ನು ವ್ಯಯಮಾಡುವ ಮೂಲಕ ವಾಣಿಜ್ಯ ಕ್ಷೇತ್ರದ ಸಹಭಾಗಿತ್ವವನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ[೧೨].
 • ಸಾಯಿನಾಥ್ ತಮ್ಮ ವರದಿಗೆ ಸಂಬಂಧಪಟ್ಟ ಎಲ್ಲಾ ಛಾಯಾಚಿತ್ರಗಳನ್ನೂ ಕಳೆದ 30 ವರ್ಷಗಳಿಂದ ತೆಗೆದಿದ್ದಾರೆ.[೧೩] ಅವರ ಪ್ರದರ್ಶನವಾದ ವಿಸಿಬಲ್ ವರ್ಕ್, ಇನ್ವಿಸಿಬಲ್ ವುಮೆನ್: ವುಮೆನ್ ಅಂಡ್ ವರ್ಕ್ ಇನ್ ರೂರಲ್ ಇಂಡಿಯಾವನ್ನು 6,00,000ಕ್ಕೂ ಮಿಕ್ಕಿ ಭಾರತೀಯರೇ ನೋಡಿದ್ದಾರೆ.
 • ಭಾರತದಲ್ಲಿ ಕಾರ್ಖಾನೆಯ ದ್ವಾರಗಳು, ಗ್ರಾಮ ಚಾವಡಿಗಳು, ಬಸ್ಸು ಮತ್ತು ರೈಲ್ವೇ ನಿಲ್ದಾಣ, ಕಾಲೇಜು ಮತ್ತು ಇತರ ಸಮರೂಪದ ಸಾರ್ವಜನಿಕ ಪ್ರದರ್ಶನ ಸ್ಥಳಗಳಲ್ಲಿ ಇದು ಪ್ರದರ್ಶತವಾಗುವುದರ ಜೊತೆಗೇ ಸಮುದ್ರದಾಚೆಗಿನ ಪರದೆಗಳಲ್ಲೂ ಪ್ರದರ್ಶನ ಕಂಡಿದೆ ಅವುಗಳಲ್ಲಿ ನ್ಯೂಯಾರ್ಕ್‌ಏಷಿಯಾ ಸೊಸೈಟಿ[೧೪] ಮತ್ತು ಜಪಾನ್, ಕೆನಡಾ,ಹಾಗೂ ಇತರಕಡೆಗಳೂ[೧೫] ಸೇರಿವೆ. ಅವರ ಛಾಯಾಚಿತ್ರಗಳು ಗ್ರಾಮೀಣ ಭಾರತದ ಕಾರ್ಮಿಕರ ಮುಖ್ಯಭಾಗಗಳ ಅತಿಹೆಚ್ಚಿನ ಛಾಯಾಚಿತ್ರಗಳನ್ನು ಒಳಗೊಂಡಿವೆ.
 • ಸಾಯಿನಾಥ್‍ರ ಕಳೆದ ದಶಕದ ಮಹತ್ವಪೂರ್ಣ ಕೆಲಸವೆಂದರೆ ಕೃಷಿ ಕ್ಷೇತ್ರದ ಸಂಕಟವನ್ನು 200 ಪ್ರತ್ಯೇಕ ಕ್ಷೇತ್ರ ವರದಿಗಳು, ಸುದ್ದಿ ವಿಶ್ಲೇಷಣೆಗಳು ಹಾಗೂ ನೂರಾರು ಛಾಯಾಚಿತ್ರಗಳ ಮೂಲಕ ಕೇಂದ್ರೀಕರಿಸಿದ್ದು. ಈ ಕೆಲಸಗಳು ಸಂಪೂರ್ಣವಾಗಿ ಸರ್ಕಾರದ ಅಧಿಕೃತ ದಾಖಲೆಗಳನ್ನು ಆಧರಿಸಿದ್ದು, 1995ರಿಂದ ಹತ್ತು ಲಕ್ಷದ ಕಾಲು ಭಾಗ[೧೬] ಕ್ಕೂ ಹೆಚ್ಚು ಭಾರತೀಯ ರೈತರು ಆತ್ಮಹತ್ಯೆಗೆ ಶರಣಾಗಿದ್ದು, ಹೆಚ್ಚಿನವುಗಳಿಗೆ ಸಾಲದ ವಿಷಮತೆಯ ಮಾನಸಿಕ ಯಾತನೆಯೇ ಕಾರಣವಾಗಿದೆ.

