ನಿಕೋಟಿನ್
Systematic (IUPAC) name | |
---|---|
3-[(2S)-1-methylpyrrolidin-2-yl]pyridine | |
Clinical data | |
ಗರ್ಭಧಾರಣೆಯ ವರ್ಗ | D (US) |
ಕಾನೂನು ಸ್ಥಿತಿ | Unscheduled (AU) Unscheduled (UK) Unscheduled, but age restricted. (US) |
Dependence liability | Medium to high |
Routes | smoked (as smoking tobacco, mapacho, etc.), insufflated (as tobacco snuff or nicotine nasal spray), chewed (as nicotine gum, tobacco gum or chewing tobacco), transdermal (as nicotine patch, nicogel or topical tobacco paste), intrabuccal (as dipping tobacco, snuffs, dissolvable tobacco or creamy snuff), vaporized (as electronic cigarette, etc.), directly inhaled (as nicotine inhaler), oral (as nicotini) |
Pharmacokinetic data | |
Bioavailability | 20 to 45% (oral) |
ಚಯಾಪಚಯ | hepatic |
Half-life | 2 hours |
Identifiers | |
CAS ಸಂಖ್ಯೆ | 54-11-5 |
ATC ಕೋಡ್ | N07BA01 QP53AX13 (WHO) |
ಪಬ್‌ಕೆಮ್ | CID 942 |
ಡ್ರಗ್ ಬ್ಯಾಂಕ್ | DB00184 |
ಕೆಮ್‌ಸ್ಪೈಡರ್ | 80863 |
Chemical data | |
ರಾಸಾಯನಿಕ ಸೂತ್ರ | C10H14N2 |
Mol. mass | 162.26 g/mol |
| |
Physical data | |
ಸಾಂದ್ರತೆ | 1.01 g/cm³ |
ಕರಗುವ ಬಿಂದು | -79 °C (-110 °F) |
ಕುದಿಯುವ ಬಿಂದು | 247 °C (477 °F) |
(what is this?) (verify) |
ನಿಕೋಟಿನ್ ನೈಟ್ ಶೇಡ್ (ಸೋಲಾನಾಸಿಯಾ ) ಸಸ್ಯವರ್ಗದಲ್ಲಿ ಕಂಡುಬರುವ, 0.6–3.0% ತೂಕದಷ್ಟು ಒಣ ತಂಬಾಕನ್ನು[೧][೨] ಹೊಂದಿದ್ದು, ಜೈವಿಕ ಸಂಯೋಜನೆಯು ಬೇರುಗಳಲ್ಲಿ ನಡೆಯುವುದರ ಜೊತೆ, ಸಾರವು ಎಲೆಗಳಲ್ಲಿ ಶೇಖರಿತವಾಗುವ ಸಸ್ಯಗಳಲ್ಲಿ ದೊರಕುವ ಒಂದು ಸಸ್ಯಕ್ಷಾರ. ಇದು ವಿಶೇಷತಃ ಕೀಟಗಳ ವಿಷಯದಲ್ಲಿ ಸಸ್ಯಾಹಾರಿವಿರೋಧಿ ರಾಸಾಯನಿಕವಾಗಿ ಕಾರ್ಯನಿರ್ವಹಿಸುತ್ತದೆ; ಆದ್ದರಿಂದ ನಿಕೋಟಿನ್ ಅನ್ನು ಹಿಂದಿನ ದಿನಗಳಲ್ಲಿ ವ್ಯಾಪಕವಾಗಿ ಕೀಟನಾಶಕವಾಗಿ ಬಳಸಲಾಗುತ್ತಿತ್ತು [೩][೪] ಮತ್ತು ಈಗ ಇಮಿಡಾಕ್ಲೋಪ್ರಿಡ್ ನಂತಹ ನಿಕೋಟಿನ್ ಮಾದರಿಯ ವಸ್ತುಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ.
ಕಡಿಮೆ ಸಾಂದ್ರತೆಗಳಲ್ಲಿ (ಒಂದು ಸಾಮಾನ್ಯ ಸಿಗರೇಟ್ ಸುಮಾರು ಒಂದು ಮಿಲಿಗ್ರಾಂ ಹೀರಲ್ಪಟ್ಟ ನಿಕೋಟಿನ್ ಹೊಂದಿರುತ್ತದೆ), ಇದು ಸಸ್ತನಿಗಳಲ್ಲಿ ಉತ್ತೇಜಕವಾಗಿ ಕೆಲಸ ಮಾಡುತ್ತದೆ ಹಾಗೂ ತತ್ಕಾರಣವಾಗಿ ತಂಬಾಕು ಸೇವನೆ(ಧೂಮಪಾನ)ಯ ಅವಲಂಬನ-ಉಂಟಾಗಿಸುವ ಗುಣಗಳ ಉತ್ಪನ್ನಕ್ಕೆ ಮೂಲ ವಸ್ತುವಾಗಿದೆ. "ಐತಿಹಾಸಿಕವಾಗಿ ನಿಕೋಟಿನ್ ವ್ಯಸನವು ಬಿಡಿಸಿಕೊಳ್ಳಲು ಬಹಳ ಕಷ್ಟವಾದ ವ್ಯಸನಗಳಲ್ಲಿ ಒಂದಾಗಿದೆ" ಎಂದು ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಅಭಿಪ್ರಾಯ ಪಡುತ್ತದೆ. ತಂಬಾಕಿನ ದುಶ್ಚಟವನ್ನು ಕಂಡುಹಿಡಿಯುವ ಔಷಧವಿಜ್ಞಾನ ಮತ್ತು ನಡುವಳಿಕೆಯ ಸ್ವರೂಪಗಳು ಹೆರಾಯಿನ್ ಮತ್ತು ಕೊಕೈನ್‌ನಂತಹ ಮಾದಕ ವಸ್ತುಗಳನ್ನು ಕಂಡುಹಿಡಿಯುವ ಸ್ವರೂಪಗಳಿಗೆ ಸಮನಾಗಿರುತ್ತವೆ.[೫] ಹಲವಾರು ವರ್ಷಗಳಿಂದೀಚೆಗೆ ಸಿಗಾರೆಟ್‌ನಲ್ಲಿನ ನಿಕೋಟಿನ್ ಅಂಶಗಳು ನಿಧಾನವಾಗಿ ಹೆಚ್ಚುತ್ತ ಬಂದಿದೆ, ಮತ್ತು 1998 ಮತ್ತು 2005 ನಡುವೆ ಪ್ರತಿ ವರ್ಷ ಸರಾಸರಿ 1.6% ನಿಕೋಟಿನ್ ಅಂಶಗಳು ಹೆಚ್ಚುತ್ತ ಬಂದಿವೆ ಎಂದು ಒಂದು ಅಧ್ಯಯನವು ಕಂಡುಹಿಡಿಯಿತು. ಇದು ಮಾರುಕಟ್ಟೆಯ ಪ್ರಮುಖ ಸಿಗಾರೆಟ್‌ನ ವಿಭಾಗಗಳಲ್ಲಿ ಕಂಡುಬಂದಿತು.[೬]
ಇತಿಹಾಸ ಮತ್ತು ಹೆಸರು
[ಬದಲಾಯಿಸಿ]ತಂಬಾಕಿನ ಗಿಡವಾದ ನಿಕೋಟಿಯಾನಾ ಟಬಾಕಮ್ ನಿಂದ ನಿಕೋಟಿನ್ ಎಂಬ ಹೆಸರು ವ್ಯುತ್ಪತ್ತಿಯಾಗಿದೆ. ಆ ಗಿಡವನ್ನು 1560ರಲ್ಲಿ ಔಷಧೀಯ ಉಪಯೋಗಗಳಿಗೆಂದು ಪರಿಚಯಗೊಳಿಸಲು ತಂಬಾಕು ಮತ್ತು ಅದರ ಬೀಜಗಳನ್ನು ಬ್ರೆಝಿಲ್ ನಿಂದ ಪ್ಯಾರಿಸ್ ಗೆ ಕಳುಹಿಸಿದ, ಪೋರ್ಚುಗಲ್ ದೇಶದಲ್ಲಿ ಫ್ರೆಂಚ್ ರಾಯಭಾರಿಯಾಗಿದ್ದ, ಜೀನ್ ನಿಕೋಟ್ ಡಿ ವಿಲ್ಲೆಮೇಯ್ನ್ ರ ಹೆಸರಿನಿಂದಲೇ ಗುರುತಿಸಲಾಗುತ್ತದೆ. ಟೊಬ್ಯಾಕೋ ಸಸ್ಯದಿಂದ ಮೊದಲ ಬಾರಿಗೆ 1828ರಲ್ಲಿ ನಿಕೋಟಿನ್ ಅನ್ನು ಪ್ರತ್ಯೇಕಿಸಿದ ಜರ್ಮನ್ ರಾಸಾಯನಿಕ ವಿಜ್ಞಾನಿಗಳಾದ ಪಾಸೆಲ್ಟ್ ಮತ್ತು ರೀಮನ್ ಅದು ವಿಷವೆಂದು ಪರಿಗಣಿಸಿದ್ದರು.[೭] ಅದರ ರಾಸಾಯನಿಕ ಪ್ರಯೋಗಸಿದ್ಧ ಸೂತ್ರವನ್ನು 1843ರಲ್ಲಿ ಮೆಲ್ಸೆನ್ಸ್ ವಿವರಿಸಿದರು,[೮] ಅದರ ರಚನೆಯ ವಿಧಿಯನ್ನು ಗ್ಯಾರಿ ಪಿನ್ನರ್ ರವರು 1893ರಲ್ಲಿ ಸಂಶೋಧಿಸಿದರು ಮತ್ತು 1904ರಲ್ಲಿ ಎ. ಪಿಕ್ಟೆಟ್ ಮತ್ತು ಕ್ರೆಪೀಯಕ್ಸ್ ರವರು ಅದನ್ನು ಮೊದಲ ಬಾರಿಗೆ ಸಂಯೋಜಿಸಿದರು.[೯]
ರಸಾಯನಶಾಸ್ತ್ರ
[ಬದಲಾಯಿಸಿ]ನಿಕೋಟಿನ್ ತೇವಾಕರ್ಷಕ, ಜಿಡ್ಡಾದ ದ್ರವವಾಗಿದ್ದು, ಅದರ ಮೂಲ(ಪ್ರತ್ಯಾಮ್ಲ) ರೂಪದಲ್ಲಿ ಜಲದೊಂದಿಗೆ ಮಿಶ್ರಯೋಗ್ಯವಾಗಿರುತ್ತದೆ. ನೈಟ್ರೋಜನ್‌ಯುಕ್ತ ಪ್ರತ್ಯಾಮ್ಲವಾಗಿ, ನಿಕೋಟಿನ್ ಸಾಮಾನ್ಯವಾಗಿ ಘನರೂಪದಲ್ಲಿರುವ ಮತ್ತು ನೀರಿನಲ್ಲಿ ಕರಗುವಂತಹ ಆಮ್ಲದ ಜೊತೆಗಿನ ಉಪ್ಪನ್ನು ತಯಾರಿಸುತ್ತದೆ. ನಿಕೋಟಿನ್ ಸುಲಭವಾಗಿ ಚರ್ಮವನ್ನು ಭೇದಿಸಿಕೊಂಡು ಹೋಗುತ್ತದೆ, ಭೌತಿಕ ಮಾಹಿತಿಯಿಂದ ತೋರಿಸಲ್ಪಟ್ಟಂತೆ, ಅನಿರ್ಬಂಧಿತ ಆಧಾರಿತ ನಿಕೋಟಿನ್ ತನ್ನ ಕುದಿಯುವ ಬಿಂದುವಿಗಿಂತ ಕಡಿಮೆ ಇರುವ ತಾಪಮಾನದಲ್ಲಿ ಚರ್ಮವನ್ನು ಸುಡುತ್ತದೆ, ಮತ್ತು ಇದರ ಆವಿಗಳು ಒಂದು ಕಡಿಮೆ ಮಟ್ಟದ ಬಾಷ್ಪೀಕರಣ ಒತ್ತಡವಿದ್ದಾಗ್ಯೂ 308 K (35 °C; 95 °F) ಗಾಳಿಯಲ್ಲಿ ದಹನ ಕ್ರಿಯೆಗೊಳಗಾಗುತ್ತವೆ. ಈ ಕಾರಣದಿಂದ, ಸಿಗಾರೆಟ್‌ಗಳು ಸೇದಲ್ಪಟ್ಟಾಗ ಹೆಚ್ಚಿನ ನಿಕೋಟಿನ್‌ಗಳು ದಹಿಸಲ್ಪಡುತ್ತವೆ; ಆದಾಗ್ಯೂ, ಆಶಿಸಲ್ಪಟ್ಟ ಪರಿಣಾಮಗಳನ್ನು ಒದಗಿಸಲು ಸಾಕಷ್ಟು ಪ್ರಮಾಣದ ನಿಕೋಟಿನ್‌ಗಳು ಒಳಸೇದಿಕೊಳ್ಳಲ್ಪಡುತ್ತವೆ. ತಂಬಾಕಿನ ಹೊಗೆಯಿಂದ ಒಳಸೇದಿಕೊಳ್ಳಲ್ಪಟ್ಟ ನಿಕೋಟಿನ್‌ನ ಪ್ರಮಾಣವು ತಂಬಾಕಿನ ಎಲೆಗಳಲ್ಲಿ ಸೇರಿಕೊಂಡಿರುವ ನಿಕೋಟಿನ್ ಪ್ರಮಾಣದ ಕೊಂಚ ಭಾಗ ಮಾತ್ರವೇ ಆಗಿರುತ್ತದೆ.[ಸೂಕ್ತ ಉಲ್ಲೇಖನ ಬೇಕು]
ದೃಗ್ವಿಜ್ಞಾನ ಚಟುವಟಿಕೆಗಳು
[ಬದಲಾಯಿಸಿ]ಎರಡು ಪ್ರತ್ಯಂಗಿ ವಿಧಗಳನ್ನು ಹೊಂದಿರುವ ನಿಕೋಟಿನ್ ದೃಗ್ವೈಜ್ಞಾನಿಕವಾಗಿ ಕ್ರಿಯಾಶೀಲವಾಗಿರುತ್ತದೆ. ಸ್ವಾಭಾವಿಕವಾಗಿ ನಿಕೋಟಿನ್‌ನ ಸಂಭವಿಸುವ ವಿಧವು [α]D = –166.4° ಜೊತೆಗಿನ ಲಿವೋರೊಟೇಟರಿ ವಿಧವಾಗಿರುತ್ತದೆ. ದಕ್ಷಿಣ ಭ್ರಾಮಕ ವಿಧದ (+)- ನಿಕೋಟಿನ್, (–)- ನಿಕೋಟಿನ್‌ನ ಕೇವಲ ಅರ್ಧ ಭಾಗದಷ್ಟು ಭೌತವೈಜ್ಞಾನಿಕ ಚಟುವಟಿಕೆಗಳನ್ನು ಹೊಂದಿರುತ್ತದೆ. ಆದ್ದರಿಂದ, ಅದೇ ರೀತಿಯಾದ ಪರಿಣಾಮಗಳನ್ನು ಪಡೆಯಲು ಹೆಚ್ಚಿನ ಪ್ರಮಾಣದ ನಿಕೋಟಿನ್ ಬೇಕಾಗುತ್ತದೆ ಎಂಬ ವಿಷಯದಲ್ಲಿ ಇದು ಬಹಳ ದುರ್ಬಲವಾಗಿರುತ್ತದೆ.[೧೦] (+)- ನಿಕೋಟಿನ್‌ನ ಲವಣಗಳು ಸ್ವಾಭಾವಿಕವಾಗಿ ದಕ್ಷಿಣ ಭ್ರಾಮಕವಾಗಿರುತ್ತವೆ.
