ದಿ ಸ್ಟೇಟ್ಸ್‌ಮನ್‌

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
The Statesman
230px
225px
The 30 March 2010, front page of
The Statesman
ವರ್ಗ Daily newspaper
ವಿನ್ಯಾಸ Broadsheet
ಮಾಲೀಕ The Statesman Ltd.
ಪ್ರಕಾಶಕ The Statesman Ltd.
ಸಂಪಾದಕ Ravindra Kumar
ಸ್ಥಾಪನೆ 1811, 1875
Political alignment Independent[೧]
ಭಾಷೆ English
ಕೇಂದ್ರ ಕಾರ್ಯಾಲಯ 4 Chowringhee Square, Kolkata, 700001
ಚಲಾವಣೆ 180,000 Daily
230,000 Sunday
Sister newspapers Dainik Statesman
OCLC number 1772961
ಅಧಿಕೃತ ತಾಣ Thestatesman.net
ನವದೆಹಲಿಯ ಸ್ಟೇಟ್ಸ್‌ಮನ್‌ ಹೌಸ್

ದಿ ಸ್ಟೇಟ್ಸ್‌ಮನ್‌ ಒಂದು ಭಾರತೀಯ ಇಂಗ್ಲಿಷ್-ಭಾಷಾ ಪುರವಣಿ-ಆಕಾರವುಳ್ಳ ದಿನಪತ್ರಿಕೆಯಾಗಿದೆ. ಇದು 1875ರಲ್ಲಿ ಆರಂಭವಾಯಿತು ಹಾಗೂ ಕೋಲ್ಕತ್ತಾ, ನವದೆಹಲಿ, ಸಿಲಿಗುರಿ ಮತ್ತು ಭುಬನೇಶ್ವರದಲ್ಲಿ ದಿನನಿತ್ಯ ಪ್ರಕಟಗೊಳ್ಳುತ್ತದೆ. ದಿ ಸ್ಟೇಟ್ಸ್‌ಮನ್‌ ‌ನ ಸ್ವಾಮ್ಯತೆಯನ್ನು ದಿ ಸ್ಟೇಟ್ಸ್‌ಮನ್‌ ಲಿಮಿಟೆಡ್ ಹೊಂದಿದೆ. ಇದರ ಪ್ರಧಾನ ಕಛೇರಿಯು ಕೋಲ್ಕತ್ತಾದ ಚೌರಿಂಘೀ ಸ್ಕ್ವೇರ್‌ನ ಸ್ಟೇಟ್ಸ್‌ಮನ್‌ ಹೌಸ್‌ನಲ್ಲಿದೆ ಮತ್ತು ಇದರ ರಾಷ್ಟ್ರೀಯ ಸಂಪಾದಕೀಯ ಕಛೇರಿಗಳು ನವದೆಹಲಿಯ ಕನಾಟ್ ಪ್ಲೇಸ್‌ನ ಸ್ಟೇಟ್ಸ್‌ಮನ್ ಹೌಸ್‌ನಲ್ಲಿವೆ. ಇದು ಏಷ್ಯಾ ನ್ಯೂಸ್ ನೆಟ್ವರ್ಕ್‌‌ನ ಸದಸ್ಯವಾಗಿದೆ.

ದಿ ಸ್ಟೇಟ್ಸ್‌ಮನ್‌ ‌ನ ಸರಾಸರಿ ವಾರದ-ದಿನದ ಹಂಚಿಕೆಯು ಸರಿಸುಮಾರು 180,000ದಷ್ಟಿರುತ್ತದೆ ಮತ್ತು ಸಂಡೆ ಸ್ಟೇಟ್ಸ್‌ಮನ್ ‌ ಸುಮಾರು 230,000ದಷ್ಟು ಹಂಚಿಕೆಯಾಗುತ್ತದೆ. ಇದು ದಿ ಸ್ಟೇಟ್ಸ್‌ಮನ್‌ ಅನ್ನು ಭಾರತಪಶ್ಚಿಮ ಬಂಗಾಳದ ಇಂಗ್ಲಿಷ್ ಸಮಾಚಾರ ಪತ್ರಿಕೆಗಳಲ್ಲಿ ಒಂದು ಪ್ರಮುಖ ಪತ್ರಿಕೆಯಾಗಿ ಮಾಡಿದೆ.[೨]