ಪ್ರಶಸ್ತಿ ಮತ್ತು ಗೌರವಗಳು[ಬದಲಾಯಿಸಿ]

 • 2011ರ ಜೂನ್‍ನಲ್ಲಿ ಅಲ್ಬೆರ್ಟ ವಿಶ್ವವಿದ್ಯಾನಿಲಯವು, ವಿಶ್ವವಿದ್ಯಾನಿಲಯದ ಅತ್ಯುಚ್ಛ ಗೌರವವಾದ ಡಾಕ್ಟರ್ ಆಫ್ ಲೆಟರ್ಸ್ ಪದವಿ (ಡಿ.ಲಿಟ್) ಯನ್ನು ಸಾಯಿನಾಥ್ ಅವರಿಗೆ ಗೌರವಯುತವಾಗಿ ನೀಡಿತು.
 • ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ ಪಡೆದ ಕೆಲವೇ ಭಾರತೀಯರಲ್ಲಿ ಅವರೂ ಒಬ್ಬರು. 2007ರಲ್ಲಿ ಅವರು ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸೃಜನಶೀಲ ಸಂವಹನ ಕಲೆಯ ವಿಭಾಗದಲ್ಲಿ ಈ ಪ್ರಶಸ್ತಿಯನ್ನು ಒಪ್ಪಿಕೊಂಡರು.[೧೭]
 • 2009ರಲ್ಲಿ ಸಾಯಿನಾಥ್ ರಾಷ್ಟ್ರೀಯ ಪ್ರಶಸ್ತಿಯನ್ನು ನಿರಾಕರಿಸಿದ ವರದಿಯಾಗಿತ್ತು.[೧೮] ಆದರೆ ನಂತರ ಅವರು ಸುಮಾರು 40 ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪತ್ರಿಕೋದ್ಯಮ ಪ್ರಶಸ್ತಿಗಳು ಹಾಗೂ ಗೌರವಗಳನ್ನು 30ವರ್ಷ ಪತ್ರಕರ್ತರಾಗಿದ್ದು ಸ್ವೀಕರಿಸಿದ್ದಾರೆ. ಅವುಗಳಲ್ಲಿ 2007ರ ರಾಮನ್ ಮ್ಯಾಗ್ಸೇಸೆ ಪತ್ರಿಕೋದ್ಯಮ ಪ್ರಶಸ್ತಿ,[೧೯] 1994ರ ಐರೋಪ್ಯ ಒಕ್ಕೂಟದ ನತಾಲಿ ಪ್ರಶಸ್ತಿ,[೨೦]
 • ಸಂಯುಕ್ತ ರಾಷ್ಟ್ರ ಸಂಸ್ಥೆಯ (ವಿಶ್ವಸಂಸ್ಥೆ) ಆಹಾರ ಮತ್ತು ಕೃಷಿ ಸಂಸ್ಥೆ[೨೧] ಯಿಂದ 2001ರಲ್ಲಿ ಬೋರ್ಮ್ ಪತ್ರಿಕೋದ್ಯಮ ಪ್ರಶಸ್ತಿ[೨೨] ( ಸಿ.ಎನ್.ಎನ್‍ ನ ಜಿಮ್ ಕ್ಲಾನ್ಸಿ ಜೊತೆಗೆ),2000ನೇ ಇಸವಿಯಲ್ಲಿ ಅಮ್ನೆಸ್ಟಿ ಇಂಟರ್‍ನ್ಯಾಷನಲ್‍ನ ಮಾನವ ಹಕ್ಕುಗಳ ಪತ್ರಿಕೋದ್ಯಮಕ್ಕಾಗಿ ಜಾಗತಿಕ ಪ್ರಶಸ್ತಿ, ಪಿಯುಸಿಎಲ್ ಮಾನವ ಹಕ್ಕುಗಳ ಪತ್ರಿಕೋದ್ಯಮ ಪ್ರಶಸ್ತಿ, ಪತ್ರಿಕೋದ್ಯಮದಲ್ಲಿನ ಉತ್ಕೃಷ್ಟತೆಗಾಗಿ 2000ನೇ ಇಸವಿಯಲ್ಲಿ ಬಿ.