ಔಷಧ ವಿಜ್ಞಾನ
[ಬದಲಾಯಿಸಿ]ಭೌತಿಕ ಔಷಧ ಅಧ್ಯಯನ
[ಬದಲಾಯಿಸಿ]ನಿಕೋಟಿನ್ ದೇಹವನ್ನು ಪ್ರವೇಶಿಸುತ್ತಿದ್ದಂತೆಯೇ, ರಕ್ತನಾಳಗಳ ಮೂಲಕ ಅದು ತ್ವರಿತವಾಗಿ ವಿತರಣೆಗೊಳ್ಳುತ್ತದೆ ಮತ್ತು ರಕ್ತ-ಮೆದುಳು-ಪ್ರತಿಬಂಧವನ್ನು ಉಂಟುಮಾಡುವ ಸಾಧ್ಯತೆಗಳಿರುತ್ತವೆ. ಒಳಕ್ಕೆ ಎಳೆದುಕೊಂಡಾಗ ಈ ವಸ್ತುವು ಮೆದುಳು ಸೇರಲು ತೆಗೆದುಕೊಳ್ಳುವ ಸರಾಸರಿ ಸಮಯ ಏಳು ಸೆಕೆಂಡ್‌ಗಳು[ಸೂಕ್ತ ಉಲ್ಲೇಖನ ಬೇಕು] ನಿಕೋಟಿನ್‌ನ ದೇಹದಲ್ಲಿನ ಅರೆ ಜೀವವು ಸುಮಾರು ಎರಡು ಗಂಟೆಗಳಷ್ಟಿರುತ್ತದೆ.[೧೧]
ದೇಹವು ನಿಕೋಟಿನ್ ಧೂಮಪಾನದಿಂದ ನಿಕೋಟಿನ್ ಅನ್ನು ಸೆಳೆಸುಕೊಳ್ಳುವ ಪ್ರಮಾಣವು ಹಲವಾರು ಅಂಶಗಳ ಮೇಲೆ ಆಧಾರಿತವಾಗಿರುತ್ತದೆ; ಬಳಸುತ್ತಿರುವ ತಂಬಾಕಿನ ವಿಧ, ಧೂಮವನ್ನು ಒಳಗೆಳೆದುಕೊಳ್ಳಲಾಯಿತೋ ಇಲ್ಲವೋ ಎಂಬುದು ಹಾಗೂ ಫಿಲ್ಟರ್ ಅನ್ನು ಬಳಸಲಾಗಿದೆಯೋ ಇಲ್ಲವೋ ಎಂಬಂತಹವು ಸಹ ಆ ಪಟ್ಟಿಯಲ್ಲಿನ ಕೆಲವು ಅಂಶಗಳು. ಜಗಿಯುವ ತಂಬಾಕು, ಅದ್ದುವ ತಂಬಾಕು, ತುಟಿ ಮತ್ತು ಹಲ್ಲಿನ ಒಸಡುಗಳ ನಡುವೆ ಇಟ್ಟುಕೊಳ್ಳಲ್ಪಟ್ಟ ಅಥವಾ ಮೂಗಿನ ಮೂಲಕ ತೆಗೆದುಕೊಳ್ಳಲ್ಪಟ್ಟ ಸ್ನಸ್ ಮತ್ತು ನಶ್ಯದ ಪುಡಿಗಳಲ್ಲಿ, ದೇಹಕ್ಕೆ ಬಿಡುಗಡೆಯಾಗಲ್ಪಟ್ಟ ನಿಕೋಟಿನ್‌ನ ಪ್ರಮಾಣವು ತಂಬಾಕನ್ನು ಸೇದಿದ್ದರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ನಿಕೋಟಿನ್ ಪಿತ್ತಜನಕಾಂಗದಲ್ಲಿ ಸೈಟೋಕ್ರೋಮ್ ಪಿ450 ಕಿಣ್ವಗಳ ಮೂಲಕ (ಹೆಚ್ಚಾಗಿ CYP2A6 ಮೂಲಕ, ಮತ್ತು ಕಿಣ್ವಗಳ ಮೂಲಕವೂ) ಚಯಾಪಚಯವಾಗಲ್ಪಡುತ್ತದೆ. ಒಂದು ಪ್ರಮುಖ ಚಯಾಪಯವೆಂದರೆ ಕೊಟಿನಿನ್.
ಇತರ ಪ್ರಾಥಮಿಕ ಚಯಾಪಚಯ ಕ್ರಿಯೆಗಳು ಎನ್-ಆಕ್ಸೈಡ್, ನೊರ್‌ನಿಕೋಟಿನ್, ನಿಕೋಟಿನ್ ಐಸೋಮೇಥೋನಿಯಮ್, 2-ಹೈಡ್ರೊಕ್ಸಿನಿಕೋಟಿನ್ ಮತ್ತು ನಿಕೋಟಿನ್ ಗ್ಲುಕರೋನೈಡ್ ಅನ್ನು ಒಳಗೊಳ್ಳುತ್ತದೆ.[೧೨]
ನಿಕೋಟಿನ್‌ನ ಗ್ಲುಕರೋನೈಡೇಷನ್ ಮತ್ತು ಆಕ್ಸಿಡೇಟಿವ್ ಈ ಎರಡೂ ಚಯಾಪಯಗಳು ಮೆಂತಾಲ್ ಅನ್ನು ಒಳಗೊಂಡ ಸಿಗರೆಟ್‌ಗಳ ಒಂದು ಸಂಯೋಜಕವಾದ ಮೆಂತಾಲ್‌ನಿಂದ ಪ್ರತಿರೋಧವನ್ನು ಒಡ್ಡಲ್ಪಡುತ್ತವೆ, ಆದ್ದರಿಂದ ನಿಕೋಟಿನ್ ಇನ್ ವೈವೋ ದ ಅರ್ಧ-ಜೀವನವನ್ನು ಹೆಚ್ಚಿಸುತ್ತದೆ.[೧೩]
Pharmacodynamics
[ಬದಲಾಯಿಸಿ]ನಿಕೋಟಿನ್ ಇದು ನಿಕೋಟಿನ್ ಹೊಂದಿದ ಅಸೆಟೈಕೋಲಿನ್ ಗ್ರಾಹಕಗಳ ಮೇಲೆ ಕಾರ್ಯ ನಿರ್ವಹಿಸುತ್ತದೆ, ನಿರ್ದಿಷ್ಟವಾಗಿ ನರಗ್ರಂಥಿ ವಿಧದ ನಿಕೋಟಿನ್ ಹೊಂದಿದ ಗ್ರಾಹಕ ಮತ್ತು ಒಂದು ಸಿಎನ್‌ಎಸ್ ನಿಕೋಟಿನ್ ಹೊಂದಿದ ಗ್ರಾಹಕಗಳ ಮೇಲೆ ಕಾರ್ಯ ನಿರ್ವಹಿಸುತ್ತದೆ. ಮೊದಲಿನದು ಮೂತ್ರಜನಕಾಂಗಗಳ ಮೇಲೆ ಅಂಟಿಕೊಂಡಿರುವ ಮೆಡ್ಯುಲ್ಲಾಗಳಲ್ಲಿ ಮತ್ತು ಇತರ ಕಡೆಗಳಲ್ಲಿ ಕಂಡುಬರುತ್ತವೆ, ಅದೇ ರೀತಿಯಾಗಿ ಎರಡನೆಯದು ಕೇಂದ್ರ ನರ ವ್ಯವಸ್ಥೆಗಳಲ್ಲಿ (CNS) ಕಂಡುಬರುತ್ತದೆ. ಚಿಕ್ಕದಾದ ಸಾಂದ್ರತೆಗಳಲ್ಲಿ, ನಿಕೋಟಿನ್ ಈ ಗ್ರಾಹಕಗಳ ಕಾರ್ಯಚಟುವಟಿಕೆಗಳನ್ನು ಹೆಚ್ಚಿಸುತ್ತದೆ. ನಿಕೋಟಿನ್ ಕಡಿಮೆ ಪ್ರತ್ಯಕ್ಷ ಯಾಂತ್ರಿಕ ವ್ಯವಸ್ಥೆಗಳ ಮೂಲಕ ಇತರ ನರಸಂವಾಹಕಗಳ ಮೇಲೂ ಕೂಡ ಪರಿಣಾಮಗಳನ್ನು ಹೊಂದಿದೆ.
ಕೇಂದ್ರ ನರ ವ್ಯವಸ್ಥೆಗಳಲ್ಲಿ
[ಬದಲಾಯಿಸಿ]ನಿಕೋಟಿನ್ ಹೊಂದಿದ ಅಸೆಟೈಕೋಲಿನ್ ಗ್ರಾಹಕಗಳಿಗೆ ಬಂಧಿಸುವುದರ ಮೂಲಕ ನಿಕೋಟಿನ್ ಹಲವಾರು ನರಸಂವಾಹಕಗಳ (ನರಪ್ರೇಕ್ಷಕ) ಮಟ್ಟವನ್ನು ಹೆಚ್ಚಿಸುತ್ತದೆ - ಒಂದು ವಿಧದ "ಪರಿಮಾಣ ನಿಯಂತ್ರಕ"ವಾಗಿ ಕಾರ್ಯ ನಿರ್ವಹಿಸುತ್ತದೆ. ಮೆದುಳಿನ ಪ್ರತಿಫಲ ಸರ್ಕ್ಯೂಟ್‌ಗಳಲ್ಲಿ ಡೋಪಮಿನ್‌ನ ಹೆಚ್ಚಾಗಲ್ಪಟ್ಟ ಮಟ್ಟಗಳು ಸುಖಭ್ರಾಂತಿ ಮತ್ತು ವಿಶ್ರಾಂತಿಗೆ ಕಾರಣವಾಗುತ್ತವೆ ಮತ್ತು ನಿಕೋಟಿನ್ ಸೇವನೆಯ ಮೂಲಕ ಸಂಭವನೀಯ ದುಶ್ಚಟಗಳು ಅಂಟಿಕೊಳ್ಳುತ್ತವೆ ಎಂದು ಯೋಚಿಸಲಾಗುತ್ತದೆ. ವಿಷದ ಮಿತಿಗಳಲ್ಲಿ ನಿಕೋಟಿನ್ ಹೀರಿಕೊಳ್ಳುವುದು ಮತ್ತು ಶ್ವಾಸೋಚ್ಛ್ವಾಸದ ಪಾರ್ಶ್ವವಾಯುವನ್ನು ಉಂಟುಮಾಡಿದರೂ ಕೂಡ ನಿಕೋಟಿನ್ ಮೆದುಳಿನಲ್ಲಿ ಅಸೆಟೈಕೋಲಿನ್ ಗ್ರಾಹಕಗಳಿಗೆ ಅಸ್ಥಿಪಂಜರ ಸ್ನಾಯುಗಳಲ್ಲಿನದವುಗಳಿಗಿಂತ ಹೆಚ್ಚಿನ ಗುಣಸಾದೃಶ್ಯಗಳನ್ನು ಹೊಂದಿದೆ.[೧೬] ನಿಕೋಟಿನ್‌ನ ಆಯ್ಕೆಯು ಈ ಗ್ರಾಹಕ ಉಪವಿಧಗಳ ಮೇಲೆ ಒಂದು ನಿರ್ದಿಷ್ಟ ಅಮಿನೋ ಆಮ್ಲದ ಭಿನ್ನತೆಯ ಕಾರಣದಿಂದ ಆಗುತ್ತದೆ.[೧೭]
ತಂಬಾಕು ಹೊಗೆಯು ಮನೋಮೈನ್ ಆಕ್ಸಿಡೇಸ್ ಪ್ರತಿಬಂಧಕಗಳಾದ ಹಾರ್ಮನ್, ನೊರ್‌ಹಾರ್ಮನ್,[೧೮] ಅನಾಬಸಿನ್, ಅನಟಾಬಿನ್, ಮತ್ತು ನೊರ್‌ನಿಕೋಟಿನ್‌ಗಳನ್ನು ಒಳಗೊಳ್ಳುತ್ತದೆ. ಈ ಮಿಶ್ರಣಗಳು ಗಣನೀಯವಾಗಿ ಧೂಮಪಾನಿಗಳಲ್ಲಿನ ಎಮ್‌ಎಒ ಚಟುವಟಿಕೆಗಳನ್ನು ಕಡಿಮೆ ಮಾಡುತ್ತವೆ.[೧೮][೧೯] ಎಮ್‌ಎಒ ಕಿಣ್ವಗಳು ಡೊಪಮಿನ್, ನೊರ್‌ಪೈನ್‌ಫ್ರಿನ್, ಮತ್ತು ಸೆಕ್ರೋಟಿನ್‌ಗಳಂತಹ ಮೊನೊಅಮಿನರ್ಜಿಕ್ ನರಸಂವಾಹಕಗಳಾಗಿ ವಿಭಜಿಸಲ್ಪಡುತ್ತವೆ.
ತಂಬಾಕು ಧೂಮಪಾನದ ಮೂಲಕ ನಿರಂತರ ನಿಕೋಟಿನ್ ಅನಾವರಣವು ಕಿರಿ ಮೆದುಳು ಮತ್ತು ಮೆದುಳು ಸ್ಟೆಮ್‌ಗಳಲ್ಲಿ ಆಲ್ಫಾ4ಬೀಟಾ2* nAChR ಗಳನ್ನು ಮೇಲೆ-ನಿಯಂತ್ರಿಸುತ್ತದೆ[೨೦][೨೧] ಆದರೆ ಹ್ಯಾಬಿನ್ಯೂಲೋಪೆಡುನ್‌ಕ್ಯುಲರ್ ವಿನ್ಯಾಸಗಳನ್ನು ನಿಯಂತ್ರಿಸುವುದಿಲ್ಲ.[೨೨] ಉದರ ಭಾಗದ ಪ್ರದೇಶಗಳಲ್ಲಿ ಕಂಡುಬರುವ ಆಲ್ಫಾ4ಬೀಟಾ2 ಮತ್ತು ಆಲ್ಫಾ6ಬೀಟಾ2 ಗ್ರಾಹಕಗಳು ನಿಕೋಟಿನ್‌ನ ಬಲವರ್ಧಕ ಪರಿಣಾಮಗಳಲ್ಲಿ ಮಧ್ಯಸ್ಥಿಕೆ ವಹಿಸುವುದರಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ.[೨೩]
ಅನುವೇದನಾ ನರ ವ್ಯವಸ್ಥೆ
[ಬದಲಾಯಿಸಿ]ನಿಕೋಟಿನ್ ಇದು ಅನುವೇದನಾ ನರ ವ್ಯವಸ್ಥೆಯನ್ನೂ ಕೂಡ ಕ್ರಿಯಾಶೀಲವಾಗಿಸುತ್ತದೆ,[೨೪] ಒಳಾಂಗೀಯ ನರಗಳ ಮೂಲಕ ಮೂತ್ರಜನಕಾಂಗಗಳಿಗೆ ಅಂಟಿಕೊಂಡಿರುವ ಮೆಡ್ಯುಲ್ಲಾಗಳವರೆಗೆ ಕಾರ್ಯನಿರ್ವಹಿಸುವ ಮೂಲಕ ಇದು ಎಪಿನೆಫ್ರಿನ್ ಬಿಡುಗಡೆಯನ್ನು ಪ್ರಚೋದಿಸುತ್ತದೆ. ಈ ನರಗಳ ಮುಂಚಿನ ನರಗ್ರಂಥಿಗಳ ಅನುವೇದನಾ ತಂತುರಚನೆಗಳ ಮೂಲಕ ಬಿಡುಗಡೆ ಮಾಡಲ್ಪಟ್ಟ ಅಸೆಟೈಕೋಲಿನ್ ನಿಕೋಟಿನ್ ಅಸೆಟೈಕೋಲಿನ್ ಗ್ರಾಹಕಗಳ ಮೇಲೆ ಕಾರ್ಯ ನಿರ್ವಹಿಸುತ್ತದೆ, ಅದು ರಕ್ತಪ್ರವಾಹಗಳಲ್ಲಿ ಎಪಿನ್‌ಫ್ರಿನ್ (ಮತ್ತು ನೊರ್‌ಎಪಿನ್‌ಫ್ರಿನ್) ಬಿಡುಗಡೆಗೆ ಕಾರಣವಾಗುತ್ತದೆ. ನಿಕೋಟಿನ್ ಇದು ಮೆಲಾನಿನ್ ಸಂಶ್ಲೇಷಣಾ ಕ್ರಿಯೆಯಲ್ಲಿ ತನ್ನ ಪೂರ್ವಗಾಮಿ ಕಾರ್ಯದ ಮೂಲಕ ಅಥವಾ ಮೆಲಾನಿನ್ ಮತ್ತು ನಿಕೋಟಿನ್‌ನ ಇದರ ಬದಲಾಯಿಸಲಾಗದ ಬಂಧದ ಮೂಲಕ ಮೆಲಾನಿನ್-ಒಳಗೊಂಡಿರುವ ಅಂಗಾಂಶಗಳಿಗೆ ಒಂದು ಸಾದೃಶ್ಯವಾದ ಲಕ್ಷಣಗಳನ್ನೂ ಕೂಡ ಹೊಂದಿದೆ. ಗಾಢ ವರ್ಣವನ್ನು ಹೊಂದಿದ ವ್ಯಕ್ತಿಗಳಲ್ಲಿ ಹೆಚ್ಚಿದ ನಿಕೋಟಿನ್ ಅವಲಂಬನೆ ಮತ್ತು ಕಡಿಮೆಯಾದ ಧೂಮಪಾನ ಸಮಾಪ್ತಿ ಪ್ರಮಾಣಗಳನ್ನು ಆಧಾರವಾಗಿ ಹೇಳಲು ಇದನ್ನು ಸೂಚಿಸಲಾಗಿದೆ.[೨೫]
