ಪಾಯಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Ingredients for kheer
Sagukhiri, a khiri made in Odisha.
Kheer made from semolina (suji)

ಪಾಯಸವು ದಕ್ಷಿಣ ಭಾರತದ ಒಂದು ಪ್ರಸಿದ್ಧ ಸಿಹಿಯಾದ, ಸುವಾಸಿತವಾದ, ಹೆಚ್ಚಾಗಿ ಭೋಜನದ ಬಳಿಕ ತಿನ್ನುವ ತಿನಿಸಾಗಿದೆ. ಇದು ಹೆಚ್ಚಾಗಿ ಹಬ್ಬ, ವಿಶೇಷ ದಿನದಂದು ತಯಾರಿಸುತ್ತಾರೆ. ಪಾಯಸ ತುಂಬಾ ಮುಖ್ಯ ತಿನಿಸಾಗಿದ್ದು, ಇದನ್ನು ಮಗುವಿನ ಅನ್ನಪ್ರಾಶನದಲ್ಲೂ ಬಳಸುತ್ತಾರೆ. ಈಗಂತೂ ನೂರಾರು ಬಗೆಬಗೆಯ ಪಾಯಸಗಳನ್ನು ಮಾಡುವ ಕ್ರಮ ರೂಢಿಯಲ್ಲಿದೆ.[೧]

ಬಳಸುವ ವಸ್ತುಗಳು[ಬದಲಾಯಿಸಿ]

ಇದನ್ನು ಅಕ್ಕಿ, ಕಡಲೆಬೇಳೆ, ಹೆಸರುಬೇಳೆ, ಗಸಗಸೆ, ಶ್ಯಾವಿಗೆ, ರವೆ, ಸಬ್ಬಕ್ಕಿ, ಗೋಧಿ, ಒಣಹಣ್ಣು (ಡ್ರೈ ಫ್ರೂಟ್ಸ್) ಮುಂತಾದವುಗಳಿಂದಲೂ ತಯಾರಿಸಲಾಗುತ್ತದೆ. ಇದನ್ನು ದೇವಸ್ಥಾನದಲ್ಲಿಯೂ ತಯಾರಿಸುತ್ತಾರೆ. ನಂತರ ಪಾಯಸವನ್ನು ಪ್ರಸಾದವನ್ನಾಗಿ ಕೂಡ ದೇವಸ್ಥಾನದಲ್ಲಿ ನೀಡುತ್ತಾರೆ. ಇದನ್ನು ರುಚಿಗೊಳಿಸಲು ವೆರ್ಯ್ ಬೀಜ, ಹಾಲು, ಸಕ್ಕರೆ, ಬೆಲ್ಲ, ಬಾದಾಮಿ, ಏಲಕ್ಕಿ, ಒಣ ಶುಂಠಿ, ಒಣದ್ರಾಕ್ಷಿ, ಗೋಡಂಬಿಯನ್ನು ಬಳಸುತ್ತಾರೆ. ಭಾರತದಲ್ಲಿ ಹಿಂದೂ ಹಬ್ಬ, ಮುಸ್ಲೀಂ, ಕ್ರಿಶ್ಚಿಯನ್ ಹಬ್ಬಗಳ ಸಮಯದಲ್ಲೂ ಇದೊಂದು ಮುಖ್ಯ ಸಿಹಿ ತಿನಿಸಾಗಿ ಪ್ರಸಿದ್ದವಾಗಿದೆ. ಮಾಡುವ ವಿಧಾನದಲ್ಲಿ ಪ್ರಾಂತ್ಯ ಭಿನ್ನತೆಯನ್ನು ಗುರುತಿಸಬಹುದಾಗಿದೆ.[೨]

ಪಾಯಸದ ಬಳಕೆ[ಬದಲಾಯಿಸಿ]

  • ದಕ್ಷಿಣ ಭಾರತದ ವಿವಾಹ, ನಾಮಕರಣ ಮುಂತಾದ ವಿಶೇಷ ಸಂದರ್ಭದ ಊಟದಲ್ಲಿ, ಪಾಯಸವನ್ನು ಬಾಳೆ ಎಲೆಯಲ್ಲಿ ಮೊದಲು ಬಡಿಸಲಾಗುತ್ತದೆ.
  • ಕೇರಳದ ಅಡುಗೆಯಲ್ಲಿ ಬೇರೆ ಬೇರೆ ಹಣ್ಣುಗಳಿಂದ ಪಾಯಸ ಮಾಡುತ್ತಾರೆ. ಇದು ಕೇರಳದ ಓಣ್ಂ ಹಬ್ಬದ ಸಾಡ್ಯ ಎಂಬ ಹೆಸರಿನಲ್ಲೂ ಕೇಳಿಬರುತ್ತದೆ. ಇದರಲ್ಲಿ ಹಲಸಿನ ಹಣ್ಣಿನ ಪಾಯಸ ಪ್ರಮುಖವಾಗಿದೆ.
  • ಹೈದರಾಬಾದ್ ನಲ್ಲಿ ಹಾಲು ಮತ್ತು ಸೋರೆಕಾಯಿಯಿಂದ ತಯಾರಿಸಿದ ಪಾಯಸ ತುಂಬಾ ಪ್ರಸಿದ್ಧವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. ತುಪ್ಪ-ಹಾಲಿನ ಜುಗಲ್ ಬಂದಿಯ ಶಾವಿಗೆ ಪಾಯಸ
  2. ನವರಾತ್ರಿ ಸ್ಪೆಷಲ್-ಹೆಸರುಬೇಳೆ ಪಾಯಸ
"https://kn.wikipedia.org/w/index.php?title=ಪಾಯಸ&oldid=816955" ಇಂದ ಪಡೆಯಲ್ಪಟ್ಟಿದೆ