ಡಿ.ಗೋಯೆಂಕಾ ಪ್ರಶಸ್ತಿ,[೨೩] 2005 ರ ಹ್ಯಾರಿ ಚಾಪಿನ್ ಮಾಧ್ಯಮ ಪ್ರಶಸ್ತಿಗಳಲ್ಲಿ,[೨೪] ಜೂನ್ 2006 ರಲ್ಲಿ ಸಾಯಿನಾಥ್ ನ್ಯಾಯಾಧೀಶರ ಪ್ರಶಸ್ತಿಯನ್ನು (ಪತ್ರಿಕೆ ವರ್ಗದಲ್ಲಿ) ಗೆದ್ದುಕೊಂಡರು . ವಿದರ್ಭ[೨೫] ಹಾಗೂ ಇತರ ಪ್ರದೇಶಗಳಲ್ಲಿ ನಡೆಯುತ್ತಿರುವ ಕೃಷಿ ಸಂಬಂಧಿತ ಬಿಕ್ಕಟ್ಟಿನ ಮೇಲಿನ ಅವರ ದ ಹಿಂದೂ ಸರಣಿಯ ಬರಹಗಳಿಗೆ ಈ ಪ್ರಶಸ್ತಿ ಸಂದಿದೆ.
 • ಹಸಿವು ಹಾಗೂ ಬಡತನದ ಕಾರಣಗಳೂ ಸೇರಿದಂತೆ ಆರ್ಥಿಕ ಅಸಮಾನತೆ ಮತ್ತು ಅಭದ್ರತೆ, ನಿರುದ್ಯೋಗ, ವಸತಿ ರಹಿತತೆ, ದೇಶೀಯ ಮತ್ತು ಅಂತಾರಾಷ್ಟ್ರೀಯ ನೀತಿಗಳು ಮತ್ತು ಅವುಗಳ ಸುಧಾರಣೆ, ಸಮುದಾಯ ಸಬಲೀಕರಣ, ಸುಸ್ಥಿರ ಅಭಿವೃದ್ಧಿ, ಆಹಾರ ಉತ್ಪಾದನೆಯ ಬಗ್ಗೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಕೇಂದ್ರೀಕೃತ ಕೆಲಸವನ್ನು ಹ್ಯಾರಿ ಚಾಪಿನ್ ಮಾಧ್ಯಮ ಪ್ರಶಸ್ತಿಗಳು ಗೌರವಿಸುತ್ತವೆ.
 • 2009 ರಲ್ಲಿ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್‌'ನಿಂದ ರಾಮನಾಥ ಗೋಯೆಂಕಾ 'ವರ್ಷದ ಪತ್ರಕರ್ತ' ಪ್ರಶಸ್ತಿಯನ್ನು ಗಳಿಸಿದ್ದಾರೆ.
 • 1984 ರಲ್ಲಿ ಅವರು ವೆಸ್ಟರ್ನ್ ಒಂಟಾರಿಯೋ ವಿಶ್ವವಿದ್ಯಾನಿಲಯದಲ್ಲಿ ಪ್ರತ್ಯೇಕ ಅಂತರಾಷ್ಟ್ರೀಯ ವಿದ್ವಾಂಸರಾಗಿದ್ದರು. ಅದೇ ರೀತಿ 1988 ರಲ್ಲಿ ಮಾಸ್ಕೋ ವಿಶ್ವವಿದ್ಯಾನಿಲಯಕ್ಕೆ ಸಂದರ್ಶಕ ಉಪನ್ಯಾಸಕರಾಗಿದ್ದರು. ಅವರು ಅಯೋವಾ ವಿಶ್ವವಿದ್ಯಾನಿಲಯ(1998 ಪತನ)ದಲ್ಲಿಯೂ ಪ್ರತ್ಯೇಕ ಅಂತರಾಷ್ಟ್ರೀಯ ಉದ್ಯೋಗಿಯಾಗಿದ್ದರು, ಮತ್ತು ಮೊದಲ ಮ್ಯಾಕ್‌ಗಿಲ್‌ನ ಒಡನಾಡಿಯಾಗಿ, ಟ್ರಿನಿಟಿ ಕಾಲೇಜ್, ಹಾರ್ಟ್‌ಫೋರ್ಡ್, ಕನೆಕ್ಟಿಕಟ್ (ಸ್ಪ್ರಿಂಗ್ 2002)ನಲ್ಲಿ ಉಪನ್ಯಾಸಕನಾಗಿ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ ಮತ್ತು ಬರ್ಕ್ಲೆ ಪತ್ರಿಕೋದ್ಯಮ ಪದವಿ ಶಾಲೆ(ಪತನ 2008)ಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದರು.
 • ಅವರು ಹಲವಾರು ಅಂತರಾಷ್ಟ್ರೀಯ ಸಂವಹನ ಉಪಕ್ರಮಗಳಲ್ಲಿ ಭಾಗವಹಿಸಿದ್ದು, ಅವುಗಳಲ್ಲಿ ಯುನೆಸ್ಕೋ (1990 ಮತ್ತು 1991) ಪ್ರಾಯೋಜಿಸಿದ ಎರಡನೇ ಮತ್ತು ಮೂರನೇ ದುಂಡು ಮೇಜಿನ ಜಾಗತಿಕ ಸಂವಹನಗಳು ಮತ್ತು ಯುಎನ್ಎಚ್‌ಸಿಆರ್ (1991) ಪ್ರಾಯೋಜಿತ ಮಾನವ ಹಕ್ಕುಗಳ ವಿಶ್ವ ಮಾಹಿತಿ ಪ್ರಚಾರವೂ ಸೇರಿದೆ. ಅವರನ್ನು 1993ರಲ್ಲಿ ಶ್ರೀ ರಾಜಾ-ಲಕ್ಷ್ಮೀ ಫೌಂಡೇಶನ್ ಚೆನ್ನೈ ಇವರು ಪ್ರತಿಷ್ಠಿತ ರಾಜಾ ಲಕ್ಷ್ಮೀ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
 • ಸಾಯಿನಾಥ್ ತನ್ನ ದಿನಪತ್ರಿಕೆಯ ಎದುರಾಳಿಗಳಿಂದ ರಾಷ್ಟ್ರದ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮಗಳಿಂದ ಪ್ರಶಸ್ತಿಗಳನ್ನು ಗೆದ್ದ ಏಕೈಕ ಪತ್ರಕರ್ತ. ಅವರು ದೆಹಲಿಇಂಡಿಯನ್ ಎಕ್ಸ್‌ಪ್ರೆಸ್‌[೨೬] ನಿಂದಲೂ, ದಕ್ಷಿಣದ ಇಂಡಿಯನ್ ಎಕ್ಸ್‌ಪ್ರೆಸ್‌ನ ಆವೃತ್ತಿ, ಈಗಿನ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌[೨೩] ನಿಂದಲೂ, ಕೊಲ್ಕತ್ತಾದ ದಿ ಸ್ಟೇಟ್ಸ್‌ಮನ್‌ನಿಂದಲೂ ಹಾಗೂ ಮುಂಬಯಿ ಮೂಲದ ಟೈಮ್ಸ್ ಆಫ್ ಇಂಡಿಯ[೨೭] ದಿಂದಲೂ ಫೆಲೋಶಿಪ್ ಅನ್ನೂ ಪಡೆದುಕೊಂಡಿದ್ದಾರೆ.