ಮೂತ್ರಜನಕಾಂಗದ ಮೇಲೆ ಅಂಟಿಕೊಂಡಿರುವ ಮೆಡ್ಯುಲ್ಲಾಗಳಲ್ಲಿ
[ಬದಲಾಯಿಸಿ]ಮೂತ್ರಜನಕಾಂಗದ ಮೇಲೆ ಅಂಟಿಕೊಂಡಿರುವ ಗ್ಯಾಂಗ್ಲಿಯೋನ್ ವಿಧದ ನಿಕೋಟಿನ್ ಗ್ರಾಹಕಗಳಿಗೆ ಬಂಧಿಸುವ ಮೂಲಕ ನಿಕೋಟಿನ್ ಮೂತ್ರಜನಕಾಂಗೀಯ (ಎಪಿನ್‌ಫ್ರಿನ್), ಒಂದು ಪ್ರಚೋದಕ ಹಾರ್ಮೋನ್‌ನ ಪ್ರವಾಹವನ್ನು ಹೆಚ್ಚಿಸುತ್ತದೆ. ಗ್ರಾಹಕಗಳಿಗೆ ಬಂಧಿಸುವ ಮೂಲಕ, ಇದು ಕೋಶದ ವಿಧ್ರುವೀಕರಣಕ್ಕೆ ಕಾರಣವಾಗುತ್ತದೆ ಮತ್ತು ವಿದ್ಯುತ್ ಪ್ರಮಾಣ-ಪ್ರವೇಶವನ್ನು ಹೊಂದಿರುವ ಕ್ಯಾಲ್ಸಿಯಮ್ ಮಾರ್ಗಗಳ ಮೂಲಕ ಕ್ಯಾಲ್ಸಿಯಮ್‌ನ ಒಳಹರಿವಿಗೂ ಕಾರಣವಾಗುತ್ತದೆ. ಕ್ಯಾಲ್ಸಿಯಮ್ ಇದು ಕ್ರೋಮಾಫಿನ್ ಹರಳುಗಳ ಎಕ್ಸೋಟೈಸಿಸ್ ಅನ್ನು ಪ್ರಚೋದಿಸುತ್ತದೆ ಮತ್ತು ಆದ್ದರಿಂದ ರಕ್ತ ಪ್ರವಾಹಗಳಲ್ಲಿ ಎಪಿನ್‌ಫ್ರಿನ್ (ಮತ್ತು ನೊರ್‌ಎಪಿನ್‌ಫ್ರಿಮ್)ಗಳ ಬಿಡುಗಡೆ ಮಾಡುತ್ತದೆ. ಎಪಿನ್‌ಫ್ರಿಮ್ (ಮೂತ್ರಜನಕಾಂಗೀಯ)ನ ಬಿಡುಗಡೆಯು ಹೃದಯ ಬಡಿತ, ರಕ್ತದ ಒತ್ತಡ ಮತ್ತು ಶ್ವಾಸೋಚ್ಛ್ವಾಸ ಹಾಗೆಯೇ ಹೆಚ್ಚಿನ ರಕ್ತದ ಗ್ಲೂಕೋಸ್ ಮಟ್ಟಗಳಿಗೆ ಕಾರಣವಾಗುತ್ತದೆ.[೨೬]
ಕೊಟಿನಿನ್ ಇದು ನಿಕೋಟಿನ್‌ನ ಚಯಾಪಚಯ ಕ್ರಿಯೆಯ ಒಂದು ಉಪಉತ್ಪನ್ನವಾಗಿದೆ, ಅದು ರಕ್ತದಲ್ಲಿ 48 ಘಂಟೆಗಳ ಕಾಲ ಇರುತ್ತದೆ. ಇದು ಆದ್ದರಿಂದ ಒಬ್ಬ ವ್ಯಕ್ತಿಯ ನಿಕೋಟಿನ್‌ಗೆ ಒಡ್ಡಲ್ಪಡುವುದರ ಒಂದು ಸೂಚಕವಾಗಿ ಬಳಸಲ್ಪಡುತ್ತದೆ.[ಸೂಕ್ತ ಉಲ್ಲೇಖನ ಬೇಕು]
ಮನಃಪ್ರಭಾವಕ ಪರಿಣಾಮಗಳು
[ಬದಲಾಯಿಸಿ]ನಿಕೋಟಿನ್‌ನ ಲಹರಿ-ಬದಲಾವಣಾ ಪರಿಣಾಮಗಳು ವರದಿಯ ಮೂಲಕ ಭಿನ್ನವಾಗಿರುತ್ತವೆ: ನಿರ್ದಿಷ್ಟವಾಗಿ ಇದು ಒಂದು ಪ್ರಚೋದಕ ಮತ್ತು ಶಾಮಕ ಎರಡೂ ಆಗಿರುತ್ತದೆ.[೨೮] ಪಿತ್ತಜನಕಾಂಗ ಮತ್ತು ಎಪಿನ್‌ಫ್ರಿನ್ ಮೂಲಕ (ಮೂತ್ರಜನಕಾಂಗೀಯ) ಮೂತ್ರಜನಕಾಂಗದ ಮೇಲೆ ಅಂಟಿಕೊಂಡಿರುವ ಮೆಡ್ಯುಲ್ಲಾಗಳ ಮೂಲಕ ಮೊದಲು ಗ್ಲೂಕೋಸ್ ಅನ್ನು ಬಿಡುಗಡೆ ಮಾಡುವುದಕ್ಕೆ ಕಾರಣವಾಗುವ ಇದು ಪ್ರಚೋದನೆಗೆ ಕಾರಣವಾಗುತ್ತದೆ. ಬಳಕೆದಾರರು ವಿಶ್ರಾಂತಿ, ತೀಕ್ಷ್ಣತೆ, ಶಾಂತ ಸ್ಥಿತಿ, ಮತ್ತು ಜಾಗರೂಕತೆಯನ್ನು ವರದಿ ಮಾಡುತ್ತಾರೆ.[೨೯] ಹಸಿವನ್ನು ಕಡಿಮೆ ಮಾಡುವುದು ಮತ್ತು ಚಯಾಪಚಯವನ್ನು ಹೆಚ್ಚಿಸುವುದರ ಮೂಲಕ, ಕೆಲವು ಧೂಮಪಾನಿಗಳು ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಅದರ ಪರಿಣಾಮವಾಗಿದೆ.[೩೦][೩೧]
ಒಂದು ಸಿಗಾರೆಟ್ ಸೇದಲ್ಪಟ್ಟಾಗ, ನಿಕೋಟಿನ್‌ನಿಂದ-ಸಮೃದ್ಧವಾದ ರಕ್ತವು ಏಳು ಸೆಕೆಂಡ್‌ಗಳ ಒಳಗೆ ಶ್ವಾಸಕೋಶದಿಂದ ಮೆದುಳಿನವರೆಗೆ ಪ್ರವಹಿಸುತ್ತದೆ ಮತ್ತು ಅಸೆಟೈಲ್‌ಕೋಲಿನ್, ನೊರ್‌ಎಪಿನ್‌ಫ್ರಿನ್, ಎಪಿನ್‌ಫ್ರಿನ್, ವಾಸೋಪ್ರೆಸಿನ್, ಆರ್ಜಿನೈನ್, ಡೊಪಾಮೈನ್, ಆಟೊಕ್ರೈನ್ ಅಂಶಗಳು, ಮತ್ತು ಬೀಟಾ-ಎಂಡೋರ್‌ಫಿನ್‌ಗಳನ್ನು ಒಳಗೊಂಡಂತೆ ಹಲವಾರು ರಾಸಾಯನಿಕ ಅಂಶಗಳನ್ನು ತ್ವರಿತವಾಗಿ ಪ್ರಚೋದಿಸುತ್ತದೆ.[೩೨] ನರಸಂವಾಹಕಗಳು ಮತ್ತು ಹಾರ್ಮೋನ್‌ಗಳ ಈ ಬಿಡುಗಡೆಯು ಹೆಚ್ಚಿನ ನಿಕೋಟಿನ್ ಪರಿಣಾಮಗಳಿಗೆ ಜವಾಬ್ದಾರಿಯಾಗಿರುತ್ತದೆ. ನಿಕೋಟಿನ್ ಅಸೆಟೈಲ್‍ಕೋಲಿನ್‌ನ ಹೆಚ್ಚುವಿಕೆಯ ಕಾರಣದಿಂದ ಏಕಾಗ್ರತೆಯನ್ನು[೩೩] ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಕಂಡುಬರುತ್ತದೆ. ಇದು ಅಸೆಟೈಲ್‌ಕೋಲಿನ್ ಮತ್ತು ನೊರ್‌ಎಪಿನ್‌ಫ್ರಿಮ್‌ಗಳ ಹೆಚ್ಚಿಸುವಿಕೆಯ ಕಾರಣದಿಂದ ಜಾಗೃತಾವಸ್ಥೆಯನ್ನು ವರ್ಧಿಸುವಲ್ಲಿಯೂ ಕೂಡ ಕಂಡುಬರುತ್ತದೆ. ಜಾಗೃತ ಸ್ಥಿತಿಯು ನೊರ್‌ಎಪಿನ್‌ಫ್ರಿನ್‌ನ ಹೆಚ್ಚುವಿಕೆಯ ಮೂಲಕ ಹೆಚ್ಚಾಗಲ್ಪಡುತ್ತದೆ. ಅಸೆಟೈಲ್‌ಕೋಲಿನ್ ಮತ್ತು ಬೀಟಾ-ಎಂಡ್ರೋಫಿನ್‌ನ ಹೆಚ್ಚುವಿಕೆಯಿಂದ ನೋವು ಕಡಿಮೆಯಾಗುತ್ತದೆ. ಉತ್ಸುಕತೆಯು ಬೀಟಾ-ಎಂಡ್ರೋಫಿನ್‌ನ ಹೆಚ್ಚುವಿಕೆಯಿಂದ ಕಡಿಮೆಯಾಗಲ್ಪಡುತ್ತದೆ. ನಿಕೋಟಿನ್ ಇದು ಡೋಪಾಮೈನ್‌ನ ಸಕಾರಾತ್ಮಕ ಪರಿಣಾಮಗಳ ಅವಧಿಯನ್ನು ಹೆಚ್ಚಿಸುತ್ತದೆ[೩೪] ಮತ್ತು ಮದುಳು ಪ್ರತಿಫಲ ವ್ಯವಸ್ಥೆಗಳಲ್ಲಿ ಸಂವೇದನತ್ವವನ್ನು ಹೆಚ್ಚಿಸುತ್ತದೆ.[೩೫] ಹೆಚ್ಚಿನ ಸಿಗಾರೆಟ್‌ಗಳು (ಹೊಗೆಯನ್ನು ಒಳಗೆಳೆದುಕೊಳ್ಳಲ್ಪಟ್ಟವುಗಳಲ್ಲಿ) 1 ರಿಂದ 3 ಮಿಲಿಗ್ರಾಮ್ ನಿಕೋಟಿನ್‌ಗಳನ್ನು ಒಳಗೊಂಡಿರುತ್ತವೆ.[೩೬]
ಧೂಮಪಾನಿಗಳು ಒಂದು ಪ್ರಚೋದನಕಾರಿ ಪರಿಣಾಮವನ್ನು ಹೊಂದಲು ಅಪೇಕ್ಷೆಪಟ್ಟಾಗ, ಅವರು ಚಿಕ್ಕದಾದ ತ್ವರಿತ ಗತಿಯ ಹೊಗೆಯ ಊದುವಿಕೆಯನ್ನು ಮಾಡುತ್ತಾರೆ, ಅದು ರಕ್ತದ ನಿಕೋಟಿನ್‌ನ ಒಂದು ಕಡಿಮೆ ಮಟ್ಟವನ್ನು ಉತ್ಪತ್ತಿ ಮಾಡುತ್ತದೆ ಎಂದು ಸಂಶೋಧಕರು ಸೂಚಿಸುತ್ತಾರೆ.[೩೭] ಇದು ನರಗಳ ಸಂವಹನೆಯನ್ನು ಪ್ರಚೋದಿಸುತ್ತದೆ. ಅವರು ವಿಶ್ರಾಂತಿ ಪಡೆಯಲು ಅಪೇಕ್ಷಿಸಿದಾಗ, ಅವರು ದೀರ್ಘವಾದ ಸೇದುವಿಕೆಯನ್ನು ತೆಗೆದುಕೊಳ್ಳುತ್ತಾರೆ, ಅದು ರಕ್ತದ ನಿಕೋಟಿನ್‌ನ ಹೆಚ್ಚಿನ ಮಟ್ಟವನ್ನು ಉತ್ಪತ್ತಿ ಮಾಡುತ್ತದೆ, ನರಗಳ ಪ್ರಚೋದನೆಗಳ ಮಾರ್ಗವನ್ನು ತಗ್ಗಿಸುತ್ತದೆ ಮತ್ತು ಒಂದು ಮಂದವಾದ ಸಂವೇದನಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ. ಕಡಿಮೆ ಪ್ರಮಾಣಗಳಲ್ಲಿ, ನಿಕೋಟಿನ್ ಮೆದುಳಿನಲ್ಲಿನ ನೊರ್‌ಎಪಿನ್‌ಫ್ರಿನ್ ಮತ್ತು ಡೋಪಮೈನ್ ಕ್ರಿಯೆಗಳನ್ನು ಸಮರ್ಥವಾಗಿ ವರ್ಧಿಸುತ್ತವೆ, ಮತ್ತು ಆ ಮೂಲಕ ಅವುಗಳ ಮಾನಸಿಕ ಪ್ರಚೋದಕಗಳಲ್ಲಿ ವಿಶಿಷ್ಟವಾದ ಮತ್ತು ಬರಿಸುವ ಪರಿಣಾಮಗಳನ್ನು ಉಂಟು ಮಾಡುತ್ತವೆ. ಹೆಚ್ಚಿನ ಪ್ರಮಾಣಗಳಲ್ಲಿ, ನಿಕೋಟಿನ್ ಸೆಕ್ರೋಟೊನಿನ್ ಮತ್ತು ಮಂಪರು ಬರಿಸುವ ಕ್ರಿಯೆಗಳ ಪರಿಣಾಮಗಳನ್ನು ವರ್ಧಿಸುತ್ತದೆ, ಆ ಮೂಲಕ ಶಾಂತಗೊಳಿಸುವ, ನೋವನ್ನು-ಕೊಲ್ಲುವ (ನಿವಾರಕ) ಪರಿಣಾಮವನ್ನು ಉಂಟುಮಾಡುತ್ತದೆ. ನಿಕೋಟಿನ್‌ನ ಪಾರ್ಶ್ವನೋಟವು ಹೆಚ್ಚುತ್ತಿರುವ ಪ್ರಮಾಣಗಳಲ್ಲಿ ಮತ್ತು ಬಳಕೆಗಳಲ್ಲಿ ಪ್ರಚೋದಕದಿಂದ ಉಪಶಮನಕಾರಿ ಔಷಧಿ/ನೋವು ನಿವಾರಕಗಳವರೆಗೆ ಬದಲಾಗುತ್ತಿರುವುದರಿಂದ ಇದು ಹಲವಾರು ಔಷಧಗಳಲ್ಲಿ ತುಲನೆಯಲ್ಲಿ ವಿಶಿಷ್ಟವಾಗಿದೆ. (ಇದೇ ರೀತಿಯಾಗಿ ವರ್ತಿಸುವ ಇನ್ನೊಂದು ಔಷಧವೆಂದರೆ ಎಥೆನಾಲ್.)
