ವಿಷಯಕ್ಕೆ ಹೋಗು

ಪರ್ವೀನ್ ಸುಲ್ತಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Parveen Sultana
ಹಿನ್ನೆಲೆ ಮಾಹಿತಿ
ಮೂಲಸ್ಥಳಅಸ್ಸಾಂ, ಭಾರತ
ಸಂಗೀತ ಶೈಲಿಖಯಾಲ್, ಭಜನ್, ಠುಮ್ರಿ
ವೃತ್ತಿಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ
ವಾದ್ಯಗಳುಗಾಯಕಿ
ಸಕ್ರಿಯ ವರ್ಷಗಳು1962–present

ಬೇಗಂ ಪರ್ವೀನ್ ಸುಲ್ತಾನ (ಜನನ | ೧೯೫೦)ರು ಅಸ್ಸಾಂ ನ ಹಿಂದುಸ್ತಾನಿ ಶಾಸ್ತ್ರಿಯಗಾಯಕಿ. ಇವರು ಪಟಿಯಾಲ ಘರಾಣಕ್ಕೆ ಸೇರಿದವರು. ಇವರು ಭಾರತದ ಉತ್ತಮ ಗಾಯಕಿಯರಲ್ಲಿ ಒಬ್ಬರು. ಇವರಿಗೆ ೧೯೭೬ ರಲ್ಲಿ ಪದ್ಮಶ್ರೀ ಪ್ರಶಸ್ತಿ ಯನ್ನು ನೀಡಲಾಯಿತು.

ವೈಯಕ್ತಿಕ ಜೀವನ ಮತ್ತು ಹಿನ್ನೆಲೆ

[ಬದಲಾಯಿಸಿ]

ಪರ್ವೀನ್ ಸುಲ್ತಾನ, ಅಸ್ಸಾಂ ರಾಜ್ಯದ ನೋವ್ಗೊಂಗ್ ಪಟ್ಟಣದ, ದಚ್ಕಾಪತ್ತಿ ಇಂಡಿಯಾ ಎಂಬಲ್ಲಿ ಇಕ್ರಮುಲ್ ಮಾಜಿದ್ ಮತ್ತು ಮರೂಫಾ ಮಾಜಿದ್ ದಂಪತಿಗಳಿಗೆ ಜನಿಸಿದರು. ಇವರು ಮಿಶನ್ ಶಾಲೆಯಲ್ಲಿ ತಮ್ಮ ಶಿಕ್ಷಣವನ್ನು ಪಡೆದರು. ಇವರ ತಂದೆ ದಿವಂಗತ ಇಕ್ರಮುಲ್ ಮಾಜಿದ್ ಇವರ ಮೊದಲ ಗುರುವಾಗಿದ್ದರು. ಇವರು ತಮ್ಮ ಅಜ್ಜ ಮೊಹಮ್ಮೆದ್ ನಜೀಫ್ ಖಾನ್ ರಿಂದಲೂ ತರಬೇತಿ ಪಡೆದರು. ನಂತರ ಕೊಲ್ಕತ್ತಾ ಕ್ಕೆ ಪಯಣಿಸಿ ಅಲ್ಲಿ ದಿವಂಗತ ಪಂಡಿತ್ ಚಿನ್ಮೊಯ್ ಲಾಹಿರಿಯ ಅವರಿಂದ ಮಾರ್ಗದರ್ಶನ ಪಡೆದರು. ೧೯೭೩ ರಿಂದ ಇವರು ಉಸ್ತಾದ್ ದಿಲ್ಶಾದ್ ಖಾನ್(ಪಟಯಾಲ ಘರಾಣ)ಇವರ ಶಿಷ್ಯೆಯಾದರು. ನಂತರದ ದಿನಗಳಲ್ಲಿ ಇವರು ಉಸ್ತಾದ್ ದಿಲ್ಶಾದ್ ಖಾನ್ .[] ರನ್ನೇ ಮದುವೆಯಾದರು. ಇವರಿಗೆ ಒಬ್ಬ ಮಗಳಿದ್ದಾಳೆ.

ವೃತ್ತಿಜೀವನ

[ಬದಲಾಯಿಸಿ]