ಪರಿ(PARI)ಯ ನೇತೃತ್ವ[ಬದಲಾಯಿಸಿ]

ಸಾಯಿನಾಥ್ ಬೆಂಗಳೂ(ರು)ರಿನ ಸಂವಹನ ಕಾರ್ಯಕ್ರಮವೊಂದರಲ್ಲಿ, ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ ದ ಕಾರ್ಯಾಚರಣೆಯನ್ನು ಜೂನ್ 2013 ರಿಂದ ಪ್ರಾಯೋಗಿಕ ನೆಲೆಯಲ್ಲಿ ಪ್ರಾರಂಭಿಸಲಾಗುವುದು ಎಂದು ಬಹಿರಂಗಪಡಿಸಿದ್ದರು. ಈಗ ಅದು ತನ್ನ ಕಾರ್ಯಚರಣೆಯನ್ನು ಆರಂಭಿಸಿದೆ. ಅವರ ಪ್ರಕಾರ ಇದರ ಅರ್ಥ "ಗ್ರಾಮೀಣ ಭಾರತದ ಇತಿಹಾಸದ ಒಂದು ಪತ್ರಗಾರ ಮತ್ತು ಜೀವಂತ ಪತ್ರಿಕೆ"ಯಾಗಿ ಕಾರ್ಯನಿರ್ವಹಿಸುವುದು. ಇದೇ ಸಂದರ್ಭದಲ್ಲಿ ಅವರು, ಆರ್ಕೈವ್ ಸರ್ಕಾರದಿಂದ ಮತ್ತು ಯಾವುದೇ ವಾಣಿಜ್ಯ ಸಂಸ್ಥೆಗಳಿಂದ ಯಾವುದೇ ರೀತಿಯ ನೇರ ಹಣಕಾಸನ್ನು ಸ್ವೀಕರಿಸುವುದಿಲ್ಲ, ಆದ್ದರಿಂದ ಇದೊಂದು ಸ್ವತಂತ್ರ ಸಂಸ್ಥೆ ಎಂದು ಸ್ಪಷ್ಟಪಡಿಸಿದರು. "ಗ್ರಾಮೀಣ ಭಾರತ ಭೂಗ್ರಹದ ಅತ್ಯಂತ ಸಂಕೀರ್ಣ ಭಾಗವಾಗಿದೆ…" ಎಂದು ಸಾಯಿನಾಥ್ ಪರಿಯನ್ನು(PARI) ಹೊರತಂದ ಕಾರಣದ ಬಗ್ಗೆ ಉಲ್ಲೇಖಿಸಿದ್ದಾರೆ.[೩]

ಬರ ಅಂದ್ರೆ ಎಲ್ಲರಿಗೂ ಇಷ್ಟ ಹಿನ್ನುಡಿಯಿಂದ[ಬದಲಾಯಿಸಿ]