ತಾಂತ್ರಿಕವಾಗಿ, ನಿಕೋಟಿನ್ ಗಣನೀಯ ಪ್ರಮಾಣದಲ್ಲಿ ವ್ಯಸನಿಯಾಗಿರುವುದಿಲ್ಲ, ನಿರ್ವಹಿತ ನಿಕೋಟಿನ್ ಏಕಾಂಗಿಯಾಗಿ ಗಣನೀಯ ಪ್ರಮಾಣದ ವರ್ಧನೆಯ ವಿಶೇಷ ಗುಣಗಳನ್ನು ಉತ್ಪತ್ತಿ ಮಡುವುದಿಲ್ಲ.[೩೮] ಆದಾಗ್ಯೂ, ತಂಬಾಕಿನಲ್ಲಿ ಕಂಡುಬಂದಂತಹ, ಒಂದು MAOI ಜೊತೆಗಿನ ಸಹ ನಿರ್ವಹಣೆಯ ನಂತರ ಮಾತ್ರ ನಿಕೋಟಿನ್ ಗಣನೀಯ ಪ್ರಮಾಣದ ನಡುವಳಿಕೆಯ ಸಂವೇದನಾಶೀಲತೆಯನ್ನು, ಅಂದರೆ ವ್ಯಸನದ ಸಂಭವನೀಯತೆಯ ಒಂದು ಪರಿಮಾಣವನ್ನು ಉತ್ಪತ್ತಿ ಮಾಡುತ್ತದೆ, ಇದು ಪರಿಣಾಮದಲ್ಲಿ ಆಂಫೆಟಾಮೈನ್‌ಗೆ ಸದೃಶವಾಗಿರುತ್ತದೆ.[೩೯]
ನಿಕೋಟಿನ್ ಅಂಟು, ಸಾಮಾನ್ಯವಾಗಿ 2-ಮಿಲಿಗ್ರಾಮ್ ಅಥವಾ 4-ಮಿಲಿಗ್ರಾಮ್ ಪ್ರಮಾಣಗಳಲ್ಲಿರುತ್ತದೆ, ಮತ್ತು ನಿಕೋಟಿನ್ ತುಣುಕುಗಳು ದೊರೆಯಲ್ಪಡುತ್ತವೆ, ಅದೇ ರೀತಿಯಾಗಿ ಹೊಗೆರಹಿತ ತಂಬಾಕುಗಳು ಹೊಗೆಸಹಿತ ತಂಬಾಕುಗಳಲ್ಲಿನ ಎಲ್ಲಾ ಅಂಶಗಳನ್ನು ಹೊಂದಿರುವುದಿಲ್ಲ.[ಸೂಕ್ತ ಉಲ್ಲೇಖನ ಬೇಕು]
ಅವಲಂಬನೆ ಮತ್ತು ಹಿಂಪಡೆಯುವಿಕೆ
[ಬದಲಾಯಿಸಿ]ನಿಕೋಟಿನ್ ಮೆದುಳಿನ ಮೇಲೆ ಹಲವಾರು ಪರಿಣಾಮಗಳನ್ನು ಉಂಟುಮಾಡಲು ಕಾರ್ಯವನ್ನು ನಡೆಸುತ್ತದೆ ಎಂದು ಆಧುನಿಕ ಸಂಶೋಧನೆಗಳು ತೋರಿಸುತ್ತವೆ. ನಿರ್ದಿಷ್ಟವಾಗಿ, ನಿಕೋಟಿನ್ ಪ್ರತಿಫಲ ಮಾರ್ಗಗಳನ್ನು - ಸಂತೋಷ ಮತ್ತು ಭ್ರಮಾಧೀನತೆಗಳಂತಹ ಭಾವನೆಗಳನ್ನು ನಿಯಂತ್ರಿಸುವ ಮೆದುಳಿನೊಳಗಿನ ಸರ್ಕ್ಯೂಟ್ರಿಯನ್ನು ಕ್ರಿಯಾಶೀಲವಾಗಿಸುತ್ತದೆ ಎಂಬುದನ್ನು ತೋರಿಸಲು ಇದರ ವ್ಯಸನಕಾರಿ ಸ್ವಭಾವವು ಕಂಡುಹಿಡಿಯಲ್ಪಟ್ಟಿತು.[೪೦]
ಡೊಪಮೈನ್ ಇದು ಮೆದುಳಿನಲ್ಲಿ ಕ್ರಿಯಾಶೀಲವಾಗಿರುವ ಒಂದು ಮೂಲ ನರಸಂವಾಹಕವಾಗಿದೆ. ಮೆದುಳಿನಲ್ಲಿನ ಪ್ರತಿಫಲ ಸರ್ಕ್ಯೂಟ್‌ಗಳ ಒಳಗಿನ ಡೊಪಾಮೈನ್‌ನ ಹೆಚ್ಚುತ್ತಿರುವ ಮಟ್ಟಗಳ ಮೂಲಕ, ನಿಕೋಟಿನ್ ತೀವ್ರವಾದ ವ್ಯಸನಕಾರಿ ಗುಣವನ್ನು ಹೊಂದಿರುವ ಒಂದು ರಾಸಾಯನಿಕ ಎಂಬುದನ್ನು ಸಂಶೋಧನೆಗಳು ತೋರಿಸುತ್ತವೆ. ಪ್ರತಿಫಲ ತೊಡಗುವಿಕೆಗಳಲ್ಲಿ ತೀವ್ರವಾದ ಚಿಕಿತ್ಸೆಗಳು ಒಂದು ವಿರುದ್ಧವಾದ ಪರಿಣಾಮವನ್ನು ಹೊಂದಿದ್ದರೂ ಕೂಡ, ಇದು ಕೊಕೈನ್ ಮತ್ತು ಹೆರಾಯಿನ್‌ಗಳಿಗಿಂತ ಹೆಚ್ಚು ವ್ಯಸನಕಾರಿ ಎಂಬುದನ್ನು ಹಲವಾರು ಅಧ್ಯಯನಗಳು ತೋರಿಸಿವೆ.[ಸೂಕ್ತ ಉಲ್ಲೇಖನ ಬೇಕು] ಇತರ ದೈಹಿಕ ವ್ಯಸನಕಾರಿ ಮಾದಕ ವಸ್ತುಗಳಂತೆ, ನಿಕೋಟಿನ್ ಡೋಪಾಮೈನ್‌ಗಳ ಉತ್ಪಾದನೆಯ ಕಡಿಮೆ-ನಿಯಂತ್ರಣವನ್ನು ಉಂಟುಮಾಡುತ್ತದೆ ಮತ್ತು ಇತರ ಪ್ರಚೋದಕ ನರಸಂವಾಹಕಗಳನ್ನು ಕೃತಕ ಪ್ರಚೋದಕಗಳಿಗೆ ಪರಿಹಾರವನ್ನಾಗಿ ನೀಡುವ ಪ್ರಯತ್ನಕ್ಕೆ ಮೆದುಳು ಪ್ರಯತ್ನಪಡುವಂತೆ ಕಾರ್ಯನಿರ್ವಹಿಸುತ್ತದೆ. ಅದಕ್ಕೆ ಜೊತೆಯಾಗಿ, ನಿಕೋಟಿನ್ ಅಸೆಟೈಲ್‌ಕೋಲಿನ್ ಗ್ರಾಹಕದ ಸಂವೇದನತ್ವವು ಕಡಿಮಯಾಗುತ್ತದೆ. ಈ ಸರಿದೂಗಿಸುವಂತಹ ಯಾಂತ್ರಿಕ ವ್ಯವಸ್ಥೆಯನ್ನು ಸರಿದೂಗಿಸಲು, ಮೆದುಳು ಪ್ರತಿಯಾಗಿ ಗ್ರಾಹಕಗಳ ಸಂಖ್ಯೆಯನ್ನು ನಿಯಂತ್ರಿಸುತ್ತದೆ, ಇದರ ನಿರ್ವಾಹಕ ಪರಿಣಾಮಗಳನ್ನು ಇತರ ಸರಿದೂಗಿಸುವ ಯಾಂತ್ರಿಕ ವ್ಯವಸ್ಥೆಗಳನ್ನು ಸಮಸ್ಥಾನಿಕವಾಗಿಸುವುದಕ್ಕೆ ಉದ್ದೇಶಿಸಲ್ಪಟ್ಟ ಸರಿದೂಗಿಸುವ ಯಾಂತ್ರಿಕ ವ್ಯವಸ್ಥೆಗಳ ಜೊತೆಗಿನ ನಿರ್ವಾಹಕ ಪರಿಣಾಮಗಳನ್ನು ಜಟಿಲವಾಗಿಸುತ್ತದೆ. ಇತರ ಕೊಕೈನ್ ಮತ್ತು ಹೆರಾಯಿನ್‌ಗಳ ದುರುಪಯೋಗಗಳಿಗೆ ವಿರುದ್ಧವಾಗಿ, ಇದರ ನಿಜವಾದ ಪರಿಣಾಮವು ಪ್ರತಿಫಲ ಮಾರ್ಗ ಸಂವೇದನತ್ವವಾಗಿದೆ, ಅದು ಪ್ರತಿಫಲ ಮಾರ್ಗ ಸಂವೇದನತ್ವವನ್ನು ಕಡಿಮೆ ಮಾಡುತ್ತದೆ.[೩೫] ಈ ನರಸಂಬಂಧಿ ಮೆದುಳು ಬದಲಾವಣೆಯು ನಿರ್ವಹಣಾ ಸಮಾಪ್ತಿಯ ನಂತರ ತಿಂಗಳುಗಳವರೆಗೆ ಧೃಢವಾಗಿರುತ್ತದೆ. ಪ್ರತಿಫಲ ಮಾರ್ಗ ಸಂವೇದನತ್ವದ ಹೆಚ್ಚಳದ ಕಾರಣದಿಂದ, ನಿಕೋಟಿನ್ ಹಿಂಪಡೆಯುವಿಕೆಯು ತುಲನಾತ್ಮಕವಾಗಿ ಅಲ್ಕೋಹಾಲ್ ಅಥವಾ ಹೆರಾಯಿನ್ ಹಿಂಪಡೆಯುವಿಕೆಗಳ ಜೊತೆ ವಿರಳವಾಗಿ ಹೋಲಿಕೆ ಮಾಡಲ್ಪಡುತ್ತದೆ.[ಸೂಕ್ತ ಉಲ್ಲೇಖನ ಬೇಕು] ನಿಕೋಟಿನ್ ಮಾನವರನ್ನು ಹೊರತುಪಡಿಸಿ ಹಲವಾರು ಪ್ರಾಣಿಗಳಲ್ಲಿ ಅವಲಂಬನೆಯನ್ನು ಉಂಟುಮಾಡುವ ಸಂಭವನೀಯತೆಯನ್ನೂ ಕೂಡ ಹೊಂದಿದೆ. ಮೈಸ್ ಇದು ನಿಕೋಟಿನ್ ಬಗೆಗೆ ಆಡಳಿತ ನಡೆಸಿತು ಮತ್ತು ಇದರ ನಿರ್ವಹಣೆಯು ನಿಲ್ಲಲ್ಪಟ್ಟಾಗ ಹಿಂಪಡೆಯುವಿಕೆಯ ಪ್ರತಿಕ್ರಿಯೆಗಳನ್ನು ಪ್ರದರ್ಶಿಸಿತು.[ಸೂಕ್ತ ಉಲ್ಲೇಖನ ಬೇಕು]
ಎಳೆಯ ವಯಸ್ಸಿನ ಮೈಸ್‌ನಲ್ಲಿ ನಿಕೋಟನ್ ವ್ಯಸನವು ಡೋಪಾಮೈನ್ ವ್ಯವಸ್ಥೆಯನ್ನು ಹಾಳುಮಾಡುತ್ತದೆ, ಆದ್ದರಿಂದ ಹದಿ ವಯಸ್ಸಿನಲ್ಲಿ ದ್ರವ್ಯಗಳ ತೊಂದರೆಯ ಹೆಚ್ಚುವಿಕೆಗೆ ಕಾರಣವಾಗುತ್ತದೆ ಎಂದು ಒಂದು ಅಧ್ಯಯನವು ಕಂಡುಹಿಡಿಯಿತು.[೪೧]
ಪ್ರತಿರಕ್ಷಾ ಶಾಸ್ತ್ರ ತಡೆಗಟ್ಟುವಿಕೆ
[ಬದಲಾಯಿಸಿ]ತೀವ್ರ ಧೂಮಪಾನ ಚಟ ಹತ್ತಿಕೊಳ್ಳುವುದು ಮತ್ತು ಧೂಮಪಾನದ ಕೆಟ್ಟ ಪರಿಣಾಮಗಳ ಕಾರಣ, ಲಸಿಕಾ ನಿಯಮವಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ನಿಕೋಟಿನ್ ಅಣುವಿಗೆ ಒಂದು ಪ್ರತಿವಿಷವನ್ನು ಜೋಡಿಸಿದರೆ, ಅದನ್ನು ರಕ್ತನಾಳಗಳಲ್ಲಿ ಪ್ರಸರಿಸುವುದರಿಂದ ತಡೆಯಬಹುದು, ಇದರಿಂದ ನಿಕೋಟಿನ್ ವಿಷವು ನಿಕೋಟಿನ್ ಹೊಂದಿದ ಅಸೆಟೈಲ್‌ಕೋಲಿನ್ ಗ್ರಾಹಕಗಳಿಗೆ ಬಿಗಿದುಕೊಂಡು ಮಿದುಳಿನ ಮೇಲೆ ಪರಿಣಾಮ ಬೀರುವುದು ಕಡಿಮೆಯಾಗುತ್ತದೆ ಎಂಬುದು ಈ ತತ್ತ್ವದ ಹಿಂದಿರುವ ಆಧಾರ ಪ್ರಮೇಯ.
ಈ ಲಸಿಕೆಯಲ್ಲಿ, ನಿಕೋಟಿನ್ ಅಣುವನ್ನು ಕೀಹೋಲ್ ಲಿಂಪೆಟ್ ಹೆಮೊಕ್ಯಾನಿನ್ ಮುಂತಾದ ಹ್ಯಾಪ್‌ಟೆನ್‌ಗೆ ಅಥವಾ ಸಕ್ರಿಯ ಪ್ರತಿರೋಧ ಪ್ರತಿವರ್ತನೆಯನ್ನು ಹೊರತರಲು ಒಂದು ಸುರಕ್ಷಿತ ವಿಷಕ್ಕೆ ಜೋಡಿಸಲಾಗುತ್ತದೆ. ಸಾಮಾನ್ಯವಾಗಿ ಅದನ್ನು ನಿಧಾನ ಪೃಕೃತಿಯ ರಕ್ತಸಾರ ಪ್ರೋಟೀನ್ ಜೊತೆಗೆ ಜೋಡಿಸಲಾಗುತ್ತದೆ.