ಪರ್ವೀನ್ ಸುಲ್ತಾನರು ತಮ್ಮ ೧೨ನೆಯ ವಯಸ್ಸಿನಿಂದಲೇ ಸಂಗೀತ ಕಚೇರಿಗಳನ್ನು ಕೊಡಲು ಪ್ರಾರಂಭಿಸಿದರು ಮತ್ತು ೧೯೬೫ ರಿಂದಲೇ ದ್ವನಿಮುದ್ರಿತ ಸಂಗೀತವನ್ನು ನೀಡಲು ಆರಂಭಿಸಿದರು. ಪರ್ವೀನ್ ಸುಲ್ತಾನ,ಗದಾರ್ , ಕುದ್ರತ್ , ದೋ ಬೂಂದ್ ಪಾನಿ ಮತ್ತು ಪಾಕೀಜ ಮುಂತಾದ ಹಿಂದಿ ಚಲನಚಿತ್ರಗಳಲ್ಲಿ ಹಾಡಿದ್ದಾರೆ. ಅಲ್ಲದೆ ಹಮೆ ತುಮ್ಸೆ ಪ್ಯಾರ್ ಕಿತನಾ - ಕುದ್ರತ್ ಮೊದಲಾದ ಹಿಂದಿ ಚಲನಚಿತ್ರಗಳಿಗೆ ೧೯೮೧ರಲ್ಲಿ ಹಾಡಿದ್ದಾರೆ. ಪರ್ವೀನ್ ಸುಲ್ತಾನ ಹೆಚ್.ಎಂ.ವಿ, ಪೋಲಿದೊರ್, ಮ್ಯೂಸಿಕ್ ಇಂಡಿಯಾ, ಭಾರತ್ ರೆಕಾರ್ಡ್ಸ್, ಆವಿದಿಸ್, ಮಗ್ನಸೌಂದ್, ಸೋನೋದಿಸ್ಕ್, ಅಮಿಗೋ .[] ಮುಂತಾದ ಸಂಸ್ಥೆಗಳಲ್ಲಿ ತಮ್ಮ ಸಂಗೀತದ ದ್ವನಿಮುದ್ರಣ ನಡೆಸಿದ್ದಾರೆ.

ಪ್ರಶಸ್ತಿಗಳು ಮತ್ತು ಮಾನ್ಯತೆ

[ಬದಲಾಯಿಸಿ]
  • ಪದ್ಮಶ್ರೀ ಪ್ರಶಸ್ತಿ - ೧೯೭೬
  • ಗಂಧರ್ವ ಕಲಾನಿಧಿ - ೧೯೮೦
  • ಮಿಯಾ ತಾನ್ಸೇನ್ ಪ್ರಶಸ್ತಿ. - ೧೯೮೬
  • "ಸಂಗೀತ ಸಾಮ್ರಾಜ್ಞಿ" ಅಸ್ಸಾಂ ಸರಕಾರ ದಿಂದ - ೧೯೯೪
  • ಫಿಲಂ ಫೇರ್ ನಿಂದ --ಕುದ್ರತ್ (೧೯೮೧) ಚಿತ್ರದ "ಹಮೆ ತುಮ್ಸೆ ಪ್ಯಾರ್ ಕಿತನಾ "[೧] Archived 2009-06-12 ವೇಬ್ಯಾಕ್ ಮೆಷಿನ್ ನಲ್ಲಿ. ಹಾಡಿಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ.
  • ೧೯೯೯ ರಲ್ಲಿ ಸಂಗೀತ ನಾಟಕ ಅಕ್ಯಾಡೆಮಿ ಪ್ರಶಸ್ತಿ ಪುರಸ್ಕೃತರು
  • ಅಸ್ಸಾಂ ಸರಕಾರದಿಂದ ಶ್ರೀಮಂತ್ ಸಂಕರದೇವ್ ಪ್ರಶಸ್ತಿ .

ಧ್ವನಿಮುದ್ರಿಕೆ ಪಟ್ಟಿ

[ಬದಲಾಯಿಸಿ]

+ ಎವೆರ್ಗ್ರೀನ್ ಅಸ್ಸಾಮೀಸ್ ಸಾಂಗ್ : ಇಮಾನ್ ಧುನಿಯ ಬುಲಿ ನೋಕೊಬ ..ಮುರ್ ಲಾಜ್ ಲಾಗಿ ಜೈ

  • ಸಫರ್ (ರಾಗ ಮಾರು ಬೇಹಾಗ್ & C.)
  • ಪರ್ವೀನ್ (ರಾಗ ರಾಗೆಶ್ರಿ /ಮಿಶ್ರ ಮಂಡ್ )
  • ಪರ್ವೀನ್ ಸುಲ್ತಾನ ಮತ್ತು ದಿಲ್ಶಾದ್ ಖಾನ್
  • ದಿಲ್ಶಾದ್ ಖಾನ್ ಅಮತ್ತು ಪರ್ವೀನ್ ಸುಲ್ತಾನ - ಡಯಲಾಗ್ ಇನ್ ರಾಗ - ೧೯೯೭

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2011-02-16. Retrieved 2011-02-25.
  2. "ಆರ್ಕೈವ್ ನಕಲು". Archived from the original on 2009-01-06. Retrieved 2011-02-25.

ಬಾಹ್ಯ ಕೊಂಡಿಗಳು

[ಬದಲಾಯಿಸಿ]