‘ಭಾರತೀಯ ಪತ್ರಿಕೋದ್ಯಮದ ಕೆಟ್ಟ ಹುಡುಗ’ ಎಂಬ ‘ಪ್ರಶಂಸೆ’ಗೆ ಗುರಿಯಾದವರು ಸಾಯಿನಾಥ್. ಈ ‘ಕೆಟ್ಟ’ ಹುಡುಗ ಕಳೆದ 18 ವರ್ಷಗಳಿಂದ ದೇಶದ ಕಡುಬಡತನದ ಜಿಲ್ಲೆಗಳನ್ನು ಸುತ್ತುತ್ತಿದ್ದಾರೆ. ಯಾವುದೇ ಭೂಪಟದಲ್ಲಿ ಕಾಣಿಸಿಕೊಳ್ಳದೇ ಹೋಗುವಂತಹ ಕುಗ್ರಾಮಗಳಲ್ಲಿ ವರ್ಷದ 300 ದಿನ ಕಳೆಯುವ ಸಾಯಿನಾಥ್ ಆ ಹಳ್ಳಿಗಳಿಗೆ, ಹಳ್ಳಿಯ ಜನತೆಗೆ ಘನತೆ ತಂದವರು. ಸಾಯಿನಾಥ್ ಅವರ ಸುತ್ತಾಟ ದೇಶದ ನೀತಿ ನಿರೂಪಕರನ್ನು ತುದಿಗಾಲಲ್ಲಿ ನಿಲ್ಲಿಸುತ್ತದೆ. ಹಲವು ಪ್ರಧಾನಿಗಳು ಇವರು ಪ್ರಸ್ತಾಪಿಸಿದ ಹಳ್ಳಿಗಳೆಡೆಗೆ ಧಾವಿಸುವಂತೆ ಮಾಡುತ್ತದೆ. ಕೃತಿ ಬರ ಅಂದ್ರೆ ಎಲ್ಲರಿಗೂ ಇಷ್ಟ ದೇಶದ ಪ್ರಜ್ಞೆಯನ್ನು ಕಲಕಿದೆ. ಈ ದೇಶದ ಕೊನೆಯ ಪ್ರಜೆ ಬದುಕುತ್ತಿರುವ ಬಗೆ ಹೇಗೆ ಎಂಬುದಕ್ಕೆ ಕನ್ನಡಿ ಹಿಡಿಯುತ್ತದೆ. ಈ ಕಾರಣಕ್ಕಾಗಿಯೇ ಈ ‘ಕೆಟ್ಟ’ ಹುಡುಗನನ್ನು ಪ್ರತಿಷ್ಠಿತ ಮ್ಯಾಗ್ಸೇಸೆ ಪ್ರಶಸ್ತಿ ಹುಡುಕಿಕೊಂಡು ಬಂದಿದೆ. ಜಗತ್ತಿನ ಹಲವು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನದ ವಿಷಯವಾಗಿದೆ. ಸಾಯಿನಾಥ್ ಈ ಕೃತಿಗಾಗಿ ಲಕ್ಷಾಂತರ ಕಿ ಮೀ ಸಂಚರಿಸಿದ್ದಾರೆ. ರೈತರ ಆತ್ಮಹತ್ಯೆ, ಸಾಲದ ಹೊರೆ, ಕೃಷಿಯ ವಾಣಿಜ್ಯೀಕರಣದ ಬಗ್ಗೆ ಭಿನ್ನ ನೋಟ ಹರಿಸಿದ್ದಾರೆ. ಈ ಎಲ್ಲವೂ ಹೇಗೆ ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿದೆ ಎಂಬುದನ್ನು ವಿವರಿಸಿದ್ದಾರೆ. ಈ ಕಥನಗಳ ಕಾರಣಕ್ಕಾಗಿಯೇ ಸಾಯಿನಾಥ್ ಎಲ್ಲರಿಗೂ ಇಷ್ಟ. ಈತ ಮಾಧ್ಯಮ ಲೋಕದ ಭಿನ್ನ ಪಯಣಿಗ.[೨೮]

ಪುಸ್ತಕಗಳು[ಬದಲಾಯಿಸಿ]

ಇವನ್ನೂ ನೋಡಿ[ಬದಲಾಯಿಸಿ]

 • ಭಾರತದಲ್ಲಿ ರೈತರ ಆತ್ಮಹತ್ಯೆಗಳು
 • ಪಶ್ಚಿಮ ಒಡಿಶಾದ ರೈತರ ಆತ್ಮಹತ್ಯೆಗಳು

ಟಿಪ್ಪಣಿಗಳು[ಬದಲಾಯಿಸಿ]