ಜೊತೆಗೆ, ಪ್ರತಿಯೊಬ್ಬ ವ್ಯಕ್ತಿಗೂ ವಿಶಿಷ್ಟವಾದ ನಿರೋಧಕ ವ್ಯವಸ್ಥೆಗಳಿದ್ದು, ವಂಶವಾಹೀಯ ಹಾರ್ಮೋನ್‌ಗಳು ಮತ್ತು ಪ್ರತಿಡ್ರಗ್‌ಗಳ ವಿರುದ್ಧ ಪ್ರತಿಜೀವಿಗಳನ್ನು ಉತ್ಪಾದಿಸಲು ಶಕ್ತವಾಗಿರುವುದರಿಂದ, ಅಲ್ಪಾವಧಿ ನಿಷ್ಕ್ರಿಯ ನಿರೋಧಕ ರಕ್ಷಣೆಗಾಗಿ ಏಕಕ್ಲೋನ್ ಪ್ರತಿಜೀವಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಪ್ರತಿಜೀವಿಗಳಿಗೆ ಕೆಲವು ಗಂಟೆಗಳಿಂದ ಕೆಲವು ವಾರಗಳವರೆಗಿನ ಅರ್ಧಾಯುಷ್ಯವನ್ನು ಹೊಂದಿರುತ್ತವೆ. ಎಪಿತೆಲಿಯಲ್ ಕಣಗಳಿಂದ ಉಂಟಾಗುವ ಪೈನೋಸೈಟೋಸಿಸ್‌ಕೊಳೆತವನ್ನು ನಿರೋಧಿಸುವ ಸಾಮರ್ಥ್ಯದ ಮೇಲೆ ಅವುಗಳ ಅರ್ಧಾಯುಷ್ಯವು ಅವಲಂಬಿತವಾಗಿರುತ್ತದೆ.[೪೨]
ವಿಷಶಾಸ್ತ್ರ
[ಬದಲಾಯಿಸಿ]ಈ sectionಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (June 2009) |
ನಿಕೋಟಿನ್ನ ಎಲ್‌ಡಿ50 ಪ್ರಮಾಣ ಇಲಿಗಳಿಗೆ 50 ಮಿಗ್ರಾ/ಕಿಗ್ರಾ ಮತ್ತು ಮೂಗಿಲಿಗಳಿಗೆ 3 ಮಿಗ್ರಾ/ಕಿಗ್ರಾ. 40–60 ಮಿಗ್ರಾಂ. (0.5-1.0 mg/kg) ಇದು ವಯಸ್ಕ ಮನುಷ್ಯರಿಗೆ ಘಾತಕ ಪ್ರಮಾಣವಾಗಿರುತ್ತದೆ.[೪೩][೪೪] ಆದ್ದರಿಂದ, ಕೊಕೈನ್‌ನಂತಹ ಇತರ ಕ್ಷಾರಗಳಿಗೆ ತುಲನೆ ಮಾಡಿ ನೋಡಿದಾದ ನಿಕೋಟಿನ್ ಹೆಚ್ಚಿನ ವಿಷತ್ವವನ್ನು ಹೊಂದಿದೆ, ಅದು ಮೈಸ್‌ಗೆ ನಿರ್ವಹಣೆ ಮಾಡಿ ನೋಡಿದಾಗ 95.1 ಮಿಗ್ರಾಂ/ಕಿಗ್ರಾಂ ನ LD50 ಪ್ರಮಾಣವನ್ನು ಹೊಂದಿದೆ. ಆದಾಗ್ಯೂ, ಕೇವಲ ಧೂಮಪಾನದ ಮೂಲಕ ನಿಕೋಟಿನ್ ಅನ್ನು ಅತಿ ಪ್ರಮಾಣ ಮಾಡುವುದು ಕಷ್ಟಸಾಧ್ಯವಾಗಿದೆ (ಆದರೂ ಒಬ್ಬ ಮನುಷ್ಯನು ಒಂದೇ ಸಮಯದಲ್ಲಿ ನಿಕೋಟಿನ್ ತುಣುಕುಗಳು, ನಿಕೋಟಿನ್ ಗಮ್, ಮತ್ತು/ಅಥವಾ ತಂಬಾಕು ಹೊಗೆಸೇದುವುದು ಇವುಗಳ ಸಂಯೋಜನೆಯ ಮೂಲಕ ನಿಕೋಟಿನ್‌ನ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು).[೪೫][೪೬] ಅತ್ಯಂತ ಹೆಚ್ಚಿನ ಸಾಂದ್ರತೆಯನ್ನುಳ್ಳ ನಿಕೋಟಿನ್ ಅನ್ನು ಚರ್ಮದೊಳಕ್ಕೆ ಹಾಯಿಸುವುದು ಮತ್ತೇರುವಿಕೆಗೆ ಕಾರಣವಾಗುತ್ತದೆ ಅಥವಾ ನಿಕೋಟಿನ್ ಒಳಚರ್ಮದ ಸಂಪರ್ಕದ ಮೂಲಕ ನೇರವಾಗಿ ರಕ್ತಪ್ರವಾಹಕ್ಕೆ ಸಾಗುವ ಕಾರಣದಿಂದ ಸಾವಿಗೂ ಕೂಡ ಕಾರಣವಾಗುತ್ತದೆ.[೪೭]
ಸ್ವತಂತ್ರವಾದ ಸ್ವರೂಪದಲ್ಲಿರುವ ನಿಕೋಟಿನ್‌ನ ಕ್ಯಾನ್ಸರ್ ಜನಕ (ಕಾರ್ಸಿನೋಜಿನ್) ಗುಣಗಳು, ತಂಬಾಕು ಹೊಗೆಯಿಂದ ಹೊರತುಪಡಿಸಿ, IARC ಯಿಂದ ಪರಿಗಣಿಸಲ್ಪಟ್ಟಿಲ್ಲ, ಮತ್ತು ಇದು ಒಂದು ವಿಧ್ಯುಕ್ತ ಕ್ಯಾನ್ಸರ್ ಜನಕ ಗುಂಪಿಗೆ ನೀಡಲ್ಪಟ್ಟಿಲ್ಲ. ನಿಕೋಟಿನ್, ಸ್ವಂತವಾಗಿ, ಆರೋಗ್ಯದಿಂದ ಕೂಡಿರುವ ಅಂಗಾಂಶಗಳಲ್ಲಿ ಕ್ಯಾನ್ಸರ್ ಅನ್ನು ಬೆಳೆಸುವುದಿಲ್ಲ ಮತ್ತು ಬದಲಾವಣೆಗೊಳಪಡುವ ಯಾವ ಲಕ್ಷಣವನ್ನೂ ಹೊಂದಿಲ್ಲ ಎಂಬುದಾಗಿ ಪ್ರಸ್ತುತದಲ್ಲಿ ದೊರಕುವ ತತ್ವಶಾಸ್ತ್ರಗಳು ಸೂಚಿಸುತ್ತವೆ. ಆದಾಗ್ಯೂ, ನಿಕೋಟಿನ್ ಮತ್ತು ಹೆಚ್ಚಲ್ಪಟ್ಟ ಕೊಲಿನರ್ಜಿಕ್ ಕ್ರಿಯೆಗಳು, ಅಪೊಪ್ಟೊಸಿಸ್‌ಗೆ ಅಡ್ಡಿಮಾಡುವ ತೊಂದರೆಯನ್ನುಂಟುಮಡುತ್ತವೆ ಎಂದು ತೋರಿಸುತ್ತದೆ, ಅಪೊಪ್ಟೊಸಿಸ್ ಇದು ದೇಹವು ಅನವಶ್ಯಕವಾದ ಕೋಶಗಳನ್ನು ನಾಶಪಡಿಸುವ (ಯೋಜಿತ ಕೋಶ ಮರಣ) ಒಂದು ವಿಧಾನವಾಗಿದೆ. ಕಾಲಾನಂತರದಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಮಾರ್ಪಾಡಾಗುವ ಅಥವಾ ಹಾನಿಗೊಳಗಾದ ಕೋಶಗಳನ್ನು ತೆಗೆದುಹಾಕುವುದರಲ್ಲಿ ಅಪೊಪ್ಟೊಸಿಸ್ ಸಹಾಯ ಮಾಡುವ ಕಾರಣದಿಂದ, ನಿಕೋಟಿನ್‌ನ ಪ್ರತಿರೋಧಕ ಕ್ರಿಯೆಗಳು, ಇದು ಸಾಧಿಸಿ ತೋರಿಸಬೇಕಾದ ಸಂಗತಿಯಾಗಿದ್ದರೂ ಕೂಡ, ಕ್ಯಾನ್ಸರ್ ಅಭಿವೃದ್ಧಿಗೊಳ್ಳಲು ಹೆಚ್ಚು ಅನುಕೂಲಕರವಾದ ವಾತಾವರಣವನ್ನು ನಿರ್ಮಿಸಬಹುದು.[೪೮]
ನಿಕೋಟಿನ್‌ನ ವಿರೂಪಜನಕ ಲಕ್ಷಣಗಳು ಇನ್ನೂ ಕೂಡ ವ್ಯಾಪಕವಾಗಿ ಸಂಶೋಧಿಸಲ್ಪಟ್ಟಿಲ್ಲ, ಮತ್ತು ಹಾಗೆಯೇ ನಿಕೋಟಿನ್‌ನಿಂದ ಉಂಟಾಗಲ್ಪಟ್ಟ ಜನನದ ಸಂಭಾವ್ಯತೆಗಳು ತುಂಬಾ ಕಡಿಮೆ ಅಥವಾ ಅಸ್ತಿತ್ವದಲ್ಲಿ ಇಲ್ಲ ಎಂದು ನಂಬಲಾಗುತ್ತದೆ, ನಿಕೋಟಿನ್ ಪರ್ಯಾಯ ಉತ್ಪನ್ನ ತಯಾರಕರು, ಗರ್ಭಿಣಿಯಾಗಿರುವಾಗ ಅಥವಾ ಶೂಶ್ರೂಷೆ ಮಾಡಿಕೊಳ್ಳುತ್ತಿರುವಾಗ ನಿಕೋಟಿನ್ ತುಣುಕು ಅಥವಾ ನಿಕೋಟಿನ್ ಗಮ್ ಅನ್ನು ಬಳಸುವುದಕ್ಕೆ ಮುಂಚೆ ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದು ಉತ್ತಮ ಎಂಬುದಾಗಿ ಶಿಫಾರಸು ಮಾಡುತ್ತಾರೆ.[೪೮][unreliable source?]
ಗರ್ಭಿಣಿಯಾಗಿರುವ ಮೊದಲ ಹಂತಗಳಲ್ಲಿ ನಿಕೋಟಿನ್ ಗಮ್ ಮತ್ತು ನಿಕೋಟಿನ್ ತುಣುಕುಗಳನ್ನು ಬಳಸುವ ಮಹಿಳೆಯರು ಹುಟ್ಟುವ ಮಗುವಿನಲ್ಲಿ ನ್ಯೂನತೆಯನ್ನು ಕಾಣುವ ಸಮಸ್ಯೆಯ ಹೆಚ್ಚಿನ ಸಂಭಾವ್ಯತೆಯನ್ನು ಹೊಂದಿರುತ್ತಾರೆ. ಒಂದು ಅಧ್ಯಯನದ ಪ್ರಕಾರ ಇದು ಸುಮಾರು ಡೆನ್ಮಾರ್ಕ್‌ನಲ್ಲಿ ಸುಮಾರು 77,000 ಗರ್ಭಿಣಿ ಮಹಿಳೆಯರಲ್ಲಿ ಕಂಡುಬಂದಿತು. ಗರ್ಭಿಣಿಯಾಗಿರುವಾಗ ಮೊದಲ ವಾರಗಳಲ್ಲಿ ನಿಕೋಟಿನ್-ಪರ್ಯಾಯವನ್ನು ಬಳಸುವ ಮಹಿಳೆಯರು, ಧೂಮಪಾನಿಗಳಲ್ಲದ ಗರ್ಭಿಣಿ ಮಹಿಳೆಯರಿಗೆ ಹೋಲಿಸಿ ನೋಡಿದಾಗ, ಹುಟ್ಟುವ ಮಗುವಿನಲ್ಲೂ ನ್ಯೂನತೆಯನ್ನು ಹೊಂದಿರುವ ಸಂಭವನೀಯತೆಯಲ್ಲಿ 60 ಪ್ರತಿಶತಕ್ಕಿಂತಲೂ ಹೆಚ್ಚಿನ ಪ್ರಮಾಣವನ್ನು ಹೊಂದಿದ್ದರು ಎಂಬುದನ್ನು ಒಂದು ಅಧ್ಯಯನವು ಕಂಡುಹಿಡಿಯಿತು, ಮತ್ತು ಇದನ್ನು ದಿನಿನಿತ್ಯದ ವೃತ್ತಪತ್ರಿಕೆಯು ವರದಿ ಮಾಡಿತು. ಈ ಸಂಶೋಧನೆಗಳು ಪ್ರಸೂತಿ ವಿಜ್ಞಾನ ಮತ್ತು ಸ್ತ್ರೀರೋಗಶಾಸ್ತ್ರದ ನಿಯತಕಾಲಿಕಗಳಲ್ಲಿ ಪ್ರಕಟಿಸಲ್ಪಟ್ಟವು.
ಎಪ್ರಿಲ್ 1, 1990 ರಂದು ಪರಿಣಾಮಕಾರಿಯಾಗಿ, ಕ್ಯಾಲಿಫೋರ್ನಿಯಾ ವಾತಾವರಣ ಸಂರಕ್ಷಣಾ ಸಂಸ್ಥೆಯ ವಾತಾವರಣದ ಆರೋಗ್ಯ ಹಾನಿ ನಿರ್ಧಾರಣ ಕಚೇರಿಯು ಪ್ರತಿಪಾದನೆ 65 ಉದ್ದೇಶದಿಂದ, ವಿಷತ್ವವನ್ನು ಬೆಳೆಸುವುದರಲ್ಲಿ ತಿಳಿಯಲ್ಪಟ್ಟ ರಾಸಾಯನಿಕಗಳ ಯಾದಿಗೆ ನಿಕೋಟಿನ್ ಅನ್ನು ಸೇರಿಸಿತು.[೪೯]
ನಿಕೋಟಿನ್ ಮತ್ತು ಆಮ್ಲಸಂಯುಕ್ತೀಯ(oxidative) ಒತ್ತಡ
[ಬದಲಾಯಿಸಿ]ಯಕೃತ್ತಿನಲ್ಲಿರುವ ಸೈಟೋಕ್ರೋಮ್ ಪಿ450 ನಿಕೋಟಿನ್‌ನ ವಿಷವನ್ನು ಉಳಿಸುತ್ತದೆ.[೧೨]
ರಕ್ತ ಪರಿಚಲನಾ ರೋಗಕ್ಕೆ ಸಂಬಂಧ
[ಬದಲಾಯಿಸಿ]ದೇಹದ ರಕ್ತನಾಳಗಳ ಮೇಲೆ ನಿಕೋಟಿನ್ ಬಹಳ ಪ್ರಬಲವಾದ ಪರಿಣಾಮವನ್ನು ಉಂಟುಮಾಡುತ್ತವೆ. ನಿಕೋಟಿನ್ ಒಬ್ಬ ಒಂದು ಪ್ರಚೋದಕ, ಅದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಅದೊಂದು ವೆಸೊಕೊನ್‌ಸ್ಟ್ರಿಕ್ಟರ್ ಕೂಡ, ಕಿರಿದಾದ ರಕ್ತನಾಳಗಳ ಮೂಲಕ ರಕ್ತವನ್ನು ಪಂಪ್ ಮಾಡುವುದು ಹೃದಯಕ್ಕೆ ಕಷ್ಟವಾಗುತ್ತದೆ. ದೇಹವು ತಾನು ಸಂಗ್ರಹಿಸಿದ ಜಿಡ್ಡು ಮತ್ತು ಕೊಬ್ಬನ್ನು ರಕ್ತದ ಒಳಕ್ಕೆ ಬಿಡುಗಡೆ ಮಾಡುವಂತೆ ಮಾಡುತ್ತದೆ.[ಸಾಕ್ಷ್ಯಾಧಾರ ಬೇಕಾಗಿದೆ]
ನಿಕೋಟಿನ್ ಪ್ಲಾಸ್ಮಿನೋಜೆನ್ ಆಕ್ಟಿವೇಟರ್ ಪ್ರತಿಬಂಧಕ-1ಅನ್ನು ಹೆಚ್ಚುಮಾಡುವ ಮೂಲಕ ರಕ್ತ ಹೆಪ್ಪುಗಟ್ಟುವುದನ್ನು ಹೆಚ್ಚಿಸುತ್ತದೆ ಎಂಬ ಶಂಕೆಯೂ[ಸಾಕ್ಷ್ಯಾಧಾರ ಬೇಕಾಗಿದೆ] ಇದೆ. ಆದರೆ ಇದು ಸಾಬೀತಾಗಿಲ್ಲ. ಪ್ಲಾಸ್ಮಾ ಪ್ರೋಟೀನ್‌ನ ಮಟ್ಟಗಳು ಧೂಮಪಾನಿಗಳಲ್ಲಿ ಉತ್ತಮಗೊಳಿಸಲ್ಪಡುತ್ತವೆ ಮತ್ತು ಇನ್ನೂ ಹೆಚ್ಚಾಗಿ ಸಿಒಪಿಡಿ ಉಲ್ಬಣಗೊಳ್ಳುವಿಕೆಯ ಸಮಯದಲ್ಲಿ ಉತ್ತಮಗೊಳ್ಳಲ್ಪಡುತ್ತದೆ. ಪ್ರೋಟೀನ್‌ಗಳ ಗಡ್ದೆಕಟ್ಟುವಿಕೆಯನ್ನು ಸ್ಥಿರಪಡಿಸುವ XIII ಅಂಶವೂ ಕೂಡ ಧೂಮಪಾನಿಗಳಲ್ಲಿ ಹೆಚ್ಚಾಗಿರುತ್ತದೆ. ಆದರೆ ಈ ಎರಡರಲ್ಲಿ ಯಾವ ಪರಿಣಾಮಗಳೂ ಕೂಡ ನಿಕೋಟಿನ್‌ನಿಂದ ಉಂಟಾಗುತ್ತವೆ ಎಂಬುದನ್ನು ತೋರಿಸಲ್ಪಟ್ಟಿಲ್ಲ [೧] as of 2009[update][[ವರ್ಗ:Articles containing potentially dated statements from ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".]]. ಒಂದು ರಕ್ತಧಮನಿಯಲ್ಲಿನ ರಕ್ತ ಗಡ್ಡೆಯಿಂದ ರಕ್ತ ಪ್ರವಾಹವು ಕಡಿಮೆಯಾಗಲ್ಪಟ್ಟರೆ ಅಥವಾ ನಿಂತುಹೋದರೆ, ಅಂಗಾಂಶವು ತನ್ನ ಆಮ್ಲಜನಕದ ಮೂಲವನ್ನು ಮತ್ತು ಪೋಷಕಾಂಶಗಳ ಮೂಲವನ್ನು ಕಳೆದುಕೊಳ್ಳುತ್ತದೆ ಮತ್ತು ನಿಮಿಷದಲ್ಲಿ ಸಾವಿಗೊಳಗಾಗುತ್ತದೆ.
ರಕ್ತಧಮನಿಯಲ್ಲಿನ ತೀವ್ರತೆಗೆ ಸಾಗುತ್ತಿರುವ ಹೊರಭಾಗದ ಪ್ರವಹಿಸುವಿಕೆಗಳೂ ಕೂಡ ನಿಕೋಟಿನ್‌ನ ವಾಸೊಕೊನ್‌ಸ್ಟ್ರಿಕ್ಟರ್ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ಹೆಚ್ಚಾಗಿ ಸಂಶಯಿಸಲಾಗುತ್ತದೆ ಮತ್ತು ಗಡ್ಡೆಕಟ್ಟುವಿಕೆ ಮತ್ತು ಅಡ್ಡಿಪಡಿಸುವಿಕೆಯ ಹೆಚ್ಚಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ.[ಸಾಕ್ಷ್ಯಾಧಾರ ಬೇಕಾಗಿದೆ]
ಔಷಧೀಯ ಉಪಯೋಗಗಳು
[ಬದಲಾಯಿಸಿ]ನಿಕೋಟಿನ್‍ನ ಮೇಲೆ ಅವಲಂಬಿತವಾಗಿರುವವರಲ್ಲಿ ಆರೋಗ್ಯದ ಮೇಲಾಗುವ ಹಾನಿಗಳ ಜೊತೆ ಧೂಮಪಾನವನ್ನು ಕಡಿಮೆ ಮಾಡುವ ಚಿಕಿತ್ಸೆಯಲ್ಲಿ ಉಪಯೋಗಿಸುವುದು ನಿಕೋಟಿನ್‍ನ ಮುಖ್ಯವಾದ ಉಪಯೋಗ. ನಿಯಮಿತ ಪ್ರಮಾಣಗಳ ನಿಕೋಟಿನ್‍ಗಳನ್ನು ಅದರ ಅವಲಂಬನೆಯನ್ನು ತಪ್ಪಿಸುವ ಪ್ರಯತ್ನವಾಗಿ ಒಸಡುಗಳು, ಒಳಚರ್ಮದ ತುಣುಕುಗಳು, ಗುಳಿಗೆಗಳು, ಇಲೆಕ್ಟ್ರಾನಿಕ್/ಸಿಗರೇಟುಗಳಿಗೆ ಪರ್ಯಾಯ ಅಥವಾ ಮೂಗಿನ ದ್ರವೌಷಧಗಳ ರೂಪದಲ್ಲಿ ರೋಗಿಗಳಿಗೆ ನೀಡಲಾಗುತ್ತದೆ.
ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ, ರೋಗಿಗಳಿಗೆ ಔಷಧೀಯ ಮೌಲ್ಯವಾಗಿ ಧೂಮಪಾನವನ್ನು ಸ್ಪಷ್ಟವಾಗಿ ಗಮನಿಸಲಾಗುವುದು.
ಇವುಗಳನ್ನು ಕೆಲವೊಮ್ಮೆ "ಧೂಮಪಾನಿಗಳ ಅಸಂಗತೋಕ್ತಿ" ಎನ್ನುವರು.[೫೦] ಆದಾಗ್ಯೂ ಹಲವಾರು ದೃಷ್ಟಾಂತಗಳಲ್ಲಿ ವಾಸ್ತವಿಕವಾದ ಯಾಂತ್ರಿಕ ವ್ಯವಸ್ಥೆಯು ವಿರಳವಾಗಿ ತಿಳಿದಿರಲ್ಪಡುತ್ತದೆ ಅಥವಾ ತಿಳಿಯಲ್ಪಡುವುದೇ ಇಲ್ಲ, ಸಾಮಾನ್ಯವಾಗಿ ನಂಬಿರುವುದೇನೆಂದರೆ, ಪ್ರಮುಖವಾದ ಪ್ರಯೋಜನಕರ ಕ್ರಿಯೆಗಳು ನಿಕೋಟಿನ್ ನಿರ್ವಹಣೆಯ ಕಾರಣದಿಂದ ಉಂಟಾಗುತ್ತವೆ ಮತ್ತು ಧೂಮಪಾನರಹಿತವಾದ, ಟಾರ್‌ನ ಕಾರಣದಿಂದ ಆರೋಗ್ಯಕ್ಕೆ ಹೆಚ್ಚಿನ ಸಮಸ್ಯೆ ರಹಿತವಾದ ಮತ್ತು ತಂಬಾಕಿನಲ್ಲಿ ಕಂಡುಬರುವ ಇತರ ಸಂಯೋಜಕಗಳಲ್ಲಿ ನಿಕೋಟಿನ್‌ನ ಆ ನಿರ್ವಹಣೆಯು ಕಂಡುಬರುತ್ತದೆ.
ಉದಾಹರಣೆಗೆ, ಪರ್ಸುಟೆನಿಯಸ್ ಕೊರನರಿ ಇಂಟರ‍್ವೆನ್ಶನ್ (ಪಿಸಿಐ) ನಂತರ ರಿವಾಸ್ಕಲರೈಸೆಶನ್‍ನ ಕಡಿಮೆ ಪುನರಾವರ್ತನೆ ಧೂಮಪಾನಿಗಳಿಗೆ ಅವಶ್ಯವಾಗಿರುತ್ತದೆ ಎಂದು ಇತ್ತೀಚಿನ ಅಧ್ಯಯನಗಳು ಸೂಚಿಸುತ್ತವೆ.[೫೦]
ಪ್ರಮಾಣ-ಅವಲಂಬನೆಯ ಆಧಾರದ ಮೇಲೆ ಧೂಮಪಾನಿಗಳ ಮೂಲಕ ಅಲ್ಸರೇಟಿವ್ ಕೊಲಿತಿಸ್‍ನ ತೊಂದರೆಯನ್ನು ಕಡಿಮೆ ಮಾಡಲಾಗಿದೆ ಎಂದು ತೋರಿಸಲಾಗಿದೆ; ವ್ಯಕ್ತಿಗಳು ಧೂಮಪಾನವನ್ನು ನಿಲ್ಲಿಸಿದರೆ ಪರಿಣಾಮ ಕಡಿಮೆಯಾಗುತ್ತದೆ.[೫೧][೫೨]
ಕೊಪಿಸಿಸ್ ಸರ್ಕೋಮದ ಬೆಳವಣಿಗೆಯನ್ನು ಪ್ರತಿರೋಧಿಸಲು ಸಹ ಧೂಮಪಾನ ಕಾಣಿಸಿಕೊಳ್ಳುತ್ತದೆ.[೫೩]
ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬಿಆರ‍್ಸಿಎ ಜೀನ್,[೫೪] ಪ್ರಿಕ್ಲಾಂಪ್ಸಿಯ,[೫೫]
ಮತ್ತು ಅಲರ್ಜಿ ಉಂಟುಮಾಡುವ ಅಸ್ತಮಾದಂತಹ ಅಟೊಪಿಕ್ ರೋಗಗಳ ಹೆಚ್ಚಿನ ತೊಂದರೆಗಳನ್ನು ಉಂಟುಮಾಡುತ್ತದೆ.[೫೬]
ಕ್ರಿಯೆಯ ಸಮಂಜಸವೆಂದು ಕಾಣುವ ಯಾಂತ್ರಿಕ ವ್ಯವಸ್ಥೆಗಳಂತಹ ಸಂದರ್ಭಗಳಲ್ಲಿ ನಿಕೋಟಿನ್ ಪ್ರಚೋದಕ-ವಿರೋಧಿ ಏಜೆಂಟ್ ಆಗಿ ಕೆಲಸ ಮಾಡುತ್ತದೆ, ಮತ್ತು ರಕ್ತನಾಳ ಸಂಕೋಚಕ ಹೊಂದಿರುವ ನಿಕೋಟಿನ್ ಪ್ರಚೋದಕ ಸಂಬಂಧೀ ರೋಗಗಳ ಪ್ರಕ್ರಿಯೆಗಳಿಗೆ ತಡೆ ಒಡ್ಡುತ್ತದೆ.[೫೭]
ತಂಬಾಕು ಧೂಮ ಎಮ್‍ಎಒವನ್ನು ತಡೆಯಯುವ ಸಂಯುಕ್ತಗಳನ್ನು ಹೊಂದಿದೆ ಎಂದು ತೋರಿಸಲಾಗಿದೆ. ಮೊನೊಮಿನ್ ಆಕ್ಸಿಡಸ್ ಮಾನವ ಮಿದುಳಿನಲ್ಲಿರುವ ಡೋಪಮೈನ್‍ನ ಕಡಿಮೆ ಮಾಡುವ ಕೆಲಸ ಮಾಡುತ್ತದೆ. ಡೋಪಮೈನ್ ಎಮ್‍ಎಒ-ಬಿ ಆಗಿ ಒಡೆದಾಗ, ಪಾರ್ಕಿನ್ಸನ್ ಮತ್ತು ಅಲ್ಜಿಮರ್ಸ್ ರೋಗಗಳಿಗೆ ಕಾರಣವಾಗುವ ನ್ಯೂರೊಟೊಕ್ಸಿಕ್ ಉಪ-ಉತ್ಪನ್ನಗಳು ರೂಪಗೊಳ್ಳುತ್ತವೆ.[೫೮]
ಅಲ್ಜಿಮರ್ಸ್ ರೋಗ[೫೯]
ಮತ್ತು ಪಾರ್ಕಿನ್‍ಸನ್ಸ್ ರೋಗ[೬೦] ಇವುಗಳ ಬಗೆಗಿನ ಹಲವಾರು ಪೇಪರುಗಳನ್ನು ಪ್ರಕಟಿಸಲಾಗಿದೆ.
ಧೂಮಪಾನ ಮತ್ತು ಅಲ್ಜಿಮರ್ಸ್ ರೋಗಗಳ ನಡುವೆ ಯಾವುದೇ ರೀತಿಯ ಲಾಭಕರ ಸಂಬಂಧವಿಲ್ಲ ಎಂದು ಇತ್ತೀಚಿನ ಅಧ್ಯಯನಗಳಿಂದ ಕಂಡು ಬಂದಿದೆ ಮತ್ತು ಕೆಲವು ಸಂಧರ್ಭಗಳಲ್ಲಿ, ರೋಗದ ಪ್ರಾರಂಭಿಕ ಹಂತಗಳಲ್ಲಿ ಇದು ಪರಿಣಾಮಕಾರಿಯಾಗಿರಬಹುದು.[೬೧][೬೨][೬೩][೬೪]
ಆದಾಗ್ಯೂ, ಮಂಗಗಳು ಮತ್ತು ಮನುಷ್ಯರನ್ನು ಒಳಗೊಂಡ ಅಧ್ಯಯನಗಳಲ್ಲಿ ಪಾರ್ಕಿನ್ಸನ್ ರೋಗದ ಆಕ್ರಮಣವನ್ನು ತಡ ಮಾಡುವುದನ್ನು ನಿಕೋಟಿನ್ ತೋರಿಸಿದೆ.[೬೫][೬೬][೬೭]
ಅಟೋಸೋಮಲ್ ಡೊಮಿನಂಟ್ ನೊಕ್ಟರ್ನಲ್ ಫ್ರೊಂಟಲ್ ಲೋಬ್ ಎಪಿಲೆಪ್ಸಿ ಯಿಂದ ಬಳಲುತ್ತಿರುವ ವಯಸ್ಕರಿಗೆ ಸಹಾಯ ಮಾಡಲು ನಿಕೋಟಿನ್ ಅನ್ನು ಉಪಯೋಗಿಸಬಹುದು ಎಂದು ಇತ್ತೀಚಿನ ಅಧ್ಯಯನಗಳು ಸೂಚಿಸುತ್ತವೆ. ಎಪಿಲೆಪ್ಸಿಯ ವಿಧದಲ್ಲಿ ರೋಗದ ಹಿಡಿತವನ್ನು ಉಂಟುಮಾಡುವ ಅದೇ ರೀತಿಯಾದ ವ್ಯಾಪ್ತಿಗಳು ಮೆದುಳಿನಲ್ಲಿ ನಿಕೋಟಿನ್ ಸಂಸ್ಕರಣಕ್ಕೆ ಜವಾಬ್ದಾರಿಯಾಗಿರುತ್ತವೆ.[೬೮]
ಹೆಚ್ಚಿನ ಜನರು ಮನೋವ್ಯಾಧಿ ಧೂಮಪಾನ ತಂಬಾಕಿನ ಜೊತೆ ರೋಗ ನಿರ್ಣಯಿಸುತ್ತಾರೆ ಎಂದು ಗುರುತಿಸಲಾಗಿದೆ.[ಸೂಕ್ತ ಉಲ್ಲೇಖನ ಬೇಕು]
ಧೂಮಪಾನ ಮಾಡುವವರಲ್ಲಿ ಮನೋವ್ಯಾಧಿಯಿಂದ ಬಳಲುವವರ ಪ್ರಮಾಣ 75% ರಿಂದ 90% ಆಗಿದೆ ಎಂದು ಅಂದಾಜಿಸಲಾಗಿದೆ.
ನಿಕೋಟಿನ್ ಜೊತೆ ಸ್ವ-ಚಿಕಿತ್ಸೆ ಮಾಡಿಕೊಳ್ಳುವ ಇಚ್ಚೆಯ ಕಾರಣದಿಂದ ಮನೋವ್ಯಾಧಿಯಲ್ಲಿ ಧೂಮಪಾನದ ಹೆಚ್ಚಳವಾಗಿದೆ ಎಂದು ಇತ್ತೀಚಿಗೆ ಪ್ರತಿಪಾದಿಸಲಾಗಿತ್ತು.[೬೯][೭೦]
ಸ್ವಲ್ಪ ಅವಲಂಬಿತ ಬಳಕೆದಾರರು ನಿಕೊಟಿನ್‍ನಿಂದ ಪ್ರಯೋಜನ ಪಡೆದಿದ್ದಾರೆ, ಆದರೆ ಅಧಿಕವಾಗಿ ಅವಲಂಬಿತರಾದವರಲ್ಲ, ಎಂದು ಬಹಳ ಇತ್ತೀಚಿನ ಸಂಶೋಧನೆಯಿಂದ ಕಂಡುಬಂದಿದೆ.[೭೧]
ಈ ಎಲ್ಲ ಅಧ್ಯಯನಗಳು ವೀಕ್ಷಣೆಯ ಮೇಲೆ ಮಾತ್ರ ಆಧಾರವಾಗಿದೆ, ಮತ್ತು ಯಾವುದೇ ಉದ್ದೇಶಪೂರ್ವಕವಾದ (ಯಾದೃಚ್ಚಿಕ) ಅಧ್ಯಯನಗಳನ್ನು ಮಾಡಲಾಗಿಲ್ಲ.
ಆಯೋಜಿಸಿದಂತೆ ಒಂದು ತುಣುಕು ಅಥವಾ ಗಮ್ ಮೂಲಕ ನಿಕೋಟಿನ್ ಮೇಲಿನ ಸಂಶೋಧನೆ ನಡೆಯುತ್ತಿದೆ.
ಎಡಿಎಚ್‍ಡಿ ಲಕ್ಷಣಗಳನ್ನು ಸುಧಾರಿಸಲು ನಿಕೊಟಿನ್ ಬೇಕಾಗುತ್ತದೆ.
ವಯಸ್ಕರಲ್ಲಿ ಎಡಿಎಚ್‍ಡಿ ಜೊತೆ ನಿಕೊಟಿನ್ ಚಿಕಿತ್ಸೆಯ ಪ್ರಯೋಜನಗಳ ಮೇಲೆ ಕೆಲವು ಅಧ್ಯಯನಗಳು ಬೆಳಕು ಚೆಲ್ಲುತ್ತವೆ.[೭೨]
ಸಮರ್ಥ ಪ್ರತ್ಯಾಮ್ಲವಾದ ಆಯ್‌೦ಟಿಸೈಕೊಟಿಕ್ ಪ್ರತಿನಿಧಿ (ಏಜೆಂಟ್)ಗಾಗಿ ಸಂಶೋಧನೆ
[ಬದಲಾಯಿಸಿ]ಪ್ರತ್ಯೇಕವಾಗಿ ನಿಕೋಟಿನ್‌ನನ್ನು ಚಯಾಪಚಯ ಕ್ರಿಯೆಯ ಪರಿಣಾಮಗಳನ್ನು ಪ್ರಾಣಿ ಮತ್ತು ಮನುಷ್ಯರ ಗಮನಿಸಿದಾಗ ಮೊದಲು ಮೆದುಳಲ್ಲಿ ಉಂಟಾಗುವ ಛಿದ್ರಮನಸ್ಕತೆಯನ್ನು ಅಧ್ಯಯನ ಮಾಡಲಾಯಿತು. ಇದರಿಂದ ಅರಿವಿಗೆ ಸಂಭಧಿಸಿದ ಪರಿಣಾಮಗಳನ್ನು ಮತ್ತು ಛಿದ್ರಮನಸ್ಕತೆಯ ಋಣಾತ್ಮಕವಾದ ಚಿಹ್ನೆಗಳನ್ನು ಪ್ರಚುರಪಡಿಸಿತು. ಆದ್ದರಿಂದ, ಆಂಟಿಸೈಕೋಟಿಕ್ಸ್‌ನಂತೆ, ನಿಕೋಟಿನರ್ಜಿಕ್ ಘಟಕಗಳು ನಿಕೋಟಿನ್ ಅನ್ನು ಹೊಂದಿರುವುದಿಲ್ಲ ಆದರೆ ಅಕಿಜೋಫ್ರೇನಿಯಾದ ಮೇಲಿನ ಎಫ್‌ಡಿಎ ಅಧ್ಯಯನಗಳ ಮೊದಲಿನ ಹಂತಗಳಲ್ಲಿನ ಆಂಟಿಸೈಕೋಟಿಕ್ಸ್‌ನ ಹೊಂದಾಣಿಕೆಯಂತೆ ಭರವಸೆಯನ್ನು ತೋರಿಸುವ ಮೆದುಳಿನಲ್ಲಿನ ಅದೇ ರೀತಿಯಾದ ಗ್ರಾಹಕಗಳಲ್ಲಿ ಕಾರ್ಯನಿರ್ವಹಿಸುತ್ತವೆ.
ಪ್ರಿಪಲ್ಸ್ ಪ್ರತಿಬಂಧಕ(ಪಿಪಿಐ) ಕ್ರಿಯೆಯು ಒಂದು ನಿಶ್ಯಕ್ತ ಪ್ರಿಪಲ್ಸ್ ಇದು ನಂತರದ ಆಶ್ಚರ್ಯಕರ ಪ್ರಚೋದಕಗಳಿಗೆ ಪ್ರತಿಕ್ರಿಯೆಯನ್ನು ಒದಗಿಸುವ ಒಂದು ಅಪೂವ ಘಟನೆಯಾಗಿದೆ. ಆದ್ದರಿಂದ, ಪಿಪಿಐ ಇದು ಸ್ಕಿಜೋಫ್ರೇನಿಯಾದಲ್ಲಿ ಪಿಪಿಐ ಅಡ್ಡಿಗಳನ್ನು ಎದುರಿಸುವುದು, ನಿರ್ಮಿಸುವುದು, ಮತ್ತು ಭವಿಷ್ಯದಲ್ಲಿ ಸಿಂಧುತ್ವವನ್ನು ಹೊಂದಿರುವುದಾಗಿ ನಂಬಲಾಗುತ್ತದೆ, ಮತ್ತು ಇದು ಈ ರೀತಿಯ ಅಸ್ವಸ್ಥತೆಯ ನರವಿಜ್ಞಾನವನ್ನು ಅಧ್ಯಯನ ಮಾಡುವುದಕ್ಕೆ ಒಂದು ಮಾದರಿಯಾಗಿ ಮತ್ತು ಮನೋವೈಜ್ಞಾನಿಕವಲ್ಲದ ಪರೀಕ್ಷೆಯನ್ನು ಮಾಡುವುದಕ್ಕೆ ಬಳಸಲ್ಪಡುತ್ತದೆ.[೭೩] ಇನ್ನೂ ಹೆಚ್ಚಾಗಿ, ಜನರನ್ನು ನಿಕೋಟಿನ್ ಬಳಕೆಗೆ ಸ್ಕಿಜೋಫ್ರೇನಿಯಾದೊಂದಿಗೆ ವಶವಾಗುವಂತೆ ಮಾಡುವ ವಂಶವಾಹಿಗಳೂ ಅಲ್ಲಿ ಅಸ್ತಿತ್ವದಲ್ಲಿವೆ ಎಂಬುದನ್ನು ಕೆಲವು ಅಧ್ಯಯನಗಳು ತೋರಿಸಿವೆ.[೭೪]
ಎಲ್ಲಾ ಅಂಶಗಳನ್ನೂ ಸೇರಿಸಿ, ಸಿಗರೇಟಿನ ಹೆಚ್ಚಿನ ಬಳಕೆ ಮತ್ತು ಇತರ ನಿಕೋಟಿನ್‌ಯುಕ್ತ ವಸ್ತುಗಳ ಬಳಕೆಯು ಜನರಲ್ಲಿನ ಛಿದ್ರಮನಸ್ಕತೆಯನ್ನು ವಿವರಿಸಬಹುದು, ಮತ್ತು ಹೊಸ-ರೀತಿಯ ಆಯ್‌೦ಟಿಸೈಕೊಟಿಕ್ ಪ್ರತಿನಿಧಿಗಳ ಬೆಳವಣಿಗೆಯು ಈ ಪರಿಣಾಮಗಳನ್ನು ಹನಿಕಾರಕವಾಗದಂತೆ ಮತ್ತು ಹಿಡಿತದಲ್ಲಿರುವಂತೆ ಮಾಡುತ್ತದೆ, ಮತ್ತು ಛಿದ್ರಮನಸ್ಕತೆಯ ಸಂಶೋಧನೆಗಳಿಗೆ ಆಶಾದಾಯಕ ವೇದಿಕೆಯನ್ನು ನಿರ್ಮಿಸುತ್ತದೆ.
ಇವನ್ನೂ ನೋಡಿ
[ಬದಲಾಯಿಸಿ]- ನಿಕೋಟಿಯಾನಾ
- ನಿಕೋಟಿನಿಕ್ ಆಮ್ಲ (ನಿಯಾಸಿನ್)
- ಮದ್ಯವ್ಯಸನ
- ತಂಬಾಕು ಸಮಾಪ್ತಿ
- ಸೈಕೊಆಕ್ಟೀವ್ ಡ್ರಗ್
- Drug Discovery and Development: Nicotinic Acetylcholine Receptor Agonists
- ನಿಕೊಟಿನಿಕ್ ರಿಸೆಪ್ಟಾರ್
ಪರಾಮರ್ಶನಗಳು
[ಬದಲಾಯಿಸಿ]- ↑ "Determination of the Nicotine Content of Various Edible Nightshades (Solanaceae) and Their Products and Estimation of the Associated Dietary Nicotine Intake". Retrieved 2008-10-05.
- ↑ "Smoking and Tobacco Control Monograph No. 9" (PDF).
- ↑ ತಂಬಾಕು ಮತ್ತು ತಂಬಾಕಿನ ಹೊಗೆಯಲ್ಲಿರುವ ರಾಸಾಯನಿಕ ವಸ್ತುಗಳು
- ↑ "ಜೈವಿಕ ತೋಟಗಾರಿಕೆಯಲ್ಲಿ ಅನುಮತಿಸಲ್ಪಟ್ಟ ಕೆಲವು ಕೀಟನಾಶಕಗಳು". Archived from the original on 2011-06-20. Retrieved 2010-08-04.
- ↑ ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಮತ್ತು ನಿಕೋಟಿನ್ ಚಟ.
- ↑ Connolly, G. N; Alpert, H. R; Wayne, G. F; Koh, H (2007). "Trends in nicotine yield in smoke and its relationship with design characteristics among popular US cigarette brands, 1997-2005". Tobacco Control. 16 (5): e5. doi:10.1136/tc.2006.019695. PMID 17897974.
- ↑ Henningfield, JE; Zeller, M (2006). ""Nicotine psychopharmacology", research contributions to United States and global tobacco regulation: A look back and a look forward" (PDF). Psychopharmacology. 184 (3–4): 286–291. doi:10.1007/s00213-006-0308-4. PMID 16463054.
{{cite journal}}
: More than one of|author1=
and|last1=
specified (help); More than one of|author2=
and|last2=
specified (help) - ↑ Melsens (1844). "Über das Nicotin". Journal für Praktische Chemie. 32 (1): 372–377. doi:10.1002/prac.18440320155.
- ↑ http://medicolegal.tripod.com/toxicchemicals.htm Comptes rendus, 1903, 137, ಪುಟ 860
- ↑ Gause, G. F. (1941). Luyet, B. J. (ed.). https://archive.org/stream/opticalactivityl00gauz/opticalactivityl00gauz_djvu.txt. No. 2 of a series of monographs on general physiology. Normandy, Missouri: Biodynamica.
{{cite book}}
: External link in
(help)|title=
- ↑ Benowitz NL, Jacob P 3rd, Jones RT, Rosenberg J, NL; Jacob P, 3rd; Jones, RT; Rosenberg, J (1982). "Interindividual variability in the metabolism and cardiovascular effects of nicotine in man". J Pharmacol Exp Ther. 221 (2): 368–72. PMID 7077531.
{{cite journal}}
: CS1 maint: multiple names: authors list (link) CS1 maint: numeric names: authors list (link) - ↑ ೧೨.೦ ೧೨.೧ Hukkanen J, Jacob P 3rd, Benowitz NL., J; Jacob P, 3rd; Benowitz, NL (2005). "Metabolism and Disposition Kinetics of Nicotine". Pharmacol Rev. 57 (1): 79–115. doi:10.1124/pr.57.1.3. PMID 15734728.
{{cite journal}}
: Unknown parameter|month=
ignored (help)CS1 maint: multiple names: authors list (link) CS1 maint: numeric names: authors list (link) - ↑ Benowitz NL, Herrera B, Jacob P 3rd., NL; Herrera, B; Jacob P, 3rd (2004). "Mentholated Cigarette Smoking Inhibits Nicotine Metabolism". J Pharmacol Exp Ther. 310 (3): 1208–15. doi:10.1124/jpet.104.066902. PMID 15084646.
{{cite journal}}
: CS1 maint: multiple names: authors list (link) CS1 maint: numeric names: authors list (link) - ↑ [27]
- ↑ [28]
- ↑ ಕಟ್‌ಜುಂಗ್, ಬೆರ್ಟಮ್ ಜಿ. ಬೇಸಿಕ್ & ಕ್ಲಿನಿಕಲ್ ಫಾರ್ಮಕಾಲಜಿ (ಬೇಸಿಕ್ ಆಯ್‌೦ಡ್ ಕ್ಲಿನಿಕಲ್ ಫಾರ್ಮಕಾಲಜಿ ). ನ್ಯೂಯಾರ್ಕ್: ಮ್ಯಾಕ್‌ಗ್ರಾ-ಹಿಲ್ ಮೆಡಿಕಲ್, 2006. ಪುಟಗಳು 99-105.
- ↑ ಕ್ಸಿನಾನ್ ಕ್ಸು, ನೈಸ್ಸ ಎಲ್. ಪುಸ್ಕರ್, ಜೈ ಎ. ಪಿ. ಶಾಂತ, ಹೆನ್ರಿ ಎ. ಲೀಸ್ಟರ್ & ಡೆನ್ನೀಸ್ ಎ. ಡಗೆರ್ಟಿ.(2009) "ನಿಕೋಟಿನ್ ಬೈಂಡಿಂಗ್ ಟು ಬ್ರೈನ್ ರಿಸೆಪ್ಟಾರ್ಸ್ ರಿಕ್ವೈರ್ಸ್ ಅ ಸ್ಟ್ರಾಂಗ್ ಕಾಶನ್– ಇಂಟರ್ಯಾಕ್ಷನ್". ನೇಚರ್ 458 :534-537 PMID 19252481
- ↑ ೧೮.೦ ೧೮.೧ Herraiz T, Chaparro C (2005). "Human monoamine oxidase is inhibited by tobacco smoke: beta-carboline alkaloids act as potent and reversible inhibitors". Biochem. Biophys. Res. Commun. 326 (2): 378–86. doi:10.1016/j.bbrc.2004.11.033. PMID 15582589.
- ↑ Fowler JS, Volkow ND, Wang GJ; et al. (1998). "Neuropharmacological actions of cigarette smoke: brain monoamine oxidase B (MAO B) inhibition". J Addict Dis. 17 (1): 23–34. doi:10.1300/J069v17n01_03. PMID 9549600.
{{cite journal}}
: Explicit use of et al. in:|author=
(help)CS1 maint: multiple names: authors list (link) - ↑ Wüllner U, Gündisch D, Herzog H; et al. (2008). "Smoking upregulates alpha4beta2* nicotinic acetylcholine receptors in the human brain". Neurosci. Lett. 430 (1): 34–7. doi:10.1016/j.neulet.2007.10.011. PMID 17997038.
{{cite journal}}
: Explicit use of et al. in:|author=
(help)CS1 maint: multiple names: authors list (link) - ↑ Walsh H, Govind AP, Mastro R; et al. (2008). "Up-regulation of nicotinic receptors by nicotine varies with receptor subtype". J. Biol. Chem. 283 (10): 6022–32. doi:10.1074/jbc.M703432200. PMID 18174175.
{{cite journal}}
: Explicit use of et al. in:|author=
(help)CS1 maint: multiple names: authors list (link) CS1 maint: unflagged free DOI (link) - ↑ Nguyen HN, Rasmussen BA, Perry DC (2003). "Subtype-selective up-regulation by chronic nicotine of high-affinity nicotinic receptors in rat brain demonstrated by receptor autoradiography". J. Pharmacol. Exp. Ther. 307 (3): 1090–7. doi:10.1124/jpet.103.056408. PMID 14560040.
{{cite journal}}
: CS1 maint: multiple names: authors list (link) - ↑ Pons S, Fattore L, Cossu G; et al. (2008). "Crucial role of alpha4 and alpha6 nicotinic acetylcholine receptor subunits from ventral tegmental area in systemic nicotine self-administration". J. Neurosci. 28 (47): 12318–27. doi:10.1523/JNEUROSCI.3918-08.2008. PMC 2819191. PMID 19020025.
{{cite journal}}
: Explicit use of et al. in:|author=
(help); Unknown parameter|month=
ignored (help)CS1 maint: multiple names: authors list (link) - ↑ Yoshida T, Sakane N, Umekawa T, Kondo M (1994). "Effect of nicotine on sympathetic nervous system activity of mice subjected to immobilization stress". Physiol Behav. 55 (1): 53–7. doi:10.1016/0031-9384(94)90009-4. PMID 8140174.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ ಕಿಂಗ್ ಗಿ, ಯರ್ಗರ್ ವಿಬಿ, ವೆಂಬೊಲ ಜಿಎಲ್, ಬೆಂಡೆಲ್ ಆರ್‌ಬಿ, ಕಿಟ್ಲೆಸ್ ಆರ್, ಮೂಲ್ಚನ್ ಇಟಿ. ಲಿಂಕ್ ಬಿಟ್ವೀನ್ ಫಾಕುಲೇಟಿವ್ ಮೆಲನಿನ್ ಆಯ್‌೦ಡ್ ಟೊಬಾಕೊ ಯೂಸ್ ಅಮಾಂಗ್ ಆಫ್ರಿಕನ್ ಅಮೇರಿಕನ್ಸ್ .(2009). ಫರ್ಮಕಾಲ್ ಬಯೊಕೆಮಿಕಲ್ ಬಿಹೇವಿಯರ್ . 92(4):589-96. doi:10.1016/j.pbb.2009.02.011 PMID 19268687
- ↑ Elaine N. Marieb and Katja Hoehn (2007). Human Anatomy & Physiology (7th Ed.). Pearson. pp. ?. ISBN 0-805-35909-5.
- ↑ ಪರಾಮರ್ಶನಗಳು ಮತ್ತು ಟಿಪ್ಪಣಿಗಳನ್ನು ಚಿತ್ರಸಹಿತ ವಿವರಣೆಯೊಂದಿಗೆ ಸಾಮಾನ್ಯವಾಗಿ ಕಾಣಬಹುದು.
- ↑ ಎಫೆಕ್ಟೀವ್ ಕ್ಲಿನಿಕಲ್ ಟೊಬ್ಯಾಕೊ ಇಂಟರ್ವೆಂಕ್ಷನ್ , ಥೆರೆಪುಟಿಕ್ಸ್ ಲೆಟರ್ಸ್, issue 21, ಸೆಪ್ಟೆಂಬರ್-ಅಕ್ಟೋಬರ್ 1997, ಯುನಿವರ್ಸಿಟಿ ಆಫ್ ಕೊಲಂಬಿಯ
- ↑ ಗಿಲ್ಬರ್ಟ್ಸ್ ಲಾರ್ಗ್ಯು, ಪ್ರನ್ಕೊಯಿಸ್ ಲೆಬರ್ಜಿ, ಅನ್ನೆ ಕಾರ್ಮಿಯರ್, "ಫ್ರಂ ನಿಕೊಟಿನಿಕ್ ರಿಸೆಪ್ಟರ್ಸ್ಟೊ ಸ್ಮೋಕಿಂಗ್ ಡಿಪೆಂಡೆನ್ಸಿ: therapeutic ಪ್ರಾಸ್ಪೆಕ್ಟ್ಸ್" ಆಲ್ಕೂಲೊಗಿ et ಅಡಿಕ್ಟೊಲೊಗಿ ಅಧ್ಯಾಯ. : 23, N° : 2S, juin 2001, ಪುಟಗಳು 39S - 42
- ↑ ಜೀನ್-ಕ್ಲೌಡ್ ಒರ್ಸಿನಿ, "ಡಿಪೆಂಡೆನ್ಸಿ ಆನ್ ಟೊಬೊಕೊ ಸ್ಮೊಕಿಂಗ್ ಆಯ್‌೦ಡ್ ಬ್ರೈನ್ ಸೈಸ್ಟಮ್ಸ್ ಕಂಟ್ರೋಲಿಂಗ್ ಗ್ಲೈಸೆಮಿಯ ಆಯ್‌೦ಡ್ ಅಪೆಟೈಟ್" ಆಲ್ಕೂಲೊಗಿ et ಅಡಿಕ್ಟೊಲೊಗಿ ಅಧ್ಯಾಯ. : 23, N° : 2S, juin 2001, ಪುಟಗಳು 28S - 36S
- ↑ ಸ್ಮೋಕರ್ಸ್ ಲೂಸ್ ದೇರ್ ಅಪೆಟೈಟ್ : ಮೀಡಿಯಾ ರಿಲಸಸ್ : ನ್ಯೂಸ್ : ದ ಯುನಿವರ್ಸಿಟಿ ಆಫ್ ಮೆಲ್ಬೋರ್ನ್
- ↑ ಕೆಮಿಕಲಿ ಕರೆಕ್ಟ್: ನಿಕೋಟಿನ್ Archived 2009-12-01 ವೇಬ್ಯಾಕ್ ಮೆಷಿನ್ ನಲ್ಲಿ. , ಆಂಡ್ರ್ಯೂ ನೊವಿಕ್
- ↑ Rusted, J (1994-05-05). "Does nicotine improve cognitive function?". Psychopharmacology (115). Springer-Verlag: 547–549. Retrieved 2008-11-15.
{{cite journal}}
: Unknown parameter|coauthors=
ignored (|author=
suggested) (help) - ↑ http://chronicle.uchicago.edu/020328/nicotine.shtml
- ↑ ೩೫.೦ ೩೫.೧ Kenny PJ, Markou A (2006). "Nicotine self-administration acutely activates brain reward systems and induces a long-lasting increase in reward sensitivity". Neuropsychopharmacology. 31 (6): 1203–11. doi:10.1038/sj.npp.1300905. PMID 16192981.
However, these effects are an illusion brought about by Nicotine addiction. What appears to be relaxation, is merely the effect of ending the craving for Nicotine. The longer the periods between Nicotine intake, the greater the illusion of pleasure will be.
{{cite journal}}
: Unknown parameter|month=
ignored (help) - ↑ Erowid ನಿಕಿಟಿನ್ ವಾಲ್ಟ್ : ಡೋಸೆಜ್
- ↑ Einstein, Stanley (1989). Drug and Alcohol Use: Issues and Factors. Springer. pp. 101–118. ISBN 0306413787.
- ↑ Guillem K, Vouillac C, Azar MR; et al. (2005). "Monoamine oxidase inhibition dramatically increases the motivation to self-administer nicotine in rats". J. Neurosci. 25 (38): 8593–600. doi:10.1523/JNEUROSCI.2139-05.2005. PMID 16177026.
{{cite journal}}
: Explicit use of et al. in:|author=
(help); Unknown parameter|month=
ignored (help)CS1 maint: multiple names: authors list (link) - ↑ Villégier AS, Blanc G, Glowinski J, Tassin JP (2003). "Transient behavioral sensitization to nicotine becomes long-lasting with monoamine oxidases inhibitors". Pharmacol. Biochem. Behav. 76 (2): 267–74. doi:10.1016/S0091-3057(03)00223-5. PMID 14592678.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ ಎನ್‌ಐಡಿಎ - ಸಂಶೋಧನಾ ವರದಿಯ ಸರಣಿಗಳು - ತಂಬಾಕು ಚಟ - ವಿಸ್ತಾರ, ಪರಿಣಮ, ವಿತರಣೆ, ಮತ್ತು ಚಟಗಳು
- ↑ Nolley EP, Kelley BM (2007). "Adolescent reward system perseveration due to nicotine: studies with methylphenidate". Neurotoxicol Teratol. 29 (1): 47–56. doi:10.1016/j.ntt.2006.09.026. PMID 17129706.
- ↑ ಪೀಟರ್‌ಸನ್, ಎರಿಕ್ ಸಿ., ಮತ್ತು ಮೈಕೆಲ್ ಒವೆನ್ಸ್. "ಡಿಸೈನಿಂಗ್ ಇಮ್ಯುನೊಥೆರಪೀಸ್ ಟು ತ್ವರ್ಟ್ ಡ್ರಗ್ ಅಬ್ಯೂಸ್." ಮಾಲಿಕ್ಯುಲರ್ ಇಂಟರ್ವೆಂಕ್ಷನ್ಸ್ ಜೂನ್ 2009: 119-23. ಪ್ರತಿ.
- ↑ Okamoto M, Kita T, Okuda H, Tanaka T, Nakashima T (1994). "Effects of aging on acute toxicity of nicotine in rats". Pharmacol Toxicol. 75 (1): 1–6. doi:10.1111/j.1600-0773.1994.tb00316.x. PMID 7971729.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ ಐಪಿಸಿಎಸ್ ಐಎನ್‌ಸಿಹೆಚ್‌ಇಎಮ್
- ↑ "ಆರ್ಕೈವ್ ನಕಲು". Archived from the original on 2013-01-21. Retrieved 2010-08-04.
- ↑ "ಆರ್ಕೈವ್ ನಕಲು". Archived from the original on 2009-12-02. Retrieved 2010-08-04.
- ↑ Lockhart LP (1933). "Nicotine poisoning". Br Med J. 1: 246–7. doi:10.1136/bmj.1.3762.246-c.
- ↑ ೪೮.೦ ೪೮.೧ "Toxicology". Archived from the original on 2008-11-21. Retrieved 2008-10-05.
{{cite web}}
: Text "eBasedTreatment" ignored (help) - ↑ http://oehha.ca.gov/prop65/prop65_list/files/P65single121809.pdf
- ↑ ೫೦.೦ ೫೦.೧
Cohen, David J. (2001). "Impact of Smoking on Clinical and Angiographic Restenosis After Percutaneous Coronary Intervention". Circulation. 104 (7): 773. doi:10.1161/hc3201.094225. PMID 11502701. Retrieved 2006-11-06.
{{cite journal}}
: Unknown parameter|coauthors=
ignored (|author=
suggested) (help) - ↑ ಲಾಮ್ಗ್‌ಮೊರ್, ಎಮ್., ವಿಕಿನ್‌ಸನ್, ೈ., ಟೊರೊಕ್, ಇ. ಆಕ್ಸ್‌ಫರ್ಡ್ ಹ್ಯಾಂಡ್‌ಬುಕ್ ಆಫ್ ಕ್ಲಿನಿಕಲ್ ಮೆಡಿಸಿನ್ (ಫಿಫ್ತ್ ಎಡಿಶನ್) ಪು. 232
- ↑ Green JT, Richardson C, Marshall RW; et al. (2000). "Nitric oxide mediates a therapeutic effect of nicotine in ulcerative colitis". Aliment Pharmacol Ther. 14 (11): 1429–34. doi:10.1046/j.1365-2036.2000.00847.x. PMID 11069313.
{{cite journal}}
: Explicit use of et al. in:|author=
(help); Unknown parameter|month=
ignored (help)CS1 maint: multiple names: authors list (link) - ↑ "Smoking Cuts Risk of Rare Cancer". UPI. March 29, 2001. Archived from the original on 2008-07-20. Retrieved 2006-11-06.
- ↑ Recer, Paul (May 19, 1998). "Cigarettes May Have an Up Side". AP. Archived from the original on 2020-10-03. Retrieved 2006-11-06.
- ↑ Lain, Kristine Y. (1991). "Urinary cotinine concentration confirms the reduced risk of preeclampsia with tobacco exposure". American Journal of Obstetrics and Gynecology. 181 (5): 908–14. PMID 11422156. Archived from the original on 2008-08-07. Retrieved 2006-11-06.
{{cite journal}}
: Unknown parameter|coauthors=
ignored (|author=
suggested) (help); Unknown parameter|month=
ignored (help); line feed character in|coauthors=
at position 79 (help) - ↑ Hjern, A (2001). "Does tobacco smoke prevent atopic disorders? A study of two generations of Swedish residents". Clin Exp Allergy. 31 (6): 908–14. doi:10.1046/j.1365-2222.2001.01096.x. PMID 11422156. Archived from the original on 2008-08-08. Retrieved 2006-11-06.
{{cite journal}}
: Unknown parameter|coauthors=
ignored (|author=
suggested) (help); Unknown parameter|month=
ignored (help) - ↑ Lisa Melton (2006). "Body Blazes". Scientific American: 24.
{{cite journal}}
: Unknown parameter|month=
ignored (help) - ↑
Fratiglioni, L (2000). "Smoking and Parkinson's and Alzheimer's disease: review of the epidemiological studies". Behav Brain Res. 113 (1–2): 117–20. doi:10.1016/S0166-4328(00)00206-0. PMID 10942038.
{{cite journal}}
:|access-date=
requires|url=
(help); Unknown parameter|coauthors=
ignored (|author=
suggested) (help); Unknown parameter|month=
ignored (help) - ↑ Thompson, Carol. "Alzheimer's disease is associated with non-smoking". Archived from the original on 2006-10-14. Retrieved 2006-11-06.
- ↑ Thompson, Carol. "Parkinson's disease is associated with non-smoking". Archived from the original on 2006-10-19. Retrieved 2006-11-06.
- ↑ "Alzheimer's Starts Earlier for Heavy Drinkers, Smokers". Reuters. 2008-04-17. Archived from the original on 2008-12-24. Retrieved 2008-06-27.
- ↑ Peck, Peggy (2002-07-25). "Smoking Significantly Increases Risk of Alzheimer's Disease Among Those Who Have No Genetic Predisposition". Retrieved 2008-06-27.
- ↑
Aggarwal NT, Bienias JL, Bennett DA; et al. (2006). "The relation of cigarette smoking to incident Alzheimer's disease in a biracial urban community population". Neuroepidemiology. 26 (3): 140–6. doi:10.1159/000091654. PMID 16493200.
{{cite journal}}
: Explicit use of et al. in:|author=
(help)CS1 maint: multiple names: authors list (link) - ↑
Lerche Davis,, Jeanie (2004-03-22). "Smoking Speeds Dementia, Alzheimer's Disease". Retrieved 2008-06-27.
{{cite web}}
: CS1 maint: extra punctuation (link) - ↑ DeNoon, Daniel (2006-08-11). "Nicotine Slows Parkinson's Disease". Retrieved 2009-12-27.
- ↑ Peck, Peggy (2002-07-25). "Smoking Significantly Increases Risk of Alzheimer's Disease Among Those Who Have No Genetic Predisposition". Retrieved 2009-12-27.
- ↑ Fox, Maggie (2007-10-24). "Nicotine may ease Parkinson's symptoms: U.S. study". Retrieved 2009-12-27.
- ↑ "Nicotine as an antiepileptic agent in ADNFLE: An n-of-one study".
- ↑ de Leon J, Tracy J, McCann E, McGrory A, Diaz FJ (2002). "Schizophrenia and tobacco smoking: a replication study in another US psychiatric hospital". Schizophr Res. 56 (1–2): 55–65. doi:10.1016/S0920-9964(01)00192-X. PMID 12084420.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ de Leon J, Dadvand M, Canuso C, White AO, Stanilla JK, Simpson GM (1995). "Schizophrenia and smoking: an epidemiological survey in a state hospital". Am J Psychiatry. 152 (3): 453–5. PMID 7864277.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ Aguilar MC, Gurpegui M, Diaz FJ, de Leon J (2005). "Nicotine dependence and symptoms in schizophrenia: naturalistic study of complex interactions". Br J Psychiatry. 186: 215–21. doi:10.1192/bjp.186.3.215. PMID 15738502.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ "Attention-Deficit Hyperactivity Disorder". Archived from the original on 18 ಅಕ್ಟೋಬರ್ 2009. Retrieved 21 September 2009.
- ↑ Suemaru K, Kohnomi S, Umeda K, Araki H., K; Kohnomi, S; Umeda, K; Araki, H (2008). "Alpha7 nicotinic receptor agonists have reported to reverse the PPI disruption". Nihon Shinkei Seishin Yakurigaku Zasshi (in Japanese). 28 (3): 121–6. PMID 18646597.
{{cite journal}}
: CS1 maint: multiple names: authors list (link) CS1 maint: unrecognized language (link) - ↑ ಡೆ ಲುಕ ವಿ, ವಾಂಗ್ ಎಹೆಚ್, ಮುಲ್ಲರ್ ಡಿಜೆ, ವಾಂಗ್ ಜಿಡಬ್ಲು, ಟೈಂಡಲೆ ಆರ್‌ಎಫ್, ಕೆನಡಿ ಜಎಲ್.(2004). "ಎವಿಡೆನ್ಸ್ ಆಫ್ ಅಸ್ಸೊಸಿಯೇಶನ್ ಬಿಟ್ವೀನ್ ಸ್ಮೋಕಿಂಗ್ ಆಯ್‌೦ಡ್ ಆಲ್ಫ7 ನಿಕೋಟಿಕ್ ರಿಸೆಪ್ಟರ್ ಸಬ್ನಿಟ್ ಗೆನೆ ಇನ್ ಶಿಜೊಫ್ರೆನಿಯ ಪೇಶಂಟ್ಸ್" . ನ್ಯೂರೊಸೈಕೊಫಾರ್ಮಕೊಲಜಿ 29 (8):1522-6. PMID 15100704
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ನಿಕೋಟಿನ್ ವ್ಯಸನದ ವಿವರಣೆ Archived 2008-07-24 ವೇಬ್ಯಾಕ್ ಮೆಷಿನ್ ನಲ್ಲಿ.
- ನಿಕೋಟಿನ್ ಕಾರ್ಯತಂತ್ರಗಳ ವಿವರಣೆ
ಹೆಚ್ಚಿನ ಮಾಹಿತಿಗಾಗಿ
[ಬದಲಾಯಿಸಿ]- Bilkei-Gorzo A, Rácz I, Michel K, Darvas M, Rafael Maldonado López, Zimmer A. (2008). "A common genetic predisposition to stress sensitivity and stress-induced nicotine craving". Biol. Psychiatry. 63 (2): 164–71. doi:10.1016/j.biopsych.2007.02.010. PMID 17570348.
{{cite journal}}
: CS1 maint: multiple names: authors list (link) - Willoughby JO, Pope KJ, Eaton V (2003). "Nicotine as an antiepileptic agent in ADNFLE: an N-of-one study". Epilepsia. 44 (9): 1238–40. doi:10.1046/j.1528-1157.2003.11903.x. PMID 12919397.
{{cite journal}}
: Unknown parameter|month=
ignored (help)CS1 maint: multiple names: authors list (link) - Minna JD (2003). "Nicotine exposure and bronchial epithelial cell nicotinic acetylcholine receptor expression in the pathogenesis of lung cancer". J Clin Invest. 111 (1): 31–3. doi:10.1172/JCI17492. PMC 151841. PMID 12511585.
{{cite journal}}
: Unknown parameter|month=
ignored (help) - Fallon JH, Keator DB, Mbogori J, Taylor D, Potkin SG (2005). "Gender: a major determinant of brain response to nicotine". Int J Neuropsychopharmacol. 8 (1): 17–26. doi:10.1017/S1461145704004730. PMID 15579215. Archived from the original on 2011-06-04. Retrieved 2010-08-04.
{{cite journal}}
: Unknown parameter|month=
ignored (help)CS1 maint: multiple names: authors list (link) - West KA, Brognard J, Clark AS; et al. (2003). "Rapid Akt activation by nicotine and a tobacco carcinogen modulates the phenotype of normal human airway epithelial cells". J Clin Invest. 111 (1): 81–90. doi:10.1172/JCI16147. PMC 151834. PMID 12511591.
{{cite journal}}
: Explicit use of et al. in:|author=
(help); Unknown parameter|month=
ignored (help)CS1 maint: multiple names: authors list (link) - ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಡ್ರಗ್ ಅಬ್ಯೂಸ್
- ಎರೋವಿದ್ ಇನ್ಫಾರ್ಮೇಶನ್ ಆನ್ ಟೊಬ್ಯಾಕೊ
- Pages using the JsonConfig extension
- CS1 errors: redundant parameter
- CS1 errors: external links
- CS1 maint: multiple names: authors list
- CS1 maint: numeric names: authors list
- CS1 errors: unsupported parameter
- CS1 errors: explicit use of et al.
- CS1 maint: unflagged free DOI
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: unrecognized parameter
- CS1 errors: invisible characters
- CS1 errors: access-date without URL
- CS1 maint: extra punctuation
- CS1 maint: unrecognized language
- Pages using PMID magic links
- Drugboxes which contain changes to watched fields
- Articles with unsourced statements from February 2010
- Articles with unsourced statements from September 2009
- Articles with unsourced statements from October 2008
- Articles with unsourced statements from June 2010
- Articles with hatnote templates targeting a nonexistent page
- Articles with unsourced statements from December 2008
- Articles with unsourced statements from November 2007
- Articles with unsourced statements from September 2008
- Articles needing additional references from June 2009
- All articles needing additional references
- All articles lacking reliable references
- Articles lacking reliable references from June 2009
- Articles with invalid date parameter in template
- ಉಲ್ಲೇಖಗಳ ಅಗತ್ಯ ಇರುವ ಲೇಖನಗಳು
- All articles containing potentially dated statements
- Articles with unsourced statements from April 2010
- Articles that show a Medicine navs template
- ನಿಕೊಟಿನಿಕ್ ಅಗೊನಿಸ್ಟ್ಸ್
- ಸಸ್ಯ ಟಾಕ್ಸಿನ್ ಕೀಟನಾಶಕಗಳು
- ಪೈರ್ರೊಲಿಡಿನ್ಸ್
- ಆಲ್ಕಲಾಯಿಡ್ಸ್
- ಪೈರಿಡಿನ್ಸ್
- ಪ್ರಚೋದಕಗಳು
- ತಂಬಾಕು
- ಧೂಮಪಾನ