ಇತಿಹಾಸ[ಬದಲಾಯಿಸಿ]

ಇದು ಎರಡು ಸಮಾಚಾರ ಪತ್ರಿಕೆಗಳೊಂದಿಗೆ ಒಂದುಗೂಡಿ, ಚಾಲ್ತಿಗೆ ಬಂದಿದೆ: ದಿ ಇಂಗ್ಲಿಷ್‌ಮನ್ ಮತ್ತು ದಿ ಫ್ರೆಂಡ್ ಆಫ್ ಇಂಡಿಯಾ , ಇವೆರಡೂ ಕೋಲ್ಕತ್ತಾದಲ್ಲಿ ಪ್ರಕಟಗೊಳ್ಳುತ್ತವೆ. ದಿ ಇಂಗ್ಲಿಷ್‌ಮನ್ ಪತ್ರಿಕೆಯು 1811ರಲ್ಲಿ ಆರಂಭವಾಯಿತು. ರಾಬರ್ಟ್ ನೈಟ್ ಎಂಬ ಒಬ್ಬ ಇಂಗ್ಲಿಷ್ ವ್ಯಕ್ತಿ 1875ರ ಜನವರಿ 15ರಂದು ದಿ ಸ್ಟೇಟ್ಸ್‌ಮನ್‌ ಆಂಡ್ ದಿ ನ್ಯೂ ಫ್ರೆಂಡ್ ಆಫ್ ಇಂಡಿಯಾ ಎಂಬ ಹೆಸರಿನಲ್ಲಿ ಒಂದು ಹೊಸ ಸಮಾಚಾರ ಪತ್ರಿಕೆಯನ್ನು ಆರಂಭಿಸಿದನು. ಅನಂತರ ಆ ಹೆಸರು ಈಗಿನ ದಿ ಸ್ಟೇಟ್ಸ್‌ಮನ್‌ ಎಂಬುದಾಗಿ ಬದಲಾಯಿತು. ಬ್ರಿಟಿಷರ ಕಾಲದಲ್ಲಿ ಇದು ಬ್ರಿಟಿಷ್ ಆಡಳಿತದಿಂದ ನಡೆಸಲ್ಪಡುತ್ತಿತ್ತು ಮತ್ತು ನಿರ್ವಹಿಸಲ್ಪಡುತ್ತಿತ್ತು. ಆದರೆ ಸ್ವಾತಂತ್ರ್ಯಾ ನಂತರ ಇದರ ನಿಯಂತ್ರಣವು ಭಾರತೀಯರಿಗೆ ಹೋಯಿತು.

2009ರ ಫೆಬ್ರವರಿಯಲ್ಲಿ ದಿ ಸ್ಟೇಟ್ಸ್‌ಮನ್‌ನ ಸಂಪಾದಕರು (ರವೀಂದ್ರ ಕುಮಾರ್) ಮತ್ತು ಪ್ರಕಾಶಕರು (ಆಗಿನ ಆನಂದ್ ಸಿಂಹ) ಮುಸ್ಲೀಮರ "ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿದ್ದಾರೆ" ಎಂಬ ಆಪಾದನೆಗಾಗಿ ಬಂಧನಕ್ಕೊಳಗಾದರು.[೩] BBC ಹೀಗೆಂದು ವರದಿ ಮಾಡಿದೆ - ದಿ ಸ್ಟೇಟ್ಸ್‌ಮನ್‌ ಜೊಹಾನ್ ಹರಿಯ ಲೇಖನ "ವೈ ಶುಡ್ ಐ ರೆಸ್ಪೆಕ್ಟ್ ದೀಸ್ ಒಪ್ರೆಸ್ಸಿವ್ ರಿಲೀಜಿಯನ್ಸ್?"ಅನ್ನು ನಕಲು ಮಾಡಿದುದನ್ನು ಮುಸ್ಲೀಮರು ನಿರಾಕರಿಸಿದ್ದಾರೆ. ಅದು ಆ ಲೇಖನವನ್ನು ದಿ ಇಂಡಿಪೆಂಡೆಂಟ್ ದಿನಪತ್ರಿಕೆಯ ಫೆಬ್ರವರಿ 5ರ ಆವೃತ್ತಿಯಿಂದ ತೆಗೆದುಕೊಂಡಿದೆ. [೪]

ಗುಣಲಕ್ಷಣ[ಬದಲಾಯಿಸಿ]

ಈ ಪತ್ರಿಕೆಯು ಪ್ರಚಂಡ ಪ್ರಭಾವಿವರ್ಗ-ವಿರೋಧಿ ನಿಲುವಿಗೆ ಹೆಸರುವಾಸಿಯಾಗಿದೆ. ಇದು 1911ರಲ್ಲಿ ಭಾರತದ ರಾಜಧಾನಿಯನ್ನು ಕೋಲ್ಕತ್ತಾದಿಂದ ನವದೆಹಲಿಗೆ ಬದಲಾಯಿಸುವುದನ್ನು ಈ ಕೆಳಗಿನಂತೆ ವಿರೋಧಿಸಿತು: "ಬ್ರಿಟಿಷರು ಸಮಾಧಿ ಮಾಡುವುದಕ್ಕಾಗಿ ಆ ಸ್ಮಶಾನ ನಗರಕ್ಕೆ ಹೋದರು".

ಇದು 1975-77ರ ಇಂದಿರಾ ಗಾಂಧಿಯ ತುರ್ತುಪರಿಸ್ಥಿತಿ ಘೋಷಣೆಯನ್ನು ವಿರೋಧಿಸಿತು.

ಮೂಲಕಾರಣವನ್ನು ಗಣನೆಗೆ ತೆಗೆದುಕೊಳ್ಳದೆ ಭಾರತೀಯ ಬಡತನದ ಸಾಮಾಜಿಕ ಉದ್ಧಾರಕ್ಕಾಗಿ 'ಪ್ರಾದೇಶಿಕ ವರದಿಗಾಗಿ ದಿ ಸ್ಟೇಟ್ಸ್‌ಮನ್‌ ಪ್ರಶಸ್ತಿ'ಯನ್ನು ಪ್ರತಿ ವರ್ಷ ಶ್ರೇಷ್ಠ ಪತ್ರಕರ್ತರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಪ್ರತಿ ವರ್ಷ ಭಾರತೀಯ ಸರ್ವೋಚ್ಛ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶರಾದ ಮತ್ತು ಪ್ರಕ್ಷುಬ್ಧ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ದಿ ಸ್ಟೇಟ್ಸ್‌ಮನ್‌ನ ಅಧ್ಯಕ್ಷರಾಗಿದ್ದ ನ್ಯಾಯಮೂರ್ತಿ ಸುಧಿ ರಂಜಾನ್ ದಾಸ್ ನಿಧನವಾದ ದಿನದಂದು ಸೆಪ್ಟೆಂಬರ್ 16ರಂದು ಕೊಡಲಾಗುತ್ತದೆ.

ಈ ಪತ್ರಿಕೆಯು ಅಚ್ಚುಕಟ್ಟಾಗಿ ವರದಿ ಮಾಡುವ ಶೈಲಿಯಿಂದ ವಿಶಿಷ್ಟವಾಗಿದೆ.

ಒಂದು ಕಾಲದಲ್ಲಿ ಹೆಚ್ಚು ವ್ಯಾಪಕವಾಗಿ ಓದಲ್ಪಡುತ್ತಿದ್ದ ಇಂಗ್ಲಿಷ್ ದಿನಪತ್ರಿಕೆಯಾಗಿದ್ದ ದಿ ಸ್ಟೇಟ್ಸ್‌ಮನ್‌ ಇಂದು ದಿ ಟೈಮ್ಸ್ ಆಫ್ ಇಂಡಿಯಾ , ಹಿಂದುಸ್ತಾನ್ ಟೈಮ್ಸ್ ಮತ್ತು ದಿ ಟೆಲಿಗ್ರಾಫ್ (ಕೋಲ್ಕತ್ತಾ ಆವೃತ್ತಿ) ಮೊದಲಾದ ಪತ್ರಿಕೆಗಳಿಗೆ ಸ್ಥಾನವನ್ನು ಬಿಟ್ಟುಕೊಟ್ಟಿದೆ.

ಪುರವಣಿಗಳು[ಬದಲಾಯಿಸಿ]

ದಿ ಸ್ಟೇಟ್ಸ್‌ಮನ್‌ನ ಪ್ರಮುಖ ಪುರವಣಿಗಳಲ್ಲಿ "ಸೆಕ್ಷನ್ 2" ಎಂಬ ಗುರುವಾರದ ವಿಶೇಷ ಪುರವಣಿಯು ನವದೆಹಲಿಯಲ್ಲಿ ಪ್ರಕಟಗೊಳ್ಳುತ್ತದೆ. ಈ ನಾಲ್ಕು ಪುಟದ ಪುರವಣಿಯು ಕಲೆ, ನೃತ್ಯ, ನಾಟಕ, ಫ್ಯಾಷನ್, ಜೀವನ ಶೈಲಿ ಮತ್ತು ಮನರಂಜನೆ ಮೊದಲಾದವುಗಳ ಗಹನವಾದ ವಿಶ್ಲೇಷಣೆಗೆ ಹೆಸರುವಾಸಿಯಾಗಿದೆ. ಕೋಲ್ಕತ್ತಾದಲ್ಲಿ ವಾಯ್ಸಸ್ ಪುರವಣಿಯು ಶಾಲೆ ಮತ್ತು ಶಾಲಾ ಮಕ್ಕಳನ್ನು ಕೇಂದ್ರೀಕರಿಸುತ್ತದೆ. ಇದು 1995ರಲ್ಲಿ ಆರಂಭಗೊಂಡಂದಿನಿಂದ ಅಗಾಧ ಜನಪ್ರಿಯತೆಯನ್ನು ಗಳಿಸಿದೆ. ಇದು ಶಾಲಾ ಮಕ್ಕಳಿಗೆ ಸಂಶೋಧನಾ ಲೇಖನಗಳು, ಪದ್ಯಗಳು ಮತ್ತು ಸಣ್ಣ ಸುದ್ದಿ ತುಣುಕುಗಳೊಂದಿಗೆ ತಮ್ಮ ಬರೆಯುವ ಕೌಶಲವನ್ನು ಪ್ರದರ್ಶಿಸುವ ಅವಕಾಶವನ್ನು ಒದಗಿಸುತ್ತದೆ.

ವಾಯ್ಸಸ್ ಅತಿ ಹೆಚ್ಚಿನ ಸಂಖ್ಯೆಯ "ಸಂಯೋಜಕರು" ಅಥವಾ ಶಾಲಾ ವರದಿಗಾರರನ್ನು ಹೊಂದಿದೆ, ಇವರು ವಾಯ್ಸಸ್‌ ‌ನ ಮೂಲಾಧಾರವಾಗಿ ಹಾಗೂ ದಿ ಸ್ಟೇಟ್ಸ್‌ಮನ್‌ ಮತ್ತು ಶಾಲಾ ಮಕ್ಕಳ ನಡುವಿನ ನಾಲೆಯಾಗಿ ಕಾರ್ಯನಿರ್ವಹಿಸುತ್ತಾರೆ. ಇತರ ಚಟುವಟಿಕೆಗಳೊಂದಿಗೆ ಪ್ರತಿ ವರ್ಷ ವಾಯ್ಸಸ್‌ ಕೋಲ್ಕತ್ತಾದಲ್ಲಿ "ವೈಬ್ಸ್" ಎಂಬ 2-ದಿನದ ದೀರ್ಘ ಉತ್ಸವವನ್ನು ನಡೆಸುತ್ತದೆ. ಇದು ವಿವಿಧ ಕ್ಷೇತ್ರಗಳಲ್ಲಿ ಅಂತರ್-ಶಾಲಾ ಸ್ಪರ್ಧೆಗಳನ್ನು ಹಾಗೂ ಪ್ರಸಿದ್ಧ ಸಂಗೀತಗಾರರಿಂದ ಮತ್ತು ವಾದ್ಯ-ವೃಂದಗಳಿಂದ ಪ್ರದರ್ಶನಗಳನ್ನು ನಡೆಸುತ್ತದೆ.

ಭಾನುವಾರದ ಪುರವಣಿ ಎಯಿತ್ ಡೇ ಈ ಪತ್ರಿಕೆಯ ಪ್ರಮುಖ ಸಾಹಿತ್ಯ ವಿಭಾಗವಾಗಿದ್ದು, ಅದು ಓದುಗರು ನೀಡಿದ 'ಸಣ್ಣ ಕಥೆ' ಮತ್ತು 'ಪದ್ಯ' ಮೊದಲಾದವನ್ನು ಒಳಗೊಂಡಿರುತ್ತದೆ. ಮತ್ತೊಂದು ಭಾನುವಾರದ ಪುರವಣಿ ಎವಾಲ್ವ್ ಮುಖ್ಯವಾಗಿ ಭಾರತದ ಸಾಂಸ್ಕೃತಿಕ ಅಂಶದ ಕುರಿತಾಗಿದೆ. ಪ್ರತಿ ಶನಿವಾರ ಪ್ರಕಟಗೊಳ್ಳುವ ಮಾರ್ಕ್ಯೂ ಚಲನಚಿತ್ರ ಮತ್ತು ಮನರಂಜನೆಯ ವಿಷಯವನ್ನು ಒಳಗೊಳ್ಳುತ್ತದೆ.

ದಿ ಸ್ಟೇಟ್ಸ್‌ಮನ್‌ ಮತ್ತು ಬಾರ್ಟಮನ್ (ಬಂಗಾಳಿ ಸಮಾಚಾರ ಪತ್ರಿಕೆ) ಕಡಿಮೆ ಬೆಲೆಯಲ್ಲಿ ವಾರ್ಷಿಕ ಮತ್ತು ಅರ್ಧವಾರ್ಷಿಕ ಚಂದಾದಾರಿಕೆಗಾಗಿ ಅವುಗಳ ಮೂಲಗಳನ್ನು ಸೇರಿಸಿಕೊಂಡಿವೆ.[೫]

ಪ್ರಮುಖ ಸಂಪಾದಕೀಯ ವ್ಯಕ್ತಿಗಳು[ಬದಲಾಯಿಸಿ]

ರವೀಂದ್ರ ಕುಮಾರ್ ದಿ ಸ್ಟೇಟ್ಸ್‌ಮನ್‌ನ ಸಂಪಾದಕರಾಗಿದ್ದಾರೆ. ಉಷಾ ಮಹಾದೇವನ್ ದೆಹಲಿಯ ದಿ ಸ್ಟೇಟ್ಸ್‌ಮನ್‌ನ ಸ್ಥಾನಿಕ ಸಂಪಾದಕರಾಗಿದ್ದಾರೆ. ಕೆ. ರವಿ ಭುಬನೇಶ್ವರದ ದಿ ಸ್ಟೇಟ್ಸ್‌ಮನ್‌ನ ಸ್ಥಾನಿಕ ಸಂಪಾದಕರಾಗಿದ್ದಾರೆ.

ಸಹೋದರ ಪ್ರಕಾಶನ ಸಂಸ್ಥೆ[ಬದಲಾಯಿಸಿ]

ಬಂಗಾಳಿ ದಿನಪತ್ರಿಕೆ ದೈನಿಕ್ ಸ್ಟೇಟ್ಸ್‌ಮನ್ 2004ರ ಜೂನ್‌ನಲ್ಲಿ ಆರಂಭಗೊಂಡಿತು ಹಾಗೂ ಇದು ಕೋಲ್ಕತ್ತಾ ಮತ್ತು ಸಿಲಿಗುರಿಯಲ್ಲಿ ಏಕಕಾಲದಲ್ಲಿ ಪ್ರಕಟಗೊಳ್ಳುತ್ತದೆ.

ಇವನ್ನೂ ಗಮನಿಸಿ[ಬದಲಾಯಿಸಿ]

  • ದೈನಿಕ್ ಸ್ಟೇಟ್ಸ್‌ಮನ್
  • ಪ್ರಸರಣದ ಆಧಾರದ ಮೇಲೆ ಭಾರತದ ಸಮಾಚಾರ ಪತ್ರಿಕೆಗಳ ಪಟ್ಟಿ
  • ಪ್ರಸರಣದ ಆಧಾರದ ಮೇಲೆ ಪ್ರಪಂಚದ ಸಮಾಚಾರ ಪತ್ರಿಕೆಗಳ ಪಟ್ಟಿ

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]