 1. http: //indiatogether.org/
 2. "ಆರ್ಕೈವ್ ನಕಲು". Archived from the original on 2001-11-24. Retrieved 2014-04-11.
 3. ೩.೦ ೩.೧ http://www.thehindu.com/news/cities/bangalore/sainath-plans-online-peoples-archive-of-rural-india/article4305024.ece
 4. ೪.೦ ೪.೧ http://www.counterpunch.org/2005/08/04/why-indian-farmers-kill-themselves-why-lange-s-photographs-are-phony/
 5. http://www.nerosguests.com/synopsis.html
 6. http://www. counterpunch.org/2005/08/04/why-indian-farmers-kill-themselves-why-lange-s-photographs-are-phony/
 7. http://www. ashanet.org/ conferences/asha-10/links/sat-0600pm-keynote-02.pdf
 8. http://www.nerosguests.com/
 9. "ಆರ್ಕೈವ್ ನಕಲು". Archived from the original on 2014-05-26. Retrieved 2014-04-11.
 10. "ಆರ್ಕೈವ್ ನಕಲು". Archived from the original on 2016-01-13. Retrieved 2014-04-21.
 11. "ಆರ್ಕೈವ್ ನಕಲು". Archived from the original on 2014-06-05. Retrieved 2014-04-21.
 12. http://www.ashanet.org/conferences/asha-10/links/sat-0600pm-keynote-02.pdf
 13. http://indiatogether.org/columns/the-real-picture
 14. http://asiasociety.org/visible-work-invisible-women
 15. "ಆರ್ಕೈವ್ ನಕಲು". Archived from the original on 2011-07-06. Retrieved 2014-04-11.
 16. http://www.thehindu.com/opinion/columns/sainath/article995824.ece?homepage=true
 17. "ಆರ್ಕೈವ್ ನಕಲು". Archived from the original on 2014-04-23. Retrieved 2014-04-21.
 18. http://wearethebest.wordpress.com/2009/01/28/journalist-declining-national-award-is-news/
 19. http://www.rmaf.org. ph/newrmaf /main/
 20. "ಆರ್ಕೈವ್ ನಕಲು". Archived from the original on 2013-11-03. Retrieved 2014-04-21.
 21. "ಆರ್ಕೈವ್ ನಕಲು". Archived from the original on 2012-11-13. Retrieved 2014-04-11.
 22. "ಆರ್ಕೈವ್ ನಕಲು". Archived from the original on 2011-12-21. Retrieved 2014-04-11.
 23. ೨೩.೦ ೨೩.೧ http://expressindia.indianexpress.com/ie/daily/20001110/ina10030.html
 24. {http://www.hindu.com Archived 2009-01-06 ವೇಬ್ಯಾಕ್ ಮೆಷಿನ್ ನಲ್ಲಿ. /2006/06/12/ stories/ 2006061205411400.htm
 25. {http://www.hindu.com Archived 2009-01-06 ವೇಬ್ಯಾಕ್ ಮೆಷಿನ್ ನಲ್ಲಿ. /2005/12/29/stories/ 2005122905321100. htm
 26. http://archive Archived 2013-07-12 ವೇಬ್ಯಾಕ್ ಮೆಷಿನ್ ನಲ್ಲಿ.. indianexpress.com/ news/ stories-behind-the-story/448579/http://archive.indianexpress.com/news/stories-behind-the-story/448579/ Archived 2016-01-13 ವೇಬ್ಯಾಕ್ ಮೆಷಿನ್ ನಲ್ಲಿ.
 27. {http://timesofindia.indiatimes.com/india/P-Sainath-wins-Magsaysay-Award/articleshow/2247397.cms?referral=PM
 28. http://books.google.co.in/books?id=EiA-ae5zoBoC&printsec= frontcover&dq=everybody+ loves+a+good+drought& hl=en&sa=X&ei= VrxUU6D2JMa_rgeIoYDABQ&ved =0CCwQ6AEwAA#v=onepage&q=everybody%20loves%20a%20good%20drought&f=false Everybody loves a good drought

ಹೊರಗಿನ ಸಂಪರ್ಕಗಳು[ಬದಲಾಯಿಸಿ]

 • ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತರು
 • ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತ ಭಾರತೀಯರು
Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ: